ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-04-2022

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಿರೀಶ ಕೆ. ಬಿ ತಂದೆ ಬಸವರಾಜು, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಕೆಂಬಾಳು ಹೋಬಳಿ, ಬಾಗೂರು, ತಾ: ಚನ್ನರಾಯಪಟ್ಟಣ, ಜಿ: ಹಾಸನ (ಲಾರಿ ನಂ: ಎಮ್.ಎಚ್-06/ಎ.ಕ್ಯೂ-5491 ನೇದರ ಚಾಲಕ). ಈತನು ದಿನಾಂಕ: 01-04-2022 ರಂದು ಬೆಳಗ್ಗೆ 09-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರ ಗೇರುಸೊಪ್ಪದ ಸೂಳೇಮುರ್ಕಿಯ ತೀವ್ರ ತಿರುವಿನಲ್ಲಿ ತನ್ನ ಬಾಬ್ತು ಲಾರಿ ನಂ: ಎಮ್.ಎಚ್-06/ಎ.ಕ್ಯೂ-5491 ನೇದನ್ನು ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ಹಳ್ಳಕ್ಕೆ ಕೆಡವಿ ಅಪಘಾತ ಪಡಿಸಿ ಲಾರಿಯನ್ನು ಜಖಂ ಪಡಿಸಿದ್ದಲ್ಲದೇ, ತಾನು ಸಹ ತನ್ನ ಎಡಗಾಲಿಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ಎಸ್. ಕೆ. ತಂದೆ ಕಳಸೇ ಗೌಡ, ಪ್ರಾಯ-28 ವರ್ಷ, ವೃತ್ತಿ-ವ್ಯಾಪಾರ, ಸಾ|| ಕಾಟಂನಲ್ಲೂರ, ಪೋ: ವೀರಗೋ ನಗರ, ತಾ: ಹೊಸಕೋಟೆ, ಜಿ: ಬೆಂಗಳೂರು ಗ್ರಾಮಾಂತರ ರವರು ದಿನಾಂಕ: 02-04-2022 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 40/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾರಾಯಣ ತಂದೆ ಮಳ್ಳಾ ಮೊಗೇರ, ಪ್ರಾಯ-55 ವರ್ಷ, ಸಾ|| ಮೀಸೆಮನೆ, ಅಳ್ವೆಗದ್ದೆ, ಶಿರೂರ ಗ್ರಾಮ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಜಿ-4511 ನೇದರ ಸವಾರ). ಈತನು ದಿನಾಂಕ: 09-09-2021 ರಂದು ಮಧ್ಯಾಹ್ನ 15-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಪುರವರ್ಗ ಗಣೇಶ ನಗರದ ಗರ್ಡಿಕರ ಅಂಗಡಿ ಎದುರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಜಿ-4511 ನೇದರ ಹಿಂಬದಿಯಲ್ಲಿ ತನ್ನ ಮಗನಾದ ಶ್ರೀ ಯಾದವ ತಂದೆ ನಾರಾಯಣ ಮೊಗೇರ, ಸಾ|| ಮೀಸೆಮನೆ, ಅಳ್ವೆಗದ್ದೆ, ಶಿರೂರ ಗ್ರಾಮ, ತಾ: ಭಟ್ಕಳ ಇವರನ್ನು ಕೂಡ್ರಿಸಿಕೊಂಡು ಸದ್ರಿ ಮೋಟಾರ್ ಸೈಕಲನ್ನು ಭಟ್ಕಳ ಶಹರದ ಅಳ್ವೆಗದ್ದೆ ಕಡೆಯಿಂದ ಭಟ್ಕಳ ಶಹರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅದೇ ದಿಸೆಯಲ್ಲಿ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆಎ-20/ಇ.ಯು-3526 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಸಾದಾ ಸ್ವರೂಪದ ಹಾಗೂ ತನ್ನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕೂಡ್ರಿಸಿಕೊಂಡಿದ್ದ ತನ್ನ ಮಗ ಶ್ರೀ ಯಾದವ ತಂದೆ ನಾರಾಯಣ ಮೊಗೇರ, ಇವರ ಬಲಗಾಲಿನ ಮೂಳೆ ಮುರಿದು ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಸಹ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದೇವರಾಜ ತಂದೆ ನಾಗಪ್ಪ ಮೊಗೇರ, ಪ್ರಾಯ-39 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹುಳಸೆಮನೆ, ಅಳ್ವೆಗದ್ದೆ, ಶಿರೂರ ಗ್ರಾಮ, ತಾ: ಭಟ್ಕಳರವರು ದಿನಾಂಕ: 02-04-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 21-03-2022 ರಂದು 21-00 ಗಂಟೆಯಿಂದ ದಿನಾಂಕ: 22-03-2022 ರಂದು ಬೆಳಗಿನ ಜಾವ 00-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ತಮ್ಮ ಮನೆಯ ಮುಂದೆ ನಿಲ್ಲಿಸಿಟ್ಟ ತನ್ನ ಬಾಬ್ತು ಅ||ಕಿ|| 20,000/- ರೂಪಾಯಿ ಮೌಲ್ಯದ ಹೀರೋ ಹೋಂಡಾ ಫ್ಯಾಶನ್ ಪ್ರೋ ಮೋಟಾರ್ ಸೈಕಲ್ ನಂ: ಕೆ.ಎ-31/ಕ್ಯೂ-9762 ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ದಾನ್ಯಾ ಚಲವಾದಿ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಂಗಳೆ, ಓಣಿಕೇರಿ, ತಾ: ಶಿರಸಿ ರವರು ದಿನಾಂಕ: 02-04-2022 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-04-2022

