ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-12-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 212/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸತೀಶ ತಂದೆ ರಾಜು ಕಿಣಿ, ಸಾ|| ಎನ್.ಎಮ್ ಜೋಷಿ ಮಾರ್ಗ, ಬೈಕುಲಾ, ಮುಂಬೈ, ಮಹಾರಾಷ್ಟ್ರ (ಕಾರ್ ನಂ: ಕೆ.ಎ-01/ಎಮ್.ಎಚ್-1352 ನೇದರ ಚಾಲಕ). ಈತನು ದಿನಾಂಕ: 30-11-2021 ರಂದು 18-15 ಗಂಟೆಯ ಸಮಯಕ್ಕೆ ತನ್ನ ಕಾರ್ ನಂ: ಕೆ.ಎ-01/ಎಮ್.ಎಚ್-1352 ನೇದನ್ನು ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಹರ್ಕಡೆ ಕ್ರಾಸ್ ಹತ್ತಿರ ಪಿರ್ಯಾದಿಯವರು ಮಿರ್ಜಾನ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-47/ಎಸ್-0371 ನೇದಕ್ಕೆ ಓವರಟೇಕ್ ಮಾಡಲು ಹೋಗಿ ನಿಷ್ಕಾಳಜಿಯಿಂದ ಹಿಂದಿನಿಂದ ಡಿಕ್ಕಿ ಹೊಡದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಪಿರ್ಯಾದಿಯವರಿಗೆ ಎರಡು ಕೈಗಳಿಗೆ, ಎಡಗಾಲಿಗೆ, ಬಲಭುಜಕ್ಕೆ ಗಾಯನೋವು ಆಗಲು ಹಾಗೂ ಮೋಟಾರ್ ಸೈಕಲ್ ಹಿಂಬದಿ ಸವಾರ ಪ್ರವೀಣ, ಇವರಿಗೆ ಬಲಗೈ ಹಸ್ತಕ್ಕೆ, ಬಲಗಾಲಿಗೆ ಸಣ್ಣಪುಟ್ಟ ಗಾಯವಾಗಲು ಆರೋಪಿ ಕಾರ್ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ವಿನೋದ ತಂದೆ ದೇವಪ್ಪ ಅಂಬಿಗ, ಪ್ರಾಯ-39 ವರ್ಷ, ವೃತ್ತಿ-ಇನ್ಸೂರೆನ್ಸ್ ಅಡ್ವೈಸರ್, ಸಾ|| ತಾರಿಬಾಗಿಲು, ಮಿರ್ಜಾನ, ತಾ: ಕುಮಟಾ ರವರು ದಿನಾಂಕ: 01-12-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 325/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಭಾಸ್ಕರನ್ ಕಲಿಯಾಮೂರ್ತಿ, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಮರಿಯಮ್ಮನ್ ಕೋವಿಲ್ ಸ್ಟ್ರೀಟ್, ವೆಂಗಲಮ್, ಪೆರಂಬಲೂರ್, ತಮಿಳುನಾಡು (ಲಾರಿ ನಂ: ಟಿ.ಎನ್-59/ಬಿ.ಎಲ್-6630 ನೇದರ ಚಾಲಕ). ಈತನು ದಿನಾಂಕ: 01-12-2021 ರಂದು ಬೆಳಗಿನ ಜಾವ 05-30 ಗಂಟೆಗೆ ತನ್ನ ಲಾರಿ ನಂ: ಟಿ.ಎನ್-59/ಬಿ.ಎಲ್-6630 ನೇದರಲ್ಲಿ ಎಸ್.ಪಿ.ಆರ್ ಡಿಸ್ಟಿಲರೀಸ್ ಪ್ರಾ. ಲಿಮಿಟೆಡ್, ಮಳಿಯೂರ ಗ್ರಾಮ, ಬನ್ನೂರ ಹೋಬಳಿ, ಟಿ.