ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-07-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಜನ ತಂದೆ ಲಕ್ಷ್ಮಣ ಚಿಂಚ್ರೇಕರ, ಪ್ರಾಯ-46 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಭಾಗವಾಡಾ, ಕಿನ್ನರ, ಕಾರವಾರ. ಈತನು ದಿನಾಂಕ: 02-07-2021 ರಂದು 16-15 ಗಂಟೆಯ ಸುಮಾರಿಗೆ ಕಾರವಾರ ತಾಲೂಕಿನ ಶಿರವಾಡದ ಸಾರ್ವಜನಿಕ ರಸ್ತೆಯ ಸ್ಥಳದಲ್ಲಿ ನಿಂತುಕೊಂಡು 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗರಾಟ ನಡೆಸುತ್ತಿರುವಾಗ ನಗದು ಹಣ 720/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-1, 2) ಖಾಲಿ ಹಾಳೆಗಳು-03, 3) ಬಾಲ್ ಪೆನ್-1 ಇವುಗಳೊಂದಿಗೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರೇವಣಸಿದ್ದಪ್ಪ ಜೀರಂಕಲಗಿ, ಪಿ.ಎಸ್.ಐ, ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 02-07-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಜಿತ್ ರವೀಂದ್ರನ್, ಸಾ|| ಬೆಂಗಳೂರು (ಕಾರ್ ನಂ: ಕೆ.ಎ-53/ಎಮ್.ಡಿ-8587 ನೇದರ ಚಾಲಕ). ಈತನು ದಿನಾಂಕ: 02-07-2021 ರಂದು 13-30 ಗಂಟೆಗೆ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ತನ್ನ ಬಾಬ್ತು ಕಾರ್ ನಂ: ಕೆ.ಎ-53/ಎಮ್.ಡಿ-8587 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ತನ್ನ ಕಾರ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಬಲಕ್ಕೆ ಬಂದವನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ರಸ್ತೆಯ ತನ್ನ ಬದಿಯಿಂದ ಹೋಗುತ್ತಿದ್ದ ಓಮಿನಿ ಕಾರ್ ನಂ: ಕೆ.ಎ-31/ಎನ್-0556 ನೇದಕ್ಕೆ ಬಲಬದಿಯಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಓಮಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 1). ಮಂಜುನಾಥ ತಂದೆ ರಂಗಪ್ಪ ಕುಸುಗಲ್, 2). ದಯಾನಂದ ತಂದೆ ನಾರಾಯಣ ನಾಯ್ಕ, 3). ಯುವರಾಜ ತಂದೆ ದಯಾನಂದ ನಾಯ್ಕ, 4). ಪ್ರಶಾಂತ ತಂದೆ ಬಸವಣ್ಣಿ ಹೊಸಮನಿ, 5). ಶ್ರವಣ ತಂದೆ ಬಸವಣ್ಣಿ ಕೋಳೂರು, 6). ಶ್ರೀಮತಿ ರೇಣುಕಾ ಬಸವಣ್ಣಿ ಕೋಳೂರು, ಸಾ|| (ಎಲ್ಲರೂ) ಕನ್ನಡ ಶಾಲೆಯ ಹತ್ತಿರ, ಗುಳ್ಳಾಪುರ, ತಾ: ಯಲ್ಲಾಪುರ ಇವರಿಗೆ ಮತ್ತು ಅಪಘಾತ ಪಡಿಸಿದ ಕಾರಿನಲ್ಲಿದ್ದ ಕು: ಆದ್ಯಾ ತಂದೆ ರಜಿತ್, ಸಾ|| ಬೆಂಗಳೂರು ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದಲ್ಲದೇ, ಆರೋಪಿ ಚಾಲಕನು ತನಗೂ ಕೂಡ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ರಂಗಪ್ಪ ಕುಸುಗಲ್, ಪ್ರಾಯ-53 ವರ್ಷ, ವೃತ್ತಿ-ವ್ಯಾಪಾರ, ಸಾ|| ಕನ್ನಡ ಶಾಲೆಯ ಹತ್ತಿರ, ಗುಳ್ಳಾಪುರ, ತಾ: ಯಲ್ಲಾಪುರ ರವರು ದಿನಾಂಕ: 02-07-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 127/2021, ಕಲಂ: 279, 304(ಎ) ಐಪಿಸಿ ಹಾಗೂ ಕಲಂ:  187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಹವಾಲ್ದಾರಸಿಂಗ್ ತಂದೆ ರಾಜಾರಾಮ್ ಯಾದವ್, ಸಾ|| ರಮಣ್ ಜಾಲೂರು, ವಾರಣಾಸಿ, ಉತ್ತರ ಪ್ರದೇಶ (ಟ್ಯಾಂಕರ್ ಲಾರಿ ನಂ: ಟಿ.ಎನ್-52/ಎ-9911 ನೇದರ ಚಾಲಕ). ಈತನು ದಿನಾಂಕ: 02-07-2021 ರಂದು ಮಧ್ಯಾಹ್ನ 13-45 ಗಂಟೆಗೆ ತನ್ನ ಟ್ಯಾಂಕರ್ ಲಾರಿ ನಂ: ಟಿ.ಎನ್-52/ಎ-9911 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕುಮಟಾ ತಾಲೂಕಿನ ಮಿರ್ಜಾನ ಜಡ್ಡಿಗದ್ದೆಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ತಿರುವಿನಲ್ಲಿ ತನ್ನ ಮುಂದಿನಿಂದ ಅಂದರೆ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಹೀರೋ ಹೋಂಡಾ ಫ್ಯಾಶನ್ ಮೋಟಾರ ಸೈಕಲ್ ನಂ: ಕೆ.ಎ-47/ಜೆ-0277 ನೇದಕ್ಕೆ ನಿಷ್ಕಾಳಜಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮವಾಗಿ ಮೋಟಾರ್ ಸೈಕಲ್ ಸವಾರನಾದ ಶ್ರೀ ರಮೇಶ ತಂದೆ ನಾಗಪ್ಪಾ ಹರಿಕಂತ್ರ, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಿಮಾನಿ, ತಾ: ಕುಮಟಾ ಈತನು ಸುಮಾರು 30 ಫೂಟ್ ಮುಂದೆ ಹೋಗಿ ಡಿವೈಡರ್ ಬದಿಯಲ್ಲಿ ಹಾರಿ ಬಿದ್ದು ತಲೆಗೆ, ಹಣೆಗೆ, ಬಲಗಾಲಿನ ತೊಡೆಯ ಭಾಗಕ್ಕೆ ಮತ್ತು ಮೊಣಗಂಟಿನ ಕೆಳಭಾಗದಲ್ಲಿ ಮೂಳೆ ಮುರಿದು ಮಾಂಸ ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆರೋಪಿ ಲಾರಿ ಚಾಲಕನು ಮೋಟಾರ್ ಸೈಕಲ್ ಲಾರಿಯ ಕೆಳಗೆ ಒಳ ಭಾಗದಲ್ಲಿ ಸಿಕ್ಕಿಕೊಂಡರೂ ಸಹ ತನ್ನ ಟ್ಯಾಂಕರ್ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಸುಮಾರು 4 ಕಿ.ಮೀ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದು, ಸಿಕ್ಕಿ ಹಾಕಿಕೊಂಡ ಮೋಟಾರ್ ಸೈಕಲ್ ಟ್ಯಾಂಕರ್ ಲಾರಿಯಿಂದ ರಸ್ತೆಯ ಮೇಲೆ ಬಿದ್ದಿದ್ದು, ಪಿರ್ಯಾದಿಯವರು 13-55 ಗಂಟೆಗೆ ಲಾರಿಯನ್ನು ದುಂಡಕುಳಿಯಲ್ಲಿ ನಿಲ್ಲಿಸಿದ್ದು ಮತ್ತು ಮೋಟಾರ್ ಸೈಕಲ್ ಸವಾರನಾದ ಶ್ರೀ ರಮೇಶ ತಂದೆ ನಾಗಪ್ಪಾ ಹರಿಕಂತ್ರ ಇವರ ಮರಣಕ್ಕೆ ಆರೋಪಿ ಟ್ಯಾಂಕರ್ ಲಾರಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಸಚಿನ ತಂದೆ ಮಂಜುನಾಥ ಹರಿಕಂತ್ರ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂತೆಗದ್ದೆ, ತಾ: ಕುಮಟಾ ರವರು ದಿನಾಂಕ: 02-07-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 177/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಮೇಘಾ ತಂದೆ ಮಹೇಶ ಮುಕ್ರಿ, ಪ್ರಾಯ-18 