ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-04-2022

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2022, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 31-03-2022 ರಂದು 19-00 ಗಂಟೆಯಿಂದ ದಿನಾಂಕ: 01-04-2022 ರಂದು 07-00 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ತಾಲೂಕಿನ ಅಚವೆ ಗ್ರಾಮದ ಮಾಬಗಿಯಲ್ಲಿರುವ ಪಿರ್ಯಾದಿಯವರ ಮನೆಯ ಮುಂದಿನ ಬಾಗಿಲಿನ ಲಾಕ್ ಹುಕ್ ಅನ್ನು ಯಾವುದೋ ಗಟ್ಟಿ ವಸ್ತುವಿನಿಂದ ಮೀಟಿ ಮುರಿದು, ಒಳ ಹೊಕ್ಕಿ, ಮನೆಯ ಹಾಲ್ ನಲ್ಲಿಟ್ಟಿದ್ದ ಸುಮಾರು 1,25,000/- ರೂಪಾಯಿ ಬೆಲೆಯ ಯೂನಿವರ್ಸಲ್ ಕಂಪನಿಯ 04 ಬ್ಯಾಟರಿಗಳನ್ನು ಮತ್ತು ಮೈಕ್ರೋಟೆಕ್ ಕಂಪನಿಯ ಒಂದು ಇನ್ವÀರ್ಟರ್ ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವರಾಮ ತಂದೆ ಗಣಪತಿ ನಾಯಕ, ಪ್ರಾಯ-53 ವರ್ಷ, ವೃತ್ತಿ-ಬಿಸಿನೆಸ್, ಸಾ|| ಮನೆ ನಂ: 211, ಮಾಬಗಿ, ಅಚವೆ ಗ್ರಾಮ, ತಾ: ಅಂಕೋಲಾ ರವರು ದಿನಾಂಕ: 01-04-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 127/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉಮಾಶಂಕರ ಟಿ. ಪಿ. ತಂದೆ ಪ್ರಸನ್ನಕುಮಾರ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ತಳುಲತೋರೆ, ತಾ: ಅರಸಿಕೇರೆ, ಜಿ: ಹಾಸನ (ಕಂಟೇನರ್ ಲಾರಿ ನಂ: ಕೆ.ಎ-52/ಬಿ-3450 ನೇದರ ಚಾಲಕ). ಈತನು ದಿನಾಂಕ: 31-03-2022 ರಂದು 17-30 ಗಂಟೆಗೆ  ತಾನು ಚಲಾಯಿಸುತ್ತಿದ್ದ ಕಂಟೇನರ್ ಲಾರಿ ನಂ: ಕೆ.ಎ-52/ ಬಿ-3450 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಜೋಗ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಸೂಳೆಮುರ್ಕಿ ಕ್ರಾಸ್ ಹತ್ತಿರ ತನ್ನ ಕಂಟೇನರ್ ಲಾರಿಯನ್ನು ಒಮ್ಮೇಲೆ ರಸ್ತೆಯಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ಕಂಟೇನರ್ ಲಾರಿಯಲ್ಲಿದ್ದ ಜ್ಯೂಸ್ ಲೋಡ್ ಅನ್ನು ರಸ್ತೆಯ ಮೇಲೆ ಬೀಳಿಸಿ ಕಂಟೇನರ್ ಲಾರಿಯನ್ನು ಜಖಂಗೊಳಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಎಡಗಾಲಿಗೆ ಹಾಗೂ ಬೆನ್ನಿಗೆ ಪೆಟ್ಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದಾದಾಪೀರ್ ಬಾಬು ತಂದೆ ಭಾಷಾ, ಪ್ರಾಯ-56 ವರ್ಷ, ವೃತ್ತಿ-ಚಾಲಕ, ಸಾ|| ಗೇರುಸೊಪ್ಪ ಸರ್ಕಲ್, ಗೇರುಸೊಪ್ಪ, ತಾ: ಹೊನ್ನಾವರ ರವರು ದಿನಾಂಕ: 01-04-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2022, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಿದ್ಧಾರ್ಥ ತಂದೆ ಬಸವರಾಜ್ ಪಾಗದ, ಪ್ರಾಯ-22 ವರ್ಷ, ವೃತ್ತಿ-ಚಾಲಕ, ಸಾ|| ಇಸಳೂರ, ತಾ: ಶಿರಸಿ (ಇನೋವಾ ಕ್ರಿಸ್ಟ್ಟಾ ಕಾರ್ ನಂ: ಕೆ.ಎ-31/ಎನ್-5556 ನೇದರ ಚಾಲಕ). ಈತನು ದಿನಾಂಕ: 31-03-2022 ರಂದು ತನ್ನ ಇನೋವಾ ಕ್ರಿಸ್ಟಾ ಕಾರ್ ನಂ: ಕೆ.