ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-10-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 170/2021, ಕಲಂ: 419, 420, 465, 468, 470, 471 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಎನ್. ಎಸ್. ತಿಲಕರಾಜ ತಂದೆ ಶ್ರೀರಂಗಮೂರ್ತಿ, ಸಾ|| ಮನೆ ನಂ: 6911, ವೀವರ್ಸ್ ಕಾಲೋನಿ, ರಾಮಮಂದಿರ ರಸ್ತೆ, ನೆಲಮಂಗಲ, ಬೆಂಗಳೂರು ಗ್ರಾಮಾಂತರ-562123, 2]. ಸುಜಯ ಕೆ. ತಂದೆ ಕೃಷ್ಣಮೂರ್ತಿ, ಸಾ|| ದೇವರಹಕ್ಕಲ, ತಾ: ಕುಮಟಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 2 ನೇಯವನು ಪಿರ್ಯಾದುದಾರನ ಸಂಬಂಧಿಯಾಗಿರುತ್ತಾನೆ. ಆರೋಪಿ 1 ಮತ್ತು 2 ನೇಯವರು ಸ್ನೇಹಿತರಾಗಿದ್ದು, ಅದೇ ಪರಿಚಯದ ಮೇರೆಗೆ ಆರೋಪಿ 1 ನೇಯವನಿಗೆ ಆರೋಪಿ 2 ನೇಯವನು 2019 ರಿಂದ ದಿನಾಂಕ: 01-10-2021 ರ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಗೆ ಕರೆದುಕೊಂಡು ಬಂದು ಪಿರ್ಯಾದಿಯ ತಾಯಿಯಯವರ ಹತ್ತಿರ ಎಲ್.ಐ.ಸಿ ಪಾಲಿಸಿ ಮಾಡಿಸಿ ಪರಿಚಯ ಮಾಡಿಕೊಂಡಿದ್ದಲ್ಲದೇ, ಅದೇ ಸಮಯದಲ್ಲಿ ಯಾವುದೇ ಕೆಲಸವಿಲ್ಲದ ಪಿರ್ಯಾದುದಾರಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ಪಿರ್ಯಾದಿಯಿಂದ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪಡೆದುಕೊಂಡು ಹೋದವರು, ಪಿರ್ಯಾದಿಯ ದಾಖಲೆಗಳ ದುರುಪಯೋಗ ಪಡಿಸಿಕೊಂಡು, ಪಿರ್ಯಾದಿಯ ಹೆಸರಿನಲ್ಲಿ ‘ಸಂಕೇತ ಎಂಟರಪ್ರೈಸಸ್’ ಎಂಬ ಹೆಸರಿನಲ್ಲಿ ಸುಳ್ಳು ಫರ್ಮ್ ಸೃಷ್ಟಿಸಿ, ಅದೇ ದಾಖಲೆಗಳ ಆಧಾರದಲ್ಲಿ ಪಿರ್ಯಾದಿಯ ಹೆಸರಿನಲ್ಲಿ GSTIN: 29AVCPN41847D1ZI ಖಾತೆ ಓಪನ್ ಮಾಡಿಕೊಂಡು, ಪಿರ್ಯಾದಿಯ ಹೆಸರಿನ ಫರ್ಮ್ ನಲ್ಲಿ ಈವರೆಗೆ ಒಟ್ಟು 1,35,74,713/- ರೂಪಾಯಿ ವ್ಯವಹಾರ ನಡೆಸಿದ್ದಲ್ಲದೇ, ಸರಕಾರಕ್ಕೆ ಯಾವುದೇ ಜಿ.ಎಸ್.ಟಿ ರಿಟರ್ನ್ ಫೈಲ್ ಮಾಡದೇ ಮೋಸ ವಂಚನೆ ಮಾಡಿರುವ ಬಗ್ಗೆ ಪಿರ್ಯಾದಿ ಶ್ರೀ ಸಂಕೇತ ತಂದೆ ಗಜಾನನ ನಾಯ್ಕ, ಪ್ರಾಯ-28 ವರ್ಷ, ಸಾ|| ರಾಮನಗರ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ, ತಾ: ಕುಮಟಾ, ಹಾಲಿ ಸಾ|| ತೊರೆಗಜನಿ, ಪೋ: ಸಾಣಿಕಟ್ಟಾ, ತಾ: ಕುಮಟಾ ರವರು ದಿನಾಂಕ: 01-10-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಕಿಶೋರ ತಂದೆ ಸುಭಾಷ ದೇವಳಿ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾನಸೂರ, ತಾ: ಸಿದ್ದಾಪುರ. ಪಿರ್ಯಾದಿಯ ಸಂಬಂಧಿಯಾದ ಈತನು ದಿನಾಂಕ: 28-09-2021 ರಂದು 10-00 ಗಂಟೆಯಿಂದ ದಿನಾಂಕ: 01-10-2021 ರಂದು 11-00 ಗಂಟೆಯ ನಡುವಿನ ಅವಧಿಯಲ್ಲಿ ಕೋರ್ಟಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದವನು, ಮರಳಿ ಪಿರ್ಯಾದಿಯ ಮನೆಗಾಗಲೀ ಅಥವಾ ಸಿದ್ದಾಪುರ ತಾಲೂಕಿನ ಕಾನಸೂರನಲ್ಲಿರುವ ತನ್ನ ಮನೆಗಾಗಲಿ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಸಂಬಂಧಿ ಈತನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ದತ್ತಾ ಮೇಸ್ತಾ, ಪ್ರಾಯ-65 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಕಮಟೆಹಿತ್ಲ, ತಾ: ಹೊನ್ನಾವರ ರವರು ದಿನಾಂಕ: 01-10-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 4, 12(1) ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ಹಾಗೂ ಕಲಂ: 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಜೀರ್ ಅಹಮ್ಮದ್ ಅಬ್ದುಲ್ ವಾಹೀದ್ ಸಾಬ್, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, 2]. ಅಬ್ದುಲ್ ಮಜೀದ್ ಅಬ್ದುಲ್ ಜಲೀಲ್ ಸಾಬ್, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, 3]. ರಿಯಾಜ್ ಅಹಮ್ಮದ್ ನಜೀರ್ ಅಹಮ್ಮದ್ ಸಾಬ್, ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, 4]. ಹಬೀಬ್ ರೆಹಮಾನ್ ಮಹಮ್ಮದ್ ಸಾಬ್, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, 5]. ಅನ್ಸಾರ್ ನಜೀರ್ ಅಹಮ್ಮದ್ ಸಾಬ್, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, 6]. ಅಬ್ದುಲ್ ಶುಕುರ್ ಇಸ್ಮಾಯಿಲ್ ಸಾಬ್, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| (ಎಲ್ಲರೂ) ಕಲಕೊಪ್ಪ, ಕಲಗಾರ ಗ್ರಾಮ, ಪೋ: ಇಟಗುಳಿ, ತಾ: ಶಿರಸಿ. ಈ ನಮೂದಿತ ಆರೋಪಿತರೆಲ್ಲರೂ ದಿನಾಂಕ: 01-10-2021 ರಂದು 06-15 ಗಂಟೆಯ ಸುಮಾರಿಗೆ ಕಲಗಾರ ಗ್ರಾಮದ ಕಲ್ಲಕೊಪ್ಪದ ಆರೋಪಿ 1 ನೇಯವನ ಮನೆಯ ಹಿಂದಿನ ರೂಮಿನಲ್ಲಿ ಅಕ್ರಮವಾಗಿ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಎಮ್ಮೆಯನ್ನು ಖರೀದಿಸಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಕಡಿದು ಮಾಂಸ ಮಾಡುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ 1). ಎಮ್ಮೆ ಮಾಂಸ ಒಟ್ಟೂ 90 ಕೆ.ಜಿ 64 ಗ್ರಾಂ, ಅ||ಕಿ|| 18,000/- ರೂಪಾಯಿ, 2). ಹಸಿರು ಬಣ್ಣದ ಪ್ಲಾಸ್ಟಿಕ್ ಬುಟ್ಟಿ-1, ಅ||ಕಿ|| 100/- ರೂಪಾಯಿ, 3). ತಾಡಪತ್ರಿ-1, ಅ||ಕಿ|| 00.00/- ರೂಪಾಯಿ, 4). ಕಟ್ಟಿಗೆಯ ಕೊಡ್ಡಾ-2, ಅ||ಕಿ|| 00.00/- ರೂಪಾಯಿ, 5). ಸತ್ತೂರ-2, ತಲಾ ಒಂದಕ್ಕೆ 100/- ರೂಪಾಯಿಯಂತೆ ಒಟ್ಟೂ 200/- ರೂಪಾಯಿ, 6). ಚೂರಿ-1, ಅ||ಕಿ|| 100/- ರೂಪಾಯಿ, 7). ಡ್ರ್ಯಾಗರ್-1, ಅ||.ಕಿ|| 100/- ರೂಪಾಯಿ, 8). ತೂಕ ಮಾಡುವ ವೇಯಿಂಗ್ ಮಶೀನ್-1, ಅ||ಕಿ|| 2,000/- ರೂಪಾಯಿಯ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಈರಯ್ಯ ಡಿ. ಎನ್, ಪಿ.ಎಸ್.