ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-01-2022

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 323, 324, 341, 427, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರತನ ತಂದೆ ವಿಠ್ಠಲ ಪವಾರ, ಪ್ರಾಯ-31 ವರ್ಷ, ವೃತ್ತಿ-ಬಿಸಿನೆಸ್, ಸಾ|| ಆರವ, ಪಂಟಲಭಾಗ, ಕಾರವಾರ, 2]. ದೀಪಕ ತಂದೆ ಮಹಾಬಳೇಶ್ವರ ರಾಣೆ, ಪ್ರಾಯ-62 ವರ್ಷ, ಸಾ|| ಆರವ, ಪಂಟಲಭಾಗ, ಕಾರವಾರ, 3]. ಶ್ರೀಮತಿ ಸರಿತಾ ಕೋಂ. ದೀಪಕ ರಾಣೆ, ಪ್ರಾಯ-60 ವರ್ಷ, ಸಾ|| ಆರವ, ಪಂಟಲಭಾಗ, ಕಾರವಾರ. ದಿನಾಂಕ: 31-12-2021 ರಂದು 12-50 ಗಂಟೆಯಿಂದ 01-20 ಗಂಟೆಯ ಒಳಗೆ ಕೊಳಗೆಯ ಗಣೇಶನಗರ ಹೋಗುವ ಆರ್ಕ್ ಹತ್ತಿರ ಪಿರ್ಯಾದಿ ಹಾಗೂ ಪಿರ್ಯಾದಿಯ ತಂದೆಯನ್ನು ನಮೂದಿತ ಆರೋಪಿತರು ರಸ್ತೆಯಲ್ಲಿ ಎಲ್ಲಿಯು ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ ತಡೆದು, ಆರೋಪಿ 1 ನೇಯವನು ಪಿರ್ಯಾದಿಗೆ ಹೆಲ್ಮೆಟ್ ಮತ್ತು ಬಾಟಲಿಯಿಂದ ಹೊಡೆದು ಒಳನೋವು ಪಡಿಸಿ, ಆರೋಪಿ 2 ನೇಯವನು ಪಿರ್ಯಾದಿಗೆ ಅವಮಾನ ಮಾಡುವ ಉದ್ದೇಶದಿಂದ ಚಪ್ಪಲಿಯಿಂದ ಹೊಡೆದು ಒಳನೋವು ಮತ್ತು ಅವಮಾನ ಮಾಡಿದ್ದು, ಮೂರು ಜನ ಅರೋಪಿತರು ಪಿರ್ಯಾದಿಗೆ ಹಗೂ ಪಿರ್ಯಾದಿಯ ತಂದೆಗೆ ಜೀವದ ಧಮಕಿ ಹಾಕಿರುತ್ತಾರೆ ಹಾಗೂ ಆರೋಪಿತರು ಪಿರ್ಯಾದಿಗೆ ಹಾಗೂ ಪಿರ್ಯಾದಿಯ ತಂದೆಗೆ ಕೈಯಿಂದ ಹೊಡೆದಿದ್ದು, ಆರೋಪಿ 1 ನೇಯವನು ಹೆಲ್ಮೆಟ್ ನಿಂದ ಮೋಟಾರ್ ಸೈಕಲ್ ನಂ: ಕೆ.ಎ-30/ಯು-3884 ನೇದಕ್ಕೆ ಡೂಮ್ ಗೆ/ಹೆಡಲೈಟ್ ನ ಕವರಗೆ ಹೊಡೆದು ಸುಮಾರು 2,000/- ರೂಪಾಯಿಯ ಲುಕ್ಸಾನ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ತಂದೆ ದತ್ತಾರಾಮ ಭಂಡಾರಿ, ಪ್ರಾಯ-31 ವರ್ಷ, ವೃತ್ತಿ-ಇಲೆಕ್ಟ್ರೀಷಿಯನ್, ಸಾ|| ಆರವ, ಮುಡಗೇರಿ, ಕಾರವಾರ ರವರು ದಿನಾಂಕ: 01-01-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಲಾರಿ ನಂ: ಆರ್.ಜೆ-52/ಜಿ.ಎ-6989 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 01-01-2022 ರಂದು ಮಧ್ಯಾಹ್ನ 14-45 ಗಂಟೆಗೆ ತನ್ನ ಲಾರಿ ನಂ: ಆರ್.ಜೆ-52/ಜಿ.