ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-06-2021

at 00:00 hrs to 24:00 hrs

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 269, 270 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಬಾಬು ತಂದೆ ಈರಯ್ಯ ನಾಯ್ಕ, ಪ್ರಾಯ-55 ವರ್ಷ, ಸಾ|| ಮಂಕಿ, ದೊಡ್ಡ ಗುಂದ, ತಾ: ಹೊನ್ನಾವರ. ಈತನು ದಿನಾಂಕ: 01-06-2021 ರಂದು 20-00 ಗಂಟೆಗೆ ಮಂಕಿಯ ದೊಡ್ಡಗುಂದದಲ್ಲಿ ತನ್ನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಅಬಕಾರಿ ಸ್ವತ್ತುಗಳನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ತನ್ನ ಲಾಭಕ್ಕೋಸ್ಕರ ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ, ದಾಳಿಯ ವೇಳೆ 1). 180 ML ಅಳತೆಯ BAGPIPER ಕಂಪನಿಯ ಸರಾಯಿ ಪ್ಯಾಕೆಟ್ ಗಳು-38, ಅ||ಕಿ|| 4,036.74/- ರೂಪಾಯಿ, 2). 90 ML ಅಳತೆಯ HAYWARD’S CCHEERS WHISKEY ಕಂಪನಿಯ ಸರಾಯಿ ಪ್ಯಾಕೆಟ್ ಗಳು-14, ಅ||ಕಿ|| 491.82/- ರೂಪಾಯಿ, 3). 90 ML ಅಳತೆಯ ORIGINAL CHOICE ಕಂಪನಿಯ ಸರಾಯಿ ಪ್ಯಾಕೆಟ್ ಗಳು-106 ಅ||ಕಿ|| 3,723.78/- ರೂಪಾಯಿ, 4). ರಟ್ಟಿನ ಬಾಕ್ಸ್ ಗಳು-3, ಅ||ಕಿ|| 00.00/- ರೂಪಾಯಿ ಹಾಗೂ 5). ನಗದು ಹಣ 600/- ರೂಪಾಯಿ. ಸದರಿ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 01-06-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದ್ ಅಬ್ದುಲ್ ಖಾದರ್ ಸಾಬ್, ಪ್ರಾಯ-46 ವರ್ಷ, ಸಾ|| ಐಸ್ ಫ್ಯಾಕ್ಟರಿ ಹತ್ತಿರ, ಫಿಶ್ ಇಂಡಿಯಾ ವೆಂಕಟಾಪುರ, ತಾ: ಭಟ್ಕಳ (ಹೀರೋ ಹೋಂಡಾ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-6673 ನೇದರ ಸವಾರ). ಈತನು ದಿನಾಂಕ: 30-05-2021 ರಂದು ಬೆಳಿಗ್ಗೆ 06-30 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಹೀರೋ ಹೋಂಡಾ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-6673 ನೇದರ ಹಿಂಬದಿಯಲ್ಲಿ ಮೀನು ಬಾಕ್ಸ್ ಕಟ್ಟಿಕೊಂಡು ಅತೀವೇಗವಾಗಿ ಚಲಾಯಿಸಿಕೊಂಡು ಭಟ್ಕಳದಿಂದ ಸಾಗರ ಕಡೆಗೆ ಹೋಗುತ್ತಿರುವಾಗ ಕುಂಟವಾಣೆ ಚೆಕ್ ಪೋಸ್ಟ್ ದಾಟಿ ಸುಮಾರು ಮುಂದೆ ಬಂದು ಹರಕೊಡ ರಸ್ತೆಯ ತಿರುವಿನಲ್ಲಿ ಒಮ್ಮೆಲೆ ರಸ್ತೆಯ ಮೇಲೆ ಮರ ಬಿದ್ದಿದರಿಂದ ಅದನ್ನು ತಪ್ಪಿಸಲು ಹೋಗಿ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಈ ಅಪಘಾತದಲ್ಲಿ ತನ್ನ ಬಲಗೈಗೆ ತೀವ್ರ ಗಾಯ ಪೆಟ್ಟು ಪಡಿಸಿಕೊಂಡು ಹೆಚ್ಚಿನ ಉಪಚಾರಕ್ಕೆ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಾದ ಬಗ್ಗೆ ಪಿರ್ಯಾದಿ ಶ್ರೀ ರಿಯಾಜ್ ತಂದೆ ಹಸನ್ ಅಬ್ದುಲ್ ಖಾದರ್, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಐಸ್ ಫ್ಯಾಕ್ಟರಿ ಹತ್ತಿರ, ಫಿಶ್ ಇಂಡಿಯಾ ವೆಂಕಟಾಪುರ, ತಾ: ಭಟ್ಕಳ ರವರು ದಿನಾಂಕ: 01-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 94/2021, ಕಲಂ: 147, 148, 269, 323, 324, 448, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಿಮ್ಮಪ್ಪ ಭೋವಿವಡ್ಡರ್, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂಕದಗುಂಡಿ, ತಾ: ಯಲ್ಲಾಪುರ, 2]. ಅಣ್ಣಪ್ಪ ಭೋವಿವಡ್ಡರ್, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂಕದಗುಂಡಿ, ತಾ: ಯಲ್ಲಾಪುರ, 3]. ಮಾರುತಿ ವಡ್ಡರ್, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂಕದಗುಂಡಿ, ತಾ: ಯಲ್ಲಾಪುರ, 4]. ಕಿರಣ ಬಾಂದಿ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂಕದಗುಂಡಿ, ತಾ: ಯಲ್ಲಾಪುರ, 5]. ತಿಮ್ಮಣ್ಣ ಭೋವಿವಡ್ಡರ್, ಪ್ರಾಯ-53 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂಕದಗುಂಡಿ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 4 ಮತ್ತು 6 ನೇಯವರು ಗಾಯಾಳು ಸಾಕ್ಷಿದಾರ ಶ್ರೀ ಸಜ್ಜಿ ಮೋಹನ ರವರ ಮನೆಗೆ ಆಗಾಗ ಕೂಲಿ ಕೆಲಸಕ್ಕೆ ಬರುತ್ತಿದ್ದರಿಂದ ಈ ಹಿಂದೆ ಸಾಕ್ಷಿದಾರ ಶ್ರೀ ಸಜ್ಜಿ ಮೋಹನ ರವರ ಮನೆಯ ಹಿಂದೆ ಇಟ್ಟಿದ್ದ ಡ್ರಿಲ್ ಮಶೀನ್ ಕಾಣೆಯಾದಾಗ ಸಾಕ್ಷಿದಾರ ಶ್ರೀ ಸಜ್ಜಿ ಮೋಹನ ರವರು ದಿನಾಂಕ: 25-05-2021 ರಂದು ಆರೋಪಿ 4 ಮತ್ತು 6 ನೇಯವರಿಗೆ ಡ್ರಿಲ್ ಮಶೀನ್ ತೆಗೆದುಕೊಂಡು ಹೋದಲ್ಲಿ ತಂದು ಕೊಡಲು ಕೇಳಿಕೊಂಡಾಗ ಸಿಟ್ಟಾದ ಆರೋಪಿ 4 ಮತ್ತು 6 ನೇಯವರು ಅದೇ ದಿನ ರಾತ್ರಿ 09-45 ಗಂಟೆಗೆ ನಮೂದಿತ ಇತರೆ ಆರೋಪಿತರಿಗೆ ಸಾಕ್ಷಿದಾರ ಶ್ರೀ ಸಜ್ಜಿ ಮೋಹನ ರವರ ಮನೆಯ ಹತ್ತಿರ ಕರೆದು ಆರೋಪಿತರೆಲ್ಲರೂ ಸೇರಿ ಸರ್ಕಾರದ ಲಾಕಡೌನ್ ಆದೇಶ ಉಲ್ಲಂಘಿಸಿ ಗೈರ್ ಕಾಯ್ದೆಶೀರ್ ಮಂಡಳಿಯಾಗಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾಕ್ಷಿದಾರ ಶ್ರೀ ಸಜ್ಜಿ ಮೋಹನ ರವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ‘ಸೂಳೆ ಮಗನೇ, ಹೊರಗಿನಿಂದ ಬಂದು ದಾದಾಗಿರಿ ಮಾಡುತ್ತೀಯಾ? ನಮ್ಮ ಮೇಲೆ ಕಳ್ಳತನದ ಆರೋಪ ಹೊರಿಸುತ್ತೀಯಾ?’ ಅಂತಾ ಅವಾಚ್ಯವಾಗಿ ಬೈಯ್ದು, ಮನೆಯಲ್ಲಿ ಇದ್ದ ಮನೆ ಬಳಕೆ ಸಾಮಾನುಗಳನ್ನು ಜಖಂಗೊಳಿಸಿ, ಸಾಕ್ಷಿದಾರ ಶ್ರೀ ಸಜ್ಜಿ ಮೋಹನ ರವರಿಗೆ ಲುಕ್ಸಾನ್ ಪಡಿಸಿ, ಅವರಿಗೆ ಬಾಟಲಿಯಿಂದ, ರಾಡಿನಿಂದ ಹಾಗೂ ಕೈಯಿಂದ ಹಲ್ಲೆ ಮಾಡಿ, ಸಾದಾ ಗಾಯನೋವು ಪಡಿಸಿ ‘ಈ ದಿನ ಉಳಿದುಕೊಂಡೆ. ಇನ್ನೊಂದು ದಿನ ಸಿಗು. ನಿನಗೆ ಕೊಲೆ ಮಾಡುತ್ತೇವೆ’ ಅಂತಾ ಕೊಲೆ ಮಾಡುವ ಬೆದರಿಕೆ ಹಾಕಿದ್ದು, ಸದ್ರಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಮನೀಶ್ ತಂದೆ ಮಣಿ ನಾಯರ್, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಮ್ಮಚಗಿ, ತಾ: ಯಲ್ಲಾಪುರ ರವರು ದಿನಾಂಕ: 01-06-2021 ರಂದು 20-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 489(ಬಿ), 489(ಸಿ) ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕಿರಣ ಮಧುಕರ ದೇಸಾಯಿ, ಪ್ರಾಯ-40 ವರ್ಷ, ಸಾ|| ರತ್ನಗಿರಿ, ಮಹಾರಾಷ್ಟ್ರ, 2]. ಗಿರೀಶ ಲಿಂಗಪ್ಪ ಪೂಜಾರಿ, ಪ್ರಾಯ-42 ವರ್ಷ, ಸಾ|| ರತ್ನಗಿರಿ, ಮಹಾರಾಷ್ಟ್ರ, 3]. ಶಬ್ಬೀರ್ ಕುಟ್ಟಿ, ಸಾ|| ದಾಂಡೇಲಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರು ಆರೋಪಿ 3 ನೇಯವನಿಂದ ಮುದ್ರಿಸಿದ್ದ ಖೋಟಾ ನೋಟುಗಳನ್ನು ಮಹಾರಾಷ್ಟ್ರದಲ್ಲಿ ಚಲಾವಣೆ ಮಾಡಿ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಬಿಳಿ ಬಣ್ಣದ ಸುಜುಕಿ ಸ್ವಿಫ್ಟ್ ಡಿಸೈರ್ ಕಾರ್ ನಂ: ಕೆ.ಎ.-36/ಎನ್-1100 ನೇದರಲ್ಲಿ 500/- ರೂಪಾಯಿ ಮುಖಬೆಲೆಯ ತಲಾ 100 ನೋಟುಗಳ 09 ಕಟ್ಟು ಅಸಲಿ ನೋಟುಗಳು, ಅದರ ಬೆಲೆ 4,50,000/- ರೂಪಾಯಿ ಹಾಗೂ 500/- ರೂಪಾಯಿ ಮುಖಬೆಲೆಯ ತಲಾ 100 ನೋಟುಗಳ 18 ಕಟ್ಟು ನಕಲಿ ನೋಟುಗಳು, ಅದರ ಬೆಲೆ 9,00,000/- ರೂಪಾಯಿ ಗಳನ್ನು ಸಾಗಾಣಿಕೆ ಮಾಡುತ್ತಿರುವಾಗ ದಿನಾಂಕ: 01-06-2021 ರಂದು 14-00 ಗಂಟೆಗೆ ಠಾಣಾ ವ್ಯಾಪ್ತಿಯ ಬರ್ಚಿ ಚೆಕ್ ಪೋಸ್ಟ್ ನಲ್ಲಿ ದಾಳಿಯ ವೇಳೆ ಆರೋಪಿ 1 ಮತ್ತು 2 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3 ನೇಯವನು ಓಡಿ ಹೋಗಿ ತಪ್ಪಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ.ಆರ್. ಗಡ್ಡೇಕರ, ಪಿ.ಎಸ್.ಐ (ಕಾ&ಸು), ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 01-06-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 269, 270 ಐಪಿಸಿ ಹಾಗೂ ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಾಜಕುಮಾರ ತಂದೆ ಜಗನ್ನಾಥ ಶೇಟ್, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಿಲವಳ್ಳಿ, ತಾರಖಂಡ ಗ್ರಾಮ, ತಾ: