ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-10-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 147/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಾಸುದೇವ ಎ. ತಂದೆ ಪುರುಷೋತ್ತಮ, ಸಾ|| ಕಾಸರಕೋಡ, ಕೇರಳಾ, ಹಾಲಿ ಸಾ|| ದಾವಣಗೆರೆ (ಮಾರುತಿ ಸುಜುಕಿ ಇಗ್ನೀಸ್ ಕಾರ್ ನಂ: ಕೆ.ಎ-17/ಎಮ್.ಎ-1673 ನೇದರ ಚಾಲಕ). ಈತನು ದಿನಾಂಕ: 11-09-2021 ರಂದು ಮಧ್ಯಾಹ್ನ 13-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಶಿರೂರ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ತನ್ನ ಮಾರುತಿ ಸುಜುಕಿ ಇಗ್ನೀಸ್ ಕಾರ್ ನಂ: ಕೆ.ಎ-17/ಎಮ್.ಎ-1673 ನೇದನ್ನು ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದವನು, ಮುಂದಿನಿಂದ ಹೋಗುತ್ತಿದ್ದ ಯಾವುದೋ ಕಾರನ್ನು ಓವರಟೇಕ್ ಮಾಡಲು ಹೋಗಿ ತನ್ನ ಕಾರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದೇ ಪಲ್ಟಿ ಕೆಡವಿ ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಯ ತಾಯಿ ಶ್ರೀಮತಿ ವೈಜಯಂತಿ ಕೋಂ. ತಿವಿಕ್ರಮ್ ಹೆಬ್ಬಾರ, ಸಾ|| ಹತ್ಯಡ್ಕ, ಬೆಳ್ತಂಗಡಿ, ಮಂಗಳೂರು ಇವಳಿಗೆ ಬಲಗೈ ತೋಳಿನ ಹತ್ತಿರ ಭಾರೀ ಗಾಯನೋವು ಪಡಿಸಿದ್ದಲ್ಲದೇ, ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಪಿರ್ಯಾದಿಯ ತಂದೆ ತ್ರಿವಿಕ್ರಮ್ ತಂದೆ ಸೀತಾರಾಮ ಹೆಬ್ಬಾರ, ಪ್ರಾಯ-71 ವರ್ಷ, ಸಾ|| ಹತ್ಯಡ್ಕ, ಬೆಳ್ತಂಗಡಿ, ಮಂಗಳೂರು ಇವರಿಗೆ ತಲೆಗೆ, ಮೂಗಿಗೆ ಗಾಯನೋವು ಪಡಿಸಿದವನಿಗೆ ಅಂಕೋಲಾದ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಕೆ.ಎಲ್.ಇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚರಿಸಿ, ಅಲ್ಲಿಂದ ಪಾರ್ಶ್ವವಾಯು ಚಿಕಿತ್ಸಾಲಯ ಬೆಳಂಬಾರಕ್ಕೆ ಕರೆದುಕೊಂಡು ಹೋಗಿ ಪಾರ್ಶ್ವವಾಯು ಕಾಯಿಲೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕರೆದುಕೊಂಡು ಹೋಗುತ್ತಿರುವಾಗ ದಿನಾಂಕ: 12-09-2021 ರಂದು ಮಧ್ಯಾಹ್ನ 12-15 ಗಂಟೆಗೆ ಅಂಕೋಲಾ ಶಹರದ ಸಮೀಪ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ವೃಕ್ಷವರ್ಧನ ತಂದೆ ತಿವಿಕ್ರಮ ಹೆಬ್ಬಾರ, ಪ್ರಾಯ-26 ವರ್ಷ, ವೃತ್ತಿ-ಶಿಕ್ಷಕ, ಸಾ|| ಹತ್ಯಡ್ಕ ಗ್ರಾಮ, ಪೋ: ಅರಸಿನಮಕ್ಕಿ, ತಾ: ಬೆಳ್ತಂಗಡಿ, ಜಿ: ದಕ್ಷಿಣ ಕನ್ನಡ ರವರು ದಿನಾಂಕ: 02-10-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 