ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-11-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಯಲ್ಲಪ್ಪ ಗುಂಡಕಲ್, ಪ್ರಾಯ-28 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕೋಡಿಬಾಗ್, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-25/ಎಚ್.ಎ-1795 ನೇದರ ಚಾಲಕ). ದಿನಾಂಕ: 02-11-2021 ರಂದು ಪಿರ್ಯಾದಿಯು ತನ್ನ ಮೋಟಾರ್ ಸೈಕಲ್ ಮೇಲೆ ಖಾದರ್ ಖಾನ್ ಹಾಗೂ ನಮೂದಿತ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-25/ಎಚ್.ಎ-1795 ನೇದರ ಮೇಲೆ ನಾಗಪ್ಪ ತಂದೆ ಹನುಮಂತಪ್ಪ ಜಾಧವ, ಪ್ರಾಯ-50 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಶಿರವಾಡಾ, ಕಾರವಾರ ರವರನ್ನು ಹತ್ತಿಸಿಕೊಂಡು ಹಳಗಾಕ್ಕೆ ಕೆಲಸಕ್ಕೆ ಹೋಗುವಾಗ ಸದಾಶಿವಗಡದ ಲೋಟಸ್ ಹೋಟೆಲ್ ಹತ್ತಿರ ಬಂದಾಗ ಅತೀವೇಗವಾಗಿ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಆರೋಪಿತನು ಎದುರಿಗೆ ಬಂದ ದನವನ್ನು ತಪ್ಪಿಸಲು ಹೋಗಿ ತನ್ನ ಮೋಟಾರ್ ಸೈಕಲನ್ನು ನಿಯಂತ್ರಿಸಲು ಸಾಧ್ಯವಾಗದೇ ರಸ್ತೆಯ ಪಕ್ಕದ ಮಣ್ಣಿನ ಗುಡ್ಡೆಗೆ ತನ್ನ ಮೋಟಾರ್ ಸೈಕಲನ್ನು ನುಗ್ಗಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ 08-50 ಗಂಟೆಯ ಸುಮಾರಿಗೆ ಬಿದ್ದು, ತನಗೆ ಸಾದಾ ಗಾಯ ಪಡಿಸಿಕೊಂಡು, ತನ್ನ ಮೋಟಾರ್ ಸೈಕಲ್ ಮೇಲೆ ಹಿಂದೆ ಕುಳಿತಿದ್ದ ನಾಗಪ್ಪ ತಂದೆ ಹನುಮಂತಪ್ಪ ಜಾಧವ ಈತನಿಗೆ ರಸ್ತೆಯ ಮೇಲೆ ಬೀಳುವಂತೆ ಮಾಡಿ, ಆತನ ತಲೆಗೆ ಗಂಭೀರ ಗಾಯವಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಅಪ್ಪಾರಾವ್ ತಂದೆ ದತ್ತು ತಿನ್ನೇಕರ್, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಂಗಾರಪ್ಪ ನಗರ, ಶಿರವಾಡಾ, ಕಾರವಾರ ರವರು ದಿನಾಂಕ: 02-11-2021 ರಂದು 10-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 161/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರವಿಕಾಂತ ತಂದೆ ಮಾದೇವ ಹರಿಕಂತ್ರ, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮೂಲೆಭಾಗ, ಕೇಣಿ, ತಾ: ಅಂಕೋಲಾ. ಈತನು ದಿನಾಂಕ: 02-11-2021 ರಂದು 19-40 ಗಂಟೆಗೆ ಅಂಕೋಲಾ ತಾಲೂಕಿನ ಕೇಣಿ ಗ್ರಾಮದ ಮೂಲೆಭಾಗ ಸ್ಮಶಾನದ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ 2,860/- ರೂಪಾಯಿ ಮೌಲ್ಯದ LIGHT HOUSE WHISKY, FOR SALE IN GOA STATE ONLY ಅಂತಾ ಲೇಬಲ್ ಇರುವ ಗೋವಾ ರಾಜ್ಯದ ತಲಾ 180 