ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-05-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೋಮಯ್ಯ ಗೋಯ್ದು ಗೌಡ, ಸಾ|| ಬಿದ್ರಿಗೇರಿ ಗ್ರಾಮ, ಗೋಕರ್ಣ, ತಾ: ಕುಮಟಾ, 2]. ಶ್ರೀಧರ ಸೋಮಯ್ಯ ಗೌಡ, ಸಾ|| ಬಿದ್ರಿಗೇರಿ ಗ್ರಾಮ, ಗೋಕರ್ಣ, ತಾ: ಕುಮಟಾ, 3]. ತಿಮ್ಮಣ್ಣ ಸೋಮಯ್ಯ ಗೌಡ, ಸಾ|| ಗ್ರಾಮ, ಗೋಕರ್ಣ, ತಾ: ಕುಮಟಾ. ಈ ನಮೂದಿತ ಆರೋಪಿತರುಗಳು ಪಿರ್ಯಾದಿಯವರು ನಡೆದಾಡುವ ದಾರಿಯ ಕುರಿತು ಮೊದಲಿನಿಂದಲೂ ಜಗಳ ಮಾಡುತ್ತಾ ಬಂದವರು, ದಿನಾಂಕ: 30-04-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಪಿರ್ಯಾದಿಯವರ ತಾಯಿಯವರು ಮೀನಿನ ಮೂಳೆಗಳನ್ನು ಮನೆ ಪಕ್ಕದ ಫಾರೆಸ್ಟ್ ಜಾಗದಲ್ಲಿ ಹಾಕಲು ಹೋಗಿದ್ದಾಗ ಆರೋಪಿ 2 ನೇಯವನು ಪಿರ್ಯಾದಿಯ ತಾಯಿಗೆ ‘ಮೀನಿನ ಮೂಳೆಗಳನ್ನು ಹಾಕಬೇಡ, ಬೋಸಡಿ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು, ಆಗ ಪಿರ್ಯಾದಿಯವರು ಕೇಳಲು ಹೋದಾಗ ಆರೋಪಿ 2 ನೇಯವನು ‘ಬೋಳಿ ಮಗನೇ, ಈ ಜಾಗ ನಮ್ಮದು. ನಿನ್ನ ಅಪ್ಪಂದು ಅಲ್ಲಾ' ಅಂತಾ ಹೇಳಿದ್ದು, ಆಗ ಅಲ್ಲಿಗೆ ಬಂದ ಆರೋಪಿತರಾದ 1 ಮತ್ತು 3 ನೇಯವರು ತಾವು ತಂದಿದ್ದ ಕಟ್ಟಿಗೆಯ ದೊಣ್ಣೆಯಿಂದ ಪಿರ್ಯಾದಿಯ ಬೆನ್ನಿನ ಮೇಲೆ ಹಾಗೂ ಬಲಗೈ ಮೇಲೆ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ‘ಮತ್ತೆ ಈ ಜಾಗದಲ್ಲಿ ನಡೆದಾಡಿದರೆ ಕೊಂದು ಹಾಕುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಗೋಯ್ದು ತಂದೆ ಸಣ್ಣಕೂಸ ಗೌಡ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿದ್ರಿಗೇರಿ ಗ್ರಾಮ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 01-05-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2021, ಕಲಂ: 269, 271 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಮಾ ತಂದೆ ಮಾದೇವ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೈಲಗದ್ದೆ, ಉಪ್ಪೋಣಿ, ತಾ: ಹೊನ್ನಾವರ, 2]. ಮಹೇಶ ತಂದೆ ಮಾದೇವ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೈಲಗದ್ದೆ, ಉಪ್ಪೋಣಿ, ತಾ: ಹೊನ್ನಾವರ 3]. ಮಂಜುನಾಥ ಜಟ್ಟಿ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಉಪ್ಪೋಣಿ, ತಾ: ಹೊನ್ನಾವರ, 4]. ಮೋಹನ ತಂದೆ ಜಟ್ಟಿ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಲ್ಲೋಡಿ, ಮಹಿಮೆ ಗ್ರಾಮ, ತಾ: ಹೊನ್ನಾವರ, 5]. ಗಣಪತಿ ತಂದೆ ಈರಾ ಗೌಡ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪ್ಪೋಣಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಕೊರೋನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಘನ ಸರ್ಕಾರ ಲಾಕಡೌನ್ ಆದೇಶ ಮಾಡಿದ್ದರೂ ಸಹ, ಮುಖಕ್ಕೆ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಘನ ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ನಿರ್ಲಕ್ಷಿಸಿ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ, ದಿನಾಂಕ: 30-04-2021 ರಂದು ರಾತ್ರಿ 11-30 ಗಂಟೆಗೆ ಹೊನ್ನಾವರ ತಾಲೂಕಿನ ಹೆರಂಗಡಿ ಈಶ್ವರ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ, ಇಸ್ಪೀಟ್ ಅಂದರ್-ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಜೂಗಾರಾಟದ ಸಲಕರಣೆಗಳು ಹಾಗೂ ನಗದು ಹಣ 3,770/- ರೂಪಾಯಿಯ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 01-05-2021 ರಂದು 02-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 133/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ವಿಷ್ಣು ತಂದೆ ಪದ್ಮಯ್ಯ ಗೌಡ, ಪ್ರಾಯ-36 ವರ್ಷ, ವೃತ್ತಿ-ಮರಳು ತೆಗೆಯುವ ಕೂಲಿ ಕೆಲಸ, ಸಾ|| ಗದ್ದೆಮನೆ, ಮಾವಿನಕುರ್ವಾ, ತಾ: ಹೊನ್ನಾವರ. ಈತನು ಪಿರ್ಯಾದಿಯ ಬಾವನಾಗಿದ್ದು, ದಿನಾಂಕ: 01-5-2021 ರಂದು ಬೆಳಿಗ್ಗೆ ಪಿರ್ಯಾದಿಯು ಕೂಲಿ ಕೆಲಸದಲ್ಲಿದ್ದಾಗ ಸುಮಾರು 07-00 ಗಂಟೆಗೆ ಶ್ರೀ ಮಧುಕರ ಶಿವಯ್ಯ ಗೌಡ, ಸಾ|| ಗದ್ದೆಮನೆ, ಮಾವಿನಕುರ್ವಾ, ತಾ: ಹೊನ್ನಾವರ ಇವರು ಪಿರ್ಯಾದಿಗೆ ಕರೆ ಮಾಡಿ ವಿಷಯ ತಿಳಿಸಿದ್ದರಲ್ಲಿ ತನ್ನ ಬಾವನಾದ ನಮೂದಿತ ಕಾಣೆಯಾದ ಶ್ರೀ ವಿಷ್ಣು ಗೌಡ ಈತನು, ನಾನು (ಪಿರ್ಯಾದಿ) ಹಾಗೂ ಪ್ರಕಾಶ ಅಂತೋನ್ ಮಿರಾಂಡ, ಗಣಪತಿ ಗೋವಿಂದ ಅಂಬಿಗ, ಮಂಜುನಾಥ ಸಣ್ಣ ಕೂಸ ಗೌಡ, ಜನಾರ್ಧನ ಮಂಜು ಗೌಡ ಇವರೊಂದಿಗೆ ಸೇರಿ ಮಾವಿನಕುರ್ವಾದ ಶರಾವತಿ ನದಿಯಲ್ಲಿ ಅಧೀಕೃತ ಮರಳು ಸಂಗ್ರಹಕಾರರಾದ ವಾಮನ ವಿಷ್ಣು ಅಂಬಿಗ ಇವರ ಮರಳು ಸೈಟಿನಲ್ಲಿ ಮರಳು ಸಂಗ್ರಹ ಕೆಲಸಕ್ಕೆ ಹೋಗಿದ್ದಾಗ ನಾವು ರಮಾಕಾಂತ ಅಂಬಿಗ ಇವರ ಬೋಟಿನಲ್ಲಿ ಮರಳು ಸಂಗ್ರಹಿಸುವ ಸಲುವಾಗಿ ಶರಾವತಿ ನದಿಯಲ್ಲಿ ಹೋಗುತ್ತಿದ್ದಾಗ ವಿಷ್ಣು ಪದ್ಮಯ್ಯ ಗೌಡ, ಈತನು 06-30 ಗಂಟೆಯ ಸಮಯಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಶರಾವತಿ ನದಿಯಲ್ಲಿ ಬಿದ್ದು ಮುಳುಗಿ ಕಾಣೆಯಾಗಿದ್ದು, ಹುಡುಕಾಡಿದರು ಪತ್ತೆಯಾಗಿದ್ದು ಇರುವುದಿಲ್ಲ, ಸದರಿ ಕಾಣೆಯಾದವನನ್ನು ಪತ್ತೆ ಮಾಡಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಾಯ ತಂದೆ ಚುಂಡಾ ಗೌಡ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೊಂದಿಹಿತ್ತಲು, ಮಾವಿನಕುರ್ವಾ, ತಾ: ಹೊನ್ನಾವರ ರವರು ದಿನಾಂಕ: 01-05-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 269, 270 ಐಪಿಸಿ ಮತ್ತು ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪುನೀತ್ ತಂದೆ ಮಳ್ಳಾ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಹೈನುಗಾರಿಕೆ, ಸಾ|| ಗಣೇಶನಗರ, ಯಲ್ವಡಿಕವೂರ, ತಾ: ಭಟ್ಕಳ. ಈತನು ದೇಶಾದ್ಯಂತ ನೊವೆಲ್ ಕೊರೋನಾ ಸಾಂಕ್ರಾಮಿಕ ರೋಗವು ತೀವ್ರವಾಗಿ ವ್ಯಾಪಿಸುವುದನ್ನು ಹಾಗೂ ಸುರಕ್ಷತಾ ಕ್ರಮವನ್ನು ಕೈಗೊಳ್ಳಲು ಮಾನ್ಯ ಸರ್ಕಾರದ ಪರವಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಯಾರೂ ಮನೆಯಿಂದ ಹೊರ ಬಾರದಂತೆ ಕೊರೋನಾ ಕರ್ಫ್ಯೂವನ್ನು (ಲಾಕಡೌನ್) ಜಾರಿಗೊಳಿಸಿದ್ದು, ಆದರೂ ಸಹ ಸದರಿ ಆರೋಪಿತನು ಮುಖಕ್ಕೆ ಯಾವುದೇ ಮಾಸ್ಕ್ ಅನ್ನು ಹಾಕದೇ ಮತ್ತು ಯಾವುದೇ ರಕ್ಷಣೆಯನ್ನು ಹೊಂದದೆ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡಲು ಉದ್ದೇಶಪೂರ್ವಕವಾಗಿ ಹಾಗೂ ಇತರರ ಪ್ರಾಣ ಹಾಗೂ ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಉದ್ದೇಶದಿಂದ ದಿನಾಂಕ: 01-05-2021 ರಂದು ಸಾಯಂಕಾಲ 18-00 ಗಂಟೆಯ ಸಮಯಕ್ಕೆ ಸರ್ಪನಕಟ್ಟಾದ ಕೋಣಾರ ರಸ್ತೆಯಲ್ಲಿರುವ ಕೃಷ್ಣಪ್ಪ ಮಂಜಯ್ಯ ನಾಯ್ಕ ಇವರಿಗೆ ಸೇರಿದ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ 1). HAYWARDS-90 ML ನ ಪ್ಯಾಕೆಟ್ ಗಳು–32, ಒಂದರ ಬೆಲೆ 35.13/- ರೂಪಾಯಿ ಇದ್ದು, ಒಟ್ಟು (35.13 X 32) 1,124.16/- ರೂಪಾಯಿ 2). OLD TAVERN-180 ML ಪ್ಯಾಕೆಟ್ ಗಳು-06, ಒಂದರ ಬೆಲೆ 86.75/- ರೂಪಾಯಿ ಇದ್ದು, ಒಟ್ಟು (86.75 X 6) 520.50/- ರೂಪಾಯಿಯ ಒಟ್ಟೂ 1,644.66/- ರೂಪಾಯಿ ಮೌಲ್ಯದ ಸರಾಯಿ ಪ್ಯಾಕೆಟ್ ಗಳನ್ನು ಒಂದು ರಟ್ಟಿನ ಬಾಕ್ಸಿದಲ್ಲಿ ಇಟ್ಟುಕೊಂಡು ಇವುಗಳನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೆ ಮಾರಾಟ ಮಾಡುತ್ತಿದ್ದಾಗ ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 01-05-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ಲಕ್ಷ್ಮಣ ನಾಯ್ಕ, ಸಾ|| ಕೃಷ್ಣಾಗಲ್ಲಿ, ರಾಮನಗರ, ತಾ: ಜೋಯಿಡಾ (ಕ್ರೇನ್ ವಾಹನ ನಂ: ಕೆ.ಎ-63/ಎಮ್-4943 ನೇದರ ಚಾಲಕ). ಈತನು ದಿನಾಂಕ: 01-05-2021 ರಂದು ಬೆಳಿಗ್ಗೆ 09-00 ಗಂಟೆಗೆ ತನ್ನ ಕ್ರೇನ್ ವಾಹನ ನಂ: ಕೆ.ಎ-63/ಎಮ್-4943 ನೇದನ್ನು ಜಗಲಬೇಟ ಕಡೆಯಿಂದ ಕ್ಯಾಸಲರಾಕ್ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಕ್ಯಾಸಲರಾಕ್-ಜಗಲಬೇಟ ರಸ್ತೆಯ ಕೊನಶೇತ್ ಕ್ರಾಸ್ ಹತ್ತಿರ ನೇರವಾದ ರಸ್ತೆಯಲ್ಲಿ ಎದುರುಗಡೆಯಿಂದ ಅಂದರೆ ಕ್ಯಾಸಲರಾಕ್ ಕಡೆಯಿಂದ ಶ್ರೀ ದಿಲೀಪ ಶಂಕರ ಗಾವಡೆ ಹಾಗೂ ಶ್ರೀಮತಿ ಪಾರ್ವತಿ ಶಂಕರ ಗಾವಡೆ ರವರು ಬರುತ್ತಿದ್ದ ಹೀರೋ ಪ್ಯಾಷನ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-5473 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಮೋಟಾರ್ ಸೈಕಲ್ ಚಲಿಸುತ್ತಿದ್ದ ಶ್ರೀ ದಿಲೀಪ ಶಂಕರ ಗಾವಡೆ ರವರಿಗೆ ಬಲಗಾಲಿನ ಮೊಣಗಂಟಿನ ಕೆಳಭಾಗದಲ್ಲಿ ಹಾಗೂ ಬಲಗೈ ಬೆರಳಿಗೆ ತೀವೃ ಸ್ವರೂಪದ ರಕ್ತಗಾಯ ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಮೇಲೆ ಹಿಂದುಗಡೆ ಕುಳಿತಿದ್ದ ಶ್ರೀಮತಿ ಪಾರ್ವತಿ ಶಂಕರ ಗಾವಡೆ ರವರಿಗೆ ಬಲಗೈ ಹಾಗೂ ಬೆನ್ನಿನ ಭಾಗದಲ್ಲಿ ಒಳ ಪೆಟ್ಟಾದ ಬಗ್ಗೆ ಪಿರ್ಯಾದಿ ಶ್ರೀ ನಿಶಾ ಕೋಂ. ದಿಲೀಪ ಗಾವಡೆ, ಪ್ರಾಯ-31 ವರ್ಷ, ವೃತ್ತಿ-ಗೃಹಿಣಿ, ಸಾ|| ಕಲಂಬುಲಿ, ಕ್ಯಾಸಲರಾಕ್, ತಾ: ಜೋಯಿಡಾ ರವರು ದಿನಾಂಕ: 01-05-2021 ರಂದು 17-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-05-2021

at 00:00 hrs to 24:00hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ.....

 

======||||||||======

 

 

 

 

ಇತ್ತೀಚಿನ ನವೀಕರಣ​ : 05-05-2021 04:39 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080