ಸಿದ್ದಾಪುರ. ಈತನು ದಿನಾಂಕ: 01-06-2021 ರಂದು 10-00 ಗಂಟೆಗೆ ಸಿದ್ದಾಪುರ ತಾಲೂಕಿನ ತಾರಖಂಡ ಗ್ರಾಮದ ಕಿಲವಳ್ಳಿ ಊರಿನಲ್ಲಿರುವ ತನ್ನ ಮನೆಯ ಎದುರಿನ ಅಂಗಳದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೊರೋನಾ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾನ್ಯ ಕರ್ನಾಟಕ ಸರ್ಕಾರ, ಬೆಂಗಳೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಹೊರಡಿಸಿದ ನಿಯಮಗಳನ್ನು ಉಲ್ಲಂಘಿಸಿ, ಮುಖಕ್ಕೆ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯ ಸಂಭವವಿದ್ದರೂ ಸಹ ನಿರ್ಲಕ್ಷ್ಯತನದಿಂದ ಸಾರ್ವಜನಿಕ ಸ್ಥಳದಲ್ಲಿ ಜನರನ್ನು ಗುಂಪು ಸೇರಿಸಿಕೊಂಡು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು, 2). 2 ಪ್ಲಾಸ್ಟಿಕ್ ಗ್ಲಾಸುಗಳು. 3). Original Choice Deluxe Whisky 90 ML ಅಂತಾ ಬರೆದ 3 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ಕ್ರೈಂ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 01-06-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 269, 270 ಐಪಿಸಿ ಹಾಗೂ ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾರಾಯಣ ತಂದೆ ಕನ್ನಾ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೆಮ್ಮನಬೈಲ್, ಸೊವಿನಕೊಪ್ಪಾ, ತಾ: ಸಿದ್ದಾಪುರ. ಈತನು ದಿನಾಂಕ: 01-06-2021  ರಂದು 10-45 ಗಂಟೆಗೆ ಸಿದ್ದಾಪುರ ತಾಲೂಕಿನ ಹೆಮ್ಮನಬೈಲಿನಲ್ಲಿ ತನ್ನ ಮನೆಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಕೊರೋನಾ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾನ್ಯ ಕರ್ನಾಟಕ ಸರ್ಕಾರ, ಬೆಂಗಳೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಹೊರಡಿಸಿದ ನಿಯಮಗಳನ್ನು ಉಲ್ಲಂಘಿಸಿ, ಮುಖಕ್ಕೆ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಜನರನ್ನು ಗುಂಪು ಸೇರಿಸಿಕೊಂಡು ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). CAPTAIN MARTINS SPECIAL WHISKY90 ML ಅಂತಾ ಬರೆದ ಮದ್ಯ ತುಂಬಿದ 4 ಪೌಚ್ ಗಳು,  2). 2 ಪ್ಲಾಸ್ಟಿಕ್ ಗ್ಲಾಸುಗಳು, 3). CAPTAIN MARTINS SPECIAL WHISKY 90 ML ಅಂತಾ ಬರೆದ 3 ಮದ್ಯದ ಖಾಲಿ ಪೌಚ್ ಗಳು. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 01-06-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-06-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗುರುಸಿದ್ದಪ್ಪ ತಂದೆ ಫಕೀರಕ್ಕ ದೊಡ್ಮನಿ, ಪ್ರಾಯ-28 ವರ್ಷ, ಸಾ|| ಮುರರ ಹಳ್ಳಿ ಆದರಗುಂಚಿ, ಹುಬ್ಬಳ್ಳಿ, ಹಾಲಿ ಸಾ|| ಸಾಯಿಶ್ರೀ ಪ್ಲಾಜಾ ಕಟ್ಟಡ, ಕಾಜುಬಾಗ, ಕಾರವಾರ. ಈತನು ದಿನಾಂಕ: 31-05-2021 ರಂದು ಸಾಯಿಶ್ರೀ ಕಟ್ಟಡದಲ್ಲಿ ಕೆಲಸ ಮಾಡಲು ಬಂದಿದ್ದವನು, ಕಟ್ಟಡದ ಮಹಡಿಯಲ್ಲಿಯೇ ರಾತ್ರಿ ಉಳಿದುಕೊಂಡಿದ್ದನು. ದಿನಾಂಕ: 01-06-2021 ರಂದು ಮಧ್ಯಾಹ್ನ 14-45 ಗಂಟೆಗೆ ಸಾಯಿಶ್ರೀ ಕಟ್ಟಡದಲ್ಲಿ ನಡೆದಾಡುವಾಗ ಹೇಗೋ ಆಯ ತಪ್ಪಿ ಆಕಸ್ಮಿಕವಾಗಿ ಕಟ್ಟಡದ 2 ನೇ ಮಹಡಿಯಿಂದ ನೆಲ ಮಹಡಿಯ ಮೇಲೆ ಬಿದ್ದು, ತಲೆಗೆ ಹಾಗೂ ಕಾಲಿಗೆ ತೀವ್ರ ಗಾಯನೋವನ್ನುಂಟು ಪಡಿಸಿಕೊಂಡವನನ್ನು ಕೂಡಲೇ ಚಿಕಿತ್ಸೆಯ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ, ಕಾರವಾರಕ್ಕೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಸದರಿ ಮೃತನು ಆಸ್ಪತ್ರೆಗೆ ಚಿಕಿತ್ಸೆಗೆ ತರುವ ಪೂರ್ವದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಅನ್ವರ್ ತಂದೆ ಬಾಹುದ್ದೀನ್ ಬಂಕಾಪುರ, ಪ್ರಾಯ-42 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಚಂದಾ ಅಂಗಡಿ ಹತ್ತಿರ, ಸರ್ವೋದಯ ನಗರ, ಕೋಡಿಬಾಗ, ಕಾರವಾರ ರವರು ದಿನಾಂಕ: 01-06-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಬಸವರಾಜ ತಂದೆ ಬಾಲಪ್ಪ ಗೌಳಿ, ಪ್ರಾಯ-36 ವರ್ಷ, ವೃತ್ತಿ-ಹೈನುಗಾರಿಕೆ, ಸಾ || ಗಣೇಶ ನಗರ, ತಾ: ಮುಂಡಗೋಡ. ಸುದ್ದಿದಾರನ ಅಣ್ಣನಾದ ಈತನು ಆಗಾಗ ಹೊಟ್ಟೆಯ ನೋವು ಬರುತ್ತಿದ್ದರಿಂದ ಮನೆಯಲ್ಲಿ ಮದ್ದು ಮಾಡಿಕೊಳ್ಳುತ್ತಿದ್ದವನು, ತನಗಿದ್ದ ಹೊಟ್ಟೆನೋವು ಕಡಿಮೆಯಾಗಲಿಲ್ಲ ಅಂತಾ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 31-05-2021 ರಂದು ಮಧ್ಯಾಹ್ನ 01-30 ಗಂಟೆಯಿಂದ ದಿನಾಂಕ: 01-06-2021 ರಂದು ಬೆಳಗ್ಗೆ 06-30 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ-ಹುಬ್ಬಳ್ಳಿ ರಸ್ತೆಯ ಶುಂಠಿ ತೊಳೆಯುವ ಮಶಿನ್ ಪಕ್ಕದ ಅರಣ್ಯದಲ್ಲಿ ಸಾಗವಾನಿ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಬಾಲಪ್ಪ ಗೌಳಿ, ಪ್ರಾಯ-32 ವರ್ಷ, ವೃತ್ತಿ-ಬ್ಯಾಂಕ್ ಕೆಲಸ, ಸಾ|| ಗಣೇಶ ನಗರ, ತಾ: ಮುಂಡಗೋಡ ರವರು ದಿನಾಂಕ: 01-06-2021 ರಂದು 07-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 02-06-2021 12:18 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080