ಎ-6989 ನೇದನ್ನು ಅಂಕೋಲಾ ತಾಲೂಕಿನ ರಾಮನಗುಳಿ ಗ್ರಾಮದಲ್ಲಿ ಹಾಯ್ದಿರುವ ಡಾಂಬರ್ ರಸ್ತೆಯಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ತನ್ನ ಲಾರಿಯ ಮುಂದೆ ಹೋಗುತ್ತಿದ್ದ ಒಂದು ಲಾರಿಯನ್ನು ಓವರಟೇಕ್ ಮಾಡಲು ಹೋಗಿ ಯಲ್ಲಾಪುರ ಕಡೆಯಿಂದ ಅಂಕೊಲಾದ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಕಾರ್ ನಂ: ಕೆ.ಎ-49/ಎಮ್-5750 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಮೂಗಿನ ಹತ್ತಿರ ಮತ್ತು ಆರುಷ್ ತಂದೆ ರಮೇಶ ಕೌತನಳಿ, ಪ್ರಾಯ-8 ವರ್ಷ, ಇವರಿಗೆ ಬಲಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಯ ತಂದೆ ವಿರಣ್ಣಾ ಮುರ್ಶಿಳ್ಳಿ, ಪ್ರಾಯ-30 ವರ್ಷ, ವೃತ್ತಿ-ವ್ಯವಹಾರ, ಸಾ|| ಮನೆ ನಂ: 24, ಶಕ್ತಿ ನಗರ, ಬಿಡನಾಳ ಕ್ರಾಸ್, ಹುಬ್ಬಳ್ಳಿ, ಧಾರವಾಡ ರವರು ದಿನಾಂಕ: 01-01-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉಲ್ಲಾಸ ತಂದೆ ನಾಗಪ್ಪ ನಾಯ್ಕ, ಪ್ರಾಯ-32 ವರ್ಷ, ಸಾ|| ಬೊಳೆಬಸ್ತಿ, ತಾ: ಹೊನ್ನಾವರ. ಈತನು ದಿನಾಂಕ: 31-12-2022 ರಂದು ರಾತ್ರಿ ಬೊಳೆಬಸ್ತಿಯಲ್ಲಿ ಡಿಜೆ ಹಾಕಿ ಕಾರ್ಯಕ್ರಮ ಮಾಡುತ್ತಿದ್ದಾನೆ ಅಂತಾ ಪೊಲೀಸರಿಗೆ ಮಾಹಿತಿ ತಿಳಿಸಿದ ವಿಚಾರವಾಗಿ ಕೇಳಲು ಪಿರ್ಯಾದಿಯು ಆರೋಪಿತನ ಮನೆಗೆ ಹೋಗಿ ಅವನ ತಂದೆ ತಾಯಿಯವರ ಹತ್ತಿರ ಆರೋಪಿತನ ಬಗ್ಗೆ ಕೇಳಿದಾಗ ಅವರು ‘ಮನೆಯಲ್ಲಿ ಇಲ್ಲಾ’ ಅಂತಾ ಹೇಳಿದ್ದು, ಆಗ ಪಿರ್ಯಾದಿಯು ತನ್ನ ತಮ್ಮ ಗಣೇಶನ ಮೊಬೈಲಿನಲ್ಲಿ ಆರೋಪಿತನಿಗೆ ಪೋನ್ ಮಾಡಿ ಕೇಳಿದಾಗ ಆರೋಪಿತನು ಪಿರ್ಯಾದಿಗೆ ಉದ್ದೇಶಿಸಿ ಅವಾಚ್ಯವಾಗಿ ಬೈಯ್ದಿದಲ್ಲದೇ, ಕೈಯಲ್ಲಿ ಕಲ್ಲು ಹಿಡಿದುಕೊಂಡು ತನ್ನ ಮನೆಯ ಹಿಂದಿನಿಂದ ಬಂದು ಪಿರ್ಯಾದಿಗೆ ಕಲ್ಲಿನಿಂದ ಹಣೆಯ ಹತ್ತಿರ ಒಮ್ಮೆಲೇ ಹೊಡೆದು ರಕ್ತದ ಗಾಯನೋವು ಪಡಿಸಿ, ಜೀವ ಬೆದರಿಕೆ ಹಾಕಿ, ಅಲ್ಲಿಂದ ಓಡಿ ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ವಿಷ್ಣು ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕಂಟ್ರ್ಯಾಕ್ಟರ್ ಕೆಲಸ, ಸಾ|| ಬೊಳೆಬಸ್ತಿ, ತಾ: ಹೊನ್ನಾವರ ರವರು ದಿನಾಂಕ: 01-01-2022 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬೂಬಕ್ಕರ್ ತಂದೆ ಮೊಹಮ್ಮದ್ ಮಿರಾ ಕಾಪಡೆ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನ್ಯಾಷನಲ್ ಕಾಲೋನಿ 9 ನೇ ಕ್ರಾಸ್, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ, 