ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ


    ದೂರುದಾರರಾದ ಶ್ರೀ ಸಮರ್ಥ ತಂದೆ ನರೇಶ್ ನೇತಾಳಕರ್, ಪ್ರಾಯ- 28 ವರ್ಷ, ವೃತ್ತಿ: ವಿ ಗಾರ್ಡ್ ಕಂಪನಿಯ ಸಾಮಾಗ್ರಿಗಳ ರಿಪೇರಿ ಕೆಲಸ ಸಾ|| ಮಾಡಿಬಾಗ ಕಡವಾಡ ಕಾರವಾರ ಇವರು ದಿನಾಂಕ 12-03-2021 ರಂದು ಕಾರವಾರ ಶಹರ ಪೊಲೀಸ ಠಾಣೆಯಲ್ಲಿ ದೂರನ್ನು ನೀಡಿದ್ದು ದೂರಿನಲ್ಲಿ ಆರೋಪಿತರಾದ ಶಿವರಾಜು ರೆಂಗರಸು, ನಾಸೀರ್ ಮತ್ತು ಗೋವಿಂದರಾಜು ಇವರು ಕಾರವಾರದ ಕಾಜುಬಾಗ್‍ದಲ್ಲಿ ಶ್ರೀ ಗಣಪತಿ ಅಣ್ವೇಕರ್ ಇವರ ಬಾಬ್ತು ಅಂಗಡಿಯನ್ನು ಗೃಹ ಬಳಕೆಯ ಸಾಮಾನುಗಳನ್ನು ಮಾರಾಟ ಮಾಡುವುದಾಗಿ ಹೇಳಿ ಫಿರ್ಯಾದಿಯವರಿಗೆ ಗೃಹ ಬಳಕೆಯ ಸೋಫಾ, 2 ಕಬ್ಬಿಣದ ಮಂಚ, ವಾಷಿಂಗ್ ಮಶೀನ್, ಕಪಾಟು ಹಾಗೂ ಇತರೆ ಅಡಿಗೆ ಪಾತ್ರೆಗಳನ್ನು ತಂದುಕೊಡುವುದಾಗಿ ಹೇಳಿ ನಂಬಿಸಿ ಫಿರ್ಯಾದಿಯವರಿಂದ 1,13,000/- ರೂ ಹಣವನ್ನು ಮುಂಚಿತವಾಗಿ ಪಡೆದು ಫಿರ್ಯಾದಿಯವರಿಗೆ ಗೃಹ ಬಳಕೆಯ ಸಾಮಾನು ಹಾಗೂ ಪಾತ್ರೆಗಳನ್ನು ತಂದು ನೀಡದೇ ಹಣವನ್ನು ಸಹ ಮರಳಿ ನೀಡದೇ, ಇದೇ ರೀತಿಯಲ್ಲಿ ಇನ್ನು ಹಲವಾರು ಗ್ರಾಹಕರಿಗೆ ಗೃಹ ಬಳಕೆಯ ಸಾಮಾನು ಹಾಗೂ ಇತರೇ ಸಾಮಾನುಗಳನ್ನು ತಂದು ಕೊಡುವುದಾಗಿ ಹೇಳಿ ನಂಬಿಸಿ ಸುಮಾರು 08 ಲಕ್ಷ ಹಣವನ್ನು ಗ್ರಾಹಕರಿಂದ ಮುಂಚಿತವಾಗಿ ಪಡೆದುಕೊಂಡು ಗ್ರಾಹಕರಿಗೆ ಗೃಹ ಬಳಕೆಯ ಸಾಮಾನು ಹಾಗೂ ಇತರೇ ಸಾಮಾನುಗಳನ್ನು ತಂದು ನೀಡದೇ ಮೋಸ ಮಾಡಿದ ಬಗ್ಗೆ ನೀಡಿದ ದೂರನ್ನು ಕಾರವಾರ ಶಹರ ಪೊಲೀಸ ಠಾಣೆ ಮೊಕದ್ದಮೆ ಸಂಖ್ಯೆ: 39/2021 ಕಲಂ: 406, 420 sಸಹಿತ 34 ಐ.ಪಿ.ಸಿ ನೇದಕ್ಕೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಈ ಬಗ್ಗೆ ತನಿಖೆ ಕೈಗೊಂಡು ಮೋಸ ಹೋದ ಗ್ರಾಹಕರ ವಿಚಾರಣೆ ಮಾಡಿ ಈ ಪ್ರಕರಣದಲ್ಲಿ ಆರೋಪಿತರ ವಿರುದ್ದ Banning of Unregulated Deposits Act 2017 (BUDS) ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


         ಈ ಪ್ರಕರಣದ ಆರೋಪಿತರು ಕಾರವಾರ ಕಾಜುಬಾಗದ ಶ್ರೀ ಗಣಪತಿ ಅಣ್ವೇಕರ್ ಇವರ ಅಂಗಡಿಯನ್ನು ಬಾಡಿಗೆಗೆ ಪಡೆದು ಅಮೋಘ ಟ್ರೇಡರ್ಸ ಅಂತ ಹೆಸರನ್ನು ಇಟ್ಟು ಕಳೆದ ದಿನಾಂಕ 13-02-2021 ರಂದು ಅಂಗಡಿಯನ್ನು ಪ್ರಾರಂಭಿಸಿ ಅದರಲ್ಲಿ ಕೆಲವು ದಿನ ಬಳಕೆಯ ವಸ್ತುಗಳನ್ನು ಜೋಡಿಸಿ ಇಟ್ಟು ಡಿಸ್ಕೌಂಟ ಸೇಲನಲ್ಲಿ ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುವುದಾಗಿ ಸಾರ್ವಜನಿಕರಿಗೆ ತಿಳಿಸಿ ಎಲ್ಲ ಬಗೆಯ ಗೃಹೋಪಯೋಗಿ ವಸ್ತುಗಳನ್ನು, ಇಲೆಕ್ಟ್ರಾನಿಕ್ಸ ವಸ್ತುಗಳನ್ನು, ಪಿಠೋಪಕರಣಗಳನ್ನು ತೋರಿಸಿ ಅವುಗಳನ್ನು 45% ಕಡಿಮೆ ದರಕ್ಕೆ ನೀಡುವುದಾಗಿ ನಂಬಿಸಿ ಜನರಿಂದ ಮುಂಗಡವಾಗಿ ಹಣವನ್ನು ಪಡೆದು ಮೊದಲು ಬಂದ ಕೆಲವು ಗ್ರಾಹಕರಿಗೆ ಅತೀ ಕಡಿಮೆ ದರದಲ್ಲಿ ಅವರು ತಿಳಿಸಿ ಜನರಿಂದ ಹಣ ಪಡೆದು ಸ್ವಲ್ಪ ದಿನಗಳ ನಂತರ ಮೊದಲು ಹಣ ನೀಡಿದ ಗ್ರಾಹಕರಿಗೆ ಅವರು ತಿಳಿಸಿದ ವಸ್ತುಗಳನ್ನು ನೀಡಿ ಜನರನ್ನು ಆಕರ್ಶಿಸಿದ್ದು ಆರೋಪಿತರ ಆಮೀಶಕ್ಕೆ ಒಳಗಾಗಿ ಸುಮಾರು 130 ಕ್ಕೂ ಹೆಚ್ಚಿನ ಗ್ರಾಹಕರು ಸುಮಾರು 1200000/- ರೂಪಾಯಿ ಹಣವನ್ನು ಆರೋಪಿತರಿಗೆ ನೀಡಿ ವಸ್ತುಗಳನ್ನು ಕಾಯ್ದಿರಿಸಿದ್ದರು. ನಂತರ ಆರೋಪಿತರು ಹಣದೊಂದಿಗೆ ಕಾರವಾರದಿಂದ ಪರಾರಿಯಾಗಿದ್ದರು. ಈಗಾಗಲೆ ಕೆಲವು ಗ್ರಾಹಕರು ಆರೋಪಿತರಿಂದ ವಸ್ತುಗಳನ್ನು ನೊಂದಾಯಿಸಿ ಅದನ್ನು ಕಡಿಮೆ ದರದಲ್ಲಿ ಪಡೆದುಕೊಂಡಿರುತ್ತಾರೆ.
ಈ ಪ್ರಕರಣದಲ್ಲಿ ತನಿಖೆ ಕೈಗೊಂಡು ಮಾನ್ಯ ಪೋಲಿಸ ಅಧಿಕ್ಷಕರಾದ ಶ್ರೀ ಶಿವಪ್ರಕಾಶ ದೇವರಾಜ ರವರು ಹಾಗೂ ಹೆಚ್ಚುವರಿ ಪೊಲೀಸ ಅಧಿಕ್ಷಕರಾದ ಶ್ರೀ ಎಸ್ ಬದರಿನಾಥ ರವರು ಹಾಗೂ ಪೊಲೀಸ ಉಪಾಧೀಕ್ಷಕರಾದ ಶ್ರೀ ಅರವಿಂದ ಕಲಗುಜ್ಜಿರವರ ಮಾರ್ಗದರ್ಶನದಂತೆ ಕಾರವಾರ ವೃತ್ತ ನಿರೀಕ್ಷಕರಾದ ಶ್ರೀ ಸಂತೋಷ ಶೆಟ್ಟಿ ರವರು ಪಿ.ಎಸ್.ಐ ಸಂತೋಷ ಕುಮಾರ ಹಾಗೂ ಪಿ.ಎಸ್.ಐ ಎಸ್,ಬಿ ಪೂಜಾರಿ ಹಾಗೂ ಸಿಬ್ಬಂದಿಯವರಾದ ಶ್ರೀ ಸತ್ಯಾನಂದ ನಾಯ್ಕ ಸಿ.ಎಚ್.ಸಿ 751, ಶ್ರೀ ರಾಜೇಶ ನಾಯಕ ಸಿ.ಪಿ.ಸಿ 662, ಶ್ರೀ ರಾಮಾ ನಾಯ್ಕ ಸಿ.ಪಿ.ಸಿ 523, ಶ್ರೀ ಉಲ್ಲಾಸ ನಾಯ್ಕ ಸಿ,ಎಚ್.ಸಿ 1447 ತನಿಖಾ ತಂಡವನ್ನು ರಚಿಸಿ ಕಾರ್ಯಾಚಣೆ ಮಾಡಿ ಆರೋಪಿತನಾದ ಶಿವರಾಜ ತಂದೆ ರಂಗರೆಸು, ಪ್ರಾಯ- 38 ವರ್ಷ ವೃತ್ತಿ ವ್ಯಾಪಾರ ಸಾ|| 1/41, ಚೆಟ್ಟಿಯಾರ್ ಗಲ್ಲಿ, ಸೆರುವವಿದುಥಿ ಪಟ್ಟುಕೊಟ್ಟೈ ತಂಜಾವೂರ ತಮಿಳುನಾಡು ಈತನನ್ನು ದಿನಾಂಕ 21-03-2021 ರಂದು ಹುಬ್ಬಳ್ಳಿಯಲ್ಲಿ ಬಂಧಿಸಿ ತನಿಖೆಯನ್ನು ಮುಂದುವರೆಸಲಾಗಿದೆ.

ಇತ್ತೀಚಿನ ನವೀಕರಣ​ : 22-03-2021 05:31 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080