ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-02-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಅಶ್ವಿನಿ @ ಸುಗಂಧ ತಂದೆ ದಯಾನಂದ ಖಾರ್ವಿ, ಪ್ರಾಯ-24 ವರ್ಷ, ವೃತ್ತಿ-ಅಂಗಡಿಯಲ್ಲಿ ಕೆಲಸ, ಸಾ|| ಮಧ್ಯ ಖಾರ್ವಿವಾಡ, ಬೆಳಂಬಾರ, ತಾ: ಅಂಕೋಲಾ. ಸುದ್ದಿದಾರರ ಮಗಳಾದ ಇವಳು ದಿನಾಂಕ: 02-02-2021 ರಂದು ಬೆಳಿಗ್ಗೆ ಅಂಕೋಲಾದಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿಗೆ ಕೆಲಸಕ್ಕೆ ಹೋದವಳು, ಸಾಯಂಕಾಲ 06-00 ಗಂಟೆಗೆ ಮನೆಗೆ ಹೋಗುತ್ತೇನೆಂದು ಅಂಗಡಿಯಿಂದ ಹೋದವಳು, ವಾಪಸ್ ಮನೆಗೆ ಬಾರದೇ ಯಾರಿಗೂ ಹೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಕೃಷ್ಣಾಬಾಯಿ ದಯಾನಂದ ಖಾರ್ವಿ, ಪ್ರಾಯ-40 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಮಧ್ಯ ಖಾರ್ವಿವಾಡ, ಬೆಳಂಬಾರ, ತಾ: ಅಂಕೋಲಾ ರವರು ದಿನಾಂಕ: 02-02-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೇಯಸ್ ಮೊಟಗಾರ, ಪ್ರಾಯ-22 ವರ್ಷ, ಸಾ|| ಚಿಕ್ಕೋಡಿ, ಬೆಳಗಾವಿ (ಕಾರ್ ನಂ: ಕೆ.ಎ-33/ಎಮ್-4809 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 02-02-2021 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದಿಂದ 2 ಕಿ.ಮೀ ಹಿಂದೆ ಇರುವ ಸಣ್ಣ ತಿರುವಿನಲ್ಲಿ ಹಾದು ಹೋದ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಕಾರ್ ನಂ: ಕೆ.ಎ-33/ಎಮ್-4809 ನೇದರಲ್ಲಿ ಗಾಯಾಳು 1). ಪ್ರವೀಣ್ ಡಿ. ಎಮ್, ಪ್ರಾಯ-25 ವರ್ಷ, ಸಾ|| ಗುಲ್ಬರ್ಗಾ, 2). ಪೂಜಾ ಭಟ್, ಪ್ರಾಯ-24 ವರ್ಷ, ಸಾ|| ಹುಬ್ಬಳ್ಳಿ, 3). ಪ್ರೀತಿ ಶಾಸ್ತ್ರಿ ಪ್ರಾಯ-23 ವರ್ಷ, ಸಾ|| ರಾಯಚೂರು, 4). ಅಂಬಿಕಾ ತಟಕಲ್, ಪ್ರಾಯ-24 ವರ್ಷ, ಸಾ|| ಗುಲ್ಬರ್ಗಾ ರವನ್ನು ಕೂಡ್ರಿಸಿಕೊಂಡು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಇಳಿಜಾರು ರಸ್ತೆಯಲ್ಲಿ ತನ್ನ ಕಾರನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಾಲನೆ ಮಾಡಿಕೊಂಡು ಹೋಗಿ, ತನ್ನ ಎದುರಿನಿಂದ ಅಂದರೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ನಿಧಾನವಾಗಿ ರಸ್ತೆಯ ಎಡಬದಿಯಿಂದ ಸಾಕ್ಷಿದಾರ ಶ್ರೀ ನಾಗೇಶ ತಂದೆ ಬೀರಪ್ಪಾ ಪಟಗಾರ ರವರು ಚಲಾಯಿಸಿಕೊಂಡು ಬಂದ ಪಿಕಪ್ ವಾಹನ ನಂ: ಕೆ.