ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-08-2021

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 14/2021, ಕಲಂ: 420 ಐಪಿಸಿ ಹಾಗೂ ಕಲಂ: 66(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 09-07-2021 ರಂದು ಸುಮಾರು 12-40 ರಿಂದ 12-47 ಗಂಟೆಯ ಮಧ್ಯಾವದಿಯಲ್ಲಿ ಪಿರ್ಯಾದಿಯವರ ಎಸ್.ಬಿ.ಐ ಕ್ರೆಡಿಟ್ ಕಾರ್ಡಡ ನೇದರಿಂದ ರೂಪಾಯಿ 77,418/- ಹಣವು ಡೆಬಿಟ್ ಆಗಿರುವ ಬಗ್ಗೆ ಮಾಹಿತಿ ಬಂದಿದ್ದು ಇರುತ್ತದೆ. ಪಿರ್ಯಾದಿಯವರು ತಾನು ಯಾವುದೇ ಹಣದ ವ್ಯವಹಾರವನ್ನು ಮಾಡದೇ ತನ್ನ ಎಸ್.ಬಿ.ಐ ಕ್ರೆಡಿಟ್ ಕಾರ್ಡಿನಿಂದ ಹಣವನ್ನು ಲಪಟಾಯಿಸಿರುವ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸುನಿಲಕುಮಾರ ತಂದೆ ಮಾನಸಿಂಗ್, ಪ್ರಾಯ-31 ವರ್ಷ, ವೃತ್ತಿ-ಇಂಡಿಯನ್ ನೇವಿಯಲ್ಲಿ ಕೆಲಸ, ಸಾ|| ಕದಂಬ ವನಂ ನೇವಲ್ ಬೇಸ್, ಅರ್ಗಾ, ಕಾರವಾರ ರವರು ದಿನಾಂಕ: 02-08-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 138/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ವೆಂಕಟ್ರಮಣ ಕೃಷ್ಣ ಹರಿಕಂತ್ರ, ಪ್ರಾಯ-33 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸೋಡಿಗದ್ದೆ, ಬರ್ಗಿ, ತಾ: ಕುಮಟಾ, 2]. ಶೇಖರ ಬುದ್ಧು ಹರಿಕಂತ್ರ, ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಿಮಾನಿ, ತಾ: ಕುಮಟಾ, 3]. ಶಂಕರ ಬುದ್ಧು ಹರಿಕಂತ್ರ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಿಮಾನಿ, ತಾ: ಕುಮಟಾ, 4]. ದಿವಾಕರ ಗೋಪಾಲ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕುರಿಗದ್ದೆ, ತಾ: ಕುಮಟಾ, 5]. ಚಂದ್ರಕಾಂತ ಶಂಕರ ಹರಿಕಂತ್ರ, ಸಾ|| ಕಿಮಾನಿ, ತಾ: ಕುಮಟಾ ಹಾಗೂ ಇನ್ನೂ 4-5 ಜನರು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 01-08-2021 ರಂದು 16-10 ಗಂಟೆಗೆ ಕಿಮಾನಿ ಗಜನಿಯ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಕೋಳಿಗಳ ಮೇಲೆ ಪಂಥವಾಗಿ ಕಟ್ಟಿ ಕೋಳಿ ಅಂಕ ಜುಗಾರಾಟ ನಡೆಸುತ್ತಿದ್ದಾಗ ಹಾಗೂ ಜೂಗಾರಾಟದ ಸಲಕರಣೆಗಳಾದ ಕೋಳಿ ಹುಂಜ-02, ಅ||ಕಿ|| 650/- ರೂಪಾಯಿ, ಕೋಳಿ ಕತ್ತಿ-02, ಅ||ಕಿ|| 00.00/- ರೂಪಾಯಿ ಹಾಗೂ ನಗದು ಹಣ 1,650/- ರೂಪಾಯಿಗಳೊಂದಿಗೆ ಆರೋಪಿ 1 ರಿಂದ 4 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 5 ಹಾಗೂ ಇತರರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 02-08-2021 ರಂದು 10-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 203/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪರಸಪ್ಪ ತಂದೆ ಕರಿಯಪ್ಪ ಮಾದರ, ಪ್ರಾಯ-49 ವರ್ಷ, ವೃತ್ತಿ-ಚಾಲಕ, ಸಾ|| ಮಾದರಿ ಪ್ರಾಥಮಿಕ ಶಾಲೆಯ ಹತ್ತಿರ, ನಾಗೂರ, ತಾ: ಹುನಗುಂದ, ಜಿ: ಬಾಗಲಕೋಟೆ (ಲಾರಿ ನಂ: ಕೆ.ಎ-37/ಬಿ-0040 ನೇದರ ಚಾಲಕ). ಈತನು ದಿನಾಂಕ: 01-08-2021 ರಂದು ರಾತ್ರಿ 21-30 ಗಂಟೆಯ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಗೇರುಸೊಪ್ಪದ ಸೂಳೆಮುರ್ಕಿ ಇಳಿಜಾರಿನ ತಿರುವಿನಲ್ಲಿ ತಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ-37/ಬಿ-0040 ನೇದನ್ನು ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸಂಚಾರ ದಟ್ಟಣೆಯಿಂದ ನಿಲ್ಲಿಸಿದ್ದ ಪಿರ್ಯಾದಿಯು ಕ್ಲೀನರ್ ಆಗಿ ಕೆಲಸ ಮಾಡುವ ಬೊಲೆರೋ ವಾಹನ ನಂ: ಕೆ.ಎ-47/2663 ನೇದಕ್ಕೆ ಡಿಕ್ಕಿ ಪಡಿಸಿ ಜಖಂಗೊಳಿಸಿದ್ದಲ್ಲದೆ, ಪಿರ್ಯಾದಿಯ ಎಡಗಾಲಿಗೆ ದುಃಖಾಪತ್ ಪಡಿಸಿ, ಬೊಲೆರೋ ವಾಹನದಲ್ಲಿದ್ದ ಕೋಳಿ ಮೊಟ್ಟೆ ಒಡೆದು ನಷ್ಟ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಾಸ್ತಿ ತಂದೆ ಗಣಪತಿ ಹಳ್ಳೇರ, ಪ್ರಾಯ-30 ವರ್ಷ, ವೃತ್ತಿ-ಕ್ಲೀನರ್, ಸಾ|| ಗಾಬೀತಕೇರಿ, ಅಳ್ಳಂಕಿ, ತಾ: ಹೊನ್ನಾವರ ರವರು ದಿನಾಂಕ: 02-08-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 204/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹನುಮಂತ ತಂದೆ ಕರಿಯಪ್ಪ ಮಣಿಕಟ್ಟಿ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಮದ್ಲೂರ, ತಾ: ಸವದತ್ತಿ, ಜಿ: ಬೆಳಗಾವಿ (ಲಾರಿ ನಂ: ಕೆ.