ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 01-07-2021
at 00:00 hrs to 24:00 hrs
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 126/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರದೀಪ ಆರ್. ತಂದೆ ರಾಜಗೋಪಾಲ, ಪ್ರಾಯ-24 ವರ್ಷ, ಸಾ|| ಅಂದ್ರಹಳ್ಳಿ, ಬೆಂಗಳೂರು (ಲಾರಿ ನಂ: ಕೆ.ಎ-52/ಎ-5159 ನೇದರ ಚಾಲಕ). ಈತನು ದಿನಾಂಕ: 30-06-2021 ರಂದು ಬೆಳಿಗ್ಗೆ 07-00 ಗಂಟೆಗೆ ತನ್ನ ಲಾರಿ ನಂ: ಕೆ.ಎ-52/ಎ-5159 ನೇದನ್ನು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ನಿಂತ ಲಾರಿಯನ್ನು ಒಮ್ಮೆಲೇ ಚಾಲು ಮಾಡಿ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಶ್ರೀ ಮಂಜುನಾಥ ಎಮ್, ಪ್ರಾಯ-23 ವರ್ಷ, ವೃತ್ತಿ-ಕ್ಲೀನರ್ ಕೆಲಸ, ಸಾ|| ಮನೆ ನಂ: 151, ಮಾಗಡಿ ಮೇನ್ ರೋಡ್, ಅಂಗಳ ಪರಮೇಶ್ವರಿ ದೇವಸ್ಥಾನದ ಹತ್ತಿರ, ಇಂದಿರಾ ಕಾಲೋನಿ, ಚಿಕ್ಕಗೊಲ್ಲರ ಹಟ್ಟಿ, ಲಕ್ಷ್ಮೀಪುರ, ಬೆಂಗಳೂರು ಈತನಿಗೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಲಾರಿಯ ಟಾಯರ್ ಬಲಗಾಲ ತೊಡೆಯ ಮೇಲೆ ಹತ್ತಿ ಮೂಳೆ ಮುರಿದು ಭಾರೀ ಗಾಯವಾಗಲು ಆರೋಪಿ ಲಾರಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಕಿರಣಕುಮಾರ ಎಮ್. ತಂದೆ ಮುನಿಯಪ್ಪ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ಮನೆ ನಂ: 151, ಮಾಗಡಿ ಮೇನ್ ರೋಡ್, ಅಂಗಳ ಪರಮೇಶ್ವರಿ ದೇವಸ್ಥಾನದ ಹತ್ತಿರ, ಇಂದಿರಾ ಕಾಲೋ, ಚಿಕ್ಕಗೊಲ್ಲರ ಹಟ್ಟಿ, ಲಕ್ಷ್ಮೀಪುರ, ಬೆಂಗಳೂರು ರವರು ದಿನಾಂಕ: 01-07-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 176/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1)(A)(D)(E) Prevention Of Cruelty to Animals Act-1960 ಮತ್ತು ಕಲಂ: 192(A) Indian Motor Vehicles Act-1988 ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ತುಕಾರಮ ಜೋಗಳೆಕರ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಹೊಳೆಮರೂರು, ಚಂದ್ರಗುತ್ತಿ, ತಾ: ಸೊರಬಾ, ಸಾ|| ಶಿವಮೊಗ್ಗ. ಈತನು ದಿನಾಂಕ: 01-07-2021 ರಂದು 05-00 ಗಂಟೆಗೆ ಬಿಳಿ ಬಣ್ಣದ ಮಹೀಂದ್ರಾ ಮ್ಯಾಕ್ಸಿಮೋ ಪ್ಲಸ್ ಗೂಡ್ಸ್ ವಾಹನ ನಂ: ಕೆ.ಎ-15/ಎ-1110 ನೇದರಲ್ಲಿ ಸುಮಾರು 40,000/- ರೂಪಾಯಿ ಬೆಲೆಯ ಬಿಳಿ ಬಣ್ಣದ ಎತ್ತು-01, ಕಪ್ಪು ಬಣ್ಣದ ಎತ್ತು-1. ಹೀಗೆ ಒಟ್ಟು-02 ಜಾನುವಾರು (ಎತ್ತು) ಗಳನ್ನು ತುಂಬಿಕೊಂಡು, ಜಾನುವಾರುಗಳಿಗೆ ನಿಂತುಕೊಳ್ಳಲು, ಮಲಗಲು ಕಂಪಾರ್ಟಮೆಂಟಿನ ವ್ಯವಸ್ಥೆ ಮಾಡದೇ ಹಾಗೂ ಮೇವು ಮತ್ತು ನೀರಿನ ವ್ಯವಸ್ಥೆ ಇಲ್ಲದೇ ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ಸರಕು ಸಾಗಣೆಯ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 