ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-03-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 01-03-2021 ರಂದು 13-00 ಗಂಟೆಯಿಂದ 20-00 ಗಂಟೆಯ ನಡುವಿನ ಅವಧಿಯಲ್ಲಿ ಹಳದಿಪುರದ ಅಗ್ರಹಾರದಲ್ಲಿರುವ ಶ್ರೀ ಮಹಾಗಣಪತಿಯ ಗರ್ಭಗುಡಿಯ ಎದುರಿನ ಬಾಗಿಲಿಗೆ ಹಾಕಿದ್ದ ಚಿಲಕವನ್ನು ತೆಗೆದು ಒಳಗೆ ಹೋಗಿ ದೇವಸ್ಥಾನದ ಗರ್ಭಗುಡಿಯಲ್ಲಿ ಹರಿವಾಣದಲ್ಲಿಟ್ಟಿದ್ದ ಶ್ರೀ ಮಹಾಗಣಪತಿಯ ಬಂಗಾರದ ಆಭರಣಗಳಲ್ಲಿ 1). ಮುಖ ಕವಚ, ಸುಮಾರು 20 ಗ್ರಾಂ ತೂಕದ್ದು, 2). ಹೊಟ್ಟೆ ಕವಚ, ಸುಮಾರು 30 ಗ್ರಾಂ ತೂಕದ್ದು, 3). ಕಾಲು ಕವಚ, ಸುಮಾರು 50 ಗ್ರಾಂ ತೂಕದ್ದು. ಹೀಗೆ ಒಟ್ಟು ಸುಮಾರು 100 ಗ್ರಾಂ ತೂಕದ ಬಂಗಾರದ ಆಭರಣಗಳು, ಇವುಗಳ ಅಂದಾಜು ಬೆಲೆ 4,00,000/- ರೂಪಾಯಿ ಆಗಬಹುದು. ಇವುಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಗಣಪತಿ ಸಭಾಹಿತ, ಪ್ರಾಯ-30 ವರ್ಷ, ವೃತ್ತಿ-ಅಕ್ಕಿ ಗಿರಣಿ, ಸಾ|| ಅಗ್ರಹಾರ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 02-03-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 447, 504, 323, 324, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ರಾಜು ನಾಯ್ಕ, ಸಾ|| ಕುಂಬಾರಕೇರಿ, ತಾ: ಹೊನ್ನಾವರ. ದಿನಾಂಕ: 01-03-2021 ರಂದು 19-45 ಗಂಟೆಗೆ ಮಂಕಿಯ ಖಾಜಿ ಮನೆಯಲ್ಲಿ ಪಿರ್ಯಾದಿಯು ತನ್ನ ಸೊಸೆಯಾದ ಜಯಶ್ರೀ ಉದಯ ನಾಯ್ಕ ಇವಳಿಗೆ ‘ಎಲ್ಲಿಗೆ ಹೋಗಿದ್ದೆ? ಇಷ್ಟ್ಯಾಕೆ ತಡವಾಗಿ ಬಂದೆ?’ ಅಂತಾ ಕೇಳಿದಾಗ, ಅವಳು ‘ತಾನು ತನ್ನ ತಾಯಿ ಮನೆಗೆ ಹೋಗಿದ್ದೆ. ಏನಾಯಿತು?’ ಅಂತಾ ಎದುರುತ್ತರ ಮಾತಾಡಿದ್ದರಿಂದ ಪಿರ್ಯಾದಿಯು ಅವಳಿಗೆ ಜೋರು ಮಾಡಿದ್ದು, ಆಗ ಪಿರ್ಯಾದಿಯ ಸೊಸೆಗೆ ಬಿಡಲು ಮನೆಗೆ ಬಂದಿದ್ದ ಅವಳ ಅಣ್ಣನಾದ ನಮೂದಿತ ಆರೋಪಿತನು ಪಿರ್ಯಾದಿಗೆ ಉದ್ದೇಶಿಸಿ ‘ನೀನ್ಯಾರು ಅವಳಿಗೆ ಕೇಳುವವನು, ಬೋಸ್ಡಿ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದು, ಕೈಯಿಂದ ಮೈಮೇಲೆ ಹೊಡೆದು ಕೆಳಗೆ ಬೀಳಿಸಿ ಬಾಯಿಯಿಂದ ಎಡಗೈಗೆ ಕಚ್ಚಿ ಗಾಯಗೊಳಿಸಿದ್ದಲ್ಲದೇ, ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಸ್ಡಿ ಮಗನೆ, ನಿನಗೆ ಇಷ್ಟಕ್ಕೆ ಬಿಡುವುದಿಲ್ಲ. ಇನ್ನೊಮ್ಮೆ ತನ್ನ ತಂಗಿಯ ವಿಷಯಕ್ಕೆ ಬಂದರೆ ನಿನ್ನನ್ನು ಕೊಂದು ಹಾಕುತ್ತೇನೆ’ ಅಂತಾ ಪಿರ್ಯಾದಿಗೆ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಾಬ್ಲೇಶ್ವರ ತಂದೆ ಅಚ್ಚಲಗುಂಡಿ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಾಜಿ ಮನೆ,  ಮಂಕಿ, ತಾ: ಹೊನ್ನಾವರ ರವರು ದಿನಾಂಕ: 02-03-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹೇಶ ತಂದೆ ನಾಗಪ್ಪ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಂದರ್ ರಸ್ತೆ, 6 ನೇ ಕ್ರಾಸ್, ಹನುಮಾನ ನಗರ, ತಾ: ಭಟ್ಕಳ, 2]. ವೆಂಕಟೇಶ ತಂದೆ ಮಾದೇವ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹಾಡುವಳ್ಳಿ, ಕುರಂದೂರು, ತಾ: ಭಟ್ಕಳ, 3]. ಸುಕ್ರಯ್ಯಾ ತಂದೆ ಕುಪ್ಪಯ್ಯಾ ನಾಯ್ಕ, ಪ್ರಾಯ-49 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಲಗೋಡ, ತಾ: ಭಟ್ಕಳ, 4]. ನಾರಾಯಣ ಮಾಸ್ತಿ ಖಾರ್ವಿ, ಪ್ರಾಯ-52 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಂದರ, ತಾ: ಭಟ್ಕಳ, 5]. ಮಂಜುನಾಥ ತಂದೆ ಸುಬ್ರಾಯ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬೆಳ್ನೆ, ತಾ: ಭಟ್ಕಳ, 6]. ಅಣ್ಣಪ್ಪಾ ದೇವಾಡಿಗ, ಸಾ|| ಬೆಳ್ನೆ, ತಾ: ಭಟ್ಕಳ, 7]. ಕಾರ್ತಿಕ ಆನಂದ ಖಾರ್ವಿ, ಸಾ: ಬಂದರ, ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 01-03-2021 ರಂದು 23-00 ಗಂಟೆಯ ಸಮಯಕ್ಕೆ ಬಂದರ್ ಮಾವಿನಕುರ್ವಾ ಧಕ್ಕೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಪಣವಾಗಿಟ್ಟು ಗರಗರ ಮಂಡಲ ಜುಗಾರಾಟ ಆಡುತ್ತಿದ್ದಾಗ 1). ನಗದು ಹಣ 5,600/- ರೂಪಾಯಿಗಳು, 2). ಕಳವರ, ಆಟಿನ್, ಇಸ್ಪೀಟು, ಡೈಸ್, ಸೂರ್ಯ, ಚಂದ್ರ ಚಿತ್ರವಿರುವ ಪ್ಲಾಸ್ಟಿಕ್ ಶೀಟ್-01 (ಅ||ಕಿ|| 00.00/- ರೂಪಾಯಿ), 3). ಕಳವರ, ಆಟಿನ್, ಇಸ್ಪೀಟು, ಡೈಯಿಸ್, ಸೂರ್ಯ, ಚಂದ್ರ ಚಿತ್ರವಿರುವ ದಾಳಗಳು-03 (ಅ||ಕಿ|| 00.00/- ರೂಪಾಯಿ), 4). ಪ್ಲಾಸ್ಟಿಕ್ ಡಬ್ಬಾ-01 (ಅ||ಕಿ|| 00.00/- ರೂಪಾಯಿ), ಇವುಗಳೊಂದಿಗೆ ಆರೋಪಿ 1 ರಿಂದ 5 ನೇಯವರು ಸ್ಥಳದಲ್ಲಿ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 