ಎ-31/ಎ-1530 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿಕಪ್ ವಾಹನದಲ್ಲಿದ್ದ ಪಿರ್ಯಾದಿ ಮತ್ತು ಪಿಕಪ್ ವಾಹನ ಚಾಲಕನಿಗೆ ಹಾಗೂ ಕಾರಿನಲ್ಲಿ ಇದ್ದವರಿಗೆ ಸಾದಾ ಮತ್ತು ಭಾರೀ ಸ್ವರೂಪದ ಗಾಯನೊವು ಪಡಿಸಿದ್ದಲ್ಲದೇ, ಆರೋಪಿ ಕಾರ್ ಚಾಲಕನು ತನಗೂ ಸಹ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡು, ಎರಡೂ ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿವೇಕಾನಂದ ತಂದೆ ರಮೇಶ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಳ್ಳಾಪುರ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 02-02-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2021, ಕಲಂ: 406, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಾಂತಾರಾಮ ತಂದೆ ಗಜಾನನ ವೆರ್ಣೇಕರ, ವೃತ್ತಿ-ಕುಸುಮಾ ಇನ್ಫೋಟೆಕ್ ಅಂಕೋಲಾ ಏಜೆನ್ಸಿಯ ಮಾಲಿಕರು, ಸಾ|| ತೆಂಕಣಕೇರಿ, ತಾ: ಅಂಕೋಲಾ. ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭದ್ರತೆಯ ದೃಷ್ಟಿಯಿಂದ ಪ್ರವೇಶ ದ್ವಾರದಲ್ಲಿ ಹಾಗೂ ಭಕ್ತರು ದೇವಿಯ ದರ್ಶನ ಪಡೆದು ಹೊರಗೆ ಹೋಗುವ ದಾರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ಮೆಟಲ್ ಡಿಟೆಕ್ಟರ್ ಅಳವಡಿಸಿಕೊಳ್ಳುವ ಉದ್ದೇಶದಿಂದ ಟೆಂಡರ್ ಕರೆದಿದ್ದು, ಅದರಂತೆ ಕುಸುಮಾ ಇನ್ಫೋಟೆಕ್ ಅಂಕೋಲಾ ಏಜೆನ್ಸಿಯ ಮಾಲಿಕನಾದ ನಮೂದಿತ ಆರೋಪಿತನು ದಿನಾಂಕ: 25-02-2020 ರಂದು ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಬಂದು ದೇವಸ್ಥಾನಕ್ಕೆ ಬೇಕಾಗುವ ಮೆಟಲ್ ಡಿಟೆಕ್ಟರ್ ಪೂರೈಸುವುದಾಗಿ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯು ಆರೋಪಿತನ ಏಜೆನ್ಸಿಗೆ ಮೆಟಲ್ ಡಿಟೆಕ್ಟರ್ ಪೂರೈಸುವುದಕ್ಕೆ ಅನುಮತಿ ನೀಡಿದ್ದು, ದಿನಾಂಕ: 25-02-2020 ರಂದು ಆರೋಪಿತನಿಗೆ ಸೇರಿದ ಏಜೆನ್ಸಿಗೆ ಮುಂಗಡವಾಗಿ ದೇವಸ್ಥಾನದಿಂದ ಸಿಂಡಿಕೇಟ್ ಬ್ಯಾಂಕ್ ಚೆಕ್ ನಂ: 617148 ನೇದರಿಂದ 1,81,164/- ರೂಪಾಯಿ ನೀಡಿದ್ದು, ಅದನ್ನು ಆರೋಪಿತನ ಏಜೆನ್ಸಿಯು ಹಣವನ್ನು ಸಂದಾಯ ಮಾಡಿಕೊಂಡಿದ್ದು ಇರುತ್ತದೆ. ಆರೋಪಿತನು ಹಣವನ್ನು ಸ್ವೀಕರಿಸಿಕೊಂಡ ನಂತರ ಮೆಟಲ್ ಡಿಟೆಕ್ಟರ್ ಪೂರೈಸುವುದಾಗಿ ಹೇಳುತ್ತಾ ಬಂದಿದ್ದು, ಈವರೆಗೂ ಟೆಂಡರ್ ಒಪ್ಪಂದದಂತೆ ಆರೋಪಿತನ ಏಜೆನ್ಸಿಯು ಯಾವುದೇ ಮೆಟಲ್ ಡಿಟೆಕ್ಟರ್ ನೀಡದೇ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ನಂಬಿಕೆ ದ್ರೋಹ ಮಾಡಿ, ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಕಾಂತ ತಂದೆ ಗಜಾನನ ನಾಯ್ಕ, ಪ್ರಾಯ-54 ವರ್ಷ, ವೃತ್ತಿ-ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ, ಸಾ|| ರಾಮನಬೈಲ್, ತಾ: ಶಿರಸಿ ರವರು ದಿನಾಂಕ: 02-02-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನೋದ ತಂದೆ ಬಸಪ್ಪ ನೇತ್ರೆಕರ, ಪ್ರಾಯ-75 ವರ್ಷ, ವೃತ್ತಿ-ಪಿ.ಡಬ್ಲ್ಯೂ.