ML ಪ್ರಮಾಣದ ಒಟ್ಟೂ 110 ಸರಾಯಿ ಬಾಟಲಿಗಳನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದಾಗ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ (ಕಾ&ಸು), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 02-11-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 186/2021, ಕಲಂ: 4, 5, 6, 7, 12 THE KARNATAKA PREVENTION OF COW SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 11(1)(A)(D)(E) Prevention Of Cruelty to Animals Act-1960 ಹಾಗೂ ಕಲಂ: 192(A) ಐ.ಎಮ್.ವಿ ಎಕ್ಟ್-1988 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಮೀರ್ ತಂದೆ ಅದಂ ವಾಳ್ವೇಕರ್, ಪ್ರಾಯ-22 ವರ್ಷ, ವೃತ್ತಿ-ಚಾಲಕ, ಸಾ|| ಎ.ಪಿ-20, ಗಾಂಧಿ ವಿಕಾಸ್ ನಗರ, ಗಲ್ಲಿ ನಂ: 1, ಯಶವಂತ ಕಾಲೋನಿ, ಇಚಲಕರಂಜಿ, ತಾ: ಹಾತಕಣಗಲೆ, ಜಿ: ಕೊಲ್ಲಾಪುರ, ಮಹಾರಾಷ್ಟ್ರ, 2]. ಅಸ್ಪಾಕ್ ತಂದೆ ಅದಂ ವಾಳ್ವೇಕರ್, ಪ್ರಾಯ-27 ವರ್ಷ, ವೃತ್ತಿ-ಕ್ಲೀನರ್ ಕೆಲಸ, ಸಾ|| ಎ.ಪಿ-20, ಗಾಂಧಿ ವಿಕಾಸ್ ನಗರ, ಗಲ್ಲಿ ನಂ: 1, ಯಶವಂತ ಕಾಲೋನಿ, ಇಚಲಕರಂಜಿ, ತಾ: ಹಾತಕಣಗಲೆ, ಜಿ: ಕೊಲ್ಲಾಪುರ, ಮಹಾರಾಷ್ಟ್ರ, 3]. ರಿಜ್ವಾನ್ ತಂದೆ ಕಯುಮ್ ಕುರೇಶಿ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಾಸ್ತ್ರಿ ಚೌಕ್, ಸಾರಾ ಕಾಲೋನಿ, ಗಲ್ಲಿ ನಂ: 2, ಘಾಟ್ ರೋಡ್, ತಾ: ಮಿರಜ್, ಜಿ: ಸಾಂಗ್ಲಿ, ಮಹಾರಾಷ್ಟ್ರ, 4]. ರಶೀದ್ ಪಿ. ಕೆ. ತಂದೆ ಕುಂಜಾಲಿ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೆಲ್ಲಿಯಂಬಮ್ ಗ್ರಾಮ, ಕಂಬಲಕ್ಕಾಡ್, ಪೋ: ನಡವಿಲ್, ತಾ: ನಡವಿಲ್, ಜಿ: ವೈನಾಡ್, ಕೇರಳಾ, 5]. ಅಶೀರಖಾನ್ ಗೊಲಂದಾಜ್, ಸಾ|| ಮಿರಜ್, ಸಾಂಗ್ಲಿ, ಮಹಾರಾಷ್ಟ್ರ, 6]. ಶಮೀಲ್ ಟಿ. ಪಿ. ತಂದೆ ಮಹಮ್ಮದ್ ಟಿ.ಪಿ, ಸಾ|| ನಲುಥಾರಾ ಪಲೂರ್, ಮಾಹೆ, ಪಾಂಡಿಚೇರಿ. ಈ ನಮೂದಿತ ಆರೋಪಿತರು ದಿನಾಂಕ: 02-11-2021 ರಂದು 07-00 ಗಂಟೆಗೆ ಅಶೋಕ ಲೈಲ್ಯಾಂಡ್ ಲಾರಿ ನಂ: ಎಮ್.ಎಚ್-10/ಸಿ.ಆರ್-0620 ನೇದರ ಮೇಲೆ ಕಪ್ಪು ಬಣ್ಣದ ಕೋಣ-13, ಎಮ್ಮೆ-09, ಹೀಗೆ ಒಟ್ಟೂ-22 ಜಾನುವಾರುಗಳನ್ನು ತುಂಬಿಕೊಂಡು, ಜಾನುವಾರಗಳಿಗೆ ನಿಂತುಕೊಳ್ಳಲು, ಮಲಗಲು ಕಂಪಾರ್ಟಮೆಂಟಿನ ವ್ಯವಸ್ಥೆ ಮಾಡದೇ ಹಾಗೂ ಮೇವು ಮತ್ತು ನೀರಿನ ವ್ಯವಸ್ಥೆ ಇಲ್ಲದೇ ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿ, ಸರಕು