ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-05-2021

at 00:00 hrs to 24:00 hrs

 

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 06/2021, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಯಾರೋ ಆರೋಪಿತರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 02-05-2021 ರಂದು ಪಿರ್ಯಾದಿಯ ಫೇಸ್‍ಬುಕ್ ಐ.ಡಿಯ ಪ್ರೊಪೈಲ್ ಪಿಕ್ಚರ್ ಅನ್ನು ಕಾಫಿ ಮಾಡಿ ‘HemaGiri K’ ಅಂತಾ ನಕಲಿ ಫೇಸಬುಕ್ ಐ.ಡಿ ಯನ್ನು ಕ್ರಿಯೇಟ್ ಮಾಡಿ ಅದಕ್ಕೆ ಪಿರ್ಯಾದಿಯ ಭಾವಚಿತ್ರವನ್ನು ಅಪಲೋಡ್ ಮಾಡಿ ಪಿರ್ಯಾದಿಯ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಅನ್ನು ಕಳುಹಿಸಿಕೊಟ್ಟು, ಫ್ರೆಂಡ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿದ ಸ್ನೇಹಿತರಿಗೆ ಹಣ ಕಳುಹಿಸುವಂತೆ ಫೇಸಬುಕ್ ಮೆಸೆಂಜರ್ ದಲ್ಲಿ ಹಣದ ಬೇಡಿಕೆ ಇಟ್ಟಿದ್ದು, ಅದರಂತೆ ಪಿರ್ಯಾದಿಯ ಇಬ್ಬರು ಗೆಳೆಯರಿಂದ ಒಟ್ಟು 11,500/- ರೂಪಾಯಿ ಹಣವನ್ನು ಜಮಾ ಮಾಡಿ ಮೋಸ ಹೋದ ಬಗ್ಗೆ ಪಿರ್ಯಾದಿ ಡಾ|| ಹೇಮಗಿರಿ ಕೆ, ಪ್ರಾಯ-46 ವರ್ಷ, ವೃತ್ತಿ-ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು, ಸಮುದಾಯ ವೈದ್ಯಶಾಸ್ತ್ರ ವಿಭಾಗ, ಸಾ|| ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಾರವಾರ ರವರು ದಿನಾಂಕ: 02-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 323, 341, 427, 447, 109, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಿತ್ಯಾನಂದ ವಿಠ್ಠಲ ರೇವಣಕರ್, ಸಾ|| ಹೆಗ್ರೆ, ತಾ: ಅಂಕೋಲಾ, ಹಾಲಿ ಸಾ|| ಬಂಕಿಕೊಡ್ಲ, ಗೋಕರ್ಣ, ತಾ: ಕುಮಟಾ, 2]. ದಿಲೀಪ ಗಣೇಶ ಕಾಗಾಲ, ಸಾ|| ಮುಂಬೈ, ಮಹಾರಾಷ್ಟ್ರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯವರ ಬಾಬ್ತು ಮನೆ ಬಾಡಿಗೆಗೆ ಇದ್ದವನು, ಸರಿಯಾಗಿ ಬಾಡಿಗೆ ನೀಡದೇ ಸತಾಯಿಸುತ್ತಿದ್ದವನು, ಬಾಡಿಗೆ ನೀಡುವಂತೆ ಪಿರ್ಯಾದಿಯವರು ಕೇಳಿದಾಗ ದಿನಾಂಕ: 02-05-2021 ರಂದು ಮಧ್ಯಾಹ್ನ 15-00 ಗಂಟೆಗೆ ಪಿರ್ಯಾದಿಯವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಬಂದು ಪಿರ್ಯಾದಿಗೆ ಮನೆಯ ಅಂಗಳದಲ್ಲಿ ಅಡ್ಡಗಟ್ಟಿ ‘ಎ ಹಿಜಡಿ, ನೋಡು ನಿನ್ನ ಸೀರೆ ಬಿಚ್ಚಿ ಹೊಡೆಯುತ್ತೇನೆ. ದುಡ್ಡು ದುಡ್ಡು ಅಂತಾ ಜೀವ ಬಿಡಬೇಡ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಮನೆ ಬಾಗಿಲಿನ ಪಕ್ಕದ ಕಡಗಟ್ಟಿಗೆ ಹಾಕಿದ ಪ್ಲಾಸ್ಟಿಕ್ ಜಾಳಿಯನ್ನು ಹರಿದು ಹಾಕಿದ್ದಲ್ಲದೇ, ಎರಡು ಸಿ.