ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 01-09-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವಜ್ರನಾಥ ತಂದೆ ಕೃಷ್ಣಪ್ಪ ಕಳಸ, ಪ್ರಾಯ-54 ವರ್ಷ, ವೃತ್ತಿ-ತೆಂಗಿನಕಾಯಿ ವ್ಯಾಪಾರ, ಸಾ|| ಕಳಸವಾಡಾ, ಕಾರವಾರ. ಈತನು ದಿನಾಂಕ: 01-09-2021 ರಂದು 11-30 ಗಂಟೆಗೆ ತನ್ನ ಲಾಭದ ಸಲುವಾಗಿ ಕಾರವಾರದ ಗಾಂಧಿ ಮಾರ್ಕೆಟ್ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಶರತ್ತಿನ ಮೇಲೆ ಓ.ಸಿ ಮಟಕಾ ಜೂಗಾರಾಟದ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಟ್ಟು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ದಾಳಿಯ ಕಾಲ ಓ.ಸಿ ಜುಗಾರಾಟಕ್ಕೆ ಬಳಸಿದ ನಗದು ಹಣ 2,410/- ರೂಪಾಯಿ, ಅಂಕೆ-ಸಂಖ್ಯೆ ಬರೆದ ಚೀಟಿ ಹಾಗೂ ಬಾಲ್ ಪೆನ್ ನೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ (ಕಾ&ಸು), ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 01-09-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣಕುಮಾರ ತಂದೆ ಬಸಪ್ಪ ಇಬ್ರಾಹಿಂಪುರ್, ಸಾ|| ಕೈಗಾ ಟೌನಶಿಪ್, ಮಲ್ಲಾಪುರ, ಕಾರವಾರ (ಕಾರ್ ನಂ: ಕೆ.ಎ-30/ಎಮ್-8939 ನೇದರ ಚಾಲಕ). ಈತನು ದಿನಾಂಕ: 01-09-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ತನ್ನ ಕಾರ್ ನಂ: ಕೆ.ಎ-30/ಎಮ್-8939 ನೇದನ್ನು ಕೈಗಾ ಟೌನಶಿಪ್ ಒಳ ರಸ್ತೆಯಿಂದ ಮಲ್ಲಾಪುರದ ಕುರ್ನಿಪೇಟೆಯ ರಾಜ್ಯ ಹೆದ್ದಾರಿ ಸಂಖ್ಯೆ-06 ರ ರಸ್ತೆಯ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಮಲ್ಲಾಪುರದ ಕುರ್ನಿಪೇಟೆ ಕಡೆಯಿಂದ ಟೌನಶಿಪ್ ಪೆಟ್ರೋಲ್ ಬಂಕ್ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-3073 ನೇದಕ್ಕೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸವಾರನಿಗೆ ತೆರಚಿದ ಗಾಯ ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿಗೆ ಕುಳಿತ ಪ್ರಶಾಂತ ನಾಯ್ಕ, ಈತನಿಗೆ ಎಡಗಾಲ ಹಿಮ್ಮಡ ಪಾದದ ಹತ್ತಿರ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವೈಭವ ತಂದೆ ಶಾಂತಾರಾಮ ಕಾಮತ್, ಪ್ರಾಯ-27 ವರ್ಷ, ವೃತ್ತಿ-ಸೇಲ್ಸಮೆನ್, ಸಾ|| ನೈತಿಸಾವರ, ದೇವಳಮಕ್ಕಿ, ಕಾರವಾರ, ಹಾಲಿ ಸಾ|| ಅಸ್ನೋಟಿ, ಭಗತವಾಡಾ, ಕಾರವಾರ ರವರು ದಿನಾಂಕ: 01-09-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ಬಸವಂತಪ್ಪ ರೆಡ್ಡಿ, ಪ್ರಾಯ-46 ವರ್ಷ, ಸಾ|| ಲಕ್ಷ್ಮೀ ನಗರ, ಮಲ್ಲಾಪುರ, ಕಾರವಾರ. ಈತನು ದಿನಾಂಕ: 01-09-2021 ರಂದು 13-30 ಗಂಟೆಗೆ ಹಿಂದೂವಾಡಾ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಸೇರಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ದಾಳಿಯ ವೇಳೆ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ-01, ನಗದು ಹಣ 720/- ರೂಪಾಯಿ ಹಾಗೂ ಬಾಲ್ ಪೆನ್-01 ನೇದವುಗಳೊಂದಿಗೆ ಆರೋಪಿತನು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಗುಡಿ, ಪಿ.ಎಸ್.ಐ, ಮಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 01-09-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಜ್ಜನ ತಂದೆ ಕೃಷ್ಣ ರಾಣೆ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಂಕಣವಾಡ, ಸದಾಶಿವಗಡ,  ಕಾರವಾರ. ಈತನು ದಿನಾಂಕ: 01-09-2021 ರಂದು ಮಧ್ಯಾಹ್ನ 11-40 ಗಂಟೆಗೆ ಸೀ-ಬರ್ಡ್ ಕಾಲೋನಿಯ ಮಾರುತಿ ದೇವಸ್ಥಾನದ ಹತ್ತಿರ ರಸ್ತೆಯ ಪಕ್ಕ ಅರಳಿ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಆ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಚೀಟಿಯನ್ನು ಬರೆದು ಕೊಡುತ್ತಿದ್ದವನಿಗೆ ದಾಳಿ ನಡೆಸಿ ಹಿಡಿದು ಅವನಿಂದ ನಗದು ಹಣ 1,400/- ರೂಪಾಯಿ, ಅಂಕೆ-ಸಂಖ್ಯೆ ಬರೆದ ಚೀಟಿ ಮತ್ತು ಬಾಲ್ ಪೆನ್ ಅನ್ನು ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂಪತ್ ಇ. ಸಿ, ಪಿ.ಎಸ್.ಐ (ಕಾ&ಸು), ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 01-09-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: 279, 337 ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರಕಾಂತ ತಂದೆ ಜಯಂತ ಪಟಗಾರ, ಸಾ|| ಮೊರಬಾ, ತಾ: ಕುಮಟಾ (ಪ್ಯಾಸೆಂಜರ್ ರಿಕ್ಷಾ ನಂ: ಕೆ.ಎ-47/7469 ನೇದರ ಸವಾರ). ಈತನು ದಿನಾಂಕ: 01-09-2021 ರಂದು ಸಂಜೆ 19-30 ಗಂಟೆಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಮೊರಬಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ತಾನು ಚಲಾಯಿಸಿಕೊಂಡು ಬಂದ ಪ್ಯಾಸೆಂಜರ್ ಆಟೋರಿಕ್ಷಾ ನಂ: ಕೆ.ಎ-47/7469 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೋಗುವ ದ್ವಿ-ಪಥದ ಹೆದ್ದಾರಿ ರಸ್ತೆಯಲ್ಲಿ ಹೋಗುವುದನ್ನು ಬಿಟ್ಟು ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಹೋಗುವ ಹೆದ್ದಾರಿ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಹಿರೇಗುತ್ತಿ ಕಡೆಯಿಂದ ಕುಮಟಾ ಕಡೆಗೆ ಹೋಗಲು ರಸ್ತೆಯ ಬಲ ಸೈಡಿನಿಂದ ಜೋರಾಗಿ ಚಲಾಯಿಸಿ  ಹೋಗುತ್ತಿದ್ದವನು, ರಸ್ತೆಯ ಬಲ ಬದಿಯಲ್ಲಿದ್ದ ನೀರನ್ನು ತಪ್ಪಿಸಲು ಒಮ್ಮೇಲೆ ರಿಕ್ಷಾವನ್ನು ರಸ್ತೆಯ ಎಡ ಸೈಡಿಗೆ ಬಂದು ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ತನ್ನ ಸೈಡಿನಲ್ಲಿ ಹೆದ್ದಾರಿ ರಸ್ತೆಯಲ್ಲಿ ಹೊರಟಿದ್ದ ಹೋಂಡಾ ಸಿಟಿ ಕಾರ್ ನಂ: ಕೆ.ಎ-25/ಪಿ-2419 ನೇದಕ್ಕೆ ಎಡ ಸೈಡಿನ ಮಂಭಾಗದಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ಹಣೆಗೆ ಹಾಗೂ ಮುಖಕ್ಕೆ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಯ ಹೆಂಡತಿ ಶ್ರೀಮತಿ ಸುನೀತಾ ಅಂಥೋನ್ ಫರ್ನಾಂಡೀಸ್, ಇವರಿಗೆ ಎಡಗೈಗೆ ಒಳನೋವಾಗುವಂತೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಂಥೋನ್ ತಂದೆ ಕಾಮಿಲ್ ಫರ್ನಾಂಡೀಸ್, ಪ್ರಾಯ-34 ವರ್ಷ, ವೃತ್ತಿ-ಸರ್ವೀಸ್ ಅಡ್ವೆಸರ್, ಸಾ|| ಮಹಾಲಕ್ಷ್ಮಿ ಇಲೆವೆನ್ ಆಪಾರ್ಟಮೆಂಟ್, ನಂ: 04, ದತ್ತನಗರ, ರಾಜೀವನಗರ, 2 ನೇ ಸ್ವೇಜ್, ಹುಬ್ಬಳ್ಳಿ ರವರು ದಿನಾಂಕ: 01-09-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 155/2021, ಕಲಂ: 448, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಖಾದಿರ್ ಬೇಗ್ ತಂದೆ ಕಾಸಿಮ್ ಬೇಗ್, 2]. ಶ್ರೀಮತಿ ಸಬೀನಾ ಕೋಂ. ಖಾದಿರ್ ಬೇಗ್, ಸಾ|| (ಇಬ್ಬರೂ) ಹಳಕಾರ, ಮದ್ಗುಣಿ, ತಾ: ಕುಮಟಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯ ತಮ್ಮನಿದ್ದು, ಆರೋಪಿ 1 ನೇಯವನು ಪಿರ್ಯಾದಿಯ ಮನೆಯ ಪಕ್ಕದಲ್ಲಿಯೇ ತನ್ನ ಹೆಂಡತಿ ಮಕ್ಕಳೊಂದಿಗೆ ಕೂಡಿ ವಾಸವಾಗಿದ್ದು, ಆರೋಪಿತನ ಮನೆಯ ಜನರಿಗೂ ಹಾಗೂ ಪಿರ್ಯಾದಿಯ ಮನೆಯ ಜನರಿಗೂ ಮೊದಲಿನಿಂದಲೂ ಗಡಿ ಬೇಲಿಯ ವಿಷಯದಲ್ಲಿ ತಂಟೆ ತಕರಾರು ನಡೆಯುತ್ತಿದ್ದು, ಈ ಬಗ್ಗೆ ಆರೋಪಿತರು ಪಿರ್ಯಾದಿಯ ಮನೆಯ ಜನರ ಮೇಲೆ ದ್ವೇಷದಿಂದ ಇದ್ದು, ದಿನಾಂಕ: 01-09-2021 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಆರೋಪಿತನ ಮನೆಯ ಬೆಕ್ಕು ಪಿರ್ಯಾದಿಯ ಮನೆಯ ಮೀನನ್ನು ಕಚ್ಚಿಕೊಂಡು ಹೋದ ಬಗ್ಗೆ ಪಿರ್ಯಾದಿಯ ಹೆಂಡತಿಯವರು ಬೆಕ್ಕಿಗೆ ಬೈಯ್ದಿದ್ದಕ್ಕೆ ಸಿಟ್ಟಾದ ಆರೋಪಿತರಿಬ್ಬರೂ ಸೇರಿ ಪಿರ್ಯಾದಿಯ ಮನೆಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಹೆಂಡತಿಗೆ ‘ಬೋಳಿ ಮಕ್ಕಳಾ, ಸೂಳಾ ಮಕ್ಕಳಾ, ನಮ್ಮ ಮನೆಯ ಬೆಕ್ಕಿಗೆ ಬೈಯ್ಯುತ್ತಿರಾ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಕೊಲೆ ಮಾಡುವುದಾಗಿ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ರೆಹಿಮಾನ್ ಬೇಗ್ ತಂದೆ ಕಾಸಿಮ್ ಬೇಗ್, ಪ್ರಾಯ-60 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಹಳಕಾರ, ಮದ್ಗುಣಿ, ತಾ: ಕುಮಟಾ ರವರು ದಿನಾಂಕ: 01-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 234/2021, ಕಲಂ: 143, 147, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರೇಣುಕಾ ಗಣಪತಿ ತಾಂಡೇಲ, 2]. ಸುಧಾ ಸಂಜಯ ತಾಂಡೇಲ, 3]. ಪುಷ್ಪಾ ದತ್ತಾ ತಾಂಡೇಲ, 4]. ಸುನೀತಾ ಸಂತೋಷ ತಾಂಡೇಲ, 5]. ರಾಹುಲ ದತ್ತಾ ತಾಂಡೇಲ, 6]. ರಾಜು ಶೇಷಯ್ಯ ತಾಂಡೇಲ, 7]. ರೇಖಾ ಈಶ್ವರ ತಾಂಡೇಲ, ಸಾ|| (ಎಲ್ಲರೂ) ಟೊಂಕಾ, ಕಾಸರಕೋಡ, ತಾ: ಹೊನ್ನಾವರ. ದಿನಾಂಕ: 01-09-2021 ರಂದು ಹೊನ್ನಾವರದ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕೆಲಸಕ್ಕೆ ತೆರಳಿ ವಾಪಸ್ ಮನೆಗೆ ಬರುವ ಸಂದರ್ಭದಲ್ಲಿ ಸಮಯ ಸಾಯಂಕಾಲ 04-45 ಗಂಟೆಗೆ ಕಾಸರಕೋಡ ಗ್ರಾಮದವರಾದ ನಮೂದಿತ ಆರೋಪಿತರೆಲ್ಲರೂ ಒಟ್ಟಾಗಿ ಸಂಗನಮತ ಮಾಡಿಕೊಂಡು ಬಂದು ಜೈನ ಜಟಗೇಶ್ವರ ದೇವಸ್ಥಾನದ ತಿರುವಿನ ರಸ್ತೆಯಲ್ಲಿ ಅಡ್ಡಗಟ್ಟಿ ‘ನಾಳೆಯಿಂದ ಕಂಪನಿ ಕೆಲಸಕ್ಕೆ ಬರಬಾರದು. ಒಂದೊಮ್ಮೆ ಮತ್ತೆ ನಾಳೆ ಕೆಲಸಕ್ಕೆ ಬಂದರೆ ನಿಮ್ಮೆಲ್ಲರಿಗೂ ಖಾರದ ಪುಡಿ, ಬಿಸಿ ಎಣ್ಣೆ ಹಾಕಿ ಶಾಶ್ವತವಾಗಿ ನೀವು ಕೆಲಸ ಮಾಡದ ರೀತಿ ಮಾಡುತ್ತೇವೆ’ ಎಂದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ಪುನಃ ಮತ್ತೆ ಕೆಲಸಕ್ಕೆ ಬಂದರೆ ನಾವೇ ನಮ್ಮ ಬಟ್ಟೆಗಳನ್ನು ಹರಿದುಕೊಂಡು ನಿಮ್ಮ ಮೇಲೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಿ, ನಿಮ್ಮನ್ನು ಜೈಲಿಗೆ ಅಟ್ಟುವಂತೆ ಮಾಡುತ್ತೇವೆ ಹಾಗೂ ಮತ್ತೆ ಪುನಃ ಬರುವುದಾದರೆ ನಿಮ್ಮ ಬೈಕಿಗೆ ಬೆಂಕಿ ಹಾಕಿ ಸುಟ್ಟು ಹಾಕುತ್ತೇವೆ’ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ನಾವು ಕಳೆದ ಎರಡೂವರೆ ವರ್ಷದಿಂದ ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿ ತುಂಬಾ ಕಷ್ಟಕರವಾದ ಜೀವನ ಸಾಗಿಸುತ್ತಾ ಬಂದಿರುತ್ತೇವೆ. ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ನಿರ್ವಹಿಸಲು ಕಳೆದ ಒಂದು ವಾರದಿಂದ ಸೇರಿಕೊಂಡಿರುತ್ತೇವೆ. ನಮಗೆ ಈ ಕೆಲಸವಿಲ್ಲದೇ ಬೇರೆ ಕೆಲಸವಿಲ್ಲದೇ ಈ ಕಂಪನಿಯಲ್ಲಿ ವೃತ್ತಿ ಮಾಡುವುದು ಅನಿವಾರ್ಯವಾಗಿರುತ್ತದೆ. ಆದ ಕಾರಣ ನಮೂದಿತ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿ, ಮುಂದೆ ನಾವು ಕೆಲಸ ಮಾಡಲು ಸೂಕ್ತ ಅನುವು ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಜನಾರ್ಧನ ಮೇಸ್ತ, ಪ್ರಾಯ-44 ವರ್ಷ, ವೃತ್ತಿ-ಸೂಪರವೈಸರ್, ಸಾ|| ತೊಪ್ಪಲ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 01-09-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 119/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಶ್ರೀಧರ ಹೆಗಡೆ, ಸಾ|| ಮುಂಬಯಿ (ಕಾರ್ ನಂ: ಎಮ್.