ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 16-07-2021

at 00:00 hrs to 24:00 hrs

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 100/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ರೇವತಿ ತಂದೆ ಸಣ್ಣು ಅಂಬಿಗ, ಪ್ರಾಯ-24 ವರ್ಷ, ವೃತ್ತಿ-ಮನೆಯಲ್ಲಿ ಕೆಲಸ, ಸಾ|| ಕಳಸಿಮೂಟೆ, ಅಂಬಿಗರ ಕೇರಿ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 15-07-2021 ರಂದು 16-00 ಗಂಟೆಗೆ ತನ್ನ ಮನೆಯ ಜನರಲ್ಲಿ ತಾನು ಕಾಸರಕೋಡನಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು, ಈವರೆಗೂ ಮನೆಗೆ ಮರಳಿ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಪಾರ್ವತಿ ಕೋಂ. ಸಣ್ಣು ಅಂಬಿಗ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಳಸಿಮೂಟೆ, ಅಂಬಿಗರ ಕೇರಿ, ತಾ: ಹೊನ್ನಾವರ ರವರು ದಿನಾಂಕ: 16-07-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 113/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಭಜ್ಜಿರೆಡ್ಡಿ ಕುರುರಬರ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಸುಲ್ತಾನಪುರ, ಪೋ: ಕಳಸ, ತಾ: ಕುಂದಗೋಳ, ಜಿ: ಧಾರವಾಡ (ಕಂಟೇನರ್ ಲಾರಿ ನಂ: ಎಚ್.ಆರ್-55/ವ್ಹಾಯ್-0325 ನೇದರ ಚಾಲಕ). ಈತನು ದಿನಾಂಕ: 16-07-2021 ರಂದು ಸಮಯ ಸುಮಾರು 11-30 ಗಂಟೆಗೆ ಯಲ್ಲಾಪುರ ಪಟ್ಟಣದ ಬಿಸಗೋಡ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಕಂಟೇನರ್ ಲಾರಿ ನಂ: ಎಚ್.ಆರ್-55/ವ್ಹಾಯ್-0325 ನೇದನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಅದೇ ವೇಳೆ ತನ್ನ ಮುಂದೆ ಅಂದರೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ತನ್ನ ರಸ್ತೆಯ ಸೈಡಿನಿಂದ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಓಮಿನಿ ವಾಹನ ನಂ: ಕೆ.ಎ-31/ಎನ್-4731 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ರಾಮಚಂದ್ರ ಭಟ್ಟ, ಪ್ರಾಯ-35 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೆಡಸಗದ್ದೆ, ತಾ: ಯಲ್ಲಾಪುರ ರವರು ದಿನಾಂಕ: 16-07-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುರುಗನ್ ಕೆ. ತಂದೆ ಆರ್. ಕುಪ್ಪನ್, ಪ್ರಾಯ-43 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಜಮೀನ್ ಪೆರುಂಬಾಕಂ, ಕಾಂಚಿಪುರಂ, ತಾ: ಸಯೂರ, ಜಿ: ಸಂಗಲಪೇಟ್, ತಮಿಳನಾಡು ರಾಜ್ಯ (ಲಾರಿ ನಂ: ಟಿ.