ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 13-07-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 11/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಕರಿಬಸಪ್ಪ ಸವಡಿ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಮಾರುತೇಶ್ವರ ದೇವಸ್ಥಾನದ ಹತ್ತಿರ, ಚಿಕ್ಕಮಣ್ಣೂರು, ತಾ: ರೋಣ, ಜಿ: ಗದಗ (ಸ್ವಿಫ್ಟ್ ಕಾರ್ ನಂ: ಕೆ.ಎ-03/ಎ.ಡಿ-1943 ನೇದರ ಚಾಲಕ). ದಿನಾಂಕ: 13-07-2021 ರಂದು ಬೆಳಿಗ್ಗೆ 08-45 ಗಂಟೆಗೆ ಪಿರ್ಯಾದಿಯು ತನ್ನ ಬಾಬ್ತು ಅಶೋಕ ಲೈಲ್ಯಾಂಡ್ ದೋಸ್ತ್ ಗೂಡ್ಸ್ ರಿಕ್ಷಾ ನಂ: ಕೆ.ಎ-30/ಎ-3875 ನೇದರಲ್ಲಿ ಚಾಲಕನ ಬದಿಯ ಸೀಟಿನಲ್ಲಿ ಕುಳಿತುಕೊಂಡು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಗೂಡ್ಸ್ ರಿಕ್ಷಾದಲ್ಲಿ ಹೋಗುತ್ತಿರುವಾಗ ಬೈತಖೋಲ್ ಶ್ರೀ ಸದ್ಗುರು ಸಮರ್ಥ ಸಿದ್ಧರಾಮೇಶ್ವರ ಮಹಾರಾಜ ಮಠದ ಹತ್ತಿರ, ಅಂಕೋಲಾ ಕಡೆಯಿಂದ ಬಂದಂತಹ ಸ್ವಿಫ್ಟ್ ಕಾರ್ ನಂ: ಕೆ.ಎ-03/ಎ.ಡಿ-1943 ನೇದರ ಆರೋಪಿ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಂದೆ ತಿರುವು ಮುರುವು ರಸ್ತೆ ಇದೆ ಎಂದು ನೋಡಿಯೂ ಸಹ ಆರೋಪಿತನು ತನ್ನ ಕಾರಿನ ವೇಗವನ್ನು ನಿಯಂತ್ರಿಸದೇ, ತನ್ನ ಕಾರಿನ ಮುಂದಿನಿಂದ ಬರುತ್ತಿದ್ದ ಪಿರ್ಯಾದಿಯ ವಾಹನಕ್ಕೆ ತನ್ನ ಕಾರಿನ ಬಲಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಎದೆಯ ಭಾಗದಲ್ಲಿ ಒಳನೋವು, ಎಡಗೈ ಮುಷ್ಠಿಯ ಹತ್ತಿರ ತೆರಚಿದ ಗಾಯ ಹಾಗೂ ಪಿರ್ಯಾದಿಯ ಗೂಡ್ಸ್ ರಿಕ್ಷಾದ ಚಾಲಕನಾದ ನವೀನ ಈತನಿಗೆ ಎಡಗೈ ಮುಷ್ಠಿಯ ಹತ್ತಿರ ಒಳನೋವು, ಬಲಗೈ ಮೊಣಕೈ ಹತ್ತಿರ ಒಳನೋವು ಹಾಗೂ ತನ್ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 1). ಯಲ್ಲವ್ವಾ ಇವರಿಗೆ ತಲೆಯ ಬಲಭಾಗದಲ್ಲಿ ಒಳನೋವು, ಬಲಗಾಲಿನ ಮಂಡಿಯ ಮೇಲೆ ಒಳನೋವು ಹಾಗೂ 2). ನಿಂಗಪ್ಪ ಇವರಿಗೆ ಬಲಗೈ ಮುಷ್ಠಿಯ ಹತ್ತಿರ ಒಳನೋವು, ಎಡಗೈ ಮುಷ್ಠಿಯ ಹತ್ತಿರ ಒಳನೋವು, ಬೆನ್ನಿನ ಹಿಂದೆ ಒಳನೋವು, 3). ಯಲ್ಲಪ್ಪ ಇವರಿಗೆ ತಲೆಯ ಒಳಭಾಗದಲ್ಲಿ ಒಳನೋವು, ಬಲಭುಜದ ಮೇಲ್ಬಾದಲ್ಲಿ ಒಳನೋವು, ಎಡಗಾಲಿನ ಮಂಡಿಯ ಕೆಳಗೆ ಒಳನೋವು, 4). ಬಸವರಾಜ ಇವರಿಗೆ ಎಡಗಣ್ಣಿಗೆ ಒಳನೋವು, ಎಡಗಣ್ಣಿನ ಹುಬ್ಬಿನ ಮೇಲೆ ಒಳನೋವು, ತಲೆಯ ಮೇಲೆ ಒಳನೋವು, ಎದೆಯ ಭಾಗದಲ್ಲಿ ಒಳನೋವು, ಎಡಗಾಲಿನ ಮಂಡಿಯ ಮೇಲೆ ಒಳನೋವು ಪಡಿಸಿದ್ದಲ್ಲದೇ, ಆರೋಪಿ ಕಾರ್ ಚಾಲಕನು ತನಗೂ ಸಹ ಬಲಗಾಲಿನ ಮಂಡಿಯ ಹತ್ತಿರ ಗಾಯ ಹಾಗೂ ಒಳನೋವು, ಬಲಗಾಲಿನ ಪಾದದ ಹತ್ತಿರ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಉದಯ ತಂದೆ ದಾಮು ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ವ್ಯಾಪಾರ, ಸಾ|| ಮ್ಹಾಳಸಾ ರೋಡ್, ಕಾಜುಬಾಗ, ಕಾರವಾರ ರವರು ದಿನಾಂಕ: 13-07-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 13-05-2021 ರಿಂದ ದಿನಾಂಕ: 13-07-2021 ರಂದು ಮಧ್ಯಾಹ್ನ 12-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರ ಮಾಲೀಕತ್ವದ ಹಿರೇಗುತ್ತಿಯಲ್ಲಿರುವ ಹಿರೇ ಹೊಸಬಾ ಸ್ಟೋನ್ ಕ್ರಷರ್ ನ ಬಿಡಿ ಭಾಗಗಳಾದ 1). ಕ್ರಷರ್ ನ ಕಬ್ಬಿಣದ 3 ಫಿನ್ ರೋಲ್ ಗಳು-160, ಅ||ಕಿ|| 96,000/- ರೂಪಾಯಿ, 2) ಕೋನಿಕಲ್ ರೋಲರ್ ಗಳು-40, ಅ||ಕಿ|| 96,000/- ರೂಪಾಯಿ, 3). 5 ಎಚ್.ಪಿ ಮೋಟಾರ್-02, ಅ||ಕಿ|| 26,000/- ರೂಪಾಯಿ, 4) 7.5 ಎಚ್.ಪಿ ಮೋಟಾರ್-01, ಅ||ಕಿ|| 18,000/- ರೂಪಾಯಿ, 5). 01 ಎಚ್.ಪಿ ಮೋಟಾರ್-01, ಅ||ಕಿ|| 4,000/- ರೂಪಾಯಿ, 6) ಹಳೆ ಜಾ ಪ್ಲೇಟ್ ಗಳು-06, ಅ||ಕಿ|| 1,50,000/- ರೂಪಾಯಿ, 7). ಕೃಷರ್ ಸ್ಪೇರ್ಸ್ 30/9 (ಪಿನ್-02, ಟಾಗಲ್ ಪ್ಲೇಟ್-04, ಬಿಟುಮಿನ್-02), ಅ||ಕಿ|| 50,000/- ರೂಪಾಯಿ ನೇದವುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಶಾಂತಾ ತಂದೆ ನಾರಾಯಣ ನಾಯಕ, ಪ್ರಾಯ-66 ವರ್ಷ, ವೃತ್ತಿ-ಗುತ್ತಿಗೆದಾರರು ಹಾಗೂ ಮಾಲಕರು, ಹಿರೇ ಹೊಸಬಾ ಸ್ಟೋನ್ ಕ್ರಷರ್, ಸಾ|| ಹಿರೇಗುತ್ತಿ, ತಾ: ಕುಮಟಾ ರವರು ದಿನಾಂಕ: 13-07-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗೇಶ ನಾರಾಯಣ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಮೊಬೈಲ್ ರಿಪೇರಿ ಅಂಗಡಿ, ಸಾ|| ಗುಡಿಹಿತ್ತಲ್, ಶಿರಾಲಿ, ತಾ: ಭಟ್ಕಳ, 2]. ಮಾರುತಿ ಮಾದೇವ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಪಾನಬೀಡಾ ಅಂಗಡಿ, ಸಾ|| ಬೆಂಡೆಕಾನ, ಟಗ್ಗರಗೋಡ, ಜಾಲಿ, ತಾ: ಭಟ್ಕಳ. ಈ ನಮೂದಿತ ಆರೋಪಿತರುಗಳು ಸೇರಿಕೊಂಡು ದಿನಾಂಕ: 13-07-2021 ರಂದು 14-45 ಗಂಟೆಯ ಸಮಯಕ್ಕೆ ಶಿರಾಲಿ ಗ್ರಾಮದ ಜನತಾ ವಿದ್ಯಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ, ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 1,260/- ರೂಪಾಯಿಯೊಂದಿಗೆ ಆರೋಪಿತರು ಸ್ಥಳದಲ್ಲಿ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 13-07-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ವಿಧ್ಯಾ ಎ. ಬಿ. ತಂದೆ ಆಂಜನೇಯ ಜಾಡರ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಬೆಣ್ಣಿಗೇರೆ, ಪೋ: ಬಾರಂಗಿ, ತಾ: ಸೊರಬಾ, ಜಿ: ಶಿವಮೊಗ್ಗ, ಹಾಲಿ ಸಾ|| ಚಿಪಗಿ, ನಾರಾಯಣಗುರು ನಗರ, ಅಭಯ ಗಣಪತಿ ದೇವಸ್ಥಾನದ ಹತ್ತಿರ, ತಾ: ಶಿರಸಿ. ಪಿರ್ಯಾದಿಯವರ ಚಿಕ್ಕಪ್ಪನ ಮಗಳಾದ ಇವಳು ಜುಲೈ 4 ಕ್ಕೆ ಮನೆಗೆ ಬಂದು ಉಳಿದುಕೊಂಡಿದ್ದವಳು, ದಿನಾಂಕ: 12-07-2021 ರಂದು ಬೆಳಿಗ್ಗೆ 10-00 ಗಂಟೆಗೆ ಚಿಪಗಿಯಲ್ಲಿರುವ ನಮ್ಮ ಮನೆಯಿಂದ ಎಮ್.ಇ.ಎಸ್ ಕಾಲೇಜಿಗೆ ಹೋಗಿ, ಎಕ್ಸಾಕ್ಷಾಮ್ ಗೆ ಸಂಬಂಧಿಸಿದ ಓ.ಎಮ್.ಆರ್ ಶೀಟ್ ತುಂಬಿ ಬರುತ್ತೇನೆ ಎಂದು ಹೇಳಿ ಹೊರಗಡೆ ಹೋಗಿದ್ದವಳು, ಈವರೆಗೂ ಮನೆಗೆ ಬಾರದೇ ಹೊರಗಡೆ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ. ಸದರಿ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ಬಿ. ಜೆ. ಕೋಂ. ಲಕ್ಷ್ಮಣ ಬಿ. ಕೆ, ಪ್ರಾಯ-31 ವರ್ಷ, ವೃತ್ತಿ-ಬ್ಯಾಂಕ್ ನೌಕರಿ, ಸಾ|| ಚಿಪಗಿ, ನಾರಾಯಣಗುರು ನಗರ, ಅಭಯ ಗಣಪತಿ ದೇವಸ್ಥಾನದ ಹತ್ತಿರ, ತಾ: ಶಿರಸಿ ರವರು ದಿನಾಂಕ: 13-07-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಮೋದ ತಂದೆ ಸುಬ್ರಾಯ ಹೆಗಡೆ, ಪ್ರಾಯ-28 ವರ್ಷ, ಸಾ|| ಹೆಗಡೆಕಟ್ಟಾ, ತಾ: ಶಿರಸಿ, ಹಾಲಿ ಸಾ|| ಹವ್ಯಕ ನಗರ, ಬೆಂಗಳೂರು (ಸ್ವಿಫ್ಟ್ ಕಾರ್ ನಂ: ಕೆ.ಎ-31/ಎನ್-4128 ನೇದರ ಚಾಲಕ). ಈತನು ದಿನಾಂಕ: 13-07-2021 ರಂದು 11-00 ಗಂಟೆಗೆ ತನ್ನ ಸ್ವಿಫ್ಟ್ ಕಾರ್ ನಂ: ಕೆ.