ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 15-07-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 190/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಸಹನಾ ತಂದೆ ರಾಮಚಂದ್ರ ನಾಯ್ಕ, ಪ್ರಾಯ-21 ವರ್ಷ, ಸಾ|| ವೀರಗಲ್ಲಮಕ್ಕಿ, ನಗರಬಸ್ತಿಕೇರಿ, ಗೇರುಸೊಪ್ಪ, ತಾ: ಹೊನ್ನಾವರ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 13-07-2021 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ: 14-07-2021 ರಂದು ಬೆಳಿಗ್ಗೆ 05-00 ಗಂಟೆಯ ನಡುವಿನ ಅವಧಿಯಲ್ಲಿ ರಾತ್ರಿ ಮನೆಯಲ್ಲಿ ಮಲಗಿದ್ದವಳು, ನಂತರ ಮನೆಯಿಂದ ಹೊರಗಡೆ ಹೋಗಿ ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ಬಾಬು ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ವೀರಗಲ್ಲಮಕ್ಕಿ, ನಗರಬಸ್ತಿಕೇರಿ, ಗೇರುಸೊಪ್ಪ, ತಾ: ಹೊನ್ನಾವರ ರವರು ದಿನಾಂಕ: 15-07-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 191/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಬೀವುಲ್ಲಾ ತಂದೆ ಅಬ್ದುಲ್ ಖಾದರ್, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| 04 ನೇ ಕ್ರಾಸ್, ಗಾಂಧಿನಗರ, ತಾ: ಸಾಗರ, ಜಿ: ಶಿವಮೊಗ್ಗ (ಲಾರಿ ನಂ: ಕೆ.ಎ-08/7330 ನೇದರ ಚಾಲಕ). ಈತನು ದಿನಾಂಕ: 14-07-2021 ರಂದು 17-30 ಗಂಟೆಗೆ ತನ್ನ ಲಾರಿ ನಂ: ಕೆ.ಎ-08/7330 ನೇದರಲ್ಲಿ ಕಟ್ಟಿಗೆಯನ್ನು ಲೋಡ್ ಮಾಡಿಕೊಂಡು ಸಾಗರದಿಂದ ಹೊನ್ನಾವರಕ್ಕೆ ಬರುತ್ತಿರುವಾಗ, ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಹೊನ್ನಾವರ ತಾಲುಕಿನ ಗೇರುಸೊಪ್ಪಾದ ಸೂಳೆಮುರ್ಕಿ ಕ್ರಾಸ್ ಹತ್ತಿರ ರಸ್ತೆಗೆ ಅಡ್ಡಲಾಗಿ ಬಂದ ಕಾಡು ಪ್ರಾಣಿಯನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ತಗ್ಗಿನಲ್ಲಿ ಲಾರಿಯನ್ನು ಪಲ್ಟಿ ಮಾಡಿ, ಆರೋಪಿ ಲಾರಿ ಚಾಲಕನು ತನ್ನ ಬಲಗಾಲಿಗೆ ಹಾಗೂ ಬಲಭುಜಕ್ಕೆ ಗಾಯನೋವು ಪಡಿಸಿಕೊಂಡು, ಲಾರಿ ವಾಹನದ ಬಿಡಿಭಾಗಗಳು ಜಖಂಗೊಳ್ಳಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ ಅಸ್ಲಮ್ ತಂದೆ ಅಬ್ದುಲ್ ಘನಿ, ಪ್ರಾಯ-45 ವರ್ಷ, ವೃತ್ತಿ-ಟಿಂಬರ್ ಕಾಂಟ್ರ್ಯಾಕ್ಟರ್, ಸಾ|| ಜಾಲಿ ರೋಡ್, ಆಜಾದ್ ನಗರ, ತಾ: ಭಟ್ಕಳ ರವರು ದಿನಾಂಕ: 