160/2021, ಕಲಂ: 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುರಳಿ ತಂದೆ ತಂಗಪ್ಪ ನಾಯರ್, ಪ್ರಾಯ-52 ವರ್ಷ, ವೃತ್ತಿ-ವ್ಯವಹಾರ, ಸಾ|| ಉದ್ಯಮನಗರ, ತಾ: ಯಲ್ಲಾಪುರ. ಈತನು ಯಲ್ಲಾಪುರ ಪಟ್ಟಣದ ಉದ್ಯಮನಗರದಲ್ಲಿರುವ ಗೋಕುಲಂ ಸಿಮೆಂಟ್ ಇಂಡಸ್ಟ್ರಿಯ ಮಾಲಿಕನಾಗಿದ್ದು, ತನ್ನ ಫ್ಯಾಕ್ಟರಿಯಲ್ಲಿ ಕೆಲಸ ನಡೆಯವ ಸ್ಧಳದಲ್ಲಿ ದಿನಾಂಕ: 08-09-2021 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದಿಯವರ ಮಗ ಗಾಯಳು: ಶ್ರೀ ಮಂಜನಾಥ ತಂದೆ ಕೃಷ್ಣಪ್ಪ ಕೊರವರ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉದ್ಯಮ ನಗರ, ತಾ: ಯಲ್ಲಾಪುರ ರವರಿಗೆ ಕೆಲಸ ಮಾಡಲು ಹೇಳಿ ಅವರ ಪ್ರಾಣಕ್ಕೆ ಹಾನಿಯಾಗುವ ಸಂಭವ ಇದೆ ಅಂತಾ ಗೊತ್ತಿದ್ದರೂ ಸಹ ಯಾವುದೇ ಮುಂಜಾಗೃತಾ ಕ್ರಮ ವಹಿಸದೇ ರಕ್ಷಣಾತ್ಮಕ ಸಲಕರಣೆಗಳು ನೀಡದೇ  ನಿರ್ಲಕ್ಷ್ಯತನದಿಂದ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಹಚ್ಚಿದಂತೆ ಗಾಯಾಳು ಕೆಲಸ ಮಾಡುತ್ತಿರುವಾಗ ಫ್ಯಾಕ್ಟರಿಯ ಪ್ರವೇಶ ದ್ವಾರದಲ್ಲಿರುವ ದೊಡ್ಡ ಗೇಟ್ ಗಾಯಳು ಮೇಲೆ ಬಿದ್ದು ಗಾಯಳುವಿನ ಬೆನ್ನಿನ ಮೂಳೆ ಮುರಿದು ಸೊಂಟ ಹಾಗೂ ಎರಡು ಕಾಲುಗಳ ಮತ್ತು ತಲೆಯ ಭಾಗಕ್ಕೆ ಭಾರೀ ಗಾಯನೋವು ಪಡಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗೌರಮ್ಮ ಕೋಂ. ಕೃಷ್ಣಪ್ಪಾ ಕೊರವರ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉದ್ಯಮ ನಗರ, ತಾ: ಯಲ್ಲಾಪುರ ರವರು ದಿನಾಂಕ: 02-10-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 161/2021, ಕಲಂ: 8(c) ಸಹಿತ 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಗಂಗಾರಾಮ ತಂದೆ ನಾಗು ಜೋರೆ. ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭಾಗವತಿ, ತಾ: ಹಳಿಯಾಳ. ಈತನು ಯಲ್ಲಾಪುರ ತಾಲೂಕಿನ ಹಳಿಯಾಳ ರಸ್ತೆಯ ಡಾಗಿನಾಲ್ ಬಸ್ ಸ್ಟ್ಯಾಂಡ್ ಸಮೀಪದ ಸಣ್ಣ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರವಾನಗಿ ಇಲ್ಲದೇ ಅನಧೀಕೃತವಾಗಿ ತನ್ನ ಲಾಭಕ್ಕೋಸ್ಕರ ಸುಮಾರು 10,000/- ರೂಪಾಯಿ ಮೌಲ್ಯದ 370 ಗ್ರಾಂ ಒಣಗಿದ ಗಾಂಜಾವನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡಲು ನಿಂತಿದ್ದಾಗ ದಿನಾಂಕ: 02-10-2021 ರಂದು ಮಧ್ಯಾಹ್ನ 12-37 ಗಂಟೆಗೆ ಸರ್ಕಾರದ ಪರವಾಗಿ ಪಿರ್ಯಾದುದಾರರು ಪಂಚರು ಮತ್ತು ಸಿಬ್ಬಂದಿಯವರು ಹಾಗೂ ಪತ್ರಾಂಕಿತ ಅಧಿಕಾರಿ ಮಾನ್ಯ ತಹಶೀಲ್ದಾರ್, ಯಲ್ಲಾಪುರ ರವರೊಂದಿಗೆ ಕೂಡಿ ದಾಳಿ ಮಾಡಿ ಹಿಡಿದು ಆರೋಪಿತನು ಗಾಂಜಾ ಮಾರಾಟದಿಂದ ಸಂಪಾದಿಸಿದ ನಗದು ಹಣ 730/- ರೂಪಾಯಿ ಮತ್ತು ಗಾಂಜಾ ಮಾರಾಟಕ್ಕೆ ಬಳಸಿದ ಸ್ವತ್ತಿನೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಪ್ರಿಯಾಂಕಾ ನ್ಯಾಮಗೌಡ. ಡಬ್ಲ್ಯೂ.ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 02-10-2021 ರಂದು 14-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 154/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಮುಕ್ತಾ ತಂದೆ ಬಸವಂತ ಗಸ್ತಿ, ಪ್ರಾಯ-26 ವರ್ಷ, ವೃತ್ತಿ-ಅಂಗನವಾಡಿ ಅಡುಗೆ ಸಹಾಯಕಿ, ಸಾ|| ಮಂಗಳವಾಡ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ಅಕ್ಕನಾದ ಇವಳು ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಅಂಗನವಾಡಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದವಳು, ದಿನಾಂಕ: 29-09-2021 ರಂದು ಬೆಳಿಗ್ಗೆ 09-00 ಗಂಟೆಗೆ ಅಂಗನವಾಡಿಗೆ ಹೋಗಿ ಮಧ್ಯಾಹ್ನ 13-00 ಗಂಟೆಗೆ ಮನೆಗೆ ವಾಪಸ್ ಡ್ರೆಸ್ ಚೇಂಜ್ ಮಾಡಿಕೊಂಡು ತಾನು ಮಂಗಳವಾಡದ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತಾ ಹೋದವಳು, ಆಸ್ಪತ್ರೆಗೆ ಹೋಗದೇ ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ, ಸದ್ರಿ ಕಾಣೆಯಾದ ತನ್ನ ಅಕ್ಕನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ತಂದೆ ಬಸವಂತ ಗಸ್ತಿ, ಪ್ರಾಯ-24 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಂಗಳವಾಡ, ತಾ: ಹಳಿಯಾಳ ರವರು ದಿನಾಂಕ: 02-10-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-10-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕೃಷ್ಣಾನಂದ ತಂದೆ ಶಂಕರ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಸೀಬರ್ಡ್ ದಲ್ಲಿ (ಎನ್.ಎಸ್.ಆರ್.ವ್ಹಾಯ್) ನೌಕರ, ಸಾ|| ಶಿರ್ವೆ, ದೇವಳಮಕ್ಕಿ, ಹಾಲಿ ಸಾ|| ಬಾಂಡಿಶಿಟ್ಟಾ, ಕಾರವಾರ. ಈತನು ದಿನಾಂಕ: 02-10-2021 ರಂದು ಕಾರವಾರದಿಂದ ತನ್ನೊಂದಿಗೆ ಕೆಲಸ ಮಾಡುವ ತನ್ನ ಗೆಳೆಯರೊಂದಿಗೆ ದೇವಳಮಕ್ಕಿಗೆ ಬಂದು ದೇವಳಮಕ್ಕಿಯಿಂದ ತನ್ನ ಸಂಬಂಧಿಕನಿಗೆ ಮತ್ತು ಗೆಳೆಯನಿಗೆ ಕರೆದುಕೊಂಡು ಎಲ್ಲರೂ ಕೂಡಿ ನಗೆಕೊವೆ ಊರಿನ ಹಳ್ಳದ ಸಮೀಪ ಅಡುಗೆ ಮಾಡಿ ಊಟ ಮಾಡಲು ಹೋದಾಗ, ಊಟ ಆದ ನಂತರ ಊಟದ ಪಾತ್ರೆ ತೊಳೆಯಲು ನಗೆಕೊವೆ ಊರಿನ ಹಳ್ಳದಲ್ಲಿ ಹೋದಾಗ ಪಾತ್ರೆ ತೊಳೆಯುವಾಗ ಈಜು ಬಾರದ ಮೃತನು ಅಕಸ್ಮಾತ್ ಆಗಿ ಕಾಲು ಜಾರಿ ಆಳವಾದ ಹಳ್ಳದ ನೀರಿನಲ್ಲಿ ಬಿದ್ದು ಮುಳುಗಿದವನಿಗೆ ನೀರಿನಿಂದ ಮೇಲಕ್ಕೆ ತೆಗೆದು ದೇವಳಮಕ್ಕಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ಒಳಪಡಿಸಿದ್ದು, ಅಲ್ಲಿಂದ ವೈದ್ಯರು ಸದ್ರಿಯವನಿಗೆ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಸದ್ರಿ ಕೃಷ್ಣಾನಂದ ಈತನಿಗೆ ಆಂಬ್ಯುಲೆನ್ಸ್ ಮೇಲೆ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಪಡಿಸಿದಾಗ ಅವನಿಗೆ ಉಪಚರಿಸಿದ ವೈದ್ಯರು ಮರಣಪಟ್ಟ ಬಗ್ಗೆ ತಿಳಿಸಿರುತ್ತಾರೆ. ಕಾರಣ ಮೃತನು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮರಣಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಶಂಕರ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಇಲೆಕ್ಟ್ರೀಶಿಯನ್ ಕೆಲಸ, ಸಾ|| ಶಿರ್ವೆ, ದೇವಳಮಕ್ಕಿ. ಹಾಲಿ ಸಾ|| ಕೋಡಿಬಾಗ, ಕಾರವಾರ ರವರು ದಿನಾಂಕ: 02-10-2021 ರಂದು 20-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 26/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕೇಶವ ತಂದೆ ನಾರಾಯಣ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೈಲೂರು, ದೊಡ್ಡಬಲಸೆ, ತಾ: ಭಟ್ಕಳ. ಪಿರ್ಯಾದಿಯ ಮಾವನಾದ ಇವರು ದಿನಾಂಕ: 02-10-2021 ರಂದು ತಮ್ಮ ವಾಸದ ಮನೆಯ ಮುಂದುಗಡೆ ಜಮೀನಿನಲ್ಲಿರುವ ಬಾವಿಯ ಪಕ್ಕದಲ್ಲಿ ಇರುವ ತೆಂಗಿನ ಮರವನ್ನು ಹತ್ತಿ ಕೃಷಿ ಚಟುವಟಿಕೆ ನಿಮಿತ್ತ ತೆಂಗಿನಕಾಯಿ ತೆಗೆಯುವ ಕೆಲಸದಲ್ಲಿ ನಿರತನಾಗಿದ್ದಾಗ ಬೆಳಿಗ್ಗೆ ಸುಮಾರು 09-30 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಕಾಲು ಜಾರಿ ತೆಂಗಿನ ಮರದಿಂದ ಸುಮಾರು 40 ಅಡಿ ಎತ್ತರದಿಂದ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮರಣಪಟ್ಟಿದ್ದು ಇರುತ್ತದೆ. ಮೃತನ ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಿ ಮುರ್ಡೇಶ್ವರದ ಆಸ್ಪತ್ರೆಗೆ ಸಾಗಿಸಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಮಾಬ್ಲೇಶ್ವರ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ಕಾಸರಗೋಡ ಮನೆ, ದೊಡ್ಡಬಲಸೆ, ಬೈಲೂರು, ತಾ: ಭಟ್ಕಳ ರವರು ದಿನಾಂಕ: 02-10-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 04-10-2021 10:40 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080