6 ಮತ್ತು 7 ನೇಯವರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ದಿವಾಕರ ಪಿ. ಎಮ್, ಪೊಲೀಸ್ ವೃತ್ತ ನಿರೀಕ್ಷಕರು, ಭಟ್ಕಳ ವೃತ್ತ, ಭಟ್ಕಳ ರವರು ದಿನಾಂಕ: 02-03-2021 ರಂದು 01-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟ್ರಮಣ ತಂದೆ ಹೊನ್ನಪ್ಪ ನಾಯ್ಕ, ಸಾ|| ಹಡೀಲ್, ಸಬ್ಬತ್ತಿ, ತಾ: ಭಟ್ಕಳ (ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-47/ಕ್ಯೂ-7424 ನೇದರ ಸವಾರ). ಪಿರ್ಯಾದಿ ಹಾಗೂ ಪಿರ್ಯಾದಿಯ ಅಜ್ಜ ಶನಿಯಾರ ತಂದೆ ಸಂಕಪ್ಪ ನಾಯ್ಕ ಇವರು ಬೆಣಂದೂರಿನಲ್ಲಿರುವ ತಮ್ಮ ಸಂಬಂಧಿಕರಾದ ಪರಮೇಶ್ವರ ನಾಯ್ಕ ಇವರ ಮನೆಗೆ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಮುಠ್ಠಳ್ಳಿಗೆ ಬರಲು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಯು-6322 ನೇದರ ಮೇಲೆ ತನ್ನ ಅಜ್ಜನನ್ನು ಹಿಂಬದಿ ಕೂಡ್ರಿಸಿಕೊಂಡು ಬೆಣಂದೂರಿನಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಮೇಲೆ ಬರುತ್ತಿರುವಾಗ ಸರ್ಪನಕಟ್ಟಾ ಕೋಣಾರ ಕ್ರಾಸ್ ಹತ್ತಿರ ಸಮೀಪಿಸಿದಾಗ ನಮೂದಿತ ಆರೋಪಿತನು ತನ್ನ ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-47/ಕ್ಯೂ-7424 ನೇದರ ಮೇಲೆ ಪಿರ್ಯಾದಿಯ ಮುಂದೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಕೋಣಾರ ಕ್ರಾಸ್ ಹತ್ತಿರ ಬಂದು ಯಾವುದೇ ಇಂಡಿಕೇಟರ್ ಸಿಗ್ನಲ್ ಹಾಕದೆ ಒಮ್ಮೆಲೆ ಬಲಕ್ಕೆ ತಿರುಗಿಸಿದ್ದರಿಂದ ಪಿರ್ಯಾದಿಯ ಮೋಟಾರ್ ಸೈಕಲ್ ಆರೋಪಿತನ ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-47/ಕ್ಯೂ-7424 ನೇದಕ್ಕೆ ತಾಗಿದ ಪರಿಣಾಮ ಪಿರ್ಯಾದಿಯು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಪಿರ್ಯಾದಿಯ ಎಡಗೈ ಭುಜಕ್ಕೆ ಪೆಟ್ಟಾಗಿದ್ದು ಹಾಗೂ ಎಡಗಾಲಿಗೆ ಮತ್ತು ಎಡಗೈಗೆ ತೆರೆಚಿದ ಗಾಯ ಹಾಗೂ ಹಿಂಬದಿ ಸವಾರನಾದ ಪಿರ್ಯಾದಿಯ ಅಜ್ಜನವರಿಗೆ ಹಣೆಗೆ ಮತ್ತು ಕಾಲಿಗೆ ಪೆಟ್ಟಾದ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಕೃಷ್ಣ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ವ್ಯಾಪಾರ, ಸಾ|| ಮುಠ್ಠಳ್ಳಿ, ತಾ: ಭಟ್ಕಳ ರವರು ದಿನಾಂಕ: 