15-07-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 192/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION  OF   CATTLE ORDINANCE-2020 ಮತ್ತು ಕಲಂ: 11(1)(A)(D)(E)  Prevention Of Cruelty to Animals Act-1960 ಹಾಗೂ ಕಲಂ: 192(A) Indian Motor Vehicles Act-1988 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರದೀಪ ತಂದೆ ಗಣಪತಿ ಮರಾಠಿ ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಆರ್ಮುಡಿ, ಹಿರೇಬೈಲ್, ತಾ: ಹೊನ್ನಾವರ, 2]. ಹರೀಶ ತಂದೆ ಗೋಪಾಲ ಗೌಡ, ಪ್ರಾಯ-22 ವರ್ಷ, ವೃತ್ತಿ-ಚಾಲಕ, ಸಾ|| ಹೆಗ್ಗರಣಿ, ತಾ: ಸಿದ್ದಾಪುರ, 3]. ಮಣಿಕಂಠ ತಂದೆ ಗಣಪತಿ ಮರಾಠಿ, ಪ್ರಾಯ-20 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸೂಳಿಗುಂಡಿ, ಮಹಿಮೆ, ತಾ: ಹೊನ್ನಾವರ, 4]. ಪರಮೇಶ್ವರ ತಂದೆ ಮಾದೇವ ಮರಾಠಿ, ಸಾ|| ಕೋಡಿಗದ್ದೆ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರೆಲ್ಲರು ಸೇರಿ ದಿನಾಂಕ: 15-07-2021 ರಂದು 21-15 ಗಂಟೆಗೆ ಮಹೀಂದ್ರಾ ಕಂಪನಿಯ ಬಿಳಿ ಬಣ್ಣದ ಬೊಲೆರೋ ಗೂಡ್ಸ್ ವಾಹನ ನಂ: ಕೆ.ಎ-47/9485 ನೇದರಲ್ಲಿ ಸುಮಾರು 30,000/- ರೂಪಾಯಿ ಬೆಲೆಯ ಕಂದು ಬಣ್ಣದ ಎತ್ತು-01, ಕಪ್ಪು ಬಣ್ಣದ ಎತ್ತು-02, ಹೀಗೆ ಒಟ್ಟೂ 03 ಜಾನುವಾರಗಳನ್ನು ತುಂಬಿಕೊಂಡು ಜಾನುವಾರುಗಳಿಗೆ ನಿಂತುಕೊಳ್ಳಲು, ಮಲಗಲು ಕಂಪಾರ್ಟಮೆಂಟಿನ ವ್ಯವಸ್ಥೆ ಮಾಡದೇ ಹಾಗೂ ಮೇವು ಮತ್ತು ನೀರಿನ ವ್ಯವಸ್ಥೆ ಇಲ್ಲದೇ ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ಸರಕು ಸಾಗಣೆಯ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಆರೋಪಿ 1, 2 ಹಾಗೂ 3 ನೇಯವರು ಸೆರೆ ಸಿಕ್ಕಿದ್ದು ಮತ್ತು ಆರೋಪಿ 4 ನೇಯವನು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 15-07-2021 ರಂದು 23-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 193/2021, ಕಲಂ: 143, 147, 341, 323, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ 8 ರಿಂದ 10 ಜನ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದುದಾರರು ದಿನಾಂಕ: 15-07-2021 ರಂದು ಮಣಿಕಂಠ ಗಣಪತಿ ಮರಾಠಿ ಇವರು ಪರಮೇಶ್ವರ ಮಾದೇವ ಮರಾಠಿ ಇವರ ಬಳಿ ಇದ್ದ 3 ಹೋರಿಗಳನ್ನು ಕೃಷಿ ಕೆಲಸದ ನಿಮಿತ್ತ ಹೊನ್ನಾವರದ ಮಹಿಮೆಗೆ ಸಾಗಿಸಲು ಕೇಳಿಕೊಂಡಂತೆ ತನ್ನ ಬಾಬ್ತು ಬೊಲೆರೋ ವಾಹನ ನಂ: ಕೆ.