ವರ್ಷ, ಸಾ|| ಜಡ್ಡಿಗದ್ದೆ, ಕಡತೋಕಾ, ತಾ: ಹೊನ್ನಾವರ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 01-07-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 02-07-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ರಾತ್ರಿ ಮನೆಯಲ್ಲಿ ಮಲಗಿದ್ದವಳು, ಮನೆಯಿಂದ ಹೊರಗಡೆ ಹೋಗಿ ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಗೀತಾ ಕೋಂ. ಮಹೇಶ ಮುಕ್ರಿ ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಡ್ಡಿಗದ್ದೆ, ಕಡತೋಕಾ, ತಾ: ಹೊನ್ನಾವರ ರವರು ದಿನಾಂಕ: 02-07-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾರಾಯಣ ತಂದೆ ವೆಂಕಟೇಶ ಶೆಟ್ಟಿ, ಪ್ರಾಯ-48 ವರ್ಷ, ವೃತ್ತಿ-ಹೊಟೇಲಿನಲ್ಲಿ ಕೆಲಸ, ಸಾ|| ತೆಂಗಿನಗುಂಡಿ, ಹೆಬಳೆ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0507 ನೇದರ ಸವಾರ). ಈತನು ದಿನಾಂಕ: 28-06-2021 ರಂದು ಸಾಯಂಕಾಲ 19-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ತಾಲೂಕಾ ಸರಕಾರಿ ಆಸ್ಪತ್ರೆ ರಸ್ತೆಯ ಇಂದಿರಾ ಕ್ಯಾಂಟೀನ್ ಹತ್ತಿರ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0507 ನೇದರ ಹಿಂಬದಿಯಲ್ಲಿ ತನ್ನ ಹೆಂಡತಿ ಶ್ರೀಮತಿ ಜಯಲಕ್ಷ್ಮಿ ಗಂಡ ನಾರಾಯಣ ಶೆಟ್ಟಿ, ಪ್ರಾಯ-44 ವರ್ಷ, ವೃತ್ತಿ-ಮನೆ ಕೆಲಸ, ಸಾ|| ತೆಂಗಿನಗುಂಡಿ, ಹೆಬಳೆ, ತಾ: ಭಟ್ಕಳ ಇವಳನ್ನು ಕೂಡ್ರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಕಡೆಯಿಂದ ತಾಲೂಕಾ ಸರಕಾರಿ ಆಸ್ಪತ್ರೆ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ಒಮ್ಮೇಲೆ ಮೋಟಾರ್ ಸೈಕಲಿಗೆ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿಯ ಸವಾರಳಾದ ಶ್ರೀಮತಿ ಜಯಲಕ್ಷ್ಮಿ ಗಂಡ ನಾರಾಯಣ ಶೆಟ್ಟಿ ಇವರಿಗೆ ಬಲ ಮೊಣಕಾಲಿನ ಹತ್ತಿರ ಪೆಟ್ಟಾಗಿ ಸಾದಾ ಸ್ವರೂಪದ ನೋವಾಗಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಬಲಗಾಲಿನ ಹಿಮ್ಮಡಿಯ ಹತ್ತಿರ ಮತ್ತು ಎಡಗೈ ಬೆರಳುಗಳಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ನಾರಾಯಣ ಶೆಟ್ಟಿ, ಪ್ರಾಯ-23 ವರ್ಷ, ವೃತ್ತಿ-ಸೇಂಟ್ ಮಿಲಾಗ್ರೀಸ್ ಬ್ಯಾಂಕಿನಲ್ಲಿ ಕೆಲಸ, ಸಾ|| ತೆಂಗಿನಗುಂಡಿ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 02-07-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 106/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಭಾಸ್ಕರ ತಂದೆ ಸುಬ್ಬಾ ದೇವಾಡಿಗ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಿತ್ಲಳ್ಳಿ, ತಾ: ಯಲ್ಲಾಪುರ, 2]. ಹರೀಶ ತಂದೆ ಕೇಶವ ನಾಯ್ಕ, ಪ್ರಾಯ-ಸುಮಾರು 30 ವರ್ಷ, ವೃತ್ತಿ-ವ್ಯಾಪಾರ, ಸಾ|| ಎಕ್ಕಂಬಿ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 01-07-2021 ರಂದು 18-30 ಗಂಟೆಗೆ ಹಿತ್ಲಳ್ಳಿ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸಿ, ಪಂಥವಾಗಿ ಬಂದ ಹಣವನ್ನು ಹಾಗೂ ಓ.