ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-04-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಪ್ರತಿಭಾ ತಂದೆ ಜಯಶಂಕರ ಗಾಂವಕರ ಕೋಂ. ಧನಂಜಯ ರಾಣೆ, ಪ್ರಾಯ-41 ವರ್ಷ, ವೃತ್ತಿ-ಶಿಕ್ಷಕಿ, ಸಾ|| ಸಣ್ಣ ಮುಡಗೇರಿ, ಅಂಗಡಿ, ಕಾರವಾರ (ಕಾರ್ ನಂ: ಜಿ.ಎ-06/ಎಫ್-1629 ನೇದರ ಚಾಲಕಿ). ನಮೂದಿತ ಆರೋಪಿತಳು ದಿನಾಂಕ: 27-03-2021 ರಂದು 11-30 ಗಂಟೆಗೆ ಆರೋಪಿ ತನ್ನ ಕಾರ್ ನಂ: ಜಿ.ಎ-06/ಎಫ್-1629 ನೇದನ್ನು ಚಿಂಚೆವಾಡಾದ ಅಮ್ಮ ಸ್ಕೂಲ್ ಮುಂದಿನ ಗೇಟ್ ಒಳಗಿನಿಂದ ಯಾವುದೇ ಸೂಚನೆ ನೀಡದೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಒಮ್ಮೇಲೆ ರಸ್ತೆಗೆ ಬಂದು ಗಾಂವಗೇರಿ/ಮಾಜಾಳಿಯಿಂದ ಸದಾಶಿವಗಡ ಕಡೆಗೆ ಹೋಗುತಿದ್ದ ಸ್ಕೂಟರ್ ನಂ: ಕೆ.ಎ-30/ವಿ-1652 ನೇದಕ್ಕೆ ಡಿಕ್ಕಿ ಪಡಿಸಿ, ಸ್ಕೂಟರ್ ಮೇಲಿದ್ದ ಶ್ರೀ ರವಿ ತಂದೆ ನಾರಾಯಣ ಅಂಬಿಗ ಹಾಗೂ ಶ್ರೀಮತಿ ರೇಣುಕಾ ಕೋಂ. ರವಿ ಅಂಬಿಗ ರವರಿಗೆ ಗಾಯ ಪಡಿಸಲು ಕಾರಣರಾದ ಬಗ್ಗೆ ಪಿರ್ಯಾದಿ ಶ್ರೀಮತಿ ಸೋನಾಲಿ ಕೋಂ. ಸಂದೀಪ ಸೈಲ್, ಪ್ರಾಯ-39 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಾವಳ, ಮಾಜಾಳಿ, ಕಾರವಾರ ರವರು ದಿನಾಂಕ: 02-04-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 326, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾತ್ರೇಯ ತಂದೆ ಹಮ್ಮಯ್ಯ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜೇಷ್ಠಪುರ, ಬಾಡ, ತಾ: ಕುಮಟಾ. ನಮೂದಾದ ಆರೋಪಿತನು ತನ್ನ ಬಳಿಯಲ್ಲಿ ಹಲವು ವರ್ಷಗಳಿಂದ ಪಿರ್ಯಾದಿಯ ಅಣ್ಣನಾದ ಶ್ರೀ ರಾಮಚಂದ್ರ ತಂದೆ ಮಾರು ಪಟಗಾರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜೇಷ್ಠಪುರ, ಬಾಡ, ತಾ: ಕುಮಟಾ ಇವರು ಆಗಾಗ ಕೂಲಿ ಕೆಲಸಕ್ಕೆ ಹೋಗಿ ಕೆಲಸವನ್ನು ಮಾಡಿಕೊಂಡು ಬಂದವರಿದ್ದು, ದಿನಾಂಕ: 30-03-2021 ರಂದು 20-30 ಗಂಟೆಯಲ್ಲಿ ಪಿರ್ಯಾದಿಯ ಅಣ್ಣ ರಾಮಚಂದ್ರ ಪಟಗಾರ ಇವರು ತಾವು ದುಡಿದ ಕೂಲಿ ಹಣವನ್ನು ಕೇಳಲು ಆರೋಪಿತನ ಮನೆಗೆ ಹೋದಾಗ ಆರೋಪಿತನು ಪಿರ್ಯಾದಿಗೆ ಹಣವನ್ನು ಕೊಡಲು ನಿರಾಕರಿಸಿದ್ದು, ಪಿರ್ಯಾದಿಯ ಅಣ್ಣ ‘ತನಗೆ ಹಣದ ಅವಶ್ಯಕತೆಯಿದೆ. ಹಣವನ್ನು ನೀಡಿ’ ಎಂದು ಕೇಳಿಕೊಂಡಾಗ ಆರೋಪಿತನು ಸಿಟ್ಟಾಗಿ’ ’ನನ್ನ ಹತ್ತಿರ ನಿನ್ನ ಹಣ ಇಲ್ಲ. ನಾನು ನಿನಗೆ ಯಾವ ಹಣವನ್ನು ಕೊಡುವುದಿಲ್ಲ. ನೀನು ಏನು ಬೇಕಾದರು ಮಾಡಿಕೋ. ಇನ್ನೊಮ್ಮೆ ನನ್ನ ಬಳಿಯಲ್ಲಿ ಹಣವನ್ನು ಕೇಳಲು ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಕಟ್ಟಿಗೆಯ ರೀಪಿನ ತುಂಡಿನಿಂದ ರಾಮಚಂದ್ರ ಪಟಗಾರ ಈತನಿಗೆ ತಲೆಯ ಮೇಲೆ, ಬಲಗಾಲಿನ ಮೊಣಗಂಟಿನ ಮೇಲೆ ಹಾಗೂ ಬಲಭುಜದ ಮೇಲೆ ಬಲವಾಗಿ ಹೊಡೆದು ಬಲಭುಜದ ಮೂಳೆ ಮುರಿಯುವ ಹಾಗೆ ಗಾಯನೋವು ಪಡಿಸಿದಲ್ಲದೇ, ‘ಇನ್ನೊಮ್ಮೆ ನನ್ನ ಸುದ್ದಿಗೆ ಬಂದರೆ, ನಿನ್ನನು ಸುಮ್ಮನೆ ಬಿಡುವುದಿಲ್ಲ. ಕೊಲೆ ಮಾಡಿ ಬಿಡುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿರುವ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ಮಾರು ಪಟಗಾರ, ಪ್ರಾಯ-39 ವರ್ಷ, ವೃತ್ತಿ-ಜಿಯೋ ಟೆಕ್ನೀಶಿಯನ್, ಸಾ|| ಜೇಷ್ಠಪುರ, ಬಾಡ, ತಾ: ಕುಮಟಾ ರವರು ದಿನಾಂಕ: 02-04-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 31-03-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 01-04-2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಟಿಬೇಟಿಯನ್ ಲಾಮಾ ಕ್ಯಾಂಪ್ ನಂ: 1 ರ ಕ್ರಾಸಿನಲ್ಲಿರುವ ಪಿರ್ಯಾದಿಯವರ ಅಂಗಡಿಯ ಕಿಡಕಿಯ ಚಿಲಕವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಒಡೆದು ಅಂಗಡಿಯ ಒಳ ಹೊಕ್ಕು, ಅಂಗಡಿಯಲ್ಲಿದ್ದ ಸಿ.ಸಿ ಟಿವಿ ಕ್ಯಾಮೆರಾವನ್ನು ಮುರಿದು ಅಂಗಡಿಯಲ್ಲಿ ಇಟ್ಟಿದ್ದ 11,000/- ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಸತ್ಯನಾರಾಯಣ ಶೇಟ್, ಪ್ರಾಯ-31 ವರ್ಷ, ವೃತ್ತಿ-ಜಿಯೋ ಸಿಮ್ ಡಿಸ್ಟ್ರಿಬ್ಯೂಟರ್, ಸಾ|| ನೆಹರೂ ನಗರ, ತಾ: ಮುಂಡಗೋಡ ರವರು ದಿನಾಂಕ: 02-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಯೂರ ತಂದೆ ಭೂಪೇಂದ್ರ ಪಾಲ್, ಪ್ರಾಯ-35 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ಇಂದಿರಾ ನಗರ, ಬೆಂಗಳೂರು (ಕಾರ್ ನಂ: ಕೆ.ಎ-03/ಎನ್.ಜಿ-5523 ನೇದರ ಚಾಲಕ). ನಮೂದಿತ ಆರೋಪಿತನು ಪಿರ್ಯಾದಿಯ ಸ್ನೇಹಿತನಿದ್ದು, ದಿನಾಂಕ: 02-04-2021 ರಂದು ಆರೋಪಿತನ ಕಾರ್ ನಂ: ಕೆ.ಎ-03/ಎನ್.