ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 02-06-2021
at 00:00 hrs to 24:00 hrs
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 95/2021, ಕಲಂ: 405, 406, 441, 447, 503, 504, 506, 120(ಬಿ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪರಮೇಶ್ವರ ತಂದೆ ಗೋಪಾಲಕೃಷ್ಣ ಭಟ್ಟ, ಪ್ರಾಯ-61 ವರ್ಷ, ವೃತ್ತಿ-ನಿವೃತ್ತ ನೌಕರ, 2]. ಮಂಜುನಾಥ ತಂದೆ ಪರಮೇಶ್ವರ ಭಟ್ಟ, ಪ್ರಾಯ-35 ವರ್ಷ, ವೃತ್ತಿ-ಬ್ಯಾಂಕ್ ನೌಕರ, ಸಾ|| (ಇಬ್ಬರೂ) ಅಮ್ಮ ಭಗವಾನ್ ದೇವಸ್ದಾನ ಹತ್ತಿರ, ಉದ್ಯಮನಗರ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರು ಪಿರ್ಯಾದಿಯವರ ಸಂಬಂಧಿಕರಿದ್ದು, ಪಿರ್ಯಾದಿಯವರೊಂದಿಗೆ ಈ ಹಿಂದಿನಿಂದಲೂ ಜಮೀನಿನ ವಿಷಯದಲ್ಲಿ ದ್ವೇಷದಿಂದ ಇದ್ದವರು, ದಿನಾಂಕ: 10-04-2021 ರಂದು ಸಮಯ ಸುಮಾರು 17-30 ಗಂಟೆಗೆ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮದಲ್ಲಿ ಪಿರ್ಯಾದಿಯವರಿಗೆ ಸೇರಿದ ಇಡಗುಂದಿ ಗ್ರಾಮ ಸರ್ವೇ ನಂ: 99 ಹಾಗೂ 12 ರ ಜಾಗಾದಲ್ಲಿ ಆಕ್ರಮ ಪ್ರವೇಶ ಮಾಡಿ, ಸದರ ಕೃಷಿ ಜಮೀನನಲ್ಲಿರುವ ಮಣ್ಣನ್ನು ಪಿರ್ಯಾದಿಯವರಿಗೆ ನಷ್ಟ ಮಾಡುವ ಉದ್ದೇಶದಿಂದ ಒಳಸಂಚು ರೂಪಿಸಿಕೊಂಡು ಜೆ.ಸಿ.ಬಿ ಯಿಂದ ಮಣ್ಣನ್ನು ತೆಗೆಯಿಸಿ, ತಮ್ಮ ಜಮೀನಿಗೆ ಹಾಕಿಕೊಂಡು ಪಿರ್ಯಾದಿಯವರಿಗೆ ನಂಬಿಕೆ ದ್ರೋಹ ಮಾಡಿದ್ದಲ್ಲದೇ, ಪಿರ್ಯಾದಿಯವರು ‘ಇದು ನಮ್ಮ ಜಮೀನು. ನೀವು ಯಾಕೆ ನಮ್ಮ ಜಮೀನಿನ ಮಣ್ಣನ್ನು ಹಾಳು ಮಾಡುತ್ತಿದ್ದೀರಾ?’ ಅಂತಾ ಕೇಳಿದಕ್ಕೆ ಇಬ್ಬರೂ ಆರೋಪಿತರೂ ಒಮ್ಮೆಲೇ ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ‘ಇದು ತಮ್ಮ ಜಮೀನು. ತಮ್ಮ ಜಮೀನಿನಲ್ಲಿ ಕಾಲು ಇಟ್ಟರೆ ನಿನಗೆ ಜೀವ ಸಮೇತ ಬಿಡುವುದಿಲ್ಲ’ ಅಂತಾ ಹೇಳಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಯಶೋಧಾ ಕೋಂ. ಗಣಪತಿ ಬಿದ್ರೆ, ಪ್ರಾಯ-47 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಇಡಗುಂದಿ, ತಾ: ಯಲ್ಲಾಪುರ ರವರು ದಿನಾಂಕ: 02-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 56/2021, ಕಲಂ: 269, 270 ಐಪಿಸಿ ಹಾಗೂ ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವಸಂತಕುಮಾರ ತಂದೆ ಕೃಷ್ಣ ಶೇಟ್, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಮರೂರು, ತಾ: ಸೊರಬಾ, ಜಿ: ಶಿವಮೊಗ್ಗ. ಈತನು ದಿನಾಂಕ: 02.06.2021 ರಂದು 10-55 ಗಂಟೆಗೆ ಬನವಾಸಿ-ಶಿರಸಿ ರಸ್ತೆಯ ಈಡೂರು ಕ್ರಾಸಿನ ಹತ್ತಿರ ಇದ್ದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಮರದ ಕೆಳಗೆ ಕೋವಿಡ್-19 ಕೊರೋನಾ ರೋಗ ಹರಡದಂತೆ ಸರಕಾರದ ಲಾಕಡೌನ್ ನಿಯಮ ಉಲ್ಲಂಘಿಸಿ, ನಿರ್ಲಕ್ಷ್ಯತನದಿಂದ ಗುಂಪುಗೂಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ, ನಿರ್ಲಕ್ಷ್ಯತನದಿಂದ ದ್ವೇಷಪೂರ್ವಕವಾಗಿ, ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವಾಗ 1). Original Choice DELUXE WHISKY ಎಂಬ ಹೆಸರಿನ ಟೆಟ್ರಾ ಪ್ಯಾಕೆಟ್ ಗಳು-10, ಅ||ಕಿ|| 341/- ರೂಪಾಯಿ, 2). Original Choice DELUXE WHISKY ಎಂಬ ಹೆಸರಿನ ಖಾಲಿ ಟೆಟ್ರಾ ಪ್ಯಾಕೆಟ್ ಗಳು-5, ಅ||ಕಿ|| 00.00/- ರೂಪಾಯಿ, 3). ಪ್ಲಾಸ್ಟಿಕ್ ಗ್ಲಾಸುಗಳು-2, ಅ||ಕಿ|| 00.00/- ರೂಪಾಯಿ, 4). ಬ್ಯಾಗ್-01. ಅ||ಕಿ|| 00.00/- ರೂಪಾಯಿ, 5). ನಗದು ಹಣ 250/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 02-06-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 57/2021, ಕಲಂ: 269, 270 ಐಪಿಸಿ ಹಾಗೂ ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕಿರಣ ತಂದೆ ದೇಸಾಯಿ ಚನ್ನಯ್ಯ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಜ್ಜರಣಿ, ತಾ: ಶಿರಸಿ. ಈತನು ದಿನಾಂಕ: 02-06-2021 ರಂದು 16-30 ಗಂಟೆಗೆ ಅಜ್ಜರಣಿ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್-19 ಕೊರೋನಾ ರೋಗ ಹರಡದಂತೆ ಸರಕಾರದ ಲಾಕಡೌನ್ ನಿಯಮ ಉಲ್ಲಂಘಿಸಿ, ನಿರ್ಲಕ್ಷ್ಯತನದಿಂದ ಗುಂಪುಗೂಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ನಿರ್ಲಕ್ಷ್ಯತನದಿಂದ ದ್ವೇಷಪೂರ್ವಕವಾಗಿ, ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವಾಗ 1). HAYWARDS CHEERS WHISKY ಅಂತಾ ಲೇಬಲ್ ಇರುವ 180 ML ಅಳತೆಯ ಸೀಲ್ಡ್ ಟೆಟ್ರಾ ಪ್ಯಾಕೆಟ್ ಗಳು-05, ಅ||ಕಿ|| 351.30/- ರೂಪಾಯಿ, 2). HAYWARDS CHEERS WHISKY ಅಂತಾ ಲೇಬಲ್ ಇರುವ 180 ML ಅಳತೆಯ ಖಾಲಿ ಟೆಟ್ರಾ ಪ್ಯಾಕೆಟ್ ಗಳು-02, ಅ||ಕಿ 00.00/- ರೂಪಾಯಿ, 3). ನಗದು ಹಣ 200/- ರೂಪಾಯಿ, 4). ಪ್ಲಾಸ್ಟಿಕ್ ಖಾಲಿ ಲೋಟಗಳು-02, ಅ||ಕಿ|| 00.00/- ರೂಪಾಯಿ, 5). ಕೈ ಚೀಲ-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 02-06-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 02-06-2021
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 28/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಅನೀಲಕುಮಾರ ತಂದೆ ಕುನ್ನಿರಾಮನ್ ಪಿಲೈ, ಪ್ರಾಯ-ಸುಮಾರು 45 ವರ್ಷ, ವೃತ್ತಿ-ಐ.ಆರ್.ಬಿ ಮೆಸ್ ನಲ್ಲಿ ಕೆಲಸ, ಸಾ|| ಅನಥಲ್, ಪೋ: ಅಂಜಲ್, ಕೊಳಂ, ಕೇರಳಾ ರಾಜ್ಯ. ಈತನು ದಿನಾಂಕ: 02-06-2021 ರಂದು ಬೆಳಿಗ್ಗೆ 09-30 ಗಂಟೆಗೆ ಅಂಕೋಲಾ ತಾಲೂಕಿನ ಬಾಳೆಗುಳಿಯಲ್ಲಿರುವ ಐ.ಆರ್.