ಎ-31/ಎನ್-4128 ನೇದನ್ನು ಶಿರಸಿಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಹುಳಗೋಳ ಗುಂಡಿಗದ್ದೆಯ ಹತ್ತಿರ ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ, ಎದುರಿನಿಂದ ಯಲ್ಲಾಪುರ ಕಡೆಯಿಂದ ಶಿರಸಿ ಕೆಡಗೆ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-6138 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನಗಳನ್ನ ಜಖಂಗೊಳಿಸಿದ್ದಲ್ಲದೇ, ಮೋಟಾರ್ ಸೈಕಲ್ ಸವಾರನಾದ ಪಿರ್ಯಾದಿಯ ಹಣೆ, ಮೂಗು, ಬಲಗಣ್ಣಿನ ಕೆಳಭಾಗ, ಎಡಗೈನ ಮುಂಗೈ ಹಾಗೂ ಎಡಗಾಲಿನ ಹಿಂಬಡಿಗೆ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಶಿವಾ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ದೀಗೊಪ್ಪ, ಪೋ: ಯಡಳ್ಳಿ ತಾ: ಶಿರಸಿ ರವರು ದಿನಾಂಕ: 13-07-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆನಂದ ತಂದೆ ವೆಂಕಟರಾಮಪ್ಪ, ಪ್ರಾಯ-33 ವರ್ಷ, ವೃತ್ತಿ-ಚಾಲಕ, ಸಾ|| ಆಚನಪಲ್ಲಿ, ತಾ: ಮುಳಬಾಗಿಲು, ಜಿ: ಕೋಲಾರ (ಕಾರ್ ನಂ: ಕೆ.ಎ-05/ಎ.ಎಫ್-4661 ನೇದರ ಚಾಲಕ). ಈತನು ದಿನಾಂಕ: 12-07-2021 ರಂದು ಸಂಜೆ 05-45 ಗಂಟೆಯ ಸುಮಾರಿಗೆ ತಾನು ಚಾಲನೆ ಮಾಡುತ್ತಿದ್ದ ಕಾರ್ ನಂ: ಕೆ.ಎ-05/ಎ.ಎಫ್-4661 ನೇದನ್ನು ದಾಂಡೇಲಿ ಕಡೆಯಿಂದ ಜೋಯಿಡಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಚಾಲನೆ ಮಾಡಿಕೊಂಡು ಹೋಗುತ್ತಾ ಪಣಸೋಲಿ ಗ್ರಾಮದ ಕ್ರಾಸಿನಿಂದ ಸುಮಾರು 200 ಮೀಟರ್ ದೂರದಲ್ಲಿ ಜೋಯಿಡಾ ಕಡೆಗೆ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ಪಕ್ಕದಲ್ಲಿದ್ದ ಒಂದು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿದ್ದ ಪಿರ್ಯಾದಿಗೆ ಎಡಗೈ ಮೊಣಕೈ ಹತ್ತಿರ ಗಾಯನೋವು ಪಡಿಸಿದ್ದಲ್ಲದೇ, ಅಶೋಕ ತಂದೆ ಸೀನಪ್ಪ ಈತನ ಎಡಗಾಲಿಗೆ ಹಾಗೂ ಅಶೋಕ ತಂದೆ ವೆಂಕಟೇಶಪ್ಪ ಈತನ ಮೂಗಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನವೀನಕುಮಾರ ತಂದೆ ಜಯಪ್ಪ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಕೆ.ಜಿ.ಎಫ್ ರಸ್ತೆ, ತಾ: ಮುಳಬಾಗಿಲು, ಜಿ: ಕೋಲಾರ ರವರು ದಿನಾಂಕ: 13-07-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 13-07-2021

at 00:00 hrs to 24:00 hrs