ಐ (ಕಾ&ಸು, ಸಂಚಾರ), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 01-10-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 120/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಗಣೇಶ ತಂದೆ ಬಸವರಾಜ ಭಜಂತ್ರಿ, ಪ್ರಾಯ-20 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಸಾಲಗಾಂವ, ತಾ: ಮುಂಡಗೋಡ. ಪಿರ್ಯಾದುದಾರರ ಮಗನಾದ ಈತನು ದಿನಾಂಕ: 22-06-2021 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ಸಾಗರದಲ್ಲಿ ಗೌಂಡಿ ಕೆಲಸಕ್ಕೆ ಹೊಗುತ್ತೇನೆ ಅಂತಾ ಸಾಲಗಾಂವದಿಂದ ಮೋಟಾರ್ ಸೈಕಲ್ ಮೇಲಾಗಿ ಸಾಗರಕ್ಕೆ ಹೋದವನು, ಸಾಗರದಲ್ಲಿ ಕೆಲಸಕ್ಕೆ ಹೋಗದೇ, ಪರತ್ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವನ ಬಗ್ಗೆ ಆತನ ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಿ ಆತನು ಈ ಹಿಂದೆ ಕೆಲಸ ಮಾಡಿದ ಸಾಗರದಲ್ಲಿಯು ಹುಡಕಾಡಿದರೂ ಸಿಕ್ಕಿದ್ದು ಇರುವುದಿಲ್ಲ. ಸದ್ರಿ ತನ್ನ ಮಗನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ರಾಮಣ್ಣ ಭಜಂತ್ರಿ ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಾಲಗಾಂವ, ತಾ: ಮುಂಡಗೋಡ ರವರು ದಿನಾಂಕ: 01-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 153/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ಈರಪ್ಪಾ ಅಪ್ಪಣ್ಣವರ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಸಾಂಬ್ರಾಣಿ ಗ್ರಾಮ, ತಾ: ಹಳಿಯಾಳ (ಲಾರಿ ನಂ: ಕೆ.ಎ-31/4358 ನೇದರ ಚಾಲಕ). ಈತನು ದಿನಾಂಕ: 01-10-2021 ರಂದು 21-30 ಗಂಟೆಗೆ ಹಳಿಯಾಳ ತಾಲೂಕಿನ ಮೊದಲಗೇರಾ ಗ್ರಾಮದ ಲಕ್ಷ್ಮೀ ದೇವಸ್ಥಾನದ ಹತ್ತಿರ ಇರುವ ಪಿರ್ಯಾದಿಯ ಮನೆಯ ಹತ್ತಿರ ಹಳಿಯಾಳ-ಮೊದಲಗೇರಾ ಮಾರ್ಗವಾಗಿ ಹಾದು ಹೋದ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಲಾರಿ ನಂ: ಕೆ.ಎ-31/4358 ನೇದನ್ನು ಯಡೋಗಾ ಕಡೆಯಿಂದ ಮೊದಲಗೇರಾ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಡಾಂಬರ್ ರಸ್ತೆಯ ತೀರಾ ಬಲಬದಿಗೆ ಬಂದು ಡಾಂಬರ್ ರಸ್ತೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಪಿರ್ಯಾದಿಯವರ ತಂಗಿಯ ಮಗನಾದ ಕುಮಾರ: ಗಣೇಶ ತಂದೆ ರಾಜು ಪಾಟೀಲ, ಪ್ರಾಯ-1 ವರ್ಷ 6 ತಿಂಗಳು, ಸಾ|| ಕರ್ಲಕಟ್ಟಾ ಗ್ರಾಮ, ತಾ: ಹಳಿಯಾಳ ಈತನಿಗೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಕು: ಗಣೇಶ ಈತನಿಗೆ ಬಲಗಾಲಿನ ಮೊಣಗಂಟಿನಿಂದ ಪಾದದವರೆಗೆ ಗಂಭೀರ ಸ್ವರೂಪದ ರಕ್ತದ ಗಾಯನೋವು ಉಂಟು ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜ್ಞಾನೇಶ್ವರ ತಂದೆ ನಾರಾಯಣ ಗೌಡ, ಪ್ರಾಯ-30 ವರ್ಷ, ವೃತ್ತಿ-ಬಿಲ್ ಕಲೆಕ್ಟರ್, ಮೊದಲಗೇರಾ ಗ್ರಾಮ ಪಂಚಾಯಿತಿ, ಸಾ|| ಮೊದಲಗೇರಾ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 01-10-2021 ರಂದು 22-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 95/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀನಿವಾಸ ತಂದೆ ದುರ್ಗಾ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಶೀಗಿಹಳ್ಳಿ, ಕೊಪ್ಪ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಜೆ-1941 ನೇದರ ಸವಾರ). ಈತನು ದಿನಾಂಕ: 30-09-2021 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಜೆ-1941 ನೇದನ್ನು ಕೆರೆಕೊಪ್ಪ-ಚಂದ್ರಗುತ್ತಿ ರಸ್ತೆಯಲ್ಲಿ ಹರೀಶಿ ಕ್ರಾಸ್ ಕಡೆಯಿಂದ ಕೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂತೆಯಿಂದ ಚಲಾಯಿಸಿಕೊಂಡು ಹೋಗಿ ವೇಗದ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ತಲೆಗೆ ಗಂಭೀರ ಗಾಯವನ್ನುಂಟು ಪಡಿಸಿಕೊಂಡವನಿಗೆ ಹುಬ್ಬಳ್ಳಿಯ ಶ್ರೀ ಧರ್ಮಸ್ಥಳ ಮೆಡಿಕಲ್ ಆಸ್ಪತ್ರೆಗೆ ಉಪಚಾರಕ್ಕೆ ದಾಖಲಿಸಿದ್ದು, ಅಲ್ಲಿ ಉಪಚಾರ ಫಲಕಾರಿಯಾಗದೇ ದಿನಾಂಕ: 30-09-2021 ರಂದು ಸಾಯಂಕಾಲ 07-40 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ತಂದೆ ದುರ್ಗಾ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಮಂಜವಳ್ಳಿ, ತಾ: ಶಿರಸಿ ರವರು ದಿನಾಂಕ: 01-10-2021 ರಂದು 01-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-10-2021

at 00:00 hrs to 24:00 hrs

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸರಸ್ವತಿ ಕೋಂ. ನಾಗರಾಜ ದೇವಾಂಗ, ಪ್ರಾಯ-51 ವರ್ಷ, ವೃತ್ತಿ-ಗೃಹಿಣಿ, ಸಾ|| ಆಜಾದ್ ನಗರ, ತಾ: ದಾಂಡೇಲಿ. ಸುದ್ದಿದಾರರ ಅಕ್ಕಳಾದ ಇವರು ತನ್ನ ಗಂಡನಾದ ನಾಗರಾಜ ದೇವಾಂಗ ರವರು ತೀರಿಕೊಂಡಿದ್ದು, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 30-09-2021 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಯಾವುದೋ ವಿಷ ಪದಾರ್ಥ ಸೇವಿಸಿದವಳಿಗೆ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 01-10-2021 ರಂದು ಮಧ್ಯಾಹ್ನ 01-35 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು, ಇದರ ಹೊರತು ಮೃತಳ ಸಾವಿನಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ಬಾಬು ನರೇಂದ್ರ, ಪ್ರಾಯ-38 ವರ್ಷ, ವೃತ್ತಿ-ನೇಕಾರ ಕೆಲಸ, ಸಾ|| ದೇಶನೂರ, ತಾ: ಬೈಲ್‍ಹೊಂಗಲ್, ಜಿ: ಬೆಳಗಾವಿ ರವರು ದಿನಾಂಕ: 01-10-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 03-10-2021 09:34 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080