ಎನ್-52/ಡಿ-2894 ನೇದರ ಚಾಲಕ). ಈತನು ದಿನಾಂಕ: 14-07-2021 ರಂದು 15-00 ಗಂಟೆಗೆ ದಾಂಡೇಲಿ ತಾಲೂಕಿನ ಕೇರವಾಡ ಕ್ರಾಸ್ ಹತ್ತಿರ ತಿರುವಿನ ರಾಜ್ಯ ಹೆದ್ದಾರಿಯ ಮೇಲೆ ಪೇಪರ್ ಲೋಡ್ ತುಂಬಿದ ತನ್ನ ಲಾರಿ ನಂ: ಟಿ.ಎನ್-52/ಡಿ-2894 ನೇದನ್ನು ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ಲಾರಿಯ ವೇಗವನ್ನು ನಿಯಂತ್ರಿಸಲಾಗದೇ ರಾಜ್ಯ ಹೆದ್ದಾರಿಯ ಪಕ್ಕದ ಕಚ್ಚಾ ರಸ್ತೆಯ ಮೇಲೆ ಚಲಾಯಿಸಿ, ಕಚ್ಚಾ ರಸ್ತೆಯ ಹತ್ತಿರವಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಲಾರಿಯನ್ನು ಪಲ್ಟಿ ಪಡಿಸಿ ಅಪಘಾತ ಪಡಿಸಿ, ಲಾರಿ ಹಾಗೂ ವಿದ್ಯುತ್ ಕಂಬವನ್ನು ಡ್ಯಾಮೇಜ್ ಪಡಿಸಿ, ಈ ಅಪಘಾತದಿಂದ ಆರೋಪಿ ಚಾಲಕನು ತನಗೂ ಸಹ ಎಡಗಣ್ಣಿನ ಕೆಳಗೆ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಆರ್. ಪಿ. ತಂಗಪ್ಪನ್, ಪ್ರಾಯ-36 ವರ್ಷ, ವೃತ್ತಿ-ಗಣೇಶ ಟ್ರಾನ್ಸಪೋರ್ಟಿನಲ್ಲಿ ಕೆಲಸ, ಸಾ|| ಹನುಮಾನ್ ಮಂದಿರದ ಹತ್ತಿರ, ಕೋಗಿಲಬನ್, ದಾಂಡೇಲಿ ರವರು ದಿನಾಂಕ: 16-07-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 15-07-2021 ರಂದು ಸಂಜೆ 07-00 ಗಂಟೆಯಿಂದ ದಿನಾಂಕ: 16-07-2021 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡದ ಮಳಗಿ ಗ್ರಾಮದಲ್ಲಿಯ ಸೇಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ಮಳಗಿ ಶಾಖೆಯ ಶೆಟರ್ಸಿನ ಕೊಂಡಿಯನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ಒಳ ಹೊಕ್ಕು ಬ್ಯಾಂಕಿನ ಒಳಗಿನ ಕಟ್ಟಿಗೆಯ ಬಾಗಿಲನ್ನು ಮುರಿದು 5,000/- ರೂಪಾಯಿ ಬೆಲೆಯ ಡಿ.ವಿ.ಆರ್ ಅನ್ನು ಹಾಗೂ ಬ್ಯಾಂಕಿನ ಕ್ಯಾಷ್ ಬಾಕ್ಸಿನಲ್ಲಿದ್ದ ನಗದು ಹಣ54,534/- ರೂಪಾಯಿಗಳನ್ನು ಕ್ಯಾಷ್ ಬಾಕ್ಸ್ ಸಹಿತ ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣ ತಂದೆ ಚಂದ್ರು ಪವಾರ, ಪ್ರಾಯ-29 ವರ್ಷ, ವೃತ್ತಿ-ಮಳಗಿ ಸೇಂಟ್ ಮಿಲಾಗ್ರೀಸ್ ಬ್ಯಾಂಕಿನ ಮ್ಯಾನೇಜರ್, ಸಾ|| ಇಂದೂರು, ತಾ: ಮುಂಡಗೋಡ ರವರು ದಿನಾಂಕ: 16-07-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 97/2021, ಕಲಂ: 323, 395, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ರಾಜಣ್ಣ ಹಾಗೂ ಯಾರೋ ಆರು ಜನ ಆರೋಪಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ಪಿರ್ಯಾದಿಯನ್ನು ಪೋನಿನಲ್ಲಿ ಸಂಪರ್ಕಿಸಿ ರಾಜಣ್ಣ ಅಂತಾ ಪರಿಚಯ ಮಾಡಿಕೊಂಡ ವ್ಯಕ್ತಿಯು ಪಿರ್ಯಾದಿಗೆ ಕಡಿಮೆ ದರದಲ್ಲಿ ಬಂಗಾರವನ್ನು ಕೊಡುವುದಾಗಿ ನಂಬಿಸಿ, ಮಳಗಿ ಡ್ಯಾಮ್ ನ ಹತ್ತಿರ ದಿನಾಂಕ: 16-07-2021 ರಂದು ಬೆಳಿಗ್ಗೆ 09-45 ಗಂಟೆಗೆ ಕರೆಯಿಸಿ ಆತನೊಂದಿಗೆ ಇನ್ನು ಆರು ಜನ ಆರೋಪಿತರು ಸೇರಿ ಪಿರ್ಯಾದಿಗೆ ಬಂಗಾರವನ್ನು ನೀಡದೆ ಪಿರ್ಯಾದಿಗೆ ಕೈಯಿಂದ ಹೊಡೆದು ದೂಡಿ ಹಾಕಿ, ಪಿರ್ಯಾದಿಯ ಬಳಿ ಇದ್ದ 22 ಲಕ್ಷದ 50 ಸಾವಿರ ರೂಪಾಯಿ ಹಣ ಇರುವ ಬ್ಯಾಗ್ ಅನ್ನು ಕಿತ್ತುಕೊಂಡು ಹೋಗಿದ್ದು, ನನಗೆ ಪರಿಚಯ ಮಾಡಿಕೊಂಡ ರಾಜಣ್ಣ ಎಂಬ ವ್ಯಕ್ತಿ ಕ್ರೀಮ್ ಬಣ್ಣದ ಉದ್ದ ಗೆರೆಯುಳ್ಳ ಶರ್ಟ್ ಹಾಗೂ ತಿಳಿ ನೀಲಿ ಬಣ್ಣದ ಲುಂಗಿ ಹಾಕಿಕೊಂಡಿದ್ದನು. ಆತನು ಸುಮಾರು 30-35 ವರ್ಷದ ಪ್ರಾಯದವನಿರುತ್ತಾನೆ, ಸದ್ರಿಯವರಿಗೆ ನೋಡಿದರೆ ನಾನು ಗುರುತಿಸುತ್ತೇನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಗೌಡ ತಂದೆ ಮಾದೇವಗೌಡ ಪಾಟೀಲ್, ಪ್ರಾಯ-38 ವರ್ಷ, ವೃತ್ತಿ-ಗುತ್ತಿಗೆದಾರ, ಸಾ|| ಗೆರಗಾಂವ, ತಾ: ಚಿಕ್ಕೋಡಿ, ಜಿ: ಬೆಳಗಾವಿ ರವರು ದಿನಾಂಕ: 16-07-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 16-07-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 23/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಜೈರಾಮ ತಂದೆ ಜಟ್ಟು ಗೌಡ, ಪ್ರಾಯ-39 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಾದಿಕೊಟ್ಟಿಗೆ, ಹಳದೀಪುರ, ತಾ: ಹೊನ್ನಾವರ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 16-07-2021 ರಂದು ಬೆಳಿಗ್ಗೆ ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಮಯ 06-30 ಗಂಟೆಯ ಸುಮಾರಿಗೆ ಒಮ್ಮೇಲೆ ಎದೆನೋವಿನಿಂದ ಕುಸಿದು ಬಿದ್ದವನಿಗೆ ಚಿಕಿತ್ಸೆಯ ಕುರಿತು ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಸದರಿಯವನಿಗೆ ಪರೀಕ್ಷಿಸಿದ ವೈದ್ಯರು ಸದರಿಯವನು ಮಾರ್ಗಮಧ್ಯದಲ್ಲಿಯೇ ಸಮಯ 08-30 ಗಂಟೆಯ ಪೂರ್ವದಲ್ಲಿ ಮೃತಪಟ್ಟ ಬಗ್ಗೆ ತಿಳಿಸಿದ್ದು. ಇದರ ಹೊರತು ನನ್ನ ತಮ್ಮನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಜಟ್ಟು ಗೌಡ, ಪ್ರಾಯ-62 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಶಂಕ್ರುಕೇರಿ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 16-07-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 17-07-2021 07:12 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080