ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 12-07-2021

at 00:00 hrs to 24:00 hrs

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 106/2021, ಕಲಂ: ಹೆಂಗಸು ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ಆಪೀಫಾ ಕೋಂ. ಸಲೀಂ ಮುಲ್ಲಾ, ಪ್ರಾಯ 24 ವರ್ಷ, ವೃತ್ತಿ-ಮನೆ ಕೆಲಸ, 2]. ಕುಮಾರ: ಖಾಜಾಸಯೂಫ್ ತಂದೆ ಸಲೀಂ ಮುಲ್ಲಾ, ಪ್ರಾಯ-2 ವರ್ಷ, ಸಾ|| (ಇಬ್ಬರೂ) ಶಿರೂರ, ಬೈಂದೂರ, ಹಾಲಿ ಸಾ|| ಮಂಕಿ, ನಾಕುದಾ ಮೊಹಲ್ಲಾ, ಕೆಪ್ಪನಹಿತ್ಲು, ತಾ: ಹೊನ್ನಾವರ. ಕಾಣೆಯಾದ ಶ್ರೀಮತಿ ಆಪೀಫಾ ಕೋಂ. ಸಲೀಂ ಮುಲ್ಲಾ, ಇವಳು ಮಂಕಿಯ ನಾಕುದಾ ಮೊಹಲ್ಲಾದ ಕೆಪ್ಪನಹಿತ್ಲದಲ್ಲಿ ತನ್ನ ತವರು ಮನೆಯಲ್ಲಿ ತನ್ನ 2 ವರ್ಷದ ಮಗನಾದ ಕುಮಾರ: ಖಾಜಾಸಯೂಫ್ ನೊಂದಿಗೆ ಇದ್ದವಳು, ದಿನಾಂಕ: 10-07-2021 ರಂದು ಮಧ್ಯಾಹ್ನ 04-00 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ತನ್ನ ಮಗನೊಂದಿಗೆ ಎಲ್ಲಿಗೋ ಹೋದವಳು ಈವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹಾಗೂ ಮೊಮ್ಮಗನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸುಲೇಮಾನ್ ತಂದೆ ಫಕೀರಾ ದಾವಲ್, ಪ್ರಾಯ-65 ವರ್ಷ, ವೃತ್ತಿ-ಮಿನುಗಾರಿಕೆ, ಸಾ|| ನಾಕುದಾ ಮೊಹಲ್ಲಾ, ಕೆಪ್ಪನಹಿತ್ಲ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 12-07-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 380, 342, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ವಿಜಯಾ ಕೋಂ. ವೆಂಕಟೇಶ ಪಟಗಾರ, 2]. ವೆಂಕಟೇಶ ಧರ್ಮಪಾಲ ಪಟಗಾರ, ಸಾ|| (ಇಬ್ಬರೂ) ವಿನಾಯಕ ಕಾಲೋನಿ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವಳು ಪಿರ್ಯಾದಿಯ ಸೊಸೆಯಿದ್ದು, ಆರೋಪಿ 2 ನೇಯವನು ಪಿರ್ಯಾದಿಯ ಮಗನಿದ್ದು, ಇಬ್ಬರೂ ಆರೋಪಿತರು ಸೇರಿಕೊಂಡು ಪಿರ್ಯಾದಿಗೆ ಹಣ, ಬಂಗಾರ, ಮನೆಯನ್ನು ನೀಡುವಂತೆ ಒತ್ತಾಯಿಸುತ್ತಾ ‘ರಂಡೆ’ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಮಾಡುತ್ತಾ ಬಂದಿದ್ದು, ಪಿರ್ಯಾದಿಯು ‘ತನ್ನ ಜೀವ ಇರುವವರೆಗೆ ಬಂಗಾರವನ್ನು ಯಾರಿಗೂ ಕೊಡುವುದಿಲ್ಲ’ ಎಂದು ಹೇಳುತ್ತಿದ್ದರಿಂದ ಆರೋಪಿ 1 ನೇಯವಳು ದಿನಾಂಕ: 16-04-2021 ರಂದು ಬೆಳಿಗ್ಗೆ 09-30 ಗಂಟೆಯಿಂದ 09-45 ಗಂಟೆಯ ಅವಧಿಯಲ್ಲಿ ಪಿರ್ಯಾದಿಯು ಮನೆಯ ಸೋಪಾದಲ್ಲಿಟ್ಟಿದ ಪಿರ್ಯಾದಿಯ ಬಂಗಾರದ ಆಭರಣಗಳಾದ 1). ಸುಮಾರು 1.5 ತೊಲೆ ತೂಕದ ಬಂಗಾರದ ಕೈ ಬಳೆಗಳು-02, ಅ||ಕಿ|| 60,000/- ರೂಪಾಯಿ, 2). ಸುಮಾರು 3 ತೊಲೆ ತೂಕದ ಬಂಗಾರದ ಪಾಟ್ಲಿ ಬಳೆಗಳು-2, ಅ||ಕಿ|| 1,20,000/- ರೂಪಾಯಿ, 3). ಸುಮಾರು 4.5 ತೊಲೆ ತೂಕದ ಬಂಗಾರದ ಮಂಗಳಸೂತ್ರ-1, ಅ||ಕಿ|| 1,80,000/- ರೂಪಾಯಿ. 4). ಸುಮಾರು 4.5 ತೊಲೆ ತೂಕದ ಬಂಗಾರದ ಹವಳದ ಸರ-1, ಅ||ಕಿ|| 1,80,000/- ರೂಪಾಯಿ. ಹೀಗೆ ಒಟ್ಟೂ 13.5 ತೊಲೆ ತೂಕದ ಅ||ಕಿ|| 5,40,000/- ರೂಪಾಯಿ ನೇದವುಗಳನ್ನು ಕಳ್ಳತನ ಮಾಡಿ ಆರೋಪಿ 2 ನೇಯವನೊಂದಿಗೆ ಸೇರಿಕೊಂಡು ಎಲ್ಲಿಯೋ ಇಟ್ಟಿದ್ದು, ಪಿರ್ಯಾದಿಯವರು ಬಂಗಾರದ ಆಭರಣಗಳ ಬಗ್ಗೆ ವಿಚಾರಿಸಿದಾಗ ‘ಮುಂದಾದರೂ ಬಂಗಾರ ತಮಗೆ ಸಿಗಬೇಕಿತ್ತು. ಬಂಗಾರವನ್ನು ಕೊಡುವುದಿಲ್ಲ’ ಎಂದು ಹೇಳಿ ಪಿರ್ಯಾದಿಯವರನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕಿ, ‘ಜೀವಂತ ಸಾಯಿಸುತ್ತೇವೆ’ ಎಂದು ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸರೋಜಿನಿ ರಾಮ ಪಟಗಾರ, ಪ್ರಾಯ-70 ವರ್ಷ, ವೃತ್ತಿ-ನಿವೃತ್ತಿ ಶಿಕ್ಷಕಿ, ಸಾ|| ಸರೋಜಿನಿ ನಿಲಯ, 3 ನೇ ಕ್ರಾಸ್, ವಿನಾಯಕ ಕಾಲೋನಿ, ತಾ: ಶಿರಸಿ ರವರು ದಿನಾಂಕ: 12-07-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 93/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಜೀರಸಾಬ್ ಕುರಟ್ಟಿ, ಸಾ|| ಕೊಡಂಬಿ, ತಾ: ಮುಂಡಗೋಡ (ಕಾರ್ ನಂ: ಕೆ.ಎ-06/ಪಿ-3166 ನೇದರ ಚಾಲಕ). ಈತನು ದಿನಾಂಕ: 12-07-2021 ರಂದು ಬೆಳಿಗ್ಗೆ 07-40 ಗಂಟೆಗೆ ತನ್ನ ಕಾರ್ ನಂ: ಕೆ.