02-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 279, 337, 285 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪೊನ್ನಸ್ವಾಮಿ ತಂದೆ ಸುಬ್ರಮಣ್ಯ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಕಲ್ಲಿಪಳಿಯಂ, ತಮಿಳಿನಾಡು (ಗ್ಯಾಸ್ ಟ್ಯಾಂಕರ್ ಲಾರಿ ನಂ: ಟಿ.ಎನ್-88/ಸಿ-5459 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 02-03-2021 ರಂದು ಬೆಳಿಗ್ಗೆ ಸುಮಾರು 07-30 ಗಂಟೆಗೆ ತನ್ನ ಬಾಬ್ತು ಗ್ಯಾಸ್ ಟ್ಯಾಂಕರ್ ಲಾರಿ ನಂ: ಟಿ.ಎನ್-88/ಸಿ-5459 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ವಾಹನವನ್ನು ನಿಯಂತ್ರಿಣದಲ್ಲಿ ಇಟ್ಟುಕೊಳ್ಳಲಾಗದೇ, ಯಲ್ಲಾಪುರ ತಾಲೂಕಿನ ಅರಬೈಲ್ ತಾಳಿಕುಂಬ್ರಿ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಪಕ್ಕದಲ್ಲಿ ಪಲ್ಟಿ ಮಾಡಿಕೊಂಡು ತನ್ನ ಕಣ್ಣಿಗೆ, ತಲೆಗೆ ಹಾಗೂ ಮೈಕೈಗೆ ಗಾಯನೋವು ಪಡಿಸಿಕೊಂಡಿದ್ದಲ್ಲದೇ ವಾಹನವನ್ನು ಜಖಂಗೊಳಿಸ್ದಿದ್ದು, ಟ್ಯಾಂಕರ್ ಲಾರಿಯಲ್ಲಿದ್ದ ಗ್ಯಾಸ್ ಸ್ಫೋಟಕ ವಸ್ತು ಅಂತಾ ತಿಳಿದರು ಸಹ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯದ ವರ್ತನೆ ತೋರಿ ಈ ಅಪಘಾತಕ್ಕೆ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಪುಟ್ಟೇಗೌಡ ಸೀನಪ್ಪ, ಪ್ರಾಯ-57 ವರ್ಷ, ವೃತ್ತಿ-ಎ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 02-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-03-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಎ. ಕೆ. ಮುನಿರ್ ತಂದೆ ಕುಂಞ ಬ್ಯಾರಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಡುಮಠಮನೆ, ಪೋ: ಕೊಳ್ನಾಡು, ತಾ: ಬಂಟ್ವಾಳ, ಜಿ: ದಕ್ಷಿಣ ಕನ್ನಡ. ದಿನಾಂಕ: 23-02-2021 ರಂದು ಸಾಯಂಕಾಲ 06-00 ಗಂಟೆಗೆ ಪಿರ್ಯಾದುದಾರರು ತಮ್ಮ ಕುಟುಂಬದ ಜನರೊಂದಿಗೆ ಪ್ರವಾಸಕ್ಕಾಗಿ ಮುರ್ಡೇಶ್ವರಕ್ಕೆ ಬಂದು ಮುರ್ಡೇಶ್ವರದ ಅರಬ್ಬಿ ಸಮುದ್ರದ ದಡದ ನೀರಿನಲ್ಲಿ ಪಿರ್ಯಾದಿ, ಪಿರ್ಯಾದಿಯ ಮನೆಯ ಜನರು ಹಾಗೂ ಪಿರ್ಯಾದಿ ತಮ್ಮನಾದ ನಮೂದಿತ ಮೃತನು ಸೇರಿಕೊಂಡು ಆಟ ಆಡುತ್ತಿದ್ದಾಗ, ಸಾಯಂಕಾಲ 06-45 ಗಂಟೆಯ ಸುಮಾರಿಗೆ ಮೃತ ಎ.