Daily District Crime Report
Date:- 01-11-2021
at 00:00 hrs to 24:00 hrs
ಕಾರವಾರ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 48/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯೋಗೇಂದ್ರ ತಂದೆ ಚೆನ್ನವೀರಪ್ಪ ತಳವಾರ, ಸಾ|| ಚಗಟೂರು, ಜಡೆ, ತಾ: ಸೊರಬಾ, ಜಿ: ಶಿವಮೊಗ್ಗ (ಮಹೀಂದ್ರಾ ಬೊಲೆರೋ ಪಿಕಅಪ್ ವಾಹನ ನಂ: ಕೆ.ಎ-31/ಎ-0603 ನೇದರ ಚಾಲಕ). ಈತನು ದಿನಾಂಕ: 01-11-2021 ರಂದು 15-45 ಗಂಟೆಯ ಸಮಯಕ್ಕೆ ತಾನು ಚಲಾಯಿಸುತ್ತಿದ್ದ ಮಹೀಂದ್ರಾ ಬೊಲೆರೋ ಪಿಕಅಪ್ ವಾಹನ ನಂ: ಕೆ.ಎ-31/ಎ-0603 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನೇದರ ಮೇಲೆ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಐಸ್ ಫ್ಯಾಕ್ಟರಿ ಚೆಂಡಿಯಾ ಹತ್ತಿರ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯವರ ಸಂಬಂಧಿಕರಾದ ಶ್ರೀ ಅಸ್ರಾರ್ ಅಹ್ಮದ್ ತಂದೆ ಇಬ್ರಾಹಿಮ್ ಶೇಖ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಕ್ಸ್-1580 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಶ್ರೀ ಅಸ್ರಾರ್ ಅಹ್ಮದ್ ತಂದೆ ಇಬ್ರಾಹಿಮ್ ಶೇಖ್ ಹಾಗೂ ಸಹ ಸವಾರ ಶ್ರೀ ನೌಮಾನ್ ತಂದೆ ಮುಜಪ್ಪರ್ ಅಲಿ ಸಯ್ಯದ್ ರವರಿಗೆ ತಲೆಗೆ, ಕಾಲಿಗೆ, ಕೈಗೆ ಸಾದಾ ಹಾಗೂ ತೀವೃ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಯ್ಯದ್ ಅಬ್ದುಲ್ ರಹೀಮ್ ತಂದೆ ಸಯ್ಯದ್ ಅಬ್ದುಲ್ ಗಫೂರ್, ಪ್ರಾಯ-50 ವರ್ಷ, ವೃತ್ತಿ-ಉಪನ್ಯಾಸಕರು ಸಾ|| ತಾರಿವಾಡಾ, ಸದಾಶಿವಗಡ, ಕಾರವಾರ ರವರು ದಿನಾಂಕ: 01-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 88/2021, ಕಲಂ: 447, 427, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಿಥುನ ತಂದೆ ಪಾಂಡುರಂಗ ತಾಂಡೇಲ, ಪ್ರಾಯ-38 ವರ್ಷ, ಸಾ|| ಫಿಶರೀಸ್ ಕಾಲೋನಿ, ಹಬ್ಬುವಾಡಾ, ಕಾರವಾರ. ಈತನು ದಿನಾಂಕ: 01-11-2021 ರಂದು ಮಧ್ಯಾಹ್ನ 15-30 ಘಂಟೆಗೆ ಹಬ್ಬುವಾಡಾದಲ್ಲಿರುವ ಪಿರ್ಯಾದಿಯ ಮನೆಯ ಎದುರುಗಡೆ ಕಂಪೌಂಡ್ ಗೋಡೆಗೆ ತನ್ನ ಗಂಡ-ಮನೋಹರ ಹಾಗೂ ಮಗ-ನಿಲೇಶ ಸೇರಿ ಪೇಂಟಿಂಗ್ ಮಾಡುತ್ತಿರುವಾಗ ಅವರಿಗೆ ಅವಾಚ್ಯ ಶಬ್ದದಿಂದ ಬೈಯ್ದು, ಪಿರ್ಯಾದಿಯ ಕಂಪೌಂಡ್ ಒಳಗೆ ಅತಿಕ್ರಮ ಪ್ರವೇಶ ಮಾಡಿ, ಕಬ್ಬಿಣದ ಹಾರಿಯಿಂದ ಗೋಡೆ ಕೆಡವಿ ಲುಕ್ಸಾನ್ ಪಡಿಸಿ ‘ಮತ್ತೇ ಗೋಡೆ ಕಟ್ಟಿದರೆ ಕೊಂದು ಹಾಕುತ್ತೇನೆ’ ಎನ್ನುವುದಾಗಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮನ್ ಮನೋಹರ ಹರಿಕಂತ್ರ, ಪ್ರಾಯ-52 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಶ್ರೀಧರ ನಿವಾಸ, ಫಿಶರೀಸ್ ಕಾಲೋನಿ, ಹಬ್ಬುವಾಡಾ, ಕಾರವಾರ ರವರು ದಿನಾಂಕ: 01-11-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 160/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಜೀತ್ ಎಮ್. ತಂದೆ ಸುರೇಶ ಬಾಬು, ಪ್ರಾಯ-22 ವರ್ಷ, ಸಾ|| ಗಾಂಧಿನಗರ, ಬಳ್ಳಾರಿ (ಕಾರ್ ನಂ: ಕೆ.ಎ-35/ಪಿ-2769 ನೇದರ ಚಾಲಕ). ಈತನು ದಿನಾಂಕ: 01-11-2021 ರಂದು 13-30 ಗಂಟೆಗೆ ತನ್ನ ಬಾಬ್ತು ಕಾರ್ ನಂ: ಕೆ.ಎ-35/ಪಿ-2769 ನೇದನ್ನು ಅಂಕೋಲಾ ತಾಲೂಕಿನ ವಜ್ರಳ್ಳಿಯಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಕಾರ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಎಡಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಯ ಎಡಗೈಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ, ಶ್ರೀ ಪ್ರಥ್ವಿರಾಜ ತಂದೆ ನಾಗೇಶ ಟಿ. ಆರ್, ಪ್ರಾಯ-22 ವರ್ಷ, ಸಾ|| ಹುಳಿಯಾರು, ತುಮಕೂರು ಇವರಿಗೆ ಕೈಗೆ ಮತ್ತು ಬೆನ್ನಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಕೂಡ ಎದೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೂರಜ್ ತಂದೆ ಸುನೀಲ ಗುಪ್ತಾ, ಪ್ರಾಯ-22 ವರ್ಷ, ವೃತ್ತಿ-ಸಾಪ್ಟವೇರ್ ಇಂಜಿನಿಯರ್, ಸಾ|| 3 ನೇ ಕ್ರಾಸ್, ಜೆ.ಪಿ ನಗರ, ಬಳ್ಳಾರಿ ರಸ್ತೆ, ತಾ: ಹೊಸಪೇಟೆ, ಜಿ: ಬಳ್ಳಾರಿ ರವರು ದಿನಾಂಕ: 01-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 286/2021, ಕಲಂ: 504, 306 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಜಾನನ ತಂದೆ ನಾರಾಯಣ ನಾಯ್ಕ, ಪ್ರಾಯ-ಅಂದಾಜು 45 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಮಾಗೋಡ, ತಾ: ಹೊನ್ನಾವರ. ಈತನು ಪಿರ್ಯಾದಿಯ ಅಕ್ಕನ ಮಗಳಾದ ಶ್ರೀಮತಿ ಮಮತಾ ಕೋಂ. ರಾಜೇಶ ನಾಯ್ಕ, ಪ್ರಾಯ-40 ವರ್ಷ, ಗೃಹಿಣಿ, ಸಾ|| ದೇವಸ್ಥಾನಕೇರಿ, ಕೆಳಗಿನ ಮಾಗೋಡ, ತಾ: ಹೊನ್ನಾವರ ಇವರನ್ನು ಉದ್ದೇಶಿಸಿ, ಇವಳಿಗೆ ಸಿಕ್ಕ ಸಿಕ್ಕಲ್ಲಿ ಕೆಟ್ಟ ಕೆಟ್ಟ ಶಬ್ದದಿಂದ ಬೈಯ್ದು, ‘ಮನೆ ಜಾಗದ ಸಲುವಾಗಿ ತಾನು ಏನು ಬೇಕಾದರೂ ಮಾಡುತ್ತೇನೆ’ ಅಂತಾ ಹೇಳಿ ಊರ ಜನರ ಹತ್ತಿರ ಇಲ್ಲ ಸಲ್ಲದ್ದನ್ನು ಹೇಳಿ ಮರ್ಯಾದೆ ತೆಗೆದು, ‘ನಿನ್ನ ಹೆಸರನ್ನು ಊರಿನಲ್ಲಿ ಹಾಳು ಮಾಡುತ್ತೇನೆ. ನಿನಗೆ ಬದುಕಲು ಬಿಡುವುದಿಲ್ಲ. ನೀನು ಕೊರಗಿ ಕೊರಗಿ ಸಾಯಬೇಕು’ ಅಂತಾ ಹೇಳಿ, ಸಾಯಲು ಪ್ರಚೋದಿಸಿದ್ದರಿಂದಲೇ ಅವಳು ಕೊರಗಿ ದಿನಾಂಕ: 21-10-2021 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಇಲಿ ಮದ್ದನ್ನು ಸೇವಿಸಿ ಅಸ್ವಸ್ಥಗೊಂಡು, ಚಿಕಿತ್ಸೆಗೆ ದಾಖಲಾದವಳು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 01-11-2021 ರಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ನಮೂದಿತ ಆರೋಪಿತನು ಮಮತಾಳಿಗೆ ಸಾಯಲು ಪ್ರಚೋದಿಸಿ ಅವಳ ಮರಣಕ್ಕೆ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ರಾಜೇಂದ್ರ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಬೇರಂಕಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 01-11-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿ.
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 131/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಂಜೀತ ತಂದೆ ಜ್ಞಾನೇಶ್ವರ ದೇಶಮುಖ, ಸಾ|| ಮಹಾರಾಷ್ಟ್ರ (ಕಾರ್ ನಂ: ಕೆ.ಎ-01/ಎಮ್.ಎಲ್-3063 ನೇದರ ಚಾಲಕ). ಈತನು ದಿನಾಂಕ: 31-10-2021 ರಂದು 21-00 ಗಂಟೆಯ ಸುಮಾರಿಗೆ ಮಂಕಿಯ ಜಡ್ಡಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ತಿರುವಿನಲ್ಲಿ ತನ್ನ ಕಾರ್ ನಂ: ಕೆ.ಎ-01/ಎಮ್.ಎಲ್-3063 ನೇದನ್ನು ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋದವನು, ರಸ್ತೆಯ ತಿರುವಿನಲ್ಲಿ ಕಾರಿನ ವೇಗವನ್ನು ನಿಯಂತ್ರಿಸಲಾಗದೇ, ಭಟ್ಕಳ ಕಡೆಯಿಂದ ಮಂಕಿ ಕಡೆಗೆ ಹೋಗಲು ತನ್ನ ಬದಿಯಿಂದ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-4436 ನೇದನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ಸುಧೀರ ತಂದೆ ಗಣಪತಿ ಕೊಡಿಯಾ, ಇವರಿಗೆ ಅಪಘಾತ ಪಡಿಸಿ ತಲೆಗೆ ಮತ್ತು ಮೈ ಕೈಗೆ ರಕ್ತದ ಗಾಯನೋವು ಪಡಿಸಿ, ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಗಣಪತಿ ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಾರಸ್ವತಕೇರಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 01-11-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 72/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅತಾವುಲ್ಲಾ ತಂದೆ ಅಬ್ದುಲ್ ಕರಿಂ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ಮದೀನ ಮಂಜಿಲ್, ಪಡ್ದಂದಡ್ಕ, ಕರಿಮಣೀಲು, ವೇಣೂರು, ತಾ: ಬೆಳ್ತಂಗಡಿ, ಜಿ: ದಕ್ಷಿಣ ಕನ್ನಡ (ಬಸ್ ನಂ: ಕೆ.