ಎ-06/ಪಿ-3166 ನೇದನ್ನು ಮುಂಡಗೋಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮುಂಡಗೋಡ-ಹುಬ್ಬಳ್ಳಿ ರಸ್ತೆಯ ಇಜಾಜ್ ಶುಂಠಿ ವಾಶಿಂಗ್ ಸೆಂಟರ್ ಹತ್ತಿರದ ಡಾಂಬರ್ ರಸ್ತೆಯ ಮೇಲೆ ತನ್ನ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-9291 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನ ಬಲಗಾಲಿನ ತೊಡೆಯ ಹತ್ತಿರ ಭಾರೀ ಗಾಯ ಹಾಗೂ ಎಡಗಾಲಿನ ಪಾದದ ಹತ್ತಿರ ಮತ್ತು ಎಡಗೈ ಬೆರಳಿಗೆ ಸಾದಾ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಹ್ಮದ್ಅಲಿ ತಂದೆ ಮೌಲಾಸಾಬ್ ನದಾಫ್, ಪ್ರಾಯ-22 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಅರಿಶಿಣಗೇರಿ, ತಾ: ಮುಂಡಗೋಡ ರವರು ದಿನಾಂಕ: 12-07-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ ಈರಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೊಲಶಿರ್ಶಿ, ತಾ: ಸಿದ್ದಾಪುರ, 2]. ಕೃಷ್ಣಾ ನಾರಾಯಣ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಲಗಡಿಕೊಪ್ಪಾ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ಪಿರ್ಯಾದಿಯ ಚಿಕ್ಕಪ್ಪನಿದ್ದು ಹಾಗೂ ಆರೋಪಿ 2 ನೇಯವನು ಅವನ ಮಗನಿದ್ದು, ಕೊಲಶಿರ್ಶಿ ಕ್ರಾಸ್ ಹತ್ತಿರ ಇರುವ ಹಲಗಡಿಕೊಪ್ಪಾದಲ್ಲಿ ಪಿರ್ಯಾದಿ ಹಾಗೂ ಆರೋಪಿ ಮತ್ತು ಪಿರ್ಯಾದಿಯ ಇನ್ನೊಬ್ಬ ದಾಯಾದಿ ಸಂಬಂಧಿಕ ರಮೇಶ ನಾಯ್ಕ ಇವರಿಗೆ ಸಂಬಂಧಪಟ್ಟ ಗದ್ದೆಯಿದ್ದು, ಗದ್ದೆಯ ಗಡಿಯ ಕುರಿತಂತೆ ಪಿರ್ಯಾದಿಯ ಮೇಲೆ ಆರೋಪಿತರು ಮೊದಲಿನಿಂದಲೂ ತಕರಾರು ಮಾಡುತ್ತಾ ದ್ವೇಷದಿಂದ ಇದ್ದರು. ಹೀಗಿರುವಲ್ಲಿ ದಿನಾಂಕ: 11-07-2021 ರಂದು ಬೆಳಿಗ್ಗೆಯಿಂದ ಪಿರ್ಯಾದಿಯು ತನ್ನ ಟ್ರೇಲರ್ ನಿಂದ ಆರೋಪಿತರ ಗದ್ದೆಗೆ ತಾಗಿರುವ ದಾಯಾದಿ: ಸಂಬಂಧಿಕ ರಮೇಶ ನಾಯ್ಕ ಇವರ ಗದ್ದೆಯನ್ನು ಹೂಳುತ್ತಿರುವಾಗ ಸಂಜೆ 05-00 ಗಂಟೆಗೆ ಆರೋಪಿತರು ಅಲ್ಲಿಗೆ ಬಂದು ಪಿರ್ಯಾದಿಯನ್ನುದ್ದೇಶಿಸಿ ಬೋಳಿ ಮಗನೇ, ಸೂಳೆ ಮಗನೇ, ನೀನು ಗದ್ದೆ ಹೂಡಿದರೆ ಲಗ್ತ ಇರುವ ನಮ್ಮ ಗದ್ದೆ ಹಾಳಾಗುತ್ತದೆ’ ಅಂತಾ ಅವಾಚ್ಯವಾಗಿ ಬೈಯ್ದು ಗಲಾಟೆ ತೆಗೆದಿದ್ದು, ಆಗ ಪಿರ್ಯಾದಿಯು ‘ಹಾಗೆ ಹಾಳಾಗುವುದಿಲ್ಲ’ ಅಂತಾ ಹೇಳಿದ್ದಕ್ಕೆ ಸಿಟ್ಟುಗೊಂಡ ಆರೋಪಿ 1 ನೇ ನೇಯವನು ತನ್ನ ಕೈಯಲ್ಲಿದ್ದ ಗುದ್ದಲಿಯ ಹಿಂಬದಿ (ಕಟ್ಟಿಗೆ ಕಾವಿ) ಯಿಂದ ಪಿರ್ಯಾದಿಯ ತಲೆಯ ಮೇಲೆ ಹೊಡೆಯಲು ಹೋದಾಗ ಪಿರ್ಯಾದಿಯು ತಪ್ಪಿಸಿಕೊಂಡಿದ್ದು, ಅದು ಪಿರ್ಯಾದಿಯ ಮೂಗಿಗೆ ತಾಗಿ ಗಾಯವಾಗಿರುತ್ತದೆ. ತದನಂತರ ಅವನೊಂದಿಗೆ ಇದ್ದ ಆರೋಪಿ 2 ನೇಯವನು ಕತ್ತಿಯ ಹಿಂಬದಿಯಿಂದ ಪಿರ್ಯಾದಿಯ ಸೊಂಟಕ್ಕೆ ಹೊಡೆದಿರುತ್ತಾನೆ. ಆಗ ಅಲ್ಲಿಯ ಇದ್ದ ಹೊಲದವರು ಬಿಡಿಸಿಕೊಂಡಿದ್ದು, ಆಗ ಆರೋಪಿತರು ಪಿರ್ಯಾದಿಯನ್ನು ಉದ್ದೇಶಿಸಿ ‘ಈ ದಿನ ತಪ್ಪಿಸಿಕೊಂಡೆ. ಮತ್ತೊಮ್ಮೆ ಸಿಗು ಕೊಲೆ ಮಾಡುತ್ತೇವೆ. ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿದರೆ ಪ್ರಾಣ ತೆಗೆಯುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಂಗಾಧರ ತಂದೆ ಮೈಲಾ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೊಲಶಿರ್ಶಿ, ತಾ: ಸಿದ್ದಾಪುರ ರವರು ದಿನಾಂಕ: 12-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 12-07-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ಕಳೆದ 4-5 ದಿನಗಳ ಹಿಂದೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಬೇಸರಗೊಂಡು ಅಘನಾಶಿನಿ ನದಿಯಲ್ಲಿ ಎಲ್ಲಿಯೋ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡೋ ಅಥವಾ ನದಿಯಲ್ಲಿ ಮೀನು ಹಿಡಿಯಲೋ ಅಥವಾ ಮಳೆಗಾಲದಲ್ಲಿ ನದಿಯ ನೀರಿನಲ್ಲಿ ತೇಲಿ ಬರುವ ಕಟ್ಟಿಗೆ, ತೆಂಗಿನಕಾಯಿ, ಇತ್ಯಾದಿ ವಸ್ತುಗಳನ್ನು ಹಿಡಿಯಲೋ ಅಥವಾ ಇನ್ನಾವುದೋ ಕಾರಣಕ್ಕೆ ಅಘನಾಶಿನಿ ನದಿಯಲ್ಲಿ ಇಳಿದವನು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನದಿಯ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು, ಅವನ ಶವವು ದಿನಾಂಕ: 12-07-2021 ರಂದು 19-00 ಗಂಟೆಗೆ ಕುಮಟಾದ ದುಂಡಕುಳಿಯಲ್ಲಿ ಹರಿದಿರುವ ಅಘನಾಶಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜೀವ ತಂದೆ ದೇವಯ್ಯ ಅಂಬಿಗ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತಂಡ್ರಕುಳಿ, ದಿವಗಿ, ತಾ: ಕುಮಟಾ ರವರು ದಿನಾಂಕ: 12-07-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ಎಮ್. ತಂದೆ ಮಹೇಶ, ಪ್ರಾಯ-25 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಹೊಂಡದಕೇರಿ, ದೂಪದಹಳ್ಳಿ ರೋಡ್, ತಾ: ಶಿಕಾರಿಪುರ, ಜಿ: ಶಿವಮೊಗ್ಗ. ಪಿರ್ಯಾದಿಯು ತಾನು ಮತ್ತು ತನ್ನ ಗೆಳೆಯರಾದ 1). ಚಂದನ ಬಿ.ಎಮ್. ತಂದೆ ಮಾಲತೇಶ, ಸಾ|| ಶಿಕಾರಿಪುರ, ಶಿವಮೊಗ್ಗ, 2). ಮೃತ: ಮಂಜುನಾಥ ಎಮ್. ತಂದೆ ಮಹೇಶ, 3). ಮಣಿಕಂಠ ತಂದೆ ಮಂಜಪ್ಪ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಬಗನಕಟ್ಟೆ, ಶಿಕಾರಿಪುರ, ಶಿವಮೊಗ್ಗ ರವೆರಲ್ಲರೂ ಕೂಡಿ ದಿನಾಂಕ: 10-07-2021 ರಂದು ರಾತ್ರಿ ಸ್ವಿಫ್ಟ್ ಕಾರಿನ ಮೇಲೆ ಶಿಕಾರಿಪುರದಿಂದ ಗೋಕರ್ಣ, ಮುರ್ಡೇಶ್ವರ ಪ್ರವಾಸಕ್ಕೆ ಹೊರಟವರು, ದಿನಾಂಕ: 11-07-2021 ರಂದು ಬೆಳಿಗ್ಗೆ ಗೋಕರ್ಣದಲ್ಲಿ ಪ್ರವಾಸ ಮುಗಿಸಿಕೊಂಡು ಮಧ್ಯಾಹ್ನ 01-30 ಗಂಟೆಗೆ ಮುರ್ಡೇಶ್ವರಕ್ಕೆ ಬಂದು ನಂತರ ಮುರ್ಡೇಶ್ವರದ ಅರಬ್ಬಿ ಸಮುದ್ರದ ದಡದಲ್ಲಿ 4 ಮಂದಿ ಸೇರಿಕೊಂಡು ನೀರಿನಲ್ಲಿ ಇಳಿದು ಆಟ ಆಡುತ್ತಿರುವಾಗ ಸಾಯಂಕಾಲ 04-00 ಗಂಟೆಯ ಸುಮಾರಿಗೆ ಮೃತ: ಮಂಜುನಾಥ ಎಮ್. ತಂದೆ ಮಹೇಶ ಮತ್ತು ಮಣಿಕಂಠ ತಂದೆ ಮಂಜಪ್ಪ ಇವರ ಮೇಲೆ ಸಮುದ್ರದ ನೀರಿನ ಅಬ್ಬರದ ಅಲೆ ಅಪ್ಪಳಿಸಿ ನೀರಿನ ಅಲೆಗೆ ಸಿಲುಕಿ ಇಬ್ಬರು ನೀರಿನಲ್ಲಿ ಮುಳುಗಿದ್ದವರು, ಸಮಯ 04-30 ಗಂಟೆಗೆ ಮೃತ: ಮಂಜುನಾಥ ಎಮ್. ತಂದೆ ಮಹೇಶ ಈತನ ಶವವು ಅರಬ್ಬಿ ಸಮುದ್ರದ ದಡಕ್ಕೆ ಬಂದು ಅಪ್ಪಳಿಸಿದ್ದು ಇರುತ್ತದೆ. ಹಾಗೂ ನೀರಿನಲ್ಲಿ ಮುಳುಗಿ ಕಾಣೆಯಾಗಿರುವ ಮಣಿಕಂಠ ತಂದೆ ಮಂಜಪ್ಪ ಈತನನ್ನು