at 00:00 hrs to 24:00 hrs

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದ್ಯಾಮಣ್ಣ ತಂದೆ ಬಾಳಪ್ಪ ಕೌಜಲಗಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾರ್ಲಕಟ್ಟಿ, ಪೋ: ಮರುಗೋಡ, ತಾ: ಬೈಲಹೊಂಗಲ್, ಜಿ: ಬೆಳಗಾವಿ, ಹಾಲಿ ಸಾ|| ಜಮನಾಳ, ಪೋ: ಸಿಲ್ತಿಭಾವಿ, ತಾ: ಗೋಕಾಕ, ಜಿ: ಬೆಳಗಾವಿ. ಈತನು ಪಿರ್ಯಾದಿಯ ಗಂಡನಾಗಿದ್ದು, ಪಿರ್ಯಾದಿಯವರು ಕಳೆದ 15 ದಿನಗಳ ಹಿಂದೆ ಕುಟುಂಬ ಸಮೇತರಾಗಿ ಅಕೇಶಿಯಾ ಪ್ಲಾಂಟೇಶನ್ ಕಟಿಂಗ್ ಕೆಲಸಕ್ಕೆ ಬಂದವರು, ಸಿದ್ದಾಪುರ ತಾಲೂಕಿನ ಶಿರಳಗಿ ಹತ್ತಿರದ ವಡಗೇರಿ ಅಕೇಶಿಯಾ ಪ್ಲಾಂಟೇಶನ್ ನಲ್ಲಿ ಜೋಪಡಿ ಹಾಕಿಕೊಂಡು ಉಳಿದಿದ್ದು, ತನ್ನ ಗಂಡನಾದ ಮೃತ ಶ್ರೀ ದ್ಯಾಮಣ್ಣ ಕೌಜಲಗಿ ಈತನು ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದವನು, ದಿನಾಂಕ: 30-03-2022 ರಂದು ಬುಧವಾರದಂದು ಸಂತೆಗೆ ಸಿದ್ದಾಪುರಕ್ಕೆ ಹೋಗಿದ್ದವನು, ಮೋಟಾರ್ ಸೈಕಲ್ ಮೇಲಿಂದ ಬಿದ್ದು ಮುಖಕ್ಕೆ ಗಾಯನೋವು ಪಡಿಸಿಕೊಂಡಿದ್ದರು. ಇತ್ತೀಚೆಗೆ ಸಾರಾಯಿ ಕುಡಿದಾಗ ಒಬ್ಬರೇ ನಗೆಯಾಡುವುದು, ಕೈ ಸನ್ನೆ ಮಾಡಿ ಮಾತಾಡುವುದು ಮಾಡುತ್ತಿದ್ದರು. ದಿನಾಂಕ: 01-04-2022 ರಂದು ಅಮವಾಸ್ಯೆ ಆಗಿದ್ದರಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದವರು, ಸಾಯಂಕಾಲ 05-00 ಗಂಟೆಯ ಸುಮಾರಿಗೆ ಸಿದ್ದಾಪುರಕ್ಕೆ ಹೋಗಿ ಸಾರಾಯಿ ಕುಡಿದು, ಸಾರಾಯಿ ಪ್ಯಾಕೆಟ್ ಹಾಗೂ ಚಿಕನ್ ಹಿಡಿದುಕೊಂಡು ಮನೆಗೆ ಬಂದವನು, ರಾತ್ರಿ ಊಟ ಮಾಡಿದ ನಂತರವೂ ಸಾರಾಯಿ ಕುಡಿಯುತ್ತಾ ಕುಳಿತ್ತಿದ್ದವರು, ದಿನಾಂಕ: 02-04-2022 ರಂದು 02-00 ಗಂಟೆಯವರೆಗೆ ಒಬ್ಬರೇ ಮಾತಾಡುತ್ತಾ ಇದ್ದರು. ಆ ನಂತರದಲ್ಲಿ ತನಗೆ ನಿದ್ರೆ ಹತ್ತಿದ್ದು, ಆದರೆ ಬೆಳಿಗ್ಗೆ 05-00 ಗಂಟೆಯ ಸುಮಾರಿಗೆ ಬಹಿರ್ದೆಸೆಗೆ ಹೋಗುತ್ತಿದ್ದ ಮಾವನು ನಮ್ಮ ಜೋಪಡಿ ಹತ್ತಿರ ಅಕೇಶಿಯಾ ಗಿಡದ ಟೊಂಗೆಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದ ನನ್ನ ಗಂಡನ ಶವವನ್ನು ನೋಡಿ ಕೂಗಿದ್ದರಿಂದ ನಾವೆಲ್ಲಾ ಹೋಗಿ ನೋಡಿರುತ್ತೇವೆ. ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದ ಗಂಡನು ನೇಣು ಹಾಕಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ಉದ್ದವ್ವ @ ಲಕ್ಷ್ಮೀ ಕೋಂ. ದ್ಯಾಮಣ್ಣ ಕೌಜಲಗಿ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾರ್ಲಕಟ್ಟಿ, ಪೋ: ಮರುಗೋಡ, ತಾ: ಬೈಲಹೊಂಗಲ್, ಜಿ: ಬೆಳಗಾವಿ, ಹಾಲಿ ಸಾ|| ಜಮನಾಳ, ಪೋ: ಸಿಲ್ತಿಭಾವಿ, ತಾ: ಗೋಕಾಕ, ಜಿ: ಬೆಳಗಾವಿ ರವರು ದಿನಾಂಕ: 02-04-2022 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 14-04-2022 01:37 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080