ಎ-47/9485 ನೇದರಲ್ಲಿ ಬಾಡಿಗೆಗೆ ತುಂಬಿಕೊಂಡು, ಸದರಿ ವಾಹನದಲ್ಲಿ ಹರೀಶ ಗೋಪಾಲ ಗೌಡ ಈತನನ್ನು ಕೂಡ್ರಿಸಿಕೊಂಡು, ತಾನು ಚಾಲಕನಾಗಿ ವಾಹನವನ್ನು ಚಲಾಯಿಸಿಕೊಂಡು ಕೋಡಿಗದ್ದೆಯಿಂದ ಹೊನ್ನಾವರದ ಮಹಿಮೆಗೆ ಹೋಗುವಾಗ, ಮಣಿಕಂಠ ಗಣಪತಿ ಮರಾಠಿ ಮತ್ತು ಪರಮೇಶ್ವರ ಮಾದೇವ ಮರಾಠಿ ಇಬ್ಬರೂ ಮೋಟಾರ್ ಸೈಕಲ್ ನಂ: ಕೆ.ಎ-15/ಕ್ಯೂ-1508 ನೇದರ ಮೇಲೆ ತಮಗೆ ದಾರಿ ತೋರಿಸಿಕೊಂಡು ತಮ್ಮ ಮುಂದಿನಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕೋಡಿಗದ್ದೆ-ಸಂತೆಗುಳಿ ಮಾರ್ಗವಾಗಿ ಅರೆಅಂಗಡಿಗೆ ತಲುಪಿ, ಅಲ್ಲಿಂದ ಮಹಿಮೆಗೆ ತೆರಳುವಾಗ ದಿಬ್ಬಣಗಲ್ ದಲ್ಲಿ ರಾತ್ರಿ 09-15 ಗಂಟೆಯ ಸುಮಾರಿಗೆ ನಮೂದಿತ ಆರೋಪಿತರು ನಮ್ಮ ವಾಹನವನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ‘ಬೋಳಿ ಮಕ್ಕಳಾ, ನಿಮಗೆ ದನ ಸಾಗಾಟ ಮಾಡಲು ಪರ್ಮಿಟ್ ಇದೆಯಾ? ಕಡಿಯುವ ಸಲುವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದೀರಿ, ನಿಮ್ಮನ್ನು ಇಲ್ಲಿಯೇ ಹುಗಿದು ಹಾಕುತ್ತೇವೆ. ಬೋಸುಡಿ ಮಕ್ಕಳಾ, ನಿಮ್ಮ ತಾಯಿನ ಹಡಾ’ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಎಲ್ಲರೂ ಸೇರಿ ತನಗೆ, ಮಣಿಕಂಠ, ಪರಮೇಶ್ವರ ಮತ್ತು ಹರೀಶನಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಗಾಯನೋವು ಉಂಟು ಮಾಡಿರುತ್ತಾರೆ. ಆಗ ಪರಮೇಶ ಈತನು ಭಯದಿಂದ ಓಡಿ ಹೋದನು. ಸದರಿ ಆರೋಪಿತರ ಹೆಸರು ವಿಳಾಸ ತನಗೆ ಗೊತ್ತಿಲ್ಲ, ಅವರನ್ನು ತಾನು ನೋಡಿದರೆ ಗುರುತಿಸುತ್ತೇನೆ. ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರದೀಪ ತಂದೆ ಗಣಪತಿ ಮರಾಠಿ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಆರ್ಮುಡಿ, ಹಿರೇಬೈಲ್, ತಾ: ಹೊನ್ನಾವರ ರವರು ದಿನಾಂಕ: 15-07-2021 ರಂದು 23-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 4. 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 11(1)(D) PREVENTION OF CRUELTY TO ANIMALS ACT-1960 ಹಾಗೂ ಕಲಂ: 192 Indian Motor Vehicles Act-1988 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಬ್ಬೀರ್ ಅಬ್ದುಲ್ ಶೇಖ್, ಸಾ|| ಬಸ್ತಿಮಕ್ಕಿ, ಮುರ್ಡೇಶ್ವರ, ತಾ: ಭಟ್ಕಳ, 