ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-08-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 201/2021, ಕಲಂ: ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಗು ಕುಮಾರ:  ಕಾರ್ತಿಕ ತಂದೆ ರಮೇಶ ನಾಯ್ಕ, ಪ್ರಾಯ-2 ವರ್ಷ, ಸಾ|| ಹುಡಗೋಡ, ಪೋ: ಮುಟ್ಟಾ, ತಾ: ಹೊನ್ನಾವರ. ಈತನು ಪಿರ್ಯಾದಿಯ ಮಗನಾಗಿದ್ದು, ದಿನಾಂಕ: 01-08-2021 ರಂದು ಮಧ್ಯಾಹ್ನ 03-00 ಗಂಟೆಗೆ ಪಿರ್ಯಾದಿಯು ಹೊನ್ನಾವರ ತಾಲೂಕಿನ ಹುಡಗೋಡ ಗ್ರಾಮದಲ್ಲಿರುವ ತನ್ನ ಮನೆಯ ಮುಂದಿರುವ ಶ್ರೀ ಕಾವಲುಕಟ್ಟೆ ಹನುಮಂತ ದೇವರ ದೇವಸ್ಥಾನದ ಹಿಂದೆ ಇರುವ ಗುಂಡಬಾಳ ಹೊಳೆಯ ದಂಡೆಯಲ್ಲಿ ಪಿರ್ಯಾದಿಯು ಬಟ್ಟೆ ಒಗೆಯಲು ಹೋಗಿದ್ದಾಗ ಪಿರ್ಯಾದಿಯ ಮಗನಾದ ಕಾಣೆಯಾದ ಕಾರ್ತಿಕ ತಂದೆ ರಮೇಶ ನಾಯ್ಕ ಈತನು ಮನೆಯ ಮುಂದೆ ಆಟ ಆಡುತ್ತಿದ್ದವನು, ಮಧ್ಯಾಹ್ನ 03-15 ಗಂಟೆಯ ಸುಮಾರಿಗೆ ಪಿರ್ಯಾದಿ ಬಟ್ಟೆ ಒಗೆಯುವಲ್ಲಿ ಪಿರ್ಯಾದಿಯ ಹಿಂದೆ ಹೋದವನು, ಆಕಸ್ಮಿಕವಾಗಿ ಕಾಲು ಜಾರಿ ಗುಂಡಬಾಳ ಹೊಳೆಯ ನೀರಿನಲ್ಲಿ ಬಿದ್ದು ಮುಳುಗಿದ್ದು, ನೀರಿನಲ್ಲಿ ಬಿದ್ದ ತನ್ನ ಮಗನಿಗೆ ಹುಡುಕಾಡಿದರೂ ಈವರೆಗೂ ಪತ್ತೆಯಾಗದೇ ಇರುವುದರಿಂದ ಹೊಳೆಯ ನೀರಿನಲ್ಲಿ ಬಿದ್ದು ಕಾಣೆಯಾದ ತನ್ನ ಮಗನಿಗೆ ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಶೃತಿ ಕೋಂ. ರಮೇಶ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಗೃಹಿಣಿ, ಸಾ|| ಹುಡಗೋಡ, ಪೋ: ಮುಟ್ಟಾ, ತಾ: ಹೊನ್ನಾವರ ರವರು ದಿನಾಂಕ: 01-08-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 20-07-2021 ರಂದು ರಾತ್ರಿ 21-00 ಗಂಟೆಯಿಂದ ದಿನಾಂಕ: 21-07-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಜೋಯಿಡಾ ತಾಲೂಕಿನ ಪೊಟೋಳಿ ಗ್ರಾಮದ ಕ್ರಾಸ್ ಹತ್ತಿರ ಇರುವ ಪಿರ್ಯಾದಿಯವರ ಕಿರಾಣಿ ಅಂಗಡಿಯ ಸಿಮೆಂಟ್ ಶೀಟ್ ಅನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಒಡೆದು ಕಿರಾಣಿ ಅಂಗಡಿಯ ಒಳಗೆ ಇಳಿದು, ಅಂಗಡಿಯಲ್ಲಿದ್ದ ರಿಪೇರಿ ಮಾಡಲು ಕೊಟ್ಟ ಪಿರ್ಯಾದಿಯವರ 3 ಮೊಬೈಲ್ ಗಳು ಹಾಗೂ ಲ್ಯಾಪಟಾಪ್, ಅ||ಕಿ|| 17,000/- ರೂಪಾಯಿ ಹಾಗೂ ನಗದು ಹಣ 5,000/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಾ ತಂದೆ ಸಕಾರಾಮ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಸಾಂಗ್ವೆ ಗ್ರಾಮ, ಪೊಟೋಲಿ, ತಾ: ಜೋಯಿಡಾ ರವರು ದಿನಾಂಕ: 01-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-08-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶ್ಯಾಮ @ ನಾಗಾನಾಥ ತಂದೆ ನಾಗಪ್ಪ ಗೌಡ, ಪ್ರಾಯ-37 ವರ್ಷ, ಸಾ|| ಮನೆ ನಂ: 1743/ಝಡ್/2/4, ಹರಿದೇವನಗರ, ಹಬ್ಬುವಾಡಾ, ಕಾರವಾರ. ಪಿರ್ಯಾದಿಯ ಸಹೋದರನಾದ ಈತನು ಸರಾಯಿ ಕುಡಿಯುವ ಚಟದವನಿದ್ದು, ಸರಾಯಿ ಕುಡಿದು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಾ ‘ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಅಂತಾ ಹೇಳುತ್ತಾ ಹಗ್ಗದಿಂದ ಕುತ್ತಿಗೆಗೆ ಉರುಳು ಮಾಡಿ ಹಾಕಿಕೊಳ್ಳುತ್ತಿದ್ದವನು, ದಿನಾಂಕ: 27-07-2021 ರಂದು ಮಧ್ಯಾಹ್ನ 14-00 ಗಂಟೆಗೆ ಮನೆಯಿಂದ ಹೋಗಿ ಕಾಣೆಯಾದವನು, ದಿನಾಂಕ: 01-08-2021 ರಂದು ಮಧ್ಯಾಹ್ನ 13-00 ಘಂಟೆಗೆ ಹರಿದೇವ ನಗರದ ಸ್ಮಶಾನದ ಬಳಿ ನೀರು ಹರಿಯುವ ಹಳ್ಳದಲ್ಲಿ ಈತನು ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುತ್ತಾನೆ. ತನ್ನ ಸಹೋದರನು ಸರಾಯಿ ಕುಡಿದ ನಿಶೆಯಲ್ಲಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದ್ದು, ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಂದ್ರ ತಂದೆ ನಾಗಪ್ಪ ಗೌಡ, ಪ್ರಾಯ-39 ವರ್ಷ, ವೃತ್ತಿ-ನಗರಸಭೆ ನೌಕರ, ಸಾ|| ಮನೆ ನಂ: 1743/ಝೆಡ್/2/4, ಹರಿದೇವನಗರ, ಹಬ್ಬುವಾಡಾ, ಕಾರವಾರ ರವರು ದಿನಾಂಕ: 01-08-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 26/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಜಾನು ತಂದೆ ಬೊಮ್ಮು ಕೊಕರೆ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳ್ಳಿ ಬೆಳಕು, ಮೈನಳ್ಳಿ ಗ್ರಾಮ, ತಾ: ಮುಂಡಗೋಡ. ಪಿರ್ಯಾದಿಯ ತಮ್ಮನಾದ ಈತನು ಕಳೆದ ಆರು ತಿಂಗಳ ಹಿಂದೆ ಅವನ ಹೆಂಡತಿ ರತ್ನಾಬಾಯಿ ತೀರಿಕೊಂಡಿದ್ದರಿಂದ ಹಾಗೂ ಅವಳ ಚಿಕಿತ್ಸೆಗೆ ಸಾಲ ಮಾಡಿಕೊಂಡಿದ್ದರಿಂದ ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 31-07-2021 ರಂದು ಸಂಜೆ 07-30 ಗಂಟೆಯಿಂದ ದಿನಾಂಕ: 01-08-2021 ರಂದು ಮುಂಜಾನೆ 07-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಹಿತ್ತಲಿನ ಮನೆಯ ಅಡ್ಡ ಎಳೆಗೆ ಬಟ್ಟೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ನನ್ನ ತಮ್ಮನ ಮೃತದೇಹವು ಅವನ ಮನೆಯ ಹಿತ್ತಲಿನ ನೇಣು ಹಾಕಿಕೊಂಡು ಸ್ಥಳದಲ್ಲಿಯೇ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಠಕ್ಕು ತಂದೆ ಬೊಮ್ಮು ಕೊಕರೆ, ಪ್ರಾಯ-56 ವರ್ಷ. ವೃತ್ತಿ-ಕೂಲಿ ಕೆಲಸ, ಸಾ|| ಬೆಳ್ಳಿ ಬೆಳಕು, ಮೈನಳ್ಳಿ ಗ್ರಾಮ, ತಾ: ಮುಂಡಗೋಡ ರವರು ದಿನಾಂಕ: 01-08-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 02-08-2021 04:41 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080