01-07-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುರ್ಡೇಶ್ವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 58/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಫಯಾಜ್ ಅಹಮ್ಮದ್, ಪ್ರಾಯ-59 ವರ್ಷ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿಲ್ಲಾ ಪಂಚಾಯತ ಉಪ ವಿಭಾಗ, ಭಟ್ಕಳ (ಟೊಯೋಟಾ ಇಟಿಯೋಸ್ ಕಾರ್ ನಂ: ಕೆ.ಎ-03/ಎ.ಎಫ್-4898 ನೇದರ ಚಾಲಕ). ದಿನಾಂಕ: 29-06-2021 ರಂದು ಮಂಜುನಾಥ ತಂದೆ ವೆಂಕಟ್ರಮಣ ಮೊಗೇರ, ಸಾ|| ಜನತಾ ಕಾಲೋನಿ, ಬೆಳಕೆ, ತಾ: ಭಟ್ಕಳ ಇವರು ತಮ್ಮ ಹೀರೋ ಹೋಂಡಾ ಗ್ಲ್ಯಾಮರ್ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-3595 ನೇದರಲ್ಲಿ ಪಿರ್ಯಾದಿಯ ಮಗನಾದ ರಾಘವೇಂದ್ರ ತಂದೆ ಜನ್ನಾ ಮೊಗೇರ ಈತನನ್ನು ಕೂಡ್ರಿಸಿಕೊಂಡು ಮೋಟಾರ್ ಸೈಕಲನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಬಸ್ತಿ ಕಡೆಯಿಂದ ಭಟ್ಕಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ 11-30 ಗಂಟೆಗೆ ಮಾವಿನಕಟ್ಟಾ ತಲುಪುತ್ತಿದ್ದಂತೆ, ಮೋಟಾರ್ ಸೈಕಲ್ ಮುಂದೆ ಹೋಗುತ್ತಿದ್ದ ಟೊಯೋಟಾ ಇಟಿಯೋಸ್ ಕಾರ್ ನಂ: ಕೆ.ಎ-03/ಎ.ಎಫ್-4898 ನೇದರ ಚಾಲಕನಾದ ನಮೂದಿತ ಆರೋಪಿತನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಯಾವುದೇ ಸಿಗ್ನಲ್ ನೀಡದೇ ಮಾವಿನಕಟ್ಟಾದ ಯಕ್ಷಿಮನೆ ಕ್ರಾಸಿನಲ್ಲಿ ಸಣ್ಣಬಾವಿ ಕಡೆಯಿಂದ ಉಳ್ಮಣ್ಣು ಕಡೆಗೆ ಹೋಗಲು ಒಮ್ಮೆಲೇ ಕಾರನ್ನು ಬಲಕ್ಕೆ ತೆಗೆದುಕೊಂಡು ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಮಂಜುನಾಥ ತಂದೆ ವೆಂಕಟ್ರಮಣ ಮೊಗೇರ ಈತನಿಗೆ ಎಡಗಾಲ ಮೊಣಗಂಟಿನ ಹತ್ತಿರ ಸಾದಾ ಸ್ವರೂಪದ ಗಾಯನೋವು ಹಾಗೂ ಹಿಂಬದಿಯ ಸವಾರ ರಾಘವೇಂದ್ರ ತಂದೆ ಜನ್ನಾ ಮೊಗೇರ ಈತನಿಗೆ ಎಡಬದಿಯ ಸೊಂಟಕ್ಕೆ ಮತ್ತು ಎಡಗೈ ಮೊಣಗಂಟಿನ ಮೇಲೆ ಸಾದಾ ಸ್ವರೂಪದ ಒಳ ನೋವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜನ್ನಾ ತಂದೆ ನಾಗಪ್ಪ ಮೊಗೇರ, ಪ್ರಾಯ-49 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬುಡ್ಕಿಮನೆ, ಮಠದಹಿತ್ಲ, ಕಾಯ್ಸಿಣಿ, ತಾ: ಭಟ್ಕಳ ರವರು ದಿನಾಂಕ: 01-07-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 59/2021, ಕಲಂ: 8(C), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ಕೃಷ್ಣ ಸಿದ್ದಿ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋಟೆ ಮನೆ, ಉಮ್ಮಚಗಿ ಗ್ರಾಮ, ಪೋ: ಉಮ್ಮಚಗಿ, ತಾ: ಯಲ್ಲಾಪುರ. ಈತನು ದಿನಾಂಕ: 01-07-2021 ರಂದು ಅಕ್ರಮವಾಗಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಅಂದಾಜು 6,000/- ಮೌಲ್ಯದ 234 ಗ್ರಾಂ 400 ಮಿಲಿ ಗಾಂಜಾ ಮಾದಕ ವಸ್ತುವನ್ನು ಯಲ್ಲಾಪುರದಲ್ಲಿ ಅಪರಿಚಿತ ಇಬ್ಬರೂ ವ್ಯಕ್ತಿಗಳಿಂದ ಖರೀದಿಸಿ, ಯಾವುದೇ ಪಾಸ್ ಮತ್ತು ಪರ್ಮಿಟ್ ಇಲ್ಲದೇ ತನ್ನ ತಾಬಾದಲ್ಲಿ ಇಟ್ಟುಕೊಂಡು ಶಿರಸಿಯಲ್ಲಿ ಮಾರಾಟ ಮಾಡಲು ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಕ್ಯೂ-6770 ನೇದರ ಮೇಲೆ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬರುತ್ತಿರುವಾಗ ಸಮಯ 16-00 ಗಂಟೆಗೆ ಶಿರಸಿ-ಯಲ್ಲಾಪುರ ರಸ್ತೆಯ ದೇವನಿಲಯ ಬಸ್ ನಿಲ್ದಾಣದ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಮಚಂದ್ರ ನಾಯಕ, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 01-07-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 80/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕಮಲಾಕರ ತಂದೆ ತಿಮ್ಮಾ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗ್ಗರಣೆ, ತಾ: ಸಿದ್ದಾಪುರ. ಈತನು ದಿನಾಂಕ: 01-07-2021 ರಂದು 19-30 ಗಂಟೆಗೆ ಸಿದ್ದಾಪುರ ತಾಲೂಕಿನ ಹೆಗ್ಗರಣೆಯಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 06 ಟೆಟ್ರಾ ಪ್ಯಾಕೆಟ್ ಗಳು, 2). 02 ಪ್ಲಾಸ್ಟಿಕ್ ಗ್ಲಾಸುಗಳು, 3). Original Choice Deluxe Whisky 90 ML ಅಂತಾ ಬರೆದ 02 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 01-07-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 60/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಸಂಧ್ಯಾ ಕೋಂ. ದೀಪಕ ಮಜಗಾಂವಕರ, ಸಾ|| ಗಣೇಶ ಗಲ್ಲಿ, ರಾಮನಗರ, ತಾ: ಜೋಯಿಡಾ. ನಮೂದಿತ ಆರೋಪಿತಳ ಮನೆಯೂ ಪಿರ್ಯಾದಿಯವರ ಮನೆಯ ಬದಿಯಲ್ಲಿ ಇದ್ದು, ಪಿರ್ಯಾದಿಯವರು ತಮ್ಮ ಮನೆಯ ಸುತ್ತಲೂ ಕಟ್ಟಿಗೆಯ ಬೇಲಿಯನ್ನು ಮಾಡಿಕೊಂಡಿದ್ದು, ಅದು ಪ್ರತಿ ವರ್ಷವು ಮಳೆಯಲ್ಲಿ ಹಾಳಾಗುವುದರಿಂದ ಅದನ್ನು ಪ್ರತಿ ವರ್ಷವು ಸರಿ ಮಾಡಬೇಕಾಗಿರುತ್ತದೆ. ಹೀಗಿರುತ್ತಾ ದಿನಾಂಕ: 15-06-2021 ರಂದು ಬೆಳಿಗ್ಗೆ 09-00 ಗಂಟೆಯ ಪಿರ್ಯಾದಿಯವರು ತಮ್ಮ ಹಾಗೂ ಆರೋಪಿತಳ ಮನೆಗಳ ಮಧ್ಯದ ಬೇಲಿಯನ್ನು ರಮೇಶ ಗಾವಡೆ ಎಂಬುವವರನ್ನು ಕೆಲಸಕ್ಕೆ ಕರೆದುಕೊಂಡು ಸರಿ ಮಾಡುತ್ತಿರುವಾಗ ತಮ್ಮ ಮನೆಯೊಳಗಿಂದ ಬಂದ ಆರೋಪಿತಳು ‘ಹೇ ರಾಂಡೆ, ಬೋಸಡಿ, ಇಲ್ಲಿ ಯಾಕೆ ಬೇಲಿ ಹಾಕುತ್ತಿದ್ದೀ? ನಿನಗೆ ಬೇಲಿ ಹಾಕಲು ಹೇಳಿದವರು ಯಾರು?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಅಲ್ಲಿಯೇ ಇದ್ದ ಬೇಲಿಯ ಒಂದು ಕಟ್ಟಿಗೆಯ ಬಡಿಗೆಯನ್ನು ಕಿತ್ತುಕೊಂಡು ಪಿರ್ಯಾದಿಯ ಕುತ್ತಿಗೆಯ ಭಾಗದಲ್ಲಿ ಹೊಡೆದು, ‘ಇಲ್ಲಿ ಮತ್ತೆ ಬೇಲಿ ಹಾಕಲು ಬಂದರೆ ನಿನಗೆ ಕೊಂದು ಹಾಕುತ್ತೇನೆ’ ಅಂತಾ ಬೆದರಿಕೆಯನ್ನು ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಜುಳಾ ಕೋಂ. ಪ್ರಕಾಶ ದೇಸಾಯಿ, ಪ್ರಾಯ-49 ವರ್ಷ, ವೃತ್ತಿ-ಅಂಗನವಾಡಿ ಕಾರ್ಯಕರ್ತೆ, ಸಾ|| ಗಣೇಶ ಗಲ್ಲಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 01-07-2021 ರಂದು 17-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 61/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಮಂಜುಳಾ ಕೋಂ. ಪ್ರಕಾಶ ದೇಸಾಯಿ, ಸಾ|| ಗಣೇಶ ಗಲ್ಲಿ, ರಾಮನಗರ, ತಾ: ಜೋಯಿಡಾ. ನಮೂದಿತ ಆರೋಪಿತಳ ಮನೆಯೂ ಪಿರ್ಯಾದಿಯವರ ಮನೆಯ ಬದಿಯಲ್ಲಿ ಇದ್ದು, ದಿನಾಂಕ: 15-06-2021 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿಯವರು ತಮ್ಮ ಮನೆಯಲ್ಲಿ ಇರುವಾಗ ಆರೋಪಿತಳು ತಮ್ಮ ಹಾಗೂ ಪಿರ್ಯಾದಿಯವರ ಮನೆಗಳ ಮಧ್ಯದ ಬೇಲಿಯನ್ನು ಸರಿ ಮಾಡುತ್ತಿರುವಾಗ ಪಿರ್ಯಾದಿಯವರು ‘ಬೇಲಿಯನ್ನು ಪೂರ್ತಿಯಾಗಿ ತೆಗೆಯಬೇಡಿ. ದನ-ಕರುಗಳು ಒಳಗೆ ಬರುತ್ತವೆ’ ಅಂತಾ ಹೇಳಿದಾಗ ‘ಹೇ ರಾಂಡೆ, ಬೋಸಡಿ, ಇದನ್ನು ಕೇಳಲು ನೀನು ಯಾರು?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಅಲ್ಲಿಯೇ ಬೇಲಿಯ ಹತ್ತಿರ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಪಿರ್ಯಾದಿಗೆ ಬೀಸಿ ಹೊಡೆದಿದ್ದು, ಅವಳು ಹೊಡೆದ ಕಲ್ಲು ಪಿರ್ಯಾದಿಯವರ ಬಲಗಾಲಿನ ಹಿಮ್ಮಡಿ ಭಾಗದಲ್ಲಿ ತಾಗಿ ಒಳನೋವು ಆಗಿದ್ದು, ಅಷ್ಟಕ್ಕೆ ಸುಮ್ಮನಾಗದ ಆರೋಪಿತಳು ‘ಇಲ್ಲಿ ಮತ್ತೆ ಬೇಲಿ ವಿಷಯಕ್ಕೆ ಏನನ್ನಾದರೂ ಹೇಳುತ್ತಾ ಬಂದರೆ ಕಲ್ಲಿನಿಂದ ತಲೆಗೆ ಹೊಡೆದು ಕೊಂದು ಹಾಕುತ್ತೇನೆ’ ಅಂತಾ ಬೆದರಿಕೆಯನ್ನು ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಸಂಧ್ಯಾ ಕೋಂ. ದೀಪಕ ಮಜಗಾಂವಕರ, ಪ್ರಾಯ-28 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಗಣೇಶ ಗಲ್ಲಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 01-07-2021 ರಂದು 18-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 01-07-2021
at 00:00 hrs to 24:00 hrs
ಹೊನ್ನಾವರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 60 ರಿಂದ 70 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 01-07-2021 ರಂದು 06-00 ಗಂಟೆಯ ಪೂರ್ವದಲ್ಲಿ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಹತ್ತಿರ ಶರಾವತಿ ನದಿಯಲ್ಲಿ ಬರ್ಹಿದೆಸೆಗೋ ಅಥವಾ ಬೇರೇ ಯಾವುದೋ ಕಾರಣಕ್ಕೆ ಹೋದವನು, ನದಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಇರುತ್ತದೆ. ಕಾರಣ ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಗದೀಶ ತಂದೆ ಈಶ್ವರ ತಾಂಡೇಲ, ಪ್ರಾಯ-35 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಟೊಂಕಾ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 01-07-2021 ರಂದು 07-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======