ಸಿ ಚೀಟಿಯನ್ನು ಆರೋಪಿ 2 ನೇಯವನಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ಆರೋಪಿ 1 ನೇಯವನು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳು ಹಾಗೂ ನಗದು ಹಣ 1,900/- ರೂಪಾಯಿಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ಎಚ್. ಯಳ್ಳೂರ, ಪೊಲೀಸ್ ನಿರೀಕ್ಷಕರು, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 02-07-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಶಂಕರ ತಂದೆ ಮಾಸ್ತ್ಯಾ ಗೌಡ, ಪ್ರಾಯ-46 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಕಟ್ಟೆಕೈ, ತಾ: ಸಿದ್ಧಾಪುರ. ಈತನು ದಿನಾಂಕ: 02-07-2021 ರಂದು 15-30 ಗಂಟೆಗೆ ಸಿದ್ದಾಪುರ ತಾಲೂಕಿನ ಕಟ್ಟೆಕೈ ಊರಿನ ಶಾಲೆಯ ಸಮಿಪ ಇರುವ ತನ್ನ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 04 ಟೆಟ್ರಾ ಪ್ಯಾಕೆಟ್ ಗಳು, 2). 02 ಪ್ಲಾಸ್ಟಿಕ್ ಗ್ಲಾಸುಗಳು, 3). Original Choice Deluxe Whisky 90 ML ಅಂತಾ ಬರೆದ 02 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ಚಂದಾವರ, ಪಿ.ಎಸ್.ಐ (ಕ್ರೈಂ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 02-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 3 ಸಹಿತ 25 ಭಾರತೀಯ ಆಯುಧ ಅಧಿನಿಯಮ-1959 ಹಾಗೂ ಕಲಂ: 338 ಐಪಿಷಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದುದಾರರು ಕಲಕರಡಿ ಗ್ರಾಮದ ಅರಣ್ಯ ಸರ್ವೇ ನಂ: 55 ರಲ್ಲಿ ತೋಟ ಹೊಂದಿದ್ದು, ಅಡಿಕೆ, ಭತ್ತದ ಬೆಳೆಯನ್ನು ಬೆಳೆಸಿರುತ್ತಾರೆ. ಪಿರ್ಯಾದುದಾರರು ದಿನಾಂಕ: 30-06-2021 ರಂದು 15-00 ಗಂಟೆಗೆ ಕಲಕರಡಿ ಗ್ರಾಮದ ಅರಣ್ಯ ಸರ್ವೇ ನಂ: 55 ರಲ್ಲಿ ತಮ್ಮ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-1262 ನೇದರ ಮೇಲಾಗಿ ತೋಟಕ್ಕೆ ಹೋಗಿ ತೋಟದ ಕೆಲಸ ಮಾಡಿ ಪರತ್ 17-45 ಗಂಟೆಗೆ ಮೋಟಾರ್ ಸೈಕಲ್ ಮೇಲೆ ಮನೆಗೆ ಹೋಗಲು ತಿಮ್ಮಣ್ಣನ ಇವರ ಮನೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ಅನಂತ ಈತನ ಗದ್ದೆ ಬಳಿ ತಲುಪಿದಾಗ 17-50 ಗಂಟೆಯ ಸುಮಾರಿಗೆ ‘ಟಪ್’ ಅಂತಾ ಶಬ್ದ ಕೇಳಿ ತನ್ನ ಎಡಬದಿಯಿಂದ ಯಾವುದೋ ವಸ್ತು ತನ್ನ ಎಡಗಾಲಿನ ಪಾದಕ್ಕೆ ಚುಚ್ಚಿದಂತೆ ಆಯಿತು. ತಾನು ಮೋಟಾರ್ ಸೈಕಲ್ ನಿಲ್ಲಿಸಿ ಸುತ್ತಮುತ್ತಲೂ ನೋಡಿದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ. ಎಡಗಾಲಿನ ಪಾದದ ಬಳಿ ರಕ್ತ ಬಂದು ಸೋರುತ್ತಿತ್ತು. ಕೂಡಲೇ ತಾನು ಮನೆಗೆ ಹೋಗಿ ಮನೆಯಲ್ಲಿ ಮನೆ ಔಷಧಿ ಮಾಡಿಕೊಂಡೆನು. ನಂತರ ವಿಪರೀತ ನೋವು ಕಾಣಿಸಿಕೊಂಡಿದ್ದರಿಂದ ತಾನು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾದೆನು. ಆಸ್ಪತ್ರೆಯಲ್ಲಿ ವೈದ್ಯರು ತನಗೆ ಉಪಚರಿಸಿ ಕಾಲಿನೊಳಗೆ ಗುಂಡು ಇರುವುದಾಗಿ ತಿಳಿಸಿ ಆಪರೇಷನ್ ಮಾಡಬೇಕು ಅಂತಾ ತಿಳಿಸಿದ್ದು, ಅದರಂತೆ ವೈದ್ಯರು ಆಪರೇಷನ್ ಮಾಡಿ ಕಾಲಿನೊಳಗೆ ಇದ್ದ ಸೀಸದ ಗುಂಡನ್ನು ಹೊರಗೆ ತೆಗೆದಿರುತ್ತಾರೆ. ನಮೂದಿತ ಆರೋಪಿತರು ಯಾವ ಉದ್ದೇಶಕ್ಕಾಗಿ ಈ ಕೃತ್ಯ ಮಾಡಿರುತ್ತಾರೆ ಅಂತಾ ತನಗೆ ಗೊತ್ತಿರುವುದಿಲ್ಲ. ಕಾರಣ ನಮೂದಿತ ಆರೋಪಿತರು ಈ ಕೃತ್ಯ ಎಸಗಿ ತನಗೆ ತೀವೃ ಗಾಯ ಪಡಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮಣ್ಣ ತಂದೆ ಭೀಮಪ್ಪ ಹರಿಜನ (ಹಾದಿಮನಿ), ಪ್ರಾಯ-54 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಲಕರಡಿ, ತಾ: ಶಿರಸಿ ರವರು ದಿನಾಂಕ: 02-07-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-07-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಿರೀಶ ತಂದೆ ಕೃಷ್ಣಮೂರ್ತಿ ಅಕ್ಕಸಾಲಿ, ಪ್ರಾಯ-38 ವರ್ಷ, ವೃತ್ತಿ-MSIL ನಲ್ಲಿ ಕೆಲಸ, ಸಾ|| ಓಣಿಕೇರಿ, ತಾ: ಮುಂಡಗೋಡ,. ಸುದ್ದಿದಾರನ ತಮ್ಮನಾದ ಈತನು ತನಗೆ ಆರೋಗ್ಯ ಸರಿ ಇಲ್ಲದೇ ಇದ್ದುದರಿಂದ ಎಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಕೊಂಡರೂ ಸಹ ಕಡಿಮೆ ಆಗದೇ ಇದ್ದುದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 30-06-2021 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕ: 01-07-2021 ರಂದು ಸಾಯಂಕಾಲ 04-30 ಗಂಟೆಯ ನಡುವಿನ ಅವಧಿಯಲ್ಲಿ ನಮ್ಮ ಮನೆಯ ಮೇಲ್ಛಾವಣಿಯ ಕಟ್ಟಿಗೆಗೆ ಪ್ಲ್ಯಾಸ್ಟಿಕ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ತಮ್ಮನ ಮೃತದೇಹವು ನಮ್ಮ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿರುತ್ತದೆ. ಇದರ ಹೊರತು ನನ್ನ ತಮ್ಮನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲ ತಂದೆ ಕೃಷ್ಣಮೂರ್ತಿ ಅಕ್ಕಸಾಲಿ, ಪ್ರಾಯ-41 ವರ್ಷ, ವೃತ್ತಿ-ಬಂಗಾರದ ಕೆಲಸ, ಸಾ|| ಓಣಿಕೇರಿ, ತಾ: ಮುಂಡಗೋಡ, ಹಾಲಿ ಸಾ|| ಜೆ.ಪಿ ನಗರ, ಬೆಂಗಳೂರು ರವರು ದಿನಾಂಕ: 02-07-2021 ರಂದು 03-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 07-07-2021 05:38 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080