ಸಾಗಣೆಯ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ತನಿಖೆ-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 02-11-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 189/2021, ಕಲಂ: 341, 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೋಹನ ತಂದೆ ಕರಿಯಣ್ಣ ಹರಿಕಂತ್ರ, ಪ್ರಾಯ-34 ವರ್ಷ, ವೃತ್ತಿ-ಮೀನುಗಾರಿಕೆ, 2]. ದತ್ತಾತ್ರೇಯ ತಂದೆ ನಾರಾಯಣ ಹರಿಕಂತ್ರ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, 3]. ಶಿವಾನಂದ ತಂದೆ ಕರಿಯಣ್ಣ ಹರಿಕಂತ್ರ, ಪ್ರಾಯ-28 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| (ಎಲ್ಲರೂ) ಈರಪ್ಪನಹಿತ್ತಲ, ಹಳದೀಪುರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯ ತಂಗಿ ದೇವಕಿ ಇವಳ ಗಂಡನಾಗಿದ್ದು, ಈತನು ಪಿರ್ಯಾದಿಯೊಂದಿಗೆ ವಿನಾಕಾರಣ ದ್ವೇಷದಿಂದ ಇದ್ದು, ಆರೋಪಿ 1 ನೇಯವನ ತಮ್ಮಂದಿರಾದ ಆರೋಪಿ 2 ಮತ್ತು 3 ನೇಯವರು ದಿನಾಂಕ: 02-11-2021 ರಂದು ಸಂಜೆ 04-30 ಗಂಟೆಯ ಸುಮಾರಿಗೆ ಪಿರ್ಯಾದಿಯ ಮನೆಯಲ್ಲಿ ಕಲಿಯಲು ಇದ್ದ ಪಿರ್ಯಾದಿಯ ಅಕ್ಕನ ಮಗನಾದ ರಿತೇಶನು ಮನೆ ಅಂಗಳದಲ್ಲಿ ಆಟ ಆಡುತ್ತಿದ್ದವನಿಗೆ, ಪಿರ್ಯಾದಿಯ ತಂಗಿಯ ಗಂಡ ಮೋಹನನು ಅಡ್ಡಗಟ್ಟಿ ತಡೆದು, ಎಳೆದುಕೊಂಡು ಹೋಗಿ ಕೈಯಿಂದ ಹೊಡೆಯುತ್ತಿದ್ದು, ಅದನ್ನು ನೋಡಿ ತಪ್ಪಿಸಲು ಹೋದ ಪಿರ್ಯಾದಿಯನ್ನು ಆರೋಪಿ 1 ನೇಯವನು ಆತನ ತಮ್ಮಂದಿರಾದ ಆರೋಪಿ 2 ಮತ್ತು 3 ನೇಯವರೊಂದಿಗೆ ಸೇರಿ, ಪಿರ್ಯಾದಿಯನ್ನು ಉದ್ದೇಶಿಸಿ ಕೆಟ್ಟ ಕೆಟ್ಟ ಶಬ್ದಗಳಿಂದ ಬೈಯ್ದು ‘ನೀನು ಯಾರು ನಮಗೆ ಕೇಳಲು? ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಅಂತಾ ಹೇಳಿ ಪಿರ್ಯಾದಿಗೆ ಕೈಯಿಂದ ಹೊಡೆದಿದ್ದಲ್ಲದೇ, ಆರೋಪಿ 2 ಮತ್ತು 3 ನೇಯವರಿಬ್ಬರೂ ಸೇರಿ ಒಂದೊಂದು ಸೊಟ್ಟೆಯಿಂದ ಪಿರ್ಯಾದಿಯ ಮೈ ಮೇಲೆ ಮತ್ತು ತಲೆಗೆ ಹೊಡೆದರು. ಇದರಿಂದ ಪಿರ್ಯಾದಿಯ ತಲೆಗೆ ಮತ್ತು ಮೈ ಮೇಲೆ ಅಲ್ಲಲ್ಲಿ ಗಾಯನೋವು ಆಗಿರುತ್ತದೆ. ನಂತರ ಪಿರ್ಯಾದಿಯ ತಂಗಿ ದೇವಕಿ ಇವಳು ಕೂಗುತ್ತಾ ಪಿರ್ಯಾದಿಗೆ ಹೊಡೆಯುವುದನ್ನು ತಪ್ಪಿಸಲು ಬರುವುದನ್ನು ನೋಡಿ, ಅವರೆಲ್ಲರೂ ಸೇರಿ ಪಿರ್ಯಾದಿಯನ್ನು ಉದ್ದೇಶಿಸಿ ‘ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಕೊಂದು ಹಾಕುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಅಣ್ಣಪ್ಪ ಹರಿಕಂತ್ರ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಈರಪ್ಪನಹಿತ್ಲ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 02-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 02-11-2021 ರಂದು 17-15 ಗಂಟೆಯಿಂದ 17-30 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ಕೆ.