ಎ-31/ಎನ್-5556 ನೇದನ್ನು ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿರಸಿ-ಹುಬ್ಬಳ್ಳಿ ರಸ್ತೆಯ ಇಸಳೂರು ಹತ್ತಿರ ಬೆಳಗಿನ ಜಾವ 01-45 ಗಂಟೆಗೆ ತಿರುವಿನ ರಸ್ತೆಯಲ್ಲಿ ಕಾರಿನ ವೇಗ ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ, ಬದಿಯಲ್ಲಿದ್ದ ಹೆಸ್ಕಾಂ ಇಲಾಖೆಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಕಾರನ್ನು ಭಾಗಶಃ ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅನೀಲ್ ಕುಮಾರ ತಂದೆ ಸಿದ್ದಪ್ಪ ಮುಷ್ಠಗಿ, ಪ್ರಾಯ-62 ವರ್ಷ, ವೃತ್ತಿ-ವ್ಯವಹಾರ, ಸಾ|| ದೇವನಿಲಯ, ಪೋ: ಚಿಪಗಿ, ತಾ: ಶಿರಸಿ ರವರು ದಿನಾಂಕ: 01-04-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2022, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಮೀರ್ ಅಹ್ಮದ್ ತಂದೆ ನಿಸಾರ್ ಅಹ್ಮದ್ ಬಡಿಗೇರ, ಪ್ರಾಯ-22 ವರ್ಷ, ಸಾ|| ಆನಂದನಗರ, ತಾ: ಮುಂಡಗೋಡ (ಮೋಟಾರ್ ಸೈಕಲ್ ನಂ: ಕೆ.ಎ-05/ಬಿ.ಜೆ-0028 ನೇದರ ಸವಾರ). ಈತನು ದಿನಾಂಕ: 01-04-2022 ರಂದು ಸಂಜೆ 06-00 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-05/ಬಿ.ಜೆ-0028 ನೇದನ್ನು ಮುಂಡಗೋಡ ಕಡೆಯಿಂದ ಕ್ಯಾಂಪ್ ನಂ: 01 ರ ಕಡೆಗೆ ತಟ್ಟಿಹಳ್ಳಿ ಕ್ರಾಸ್ ಹತ್ತಿರ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಸವಾರಿ ಮಾಡಿಕೊಂಡು ಹೋಗಿ ತನ್ನ ಮುಂದಿನಿಂದ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-29/ಆರ್-7115 ನೇದ್ಕಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಿಂದ ಮೋಟಾರ್ ಸೈಕಲ್ ನಂ: ಕೆ.ಎ-29/ಆರ್-7115 ನೇದರ ಚಾಲಕನಿಗೆ ತಲೆಗೆ, ಹಣೆಯ ಮೇಲೆ ಹಾಗೂ ಮೂಗಿಗೆ ಮತ್ತು ಎಡಗಾಲಿನ ತೊಡೆಯ ಹತ್ತಿರ ಭಾರೀ ಗಾಯವಾಗಿದ್ದು, ಎಡಗಾಲಿನ ಹೆಬ್ಬೆರಳಿಗೆ ಸಾದಾ ಗಾಯ ಪಡಿಸಿದ್ದು ಹಾಗೂ ಸ್ವಯಂಕೃತ ಅಪಘಾತದಿಂದ ತನಗೂ ಕೂಡ ಬಲಗಾಲಿನ ಹಿಮ್ಮಡಿಯ ಹತ್ತಿರ, ಸೊಂಟದ ಹತ್ತಿರ ಹಾಗೂ ಬಲಗೈ ಮೊಣಕ್ಕೆ ಹತ್ತಿರ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಯಶವಂತ ತಂದೆ ದನಸಿಂಗ್ ರಾಠೋಡ, ಪ್ರಾಯ-38 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ತಮ್ಯಾನಕೊಪ್ಪ, ತಾ: ಮುಂಡಗೋಡ ರವರು ದಿನಾಂಕ: 01-04-2022 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಜಿಲಾನಿ ತಂದೆ ಮಹಮ್ಮದ್ ಸಾಬ್ ಸಾಬಾಳ, ಪ್ರಾಯ-34 ವರ್ಷ, ವೃತ್ತಿ-ವ್ಯಾಪಾರ, ಸಾ|| ಮುಲ್ಲಾ ಓಣಿ, ತಾ: ಮುಂಡಗೋಡ, 2]. ಜಮೀರ್ ತಂದೆ ನಜೀರ್ ಅಹಮ್ಮದ್ ದರ್ಗಾವಾಲೆ, ಸಾ|| ನೂರಾನಿ ಗಲ್ಲಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರರಲ್ಲಿ ಆರೋಪಿ 1 ನೇಯವನು ದಿನಾಂಕ: 01-04-2022 ರಂದು 20-00 ಗಂಟೆಗೆ ಮುಂಡಗೋಡ ಪಟ್ಟಣದ ಆನಂದ ನಗರದ ತಾಲೂಕಾ ಕ್ರೀಡಾಂಗಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ತನ್ನ ಮೊಬೈಲಿನಲ್ಲಿ ಇಂದು ನಡೆಯುತ್ತಿರುವ ಐ.ಪಿ.ಎಲ್ ಪಂದ್ಯವಾದ ಕಿಂಗ್ಸ್ ಇಲೆವೆನ್ ಪಂಜಾಬ್ ಗೆದ್ದಲ್ಲಿ 1,200/- ರೂಪಾಯಿ  ಹಾಗೂ ಕೋಲ್ಕತ್ತ್ತಾ ನ್ಶೆಟ್ಸ್ ರೈಡರ್ಸ್ ಗೆದ್ದಲ್ಲಿ 1,400/-ರೂಪಾಯಿ ಅಂತಾ ಐ.ಪಿ.