2]. ಅರ್ಷದ್ ಶೇಖ್ ತಂದೆ ಶೇಖ್ ಅಲಿ, ಪ್ರಾಯ-32 ವರ್ಷ, ವೃತ್ತಿ-ಚಿಕನ್ ಸೆಂಟರ್, ಸಾ|| ಹಿರೇದೊಮ್ಮಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ, 3]. ಶಮೂನ್ ತಂದೆ ಅಬ್ದುಲ್ಲಾ ಶೇಖ್, ಪ್ರಾಯ-26 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ, ಸಾ|| ಬಸ್ತಿಮಕ್ಕಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ, 4]. ಶಬ್ಬೀರ್ ತಂದೆ ಅಬ್ದುಲ್ಲಾ ಶೇಖ್, ಪ್ರಾಯ-28 ವರ್ಷ, ಕೂಲಿ ಕೆಲಸ, ಸಾ|| ಬಸ್ತಿಮಕ್ಕಿ, ಮಾವಳ್ಳಿ-1 ಮುರ್ಡೇಶ್ವರ, ತಾ: ಭಟ್ಕಳ. ಪಿರ್ಯಾದಿಯವರು ದಿನಾಂಕ: 01-01-2022 ರಂದು ಹೊಸ ವರ್ಷದ ಪ್ರಯುಕ್ತ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ 15-40 ಗಂಟೆಗೆ ಮುರ್ಡೇಶ್ವರ ದೇವಸ್ಥಾನದ ಹತ್ತಿರ ಇರುವಾಗ ಮುರ್ಡೇಶ್ವರ ಬಸ್ತಿಮಕ್ಕಿಯ ಮೊಹಿದ್ದೀನ್ ಮಸೀದಿಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಸ್ಪೀಟ್ ಎಲೆಗಳ ಮೇಲೆ ಅಂದರ್-ಬಾಹರ್ ಜೂಗಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಂತೆ ದಾಳಿಯ ಕುರಿತು ಪಿರ್ಯಾದಿಯು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಠಾಣೆಯ ಅಧಿಕಾರಿ, ಸಿಬ್ಬಂದಿ ಹಾಗೂ ಪಂಚರೊಂದಿಗೆ ಮಾಹಿತಿಯ ಸ್ಥಳಕ್ಕೆ ಹೋದಾಗ ನಮೂದಿತ ಆರೋಪಿತರು ತಮ್ಮ ತಮ್ಮ ಲಾಭಕ್ಕೋಸ್ಕರ ಮುರ್ಡೇಶ್ವರ ಬಸ್ತಿಮಕ್ಕಿಯ ಮೊಹಿದ್ದೀನ್ ಮಸೀದಿಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟವನ್ನು ಆಡುತ್ತಿರುವುದನ್ನು ಖಾತ್ರಿ ಪಡಿಸಿ, 16-25 ಗಂಟೆಗೆ ದಾಳಿ ಮಾಡಿದಾಗ ಆರೋಪಿ 1 ಮತ್ತು 2 ನೇಯವರು 1). ನಗದು ಹಣ ಒಟ್ಟು 5,230/- ರೂಪಾಯಿ, 2). ಇಸ್ಪೀಟ್ ಎಲೆಗಳು-52 ಹಾಗೂ 3) ನ್ಯೂಸ್ ಪೇಪರ್-1 ಇವುಗಳೊಂದಿಗೆ ಸಿಕ್ಕಿದ್ದು ಹಾಗೂ ಆರೋಪಿ 3 ಮತ್ತು 4 ನೇಯವರು ಸ್ಥಳದಿಂದ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 01-01-2022 ರಂದು 17-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: ಹೆಂಗಸು ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ವಂದನಾ ಕೋಂ. ಫಕೀರ ತಾಂಬಿಟಕರ, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, 