2]. ಸಮೀರ್ ಶಂಷುದ್ದೀನ್ ಸಾಬ್, ಸಾ|| ಅಶ್ಫಾಕ್ ಕಂಪೌಂಡ್, ಮುರ್ಡೇಶ್ವರ, ತಾ: ಭಟ್ಕಳ, 3]. ಇನ್ನುಳಿದ 2 ಜನ ಆರೋಪಿತರು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ಕೂಡಿಕೊಂಡು ದಿನಾಂಕ: 15-07-2021 ರಂದು ಬೆಳಿಗ್ಗೆ 05-25 ಗಂಟೆಗೆ 3 ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಜಾನುವಾರು ಸಾಗಾಟ ಮಾಡಲು ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪಾಸ್ ಯಾ ಪರ್ಮಿಟ್ ಇಲ್ಲದೇ ಜಾನುವಾರುಗಳನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಟೊಯೋಟಾ ಇನೋವಾ ಕಾರ್ ನಂ: ಕೆ.ಎಲ್-14/ಪಿ-7964 ನೇದರಲ್ಲಿ ತುಂಬಿ ಮಂಕಿ ಕಡೆಯಿಂದ ಬಸ್ತಿಮಕ್ಕಿ ಮಾರ್ಗವಾಗಿ ಮುರ್ಡೇಶ್ವರ ಕಡೆಗೆ ಸಾಗಾಟ ಮಾಡುತ್ತಿರುವಾಗ ದಾಳಿಯ ಕಾಲ ಆರೋಪಿತರೆಲ್ಲರೂ ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ರವೀಂದ್ರ ಎಮ್ ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 15-07-2021 ರಂದು 07-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯ ಕುಟುಂಬದವರು ಕಳೆದ 6 ತಿಂಗಳ ಹಿಂದೆ ರಾಮದಾಸ ಕೃಷ್ಣ ಪ್ರಭು ಇವರಿಗೆ ಸೇರಿದ ಮಾವಿನಕಟ್ಟಾ ಬೆಂಗ್ರೆಯ ಕಾತ್ಯಾಯಿಣಿ ರೈಸ್ ಮಿಲ್ ನಲ್ಲಿ ಬಾಡಿಗೆಗೆ ಉಳಿದುಕೊಂಡಿದ್ದು, ಅಲ್ಲಿ ಉಳಿದುಕೊಳ್ಳಲು ಅನಾನೂಕುಲ ಆಗಿರುವುದರಿಂದ ಕಳೆದ 2 ತಿಂಗಳಿಂದ ಬಸ್ತಿಯ ಕಡಕೇರಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಉಳಿದುಕೊಂಡಿದ್ದು, ಕೆಲವು ಮನೆಯ ಸಾಮಾನುಗಳನ್ನು ಬಸ್ತಿಗೆ ತೆಗೆದುಕೊಂಡು ಬಂದಿದ್ದು, ಇನ್ನೂ ಸ್ವಲ್ಪ ಸಾಮಾನುಗಳನ್ನು ರೈಸ್  ಮಿಲ್ ನಲ್ಲಿ ಇಟ್ಟಿದ್ದರು. ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 03-07-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 14-07-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವದಿಯಲ್ಲಿ ಪಿರ್ಯಾದಿಯ ಕುಟುಂಬದವರು ರೈಸ್ ಮಿಲ್ ನಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ರೈಸ್ ಮಿಲ್ ನ ಹಿಂದಿನ ಬಾಗಿಲ ಚಿಲಕ ಮುರಿದು ಒಳಗೆ ಹೋಗಿ ರೈಸ್ ಮಿಲ್ ನ ಒಂದು ಕಪಾಟಿನಲ್ಲಿದ್ದ ಆಭರಣಗಳಾದ 1). 20 ಗ್ರಾಂ ತೂಕದ ಬಂಗಾರದ ರೋಪ್ ಚೈನ್-1, ಇದರ ಅ||ಕಿ|| 50,000/- ರೂಪಾಯಿ, 2). 