ಡಿ ನಿವೃತ್ತ ನೌಕರ, ಸಾ|| ಲಕ್ಷ್ಮೀ ನಿವಾಸ, ಕುಂಬಾರ ಓಣಿ, ಮಾರಿಕಾಂಬಾ ನಗರ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-9583 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 02-02-2021 ರಂದು 20-00 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-9583 ನೇದನ್ನು ಕಲಗಾರದ ಕಚ್ಚಾ ರಸ್ತೆ ಕಡೆಯಿಂದ ಶಿರಸಿ-ಹುಲೇಕಲ್ ಮುಖ್ಯ ರಸ್ತೆಯ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕಲಗಾರ ಕ್ರಾಸ್ ಹತ್ತಿರ ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಕಚ್ಚಾ ರಸ್ತೆಯ ಮಣ್ಣಿನಲ್ಲಿ ಸ್ಕಿಡ್ ಮಾಡಿ, ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಅಪಘಾತ ಪಡಿಸಿಕೊಂಡು ತನ್ನ ತಲೆಗೆ ಒಳ ಪೆಟ್ಟಾಗಿ ಮಾರಣಾಂತಿಕ ಗಾಯನೋವಿನಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಾಲಿನಿ ಕೋಂ. ವಿನೋದ ನೇತ್ರೇಕರ, ಪ್ರಾಯ-69 ವರ್ಷ, ವೃತ್ತಿ-ಕೆ.ಇ.ಬಿ ನಿವೃತ್ತ ನೌಕರ, ಸಾ|| ಲಕ್ಷ್ಮೀ ನಿವಾಸ, ಕುಂಬಾರ ಓಣಿ, ಮಾರಿಕಾಂಬಾ ನಗರ, ತಾ: ಶಿರಸಿ ರವರು ದಿನಾಂಕ: 02-02-2021 ರಂದು 21-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 14-01-2021 ರಂದು ಸಂಜೆ 17-30 ಗಂಟೆಯಿಂದ 18-30 ಗಂಟೆಯ ನಡುವಿನಿ ಅವಧಿಯಲ್ಲಿ ಹಳಿಯಾಳ ಶಹರದಲ್ಲಿರುವ ಎಮ್.ಐ ಶೋ-ರೂಮ್ ಎದುರುಗಡೆ ನಿಲ್ಲಿಸಿದ್ದ ಪಿರ್ಯಾದಿಯವರ ಸುಮಾರು 25,000/- ರೂಪಾಯಿ ಮೌಲ್ಯದ ಹೀರೋ ಹೋಂಡಾ ಕಂಪನಿಯ ಕಪ್ಪು ಬಣ್ಣದ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-31/ಎಲ್-7356 ನೇದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂಜೀವ ತಂದೆ ಹೂವಪ್ಪಾ ಧಾರವಾಡಕರ, ಪ್ರಾಯ-35 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಕಮದೊಳ್ಳಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 02-02-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 323, 324, 504 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾರುತಿ ತಂದೆ ಯಲ್ಲಪ್ಪಾ ಶೇಡಿ, ಸಾ|| ಯಡೋಗಾ, ತಾ: ಹಳಿಯಾಳ, 2]. ವಿಶಾಲ ತಂದೆ ಮಾರುತಿ ಶೇಡಿ, ಸಾ|| ಯಡೋಗಾ, ತಾ: ಹಳಿಯಾಳ. ಪಿರ್ಯಾದಿಯ ಹೊಲವು ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದಲ್ಲಿದ್ದು, ಪಿರ್ಯಾದಿಯ ಹೊಲವು ಆರೋಪಿತರ ಹೊಲದ ಪಕ್ಕದಲ್ಲಿಯೇ ಇದ್ದು, ಪಿರ್ಯಾದಿಗೆ ಆರೋಪಿತರು ತಮ್ಮ ಹೊಲದಲ್ಲಿ ಹಾದು ಹೋಗಲು ದಾರಿ ಕೊಟ್ಟಿರಲಿಲ್ಲ. ಆದರೆ ದಿನಾಂಕ: 02-02-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ನಮೂದಿತ ಆರೋಪಿತರ ಪೈಕಿ ಆರೋಪಿ 2 ನೇಯವನು ಪಿರ್ಯಾದಿಯ ಹೊಲದಿಂದ ಹಾದು ಹೋಗಲು ಮುಂದಾದಾಗ ಪಿರ್ಯಾದಿಯು ‘ನಮಗೆ ನಿಮ್ಮ ಹೊಲದಲ್ಲಿ ಹೋಗಲು ದಾರಿ ಕೊಡುವುದಿಲ್ಲ. ಯಾಕೆ ಈಗ ನೀನು ನಮ್ಮ ಹೊಲದಲ್ಲಿ ಹಾದು ಹೋಗಲು ಬರುತ್ತಿದ್ದಿ?’ ಎಂದು ಕೇಳಿದಕ್ಕೆ, ಆರೋಪಿ 2 ನೇಯವನು ಸಿಟ್ಟಗೊಂಡು ಪಿರ್ಯಾದಿಗೆ ‘ತಾಯಿನ ಹಡಾ, ಸೂಳೆ ಮಗ’ ಎಂದು ಕೆಟ್ಟದ್ದಾಗಿ ಬೈಯ್ದಿದ್ದಲ್ಲದೇ, ಆರೋಪಿ 1 ನೇಯವನು ಸಹ ‘ರಂಡಿ ಮಗಂದು ಬಹಳ ಆಯಿತು’ ಎಂದು ಬೈಯ್ದು, ಪಿರ್ಯಾದಿಗೆ ಮೈಮೇಲೆ ಅಲ್ಲಲ್ಲಿ ಹೊಡೆದಿದ್ದಲ್ಲದೇ, ಆರೋಪಿ 2 ನೇಯವನು ಒಂದು ಕಲ್ಲಿನಿಂದ ಹೊಡೆದಿದ್ದರಿಂದ ತಲೆಗೆ ರಕ್ತಗಾಯವಾಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾಜಿ ತಂದೆ ಹನುಮಂತ ಶೇಡಿ, ಪ್ರಾಯ-63 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜಾವಳ್ಳಿ, ತಾ: ಹಳಿಯಾಳ ರವರು ದಿನಾಂಕ: 02-02-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 323, 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವಾಜಿ ತಂದೆ ಹನುಮಂತ ಶೇಡಿ, ಸಾ|| ಜಾವಳ್ಳಿ, ತಾ: ಹಳಿಯಾಳ. ಪಿರ್ಯಾದಿಯ ಹೊಲವು ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದಲ್ಲಿದ್ದು, ಪಿರ್ಯಾದಿಯ ಹೊಲವು ಆರೋಪಿತನ ಹೊಲದ ಪಕ್ಕದಲ್ಲಿಯೇ ಇದ್ದು, ಪಿರ್ಯಾದಿಯು ತನ್ನ ಹೊಲದ ಸರ್ವೇ ಮಾಡಿಸಿ, ಆರೋಪಿತನ ಹೊಲದಲ್ಲಿ ತನ್ನ ಜಾಗವನ್ನು ಪಿರ್ಯಾದಿಯವರು ಪಡೆದುಕೊಂಡಿದ್ದಕ್ಕೆ, ಆರೋಪಿತನು ಪಿರ್ಯಾದಿಯೊಂದಿಗೆ ಸಿಟ್ಟಿನಿಂದ ಇದ್ದವನು, ದಿನಾಂಕ: 02-02-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಮಗ ವಿಶಾಲ್ ಇವನು ಬೋರವೆಲ್ ಬಂದ್ ಮಾಡಲು ಹೋಗಲು ಆರೋಪಿತನ ಹೊಲದಲ್ಲಿ ಕಾಲಿಡಬೇಕೆನ್ನುವಷ್ಟರಲ್ಲಿ ಆರೋಪಿತನು ಪಿರ್ಯಾದಿಯ ಮಗನಿಗೆ ‘ನನ್ನ ಹೊಲದಲ್ಲಿ ಕಾಲಿಡಬೇಡ’ ಎಂದು ಹೇಳಿದ್ದು, ಅದಕ್ಕೆ ಅವನು ‘ನೀನು ನಮ್ಮ ಹೊಲದಿಂದ ಬಂದು ಹೋಗಿ ಮಾಡುವುದಿಲ್ಲವಾ?’ ಎಂದು ಕೇಳಿದಕ್ಕೆ ಸಿಟ್ಟುಗೊಂಡು ಪಿರ್ಯಾದಿಯ ಮಗನಿಗೆ ‘ತಾಯಿನಾ ಹಡಾ, ರಂಡೆ ಮಗ’ ಎಂದು ಬೈಯ್ದಿದಿದ್ದಲ್ಲದೇ, ಪಿರ್ಯಾದಿಗೆ ‘ತಾಯಿನ ಹಡಾ, ರಂಡೆ ಮಗನೇ’ ಎಂದು ಬೈಯ್ದು, ಚಾಕುವಿನಿಂದ ತಿವಿದು ಪಿರ್ಯಾದಿಯ ಬಲಗೈ ಮಣಿಗಂಟಿನ ಹತ್ತಿರ ರಕ್ತಗಾಯ ಮಾಡಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಯಲ್ಲಪ್ಪಾ ಶೇಡಿ, ಪ್ರಾಯ-54 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಯಡೋಗಾ, ತಾ: ಹಳಿಯಾಳ ರವರು ದಿನಾಂಕ: 02-02-2021 ರಂದು 15-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-02-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

ಇತ್ತೀಚಿನ ನವೀಕರಣ​ : 04-02-2021 12:01 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080