ಎಸ್.ಆರ್.ಟಿ.ಸಿ ಹಳೆ ಬಸ್ ನಿಲ್ದಾಣದಲ್ಲಿ ಪಿರ್ಯಾದಿಯು ಶಿರಸಿಯ ಕೊಪ್ಪಳ್ಳಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಹತ್ತುತ್ತಿರುವಾಗ ಯಾರೋ ಆರೋಪಿತ ಕಳ್ಳರು ಪಿರ್ಯಾದಿಯ ಹೆಗಲಿಗೆ ಹಾಕಿದ ವ್ಯಾನಿಟಿ ಬ್ಯಾಗಿನ ಜಿಪ್ ತೆಗೆದು ಅದರ ಒಳಗಡೆ ಸಣ್ಣ ಪರ್ಸಿನಲ್ಲಿ ಇದ್ದ 66 ಗ್ರಾಂ ತೂಕದ ಅ||ಕಿ|| 2,00,000/- ರೂಪಾಯಿ ಮೌಲ್ಯದ  ಬಂಗಾರದ ಆಭರಣಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಆಶಾ ಕೋಂ. ದತ್ತಾ ಬೋರ್ಕರ, ಪ್ರಾಯ-64 ವರ್ಷ, ವೃತ್ತಿ-ನಿವೃತ್ತ ನೌಕರಳು, ಸಾ|| ಹುಬ್ಬಳ್ಳಿ ರೋಡ್, ಮೂಚಿ ಚೌಕ, ಕಾಮತ್ ಕ್ರಾಸ್ ಹತ್ತಿರ, ತಾ: ಶಿರಸಿ ರವರು ದಿನಾಂಕ: 02-11-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 279, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ಕಾರ್ ಚಾಲಕನಾಗಿದ್ದು, ಕಾರಿನ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 01-11-2021 ರಂದು 18-00 ಗಂಟೆಗೆ ದಾಂಡೇಲಿ ತಾಲೂಕಿನ ಬೇಡರಶಿರಗೂರು ಗ್ರಾಮದ ಹತ್ತಿರ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿಯ ಮೇಲೆ ತನ್ನ ಕಾರನ್ನು ಬರ್ಚಿ ಕಡೆಯಿಂದ ಕರ್ಕಾ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಚಲಾಯಿಸಿಕೊಂಡು ಹೋಗಿ ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಒಮ್ಮೇಲೆ ಡಾಂಬರ್ ರಸ್ತೆಯ ಬಲಕ್ಕೆ ಹೋಗಿ ಎದುರಿನಿಂದ ಶ್ರೀಕಾಂತ ತಂದೆ ಪಾಂಡುರಂಗ ಮಾಲಬಣ್ಣವರ್, ಪ್ರಾಯ-13 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಬೇಡರಶಿರಗೂರು, ತಾ; ದಾಂಡೇಲಿ ಈತನು ಚಲಾಯಿಸಿಕೊಂಡು ಬರುತ್ತಿದ್ದ ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವನಿಗೆ ಹಣೆಗೆ, ಹುಬ್ಬಿಗೆ, ಎರಡು ಕೈಗಳ ಮೊಣಕೈಗೆ ಹಾಗೂ ಎದೆಗೆ ತೆರೆಚಿದ ರಕ್ತಗಾಯ ಪಡಿಸಿ, ಸೈಕಲನ್ನು ನಜ್ಜುಗುಜ್ಜು ಪಡಿಸಿ, ತನ್ನ ಕಾರನ್ನು ನಿಲ್ಲಿಸದೇ ಕರ್ಕಾ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಪ್ಪಾ ತಂದೆ ಮುದಕಪ್ಪಾ ಮಾಲಬಣ್ಣವರ್, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೇಡರಶಿರಗೂರು, ತಾ: ದಾಂಡೇಲಿ ರವರು ದಿನಾಂಕ: 02-11-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 