50 ಗ್ರಾಂ ತೂಕದ ಬೆಳ್ಳಿಯ ಉದ್ದರಣೆ-1, ಇದರ ಅ||ಕಿ|| 2,000/- ರೂಪಾಯಿ, 3). ದೇವರ ಕಾಣಿಕೆ ಡಬ್ಬದಲ್ಲಿದ್ದ ನಗದು ಹಣ 20,000/- ರೂಪಾಯಿ ಹಾಗೂ ರೈಸ್ ಮಿಲ್ ನಲ್ಲಿದ್ದ 4). ಕಾರ್ ವಾಷ್ ಕಂಪ್ರೆಸರ್-1, ಇದರ ಅ||ಕಿ|| 5,000/- ರೂಪಾಯಿ, 5). 10 ಕೆ.ಜಿ ತೂಕದ ತಾಮ್ರದ ಹಂಡೆ-1, ಇದರ ಅ||ಕಿ|| 3,000/- ರೂಪಾಯಿ, 6). ಹಳೆಯ ಎಲ್.ಜಿ ಫ್ರಿಡ್ಜ್-1, ಇದರ ಅ||ಕಿ|| 2,000/- ರೂಪಾಯಿ. ಹೀಗೆ ಒಟ್ಟೂ 82,000/- ರೂಪಾಯಿ ಮೌಲ್ಯದ ಆಭರಣ ಹಾಗೂ ವಸ್ತುಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸಂದೀಪ ತಂದೆ ಮಾರುತಿ ಆಚಾರ್ಯ, ಪ್ರಾಯ-38 ವರ್ಷ, ವೃತ್ತಿ-ಇಲೆಕ್ಟ್ರಿಕ್ ಅಂಗಡಿ, ಸಾ|| ಮಾವಿನಕಟ್ಟಾ, ಬೆಂಗ್ರೆ, ತಾ: ಭಟ್ಕಳ, ಹಾಲಿ ಸಾ|| ಕಡಕೇರಿ, ಬಸ್ತಿ, ತಾ: ಭಟ್ಕಳ ರವರು ದಿನಾಂಕ: 15-07-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: ಹೆಂಗಸು ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ಸರಿತಾ ಕೋಂ. ಮಾಕು ಮಲಗೊಂಡೆ, ಪ್ರಾಯ-30 ವರ್ಷ, ವೃತ್ತಿ-ಗೃಹಿಣಿ, ಸಾ|| ಹಾರ್ನೋಡಾ, ದಾಂಡೇಲಿ, 2]. ಕುಮಾರ: ಹರೀಶ ತಂದೆ ಮಾಕು ಮಲಗೊಂಡೆ, ಪ್ರಾಯ-9 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹಾರ್ನೋಡಾ, ದಾಂಡೇಲಿ. ಕಾಣೆಯಾದ ಶ್ರೀಮತಿ ಸರಿತಾ ಕೋಂ. ಮಾಕು ಮಲಗೊಂಡೆ ಇವಳು ತನ್ನ ಮಗನಾದ ಕುಮಾರ: ಹರೀಶ ತಂದೆ ಮಾಕು ಮಲಗೊಂಡೆ ಇವನನ್ನು ತನ್ನ ಸಂಗಡ ಕರೆದುಕೊಂಡು ದಿನಾಂಕ: 02-07-2021  ರಂದು ಬೆಳಿಗ್ಗೆ 10-00 ಗಂಟೆಗೆ ದಾಂಡೇಲಿಗೆ ಹೋಗಿ ಬರುವುದಾಗಿ ತನ್ನ ಹಿರಿಯ ಮಗನಾದ ದರ್ಶನ ಈತನಿಗೆ ಹೇಳಿ ಹೋದವಳು, ಮರಳಿ ತನ್ನ ಮಗನನ್ನು ಕರೆದುಕೊಂಡು ಮನೆಗೆ ಬರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವರನ್ನು ಪತ್ತೆಯ ಕುರಿತು ಈವರೆಗೆ ಹುಡುಕಾಡಿದ್ದರಲ್ಲಿ ಸಿಗದೇ ಇರುವುದರಿಂದ ಸದ್ರಿಯವರನ್ನು ಹುಡುಕಿ ಕೊಡಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾಕು ತಂದೆ ಬಾಬು ಮಲಗೊಂಡೆ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರ್ನೋಡಾ, ದಾಂಡೇಲಿ ರವರು ದಿನಾಂಕ: 15-07-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 15-07-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

ಇತ್ತೀಚಿನ ನವೀಕರಣ​ : 17-07-2021 01:56 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080