ಈವರೆಗೆ ಹುಡುಕಿದರೂ ಪತ್ತೆಯಾಗಿದ್ದು ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣಕುಮಾರ ಟಿ. ಪಿ. ತಂದೆ ಫಾಲಾಕ್ಷಪ್ಪ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಬಗನಕಟ್ಟೆ, ತಾ: ಶಿಕಾರಿಪುರ, ಜಿ: ಶಿವಮೊಗ್ಗ ರವರು ದಿನಾಂಕ: 12-07-2021 ರಂದು 07-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಣಿಕಂಠ ಎಮ್. ತಂದೆ ಮಂಜಪ್ಪ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಬಗನಕಟ್ಟೆ, ತಾ: ಶಿಕಾರಿಪುರ, ಜಿ: ಶಿವಮೊಗ್ಗ. ಪಿರ್ಯಾದಿಯ ಅಕ್ಕನ ಮಗನಾದ ಈತನು ಹಾಗೂ ಆತನ ಗೆಳೆಯರಾದ 1). ಚಂದನ ಬಿ.ಎಮ್. ತಂದೆ ಮಾಲತೇಶ, ಸಾ|| ಶಿಕಾರಿಪುರ, 2). ಮಂಜುನಾಥ ಎಮ್. ತಂದೆ ಮಹೇಶ, ಪ್ರಾಯ-25 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಹೊಂಡದಕೇರಿ, ದೂಪದಹಳ್ಳಿ ರೋಡ್, ತಾ: ಶಿಕಾರಿಪುರ, ಜಿ: ಶಿವಮೊಗ್ಗ, 3). ಪ್ರವೀಣಕುಮಾರ ಟಿ. ಪಿ. ತಂದೆ ಫಾಲಾಕ್ಷಪ್ಪ, ಸಾ|| ಬಗನಕಟ್ಟೆ, ತಾ: ಶಿಕಾರಿಪುರ, ಜಿ: ಶಿವಮೊಗ್ಗ ರವೆರಲ್ಲರೂ ಕೂಡಿ ದಿನಾಂಕ: 10-07-2021 ರಂದು ರಾತ್ರಿ ಕಾರ್ ಮೇಲೆ ಶಿಕಾರಿಪುರದಿಂದ ಗೋಕರ್ಣ, ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಹೊರಟವರು, ದಿನಾಂಕ: 11-07-2021 ರಂದು ಬೆಳಿಗ್ಗೆ ಗೋಕರ್ಣದಲ್ಲಿ ಪ್ರವಾಸ ಮುಗಿಸಿಕೊಂಡು ಮಧ್ಯಾಹ್ನ ಮುರ್ಡೇಶ್ವರಕ್ಕೆ ಬಂದು ಮುರ್ಡೇಶ್ವರದ ಅರಬ್ಬಿ ಸಮುದ್ರದ ದಡದಲ್ಲಿ 4 ಮಂದಿ ಸೇರಿಕೊಂಡು ನೀರಿನಲ್ಲಿ ಇಳಿದು ಆಟ ಆಡುತ್ತಿರುವಾಗ ಸಾಯಂಕಾಲ 04-00 ಗಂಟೆಯ ಸುಮಾರಿಗೆ ಮಂಜುನಾಥ ಎಮ್. ತಂದೆ ಮಹೇಶ ಮತ್ತು ಮಣಿಕಂಠ ಎಮ್. ತಂದೆ ಮಂಜಪ್ಪ ಇವರ ಮೇಲೆ ಸಮುದ್ರದ ನೀರಿನ ಅಬ್ಬರದ ಅಲೆ ಅಪ್ಪಳಿಸಿ ನೀರಿನ ಅಲೆಯ ಸುಳಿಗೆ ಸಿಲುಕಿ ಇಬ್ಬರು ನೀರಿನಲ್ಲಿ ಮುಳುಗಿ ಕಾಣೆಯಾದವರು, ಸಮಯ 04-30 ಗಂಟೆಗೆ ಮಂಜುನಾಥ ಎಮ್. ತಂದೆ ಮಹೇಶ ಈತನ ಶವವು ಅರಬ್ಬಿ ಸಮುದ್ರದ ದಡಕ್ಕೆ ಬಂದು ಅಪ್ಪಳಿಸಿದ್ದು ಇರುತ್ತದೆ. ಹಾಗೂ ಅರಬ್ಬಿ ಸಮುದ್ರದ ನೀರಿನಲ್ಲಿ ಮುಳುಗಿರುವ ಮಣಿಕಂಠ ಎಮ್. ತಂದೆ ಮಂಜಪ್ಪ ಈತನ ಮೃತದೇಹವು ದಿನಾಂಕ: 12-07-2021 ರಂದು ಬೆಳಿಗ್ಗೆ 11-30 ಗಂಟೆಗೆ ಮುರ್ಡೇಶ್ವರದ ಸೀವ್ಯೂ ಲಾಡ್ಜ್ ಎದುರಿನ ಅರಬ್ಬೀ ಸಮುದ್ರದ ದಡದಲ್ಲಿ ಸಿಕ್ಕಿದ್ದು ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಹುಚ್ಚರಾಯಪ್ಪ ತಂದೆ ಸಣ್ಣ ಸಿದ್ದಪ್ಪ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೇನ್ ರೋಡ್, ಬಗನಕಟ್ಟೆ, ತಾ: ಶಿಕಾರಿಪುರ, ಜಿ: ಶಿವಮೊಗ್ಗ ರವರು ದಿನಾಂಕ: 12-07-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಈರಪ್ಪ ತಂದೆ ಅಣ್ಣಪ್ಪ ಸಂಕೇಶ್ವರಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹನಜಾನಟ್ಟಿ, ತಾ: ಹುಕ್ಕೇರಿ, ಜಿ: ಬೆಳಗಾವಿ. ಪಿರ್ಯಾದಿಯವರ ಅಣ್ಣನಾದ ಈತನು ವಿಪರೀತ ಸರಾಯಿ ಕುಡಿಯುವ ಚಟದವನಿದ್ದು, ಕಳೆದ ಜನವರಿ ತಿಂಗಳಲ್ಲಿ ಕೂಲಿ ಕೆಲಸಕ್ಕೆ ಅಂತ ಹಳಿಯಾಳಕ್ಕೆ ಬಂದವನು, ಹಳಿಯಾಳದ ಬಸ್ ನಿಲ್ದಾಣದಲ್ಲಿ ದಿನಾಂಕ: 11-07-2021 ರಂದು 23-30 ಗಂಟೆಯ ಸುಮಾರಿಗೆ ಅಸ್ವಸ್ಥಗೊಂಡವನಿಗೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸಗೆ ದಾಖಲಿಸಿದ್ದು, ಹೀಗೆ ಉಪಚಾರದಲ್ಲಿದ್ದವನು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 12-07-2021 ರಂದು ಬೆಳಿಗ್ಗೆ 06-00 ಗಂಟೆಯ ಅವಧಿಯಲ್ಲಿ ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿದ್ದು, ಇದರ ಹೊರತು ಅವನ ಮರಣದಲ್ಲಿ ಬೇರೆ ಯಾವುದೆ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಅಣ್ಣಪ್ಪ ಸಂಕೇಶ್ವರಿ, ಪ್ರಾಯ-26 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹನಜಾನಟ್ಟಿ, ತಾ: ಹುಕ್ಕೇರಿ, ಜಿ: ಬೆಳಗಾವಿ ರವರು ದಿನಾಂಕ: 12-07-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 13-07-2021 07:55 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080