168/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಂಕರ ತಂದೆ ತುಕಾರಾಮ ಮಡಿವಾಳರ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಣ್ಸವಾಡ, ತಾ: ಹಳಿಯಾಳ, 2]. ಅರ್ಜುನ ತಂದೆ ಭೀಮರಾಯ್ ರೇಡೇಕರ, ಪ್ರಾಯ-59 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಣ್ಸವಾಡ, ತಾ: ಹಳಿಯಾಳ, 3]. ತುಕಾರಾಮ ಮಡಿವಾಳರ, ಸಾ|| ಹುಣ್ಸವಾಡ, ತಾ: ಹಳಿಯಾಳ, 4]. ನಾಗಪ್ಪ ಮೇತ್ರಿ, ಸಾ|| ಹುಣ್ಸವಾಡ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ದಿನಾಂಕ: 03-11-2021 ರಂದು 00-15 ಗಂಟೆಗೆ ಹಳಿಯಾಳ ತಾಲೂಕಿನ ಹುಣ್ಸವಾಡ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಕೆಳಗೆ ತಮ್ಮ ತಮ್ಮ ಅಕ್ರಮ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣ ಪಂಥ ಕಟ್ಟಿ ಅಂದರ್-ಬಾಹರ್ ಎಂಬ ಜೂಗಾರಾಟ ಆಡುತ್ತಿದ್ದಾಗ, ಆರೋಪಿ 1 ಮತ್ತು 2 ನೇಯವರು ದಾಳಿಯ ಕಾಲಕ್ಕೆ ಇಸ್ಪೀಟ್ ಜೂಗಾರಾಟದ ಸಾಮಗ್ರಿಗಳಾದ 1). ನಗದು ಹಣ 1,850/- ರೂಪಾಯಿ, 2). ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, 3). ಪ್ಲಾಸ್ಟಿಕ್ ಹಾಳೆ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕಿದ್ದು ಹಾಗೂ ಆರೋಪಿ 3 ಮತ್ತು 4 ನೇಯವರು ದಾಳಿಯ ಕಾಲಕ್ಕೆ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸತ್ಯಪ್ಪ ಹುಕ್ಕೇರಿ, ಪಿ.ಎಸ್.ಐ (ತನಿಖೆ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 02-11-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-11-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿತ ಗಂಡಸ್ಸಾಗಿದ್ದು, ಈತನು ದಿನಾಂಕ: 01-11-2021 ರಂದು21-00 ಗಂಟೆಯಿಂದ ದಿನಾಂಕ: 02-11-2021 ರಂದು ಬೆಳಿಗ್ಗೆ 05-00 ಗಂಟೆಯ ನಡುವಿನ ಅವಧಿಯಲ್ಲಿ ಎಲ್ಲಿಂದಲೋ ಬಂದವನು ಕಾರವಾರ, ಶಿರವಾಡದ ಕೊಂಕಣ ರೈಲ್ವೇ ಸ್ಟೇಷನ್ ಹತ್ತಿರ ಇರುವ ಬಸ್ ಸ್ಟಾಪಿನಲ್ಲಿ ಮಲಗಿದ ಸ್ಥಿತಿಯಲ್ಲಿ ಯಾವುದೋ ಕಾಯಿಲೆಯಿಂದ ಅಥವಾ ಯಾವುದೋ ಪದಾರ್ಥ ಸೇವಿಸಿ ಮರಣಪಟ್ಟಿರಬಹುದು ಎಂಬ ಬಗ್ಗೆ ಪಿರ್ಯಾದಿ ಶ್ರೀ ಜೊರ್ಜ್ ತಂದೆ ಫ್ರಾನ್ಸಿಸ್ ಫರ್ನಾಂಡೀಸ್, ಪ್ರಾಯ-45 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಕಡವಾಡ, ಕಾರವಾರ ರವರು ದಿನಾಂಕ: 02-11-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 03-11-2021 01:33 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080