ಜಿ-5523 ನೇದರ ಮೇಲೆ ಪಿರ್ಯಾದಿ ಮತ್ತು ಪಿರ್ಯಾದಿಯ ಸ್ನೇಹಿತರಾದ ಗೌತಮ ಕದಂ, ಪರಮೇಶ್ವರ ಗೌಡಾ ಇವರುಗಳು ಬೆಂಗಳೂರಿಂದ ದಾಂಡೇಲಿಗೆ ಪ್ರವಾಸಕ್ಕೆ ಹೊರಟಿದ್ದು, ಆರೋಪಿತನು ತನ್ನ ಕಾರನ್ನು ಯಲ್ಲಾಪುರ ಬದಿಯಿಂದ ಹಳಿಯಾಳ ಬದಿಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಮಾನವಿಯ ಪ್ರಾಣಕ್ಕೆ ಅಪಾಯವಾಗುಂತೆ ಚಲಾಯಿಸಿಕೊಂಡು ಬರುತ್ತಾ, ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ಕುರಿಗದ್ದಾ ಕ್ರಾಸ್ ಹತ್ತಿರ ರಸ್ತೆಯ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ, ಗೌತಮ ಕದಂ ಈತನು ತಲೆಗೆ ಹಾಗೂ ಎಡಭುಜಕ್ಕೆ ಭಾರೀ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೇ, ಪರಮೇಶ್ವರ ಗೌಡಾ ಇವರ ಬಲಗೈ ಮುರಿದಿರುತ್ತದೆ ಮತ್ತು ಪಿರ್ಯಾದಿಯ ಬಲಗೈಗೆ ಹಾಗೂ ಆರೋಪಿತನಿಗೆ ಎಡಭುಜಕ್ಕೆ ಮತ್ತು ತಲೆಯ ಎಡಭಾಗಕ್ಕೆ ಗಾಯನೋವು ಆಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಮರ ತಂದೆ ಶಿವರಾಜ್ ಲಕ್ಕಶೆಟ್ಟಿ, ಪ್ರಾಯ-30 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ಗುಂಪಾ, ಬೀದರ ರವರು ದಿನಾಂಕ: 02-04-2021 ರಂದು 14-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಾಹೀದ್ ತಂದೆ ಇಕ್ಬಾಲ್, ಪ್ರಾಯ-30 ವರ್ಷ, ವೃತ್ತಿ-ಮೇಸ್ತ್ರಿ ಕೆಲಸ, ಸಾ|| ಹೆಮ್ಮಾಡಿ, ತಾ: ಕುಂದಾಪುರ, ಜಿ: ಉಡುಪಿ, ಹಾಲಿ ಸಾ|| ಜೋಗ, ತಾ: ಸಾಗರ, ಜಿ: ಶಿವಮೊಗ್ಗ (ಮೋಟಾರ್ ಸೈಕಲ್ ನಂ: ಕೆ.ಎ-15/ಎಲ್-4308 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 02-04-2021 ರಂದು ಮಧ್ಯಾಹ್ನ ಮೋಟಾರ್ ಸೈಕಲ್ ನಂ: ಕೆ.ಎ-15/ಎಲ್-4308 ನೇದನ್ನು ಸಿದ್ದಾಪುರ-ಸೊರಬಾ ಮುಖ್ಯ ರಸ್ತೆಯಲ್ಲಿ ಸೊರಬಾ ಕಡೆಯಿಂದ ಸಿದ್ದಾಪುರ ಪಟ್ಟಣದ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವನು, 14-20 ಗಂಟೆಯ ಸುಮಾರಿಗೆ ಕಿಣಿ ರವರ ಮನೆಯ ಎದುರು ಅವನ ಮುಂದಿನಿಂದ ಹೋಗುತ್ತಿದ್ದ ಟಾಟಾ ಏಸ್ ವಾಹನವನ್ನು ನಿಷ್ಕಾಳಜೀತನದಿಂದ ಓವರಟೇಕ್ ಮಾಡಿ ಮೋಟಾರ್ ಸೈಕಲನ್ನು ರಸ್ತೆಯ ಬಲಕ್ಕೆ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-15/ಇ.ಬಿ-4858 ನೇದಕ್ಕೆ ಮುಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ಹಿಂಬದಿ ಸವಾರ ಪಿರ್ಯಾದಿಯ ಎರಡೂ ಕಾಲಿನ ಮಂಡಿಗೆ ಹಾಗೂ ಮೋಟಾರ್ ಸೈಕಲ್ ಸವಾರ ಪಿರ್ಯಾದಿಯ ಮಾವ ಮಹ್ಮದ್ ಇಬ್ರಾಹಿಂ ತಂದೆ ಉಸ್ಮಾನ್ ಸಾಬ್, ಪ್ರಾಯ-22 ವರ್ಷ, ಸಾ|| 7 ನೇ ಕ್ರಾಸ್, ಆಜಾದ್ ನಗರ, ಜಾಲಿ ಕ್ರಾಸ್, ತಾ: ಭಟ್ಕಳ ಇವರ ಬಲಗಾಲಿಗೆ, ಬಲ ಪಾದಕ್ಕೆ, ಬಲಗೈ ಬೆರಳಿಗೆ ಗಾಯನೋವು ಪಡಿಸಿದ್ದಲ್ಲದೆ, ಆರೋಪಿತನು ತನಗೂ ಸಹ ತನ್ನ ತಲೆಗೆ, ಬಲ ಕೆನ್ನೆಗೆ ಹಾಗೂ ಎಡಗೈಗೆ ಗಾಯನೋವುಂಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶಾಹೀದ್ ಆಫ್ರೀದಿ ತಂದೆ ಅಬ್ದುಲ್ ರಹಿಂ ಸಾಬ್, ಪ್ರಾಯ-16 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹಾಳದಕಟ್ಟಾ, ತಾ: ಸಿದ್ದಾಪುರ ರವರು ದಿನಾಂಕ: 02-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನೌಶಾದ್ ಹುಸೇನಸಾಬ್ ಮಲಂಗಸಾಬ್, ಸಾ|| ಇಂದಿರಾನಗರ, ಚಿಂಬೇಲಿ, ತಿಸ್ವಾಡಿ, ಗೋವಾ (ಅಶೋಕ ಲೈಲ್ಯಾಂಡ್ ವಾಹನ ನಂ: ಜಿ.ಎ-07/ಎಫ್-6898 ನೇದರ ಚಾಲಕ). ದಿನಾಂಕ: 01-04-2021 ರಂದು ಸಾಯಂಕಾಲ 05-15 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಪಿರ್ಯಾದಿಯವರ ಗೆಳೆಯ ಶುಭಂ ಸೇರಿಕೊಂಡು ಪಿರ್ಯಾದಿಯವರು ಸವಾರಿ ಮಾಡುತ್ತಿದ್ದ ಹೀರೋ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಜಿ.ಎ-05/ ಎನ್-5690 ನೇದರ ಮೇಲೆ ದಾಂಡೇಲಿಯಲ್ಲಿರುವ ಪಿರ್ಯಾದಿಯವರ ಅಜ್ಜಿ ಮನಗೆ ಜಗಲಬೇಟ-ಸಿಂಗರಗಾಂವ-ದಾಂಡೇಲಿ ಮಾರ್ಗವಾಗಿ  ಹೋಗುತ್ತಿರುವಾಗ, ದಾಂಡೇಲಿ ಬದಿಯಿಂದ ಅಶೋಕ ಲೈಲ್ಯಾಂಡ್ ವಾಹನ ನಂ: ಜಿ.ಎ-07/ಎಫ್-6898 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ನಮೂದಿತ ಆರೋಪಿತನು ಪಿರ್ಯಾದಿಯವರ ಬಾಬ್ತು ಹೀರೋ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಜಿ.ಎ-05/ಎನ್-5690 ನೇದಕ್ಕೆ ತಾಗಿಸಿ ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಹಾಗೂ ಪಿರ್ಯಾದಿಯವರ ಗೆಳೆಯ ಶುಭಂ ಇವನಿಗೆ ತೀವೃ ಸ್ವರೂಪದ ದುಃಖಾಪತ್ ಪಡಿಸಿ, ಪಿರ್ಯಾದಿಯವರ ಬಾಬ್ತು ಹೀರೋ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಜಿ.ಎ-05/ಎನ್-5690 ನೇದನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಕುಮಾರ: ಅಜಯ ತಂದೆ ಬಸವರಾಜ ಬಂಡಿವಡ್ಡರ, ಪ್ರಾಯ-21 ವರ್ಷ, ವೃತ್ತಿ-ತಿರುಮಲ ಸೊಸೈಟಿಯಲ್ಲಿ ಬಿಸಿನೆಸ್ ಅಡ್ವೈಸೆರ್, ತಿಸ್ಕರ್ ಬ್ರ್ಯಾಂಚ್, ಸಾ|| ಆವಂತಿನಗರ, ಟಿಸ್ಕ, ಉಜಗಾಂವ್, ತಾ: ಪೊಂಡಾ, ಜಿ: ಉತ್ತರ ಗೋವಾ, ಗೋವಾ ರವರು ದಿನಾಂಕ: 02-04-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-04-2021