ಎ-22/ಬಿ-9749 ನೇದರ ಚಾಲಕ). ಈತನು ಬೆಳಗಾವಿಯಿಂದ ಮಂಗಳೂರಿಗೆ ಸಿಮೆಂಟ್ ಲೋಡ್ ಮಾಡಿಕೊಂಡು ಲಾರಿ ಕ್ಲೀನರ್ ಶಿವಪ್ಪ ತಂದೆ ನಿಂಗಪ್ಪ ಹೊಟ್ಟಿನವರ ಈತನೊಂದಿಗೆ ದಿನಾಂಕ: 30-07-2021 ರಂದು ಯಾದವಾಡದಿಂದ ಲಾರಿ ಚಲಾಯಿಸಿಕೊಂಡು ಹೊರಟವನು, ದಿನಾಂಕ: 01-08-2021 ರಂದು ಬೆಳಗಿನ ಜಾವ 03-30 ಗಂಟೆಯ ಸುಮಾರಿಗೆ ಸಾಗರ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರ ಗೇರುಸೊಪ್ಪಾದ ಸೂಳೆಮುರ್ಕಿ ಕ್ರಾಸಿನಲ್ಲಿ ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು, ವೇಗವನ್ನು ನಿಯಂತ್ರಿಸದೇ ಲಾರಿಯನ್ನು ರಸ್ತೆಯಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ಲಾರಿಯನ್ನು ಜಖಂ ಪಡಿಸಿ, ಲಾರಿಯಲ್ಲಿದ್ದ ಸಿಮೆಂಟ್ ಚೀಲಗಳು ಒಡೆದು ಹಾಳಾಗುವಂತೆ ಮಾಡಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಸಣ್ಣಪುಟ್ಟ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮೆಹಬೂಬ್ ತಂದೆ ಅಲ್ಲಾವುದ್ದೀನ್ ಜಮಾದಾರ್, ಪ್ರಾಯ-25 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ ಹಾಗೂ ಬಿಸಿನೆಸ್, ಸಾ|| ಮದ್ಲೂರ, ತಾ: ಸವದತ್ತಿ, ಜಿ: ಬೆಳಗಾವಿ ರವರು ದಿನಾಂಕ: 02-08-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 205/2021, ಕಲಂ: 363, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದ್ ಸಾಹೈಲ್ ಪೆಶಮಾಮ್ ತಂದೆ ಮಹ್ಮದ್ ಸಲೀಂ ಪೆಶಮಾಮ್, ಸಾ|| ಮುಸ್ಮಾ ಸ್ಟ್ರೀಟ್, ತಾ: ಭಟ್ಕಳ. ಪಿರ್ಯಾದಿಯ ತಮ್ಮನಾದ ಯಾಸೀರ್ ಖಾಜಿ ತಂದೆ ಅಬ್ದುಲ್ ಹಮೀದ್ ಖಾಜಿ ಈತನು ಆರೋಪಿತನೊಂದಿಗೆ ಹಣಕಾಸಿನ ವ್ಯವಹಾರದಲ್ಲಿ 4 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದು, ಅದರಲ್ಲಿ 1,50,000/- ರೂಪಾಯಿ ಹಣವನ್ನು ಆರೋಪಿತನಿಗೆ ನೀಡಿದ್ದು, ಉಳಿದ 2,50,000/- ರೂಪಾಯಿ ಹಣವನ್ನು ಕೊಡುವುದಿದ್ದು, ಹಣ ಪಡೆಯುವ ಸಲುವಾಗಿ ಆರೋಪಿತನು ತನ್ನ ಕೆಂಪು ಬಣ್ಣದ ಸ್ಕೋಡಾ ಕಾರ್ ನಂ: ಕೆ.ಎ-05/ಎಮ್.ಜೆ-5202 ನೇದರಲ್ಲಿ ದಿನಾಂಕ: 02-08-2021 ರಂದು ಸಂಜೆ 18-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಹೊನ್ನಾವರ ತಾಲೂಕಿನ ವಲ್ಕಿಯಲ್ಲಿರುವ ಮನೆಯ ಹತ್ತಿರ ಬಂದು ಹಣವನ್ನು ಕೇಳಿದ್ದು, ಆಗ ಪಿರ್ಯಾದಿಯ ತಮ್ಮನಾದ ಯಾಸೀರ್ ಖಾಜಿ ಈತನು ‘ತನ್ನ ಬಳಿ ಈಗ ಅಷ್ಟೊಂದು ಹಣ ಇಲ್ಲ. ಸ್ವಲ್ಪ ದಿನ ಬಿಟ್ಟು ಕೊಡುತ್ತೇನೆ’ ಅಂತಾ ಹೇಳಿದಾಗ ‘ಹಣ ಈಗಲೇ ಕೊಡಬೇಕು’ ಅಂತಾ ಹಠ ಮಾಡಿದ್ದು, ನಂತರ ಪಿರ್ಯಾದಿಯು ‘ತನ್ನ ತಮ್ಮ ಕೊಡಬೇಕಾದ ಹಣವನ್ನು ತಾನು ಕೊಡುತ್ತೇನೆ. ತನಗೆ 15 ದಿನ ಕಾಲಾವಕಾಶ ಕೊಡಿ’ ಅಂತಾ ಹೇಳಿದರೂ ಸಹ ಒಪ್ಪದೇ ‘ಹಣ ಈಗಲೇ ಕೊಡಬೇಕು’ ಅಂತಾ ಹೇಳಿದ್ದು, ನಂತರ ಪಿರ್ಯಾದಿಯವರ ಪರಿಚಯದ ಮುನಾಫ್ ಖಾಜಿ ಎಂಬುವವರು ‘ಹೊನ್ನಾವರಕ್ಕೆ ಹೋಗಿ ಮಾತುಕತೆ ಮಾಡೋಣ’ ಅಂತಾ ಹೇಳಿದಾಗ ಎಲ್ಲರೂ ಒಪ್ಪಿಕೊಂಡಿದ್ದು, ಅದರಂತೆ ಮುನಾಫ್ ಖಾಜಿ ಇವರ ಕಾರಿನಲ್ಲಿ ಮುನಾಫ್ ಇವರೊಂದಿಗೆ ಪಿರ್ಯಾದಿ ಹಾಗೂ ಪಿರ್ಯಾದಿಯ ತಮ್ಮನಾದ ಯಾಸೀರ್ ಖಾಜಿ ಹೊನ್ನಾವರ ಕಡೆಗೆ ವಲ್ಕಿಯಿಂದ ಹೊರಟಿದ್ದು, ಆಗ ಪಿರ್ಯಾದಿಯವರ ಕಾರಿನ ಹಿಂದಿನಿಂದ ಆರೋಪಿತನು ತನ್ನ ಕೆಂಪು ಬಣ್ಣದ ಸ್ಕೋಡಾ ಕಾರಿನಲ್ಲ್ಲಿ ಬರುತ್ತಿದ್ದವನು, ಮುನಾಫ್ ಖಾಜಿ ರವರಿಗೆ ಪೋನ್ ಮಾಡಿ ‘ನೀವು ಎಲ್ಲಿದ್ದಿರಾ?’ ಅಂತಾ ಕೇಳಿದಾಗ ‘ಭಾಸ್ಕೇರಿ ಹತ್ತಿರ ಇದ್ದೇವೆ’ ಅಂತಾ ಹೇಳಿದ್ದು, ಆಗ ಆರೋಪಿತನು ‘ನೀವು ಭಾಸ್ಕೇರಿ ಹತ್ತಿರವೇ ನಿಲ್ಲಿರಿ. ತನಗೆ ಭಟ್ಕಳಕ್ಕೆ ಹೋಗಲು  ಟೈಮ್ ಆಗಿರುವುದರಿಂದ ಅಲ್ಲಿಯೇ ನೀವು ಹೇಳಿದಂತೆ ಮಾತನಾಡಿಕೊಂಡು ಹೋಗುತ್ತೇನೆ’ ಅಂತಾ ಹೇಳಿದ್ದು, ಆಗ ಭಾಸ್ಕೇರಿ ಹತ್ತಿರ ರಸ್ತೆ ಪಕ್ಕದಲ್ಲಿ ಮುನಾಫ್ ಖಾಜಿ ರವರು ಕಾರನ್ನು ನಿಲ್ಲಿಸಿ, ಪಿರ್ಯಾದಿ ಹಾಗೂ ಪಿರ್ಯಾದಿಯ ತಮ್ಮ ಯಾಸೀರ್ ಖಾಜಿ ರವರೊಂದಿಗೆ ನಿಂತುಕೊಂಡಿದ್ದಾಗ ದಿನಾಂಕ: 02-08-2021 ರಂದು ರಾತ್ರಿ ಸುಮಾರು 21-10 ಗಂಟೆಗೆ ಆರೋಪಿತನು ಅವರು ನಿಂತಲ್ಲಿಗೆ ಬಂದು ತನ್ನ ಕಾರನ್ನು ನಿಲ್ಲಿಸಿ ಹಣದ ವ್ಯವಹಾರದ ಬಗ್ಗೆ ಮಾತನಾಡುತ್ತಾ ‘ತನಗೆ ಈಗಲೇ ಹಣ ಕೊಡಬೇಕು. ಇಲ್ಲದಿದ್ದರೆ ಯಾಸೀರ್ ಖಾಜಿ ಈತನನ್ನು ಕೊಲೆ ಮಾಡದೇ ಬಿಡುವುದಿಲ್ಲ’ ಅಂತಾ  ಬೆದರಿಕೆ ಹಾಕಿ ಪಿರ್ಯಾದಿಯ ತಮ್ಮನಾದ ಯಾಸೀರ್ ಖಾಜಿ ಈತನನ್ನು ಬಲವಂತವಾಗಿ ತನ್ನ ಕಾರ್ ನಂ: ಕೆ.ಎ-05/ಎಮ್.