ಕೆ. ಮುನಿರ್ ಈತನು ಆಕಸ್ಮಿಕವಾಗಿ ಮುಖ ಕೆಳಗೆ ಮಾಡಿ ನೀರಿನಲ್ಲಿ ಬಿದ್ದನು. ಆಗ ಅವನು ಪಿರ್ಯಾದಿಯ ಕುತ್ತಿಗೆ ಹಿಡಿದುಕೊಂಡಿದ್ದು, ಅಲುಗಾಡಲು ಆಗುತ್ತಿಲ್ಲ ಎಂದು ಹೇಳಿದಾಗ, ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯ ಜನರು ಸೇರಿ ಎ.ಕೆ. ಮುನಿರ್ ಈತನನ್ನು ನೀರಿನಿಂದ ಮೇಲಕ್ಕೆ ತಂದು ಒಂದು ಆಟೋ ಮೇಲಾಗಿ ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ತಂದಿದ್ದು, ಅಲ್ಲಿ ವೈದ್ಯರು ಪ್ರಥಮ ಉಪಚಾರ ನೀಡಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಉಪಚಾರಕ್ಕೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿದ ಮುನೀರ್ ಈತನ ಸ್ಪೈನಲ್ ಕಾರ್ಡ್ ನರಕ್ಕೆ ಪೆಟ್ಟಾದ ಬಗ್ಗೆ ತಿಳಿಸಿ, ದೀರ್ಘಕಾಲ ಉಪಚಾರ ನೀಡಬೇಕಾಗುತ್ತದೆ ಎಂದು ತಿಳಿಸಿ ಉಪಚಾರ ನೀಡಿದ್ದು, ದಿನಾಂಕ: 24-02-2021 ರಂದು ಸಾಯಂಕಾಲ 06-30 ಗಂಟೆಗೆ ಅಲ್ಲಿಂದ ಬಿಡುಗಡೆ ಹೊಂದಿ ಉಳ್ಳಾಲದಲ್ಲಿ ಆರ್ಯುವೇದಿಕ್ ವೈದ್ಯರ ಬಳಿ ಒಂದು ರೂಮ್ ಮಾಡಿ ಆರ್ಯುವೇದಿಕ್ ಉಪಚಾರದಲ್ಲಿ ಉಳಿದಕೊಂಡವರು, ಸ್ಪೈನಲ್ ಕಾರ್ಡ್ ನರಕ್ಕೆ ಪೆಟ್ಟಾಗಿರುವುದರಿಂದ ಆತನಿಗೆ ಕುಳಿತುಕೊಳ್ಳಲು ಆಗುತ್ತಿರಲಿಲ್ಲ, ಸರಿಯಾಗಿ ಮಾತನಾಡುತ್ತಿರಲಿಲ್ಲ. ಉಸಿರಾಟದ ಸಮಸ್ಯೆ ಆಗಿರುವುದರಿಂದ ದಿನಾಂಕ: 25-02-2021 ರಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ಮಂಗಳೂರು ಯೆನೆಪೋಯಾ ಆಸ್ಪತ್ರೆಗೆ ಉಪಚಾರಕ್ಕೆ ದಾಖಲಿಸಿದ್ದು, ಮುನೀರ್ ಈತನು ಉಪಚಾರದಲ್ಲಿ ಇರುತ್ತಾ ಸ್ಪೈನಲ್ ಕಾರ್ಡ್ ನರಕ್ಕೆ ಪೆಟ್ಟಾದ ಕಾರಣದಿಂದಲೇ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 01-03-2021 ರಂದು ರಾತ್ರಿ 09-45 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಬಷಿರ್ ಎ. ಕೆ. ತಂದೆ ಕುಂಞ ಬ್ಯಾರಿ, ಪ್ರಾಯ-36 ವರ್ಷ, ವೃತ್ತಿ-ವ್ಯಾಪಾರ, ಸಾ|| ಕಾಡುಮಠಮನೆ, ಪೋ: ಕೊಳ್ನಾಡು, ತಾ: ಬಂಟ್ವಾಳ, ಜಿ: ದಕ್ಷಿಣ ಕನ್ನಡ ರವರು ದಿನಾಂಕ: 02-03-2021 ರಂದು 07-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 03-03-2021 01:53 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080