at 00:00 hrs to 24:00 hrs

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗಣೇಶ ತಂದೆ ದೇವೇಂದ್ರ ಶಿರಾಲಿ, ಪ್ರಾಯ-38 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಶಿರಾಲಿ, ತಾ: ಭಟ್ಕಳ. ನಮೂದಿತ ಮೃತನು ಮನೆ ಕಟ್ಟುವ ಸಲುವಾಗಿ ಕೆಲವು ಬ್ಯಾಂಕಗಳಲ್ಲಿ ಸಾಲ ಮಾಡಿದ್ದವನು ಹಾಗೂ ಆಟೋ ರಿಕ್ಷಾವನ್ನು ಸಾಲ ಮಾಡಿಕೊಂಡು ಓಡಿಸಿಕೊಂಡಿದ್ದವನು. ಸಾಲ ತುಂಬಲು ಕಷ್ಟವಾಗುತ್ತಿದೆ ಅಂತಾ ತನ್ನ ಹೆಂಡತಿಯ ಹತ್ತಿರ ಆಗಾಗ ಹೇಳುತ್ತಿದ್ದವನು, ದಿನಾಂಕ: 01-04-2021 ರಂದು ಮಧ್ಯಾಹ್ನ 12-00 ಗಂಟೆಯ ಸಮಯಕ್ಕೆ ‘ಮನೆಯಲ್ಲಿ ಸೋಲಾರ್ ಜೋಡಣೆ ಮಾಡಲು 6,000/- ರೂಪಾಯಿ ಬೇಕು’ ಅಂತಾ ತನ್ನ ಹೆಂಡತಿಯ ಹತ್ತಿರ ಹೇಳಿದ್ದು, ಅದಕ್ಕೆ  ಹೆಂಡತಿಯು ‘ಮೊದಲು ಬ್ಯಾಂಕಿನಲ್ಲಿರುವ ಸಾಲ ತೀರಿಸಿ’ ಅಂತಾ ಹೇಳಿದಕ್ಕೆ ಹೆಂಡತಿಯ ಹತ್ತಿರ ಜಗಳವಾಡಿ ಮನೆಯಿಂದ ಹೋದವನು, ನಂತರ ಸಾಯಂಕಾಲ 05-00 ಗಂಟೆಯ ಸಮಯಕ್ಕೆ ಹೆಂಡತಿಗೆ ಪೋನ್ ಮಾಡಿ ‘ತಾನು ಸಾಯುತ್ತೇನೆ’ ಅಂತಾ ಹೇಳಿದವನು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 02-04-2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ವೆಂಕಟಾಪುರ ಹೊಳೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ನಾಗರತ್ನ ಗಣೇಶ ಶಿರಾಲಿ, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಶಿರಾಲಿ, ಎ.ಪಿ.ಎಮ್.ಸಿ ಮಾರ್ಕೆಟ್ ಹತ್ತಿರ, ತಾ: ಭಟ್ಕಳ ರವರು ದಿನಾಂಕ: 02-04-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಲ್ಲಿಕಾರ್ಜುನ ತಂದೆ ಬಸಪ್ಪ ಹೊಸುರು, ಪ್ರಾಯ-26 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಇಂದೂರ, ತಾ: ಮುಂಡಗೋಡ. ನಮೂದಿತ ಮೃತನು ಸುದ್ದಿದಾರಳ ಮಗನಾಗಿದ್ದು, ಈತನು ಸರಾಯಿ ಕುಡಿದುಕೊಂಡು ಯಾವದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 01-04-2021 ರಂದು ರಾತ್ರಿ 08-00 ಗಂಟೆಯಿಂದ ರಾತ್ರಿ 