ನರಸಿಂಹಪುರ, ಮೈಸೂರಿನಲ್ಲಿ Budweiser Premium king Of Beers ನ ಬಾಕ್ಸ್ ಗಳನ್ನು ಲೋಡ್ ಮಾಡಿಕೊಂಡು, ಮೈಸೂರಿನಿಂದ ಗೋವಾಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ಮಾರ್ಗವಾಗಿ ಹೋಗುತ್ತಿರುವಾಗ ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಹತ್ತಿರ ರಸ್ತೆಯು ತಿರುವಿನಿಂದ ಮತ್ತು ಇಳಿಜಾರಿನಿಂದ ಕೂಡಿದ್ದರೂ ಸಹಿತ ತನ್ನ ಲಾರಿಯ ವೇಗವನ್ನು ನಿಯಂತ್ರಿಸದೇ ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ನಿರ್ಲಕ್ಷ್ಯತನದಿಂದ ತನ್ನ ಲಾರಿಯನ್ನು ರಸ್ತೆಯ ಎಡಬದಿಗೆ ಪಲ್ಟಿ ಮಾಡಿ ಅಪಘಾತ ಪಡಿಸಿ, ಲಾರಿಯಲ್ಲಿದ್ದ ಪಿರ್ಯಾದಿಗೆ ಎಡಗೈ ಮಣಿಕಟ್ಟಿನ ಹತ್ತಿರ ಹಾಗೂ ಬಲಗಾಲಿನ ಪಾದದ ಹತ್ತಿರ ಗಾಯನೋವು ಆಗಲು ಕಾರಣನಾಗಿದ್ದಲ್ಲದೇ, ಆರೋಪಿ ಲಾರಿ ಚಾಲಕನು ತನಗೂ ಸಹ ಎಡಗೈ ಮಣಿಕಟ್ಟಿನ ಹತ್ತಿರ ಹಾಗೂ ಬಲಗಾಲಿನ ಹಿಮ್ಮಡಿ ಹತ್ತಿರ ಗಾಯನೋವು ಪಡಿಸಿಕೊಂಡಿದ್ದು ಮತ್ತು ಆರೋಪಿ ಚಾಲಕನು ತಾನು ಚಲಾಯಿಸಿಕೊಂಡು ಬಂದ ಲಾರಿ ನಂ: ಟಿ.ಎನ್-59/ಬಿ.ಎಲ್-6630 ನೇದನ್ನು ಜಖಂ ಪಡಿಸಿದ್ದು ಹಾಗೂ ಲಾರಿಯಲ್ಲಿದ್ದ ಬಿಯರ್ ಬಾಕ್ಸ್ ಹಾಳಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಏಕಾಂಬರಮ ತಂದೆ ತಿರುಪತಿ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ದೇವೇಂದ್ರಮ್, ಕುಲಾ ಸ್ಟ್ರೀಟ್, ವೆಂಗಲಮ್, ವೆಪ್ಪಂತಟ್ಟೈ, ಪೆರಂಬಲೂರ್, ತಮಿಳುನಾಡು ರವರು ದಿನಾಂಕ: 01-12-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 158/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ಮೋಟಾರ್ ಸೈಕಲ್ ಸವಾರನಾಗಿದ್ದು, ಮೋಟಾರ್ ಸೈಕಲ್ ನಂಬರ್ ಹಾಗೂ ಸವಾರನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 01-12-2021 ರಂದು ಮಧ್ಯಾಹ್ನ 15-15 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಹಮ್ಜಾ ಪೆಟ್ರೋಲ್ ಬಂಕ್ ಎದುರಿಗೆ ತನ್ನ ಮೋಟಾರ್ ಸೈಕಲನ್ನು ಶಿರಾಲಿ ಕಡೆಯಿಂದ ಭಟ್ಕಳ ಶಹರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ಪಿರ್ಯಾದಿಯವರು ತಮ್ಮ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-7513 ನೇದರ ಹಿಂಬದಿಯಲ್ಲಿ ಶ್ರೀ ಪರಮೇಶ್ವರ ತಂದೆ ಈರಯ್ಯ ಗೊಂಡ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗ್ಗನಮಕ್ಕಿ, ನಾಗವಳ್ಳಿ, ತಾ: ಸಾಗರ, ಜಿ: ಶಿವಮೊಗ್ಗ ಇವರನ್ನು ಕೂಡ್ರಿಸಿಕೊಂಡು ಭಟ್ಕಳ ಶಹರದ ಕಡೆಯಿಂದ ಶಿರಾಲಿ ಕಡೆಗೆ ಮೋಟಾರ್ ಸೈಕಲ್‍ನ್ನು ಚಲಾಯಿಸಿಕೊಂಡು ಹೋಗಿ ಬಲಬದಿಯ ಇಂಡಿಕೇಟರ್ ಸೂಚನೆ ನೀಡಿ ಎರಡೂ ಬದಿಯಿಂದ ಬರ-ಹೋಗುವ ವಾಹನಗಳನ್ನು ನೋಡಿಕೊಂಡು ಹಮ್ಜಾ ಪೆಟ್ರೋಲ್ ಬಂಕ್ ಕಡೆಗೆ ತಿರುಗಿಸುತ್ತಿದ್ದವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿಯ ಸವಾರ ಶ್ರೀ ಪರಮೇಶ್ವರ ತಂದೆ ಈರಯ್ಯ ಗೊಂಡ ಇವರಿಗೆ ಎಡಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಭಾಸ್ಕರ ತಂದೆ ಈರಯ್ಯ ಗೊಂಡ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗ್ಗನಮಕ್ಕಿ, ನಾಗವಳ್ಳಿ, ತಾ: ಸಾಗರ, ಜಿ: ಶಿವಮೊಗ್ಗ ರವರು ದಿನಾಂಕ: 01-12-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 213/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಕೃಷ್ಣಾ ಸಿದ್ದಿ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ ಸಾ|| ಕುಚಗಾಂವ, ತಾ: ಯಲ್ಲಾಪುರ (ಸ್ಕೂಟಿ ನಂ: ಕೆ.ಎ-31/ಇ.ಬಿ-1661 ನೇದರ ಸವಾರ). ಈತನು ದಿನಾಂಕ: 01-12-2021 ರಂದು 12-40 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಶಿರಲೆ ಫಾಲ್ಸ್ ಹೋಗುವ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಸ್ಕೂಟಿ ನಂ: ಕೆ.ಎ-31/ಇ.ಬಿ-1661 ನೇದರ ನೇದನ್ನು ಯಲ್ಲಾಪುರ  ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ತಿರುವಿನ ರಸ್ತೆಯಲ್ಲಿ ಸ್ಕೂಟಿಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ತನ್ನ ಬಲಕ್ಕೆ ಹೋಗಿ, ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಕಾರ್ ನಂ: ಎಮ್.ಎಚ್-12/ಎಲ್.ಪಿ-6084 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿ, ಸ್ಕೂಟಿಯ ಹಿಂಬದಿಯಲ್ಲಿ ಕುಳಿತ ರಂಜಿತ ತಂದೆ ನಾರಾಯಣ ಸಿದ್ದಿ, ಪ್ರಾಯ-14 ವರ್ಷ, ಸಾ|| ಉಪಳೇಶ್ವರ, ತಾ: ಯಲ್ಲಾಪುರ ಹಾಗೂ ದಯಾನಂದ ತಂದೆ ನಾಗ್ಯಾ ಸಿದ್ದಿ, ಪ್ರಾಯ-29 ವರ್ಷ, ಸಾ|| ಸವಣೆ, ತಾ: ಯಲ್ಲಾಪುರ ಇವರಿಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಸ್ಕೂಟಿ ಸವಾರನು ತಾನೂ ಸಹ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಸದಾನಂದ ಶೆಟ್ಟಿ, ಪ್ರಾಯ-31 ವರ್ಷ, ವೃತ್ತಿ-ಗ್ಯಾರೇಜ್ ಕೆಲಸ, ಸಾ|| ದೇವಿಚಾಯ, ಉಡುಪಿ, ಹಾಲಿ ಸಾ|| ಬಾಲಾಜಿ ನಗರ, ಗಜವಕ್ರಿ ಕಾಂಪ್ಲೆಕ್ಸ್, ಕೆ.