ಸಿ ಕ್ಯಾಮೆರಾಗಳನ್ನು ಹಾಳುಗೆಡವಿ ಲುಕ್ಸಾನ್ ಪಡಿಸಿದ್ದಲ್ಲದೇ, ಸಿಟ್ಟಿನಿಂದ ಪಿರ್ಯಾದಿಗೆ ಕೈಯಿಂದ ಕೆನ್ನೆಯ ಮೇಲೆ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ‘ತಾನು ಹಣ ಕೊಡುವುದಿಲ್ಲ. ನೀನು ಏನು ಮಾಡುತ್ತಿಯೋ ಮಾಡಿಕೋ. ನನಗೆ ಗೊತ್ತಿದೆ ನಿಮಗೆ ಏನು ಮಾಡಬೇಕು’ ಅಂತಾ ಜೀವದ ಬೆದರಿಕೆ ಹಾಕಿದ್ದು, ಆರೋಪಿ 1 ನೇಯವನ ಈ ಕೃತ್ಯಕ್ಕೆ ಆರೋಪಿ 2 ನೇಯವನ ಕುಮ್ಮಕ್ಕು, ಪ್ರಚೋದನೆ ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಜ್ಯೋತ್ಸ್ನಾ ಡಿ. ಕಾಗಾಲ, ಪ್ರಾಯ-71 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಬಂಕಿಕೊಡ್ಲ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 02-05-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: 269, 270 ಐಪಿಸಿ ಮತ್ತು ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ನಾರಾಯಣ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಹೊಟೇಲ ವ್ಯಾಪಾರ, ಸಾ|| ಮುಂಡಳ್ಳಿ, ನೀರಗದ್ದೆ, ತಾ: ಭಟ್ಕಳ. ಈತನು ದೇಶಾದ್ಯಂತ ನೊವೆಲ್ ಕೊರೋನಾ ಸಾಂಕ್ರಾಮಿಕ ರೋಗವು ತೀವ್ರವಾಗಿ ವ್ಯಾಪಿಸುವುದನ್ನು ಹಾಗೂ ಸುರಕ್ಷತಾ ಕ್ರಮವನ್ನು ಕೈಗೊಳ್ಳಲು ಮಾನ್ಯ ಸರ್ಕಾರದ ಪರವಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಯಾರೂ ಮನೆಯಿಂದ ಹೊರ ಬಾರದಂತೆ ಕೊರೋನಾ ಕರ್ಫ್ಯೂವನ್ನು (ಲಾಕಡೌನ್) ಜಾರಿಗೊಳಿಸಿದ್ದು, ಆದರೂ ಸಹ ಸದರಿಯವನು  ಮುಖಕ್ಕೆ ಯಾವುದೇ ಮಾಸ್ಕ್ ಅನ್ನು ಹಾಕದೇ ಮತ್ತು ಯಾವುದೇ ರಕ್ಷಣೆಯನ್ನು ಹೊಂದದೆ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡಲು ಉದ್ದೇಶಪೂರ್ವಕವಾಗಿ ಹಾಗೂ ಇತರರ ಪ್ರಾಣ ಹಾಗೂ ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಉದ್ದೇಶದಿಂದ ದಿನಾಂಕ: 02-05-2021 ರಂದು ಸಾಯಂಕಾಲ 17-45 ಗಂಟೆಯ ಸಮಯಕ್ಕೆ ಸರ್ಪನಕಟ್ಟಾದ ಕೋಣಾರ ರಸ್ತೆಯಲ್ಲಿರುವ ಶ್ರೀದೇವಿ ಹೊಟೇಲ್ ಪಕ್ಕದಲ್ಲಿರುವ ಖುಲ್ಲಾ ಜಾಗದ ಸಾರ್ವಜನಿಕ ಸ್ಥಳದಲ್ಲಿ 1). BAGPIPER-180 ML ನ ಪ್ಯಾಕೆಟ್ ಗಳು–43, 2). HAYWARDS-180 ML ನ ಪ್ಯಾಕೆಟ್ ಗಳು–30, 3). HAYWARDS-90 ML ನ ಪ್ಯಾಕೆಟ್ ಗಳು–10, 4). BAGPIPER-90 ML ನ ಪ್ಯಾಕೆಟ್ ಗಳು–10, 5). OLD TAVERN-90 ML ನ ಪ್ಯಾಕೆಟ್ ಗಳು-16. ಹೀಗೆ ಒಟ್ಟೂ 8,561.91/- ರೂಪಾಯಿ ಮೌಲ್ಯದ ಸರಾಯಿ ಪ್ಯಾಕೆಟ್ ಗಳನ್ನು ಎರಡು ರಟ್ಟಿನ ಬಾಕ್ಸಿನಲ್ಲಿ ಇಟ್ಟುಕೊಂಡು ಇವುಗಳನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೆ ಮಾರಾಟ ಮಾಡುತ್ತಿದ್ದಾಗ ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 02-05-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 302, 323, 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಫಾರೂಕ್ ಶೇಖ್, ಪ್ರಾಯ-22 ವರ್ಷ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ, 2]. ಅಲ್ತಾಫ್ ಶೇಖ್, ಪ್ರಾಯ-25 ವರ್ಷ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ, 3]. ಕಾರ್ತಿಕ ಬಸವರಾಜ ಪಾಟೀಲ್, ಪ್ರಾಯ-23 ವರ್ಷ, ಸಾ|| ಗಾಂಧಿನಗರ, ದಾಂಡೇಲಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯೊಂದಿಗೆ ಹಳೆಯ ದ್ವೇಷದಿಂದ ಇದ್ದವನು, ದಿನಾಂಕ: 02-05-2021 ರಂದು 17-45 ಗಂಟೆಯ ಸಮಯದಲ್ಲಿ ದಾಂಡೇಲಿಯ ಆಶ್ರಯ ಕಾಲೋನಿಯ ಕನ್ನಡ ಶಾಲೆಯ ಎದುರು ರಸ್ತೆಯ ಮೇಲೆ ಆರೋಪಿ 2 ಮತ್ತು 3 ನೇಯವರೊಂದಿಗೆ ಕೂಡಿಕೊಂಡು ಬಂದು, ಆರೋಪಿ 2 ನೇಯವನು ಪಿರ್ಯಾದಿಯನ್ನು ಉದ್ದೇಶಿಸಿ ‘ಮೇರೆ ಬಾಯಿ ಕೋ ತು ಮಾರತಾ ಕ್ಯಾ ಬೋಸಡಿಕೆ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ, ತನ್ನ ಕೈಯಿಂದ ಪಿರ್ಯಾದಿಯ ಮೂಗಿನ ಮೇಲೆ ಹೊಡೆದಿದ್ದು, ಪಿರ್ಯಾದಿಯ ತಮ್ಮಂದಿರಾದ ಸಂದೀಪ ಮತ್ತು ಸುದೀಪ ಇಬ್ಬರೂ ಆರೋಪಿತರಿಗೆ ‘ನನ್ನ ಅಣ್ಣನಿಗೆ ಯಾಕೆ ಹೊಡೆಯುತ್ತೀರಿ?’ ಅಂತಾ ಕೇಳಿದಕ್ಕೆ, ಆರೋಪಿ 1 ಈತನು ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಒಂದು ಚಾಕುವಿನಿಂದ ಪಿರ್ಯಾದಿಯ ಎಡಕೈನ ತೋಳಿನ ಹತ್ತಿರ ಹೊಡೆದಿದ್ದು, ಜಗಳ ಬಿಡಿಸಲು ಬಂದ ಪಿರ್ಯಾದಿಯ ತಮ್ಮಂದಿರಾದ ಸುದೀಪ ಈತನಿಗೆ ದೂಡಿ ಅಲ್ಲಿಯೇ ಗಟಾರದಲ್ಲಿ ಕಡವಿ ಗಾಯನೋವು ಪಡಿಸಿದ್ದಲ್ಲದೇ, ಸಂದೀಪ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ‘ನಿನ್ನನ್ನು ಬಿಡುವುದಿಲ್ಲ. ಸಾಯಿಸೇ ಬಿಡುತ್ತೇನೆ’ ಅಂತಾ ಅದೇ ಚಾಕುವಿನಿಂದ ಸಂದೀಪ ಪಾಟೀಲ್ ಈತನ ಎಡಗಡೆಯ ಎದೆಗೆ ಚುಚ್ಚಿ ನೆಲಕ್ಕೆ ಕೆಡವಿ ಕೊಲೆ ಮಾಡಿ, ನೆಲಕ್ಕೆ ಬಿದ್ದ ಸಂದೀಪ ಈತನನ್ನು ಪಿರ್ಯಾದಿಯು ಎಬ್ಬಿಸಲು ಹೋಗುತ್ತಿರುವಾಗ ಆರೋಪಿ 2 ಮತ್ತು 3 ನೇಯವರಿಬ್ಬರೂ ಕೂಡಿಕೊಂಡು ಪಿರ್ಯಾದಿಯನ್ನು ಉದ್ದೇಶಿಸಿ ‘ಅವನು ಸತ್ತು ಹೋದ. ನಿನ್ನನ್ನು ಮುಗಿಸುತ್ತೇವೆ’ ಅಂತಾ ಹೇಳಿ ಕೈಗಳಿಂದ ಪಿರ್ಯಾದಿಗೆ ಮತ್ತು ಪಿರ್ಯಾದಿಯ ತಮ್ಮನಾದ ಸುದೀಪ ಇಬ್ಬರಿಗೂ ಹೊಡೆದು