11-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಮೊದಲನೆಯ ಕೋಣೆಯ ಜಂತಿಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಯೇ ಹೊರತು ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಅನಸೂಯಾ ಕೋಂ. ಬಸಪ್ಪ ಹೊಸುರು, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಂದೂರ, ತಾ: ಮುಂಡಗೋಡ ರವರು ದಿನಾಂಕ: 02-04-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಮಿಲನ ಕೋಂ. ಲಾಡು ಕಾಂಬಳೆ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವೈನಿ, ಜಗಲಬೇಟ, ತಾ: ಜೋಯಿಡಾ. ನಮೂದಿತ ಮೃತಳು ವಿಪರೀತ ಸರಾಯಿ ಕುಡಿಯುವ ಚಟ ಹೊಂದಿದ್ದವಳು, ದಿನಾಂಕ: 02-04-2021 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ವಿಪರೀತ ಸರಾಯಿ ಕುಡಿದಿದ್ದವಳು. ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಮನೆಯ ಜನರೊಂದಿಗೆ ಮನೆಯಲ್ಲಿ ತಿಂಡಿ ತಿಂದುಕೊಂಡು ಹೊರಗೆ ಹೋದವಳು, ಮಧ್ಯಾಹ್ನ 01-00 ಗಂಟೆಯಾದರೂ ಮನೆಗೆ ಬರದೇ ಇದ್ದಾಗ, ಪಿರ್ಯಾದಿ ಹಾಗೂ ಅವನ ಮಕ್ಕಳೂ ಸೇರಿಕೊಂಡು ಕಲುಂಬುಲಿಯ ಜಾತ್ರೆ ನಡೆಯುವ ಸ್ಥಳದಲ್ಲಿ ಹೋಗಿ ಹುಡಕಾಡಿದರೂ ಸಿಗದೇ ಇದ್ದಾಗ, ಪಿರ್ಯಾದಿಯವರು ಕಟ್ಟಿಗೆ ತರಲು ಹೋಗುವ ಹೊಳೆ ಹತ್ತಿರದ ಕಾಡಿನಲ್ಲಿ ನೋಡಿಕೊಂಡು ಬರಲು ಹೋದಾಗ ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ಮಾತಾರವಾಡಾ ನದಿಯ ನೀರಿನ ಹೊಂಡದಲ್ಲಿ ತಲೆಯ ಕೂದಲು ಕಂಡಿದ್ದು, ಸಮೀಪ ಹೋಗಿ ನೋಡಿದಾಗ ಅದು ಪಿರ್ಯಾದಿಯವರ ಹೆಂಡತಿ ಇವರ ದೇಹವಾಗಿತ್ತು, ಸದರಿ ಮೃತಳು ಸರಾಯಿ ಕುಡಿದ ಮತ್ತಿನಲ್ಲಿ ಕಟ್ಟಿಗೆ ತರಲೋ ಅಥವಾ ಇನ್ನಾವುದೋ ಕಾರಣಕ್ಕೆ ಹೊಳೆಯ ಹತ್ತಿರ ಹೋದವಳು ಕಾಲು ಜಾರಿ ಹೊಳೆಯಲ್ಲಿ ಬಿದ್ದು ಸತ್ತಿದ್ದು, ಸದರಿ ಮೃತಳ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಾಡು ತಂದೆ ದ್ಯಾವಪ್ಪ ಕಾಂಬಳೆ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೋಬಿವಾಡಾ, ಕ್ಯಾಸಲರಾಕ, ತಾ: ಜೋಯಿಡಾ ರವರು ದಿನಾಂಕ: 02-04-2021 ರಂದು 16-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 03-04-2021 05:15 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080