ಎಚ್-02/ಇ.ಪಿ-6006 ನೇದರ ಚಾಲಕ). ಈತನು ದಿನಾಂಕ: 01-09-2021 ರಂದು ಮಧ್ಯಾಹ್ನ 15-10 ಗಂಟೆಯ ಸುಮಾರಿಗೆ ಇಡಗುಂಜಿ ಕ್ರಾಸ್ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ತಾನು ಚಲಾಯಿಸುತ್ತಿದ್ದ ಕಾರ್ ನಂ: ಎಮ್.ಎಚ್-02/ಇ.ಪಿ-6006 ನೇದನ್ನು ಮುರ್ಡೇಶ್ವರ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಇಡಗುಂಜಿ ಕಡೆಯಿಂದ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-0017 ನೇದನ್ನು ಸವಾರಿ ಮಾಡಿಕೊಂಡು ಇಡಗುಂಜಿ ಕ್ರಾಸಗೆ ಬಂದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಸ್ತೆ ದಾಟುತ್ತಿದ್ದ ಪಿರ್ಯಾದಿಯ ತಂದೆ ರಾಮಚಂದ್ರ ನಾಯ್ಕ, ಇವರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬೀಳಿಸಿ, ಆತನ ಎಡಗಾಲ ಮೊಣಗಂಟಿನ ಕೆಳಗೆ ಮೂಳೆ ಮೂರಿತವಾಗಿ ಭಾರೀ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಕುಮಾರಿ: ಭಾಗ್ಯಶ್ರೀ ತಂದೆ ರಾಮಚಂದ್ರ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಮೇಲಿನ ಮಣ್ಣಿಗೆ, ತಾ: ಹೊನ್ನಾವರ, ಹಾಲಿ ಸಾ|| ಮೂಡಬಿದ್ರೆ, ಮಂಗಳೂರು ರವರು ದಿನಾಂಕ: 01-09-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ವೆಂಕಟ್ರಮಣ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಸಣ್ಣಮೇರಿ ಮನೆ, ಸಣ್ಣಭಾವಿ, ಬೆಂಗ್ರೆ-1, ತಾ: ಭಟ್ಕಳ. ಈತನು ದಿನಾಂಕ: 01-09-2021 ರಂದು 15-50 ಗಂಟೆಗೆ ಬೆಂಗ್ರೆ ಗ್ರಾಮದ ಸಣ್ಣಭಾವಿ ಬ್ರಿಡ್ಜ್ ಹತ್ತಿರದಲ್ಲಿರುವ ಗೂಡಂಗಡಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಸೇರಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸೇರಿ ದಾಳಿ ನಡೆಸಿದಾಗ ನಮೂದಿತ ಆರೋಪಿತನು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 410/- ರೂಪಾಯಿ ಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 01-09-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಗಿರೀಶ ತಂದೆ ಸೋಮಯ್ಯಾ ದೇವಾಡಿಗ, ಪ್ರಾಯ-32 ವರ್ಷ, ವೃತ್ತಿ-ಕಿರಾಣಿ ಅಂಗಡಿ, ಸಾ|| ಉಳ್ಮಣ, ಪೋ: ಬೆಂಗ್ರೆ-1, ತಾ: ಭಟ್ಕಳ. ಈತನು ದಿನಾಂಕ: 01-09-2021 ರಂದು 18-50 ಗಂಟೆಗೆ ತನ್ನ ಕಿರಾಣಿ ಅಂಗಡಿಯ ಎದುರು ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವುದಾಗಿ ಬರ-ಹೋಗುವ ಜನರನ್ನು ಕೂಗಿ ಕರೆದು ಹಣವನ್ನು ಪಡೆದು ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಒಂದು ಬಿಳಿ ಹಾಳೆಯ ಮೇಲೆ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳನ್ನು ಬರೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-1, ಅ||ಕಿ|| 00.00/- ರೂಪಾಯಿ, 2). ಬಾಲ್ ಪೆನ್-1, ಅ||ಕಿ|| 00.00/- ರೂಪಾಯಿ, 3). ನಗದು ಹಣ 1,310/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣುರ, ಪಿ.ಎಸ್.