ಜೆ-5202 ನೇದರಲ್ಲಿ ಕೂರಿಸಿಕೊಂಡು ಅಪಹರಿಸಿಕೊಂಡು ಕಾರನ್ನು ಹೊನ್ನಾವರ ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಅಪಹರಣಕ್ಕೊಳಗಾದ ನನ್ನ ತಮ್ಮನಾದ ಯಾಸೀರ್ ಖಾಜಿ ತಂದೆ ಅಬ್ದುಲ್ ಹಮೀದ್ ಈತನನ್ನು ಪತ್ತೆ ಮಾಡಿ ಅಪಹರಣ ಮಾಡಿದ ಆರೋಪಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹ್ಮದ್ ರಿಯಾಜ್ ಖಾಜಿ ತಂದೆ ಅಬ್ದುಲ್ ಹಮೀದ್ ಖಾಜಿ, ಪ್ರಾಯ-55 ವರ್ಷ, ವೃತ್ತಿ-ವ್ಯಾಪಾರ, ಸಾ|| ವಲ್ಕಿ, ತಾ: ಹೊನ್ನಾವರ ರವರು ದಿನಾಂಕ: 02-08-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 121/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಸುಜಾತಾ ತಂದೆ ಪರುಶರಾಮ ಮದ್ನೂರ್, ಪ್ರಾಯ–21 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಮದ್ನೂರ್, ತಾ: ಯಲ್ಲಾಪುರ. ಪಿರ್ಯಾದುದಾರರ ಮಗಳಾದ ಇವಳು ಶಿರಸಿಯ ಜೆ.ಎಮ್.ಜೆ ಕಾಲೇಜಿನಲ್ಲಿ ಬಿ.ಕಾಂ ದ್ವಿತೀಯ ವರ್ಷದಲ್ಲಿ ಓದುತ್ತಿದ್ದವಳು, ಯಾರೊಂದಿಗೋ ಆಗಾಗ ಮೊಬೈಲಿನಲ್ಲಿ ಮಾತಾಡುತ್ತಿದ್ದವಳು, ದಿನಾಂಕ: 31-07-2021 ರಂದು ಮಧ್ಯಾಹ್ನ 12-30 ಗಂಟೆಗೆ ತನ್ನ ಮನೆಯಲ್ಲಿ ಇದ್ದ ಪಿರ್ಯಾದಿಯವರ ಹೆಂಡತಿ ಶ್ರೀಮತಿ ಶಾಂತಾ ಮದ್ನೂರ ರವರಿಗೆ ‘ಇಲ್ಲೇ ಊರಲ್ಲಿ ಹೋಗಿ ಬರುತ್ತೇನೆ’ ಅಂತಾ ಹೇಳಿ ಮನೆಯಿಂದ ಹೋದವಳು, ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ನನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪರುಶರಾಮ ತಂದೆ ಟಿ ಮದ್ನೂರ, ಪ್ರಾಯ-41 ವರ್ಷ, ವೃತ್ತಿ-ಗುತ್ತಿಗೆದಾರರು, ಸಾ|| ಮದ್ನೂರ್, ತಾ: ಯಲ್ಲಾಪುರ ರವರು ದಿನಾಂಕ: 02-08-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ತೆಹಸೀನತಾಜ್ ತಂದೆ ಅಪ್ತಾಬ್ ಅಹ್ಮದ್ ಶೇಖ್, ಪ್ರಾಯ-24 ವರ್ಷ, ವೃತ್ತಿ-ಮನೆ ಕೆಲಸ, ಸಾ|| ರಾಮನಬೈಲ್, ತಾ: ಶಿರಸಿ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 01-08-2021 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 02-08-2021 ರಂದು ಬೆಳಿಗ್ಗೆ 05-00 ಗಂಟೆಯ ನಡುವಿನ ಅವಧಿಯಲ್ಲಿ ರಾಮನಬೈಲಿನ ಮನೆಯಲ್ಲಿ ತೆಹಸೀನತಾಜ್ ಇವಳು ಮಲಗಲು ತನ್ನ ಕೋಣೆಗೆ ಹೋದವಳು ಅಲ್ಲಿಂದ ಕಾಣೆಯಾಗಿದ್ದು, ತೆಹಸೀನತಾಜ್ ಇವಳಿಗೆ ಈವರೆಗೂ ಹುಡುಕಾಡಿದರೂ ಅವಳು ಎಲ್ಲಿಯೂ ಸಿಗದೇ ಇರುವುದರಿಂದ ಹಾಗೂ ಈವರೆಗೂ ಮನೆಗೆ ವಾಪಸ್ ಬರದೇ ಇರುವುದರಿಂದ ಅವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ನನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಪ್ತಾಬ್ ಅಹ್ಮದ್ ತಂದೆ ಅಬ್ದುಲಗಫಾರ್ ಶೇಖ್, ಪ್ರಾಯ-56 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ರಾಮನಬೈಲ್, ತಾ: ಶಿರಸಿ ರವರು ದಿನಾಂಕ: 02-08-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆನಂದ ತಂದೆ ನಾರಾಯಣ ಗೌಡ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರಗುಂಜಿ, ಕತಗಾಲ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-1570 ನೇದರ ಸವಾರ). ಈತನು ದಿನಾಂಕ: 01-08-2021 ರಂದು 16-00 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-1570 ನೇದನ್ನು ವಾನಳ್ಳಿ ಕಡೆಯಿಂದ ಬಣಗೆರೆ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ 16-30 ಗಂಟೆಗೆ ಕಡೆಮನೆ ಕ್ರಾಸ್ ಹತ್ತಿರದ ತಿರುವಿನ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಸ್ಕಿಡ್ ಮಾಡಿ ರಸ್ತೆಯ ಮೇಲೆ ಬಿದ್ದುಕೊಂಡು ತನ್ನ ಹಣೆಯ ಬಲಬದಿಗೆ, ಬಲಗಾಲಿನ ಮೊಣಕಾಲಿಗೆ ಗಂಭೀರ ಸ್ವರೂಪ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ನಾರಾಯಣ ಗೌಡ. ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರಗುಂಜಿ, ಕತಗಾಲ, ತಾ: ಕುಮಟಾ ರವರು ದಿನಾಂಕ: 02-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಾದೀಕ್ ತಂದೆ ಬಾಷಾಸಾಬ್, ಸಾ|| ದಾಸನಕೊಪ್ಪ ಕ್ರಾಸ್, ಬನವಾಸಿ, ತಾ: ಶಿರಸಿ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-31/ವಿ-5286 ನೇದರ ಸವಾರ). ಈತನು ದಿನಾಂಕ: 02-08-2021 ರಂದು 14-00 ಗಂಟೆಗೆ ತನ್ನ ಬಾಬ್ತು ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-31/ವಿ-5286 ನೇದರ ಹಿಂಬದಿಯಲ್ಲಿ ಮುಸ್ತುಫಾ ಮುಕ್ತಿಯಾರ್ ಶೇಖ್, ಸಾ|| ದಾಸನಕೊಪ್ಪ ಕ್ರಾಸ್, ಬನವಾಸಿ, ತಾ: ಶಿರಸಿ ಮತ್ತು ಶಬ್ಬೀರ್ ಅಹಮ್ಮದ್ ಅಬ್ದುಲ್ ರಸೀದ್ ಸಾಬ್, ಸಾ|| ದಾಸನಕೊಪ್ಪ ಕ್ರಾಸ್, ಬನವಾಸಿ, ತಾ: ಶಿರಸಿ ಇವರುಗಳನ್ನು ಕೂಡ್ರಿಸಿಕೊಂಡು ಶಿರಸಿ ಕಡೆಯಿಂದ ಬನವಾಸಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನಂದ ಚಲಾಯಿಸಿಕೊಂಡು ಬಂದವನೇ ಗುಡ್ನಾಪುರ ಗ್ರಾಮದ ಡೊಂಬೆಹಳ್ಳದ ಬಳಿ ಎದುರಿನಿಂದ ಬರುತ್ತಿದ್ದ ವಿಘ್ನೇಶ ತಂದೆ ಕೃಷ್ಣಮೂರ್ತಿ ಹೆಗಡೆ, ಸಾ|| ನವಣಗೇರಿ, ಪೋ: ಓಣಿಕೇರಿ, ತಾ: ಶಿರಸಿ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಹೋಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-4174 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಪಿರ್ಯಾದಿಗೆ ಹಾಗೂ ಮುಸ್ತುಫಾ ಮತ್ತು ಶಬ್ಬೀರ ಅಹ್ಮದ್ ಇವರುಗಳಿಗೆ ಸಾದಾ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವಿಘ್ನೇಶ ತಂದೆ ಕೃಷ್ಣಮೂರ್ತಿ ಹೆಗಡೆ, ಪ್ರಾಯ-25 ವರ್ಷ, ವೃತ್ತಿ-ವ್ಯಾಪಾರ, ಸಾ|| ನವಣಗೇರಿ, ಪೋ: ಓಣಿಕೇರಿ, ತಾ: ಶಿರಸಿ ರವರು ದಿನಾಂಕ: 02-08-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-08-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 25/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಕುಮಾರ: ಕಾರ್ತಿಕ ತಂದೆ ರಮೇಶ ನಾಯ್ಕ, ಪ್ರಾಯ-2 ವರ್ಷ, ಸಾ|| ಹುಡಗೋಡ, ಪೋ: ಮುಟ್ಟಾ, ತಾ: ಹೊನ್ನಾವರ. ಈತನು ಪಿರ್ಯಾದಿಯ ಮಗನಾಗಿದ್ದು, ದಿನಾಂಕ: 01-08-2021 ರಂದು ಮಧ್ಯಾಹ್ನ 03-00 ಗಂಟೆಗೆ ಪಿರ್ಯಾದಿಯ ಹೆಂಡತಿಯಾದ ಶ್ರೀಮತಿ ಶೃತಿ ಕೊಂ ರಮೇಶ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಗೃಹಣಿ, ಸಾ|| ಹುಡಗೋಡ, ಮುಟ್ಟಾ, ತಾ: ಹೊನ್ನಾವರ ರವರು ಹುಡಗೋಡ ಗ್ರಾಮದಲ್ಲಿರುವ ತನ್ನ ಮನೆಯ ಮುಂದಿರುವ ಶ್ರೀ ಕಾವಲುಕಟ್ಟೆ ಹನುಮಂತ ದೇವರ ದೇವಸ್ಥಾನದ ಹಿಂದೆ ಇರುವ ಗುಂಡಬಾಳ ಹೊಳೆಯ ದಂಡೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದಾಗ ಪಿರ್ಯಾದಿಯ ಮಗನಾದ ಕಾರ್ತಿಕ ತಂದೆ ರಮೇಶ ನಾಯ್ಕ, ಈತನು ಮನೆಯ ಮುಂದೆ ಆಟ ಆಡುತ್ತಿದ್ದವನು ಮಧ್ಯಾಹ್ನ 03-15 ಗಂಟೆಯ ಸುಮಾರಿಗೆ ಪಿರ್ಯಾದಿಯ ಹೆಂಡತಿ ಬಟ್ಟೆ ಒಗೆಯುವಲ್ಲಿ ಹೋದವನು ಆಕಸ್ಮಿಕವಾಗಿ ಕಾಲು ಜಾರಿ ಗುಂಡಬಾಳ ಹೊಳೆಯ ನೀರಿನಲ್ಲಿ ಬಿದ್ದು ಮುಳುಗಿದ್ದು. ನೀರಿನಲ್ಲಿ ಬಿದ್ದ ತನ್ನ ಮಗನಿಗೆ ಹುಡುಕಾಡಿದರೂ ಈವರೆಗೂ ಪತ್ತೆಯಾಗದೇ ಇರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಂತೆ ಹೊನ್ನಾವರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 201/2021, ಕಲಂ: ಮಗು ಕಾಣೆ ನೇದರಂತೆ ಪ್ರಕರಣದ ದಾಖಲಾಗಿದ್ದು ಇರುತ್ತದೆ,

ದಿನಾಂಕ: 02-08-2021 ರಂದು 12-30 ಗಂಟೆಗೆ ಹೊನ್ನಾವರ ತಾಲೂಕಿನ ಹುಡಗೋಡ ಗ್ರಾಮದ ಶ್ರೀ ಕಾವಲುಕಟ್ಟೆ ಹನುಮಂತ ದೇವರ ದೇವಸ್ಥಾನದ ಹಿಂದೆ ಇರುವ ಗುಂಡಬಾಳ ಹೊಳೆಯ ದಂಡೆಯಲ್ಲಿ ಕಾಣೆಯಾದ ತನ್ನ ಮಗ ಕಾರ್ತಿಕ ತಂದೆ ರಮೇಶ ನಾಯ್ಕ, ಈತನು ಮೃತನಾಗಿ ಮೃತದೇಹ ಪತ್ತೆಯಾಗಿದ್ದು, ದಿನಾಂಕ: 01-08-2021 ರಂದು ಮಧ್ಯಾಹ್ನ 15-15 ಗಂಟೆಯಿಂದ ದಿನಾಂಕ: 02-08-2021 ರಂದು 12-30 ಗಂಟೆಯ ನಡುವಿನ ಅವಧಿಯಲ್ಲಿ ಕಾಣೆಯಾದ ಕಾರ್ತಿಕ ತಂದೆ ರಮೇಶ ನಾಯ್ಕ,ಈತನು ಹೊನ್ನಾವರ ತಾಲೂಕಿನ ಹುಡಗೋಡ ಗ್ರಾಮದ ಶ್ರೀ ಕಾವಲುಕಟ್ಟೆ ಹನುಮಂತ ದೇವರ ದೇವಸ್ಥಾನದ ಹಿಂದೆ ಇರುವ ಗುಂಡಬಾಳ ಹೊಳೆಯ ದಂಡೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹೋಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟು ಮೃತದೇಹವಾಗಿ ಪತ್ತೆಯಾಗಿದ್ದು, ಇದರ ಹೊರತು ತನ್ನ ಮಗನ ಸಾವಿನಲ್ಲಿ ಮತ್ತಾವುದೇ ಸಂಶಯ ಇರುವುದಿಲ್ಲ, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ಅಂಜನಪ್ಪಾ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೋತಿ ಸರ್ಕಲ್, ಬಳ್ಳಾರಿ, ಹಾಲಿ ಸಾ|| ಕಾವಲುಕಟ್ಟೆ, ಹುಡಗೋಡ, ಮುಟ್ಟಾ, ತಾ: ಹೊನ್ನಾವರ ರವರು ದಿನಾಂಕ: 02-08-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 03-08-2021 06:25 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080