ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-01-2022

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅರುಣ ತಂದೆ ರಾಮಾ ಬಾಡಕರ, ಪ್ರಾಯ-65 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಶಿರವಾಡ ರೈಲ್ವೆ ಸ್ಟೇಷನ್ ಕ್ವಾರ್ಟರ್ಸ್ ಹತ್ತಿರ, ಕಾರವಾರ (ಮೋಟಾರ್ ಸ್ಕೂಟರ್ ನಂ: ಕೆ.ಎ-30/ವಿ-4560 ನೇದರ ಸವಾರ). ಈತನು ದಿನಾಂಕ: 02-01-2022 ರಂದು 19-30 ಗಂಟೆಯ ಸಮಯಕ್ಕೆ ತನ್ನ ಮೋಟಾರ್ ಸ್ಕೂಟರ್ ನಂ: ಕೆ.ಎ-30/ವಿ-4560 ನೇದನ್ನು ಕಾರವಾರ ನಗರದ ಕಡೆಯಿಂದ ಶಿರವಾಡ ಕಡೆಗೆ ರಸ್ತೆಯ ಇಳಿಜಾರಿನಲ್ಲಿ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ನಿಯಂತ್ರಣ ತಪ್ಪಿ ಎದುರಿಗೆ ಸೈಕಲ್ ಮೇಲಾಗಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಶ್ರೀ ಏಕನಾಥ ತಂದೆ ಬಾಲಕೃಷ್ಣ ತಾಮ್ಸೆ, ಪ್ರಾಯ-70 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಜಾಂಬಾ ಕ್ರಾಸ್, ಶಿರವಾಡ, ಕಾರವಾರ ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಇಬ್ಬರೂ ಟಾರ್ ರಸ್ತೆಯ ಮೇಲೆ ಬಿದ್ದು ಸೈಕಲ್ ಸವಾರನಿಗೆ ತಲೆಯ ಹಿಂಭಾಗದಲ್ಲಿ ತೀವೃ ಸ್ವರೂಪದ ಗಾಯನೋವು ಪಡಿಸಿ, ಆರೋಪಿ ಮೋಟಾರ್ ಸ್ಕೂಟರ್ ಸವಾರನು ತಾನೂ ಕೂಡಾ ಮುಖಕ್ಕೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದೀಪಕ ತಂದೆ ವಿಷ್ಣು ಜಾಂಬ್ಳೇಕರ, ಪ್ರಾಯ-38 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ದೇವನಬಾಗ್, ಅವರ್ಸಾ, ತಾ: ಅಂಕೋಲಾ, ಹಾಲಿ ಸಾ|| ಗಾಂವಕರವಾಡಾ, ಜಾಂಬಾ ಕ್ರಾಸ್, ಶಿರವಾಡ, ಕಾರವಾರ ರವರು ದಿನಾಂಕ: 02-01-2022 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯಲ್ಲಾಲಿಂಗ ತಂದೆ ಭೀಮರಾವ್ ನಾದ, ವೃತ್ತಿ-ಚಿಂದಿ ಆಯುವುದು, ಸಾ|| ಆಲಮೇಲ್, ತಾ: ಸಿಂದಗಿ, ಜಿ: ಬಿಜಾಪುರ, ಹಾಲಿ ಸಾ|| ಬಿಣಗಾ, ಒಕ್ಕಲಕೇರಿ, ಕಾರವಾರ. ದಿನಾಂಕ: 02-01-2022 ರಂದು ಮಧ್ಯಾಹ್ನ 14-30 ಗಂಟೆಗೆ ಪಿರ್ಯಾದಿಯು ಸೇಂಟ್ ಮೈಕಲ್ ಶಾಲೆಯ ಗೇಟ್ ಎದುರು ಬಸ್ ಸ್ಯಾಂಡ್ ಕಡೆ ಹೋಗುವ ರಸ್ತೆಯ ಬದಿಯಲ್ಲಿ ಇರುವ ಬೇಕರಿಯಲ್ಲಿ ತಾನು ತನ್ನ ಬಳಿ ಇದ್ದ ಸಾಮಾನು ತುಂಬಿದ ಚೀಲಗಳನ್ನು ಇಟ್ಟುಕೊಂಡು ಬೇಕರಿ ವಸ್ತು ಖರೀದಿ ಮಾಡುತ್ತಿರುವಾಗ ಎಲ್ಲಿಂದಲೋ ಬಂದ ನಮೂದಿತ ಆರೋಪಿತನು ತನಗೆ ಹೇಳದೇ ಕೇಳದೇ ತನ್ನ ಚೀಲ ತೆಗೆದುಕೊಂಡು ಹೋಗುತ್ತಿರುವಾಗ, ಪ್ರಶ್ನಿಸಿದ್ದಕ್ಕೆ ಪಿರ್ಯಾದಿಗೆ ‘ಬಡ್ಡಿ ಮಗನೆ’ ಅಂತಾ ಬೈಯ್ದು, ತನ್ನ ಬಳಿ ಇದ್ದ ಸಣ್ಣ ಚಾಕುವನ್ನು ತೆಗೆದು ಪಿರ್ಯಾದಿಯ ಎಡಗಾಲ ತೊಡೆಗೆ ಚುಚ್ಚಿ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದೇವು ತಂದೆ ಭೀರಾ ಗೌಡಾ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರವಾಡ, ರೈಲ್ವೆ ಸ್ಟೇಷನ್ ಹತ್ತಿರ, ತರಂಗಮೇಟ್, ಹಾರವಾಡ, ತಾ: ಅಂಕೋಲಾ, ಹಾಲಿ ಸಾ|| ನಗೆಕೋವಿ, ದೇವಳಮಕ್ಕಿ, ಕಾರವಾರ ರವರು ದಿನಾಂಕ: 02-01-2022 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆದಿತ್ಯ ತಂದೆ ಸೋಮನಾಥ ಕಾಣಕೋಣಕರ್, ಪ್ರಾಯ-24 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಅಂಬೇಡ್ಕರ್ ಕಾಲೋನಿ, ನಂದನಗದ್ದಾ, ಕಾರವಾರ. ದಿನಾಂಕ: 02-01-2022 ರಂದು ಮಧ್ಯಾಹ್ನ 14-00 ಗಂಟೆಗೆ ಪಿರ್ಯಾದಿಯ ಗಂಡ ಶ್ರೀ ವಿನಾಯಕ ತಂದೆ ದತ್ತಾ ಕಾಣಕೋಣಕರ್, ಇವರು ಪೋನಿನಲ್ಲಿ ಮಾತಾಡುತ್ತಿರುವಾಗ ಪಿರ್ಯಾದಿಯ ಗಂಡನ ಅಣ್ಣನ ಮಗನಾದ ನಮೂದಿತ ಆರೋಪಿತನು ಯಾವುದೋ ವಿಷಯದ ಕುರಿತು ಸಿಟ್ಟಿನಿಂದ ಕೈಯಲ್ಲಿ ರಾಡ್ ಹಿಡಿದುಕೊಂಡು ಬಂದು ಪಿರ್ಯಾದಿಯ ಗಂಡನ ತಲೆಯ ಮೇಲೆ ಹೊಡೆದು ದುಃಖಾಪತ್ ಪಡಿಸಿರುತ್ತಾನೆ. ಇದರಿಂದ ಪಿರ್ಯಾದಿಯ ಗಂಡನಿಗೆ ತಲೆಗೆ ಮತ್ತು ಕಾಲಿಗೆ ಗಾಯವಾಗಿದ ಬಗ್ಗೆ ಪಿರ್ಯಾದಿ ಶ್ರೀಮತಿ ಅಂಜಲಿ ಕೋಂ. ವಿನಾಯಕ ಕಾಣಕೋಣಕರ್, ಪ್ರಾಯ-56 ವರ್ಷ, ವೃತ್ತಿ-ಗೃಹಿಣಿ, ಸಾ|| ಅಂಬೇಡ್ಕರ್ ಕಾಲೋನಿ, ನಂದನಗದ್ದಾ, ಕಾರವಾರ ರವರು ದಿನಾಂಕ: 02-01-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 323, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಘವೇಂದ್ರ ತಂದೆ ಲೇಟ್ ಬಜ್ಜಪ್ಪ, ಪ್ರಾಯ-28 ವರ್ಷ, ಸಾ|| ಚಾಮುಂಡೇಶ್ವರಿ ಎಕ್ಸಟೆನ್ಸನ್, ರಾಮನಗರ, 2]. ಶಿವರಾಜ ತಂದೆ ರಾಮಣ್ಣ, ಪ್ರಾಯ-32 ವರ್ಷ, ಸಾ|| ಸೋಮೇಶ್ವರ ಬಡಾವಣೆ, ಮಾಗಡಿ, ರಾಮನಗರ, 3]. ಮಂಜು ಕೆ. ತಂದೆ ಕೃಷ್ಣಪ್ಪ, ಪ್ರಾಯ-29 ವರ್ಷ, ಸಾ|| ಕುಂಬಾಪುರ ಕಾಲೋನಿ, ರಾಮನಗರ. ದಿನಾಂಕ: 02-01-2022 ರಂದು 17-15 ಗಂಟೆಗೆ ಪಿರ್ಯಾದಿಯವರು ಹೊಳೆಗದ್ದೆ ಟೋಲ್ ಕರ್ತವ್ಯದಲ್ಲಿ ಇದ್ದಾಗ ಟಾಟಾ ಸುಮೋ ವಾಹನ ನಂ: ಕೆ.ಎ. 41/498 ನೇದು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಗೇಟ್ ನಂ: ಇ-5 ಬಳಿ ಬಂದಾಗ ವಾಹನದ ಫಾಸ್ಟ್ ಟ್ಯಾಗ್ ರೀಡ್ ಆದ ಮೇಲೆ ಡಿಸಪ್ಲೇ ಯಲ್ಲಿ ಲೋ ಬ್ಯಾಲೆನ್ಸ್ (ಬ್ಲಾಕ್ ಲಿಸ್ಟ್) ಅಂತಾ ಬಂದಿದ್ದು. ಆಗ ಪಿರ್ಯಾದಿಯವರು ಆರೋಪಿ ಚಾಲಕನಿಗೆ ‘ನಿಮ್ಮ ಖಾತೆಯಲ್ಲಿ ಹಣ ಇರದೇ ಇರುವುದರಿಂದ ಬ್ಲಾಕ್ ಲಿಸ್ಟ್ ಅಂತಾ ಬರುತ್ತಿದೆ. ರೀಚಾರ್ಜ್ ಮಾಡಿ, 10 ನಿಮಿಷ ಬಿಟ್ಟು ಬನ್ನಿ. ಈಗ ವಾಹನವನ್ನು ಹಿಂದಕ್ಕೆ ತಗೆದುಕೊಳ್ಳಿ’ ಅಂತಾ ಹಿಂದಕ್ಕೆ ಕಳುಹಿಸಿದ್ದು, ಅದಕ್ಕೆ ಸಿಟ್ಟಾದ ಆರೋಪಿ 1 ನೇಯವನು ‘ಟಾಟಾ ಸುಮೋ ದಲ್ಲಿ ಫಾಸ್ಟ್ ಹಣ ಇದೆ. ಅದನ್ನು ಯಾಕೆ ಹಿಂದಕ್ಕೆ ಕಳುಹಿಸಿದಿ’ ಅಂತಾ ಹೇಳಿ ಪಿರ್ಯಾದಿಗೆ ಉದ್ದೇಶಿಸಿ ‘ಬೋಳಿ ಮಗನೆ’ ಅಂತಾ ಬೈಯ್ದು ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯವರಿಗೆ ಅಡ್ಡಗಟ್ಟಿ ತಡೆದು, ‘ಬೋಳಿ ಮಗನೆ’ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಬೆನ್ನಿನ ಮೇಲೆ ಹೊಡೆದು, ದೂಡಾಡಿ ಶರ್ಟ್ ಹಿಡಿದು ಎಳೆದು ಹರಿದು ಹಾಕಿದ್ದಲ್ಲದೇ, ಬಿಡಿಸಲು ಬಂದ ದಯಾನಂದ ತಂದೆ ನಾರಾಯಣ ಹರಿಕಂತ್ರ, ಈತನಿಗೂ ಸಹ ಆರೋಪಿತರೆಲ್ಲರೂ ಸೇರಿ ಕೈಯಿಂದ ಹೊಡೆದು ದೂಡಿ ಹಾಕಿ, ಕೊಲೆ ಮಾಡುವದಾಗಿ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ವಿಠ್ಠಲ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಹೊಳೆಗದ್ದೆ ಟೋಲ್ ದಲ್ಲಿ ಸೂಪರವೈಸರ್ ಕೆಲಸ, ಸಾ|| ಜೋಗಿನಕಟ್ಟೆ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 02-01-2022 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲೂಯಿಸ್ ತಂದೆ ಅಲ್ಫ್ರೆಡ್ ಗೋನ್ಸಾಲ್ವಿಸ್, ಪ್ರಾಯ-50 ವರ್ಷ, ಸಾ|| ಚಂದಾವರ, ಹೂವಿನಹಿತ್ಲು, ತಾ: ಹೊನ್ನಾವರ (ಟೆಂಪೋ ವಾಹನ ನಂ: ಕೆ.ಎ-47/ಎ-1558 ನೇದರ ಚಾಲಕ). ಈತನು ದಿನಾಂಕ: 02-01-2022 ರಂದು 20-00 ಗಂಟೆಗೆ ತನ್ನ ಟೆಂಪೋ ವಾಹನ ನಂ: ಕೆ.ಎ-47/ಎ-1558 ನೇದನ್ನು ಇಡಗುಂಜಿ ನಗರಬಸ್ತಿಕೇರಿಯ ರಸ್ತೆಯಲ್ಲಿ ಇಡಗುಂಜಿ ಕಡೆಯಿಂದ ಸಂಶಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಹೋಗಿ ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಮಾಗೋಡ ಗ್ರಾಮದ ಕುಚ್ಚೋಡಿ ಕ್ರಾಸ್ ಹತ್ತಿರ ರಸ್ತೆಯ ಎಡಬದಿಯಲ್ಲಿ ಟೆಂಪೋವನ್ನು ಎಡಮಗ್ಗುಲವಾಗಿ ಪಲ್ಟಿ ಮಾಡಿ ಅಪಘಾತ ಪಡಿಸಿ, ಟೆಂಪೋ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಯ ಮಗಳಾದ ಕು: ಪ್ರಿನ್ಸಿಟಾ ತಂದೆ ಪ್ರಾನ್ಸಿಸ್ ಮಿರಾಂದಾ, ಇವಳಿಗೆ ತಲೆಗೆ ಮತ್ತು ಬೆನ್ನಿಗೆ ಗಂಭೀರ ಸ್ವರೂಪದ ಗಾಯವಾಗಿ, ಅವಳು ಸ್ಥಳದಲ್ಲಿಯೇ ಮೃತಪಡುವಂತೆ ಕಾರಣನಾಗಿದ್ದಲ್ಲದೇ ಹಾಗೂ ಇನ್ನುಳಿದ ಪ್ರಯಾಣಿಕರಾದ ಪಿರ್ಯಾದಿಯ ಹೆಂಡತಿಯಾದ 1). ಶ್ರೀಮತಿ ಅನಸ್ಟಲ್ ಕೋಂ. ಪಾನ್ಸಿಸ್ ಮಿರಾಂದಾ, ಪ್ರಾಯ-54 ವರ್ಷ, ವೃತ್ತಿ-ಗೃಹಿಣಿ, ಸಾ|| ಸಂಶಿ, ಪೋ: ಕುದ್ರಗಿ. ತಾ: ಹೊನ್ನಾವರ. ಇವರಿಗೆ ತಲೆಗೆ, ಬೆನ್ನಿಗೆ ಗಾಯ ಪಡಿಸಿದ್ದಲ್ಲದೇ ಮತ್ತು ಪಿರ್ಯಾದಿಯ ಸಂಬಂಧಿಕರಾದ 2). ಶ್ರೀಮತಿ ಪಿಯದಾದ ಕೋಂ. ಬಸ್ಯಾಂವ್ ಲೋಪಿಸ್. ಪ್ರಾಯ-65 ವರ್ಷ, ವೃತ್ತಿ-ಗೃಹಿಣಿ, ಸಾ|| ಸಿದ್ಧನಬಾವಿ, ತಾ: ಕುಮಟಾ, ಇವರಿಗೆ ತಲೆಗೆ ಹಾಗೂ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದು, 3). ಕು: ರೇಕೆಲ್ ತಂದೆ ರೆಮೆಂಡ್ ಮಿರಾಂದಾ, ಪ್ರಾಯ-60 ವರ್ಷ, ವೃತ್ತಿ-ಗೃಹಿಣಿ, ಸಾ|| ಸಂಶಿ, ಕುದ್ರಗಿ, ತಾ: ಹೊನ್ನಾವರ, 4). ಶ್ರೀಮತಿ ಕ್ಲೇರಾ ಕೋಂ. ಬಸ್ತ್ಯಾಂವ್ ಮಿರಾಂದಾ, ಪ್ರಾಯ-43 ವರ್ಷ, ವೃತ್ತಿ-ಗೃಹಿಣಿ, ಸಾ|| ಸಂಶಿ, ಕುದ್ರಗಿ, ತಾ: ಹೊನ್ನಾವರ, 5). ಶ್ರೀಮತಿ ರೇಖಾ ಕೋಂ. ಮಾರಿಯೋ ಮಿರಾಂದಾ, ಪ್ರಾಯ-36 