ಎ-19/ಎ.ಬಿ-4755 ನೇದರ ಚಾಲಕ). ಈತನು ದಿನಾಂಕ: 01-11-2021 ರಂದು 18-30 ಗಂಟೆಗೆ ದಾಂಡೇಲಿ ತಾಲೂಕಿನ ವಿಟ್ನಾಳ ಗ್ರಾಮದ ಹತ್ತಿರ ಡಾಂಬರ್ ರಸ್ತೆಯ ಮೇಲೆ ತನ್ನ ಬಸ್ ನಂ: ಕೆ.ಎ-19/ಎ.ಬಿ-4755 ನೇದನ್ನು ದಾಂಡೇಲಿ ಕಡೆಯಿಂದ ಬರ್ಚಿ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಮಾನವಿಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಚಲಾಯಿಸಿಕೊಂಡು ಹೋಗಿ, ತನ್ನ ಬಸ್ಸಿನ ವೇಗವನ್ನು ನಿಯಂತ್ರಿಸಲಾಗದೇ ಒಮ್ಮೇಲೆ ತನ್ನ ಎಡಬದಿಯ ಡಾಂಬರ್ ರಸ್ತೆಯ ಪಕ್ಕದ ಕಚ್ಚಾ ರಸ್ತೆಯ ಮೇಲೆ ಚಲಾಯಿಸಿಕೊಂಡು ಹೋಗಿ, ಕಚ್ಚಾ ರಸ್ತೆಯ ಮೇಲೆ ವಿಟ್ನಾಳ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಮೃತ: ಮಾದೇವ ಲಕ್ಷ್ಮಣ ಕಾತ್ರೋಟ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಿಟ್ನಾಳ, ತಾ: ದಾಂಡೇಲಿ ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತಲೆಯ ಹಿಂಬದಿಗೆ ತೀವೃ ಸ್ವರೂಪದ ರಕ್ತಗಾಯ, ಹೊಟ್ಟೆಗೆ, ಎಡಗೈ ಹಸ್ತಕ್ಕೆ ಹಾಗೂ ಎಡಗೈ ಮೊಣಕೈಗೆ ತೆರಚಿದ ಗಾಯನೋವು ಪಡಿಸಿ, ಸದ್ರಿ ಗಾಯಾಳುವಿಗೆ ಚಿಕಿತ್ಸೆಗೆ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಡುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಲಕ್ಷ್ಮಣ ಕಾತ್ರೋಟ, ಪ್ರಾಯ-50 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ವಿಟ್ನಾಳ, ತಾ: ದಾಂಡೇಲಿ ರವರು ದಿನಾಂಕ: 01-11-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 142/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಪವಿತ್ರಾ ತಂದೆ ಚೆನ್ನಪ್ಪ ನಾಡಗೌಡರ, ಪ್ರಾಯ-18 ವರ್ಷ, 09 ತಿಂಗಳು, ವೃತ್ತಿ-ಮನೆ ಕೆಲಸ, ಸಾ|| ಇಂದೂರು, ತಾ: ಮುಂಡಗೋಡ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 30-10-2021 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಮನೆಯಿಂದ ತನ್ನ ಗೆಳತಿಯ ಮನೆಗೆ ಹೋಗಿರುವುದಾಗಿ ಪೋನಿನಲ್ಲಿ ತಿಳಿಸಿದವಳು, ತನ್ನ ಗೆಳತಿಯ ಮನೆಗೂ ಹೋಗದೇ ಮರಳಿ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಈವರೆಗೆ ನನ್ನ ಮಗಳನ್ನು ಹುಡುಕಾಡಿ ಸಿಗದೇ ಇದ್ದುದರಿಂದ ಸದ್ರಿ ಕಾಣೆಯಾದ ನನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗಂಗವ್ವ ಕೋಂ. ಚೆನ್ನಪ್ಪ ನಾಡಗೌಡರ, ಪ್ರಾಯ-35 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಇಂದೂರು, ತಾ: ಮುಂಡಗೋಡ ರವರು ದಿನಾಂಕ: 01-11-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
Daily District U.D Report
Date:- 01-11-2021
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 58/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಣಪತಿ ತಂದೆ ಸುಬ್ರಾಯ ಭಟ್, ಪ್ರಾಯ-59 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮೇಲಿನ ಶೇಡಿಮನೆ, ಪೋ: ಬಾರೆ, ತಾ: ಯಲ್ಲಾಪುರ. ಈತನು ದಿನಾಂಕ: 01-11-2021 ರಂದು 11-00 ಗಂಟೆಯಿಂದ 12-30 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ಶಹರದಲ್ಲಿರುವ ತಹಶೀಲ್ದಾರ್ ಕಚೇರಿಯ ಹತ್ತಿರ ಸರಾಯಿ ಕುಡಿಯಲು ಎಲ್ಲರ ಹತ್ತಿರ ಹಣ ಬೇಡುತ್ತಾ ಓಡಾಡಿಕೊಂಡಿದ್ದವನು, ಯಾವುದೋ ಕಾರಣದಿಂದ ಅಂಕೋಲಾದ ತಹಶೀಲ್ದಾರ್ರ ಕಚೇರಿಯ ಗೇಟ್ ಹತ್ತಿರ ಬಿದ್ದು ಮೂಗಿನಿಂದ ರಕ್ತ ಬಂದು ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಕೃಷ್ಣ ಭಟ್, ಪ್ರಾಯ-62 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಳ್ಳಿಪಾಲ, ಪೋ: ಬಾರೆ, ತಾ: ಯಲ್ಲಾಪುರ ರವರು ದಿನಾಂಕ: 01-11-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 42/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶಿವು ತಂದೆ ಗೋಪಾಲ ಶೇರುಗಾರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಗಬಸ್ತಿಕೇರಿ, ಗೇರುಸೊಪ್ಪಾ, ತಾ: ಹೊನ್ನಾವರ. ಪಿರ್ಯಾದಿಯವರ ಮಗನಾದ ಈತನು ವಿಪರೀತ ಸರಾಯಿಯನ್ನು ಕುಡಿಯುವ ಚಟದವನಾಗಿದ್ದು, ದಿನಾಂಕ: 31-10-2021 ರಂದು ಮಧ್ಯಾಹ್ನ 14-00 ಗಂಟೆಯಿಂದ ದಿನಾಂಕ: 01-11-ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಎದುರಿನ ಬಾವಿಯ ಹತ್ತಿರ ನೀರು ತರಲು ಅಥವಾ ಯಾವುದೋ ವಿಷಯಕ್ಕೆ ಬಾವಿಯ ಹತ್ತಿರ ಹೋದವನು, ಆಕಸ್ಮಾತ್ ಆಗಿ ಕಾಲು ಜಾರಿ ಬಾಯಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಇದರ ಹೊರತು ತನ್ನ ಮಗನ ಸಾವಿನಲ್ಲಿ ಬೇರಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮತಿ ಕೋಂ. ಗೋಪಾಲ ಶೇರುಗಾರ, ಪ್ರಾಯ-59 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನಗರಬಸ್ತಿಕೇರಿ, ಗೇರುಸೊಪ್ಪಾ, ತಾ: ಹೊನ್ನಾವರ ರವರು ದಿನಾಂಕ: 01-11-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======