ಗಾಯನೋವು ಪಡಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮನೋಜ ತಂದೆ ಪ್ರಕಾಶ ಪಾಟೀಲ್, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ ರವರು ದಿನಾಂಕ: 02-05-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಹನುಮರಾಜ ತಂದೆ ಚಿಕ್ಕಗಂಗಪ್ಪ, ಪ್ರಾಯ-36 ವರ್ಷ, ವೃತ್ತಿ-ಕಿರಾಣಿ ಅಂಗಡಿ, ಸಾ|| ಪಿಲ್ಲಗುಂಪೆ, ಆಂಜನೇಯ ದೇವಸ್ಥಾನದ ಹತ್ತಿರ, ಇಂಡಸ್ಟ್ರೀಯಲ್ ಏರಿಯಾ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ-562114. ಈತನು ದಿನಾಂಕ: 01-05-2021 ರಂದು 19-45 ಗಂಟೆಗೆ ತನ್ನ ಅನ್ಯಾಯದ ಲಾಭಕ್ಕೋಸ್ಕರ ಸಿದ್ದಾಪುರ ತಾಲೂಕಿನ ಕ್ಯಾದಗಿಯ ತಿಮ್ಮಾ ಕೃಷ್ಣ ನಾಯ್ಕ ರವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತುಕೊಂಡು ಕೈಯಲ್ಲಿ ಹಾಳೆ ಹಾಗೂ ಪೆನ್ ಇಟ್ಟುಕೊಂಡು ಅಲ್ಲಿ ಸೇರಿದ್ದ ಸಾರ್ವಜನಿಕರಿಗೆ ದಿನಾಂಕ: 01-05-2021 ರಂದು ಸಾಯಂಕಾಲ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದ್ದ ಐ.ಪಿ.ಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದರೆ 100/- ರೂಪಾಯಿಗೆ 200/- ರೂಪಾಯಿ, ಮುಂಬೈ ಇಂಡಿಯನ್ಸ್ ಗೆದ್ದರೆ 100/- ರೂಪಾಯಿಗೆ 300/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಂಥ ಕಟ್ಟಿಸಿಕೊಂಡು ಜೂಜಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತನು  1). ನಗದು ಹಣ 810/- ರೂಪಾಯಿ, 2). ಬಾಲ್ ಪೆನ್-01, 3). ಅಂಕೆ-ಸಂಖ್ಯೆ ಬರೆದ ಚೀಟಿ-01, 4). ಸ್ಯಾಮ್ಸಂಗ್ ಕೀ-ಪ್ಯಾಡ್ ಮೊಬೈಲ್-01 ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 02-05-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಉಮಾನಂದ ಪೂಜಾರಿ, ಸಾ|| ಬೆಂಗಳೆ, ತಾ: ಶಿರಸಿ (ಟ್ರ್ಯಾಕ್ಟರ್ ನಂ: ಕೆ.ಎ-31/ಟಿ-2748 ನೇದರ ಚಾಲಕ). ಈತನು ದಿನಾಂಕ: 02-05-2021 ರಂದು ಸಾಯಂಕಾಲ 06-00 ಗಂಟೆಯ ಸುಮಾರಿಗೆ ತನ್ನ ಬಾಬ್ತು ಟ್ರ್ಯಾಕ್ಟರ್ ನಂ: ಕೆ.ಎ-31/ಟಿ-2748 ನೇದನ್ನು ಭಾಶಿ ಕಡೆಯಿಂದ ಬನವಾಸಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಂಡೇರಕೊಟ್ಟಿಗೆ ಕ್ರಾಸ್ ಹತ್ತಿರ ತನ್ನ ಹಿಂದಿನಿಂದ ಬರುತ್ತಿದ್ದ ಪಿರ್ಯಾದಿಯವರ PURE ಕಂಪನಿಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಕ್ಕೆ ಮುಂದೆ ಹೋಗಲು ಸೈಡ್ ಕೊಟ್ಟಂತೆ ಮಾಡಿ, ಯಾವುದೇ ಸೂಚನೆ ಕೊಡದೇ ಒಮ್ಮೇಲೆ ಬಂಡೇರಕೊಟ್ಟಿಗೆಯ ಅಡ್ಡ ರಸ್ತೆಗೆ ನಿರ್ಲಕ್ಷ್ಯತನದಿಂದ ಟ್ರಾಕ್ಟರ್ ಅನ್ನು ತಿರುಗಿಸಿ, ಪಿರ್ಯಾದುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಹಿಂಬದಿಯಲ್ಲಿ ಕುಳಿತಿದ್ದ ಪಿರ್ಯಾದಿಯ ತಾಯಿ ಶ್ರೀಮತಿ ಸಾವಿತ್ರಿ ಕೋಂ. ಮಂಜುನಾಥ ಗೌಡ ಇವಳ ಎರಡೂ ಕೈಗಳಿಗೆ ಗಾಯ ಹಾಗೂ ಅವರ ಬಲಬದಿಯ ತೊಡೆಯ ಭಾಗಕ್ಕೆ ಟ್ರ್ಯಾಕ್ಟರ್ ಟ್ರೇಲರ್ ಟಾಯರ್ ಹಾಯುವಂತೆ ಮಾಡಿ, ಮಾರಣಾಂತಿಕ ಗಾಯ ಪಡಿಸಿ ಮರಣವನ್ನುಂಟು ಪಡಿಸಿದ್ದಲ್ಲದೇ, ಪಿರ್ಯಾದಿಗೆ ಬಲಗೈ ಮತ್ತು ಬಲಗಾಲಿಗೆ ಸಾದಾ ಸ್ವರೂಪದ ಗಾಯವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಕುಮಾರಿ: ಪೂಜಾ ತಂದೆ ಮಂಜುನಾಥ ಗೌಡ, ಪ್ರಾಯ-19 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಅಜ್ಜರಣಿ ರಸ್ತೆ, ಬನವಾಸಿ, ತಾ: ಶಿರಸಿ ರವರು ದಿನಾಂಕ: 02-05-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-05-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿಷ್ಣು ತಂದೆ ಪದ್ಮಯ್ಯ ಗೌಡ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗದ್ದೆಮನೆ, ಮಾವಿನಕುರ್ವಾ, ತಾ: ಹೊನ್ನಾವರ. ಪಿರ್ಯಾದಿಯ ಭಾವನಾದ ಈತನು ದಿನಾಂಕ: 01-05-2021 ರಂದು ಗಂಟೆಯ ಸುಮಾರಿಗೆ ಮಾವಿನಕುರ್ವಾದ ಶರಾವತಿ ನದಿಯಲ್ಲಿ ಅಧೀಕೃತ ಮರಳು ಸಂಗ್ರಹಕಾರರಾದ ವಾಮನ ವಿಷ್ಣು ಅಂಬಿಗ ಇವರ ಮರಳು ಸೈಟಿನಲ್ಲಿ ರಮಾಕಾಂತ ಅಂಬಿಗ ಇವರ ಬೋಟಿನಲ್ಲಿ ಮರಳು ಸಂಗ್ರಹಿಸುವ ಸಲುವಾಗಿ ಶರಾವತಿ ನದಿಯಲ್ಲಿ ಹೊಗುತ್ತಿದ್ದಾಗ ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಶರಾವತಿ ನದಿಯಲ್ಲಿ ಆಕಸ್ಮಾತ್ ಆಗಿ ಕಾಲು ಜಾರಿ ನೀರಿನಲ್ಲಿ ಬಿದ್ದು, ಮುಳುಗಿ ಕಾಣೆಯಾದವನ ಮೃತದೇಹವು ದಿನಾಂಕ: 02-05-2021 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಹೊನ್ನಾವರದ ತಾರಿಬಾಗಿಲ ಹತ್ತಿರ ಶರಾವತಿ ನದಿಯ ನೀರಿನಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಸಿಕ್ಕಿರುತ್ತದೆ. ಆತನು ಶರಾವತಿ ನದಿಯ ನೀರಿನಲ್ಲಿ ಮುಳುಗಿ ಹೋಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಾಯ ತಂದೆ ಚುಂಡಾ ಗೌಡ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೊಂದಿಹಿತ್ತಲು, ಮಾವಿನಕುರ್ವಾ, ತಾ: ಹೊನ್ನಾವರ ರವರು ದಿನಾಂಕ: 02-05-2021 ರಂದು 07-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 05-05-2021 04:39 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080