ಐ-2, ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 01-09-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 109/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗಪ್ಪ ತಂದೆ ಈರಪ್ಪಾ ನಾಯ್ಕ, ಪ್ರಾಯ-40 ವರ್ಷ, ಸಾ|| ಹಲ್ಲಾರಿ, ತಾ: ಭಟ್ಕಳ (ಹೀರೋ ಸೂಪರ್ ಸ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-1239 ನೇದರ ಸವಾರ). ಈತನು ದಿನಾಂಕ: 01-09-2021 ರಂದು ಮಧ್ಯಾಹ್ನ 13-00 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಹೀರೋ ಸೂಪರ್ ಸ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-1239 ನೇದರ ಹಿಂಬದಿಯಲ್ಲಿ ಶ್ರೀಮತಿ ಲಲಿತಾ ರಾಮಚಂದ್ರ ನಾಯ್ಕ, ಪ್ರಾಯ-45 ವರ್ಷ, ಸಾ|| ಶಾಲೆಮನೆ, ವೆಂಕಟಾಪುರ, ತಾ: ಭಟ್ಕಳ ಹಾಗೂ ಕು: ಗೌತಮ ಶಂಕರ ನಾಯ್ಕ, ಪ್ರಾಯ-5 ವರ್ಷ, ಸಾ|| ಶಾಲೆಮನೆ, ವೆಂಕಟಾಪುರ, ತಾ: ಭಟ್ಕಳ ಇವರುಗಳನ್ನು ಕೂಡ್ರಿಸಿಕೊಂಡು ಅಳ್ವೆಕೋಡಿ ಕಡೆಯಿಂದ ಶಿರಾಲಿ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದವನು, ಅಳ್ವೆಕೋಡಿ ಬ್ರಿಡ್ಜ್ ಹತ್ತಿರ ರಸ್ತೆಯ ತಿರುವಿನಲ್ಲಿ ಒಮ್ಮೇಲೆ ಮೋಟಾರ್ ಸೈಕಲನ್ನು ತನ್ನ ಬಲಕ್ಕೆ ಚಲಾಯಿಸಿ, ಪಿರ್ಯಾದಿಯು ತನ್ನ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಸರ್ಕಾರಿ ಜೀಪ್ ನಂ: ಕೆ.ಎ-20/ಜಿ-0399 ನೇದರ ಬಂಪರಿಗೆ ನಿಷ್ಕಾಳಜಿತನದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ 3 ಜನರು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಮೋಟಾರ್ ಸೈಕಲ್ ಸವಾರನ ಬಲಗಾಲಿನ ಮೇಲೆ ಅವನ ಹೀರೋ ಸೂಪರ್ ಸ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-1239 ನೇದು ಬಿದ್ದು ತನ್ನ ಬಲಗಾಲಿಗೆ ತೀವ್ರ ಗಾಯ ಪಡಿಸಿಕೊಂಡಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಶ್ರೀಮತಿ ಲಲಿತಾ ರಾಮಚಂದ್ರ ನಾಯ್ಕ, ಹಾಗೂ ಕು: ಗೌತಮ ಶಂಕರ ನಾಯ್ಕ, ಇವರಿಗೆ ಸಣ್ಣಪುಟ್ಟ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ವೆಂಕಟರಮಣ ಶೇರುಗಾರ, ಪ್ರಾಯ-44 ವರ್ಷ, ವೃತ್ತಿ-ಹೆಡ್ ಕಾನ್ಸಟೇಬಲ್ (ಎ.ಎಚ್.ಸಿ-42), ಸಾ|| ಕರಾವಳಿ ಕಾವಲು ಪೋಲಿಸ್ ಠಾಣೆ, ಭಟ್ಕಳ ರವರು ದಿನಾಂಕ: 01-09-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 454, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 28-08-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಾಂಯಕಾಲ 16-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಬಾಗಿಲನ್ನು ಬಲವಾದ ವಸ್ತುವಿನಿಂದ ಒಡೆದು ಮನೆಯ ಬೆಡ್ ರೂಮಿನ ಅಲ್ಮೇರಾದ ಬಾಗಿಲನ್ನು ತೆರೆದು ಅಲ್ಮೇರಾದಲ್ಲಿದ್ದ 1). ಕಿವಿ ಓಲೆ-03 ಜೊತೆ, 24 ಗ್ರಾಂ, ಅ||ಕಿ|| 35,000/- ರೂಪಾಯಿ, 2). ಉಂಗುರ-02, 05 ಗ್ರಾಂ, ಅ||ಕಿ|| 20,000/- ರೂಪಾಯಿ, 3). ನೆಕ್ಲೇಸ್-01, 40 ಗ್ರಾಂ, ಅ||ಕಿ|| 70,000/- ರೂಪಾಯಿ, 4). ಬ್ರೇಸಲೆಟ್-01, 4.5 ಗ್ರಾಂ, ಅ||ಕಿ|| 15,000/- ರೂಪಾಯಿ. ಹೀಗೆ ಒಟ್ಟು ಅಂದಾಜು 73.5 ಗ್ರಾಂ ತೂಕದ ಅ||ಕಿ|| 1,40,000 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಬಿಬಿ ಫಾತಿಮಾ ಕೋಂ. ಅಬ್ದುಲ್ ರಜಾಕ್ ಶೇಖ್, ಪ್ರಾಯ-40 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಜಾಲಿ ರೋಡ್, ತಗ್ಗರಗೋಡ, ತಾ: ಭಟ್ಕಳ ರವರು ದಿನಾಂಕ: 01-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 138/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಪೂಜಾ ತಂದೆ ಜಾಧವ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಎಂ.ಕಾಂ ದ್ವಿತಿಯ ವರ್ಷದ ವಿದ್ಯಾರ್ಥಿನಿ, ಸಾ|| ರವೀಂದ್ರ ನಗರ, ತಾ: ಯಲ್ಲಾಪುರ. ಪಿರ್ಯಾದುದಾರರ ತಂಗಿಯಾದ ಇವಳು ಯಲ್ಲಾಪುರದ ಸರಕಾರಿ ಕಾಲೇಜಿನಲ್ಲಿ ಎಂ.ಕಾಂ ವ್ಯಾಸಂಗ ಮಾಡುತ್ತಿದ್ದವಳು, ದಿನಾಂಕ: 31-08-2021 ರಂದು ಬೆಳಿಗ್ಗೆ 08-00 ಗಂಟೆಗೆ ಯಲ್ಲಾಪುರ ಕಾಳಮ್ಮನಗರದ ಸರಕಾರಿ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವಳು, ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಕಾಂತ ತಂದೆ ಜಾಧವ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ರವೀಂದ್ರ ನಗರ, ತಾ: ಯಲ್ಲಾಪುರ ರವರು ದಿನಾಂಕ: 01-09-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 341, 504, 506, 307 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಫಯಾಜ್ ತಂದೆ ಮದರ್ ಸಾಬ್ ಚೌಟಿ, ಸಾ|| ಆರ್.ಟಿ.ಓ ಆಫೀಸ್ ಹಿಂದುಗಡೆ, ಕಸ್ತೂರಬಾ ನಗರ, ತಾ: ಶಿರಸಿ. ಈತನು ಪಿರ್ಯಾದಿಯವರಿಗೆ ನೀಡಬೇಕಾದ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಪಿರ್ಯಾದಿಯವರ ವಿರುದ್ಧ ದ್ವೇಷದಿಂದ ಇದ್ದ ದಿನಾಂಕ: 31-08-2021 ರಂದು 12-30 ಗಂಟೆಯ ಸುಮಾರಿಗೆ ಪಿರ್ಯಾದಿಯು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಎಚ್-4800 ನೇದರಲ್ಲಿ ತನ್ನ ಅಣ್ಣನಾದ ಕೃಷ್ಣ ಸುರೇಶ ಶಿಗ್ಗಾಂವಕರ ಈತನನ್ನು ಕೂಡ್ರಿಸಿಕೊಂಡು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಅಶ್ವಿನಿ ಸರ್ಕಲ್ ಕಡೆಯಿಂದ ರಾಘವೇಂದ್ರ ಸರ್ಕಲ್ ಕಡೆಗೆ ಹೋಗುತ್ತಾ ತೋಟಗಾರಿಕಾ ಕಲ್ಯಾಣ ಮಂಟಪದ ಎದುರು ತಲುಪಿದಾಗ, ರಾಘವೇಂದ್ರ ಸರ್ಕಲ್ ಕಡೆಯಿಂದ ಕಾರ್ ನಂ: ಕೆ.ಎ-19/ಎಮ್.ಎ-6687 ನೇದನ್ನು ಚಲಾಯಿಸಿಕೊಂಡು ಬಂದ ಆರೋಪಿತನು ಪಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಮುಂದೆ ಕಾರನ್ನು ತಂದು ಅಡ್ಡಗಟ್ಟಿ ನಿಲ್ಲಿಸಿ, ಪಿರ್ಯಾದಿಯವರನ್ನು ಉದ್ದೇಶಿಸಿ ‘ಸೂಳೆ ಮಗನೆ, ತನ್ನನ್ನು ಎದುರು ಹಾಕಿಕೊಂಡು ಶಿರಸಿಯಲ್ಲಿ ಹೇಗೆ ದಂಧೆ ಮಾಡುತ್ತೀಯಾ ನೋಡುತ್ತೇನೆ’ ಎಂದು ಹೆದರಿಸಿದ್ದು, ಆಗ ಪಿರ್ಯಾದಿಯವರು ಆರೋಪಿತನ ಬಳಿ ಹೋಗಿ ‘ತಮ್ಮಿಬ್ಬರ ನಡುವಿನ ಹಣದ ವ್ಯವಹಾರ ಮುಗಿದಿದೆ’ ಎಂದು ಹೇಳಿ ತನ್ನ ಮೋಟಾರ್ ಸೈಕಲ್ ಕಡೆಗೆ ಬರುತ್ತಿರುವಾಗ ಆರೋಪಿತನು ಪಿರ್ಯಾದಿಗೆ ‘ಸೂಳೆ ಮಗನೆ, ನಿನ್ನನ್ನು ಕಾರ್ ಹತ್ತಿಸಿ ಕೊಂದೇ ಬಿಡುತ್ತೇನೆ’ ಅಂತಾ ಹೇಳಿ ತನ್ನ ಕಾರನ್ನು ಸ್ಟಾರ್ಟ್ ಮಾಡಿ ಒಮ್ಮೆಲೆ ಪಿರ್ಯಾದಿಯ ಮೇಲೆ ಹತ್ತಿಸಲು ಚಲಾಯಿಸಿಕೊಂಡು ಬಂದು ಕೊಲೆಗೆ ಪ್ರಯತ್ನಿಸಿದಾಗ ಪಿರ್ಯಾದಿಯು ಬದಿಗೆ ಸರಿದು ತಪ್ಪಿಸಿಕೊಂಡಿದ್ದು, ಆಗ ಆರೋಪಿತನು ಪಿರ್ಯಾದಿಗೆ ಗುರಾಯಿಸಿ ನೋಡುತ್ತಾ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಯಶ್ವಂತ ತಂದೆ ಸುರೇಶ ಶಿಗ್ಗಾಂವಕರ, ಪ್ರಾಯ-25 ವರ್ಷ, ವೃತ್ತಿ-ಶ್ಯಾಮಿಯಾನ್ ಕೆಲಸ, ಸಾ|| ಹೊಸ ಬಸ್ ನಿಲ್ದಾಣದ ಹತ್ತಿರ, ಹುಲೇಕಲ್ ರೋಡ್, ತಾ: ಶಿರಸಿ ರವರು ದಿನಾಂಕ: 01-09-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಬಾಷಾ ಸಾಬ್ ತಂದೆ ಮಹಮ್ಮದ್ ಫಾರೂಕ್ ಮುಕಾಶಿ, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ. ಈತನು ದಿನಾಂಕ: 01-09-2021 ರಂದು 18-20 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಸೋಮಾನಿ ಸರ್ಕಲ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 820/- ರೂಪಾಯಿಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭು ಆರ್. ಗಂಗನಹಳ್ಳಿ, ಪೊಲೀಸ್ ವೃತ್ತ ನಿರೀಕ್ಷಕರು, ದಾಂಡೇಲಿ ವೃತ್ತ, ದಾಂಡೇಲಿ ರವರು ದಿನಾಂಕ: 01-09-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಂಜೀವ ತಂದೆ ಉಮೇಶ ನೇತ್ರೇಕರ್, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಸವೇಶ್ವರ ನಗರ, ಅಂಬೇವಾಡಿ, ದಾಂಡೇಲಿ. ಈತನು ದಿನಾಂಕ: 01-09-2021 ರಂದು 21-50 ಗಂಟೆಯ ಸುಮಾರಿಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 950/- ರೂಪಾಯಿಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭು ಆರ್. ಗಂಗನಹಳ್ಳಿ, ಪೊಲೀಸ್ ವೃತ್ತ ನಿರೀಕ್ಷಕರು, ದಾಂಡೇಲಿ ವೃತ್ತ, ದಾಂಡೇಲಿ ರವರು ದಿನಾಂಕ: 01-09-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 140/2021, ಕಲಂ: 288, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಯೋಗೇಶಸಾಹು ತಂದೆ ಮುಲ್ಚಂದ್, ಪ್ರಾಯ-31 ವರ್ಷ, ವೃತ್ತಿ-ಸೂಪರವೈಸರ್, ಸಾ|| ಬಾರ್ಕೆಡ್ ಬೆಟೂಲ್, ಮಧ್ಯಪ್ರದೇಶ, 2]. ಗೋಪಾಲಸ್ವಾಮಿ ತಂದೆ ಅಚ್ಚನ್, ಪ್ರಾಯ-32 ವರ್ಷ, ಸಾ|| ಶಿವಗಾಶಿ, ವೀರುದ ನಗರ, ತಮಿಳನಾಡು ಹಾಗೂ ಇತರರು. ಈ ನಮೂದಿತ ಆರೋಪಿತರು ಹಳಿಯಾಳದ ಹುಲ್ಲಟ್ಟಿಯಲ್ಲಿರುವ ಇ.ಐ.ಡಿ ಇಂಡಿಯಾ ಪ್ಯಾರಿ ಶುಗರ್ ಫ್ಯಾಕ್ಟರಿಯಲ್ಲಿ ಮೇಲ್ಛಾವಣಿಯಲ್ಲಿದ್ದ ಕಬ್ಬಿಣದ ಎಂಗಲರ್ ಬೀಮ್ ದ ಬೆಲ್ಟ್ ಕನ್ವೇಯರ್ ಫ್ರೇಮ್ ರಿಪೇರಿ ಕೆಲಸದ ಸಲುವಾಗಿ ಪಿರ್ಯಾದಿ ಮತ್ತು ಪಿರ್ಯಾದಿಯ ಸಂಗಡ ಬಂದಿದ್ದ ಕುಲದೀಪ ತಂದೆ ಲಲನ್, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೇಬೂಯಾ, ಗೋರ್ಡವ್, ಮಹಾರಂಜಗಂಜ್, ಉತ್ತರ ಪ್ರದೇಶ ಹಾಗೂ ಇತರರಿಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸುತ್ತಿದ್ದಾಗ, ದಿನಾಂಕ: 01-09-2021 ರಂದು ಬೆಳಿಗ್ಗೆ 11-00 ಗಂಟೆಗೆ ಫ್ಯಾಕ್ಟರಿಯ ಬ್ಯಾಗಿಂಗ್ ಸೆಕ್ಟರ್ ದಲ್ಲಿ ಕಬ್ಬಿಣದ ಎಂಗಲರ್ ಬೀಮ್ ನ್ನು ಕುಲದೀಪ ಮತ್ತು ಸುನೀಲ್ ಹಾಗೂ ಸಂತೋಷ ಹಗ್ಗ ಕಟ್ಟಿ ಕೆಳಗಡೆ ಬಿಡುತ್ತಿದ್ದಾಗ, ಸದ್ರಿಯವರಿಗೆ ಅದರ ಭಾರ ಹಿಡಿಯಲು ಆಗದೇ ಇದ್ದಿದ್ದರಿಂದ ಒಮ್ಮೇಲೆ ಕಬ್ಬಿಣದ ಎಂಗಲರ್ ಬೀಮ್ ಕೆಳಗಡೆ ಬಿದ್ದಿದ್ದರಿಂದ ಕುಲದೀಪ ಈತನು ಎಂಗಲರ್ ಸಂಗಡ ಮೇಲಿಂಗ ಕೆಳಗಡೆ ಬಿದ್ದು, ಹಣೆಗೆ, ತಲೆಗೆ ಹಾಗೂ ಸೊಂಟಕ್ಕೆ ಪೆಟ್ಟಾಗಿ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಾಗಿದ್ದವನು, ಉಪಚಾರ ಫಲಕಾರಿಯಾಗದೇ ಮಧ್ಯಾಹ್ನ 01-20 ಗಂಟೆಗೆ ಮೃತಪಟ್ಟಿರುತ್ತಾನೆ. ಫ್ಯಾಕ್ಟರಿಯಲ್ಲಿಯ ಕಬ್ಬಿಣದ ಎಂಗಲರ್ ಬೀಮ್ ಅನ್ನು ಮೇಲಿಂದ ಕೆಳಗಡೆ ಇಳಿಸಲು ಕ್ರೇನ್ ಅಥವಾ ಇತರೆ ಸಾಧನಗಳನ್ನು ಬಳಸದೇ ಬಾಲಾಜಿ ಎಂಟರಪ್ರೈಸಿಸ್ ಸೂಪರವೈಸರ್ ನಮೂದಿತ ಆರೋಪಿತರು ಕೆಲಸಗಾರರ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಮುಂಜಾಗ್ರತೆ ವಹಿಸದೇ ನಿರ್ಲಕ್ಷ್ಯತದಿಂದ ಕೆಲಸ ಮಾಡಲು ಹೇಳಿದ್ದರಿಂದ ಕುಲದೀಪ ಇವನು ಮೇಲಿಂದ ಕೆಳಗಡೆ ಬಿದ್ದು ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಷ್ಣುದೇವ ತಂದೆ ಓಂಪ್ರಕಾಶ, ಪ್ರಾಯ-20 ವರ್ಷ, ವೃತ್ತಿ-ವೆಲ್ಡರ್ ಕೆಲಸ, ಸಾ|| ಬೆಲ್ವಾ @ ಬೇಲ್ವೇನಿಯಾ, ಕುಶಿ ನಗರ, ಬಂಕಾತ್, ಭರಪುರವಾ, ಉತ್ತರ ಪ್ರದೇಶ ರವರು ದಿನಾಂಕ: 01-09-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಮೇಶ ತಂದೆ ದ್ಯಾವಾ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾನಳ್ಳಿ, ಅಳವಳ್ಳಿ ಗ್ರಾಮ, ತಾ: ಸಿದ್ದಾಪುರ. ಈತನು ಪಿರ್ಯಾದಿಯ ಖಾಸಾ ಅಣ್ಣನಿದ್ದು, ಪಿರ್ಯಾದಿ ಹಾಗೂ ಆರೋಪಿತನ ಗದ್ದೆಯು ಸಿದ್ದಾಪುರ ತಾಲೂಕಿನ ಸಂಪಖಂಡದಲ್ಲಿ ಅಕ್ಕ ಪಕ್ಕದಲ್ಲಿದ್ದು, ಆರೋಪಿತನು ಗದ್ದೆಗೆ ನೀರು ಬಿಡುವ ವಿಚಾರವಾಗಿ ಪಿರ್ಯಾದಿಯೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದವನಿದ್ದು, ದಿನಾಂಕ: 31-08-2021 ರಂದು 17-15 ಗಂಟೆಯ ಸುಮಾರಿಗೆ ಅರೋಪಿತನು ಪಿರ್ಯಾದಿಯ ಗದ್ದೆಯ ಹಾಳೆ ಒಡೆದು ತನ್ನ ಗದ್ದೆಗೆ ನೀರು ಬಿಟ್ಟುಕೊಳ್ಳಲು ಮುಂದಾದಾಗ ಪಿರ್ಯಾದಿಯು ಆರೋಪಿತನಿಗೆ ‘ಗದ್ದೆಯ ಹಾಳೆ ಒಡೆಯಬೇಡ’ ಅಂತಾ ಹೇಳಿದ್ದಕ್ಕೆ ಸಿಟ್ಟುಗೊಂಡ ಆರೋಪಿತನು ‘ಬೋಳಿ ಮಗನೇ, ಸೂಳೆ ಮಗನೇ’ ಅಂತಾ ಅವಾಚ್ಯವಾಗಿ ಬೈಯ್ದು, ತನ್ನ ಕೈಯಲ್ಲಿದ್ದ ಗುದ್ದಲಿಯ ಕಟ್ಟಿಗೆಯ ಕಾವಿನಿಂದ ಪಿರ್ಯಾದಿಯ ಎಡಗೈಗೆ ಹಾಗೂ ಎಡ ಹೆಗಲಿಗೆ ಹೊಡೆದು ಗಾಯನೋವು ಪಡಿಸಿ, ’ನಿನಗೆ ಕೊಲೆ ಮಾಡದೆ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ದ್ಯಾವಾ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾನಳ್ಳಿ, ಅಳವಳ್ಳಿ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 01-09-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 01-09-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶ್ಯಾಮಸುಂದರ ತಂದೆ ಭೀಮರಾವ್ ಕದಂ, ಪ್ರಾಯ-45 ವರ್ಷ, ವೃತ್ತಿ-ಭತ್ತದ ವ್ಯಾಪಾರ, ಸಾ|| ಮಂಗಳವಾಡಾ, ತಾ: ಹಳಿಯಾಳ, ಹಾಲಿ ಸಾ|| ಯಲ್ಲಾಪುರ ನಾಕಾ, ತಾ: ಹಳಿಯಾಳ. ಪಿರ್ಯಾದಿಯವರ ಅಣ್ಣನಾದ ಇವರು ಭತ್ತದ ವ್ಯಾಪಾರ ಮಾಡಿಕೊಂಡಿದ್ದವರು, ಕೋವಿಡ್-19 ಲಾಕಡೌನ್ ದಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗಿದೆ ಅಂತಾ ಮನಸ್ಸಿಗೆ ಹಚ್ಚಿಕೊಂಡು ಸರಾಯಿ ಕುಡಿಯುತ್ತಿದ್ದವರು, ದಿನಾಂಕ: 31-08-2021 ರಂದು 17-30 ಗಂಟೆಗೆ ಹಳಿಯಾಳ ಶಹರದ ಯಲ್ಲಾಪುರ ನಾಕಾದಲ್ಲಿರುವ ತನ್ನ ಮನೆಯಲ್ಲಿ ಕಬ್ಬಿನ ಬೆಳೆಗೆ ಹೊಡೆಯುವ ಔಷಧ ಕುಡಿದು ಅಸ್ವಸ್ಥಗೊಂಡವರಿಗೆ, ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸಿ, ಹೆಚ್ಚಿನ ಉಪಚಾರಕ್ಕೆ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಹೀಗೆ ಉಪಚಾರದಲ್ಲಿದ್ದ ಶ್ಯಾಮಸುಂದರ ಇವರು ಉಪಚಾರ ಫಲಕಾರಿಯಾಗದೇ ದಿನಾಂಕ: 01-09-2021 ರಂದು 16-28 ಗಂಟೆಗೆ ಮೃತಪಟ್ಟಿರುತ್ತಾರೆ. ಸದ್ರಿಯವರು ವ್ಯಾಪಾರದಲ್ಲಿ ನಷ್ಟ ಉಂಟಾಗಿದೆ ಅಂತಾ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಯೇ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಜಯಕುಮಾರ ತಂದೆ ಭೀಮರಾವ್ ಕದಂ, ಪ್ರಾಯ-40 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ಮಂಗಳವಾಡ, ತಾ: ಹಳಿಯಾಳ, ಹಾಲಿ ಸಾ|| ಯಲ್ಲಾಪುರ ನಾಕಾ, ತಾ: ಹಳಿಯಾಳ ರವರು ದಿನಾಂಕ: 01-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 02-09-2021 04:56 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080