ವರ್ಷ, ವೃತ್ತಿ-ಗೃಹಿಣಿ, ಸಾ|| ಸಂಶಿ, ಕುದ್ರಗಿ, ತಾ: ಹೊನ್ನಾವರ, 6). ಕು: ಲೆನ್ಸಿಟಾ ತಂದೆ ಲಾಜರ್ ಮಿರಾಂದಾ, ಪ್ರಾಯ-17 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಸಂಶಿ, ಕುದ್ರಗಿ, ತಾ: ಹೊನ್ನಾವರ, 7). ಶ್ರೀಮತಿ ಪಿಲೋಮಿನಾ ಕೋಂ. ಸಿಂಪ್ರನ್ ಮಿರಾಂದಾ, ಪ್ರಾಯ-62 ವರ್ಷ, ವೃತ್ತಿ-ಗೃಹಿಣಿ, ಸಾ|| ಸಂಶಿ, ಕುದ್ರಗಿ, ತಾ: ಹೊನ್ನಾವರ, ಇವರಿಗೆ ಕೈ ಕಾಲಿಗೆ, ಬೆನ್ನಿಗೆ ಹಾಗೂ ಮೈಮೇಲೆ ಅಲ್ಲಲ್ಲಿ ಸಾದಾ ಗಾಯ ಪಡಿಸಿ, ಟೆಂಪೋ ವಾಹನ ಜಖಂ ಆಗಲು ಆರೋಪಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಫ್ರ್ರಾನ್ಸಿಸ್ ತಂದೆ ರೆಮಂಡ್ ಮಿರಾಂದಾ, ಪ್ರಾಯ-56 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂಶಿ, ಕುದ್ರಗಿ, ತಾ: ಹೊನ್ನಾವರ ರವರು ದಿನಾಂಕ: 02-01-2022 ರಂದು 23-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹರೀಶ ತಂದೆ ಲಿಂಗಪ್ಪ ನಾಯ್ಕ, ಪ್ರಾಯ-35 ವರ್ಷ, ಸಾ|| ಗುಡಿ ಮನೆ, ಪೋ: ಜಾಲಿ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ವಿ-6521 ಸವಾರ). ಈತನು ದಿನಾಂಕ: 01-01-2022 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಭಟ್ಕಳದ ಜಾಲಿ ರಸ್ತೆಯ ಆಜಾದ್ ನಗರ 7 ನೇ ಕ್ರಾಸ್ ಶೇಡಕುಳಿ ಹೊಂಡದ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-47/ವಿ-6521 ನೇದರ ಮೇಲಾಗಿ ತನ್ನ ದೊಡ್ಡಮ್ಮ ಶ್ರೀಮತಿ ಮಾಸ್ತಮ್ಮ ಕೋಂ. ಸುಬ್ಬರಾಯ್ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಮನೆ ಕೆಲಸ, ಸಾ|| ತೆರನಮಕ್ಕಿ, ಕಾಯ್ಕಿಣಿ, ಮುರ್ಡೇಶ್ವರ, ತಾ: ಭಟ್ಕಳ ಇವರನ್ನು ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕೂರಿಸಿಕೊಂಡು ಜಾಲಿ ಬದಿಯಿಂದ ಭಟ್ಕಳ ಸಂಶುದ್ದೀನ್ ಸರ್ಕಲ್ ಬದಿಗೆ ಹೋಗುತ್ತಿರುವಾಗ ಆಜಾದ್ ನಗರ 7 ನೇ ಕ್ರಾಸ್ ಶೇಡಕುಳಿ ಹೊಂಡದ ಹತ್ತಿರ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ಮೋಟಾರ್ ಸೈಕಲಿಗೆ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಪಲ್ಟಿ ಮಾಡಿ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿ ಕುಳಿತ ಶ್ರೀಮತಿ ಮಾಸ್ತಮ್ಮ ಕೋಂ. ಸುಬ್ಬರಾಯ್ ನಾಯ್ಕ, ಇವರಿಗೆ ಎಡಗೈಗೆ, ಬೆನ್ನಿಗೆ ಹಾಗೂ ಕೈ ಕಾಲುಗಳಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ಲಿಂಗಪ್ಪ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ವ್ಯಾಪಾರ, ಸಾ|| ಗುಡಿ ಮನೆ, ಪೋ: ಜಾಲಿ, ತಾ: ಭಟ್ಕಳ ರವರು ದಿನಾಂಕ: 02-01-2022 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 324 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಲೀಮ್, ಸಾ|| ರಾಮನಗರ, ತಾ: ಜೋಯಿಡಾ. ದಿನಾಂಕ: 27-12-2021 ರಂದು ರಾತ್ರಿ 07-30 ಗಂಟೆಗೆ ಅಂಗವಿಕಲನಾಗಿರುವ ಪಿರ್ಯಾದಿಯವರ ಮಗ ಸೌರಭ ಹಾಗೂ ನಮೂದಿತ ಆರೋಪಿತನ ಅಕ್ಕನ ಮಗ ಇವರಲ್ಲಿ ಬಾಯಿಂದ ಜಗಳವಾದಾಗ ಪಿರ್ಯಾದಿಯವರ ಗಂಡ ಸುಧೀರ ರವರು ಅಲ್ಲಿಗೆ ಹೋಗಿ ಜಗಳ ಬಿಡಿಸಿದ್ದು, ಆದರೆ ಆರೋಪಿತನು ಹಿಂದಿನಿಂದ ಬಂದು ಕಟ್ಟಿಗೆಯಿಂದ ಸೌರಭ ತಲೆಯ ಹಿಂಭಾಗದಲ್ಲಿ ಹೊಡೆದಿದ್ದು, ಪಿರ್ಯಾದಿಯವರು ದಿನಾಂಕ: 28-12-2021 ರಂದು ಹುಬ್ಬಳ್ಳಿಯ ಪ್ರಕಾಶ ಕೋರೆ ರವರ ದವಾಖಾನೆಗೆ ತೆಗೆದುಕೊಂಡು ಹೋಗಿ, ಅವರಲ್ಲಿ ತೋರಿಸಿ ಔಷಧಿ ತೆಗೆದುಕೊಂಡು ಬಂದಿದ್ದರು. ದಿನಾಂಕ: 29-12-2021 ರಂದು ಸೌರಭ ಇವನು ಸ್ನಾನ ಮಾಡಿದ ನಂತರ ಎದೆನೋವು ಶುರುವಾಗಿ ಹಾಸಿಗೆಯ ಮೇಲೆ ಬಿದ್ದಾಗ ಅವನಿಗೆ ಕಾಳಿ ಅಮರಾಹಿ ಸತೀಶ ಪಾಟೀಲ ದವಾಖಾನೆಗೆ ತೆಗೆದುಕೊಂಡು ಹೋಗಿದ್ದು, ಅವರು ಕೆ.ಎಲ್.ಇ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಹೇಳಿದಂತೆ ಕೆ.ಎಲ್.ಇ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅವರು ‘ತಲೆಗೆ ಹೊಡೆದಿದ್ದರಿಂದ ತಲೆ ಹಾಗೂ ಎದೆನೋವು ಆಗ್ತಾ ಇದೆ. ಕೇಸ್ ಮಾಡಿದರೆ ಪೇಷಂಟ್ ತೆಗೆದುಕೊಳ್ಳುತ್ತೇವೆ’ ಅಂತಾ ಹೇಳಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸುವರ್ಣಾ ಕೋಂ. ಸುಧೀರ ಗಿರಿ, ಪ್ರಾಯ-43 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ರಾಮಲಿಂಗ ಗಲ್ಲಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 02-01-2022 ರಂದು 19-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-01-2022

