ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 14-07-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 107/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅನ್ನಬಳಗನ್, ಸಾ|| ತಮಿಳನಾಡು (ಲಾರಿ ನಂ: ಟಿ.ಎನ್-28/ಎ.ಇ-8100 ನೇದರ ಚಾಲಕ). ಈತನು ದಿನಾಂಕ: 14-07-2021 ರಂದು ಬೆಳಿಗ್ಗೆ ಸುಮಾರು 09-30 ಗಂಟೆಗೆ ತನ್ನ ಲಾರಿ ನಂ: ಟಿ.ಎನ್-28/ಎ.ಇ-8100 ನೇದನ್ನು ಅಂಕೋಲಾ ತಾಲೂಕಿನ ನವಗದ್ದೆ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ತನ್ನ ಲಾರಿಯ ಮುಂದೆ ಹೋಗುತ್ತಿದ್ದ ಒಂದು ಲಾರಿಯನ್ನು ಓವರಟೇಕ್ ಮಾಡಲು ಹೋಗಿ ಯಲ್ಲಾಪುರ ಕಡೆಯಿಂದ ಅಂಕೋಲಾದ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಟ್ಯಾಂಕರ್ ಲಾರಿ ನಂ: ಕೆ.ಎ-40/ಎ-8288 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಬಲಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚನ್ನಬಸಪ್ಪ ತಂದೆ ಯಲ್ಲಪ್ಪ ಭಮ್ಮಣ್ಣನವರ, ಪ್ರಾಯ-42 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಕಣವಿ ಹೊಸೂರು, ತಾ&ಜಿ: ಗದಗ ರವರು ದಿನಾಂಕ: 14-07-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 134/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹುಸೇನಿ ತಂದೆ ಚಿನ್ನಪ್ಪ ಮಹಾಂತ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅದಪಗುಂಚಿ, ತಾ: ಹುಬ್ಬಳ್ಳಿ, ಜಿ: ಧಾರವಾಡ (ಮೋಟಾರ್ ಸೈಕಲ್ ನಂ: ಕೆ.ಎ-63/ಕೆ-2102 ನೇದರ ಚಾಲಕ). ಈತನು ದಿನಾಂಕ: 14-07-2021 ರಂದು 13-30 ಗಂಟೆಗೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-63/ಕೆ-2102 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನೇದರಲ್ಲಿ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಮಾನೀರ್ ಹರ್ಕಡೆ ಕ್ರಾಸ್ ಹತ್ತಿರ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ, ಒಮ್ಮೇಲೆ ಮೋಟಾರ್ ಸೈಕಲನ್ನು ಎಡಕ್ಕೆ ಚಲಾಯಿಸಿ ರಸ್ತೆಯ ಬದಿಯಲ್ಲಿ ಬಿ.ಎಸ್.ಎನ್.ಎಲ್ ಟೆಲಿಕಾಮ್ ಸಂಸ್ಥೆಯ ಪೈಪ್ ಅಳವಡಿಕೆಯ ಕೆಲಸವನ್ನು ಮಾಡುತಿದ್ದ ಶ್ರೀ ವಿವೇಕಾನಂದ ತಂದೆ ದೇವರಾಜ ಗಜನಿಕರ, ಪ್ರಾಯ-43 ವರ್ಷ, ವೃತ್ತಿ-ಬಿ.ಎಸ್.ಎನ್.ಎಲ್ ನಲ್ಲಿ ಕೆಲಸ, ಸಾ|| ಅರ್ಜುನಕೋಟ್, ಸದಾಶಿವಗಡ, ಕಾರವಾರ ಇವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮುಗುಚಿ ಬೀಳುವಂತೆ ಮಾಡಿ, ಮೂಗಿಗೆ ಗಾಯವಾಗಿ, ಮುಂಭಾಗದ ಮೇಲ್ಬದಿಯ ಎರಡು ಹಲ್ಲುಗಳು ಮುರಿದು ಹೋಗಲು ಹಾಗೂ ಎಡಗೈ ಮೂಳೆ ಮುರಿದು ಗಂಭೀರ ಗಾಯನೋವಾಗಲು ಆರೋಪಿ ಮೋಟಾರ್ ಸೈಕಲ್ ಸವಾರನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶಿರಿಕಿ ನಾಯ್ಡು ತಂದೆ ಶಿರಕಿ ರಾಮು, ಪ್ರಾಯ-28 ವರ್ಷ, ವೃತ್ತಿ-ಬಿ.ಎಸ್.ಎನ್.ಎಲ್ ನಲ್ಲಿ ಜೆ.ಟಿ.ಓ, ಸಾ|| 3-14, ರಂಗೋಲಿ ವಾರಿ ಸ್ಟ್ರೀಟ್, ಮೊಗಲಿಪುರಂ, ಸಬ್ಬವರಮ್, ವಿಶಾಖಪಟ್ಟಣ, ಆಂಧ್ರಪ್ರದೇಶ, ಹಾಲಿ ಸಾ|| ಬಿ.ಎಸ್.ಎನ್.ಎಲ್ ಕ್ವಾರ್ಟರ್ಸ್, ಕಾರವಾರ ರವರು ದಿನಾಂಕ: 14-07-2021 ರಂದು 16-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 09-07-2021 ರಂದು ರಾತ್ರಿ 10-00 ಗಂಟೆಯಿಂದ ರಾತ್ರಿ 11-00 ಗಂಟೆಯ ನಡುವಿನ ಅವಧಿಯಲ್ಲಿ ದಾಂಡೇಲಿ-ಹಳಿಯಾಳ ರಸ್ತೆಯ ಶ್ರೇಯಸ್ ಮಿಲ್ ಹತ್ತಿರ ನಿಲ್ಲಿಸಿಟ್ಟ ಅ||ಕಿ|| 15,000/- ರೂಪಾಯಿ ಮೌಲ್ಯದ ಪಿರ್ಯಾದಿಯ ಹೀರೋ ಫ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ: ಕೆ.ಎ-31/ವಿ-3520 (ಇಂಜಿನ್ ನಂ: HA10ENDHL00541 ಹಾಗೂ ಚಾಸಿಸ್ ನಂ: MBLHA10AWDHL70474) ನೇದನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ಪಾಂಡುರಂಗ ಪಾಟೀಲ್, ಪ್ರಾಯ-45 ವರ್ಷ, ವೃತ್ತಿ-ದಾಂಡೇಲಿಯ WCPM ದಲ್ಲಿ ಕೆಲಸ, ಸಾ|| ಗಾಂವಠಾಣ, ದಾಂಡೇಲಿ ರವರು ದಿನಾಂಕ: 14-07-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 14-07-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

ಇತ್ತೀಚಿನ ನವೀಕರಣ​ : 17-07-2021 11:54 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080