ಪಿ ರೋಡ್, ಪುಣೆ, ಮಹಾರಾಷ್ಟ್ರ ರವರು ದಿನಾಂಕ: 01-12-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತ ಕಳ್ಳರು ದಿನಾಂಕ: 02-11-2021 ರಂದು ಬೆಳಿಗ್ಗೆ 11-15 ಗಂಟೆಯಿಂದ 17-30 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ಬಿಡ್ಕಿ ಸರ್ಕಲ್ ಹತ್ತಿರದ ಗ್ರಂಥಾಲಯದ ಪಕ್ಕದಲ್ಲಿ ನಿಲ್ಲಿಸಿಟ್ಟ ಪಿರ್ಯಾದಿಯವರ ಬಾಬ್ತು ಅ||ಕಿ|| 30,000/- ರೂಪಾಯಿ ಮೌಲ್ಯದ ಹೀರೋ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-4047 ನೇದರ ಹ್ಯಾಂಡಲ್ ಲಾಕ್ ಅನ್ನು ಮುರಿದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಅಜೇಯ ತಂದೆ ನಾರಾಯಣ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಶ್ರೀರಾಮ ಕಾಲೋನಿ, ತಾ: ಶಿರಸಿ ರವರು ದಿನಾಂಕ: 01-12-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವರುಣ ತಂದೆ ನಾಗೇಶ ಚಲವಾದಿ, ಪ್ರಾಯ-28 ವರ್ಷ, ಸಾ|| ಗಾಯತ್ರಿ ನಗರ, ಬನವಾಸಿ ರೋಡ್, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-3013 ನೇದರ ಸವಾರ). ಈತನು ದಿನಾಂಕ: 01-12-2021 ರಂದು 18-30 ಗಂಟೆಯ ಸುಮಾರಿಗೆ ಶಿರಸಿ ಶಹರದ ಬನವಾಸಿ ರಸ್ತೆಯ ಕದಂಬ ನಗರದ 3 ನೇ ಕ್ರಾಸ್ ಹತ್ತಿರ ತಾನು ಚಲಾಯಿಸಿಕೊಂಡ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-3013 ನೇದನ್ನು ಬನವಾಸಿ ರಸ್ತೆ ಕಡೆಯಿಂದ ಶಿರಸಿ ಶಹರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ಮೋಟಾರ್ ಸೈಕಲನ್ನು ನಿಯಂತ್ರಿಸಲಾಗದೇ  ಕದಂಬ ನಗರದ 3 ನೇ ಕ್ರಾಸ್ ಹತ್ತಿರ ರಸ್ತೆ ದಾಟುತ್ತಿದ್ದ ಪಾದಚಾರಿ ಶ್ರೀಮತಿ ನಿರ್ಮಲಾ ತಂದೆ ಅಣ್ಣಪ್ಪಾ ರೇವಣಕರ, ಪ್ರಾಯ-71 ವರ್ಷ, ವೃತ್ತಿ-ನಿವೃತ್ತ ಶಿಕ್ಷಕಿ, ಸಾ|| ದತ್ತಾತ್ರೇಯ ಲೇಔಟ್, ಬನವಾಸಿ ರೋಡ್, ತಾ: ಶಿರಸಿ ರವರಿಗೆ ಡಿಕ್ಕಿ ಹೊಡೆದು ದುಃಖಾಪತ್ ಪಡಿಸಿ, ಮೈ ಕೈಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ, ಮರಣವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಪುರುಷ ಪಾಲೇಕರ, ಪ್ರಾಯ-65 ವರ್ಷ, ವೃತ್ತಿ-ನಿವೃತ್ತ ಬ್ಯಾಂಕ್ ನೌಕರ, ಸಾ|| ಬನವಾಸಿ ರೋಡ್, ತಾ: ಶಿರಸಿ ರವರು ದಿನಾಂಕ: 01-12-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-12-2021

at 00:00 hrs to 24:00 hrs

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 40/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ವತ್ಸಲಾ ತಂದೆ ಸುರೇಶ ಗೌಡ, ಪ್ರಾಯ-26 ವರ್ಷ, ವೃತ್ತಿ-ಗೃಹಿಣಿ, ಸಾ|| ದನ್ನಳ್ಳಿ, ಪೋ: ಕಂಚಿಕೈ, ತಾ: ಸಿದ್ದಾಪುರ. ಪಿರ್ಯಾದಿಯ ಮಗಳಾದ ಇವಳು ಮೊದಲು ಮದುವೆ ಮಾಡಿದ್ದ ಗಂಡನೊಂದಿಗೆ ಸಂಸಾರ ಸರಿ ಬಾರದಿದ್ದರಿಂದ ಡೈವೋರ್ಸ್ ಪಡೆದುಕೊಂಡಿದ್ದವಳಿಗೆ ದಿನಾಂಕ: 28-07-2021 ರಂದು ಕುಮಟಾ ತಾಲೂಕಿನ ಮೇದನಿಯ ಚಂದ್ರಶೇಖರ ತಂದೆ ನಾರಾಯಣ ಗೌಡ, ಈತನೊಂದಿಗೆ ಮರು ಮದುವೆ ಮಾಡಿದ್ದು, ಮದುವೆಯ ನಂತರದಲ್ಲಿ ಮಗಳು ಹಾಗೂ ಅಳಿಯ ನಮ್ಮ ಮನೆಯಲ್ಲೇ ವಾಸ ಇದ್ದರು. ಗಂಡ-ಹೆಂಡತಿ ತುಂಬಾ ಅನ್ಯೋನ್ಯತೆಯಿಂದ ಇದ್ದರು. ಸಿದ್ದಾಪುರ ತಾಲೂಕಿನ ಕುಳ್ಳೆಯ ಸಂಬಂಧಿಕರ ಮಗಳ ಮದುವೆ ಕಾರ್ಯಕ್ರಮಕ್ಕೆ ದಿನಾಂಕ: 30-11-2021 ರಂದು ಸಾಯಂಕಾಲ ನಾನು, ಮಗಳು ಹಾಗೂ ಅಳಿಯನೊಂದಿಗೆ ಹೋಗಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದೆವು. ರಾತ್ರಿ 23-30 ಗಂಟೆಯ ಸುಮಾರಿಗೆ ಮಗಳ ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ಬೆಳಗಿನ ಜಾವ ಜಾಸ್ತಿ ಆಗಿದ್ದರಿಂದ ಶಿರಸಿಯ ಪಿ.ಜಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು, ದಿನಾಂಕ: 01-12-2021 ರಂದು ಬೆಳಿಗ್ಗೆ 06-40 ಗಂಟೆಯ ಸುಮಾರಿಗೆ ಪರೀಕ್ಷಿಸಿದ ವೈದ್ಯರು ಮಗಳು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾಗಿ ತಿಳಿಸಿರುತ್ತಾರೆ, ನನ್ನ ಮಗಳ ಸಾವು ಯಾವ ಕಾರಣದಿಂದ ಆಗಿರುತ್ತದೆಂದು ನಿಖರವಾಗಿ ಗೊತ್ತಿಲ್ಲದಿರುವುದರಿಂದ ವೈದ್ಯಕೀಯ ಪರೀಕ್ಷೆಯಿಂದ ಮರಣದ ಕಾರಣವನ್ನು ತಿಳಿಯಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮಿತ್ರಾ ಕೋಂ. ಸುರೇಶ ಗೌಡ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದನ್ನಳ್ಳಿ, ಪೋ: ಕಂಚಿಕೈ, ತಾ: ಸಿದ್ದಾಪುರ ರವರು ದಿನಾಂಕ: 01-12-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 02-12-2021 03:41 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080