ಬಿ ಪ್ಲಾಂಟ್ ನಿಂದ ವಿಠ್ಠಲಘಾಟ್ ಗೆ ರೋಟಿಯನ್ನು ತರಲು ಕೊಂಕಣ ಹಳಿಯ ಮೂಲಕ ಹೋಗುತ್ತಿದ್ದಾಗ ಕೃಷ್ಣಾಪುರದ ಬ್ರಿಡ್ಜ್ ಹತ್ತಿರ ಯಾವುದೋ ಚಲಿಸುತ್ತಿರುವ ರೈಲಿಗೆ ಸಿಕ್ಕಿ ಮೃತಪಟ್ಟು, ಬೆಳಿಗ್ಗೆ ಸುಮಾರು 10-45 ಗಂಟೆಗೆ ಸಿಕ್ಕಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ @ ರಮೇಶ ತಂದೆ ಮುತ್ತು ನಾಯರ್, ಪ್ರಾಯ-47 ವರ್ಷ, ವೃತ್ತಿ-ಐ.ಆರ್.ಬಿ ಮೆಸ್ ನಲ್ಲಿ ಕೆಲಸ, ಸಾ|| ನಡೋರಾನಾಕಾ, ಪಾಲಗರ್ ರಸ್ತೆ, ಮನೋರ್ ಪಾಲಗರ್, ಮಹಾರಾಷ್ಟ್ರ, ಹಾಲಿ ಸಾ|| ಐ.ಆರ್.ಬಿ ಪ್ಲಾಂಟ್, ಬಾಳೆಗುಳಿ, ತಾ: ಅಂಕೋಲಾ ರವರು ದಿನಾಂಕ: 02-06-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶೇಖರ ತಂದೆ ಮಹಾದೇವ ಅಂಬಿಗ, ಪ್ರಾಯ-31 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಲಭಾವಿ, ಮಾಸೂರು, ತಾ: ಕುಮಟಾ. ಪಿರ್ಯಾದುದಾರರ ಮಗನಾದ ಈತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡೋ ಅಥವಾ ಇನ್ಯಾವುದೋ ವಿಷಯಕ್ಕೆ ಬೇಸತ್ತು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 02-06-2021 ರಂದು 12-00 ಗಂಟೆಯಿಂದ 12-45 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಮಹಡಿಯಲ್ಲಿನ ಕೋಣೆಯಲ್ಲಿ ಫ್ಯಾನಿಗೆ ಕೇಬಲ್ ವೈರನ್ನು ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳುವ ಬಗ್ಗೆ ಶ್ರೀ ಮಹಾದೇವ ತಂದೆ ನಾರಾಯಣ ಅಂಬಿಗ, ಪ್ರಾಯ-58 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಲಭಾವಿ, ಮಾಸೂರು, ತಾ: ಕುಮಟಾ ರವರು ದಿನಾಂಕ: 02-06-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶ್ರೀಕಾಂತ ತಂದೆ ಕರೆಪ್ಪ ಬಾಳೆಕುಂದ್ರಿ, ಪ್ರಾಯ-55 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗೌಳಿವಾಡಾ, ಮಾಗ್ವಾಡ ಗ್ರಾಮ, ಪೋ: ಬಿ.ಕೆ ಹಳ್ಳಿ, ತಾ: ಹಳಿಯಾಳ. ಪಿರ್ಯಾದಿಯ ತಂದೆಯವರಾದ ಇವರು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 01-06-2021 ರಂದು ಮಧ್ಯಾಹ್ನ 01-00 ಗಂಟೆಯಿಂದ 01-15 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಮಾಗ್ವಾಡ ಗ್ರಾಮದ ಗೌಳಿವಾಡದಲ್ಲಿರುವ ತಮ್ಮ ಹೊಲದಲ್ಲಿ ಕಳೆನಾಶಕ ವಿಷವನ್ನು ಸೇವನೆ ಮಾಡಿ, ಅಸ್ವಸ್ಥಗೊಂಡಿದ್ದು, ಸದ್ರಿಯವರಿಗೆ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸದ್ರಿಯವರು ಉಪಚಾರ ಫಲಕಾರಿಯಾಗದೇ ದಿನಾಂಕ: 02-06-2021 ರಂದು ಬೆಳಿಗ್ಗೆ 06-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತು ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾಂತೇಶ ತಂದೆ ಶ್ರೀಕಾಂತ ಬಾಳೆಕುಂದ್ರಿ, ಪ್ರಾಯ-25 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗೌಳಿವಾಡಾ, ಮಾಗ್ವಾಡ ಗ್ರಾಮ, ಪೋ: ಬಿ.ಕೆ ಹಳ್ಳಿ, ತಾ: ಹಳಿಯಾಳ ರವರು ದಿನಾಂಕ: 02-06-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======