ಎಲ್ ಪಂದ್ಯಾವಳಿಗಳ ಮೇಲೆ ಬೆಟ್ಟಿಂಗ್ ಹಣವನ್ನು ಕೊಡುವ ಕರಾರಿನ ಮೇಲೆ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟ ಆಗುವಂತೆ ಮೊಬೈಲಿನಲ್ಲಿ ಮಾತನಾಡುತ್ತಾ ಜನರಿಂದ ಬೆಟ್ಟಿಂಗನ್ನು ಪಡೆದುಕೊಂಡು ನೋಟ್ ಬುಕ್ ನಲ್ಲಿ ಬರೆದುಕೊಂಡು ಸಂಗ್ರಹವಾದ ಹಣ ಆರೋಪಿ 2 ನೇಯವನಿಗೆ ನೀಡಿ ಆತನಿಂದ ಕಮೀಷನ್ ಪಡೆದುಕೊಳ್ಳುತ್ತಿದ್ದು, ದಾಳಿಯ ಕಾಲಕ್ಕೆ ಮೊಬೈಲ್ ಹಾಗೂ ನೋಟ್ ಬುಕ್ ನೊಂದಿಗೆ ಹಾಗೂ ನಗದು ಹಣ 4,400/- ರೂಪಾಯಿಯೊಂದಿಗೆ ಸಿಕ್ಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಸಿಮಾನಿ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 01-04-2022 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಜು ಮಾಸ್ತ್ಯಾ ಮಡಿವಾಳ, ಪ್ರಾಯ-39 ವರ್ಷ, ಸಾ|| ಆನೆಸಾಲು, ಬಿಳಗಿ, ತಾ: ಸಿದ್ದಾಪುರ, 2]. ರವಿ ಮಾರ್ಯಾ ನಾಯ್ಕ, ಪ್ರಾಯ-38 ವರ್ಷ, ಸಾ|| ಹೊಸಮಂಜು, ಪೋ: ಬಿಳಗಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 01-04-2022 ರಂದು 19-00 ಗಂಟೆಗೆ ಸಿದ್ದಾಪುರ ತಾಲೂಕಿನ ಬಿಳಗಿಯ ಅನೆಸಾಲಿನಲ್ಲಿರುವ ರಾಜ್ ಫಾಸ್ಟಪುಡ್ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಠಾಣಾ ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 08 ಟೆಟ್ರಾ ಪ್ಯಾಕೆಟ್ ಗಳು, 2). Original Choice Deluxe Whisky 90 ML ಅಂತಾ ಬರೆದ ಕಾಲಿ 4 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು ಪ್ಲಾಸ್ಟಿಕ್ ನ 5 ಗ್ಲಾಸುಗಳು ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 01-04-2022 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-04-2022

at 00:00 hrs to 24:00 hrs

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಸುಮಾರು 65 ರಿಂದ 70 ವರ್ಷ ಪ್ರಾಯದ ಯಾರೋ ಅಪರಿಚಿತ ಹೆಂಗಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 27-03-2022 ರಂದು ಸಾಯಂಕಾಲ 05-00 ಗಂಟೆಯ ಸುಮಾರಿಗೆ ಬೈಲಪಾರ ಕಡೆಯಿಂದ ಕಾಳಿ ನದಿಯಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಸೀರೆ ಮತ್ತು ಕೆಂಪು ಬಣ್ಣದ ಬ್ಲೌಸ್ ಧರಿಸಿರುವ ನಮೂದಿತ ಮೃತ ಹೆಂಗಸು ಕಾಳಿ ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತಳ ವಾರಸುದಾರರ ಪತ್ತೆಯ ಸಲುವಾಗಿ ಮೃತದೇಹವನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುವ ಕೋಲ್ಡ್ ಸ್ಟೋರೇಜ್ ನÀಲ್ಲಿ ಇಟ್ಟಿದ್ದು, ಇಲ್ಲಿಯವರೆಗೂ ಮೃತಳ ಹೆಸರು, ವಿಳಾಸ ಮತ್ತು ಮೃತಳ ವಾರಸುದಾರರು ಯಾರು ಪತ್ತೆಯಾಗದೇ ಇರುವುದರಿಂದ ಹಾಗೂ ಮೃತಳ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮುಬಾರಕ್ ತಂದೆ ಅಬ್ದುಲ್ ಹಜೀಜ್ ಹಾನಗಲ್, ಪ್ರಾಯ-30 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| ಡಿ.ಎಸ್.ಪಿ ಆಫೀಸ್ ಹತ್ತಿರ, ಹಳೇ ದಾಂಡೇಲಿ, ತಾ: ದಾಂಡೇಲಿ ರವರು ದಿನಾಂಕ: 01-04-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 12-04-2022 04:37 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080