ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-04-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಮೋದ ತಂದೆ ಗೋಪಾಲಕೃಷ್ಣಾ ಗುನಗಾ, ಪ್ರಾಯ-30 ವರ್ಷ, ವೃತ್ತಿ-ಹೊಟೇಲ್ ವ್ಯವಹಾರ, ಸಾ|| ತೆಂಕಣಕೇರಿ, ತಾ: ಅಂಕೋಲಾ (ಸ್ಕೂಟಿ ನಂ: ಕೆ.ಎ-30/ಡಬ್ಲ್ಯೂ-3368 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 30-03-2021 ರಂದು ಮಧ್ಯಾಹ್ನ ಸುಮಾರು 01-30 ಗಂಟೆಗೆ ತನ್ನ ಹೊಸ ಸ್ಕೂಟಿ ನಂ: ಕೆ.ಎ-30/ಡಬ್ಲ್ಯೂ-3368 ನೇದನ್ನು ಅಗಸೂರು ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಂಕೋಲಾ ತಾಲೂಕಿನ ನವಗದ್ದೆ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ತನ್ನ ಸ್ಕೂಟಿಯ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಅಪಘಾತ ಪಡಿಸಿಕೊಂಡು, ತನಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರದೀಪ ತಂದೆ ಗೋಪಾಲಕೃಷ್ಣಾ ಗುನಗಾ, ಪ್ರಾಯ-30 ವರ್ಷ, ವೃತ್ತಿ-ಹೊಟೇಲ್ ವ್ಯವಹಾರ, ಸಾ|| ತೆಂಕಣಕೇರಿ, ತಾ: ಅಂಕೋಲಾ ರವರು ದಿನಾಂಕ: 01-04-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 95/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಬಸವರಾಜ ಬಾಳೋಬಾಳ, ಪ್ರಾಯ-29 ವರ್ಷ, ವೃತ್ತಿ-ಇಂಜೀನಿಯರ್, ಸಾ|| ಸಿಗೇಹಳ್ಳಿ, ಗೋಕಾಕ, ಹಾಲಿ ಸಾ|| ಗೇರುಸೊಪ್ಪ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-63/ಜೆ-0845 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 01-04-2021 ರಂದು 19-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರದ ಗೇರುಸೊಪ್ಪ ಮೊಗೆಹಳ್ಳ ಬ್ರಿಡ್ಜ್ ಮೇಲೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-63/ಜೆ-0845 ನೇದರ ಮೇಲೆ ಗಾಯಾಳು ಸಂಗಪ್ಪ ತಂದೆ ಬಸಪ್ಪ, ಈತನಿಗೆ ಕೂರಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬ್ರಿಡ್ಜ್ ಮೇಲೆ ರಸ್ತೆಯ ಬದಿಯಲ್ಲಿ  ರ್ಯಾದಿಯೊಂದಿಗೆ ಮಾತನಾಡುತ್ತಾ ನಿಂತಿದ್ದ ಗಾಯಾಳು ಭರತ ತಂದೆ ಚಂದ್ರಪ್ಪ ಬಿ, ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆತನ ಬಲಗಾಲಿನ ಮೊಣಗಂಟಿಗೆ ಗಾಯ ಪಡಿಸಿ, ಸೊಂಟಕ್ಕೆ ಪೆಟ್ಟನ್ನುಂಟು ಪಡಿಸಿದ್ದಲ್ಲದೇ, ಆರೋಪಿತನು ತಾನೂ ಸಹ ತನ್ನ ಮೋಟಾರ್ ಸೈಕಲ್ ಸಮೇತ ಬ್ರಿಡ್ಜ್ಡ್ಜ ಕೆಳಗೆ ಬಿದ್ದು ತನ್ನ ಮೋಟಾರ್ ಸೈಕಲ್ ಹಿಂಬದಿ ಕೂರಿಸಿಕೊಂಡು ಬಂದಿದ್ದ ಸಹ ಸವಾರನಾದ ಸಂಗಪ್ಪ ತಂದೆ ಬಸಪ್ಪ ಈತನ ತಲೆಗೆ, ಮುಖಕ್ಕೆ, ಎಡಗೈಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿದ್ದಲ್ಲದೇ, ತನಗೂ ಸಹ ತಲೆಗೆ, ಬಲಗಾಲಿನ ಮೊಣಗಂಟಿಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಮಂಜಯ್ಯ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ವ್ಯಾಪಾರ, ಸಾ|| ಗೇರುಸೊಪ್ಪ, ನಗರ ಬಸ್ತಿಕೇರಿ, ತಾ: ಹೊನ್ನಾವರ ರವರು ದಿನಾಂಕ: 01-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ದೇವೇಂದ್ರ ಹಿರಿಯಾ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಂಡಳ್ಳಿ, ನೀರ್ಗದ್ದೆ, ತಾ: ಭಟ್ಕಳ, 2]. ಅಬ್ದುಲ್ ವಹಾಬ್ ಅಬ್ದುಲ್ ಖಾದೀರ್, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರಾಲಿ, ತಾ: ಭಟ್ಕಳ, 3]. ನಾಗೇಶ ಮಾದೇವ ಆಚಾರಿ, ಪ್ರಾಯ-35 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಪುರವರ್ಗ, ತಾ: ಭಟ್ಕಳ, 4]. ಆನಂದ ಮಂಜಯ್ಯಾ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಿ.ಟಿ ರೋಡ್, ಆಸರಕೇರಿ, ತಾ: ಭಟ್ಕಳ, 5]. ಚಂದ್ರಕಾಂತ ಈರಪ್ಪ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಬಂದರ್ ರೋಡ್, 2 ನೇ ಕ್ರಾಸ್, ತಾ: ಭಟ್ಕಳ, 6]. ಮಂಝುನಾಥ ನಾರಾಯಣ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪೈಕಿ ಮನೆ, ಆಸರಕೇರಿ, ತಾ: ಭಟ್ಕಳ, ಈ ನಮೂದಿತ ಆರೋಪಿತರು ದಿನಾಂಕ: 01-04-2021 ರಂದು 19-45 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಹಳೇ ಬಸ್ ನಿಲ್ದಾಣದ ಹತ್ತಿರ ಇರುವ ಮೀನು ಮಾರುಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣದ ಪಂಥ ಕಟ್ಟಿ ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ನಗದು ಹಣ 2,975/- ರೂಪಾಯಿ ಮತ್ತು ಇಸ್ಪೀಟ್ ಜೂಗಾರಾಟದ ಸಲಕರಣೆಗಳೊಂದಿಗೆ ಆರೋಪಿತರು ದಾಳಿಯ ಕಾಲಕ್ಕೆ ಪಿರ್ಯಾದಿಯವರಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತ ಸುಮಾ ಬಿ, ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 01-04-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 379 ಐಪಿಸಿ ಮತ್ತು ಕಲಂ: 86, 87 ಕರ್ನಾಟಕ ಅರಣ್ಯ ಕಾಯ್ದೆ-1963 ಹಾಗೂ ಕಲಂ: 129, 177 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಮೋಹನ ಮೊಗೇರ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪುಟ್ಟನಮನೆ, ಮರಾಠಿಕೊಪ್ಪ, ತಾ: ಶಿರಸಿ. ನಮೂದಿತ ಆರೋಪಿತನು ಕಳೆದ 8 ದಿನಗಳ ಹಿಂದೆ ಪುಟ್ಟನಮನೆ ಕಾಡಿನಲ್ಲಿ ಗಂಧದ ಮರದ ಬುಡವನ್ನು ಕಳ್ಳತನದಿಂದ ಕಡಿದು ತುಂಡುಗಳನ್ನಾಗಿ ಮಾಡಿ, ತುಂಡುಗಳನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡಲು ತನ್ನ ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರ ಸೈಕಲ್ ನಂ: ಕೆ.ಎ-31/ಜೆ-2960 ನೇದರ ಮೇಲೆ ಸಾಗಾಟ ಮಾಡುತ್ತಿರುವಾಗ ದಿನಾಂಕ: 01-04-2021 ರಂದು 10-00 ಗಂಟೆಯ ಸುಮಾರಿಗೆ ಮರಾಠಿಕೊಪ್ಪದ ಮೂಲೆಮನೆ ಕ್ರಾಸ್ ಹತ್ತಿರ ತನ್ನ ತಾಬಾ 1).  6 ಕೆ.ಜಿ 500 ಗ್ರಾಂ ತೂಕದ ಗಂಧದ ತುಂಡುಗಳು, ಅ||ಕಿ|| 65,000/- ರೂಪಾಯಿ, 2). ಗರಗಸ-01, ಅ||ಕಿ|| 00.00/- ರೂಪಾಯಿ, 3). ಕಬ್ಬಿಣದ ಕೊಡಲಿ-01, ಅ||ಕಿ|| 00.00/- ರೂಪಾಯಿ, 4). ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರ ಸೈಕಲ್ ನಂ: ಕೆ.ಎ-31/ಜೆ-2960, ಅ||ಕಿ|| 8,000/- ರೂಪಾಯಿಯ ಮೌಲ್ಯದ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ, ಪಿ.ಎಸ್.ಐ (ಕಾ&ಸು), ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 01-04-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಸಮಖಾನ್ ತಂದೆ ಸಮ್ಮುಖಾನ್, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ಪಲ್ಲನಖೆಡಾ, ತಾ: ಲಕ್ಷ್ಮಣಗರ, ಜಿ: ಅಲವಾರ, ರಾಜಸ್ಥಾನ ರಾಜ್ಯ (ಲಾರಿ ನಂ: ಆರ್.ಜೆ–32/ಜಿ.ಸಿ-2750 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 31-03-2021 ರಂದು ಸಂಜೆ 05-00 ಗಂಟೆಯ ಸುಮಾರಿಗೆ ತಾನು ಚಾಲನೆ ಮಾಡುತ್ತಿದ್ದ ಲಾರಿ ನಂ: ಆರ್.ಜೆ–32/ಜಿ.ಸಿ-2750 ನೇದನ್ನು ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಕರ್ಕಾ ಚೆಕಪೋಸ್ಟ್ ಕ್ರಾಸಿನಲ್ಲಿ ತನ್ನ ಲಾರಿಯನ್ನು ವೇಗವಾಗಿ ತಿರುಗಿಸಿದ ಪರಿಣಾಮ ಲಾರಿಯಲ್ಲಿ ತುಂಬಿದ್ದ ಬಂಡಲಶೀಟ್ ಪೇಪರ್ ಅನ್ನು ಕೆಡವಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಾಬೀದ್ ತಂದೆ ಹಸುಖಾನ್, ಪ್ರಾಯ-20 ವರ್ಷ, ವೃತ್ತಿ-ಚಾಲಕ, ಸಾ|| ಅಲಿಪುರ ತಿಗರ, ಮೇವಾತ, ಹರಿಯಾಣ ರಾಜ್ಯ ರವರು ದಿನಾಂಕ: 01-04-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಂಗಾಧರ ತಂದೆ ಈರಯ್ಯ ಹಿರೇಮಠ, ಪ್ರಾಯ-27 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ತೇರಗಾಂವ್, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ–05/ಕೆ.ಎಫ್-8444 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 01-04-2021 ರಂದು ಮಧ್ಯಾಹ್ನ 03-30 ಗಂಟೆಗೆ ಹಳಿಯಾಳ ಬದಿಯಿಂದ ಅಳ್ನಾವರ ಬದಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ–05/ಕೆ.ಎಫ್-8444 ನೇದನ್ನು ಚಲಾಯಿಸಿಕೊಂಡು ಹೋಗುತ್ತಾ ತನ್ ಮುಂದಿನಿಂದ ಹೋಗುತ್ತಿದ್ದ ಯಾವುದೋ ಒಂದು ವಾಹನವನ್ನು ಓವರಟೇಕ್ ಮಾಡಿ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ತನ್ನ ಎದುರಿನಿಂದ ಅಂದರೆ ಅಳ್ನಾವರ ಬದಿಯಿಂದ ಹಳಿಯಾಳ ಬದಿಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-25/ಇ.ಟಿ-5868 ನೇದಕ್ಕೆ ಹಳಿಯಾಳ ತಾಲೂಕಿನ ತೇರಗಾಂವ್ ಗ್ರಾಮದ ಹತ್ತಿರ ಡಾಂಬರ್ ರಸ್ತೆಯ ಮೇಲೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಚಾಲಕನಿಗೆ ಗಂಭೀರ ಸ್ವರೂಪದ ಹಾಗೂ ಇನ್ನುಳಿದವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಸಹ ಗಾಯನೋವು ಪಡಿಸಿಕೊಂಡು ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಹನ್ಮಂತ ಮೂಲಿಮನಿ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಳ್ಳಿಗೇರಿ ಗ್ರಾಮ, ಧಾರವಾಡ ರವರು ದಿನಾಂಕ: 01-04-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-04-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗೋಪಾಲ ತಂದೆ ತಂದೆ ಯುಗಾದಿ ಮುಕ್ರಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲಕಟ್ಟೆ, ಹಳದಿಪುರ, ತಾ: ಹೊನ್ನಾವರ. ನಮೂದಿತ ಮೃತನು ದಿನಾಂಕ: 30-03-2021 ರಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ರಸ್ತೆ ಕೆಲಸ ಮುಗಿಸಿಕೊಂಡು ಅಂಕೋಲಾ ತಾಲೂಕಿನ ಬಿಳಿಸಿರೆ, ಸಗಡಗೇರಿ ರಸ್ತೆಯ ಪಕ್ಕದಲ್ಲಿದ್ದ ಹಳೆಯ ಕಲ್ಲು ಕ್ವಾರಿಯ ಹತ್ತಿರ ಇದ್ದ ನೀರಿನಲ್ಲಿ ಕೈಕಾಲು ತೊಳೆಯಲು ಹೋದವನು ಕುಸಿದು ಬಿದ್ದು ಅಥವಾ ಇನ್ನಾವುದೋ ಕಾರಣದಿಂದ ನೀರಿನಲ್ಲಿ ಬಿದ್ದವನಿಗೆ ಉಪಚಾರದ ಕುರಿತು ಮಾದನಗೇರಿಯ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಕುಮಟಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ಆತನಿಗೆ ಪರೀಕ್ಷಿಸಿದ ವೈದ್ಯರು ಸಾಯಂಕಾಲ 07-00 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತನ ಶವವು ಕುಮಟಾದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸತ್ಯನಾರಾಯಣ ತಂದೆ ಯುಗಾದಿ ಮುಕ್ರಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಲಕಟ್ಟೆ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 01-04-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 02-04-2021 04:13 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080