ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-03-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ರಾಬಿಯಾ ಕೋಂ. ಖಲೀಲ್ ಚಾವಡಿಕರ, ಪ್ರಾಯ-23 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಿರ್ಜಾನ, ತಾ: ಕುಮಟಾ. ಪಿರ್ಯಾದಿಯ ಹೆಂಡತಿಯಾದ ಇವಳು ಕಳೆದ ಒಂದು ವರ್ಷದ ಹಿಂದೆ ದಿನಾಂಕ: 15-03-2020 ರಂದು ಬೆಳಿಗ್ಗೆ ಪಿರ್ಯಾದಿಯವರು ಮೀನುಗಾರಿಕೆ ಕೆಲಸಕ್ಕೆ ಕುಮಟಾಕ್ಕೆ ಹೋಗಿದ್ದ ವೇಳೆಯಲ್ಲಿ ಮನೆಯಲ್ಲಿದ್ದ ಪಿರ್ಯಾದಿಯ ಹೆಂಡತಿ ಶ್ರೀಮತಿ ರಾಬಿಯಾ ಇವಳು ಮನೆಯಿಂದ ಮಿರ್ಜಾನ ಪೇಟೆಗೆ ಹೋಗಿ ಬಟ್ಟೆ ಖರೀದಿ ಮಾಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೋದವಳು, ವಾಪಸ್ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಸಹ ಹೋಗದೇ, ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಖಲೀಲ್ ತಂದೆ ಇಸಾಕ್ ಚಾವಡಿಕರ, ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಪಡವಣಿ, ತಾ: ಕುಮಟಾ ರವರು ದಿನಾಂಕ: 01-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಆಸ್ಮಾ ಕೋಂ. ಮುರ್ತುಜಾ ಸಂಶಿ, ಪ್ರಾಯ-22 ವರ್ಷ, ವೃತ್ತಿ-ಗೃಹಿಣಿ, ಸಾ|| ನೂರಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ಮನೆಯಲ್ಲಿ ಎಲ್ಲರೊಂದಿಗೆ ಒಳ್ಳೆಯ ರೀತಿಯಿಂದ ಇದ್ದವಳು, ದಿನಾಂಕ: 01-03-2021 ರಂದು ಮಧ್ಯಾಹ್ನ 13-00 ಗಂಟೆಯ ಸುಮಾರಿಗೆ ಮನೆಯಿಂದ ಎಲ್ಲಿಯೋ ಹೋದವಳು ಸಂಬಂಧಿಕರ ಮನೆಗೂ ಹೋಗದೇ ಮನೆಗೂ ಮರಳಿ ಬಾರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರಹೀಲಾ ಭಾನು ಕೋಂ. ಅಬುಬಕ್ಕರ್ ಸಾಬ್, ಪ್ರಾಯ-45 ವರ್ಷ, ವೃತ್ತಿ-ಗೃಹಿಣಿ, ಸಾ|| ನೂರಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ ರವರು ದಿನಾಂಕ: 01-03-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೊಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶರಣಪ್ಪ ತಂದೆ ಶೇಖಪ್ಪ ಹುಬ್ಬಳ್ಳಿ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ನಾಗರಹಳ್ಳಿ, ತಾ: ಅಣ್ಣಗೇರಿ, ಜಿ: ಧಾರವಾಡ (ಟ್ರ್ಯಾಕ್ಟರ್ ನಂ: ಕೆ.ಎ-32/ಟಿ-7629 ಹಾಗೂ ಟ್ರೇಲರ್ ನಂ: ಕೆ.ಎ-25/ಟಿ-9108 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 01-03-2021 ರಂದು 12-45 ಗಂಟೆಗೆ ತನ್ನ ಬಾಬ್ತು ಟ್ರ್ಯಾಕ್ಟರ್ ನಂ: ಕೆ.ಎ-32/ಟಿ-7629 ಹಾಗೂ ಟ್ರೇಲರ್ ನಂ: ಕೆ.ಎ-25/ಟಿ-9108 ನೇದನ್ನು ಜೊಯಿಡಾ ಕಡೆಯಿಂದ ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಜೊಯಿಡಾ ತಾಲೂಕಿನ ಚಾಪೋಲಿ ಕ್ರಾಸ್ ಹತ್ತಿರ ಜೊಯಿಡಾ-ದಾಂಡೇಲಿ ರಾಜ್ಯ ರಸ್ತೆಯ ಮೇಲೆ ರಸ್ತೆಯ ತಿರುವಿನಲ್ಲಿ ತನ್ನ ಟ್ರ್ಯಾಕ್ಟರನ್ನು ಪಲ್ಟಿ ಮಾಡಿ ಅಪಘಾತ ಪಡಿಸಿ, ತನ್ನ ಟ್ರ್ಯಾಕ್ಟರಿನಲ್ಲಿ ಪ್ರಯಾಣ ಮಾಡುತ್ತಿದ್ದ ಒಟ್ಟು 19 ಜನರಿಗೆ ಭಾರೀ ರಕ್ತದ ಗಾಯನೋವುಂಟು ಪಡಿಸಿ, ತನ್ನ ವಾಹನವನ್ನು ಜಖಂ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಕಲ್ಲನಗೌಡ ತಂದೆ ಬಸನಗೌಡ ವೆಂಕಣ್ಣಗೌಡರ, ಪ್ರಾಯ-38 ವರ್ಷ, ವೃತ್ತಿ-ವ್ಯವಸಾಯ, ಸಾ|| ಕಬ್ಬೆನೂರು, ತಾ&ಜಿ: ಧಾರವಾಡ ರವರು ದಿನಾಂಕ: 01-03-2021 ರಂದು 13-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 279, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಕಾರ್ ನಂ: ಟಿ.ಎನ್-99/ಎ-3353 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 28-02-2021 ರಂದು 07-50 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಜಮಗುಳಿ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ತನ್ನ ಬಾಬ್ತು ಕಾರ್ ನಂ: ಟಿ.ಎನ್-99/ಎ-3353 ನೇದನ್ನು ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಸೈಡ್ ಬಿಟ್ಟು ಬಂದು ಹಳಿಯಾಳ ಕ್ರಾಸ್ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-9029 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಯೊಗೇಶ ತಂದೆ ಗಣಪತಿ ಮರಾಠಿ, ಪ್ರಾಯ-37 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕನ್ನಡಗಲ್ ಗ್ರಾಮ, ತಾ: ಯಲ್ಲಾಪುರ ಇವರಿಗೆ ಎಡಗೈಗೆ ಹಾಗೂ ಎಡಗಾಲಿಗೆ ಭಾರೀ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಕಾರ್ ಚಾಲಕನು ಸ್ಥಳದಿಂದ ಓಡಿ ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಓಮಣ್ಣ ಮರಾಠಿ, ಪ್ರಾಯ-47 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗೊಸ್ಮನೆ, ಬೆಳಗೇರಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 01-03-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಇರ್ಷಾದ್ ತಂದೆ ಜಾಫರಸಾಬ್ ಚೌದರಿ, ಪ್ರಾಯ-26 ವರ್ಷ, ವೃತ್ತಿ-ಚಿಕನ್ ವ್ಯಾಪಾರ, ಸಾ|| ಧಾರವಾಡ ಗಲ್ಲಿ, ಹಳೇ ದಾಂಡೇಲಿ, 2]. ನಜೀರ್ ತಂದೆ ಇಮಾಮ್ ಹುಸೇನ್ ಪಾಚಾಪುರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| 3 ನಂಬರ್ ಗೇಟ್ ಹತ್ತಿರ, ದಾಂಡೇಲಿ, 3]. ದಾದಾಪೀರ್ ತಂದೆ ಶೌಕತ್ ಅಲಿ ಮುರ್ತುಜಾ, ಪ್ರಾಯ-44 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಬಸ್ ಡಿಪೋ ಹತ್ತಿರ, ಹಳೇ ದಾಂಡೇಲಿ, 4]. ರಾಜು, ಸಾ|| ಪಟೇಲ್ ನಗರ, 5]. ಇರ್ಮಾನ್ @ ಇಮ್ಯಾ, ಸಾ|| ಪಟೇಲ್ ನಗರ, ದಾಂಡೇಲಿ, 6]. ಬಬ್ಲು, ಸಾ|| ಗಾಂಧಿನಗರ, ದಾಂಡೇಲಿ. ಈ ನಮೂದಿತ ಆರೋಪಿತರು ದಿನಾಂಕ: 01-03-2021 ರಂದು 20-00 ಗಂಟೆಗೆ ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಐ.ಪಿ.ಎಮ್ ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಹಾಗೂ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿ ಅಂದರ್-ಬಾಹರ್ ಜುಗಾರಾಟವನ್ನು ನಡೆಸುತ್ತಾ, ಅಂದರ್-ಬಾಹರ್ ಜುಗಾರಾಟದ ಸಾಧನ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ಕ್ಯಾಂಡಲ್-02, ನಗದು ಹಣ 5,150/- ರೂಪಾಯಿಯ ಸಮೇತ ದಾಳಿಯ ಕಾಲಕ್ಕೆ ಆರೋಪಿ 1 ರಿಂದ 3 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 4 ರಿಂದ 6 ನೇಯವರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಹಾದೇವಿ ಜಿ. ನಾಯ್ಕೋಡಿ, ಪಿ.ಎಸ್.ಐ (ಕ್ರೈಂ), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 01-03-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-03-2021

at 00:00 hrs to 24:00 hrs

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತರು 1]. ದತ್ತಾ ತಂದೆ ರಾಮ ಶೇಟ್, ಪ್ರಾಯ-69 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗುತ್ತಿಮನೆ, ಪೋ: ಕಾನಗೋಡ, ತಾ: ಸಿದ್ದಾಪುರ, 2]. ಶ್ರೀಮತಿ ಪದ್ಮಾವತಿ ಕೋಂ. ದತ್ತಾ ಶೇಟ್, ಪ್ರಾಯ-58 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಗುತ್ತಿಮನೆ, ಪೋ: ಕಾನಗೋಡ, ತಾ: ಸಿದ್ದಾಪುರ. ಈ ನಮೂದಿತ ಮೃತರಲ್ಲಿ 1 ನೇಯವರು ಪಿರ್ಯಾದಿಯ ತಂದೆಯಾಗಿದ್ದು ಹಾಗೂ 2 ನೇಯವರು ತಾಯಿಯವರಾಗಿರುತ್ತಾರೆ. ಮೃತರು ಪರಸ್ಪರ ಅನ್ಯೋನ್ಯತೆಯಿಂದ ಇದ್ದವರು, ವಯೋಸಹಜ ಖಾಯಿಲೆಗಳಾದ ಬಿ.ಪಿ, ಶುಗರ್, ಮಂಡಿ ನೋವಿನಿಂದ ಬಳಲುತ್ತಿದ್ದವರು. ಅದರಲ್ಲೂ ತಂದೆಯು ವಿಪರೀತ ಮಂಡಿ ನೋವಿನಿಂದ ಬಳಲುತ್ತಾ ಅದರಿಂದ ಮನನೊಂದು ಜಿಗುಪ್ಸೆಯ ಮಾತನಾಡುತ್ತಿದ್ದರು. ತಂದೆ ಹಾಗೂ ತಾಯಿಯು ಅವರಿಗಿದ್ದ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದವರು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಇಬ್ಬರೂ ಪರಸ್ಪರ ಮಾತಾಡಿಕೊಂಡು ದಿನಾಂಕ: 28-02-2021 ರಂದು 23-30 ಗಂಟೆಯಿಂದ ದಿನಾಂಕ: 01-03-2021 ರಂದು 07-20 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಜಗಲಿಯ ತೊಲೆಗೆ ಸೀರೆಯ ತುಂಡುಗಳನ್ನು ಕಟ್ಟಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮೀಶ ತಂದೆ ದತ್ತಾ ಶೇಟ್, ಪ್ರಾಯ-36 ವರ್ಷ, ವೃತ್ತಿ-ಅಕ್ಕಸಾಲಿಗ, ಸಾ|| ಗುತ್ತಿಮನೆ, ಪೋ: ಕಾನಗೋಡ, ತಾ: ಸಿದ್ದಾಪುರ ರವರು ದಿನಾಂಕ: 01-03-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 03-03-2021 01:52 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080