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ದೇವಿ ಕೋಂ. ನರಸಿಂಹ ಭಟ್ಟ, ಪ್ರಾಯ-85 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಚಂದಗುಳಿ, ತಾ: ಯಲ್ಲಾಪುರ, ಹಾಲಿ ಸಾ|| ಗುಜರ ಗಲ್ಲಿ, ತಾ: ಕುಮಟಾ. ಇವಳು ತನ್ನ ಗಂಡ ನರಸಿಂಹ ತಂದೆ ಶಿವರಾಮ ಭಟ್ಟ, ಈತನು ಅನಾರೋಗ್ಯದಿಂದ ನಡೆದಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಆತನ ಆರೈಕೆ ಮಾಡಿ ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 02-01-2022 ರಂದು ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ತಾವು ಬಾಡಿಗೆಗೆ ವಾಸವಿರುವ ಗುಜರ ಗಲ್ಲಿಯ ರಾಜೇಂದ್ರ ತಂದೆ ಪ್ರೇಮಚಂದ ಹಂಸರಾಜ್, ಇವರ ಮನೆಯ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಮಹಾಬಲೇಶ್ವರ ತಂದೆ ನರಹಿಂಹ ಭಟ್ಟ, ಪ್ರಾಯ-60 ವರ್ಷ, ವೃತ್ತಿ-ಪೌರೋಹಿತ್ಯ, ಸಾ|| ಚಂದಗುಳಿ, ತಾ: ಯಲ್ಲಾಪುರ, ಹಾಲಿ ಸಾ|| ಗುಜರ ಗಲ್ಲಿ, ತಾ: ಕುಮಟಾ ರವರು ದಿನಾಂಕ: 02-01-2022 ರಂದು 16-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸುರೇಶ ತಂದೆ ಮಲ್ಲೇಶಪ್ಪ ಪವಾರ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ. ಈತನು ದಿನಾಂಕ: 01-01-2022 ರಂದು ಬೆಳಿಗ್ಗೆ 11-30 ಗಂಟೆಗೆ ಸ್ನಾನ ಮಾಡಲು ಚಿಗಳ್ಳಿ ಗ್ರಾಮದ ತುರ್ಮನ ಕೆರೆಯಲ್ಲಿ ಇಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದವನು, ದಿನಾಂಕ: 02-01-2022 ರಂದು ಬೆಳಿಗ್ಗೆ 09-30 ಗಂಟೆಗೆ ನೀರಿನಲ್ಲಿ ಡಬ್ಬಾಗಿ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿದ್ದು, ಅವನ ಮೃತದೇಹವು ನೀರಿನಲ್ಲಿಯೇ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕುಮಾರ ತಂದೆ ಮಲ್ಲೇಶಪ್ಪ ಪವಾರ, ಪ್ರಾಯ-37 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ ರವರು ದಿನಾಂಕ: 02-01-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಘುಪತಿ ತಂದೆ ದುರ್ಗಾ ಹಸ್ಲರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೋದ್ಲಮನೆ, ದಾನಮಾಂವ ಗ್ರಾಮ, ತಾ: ಸಿದ್ದಾಪುರ. ಪಿರ್ಯಾದಿಯ ಗಂಡನಾದ ಈತನು ದಿನಾಂಕ: 20-12-2021 ರಂದು ಸಿದ್ದಾಪುರ ತಾಲೂಕಿನ ಹಂಗಾರಕೈ ಊರಿನ ಶ್ರೀಧರ ನಾರಾಯಣ ನಾಯ್ಕ ರವರ ಅಡಿಕೆ ತೋಟದ ಅಡಿಕೆ ಮರ ಹತ್ತಿ, ಅಡಿಕೆ ಕೊನೆ ಕೊಯ್ಯುತ್ತಿರುವಾಗ ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ಅಡಿಕೆ ಮರದಿಂದ ಆಯ ತಪ್ಪಿ ನೆಲಕ್ಕೆ ಅಪ್ಪಳಿಸಿ ಬಿದ್ದು, ಅವರ ಬೆನ್ನಿಗೆ ಗಂಭೀರ ಸ್ವರೂಪದ ಒಳ ಪೆಟ್ಟಾದವರಿಗೆ, ಅದೇ ದಿನ ಸಿದ್ದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿ, ನಂತರ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು, ನಂತರ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಇನ್ನೂ ಹೆಚ್ಚಿನ ಚಿಕಿತ್ಸೆ ಕೊಡಿಸುವ ನಿರ್ಧಾರ ಮಾಡಿಕೊಂಡು ದಿನಾಂಕ: 30-12-2021 ರಂದು ಮಂಗಳೂರಿನ ವೆನಲಾಕ್ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದು, ಒಂದೆರೆಡು ದಿನ ಬಿಟ್ಟು ಬೇರೆ ಆಸ್ಪತ್ರೆಗೆ ಹೋಗುವ ಯೋಚನೆಯಲ್ಲಿದ್ದಾಗ ದಿನಾಂಕ: 02-01-2022 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದಲ್ಲಿಯೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ತುಳಸಿ ಕೋಂ. ರಘುಪತಿ ಹಸ್ಲರ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೋದ್ಲಮನೆ, ದಾನಮಾಂವ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 02-01-2022 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 03-01-2022 01:01 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080