2]. ಕುಮಾರಿ: ಪ್ರತೀಕ್ಷಾ ತಂದೆ ಫಕೀರ ತಾಂಬಿಟಕರ, ಪ್ರಾಯ-5 ವರ್ಷ, ಸಾ|| (ಇಬ್ಬರೂ) ಅರ್ಲವಾಡ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ಹೆಂಡತಿಯಾದ ಶ್ರೀಮತಿ ವಂದನಾ ಕೋಂ. ಫಕೀರ ತಾಂಬಿಟಕರ ಇವಳು ತನ್ನ ಮಗಳು ಕುಮಾರಿ: ಪ್ರತೀಕ್ಷಾ ಇವಳನ್ನು ಕರೆದುಕೊಂಡು ದಿನಾಂಕ: 31-12-2021 ರಂದು ರಾತ್ರಿ 22-30 ಗಂಟೆಯ ಸುಮಾರಿಗೆ ಅರ್ಲವಾಡ ಗ್ರಾಮದ ತಮ್ಮ ಹೊಲದ ದಡ್ಡಿ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಸಂಬಂಧಿಕರ ಮನೆಗೂ ಹೋಗದೇ, ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಹೆಂಡತಿ ಮತ್ತು ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಫಕೀರ ತಂದೆ ಗಂಗಾರಾಮ ತಾಂಬಿಟಕರ, ಪ್ರಾಯ-41 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅರ್ಲವಾಡ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 01-01-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 380, 454, 457 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 31-12-2022 ರಂದು 18-30 ಗಂಟೆಯಿಂದ ದಿನಾಂಕ: 01-01-2022 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಕಪ್ಪಗೇರಿಯ ಬನವಾಸಿಯ ಶ್ರೀ ಚೌಡೇಶ್ವರಿ ದೇವಸ್ಥಾನದ ಬಾಗಿಲಿಗೆ ಹಾಕಿದ ಲಾಲ್ ದಂಡಿಯನ್ನು ಯಾವುದೋ ಹರಿತವಾದ ಆಯುಧದಿಂದ ಕಟ್ ಮಾಡಿ ದೇವಸ್ಥಾನದ ಒಳ ಪ್ರವೇಶಿಸಿ, ದೇವಸ್ಥಾನದಲ್ಲಿದ್ದ 1). ಪಂಚಲೋಹದ ಮುಖ-01, ಅ||ಕಿ|| 2,500/- ರೂಪಾಯಿ, 2). ಪಂಚಲೋಹದ ಕರಿಮಣಿ ತಾಳಿ ಸರ-01, ಅ||ಕಿ|| 8,000/- ರೂಪಾಯಿ, 3). ಹಿತ್ತಾಳೆಯ ಸಮೆ-06, ಅ||ಕಿ|| 2,000/- ರೂಪಾಯಿ, 4). ಹಿತ್ತಾಳೆಯ ಮಂಗಳಾರತಿ ತಟ್ಟೆ-01, ಅ||ಕಿ|| 200/- ರೂಪಾಯಿ, 5). ತಾಮ್ರದ ಹರಿವಾಣ-04, ಅ||ಕಿ|| 1,000/- ರೂಪಾಯಿ, 6). ತಾಮ್ರದ ಕೊಡಪಾನ-01, ಅ||ಕಿ|| 200/- ರೂಪಾಯಿ, 7). ಆರತಿ ತಟ್ಟೆ-02, ಅ||ಕಿ|| 500/- ರೂಪಾಯಿ, 8). ತಾಮ್ರದ ತಂಬಿಗೆ-02, ಅ||ಕಿ|| 200/- ರೂಪಾಯಿ, 9). ತಾಮ್ರದ ಚಿಕ್ಕ ಲೋಟ-02, ಅ||ಕಿ|| 100/- ರೂಪಾಯಿ, 10). ಮಹಾಮಂಗಳಾರತಿ ಧೂಪದ ತಟ್ಟೆ-01, ಅ||ಕಿ|| 200/- ರೂಪಾಯಿ, 11). ಹಿತ್ತಾಳೆಯ ತೂಗುದೀಪ-01, ಅ||ಕಿ|| 1,000/- ರೂಪಾಯಿ, 12). ಹಿತ್ತಾಳೆಯ ಜಾಗಟೆ-01, ಅ||ಕಿ|| 150/- ರೂಪಾಯಿ. ಇವುಗಳ ಒಟ್ಟೂ ಮೊತ್ತ 16,050/- ರೂಪಾಯಿ ನೇದವುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಹನುಮಂತಪ್ಪ ತಂದೆ ಭೀಮಪ್ಪ ಮಡ್ಲೂರ, ಪ್ರಾಯ-59 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಪ್ಪಗೇರಿ, ಬನವಾಸಿ, ತಾ: ಶಿರಸಿ ರವರು ದಿನಾಂಕ: 01-01-2022 ರಂದು 14-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-01-2022

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಆಶಾಕಾಂತ ತಂದೆ ದಾಮು ನಾಯ್ಕ, ಪ್ರಾಯ-57 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವೈಲವಾಡಾ, ದಾಂಡೇಬಾಗ್, ಮಾಜಾಳಿ, ಕಾರವಾರ. ಪಿರ್ಯಾದಿಯ ತಂದೆಯಾದ ಇವರು ಸುಮಾರು 2 ತಿಂಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದವರು, ಒಬ್ಬರೇ ಮಾತನಾಡಿಕೊಳ್ಳುವುದು, ಸುಮ್ಮನೆ ಬೈಯ್ಯುವುದು ಮಾಡುತ್ತಿದ್ದವರು, ಆಗಾಗ ಮನೆಯಿಂದ ಹೊರಗೆ ಹೋಗಿ ಸುಮಾರು ಹೊತ್ತಿನ ಬಳಿಕ ಬರುತ್ತಿದ್ದವರು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ತೋರಿಸಿದರೂ ಸಹ ಕಡಿಮೆ ಆಗದೇ ಹಾಗೆಯೇ ವರ್ತಿಸುತ್ತಿದ್ದವರು, ದಿನಾಂಕ: 30-12-2021 ರಂದು ಊಟ ಮಾಡಿ 10-00 ಗಂಟೆಗೆ ಮಲಗಿದ ನಂತರ ಮನೆಯಿಂದ ಎದ್ದು ಹೋಗಿ ದಿನಾಂಕ: 01-01-2022 ರಂದು ಬೆಳಿಗ್ಗೆ ತಮ್ಮ ಮನೆಯಿಂದ ಸುಮಾರು 150 ಮೀಟರ್ ದೂರದ ಬಾವಿಯಲ್ಲಿ ಮೃತನಾಗಿ ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತನ್ನ ತಂದೆಯು ದಿನಾಂಕ: 30-12-2021 ರಂದು ಗಂಟೆಯಿಂದ ದಿನಾಂಕ: 01-01-2022 ರಂದು ಬೆಳಿಗ್ಗೆ 09-00 ಗಂಟೆಯ ನಡುವೆ ಬಾವಿಗೆ ಹಾರಿ ಮೃತರಾಗಿರುತ್ತಾರೆ. ಇದರ ಹೊರತು ಮೃತರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ದರ್ಶನ ತಂದೆ ಆಶಾಕಾಂತ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವೈಲವಾಡಾ, ದಾಂಡೇಬಾಗ್, ಮಾಜಾಳಿ, ಕಾರವಾರ ರವರು ದಿನಾಂಕ: 01-01-2022 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 03-01-2022 01:04 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080