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶ್ರೀಧರ ತಂದೆ ಶನಿಯಾರ ದೇವಾಡಿಗ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಂಡಳ್ಳಿ, ತಾ: ಭಟ್ಕಳ. ಈತನು ದಿನಾಂಕ: 12-07-2021 ರಂದು ಬೆಳಿಗ್ಗೆ 10-30 ಗಂಟೆಯ ಸಮಯಕ್ಕೆ ಗದ್ದೆ ಕೆಲಸ ಮಾಡಿಕೊಂಡು ಮುಂಡಳ್ಳಿಯ ಹಾವಳಿ ಕಂಠದಲ್ಲಿರುವ ಹೊಳೆಯ ಹತ್ತಿರ ಕಾಲು ತೊಳೆಯಲು ಹೋದಾಗ ಆಕಸ್ಮಾತ್ ಆಗಿ ಕಾಲು ಜಾರಿ ಹೊಳೆಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾದವನ ಮೃತದೇಹವು ದಿನಾಂಕ: 13-07-2021 ರಂದು 17-00 ಗಂಟೆಗೆ ಮುಂಡಳ್ಳಿಯ ಹೊಳೆಯಲ್ಲಿ ಸಿಕ್ಕಿದ್ದು, ಇದರ ಹೊರತು ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶ್ರೀಕಾಂತ ತಂದೆ ಭೈರಾ ದೇವಾಡಿಗ, ಪ್ರಾಯ-32 ವರ್ಷ, ವೃತ್ತಿ-ಶಿಲ್ಪಿ ಕೆಲಸ, ಸಾ|| ಬಸ್ತಿ, ಕಂಬಳೂರು, ಮುರುಡೇಶ್ವರ, ತಾ: ಭಟ್ಕಳ ರವರು ದಿನಾಂಕ: 13-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಯಶೋಧಾ ತಂದೆ ಬಂಗಾರ್ಯ ಗೌಡ, ಪ್ರಾಯ-31 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮುಂಡಗೇಹಳ್ಳಿ, ಪೋ; ಓಣೀಕೇರಿ, ತಾ: ಶಿರಸಿ. ಇವಳು ಹಾಗೂ ಇವಳ ಕುಟುಂಬದವರು ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದು, ಅವರ ಹಳೆಯ ಮಣ್ಣಿನ ಮನೆಯನ್ನು ಬಚ್ಚಲು ಮನೆಯನ್ನಾಗಿ ಮಾಡಿಕೊಂಡು ಉಪಯೋಗಿಸುತ್ತಾ ಬಂದವರಾಗಿರುತ್ತಾರೆ. ದಿನಾಂಕ: 13-07-2021 ರಂದು ಸಂಜೆ 16-15 ಗಂಟೆಗೆ ಸ್ನಾನ ಮಾಡುವ ಸಲುವಾಗಿ ಯಶೋಧಾ ತಂದೆ ಬಂಗಾರ್ಯ ಗೌಡ ಇವಳು ಬಚ್ಚಲು ಮನೆಯಲ್ಲಿ ನೀರು ಕಾಯಿಸಲು ಹೋಗಿದ್ದಳು. ಸದ್ಯ ವಿಪರೀತವಾಗಿ ಮಳೆ ಸುರಿಯುತ್ತಿದ್ದು, ಹೀಗೆ ಸುರಿದ ಭಾರೀ ಮಳೆಯಿಂದಾಗಿ ಬಚ್ಚಲು ಮನೆಯ ಮಣ್ಣಿನ ಗೋಡೆಯು ಆಕಸ್ಮಿಕವಾಗಿ ಕುಸಿದು ಅವಳ ಮೈಮೇಲೆ ಬಿದ್ದು, ಅವಳು ಮಣ್ಣಿನ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ಬಂಗಾರ್ಯ ಗೌಡ, ಪ್ರಾಯ-29 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮನೆ ನಂ: 13, ಮುಂಡಗೇಹಳ್ಳಿ, ಪೋ: ಓಣಿಕೇರಿ, ತಾ: ಶಿರಸಿ ರವರು ದಿನಾಂಕ: 13-07-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 14-07-2021 06:28 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080