ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-01-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 78(3) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಧರ ತಂದೆ ಮಾರುತಿ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಗಣಪತಿ ಗಲ್ಲಿ, ತಾ: ಅಂಕೋಲಾ. ನಮೂದಿತ ಆರೋಪಿತನು ದಿನಾಂಕ: 29-01-2021 ರಂದು 15-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಡಿಪೋ ಪಕ್ಕದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ತನ್ನ ಲಾಭಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ನಗದು ಹಣ 1,120/- ರೂಪಾಯಿ ಹಾಗೂ ಇತರೆ ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಇ. ಸಿ. ಸಂಪತ್, ಪಿ.ಎಸ್.ಐ, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 29-01-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಈಶ್ವರ ತಂದೆ ಸಣತಮ್ಮ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವಸ್ಥಾನಕೇರಿ, ಉಪ್ಪೋಣಿ, ತಾ: ಹೊನ್ನಾವರ (ಸ್ಕೂಟರ್ ನಂ: ಕೆ.ಎ-47/ಎಲ್-3251 ನೇದರ ಸವಾರ), 2]. ಮಹ್ಮದ್ ಶರೀಪ್ ತಂದೆ ಮಹ್ಮದ್ ಹನೀಫ್ ಕೊಚಾಪೋ, ಪ್ರಾಯ-24 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಪ್ಲಾಟಕೇರಿ, ಉಪ್ಪೋಣಿ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-05/ಎಲ್.ಎ-3145 ನೇದರ ಸವಾರ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 28-1-2021 ರಂದು 20-30 ಗಂಟೆಯ ಸಮಯಕ್ಕೆ ಹೊನ್ನಾವರ ಉಪ್ಪೋಣಿ ಬಸ್ ಸ್ಟಾಪ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-206 ರ ಮೇಲೆ ತನ್ನ ಸ್ಕೂಟರ್ ನಂ: ಕೆ.ಎ-47/ಎಲ್-3251 ನೇದನ್ನು ಯಾವುದೇ ಸೂಚನೆ ನೀಡದೇ ತನ್ನ ಸ್ಕೂಟರನ್ನು ಒಮ್ಮೆಲೇ ಅಜಾಗರೂಕತೆಯಿಂದ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-206 ರ ಮೇಲೆ ಬರುತ್ತಿದ್ದಾಗ ಮೋಟಾರ್ ಸೈಕಲ್ ನಂ: ಕೆ.ಎ-05/ಎಲ್.ಎ-3145 ನೇದರ ಸವಾರನಾದ ಆರೋಪಿ 2 ನೇಯವನು ಮೋಟಾರ್ ಸೈಕಲ್ ಹಿಂಬದಿಯ ಸವಾರನನ್ನು ಕೂರಿಸಿಕೊಂಡು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಸ್ಕೂಟರಿಗೆ ಡಿಕ್ಕಿ ಹೊಡೆದು ಅಪಘಾತವಾಗಿದ್ದು, ಸ್ಕೂಟರ್ ನಂ: ಕೆ.ಎ-47/ಎಲ್-3251 ನೇದರ ಸವಾರನಾದ ಆರೋಪಿ 1 ನೇಯವನಿಗೆ ಹಣೆಯ ಎಡಬದಿಗೆ, ಎಡಗೈ ಮಣಿಕಟ್ಟಿಗೆ, ಎಡಗಾಲಿನ ಮೊಣಕಾಲಿನ ಕೆಳಗೆ ಗಾಯನೋವು ಪಡಿಸಿಕೊಂಡಿದ್ದು ಹಾಗೂ ಮೋಟಾರ್ ಸೈಕಲ್ ನಂ: ಕೆ.ಎ-05/ಎಲ್.ಎ-3145 ನೇದರ ಸವಾರ ಹಿಂಬದಿ ಸವಾರನಾದ ಮಹ್ಮದ್ ಪಾರೀಶ್ ತಂದೆ ಫಕೀರಸಾಬ್ ಈತನಿಗೆ ಬಲಗಾಲು ಹಾಗೂ ಬಲ ಮೊಣಕೈ ಹತ್ತಿರ ಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರನಾದ ಆರೋಪಿ 2 ನೇಯವನ ಕುತ್ತಿಗೆಯ ಭಾಗಕ್ಕೆ ಹಾಗೂ ಕೈ ಕಾಲುಗಳಿಗೆ ಅಲ್ಲಲ್ಲಿ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ  ಮಹ್ಮದ್ ಹುಸೇನ್ ತಂದೆ ಅಬುಮಹ್ಮದ್ ಗೈಮಾ, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ಮುಸ್ಲಿಂಕೇರಿ, ತಾ: ಹೊನ್ನಾವರ ರವರು ದಿನಾಂಕ: 29-01-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಶೇಖರ ತಂದೆ ಜಟ್ಟಪ್ಪ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಗೊರಟೆ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 29-01-2021 ರಂದು 17-30 ಗಂಟೆಯ ಸಮಯಕ್ಕೆ ಗೊರಟೆ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 1,030/- ರೂಪಾಯಿಯೊಂದಿಗೆ ಆರೋಪಿತನು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಓಂಕಾರಪ್ಪ, ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 29-01-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 32, 34 ಕರ್ನಾಟಕ ಅಬಕಾರಿಕಾಯ್ದೆ--1965 ನೇದ್ದರ ವಿವರ...... ನಮೂದಿತ ಆರೋಪಿತ ಕನ್ನಯ್ಯ ತಂದೆ ಯಶವಂತ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ತಗ್ಗರಗೋಡ, ಜಾಲಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 29-01-2021 ರಂದು 10-15 ಗಂಟೆಯ ಸಮಯಕ್ಕೆ ಭಟ್ಕಳದ ಬದ್ರಿಯಾ ಕಾಲೋನಿಯ ಕನ್ನಡ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪಾಸ್ ಯಾ ಪರ್ಮಿಟ್ ಇಲ್ಲದೆ ಸುಮಾರು 5,100/- ರೂಪಾಯಿ ಕಿಮ್ಮತ್ತಿನ ಕರ್ನಾಟಕ ರಾಜ್ಯದ ಸರಾಯಿ ಪ್ಯಾಕೆಟ್ ಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುವಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 29-01-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ತಿಮ್ಮಪ್ಪ ನಾಯ್ಕ ಪ್ರಾಯ-39 ವರ್ಷ, ವೃತ್ತಿ-ಪಾನಶಾಪ್ ಅಂಗಡಿ, ಸಾ|| ಗುಳ್ಮೆ, ಬಿಲಾಲಖಂಡ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 29-01-2021 ರಂದು 11-00 ಗಂಟೆಯ ಸುಮಾರಿಗೆ ಭಟ್ಕಳದ ಶಹರದ ಗುಳ್ಮೆ ಬ್ರಿಡ್ಜ್ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,150/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 29-01-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ದಯಾನಂದ ತಂದೆ ಗೋವಿಂದ ಬಾಂಡೋಳಕರ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಿಮ್ನಿಮಳೆ, ಕರಂಬಾಳಿ, ತಾ: ಜೋಯಿಡಾ. ಪಿರ್ಯಾದಿಯವರ ಅಣ್ಣನಾದ ಈತನು ದಿನಾಂಕ: 24-01-2021 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಪಿರ್ಯಾದಿಯವರು ತಮ್ಮ ಮನೆಯಲ್ಲಿದ್ದಾಗ ಪ್ರತಿ ದಿವಸದಂತೆ ತಮ್ಮ ತೋಟದ ಕೆಲಸಕ್ಕೆ ತನ್ನ ಹತ್ತಿರ ಒಂದು ಕತ್ತಿ ಹಿಡಿದುಕೊಂಡು ಕೆಲಸಕ್ಕೆ ಹೋದವನು. ನಂತರ ಸುಮಾರು ಹೊತ್ತು ಆದರೂ ಮಧ್ಯಾಹ್ನದ ಊಟಕ್ಕೆ ಬರಲಿಲ್ಲ ಅಂತಾ ಪಿರ್ಯಾದಿಯವರು ತೋಟದ ಹತ್ತಿರ ಹೋಗಿ ತಮ್ಮ ಅಣ್ಣನಿಗೆ ಕೂಗಿ ಕರೆದಾಗ ಎಲ್ಲಿಯೂ ಕಾಣಲಿಲ್ಲ. ನಂತರ ತಮ್ಮ ಅಕ್ಕಪಕ್ಕದ ಮನೆಯವರಲ್ಲಿ ಮತ್ತು ತಮ್ಮ ಸಂಬಂಧಿಕರಲ್ಲಿ ವಿಚಾರಿಸಿದಾಗ ಅವರು ಸಹ ಯಾರು ತನ್ನ ಅಣ್ಣ ದಯಾನಂದ ಈತನಿಗೆ ಕಂಡಿಲ್ಲವಾಗಿ ತಿಳಿಸಿದರು. ತನ್ನ ಅಣ್ಣನಿಗೆ ಎಲ್ಲಾ ಕಡೆ ಹುಡುಕಾಡಿದರೂ ಸಹ ಈವರೆಗೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ತನ್ನ ಅಣ್ಣ ದಯಾನಂದ ಇವರು ದಿನಾಂಕ: 24-01-2021 ರಂದು ಬೆಳಿಗ್ಗೆ 10-30 ಗಂಟೆಗೆ ತಮ್ಮ ತೋಟದ ಕೆಲಸಕ್ಕೆ ಹೋದವರು, ಮರಳಿ ಮನೆಗೆ ಬರದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ. ಕಾರಣ ಕಾಣೆಯಾದ ತನ್ನ ಅಣ್ಣನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಮೋದ ತಂದೆ ಗೋವಿಂದ ಬಾಂಡೋಳಕರ ಪ್ರಾಯ-29 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಿಮ್ನಿಮಳೆ, ಕರಂಬಾಳಿ, ತಾ: ಜೋಯಿಡಾ ರವರು ದಿನಾಂಕ: 29-01-2021 ರಂದು 13-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 06/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ರಾಮಚಂದ್ರ ತಂದೆ ಪ್ರಭಾಕರ ಸುಂಟಣಕರ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ಕುಂಬಾರವಾಡ, ತಾ: ಜೋಯಿಡಾ. ನಮೂದಿತ ಆರೋಪಿತನು ದಿನಾಂಕ: 29-01-2021 ರಂದು 14-40 ಗಂಟೆಯ ಸುಮಾರಿಗೆ ತನ್ನ ಲಾಭಕ್ಕೋಸ್ಕರ ಜೋಯಿಡಾ ತಾಲೂಕಿನ ಕುಂಬಾರವಾಡ ಗ್ರಾಮದ ಜನತಾ ಕಾಲೋನಿಯ ಗೋಡಶೇತ ಗ್ರಾಮಕ್ಕೆ ಹೋಗುವ ರಸ್ತೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸಿಕೊಂಡು ಓ.ಸಿ. ಚೀಟಿ ಬರೆಯುತ್ತಿದ್ದಾಗ ನಗದು ಹಣ 2,850/- ರೂಪಾಯಿ ಮತ್ತು ಒಂದು ಬಾಲ್ ಪೆನ್ ಹಾಗೂ ಅಂಕೆ-ಸಂಖ್ಯೆ ಬರೆದ ಓ.ಸಿ ಚೀಟಿ ಸಮೇತ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಲಕ್ಷ್ಮಣ ಎಲ್. ಪೂಜಾರಿ, ಪಿ.ಎಸ್.ಐ,  ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 29-01-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ದೇವರಾಜ ತಂದೆ ಚಂದ್ರಶೇಖರ ಭಂಡಾರಿ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶೇಡಿಕೊಡ್ಲು, ಪೋ: ಬೊಮ್ಮನಳ್ಳಿ, ತಾ: ಶಿರಸಿ. ಪಿರ್ಯಾದಿಯವರ ತಮ್ಮನಾದ ಈತನು ದಿನಾಂಕ: 26-01-2021 ರಂದು ಬೆಳಿಗ್ಗೆ 09-00 ಗಂಟೆಗೆ ಶಿರಸಿ ತಾಲೂಕಿನ ಬೆಳಲೆಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಾಮೆಂಟ್ ನಲ್ಲಿ ಕ್ರಿಕೆಟ್ ಆಟ ಆಡಲು ಮನೆಯಿಂದ ಹೋದವನು, ಈವರೆಗೂ ವಾಪಸ್ ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ತಮ್ಮನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದತ್ತಗುರು ತಂದೆ ಚಂದ್ರಶೇಖರ ಭಂಡಾರಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶೇಡಿಕೊಡ್ಲು, ಪೋ: ಬೊಮ್ಮನಳ್ಳಿ, ತಾ: ಶಿರಸಿ ರವರು ದಿನಾಂಕ: 29-01-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: 8, 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೊಹಮ್ಮದ್ ಮೊಸೀನ್ ತಂದೆ ನಜೀರ್ ಅಹಮ್ಮದ್ ಶೇಖ್, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೂರ್ ಮಸೀದಿಯ ಹತ್ತಿರ, ಆನಂದ ಕಾಲೋನಿ, ಕಸ್ತೂರಬಾ ನಗರ, ತಾ: ಶಿರಸಿ, 2]. ಮಂಜುನಾಥ @ ಮಿಂಟಾ ತಂದೆ ಮಾರುತಿ ಪೂಜಾರಿ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಿದ್ಯಾನಗರ, ಮರಾಠಿಕೊಪ್ಪ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 29-01-2021 ರಂದು 12-05 ಗಂಟೆಯ ಸಮಯಕ್ಕೆ ಶಿರಸಿಯ ಕಸ್ತೂರಾಬಾ ನಗರದ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಹತ್ತಿರದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ತಮ್ಮ ವಶದಲ್ಲಿಟ್ಟುಕೊಂಡಿರುವಾಗ ಪಂಚರು ಮತ್ತು ಪತ್ರಾಂಕಿತ ಅಧಿಕಾರಿಗಳ ಸಮಕ್ಷಮ ನಡೆಸಿದ ದಾಳಿಯ ಕಾಲಕ್ಕೆ 1). 266 ಗ್ರಾಂ ತೂಕದ ಅ||ಕಿ|| 10,000/- ರೂಪಾಯಿ ಮೌಲ್ಯದ ಗಾಂಜಾ ಮಾದಕ ವಸ್ತು, 2). ಪುಸ್ತಕದ ಹಾಳೆಗಳ ತುಂಡುಗಳು-11, ಅ||ಕಿ|| 00.00/- ರೂಪಾಯಿ, 3). ನಗದು ಹಣ 1,000/- ರೂಪಾಯಿ, 4). ನೋಕಿಯಾ ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 200/- ರೂಪಾಯಿ, 5). ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್-6 ಮೊಬೈಲ್ ಪೋನ್-01, ಅ||ಕಿ|| 700/- ರೂಪಾಯಿ, 6). ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ- 31/ಇ.ಸಿ-5920, ಅ||ಕಿ|| 25,000/- ರೂಪಾಯಿ ಮೌಲ್ಯದ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 29-01-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ಲೋರೇಸ್ ಸೋಜ್, ಪ್ರಾಯ-39 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮಂಗಳವಾಡ, ತಾ: ಹಳಿಯಾಳ. ನಮೂದಿತ ಆರೋಪಿತನು ದಿನಾಂಕ: 29-01-2021 ರಂದು 16-05 ಗಂಟೆಗೆ ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದ ಚರ್ಚ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಂತು, ತನ್ನ ಅಕ್ರಮ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಕರೆದು, ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ, 01/- ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಆಸೆ ಆಮಿಷ ತೋರಿಸಿ ಕೂಗಿ ಕರೆದು, ಬಂದಂತಹ ಸಾರ್ವಜನಿಕರಿಂದ ಹಣ ಪಡೆದು ನಂಬರಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಾ, ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲಕ್ಕೆ ಓ.ಸಿ ಮಟಕಾ ಜೂಗಾರಾಟದ ನಗದು ಹಣ 1,050/- ರೂಪಾಯಿ ಮತ್ತು ಸಾಮಗ್ರಿಗಳಾದ 1). ಓ.ಸಿ ನಂಬರ್ ಬರೆದ ಚೀಟಿ-1, 2). ಬಾಲ್ ಪೆನ್-01, 3). ರಟ್ಟು-01 ಇವುಗಳೊಂದಿಗೆ ಆರೋಪಿತ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮೋತಿಲಾಲ್ ಪವಾರ್, ಪೊಲೀಸ್ ವೃತ್ತ ನಿರೀಕ್ಷಕರು, ಹಳಿಯಾಳ ವೃತ್ತ, ಹಳಿಯಾಳ ರವರು ದಿನಾಂಕ: 29-01-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-01-2021

at 00:00 hrs to 24:00 hrs

 

No Cases Reported....

 

======||||||||======

 

 

ಇತ್ತೀಚಿನ ನವೀಕರಣ​ : 30-01-2021 12:21 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080