ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 02-09-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶಶಿಕಾಂತ ತಂದೆ ಅನಂತ ಕಡವಾಡಕರ, ಪ್ರಾಯ-64 ವರ್ಷ, ವೃತ್ತಿ-ವ್ಯಾಪಾರ, ಸಾ|| ಶಾಬಾವಾಡಾ, ನಂದವಾಳ, ಕಡವಾಡ ಕಾರವಾರ. ಈತನು ದಿನಾಂಕ: 02-09-2021 ರಂದು 16-15 ಗಂಟೆಯ ಸುಮಾರಿಗೆ ಕಾರವಾರದ ಕಡವಾಡ, ನಂದವಾಳ, ಶಾಬಾವಾಡಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ನಗದು ಹಣ 1,300/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-1, 2). ಖಾಲಿ ಹಾಳೆಗಳು-03, 3). ಬಾಲ್ ಪೆನ್-1. ಇವುಗಳೊಂದಿಗೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರೇವಣಸಿದ್ದಪ್ಪ ಜೀರಂಕಲಗಿ, ಪಿ.ಎಸ್.ಐ, ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 02-09-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 236/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀನಾಥ ತಂದೆ ನಾರಾಯಣ ಆಚಾರಿ, ಪ್ರಾಯ-30 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಕಲ್ಲಟಕೇರಿ, ನವಿಲಗೋಣ, ತಾ: ಹೊನ್ನಾವರ, 2]. ಮಂಜುನಾಥ ತಂದೆ ಕುಪ್ಪಯ್ಯ ಪಟಗಾರ, ಸಾ|| ಮಾಡಗೇರಿ, ತಾ: ಹೊನ್ನಾವರ, 3]. ಸಂತೋಷ ತಂದೆ ಕೃಷ್ಣ ಪಟಗಾರ, ಸಾ|| ಮಾಡಗೇರಿ, ತಾ: ಹೊನ್ನಾವರ, 4]. ರಮೇಶ ತಂದೆ ಗೋಪಾಲ ಆಚಾರಿ, ಸಾ|| ಮಾಡಗೇರಿ, ತಾ: ಹೊನ್ನಾವರ, 5]. ಮಂಜುನಾಥ ತಂದೆ ತಿಮ್ಮಯ್ಯ ನಾಯ್ಕ, ಸಾ|| ನವಿಲಗೋಣ, ತಾ: ಹೊನ್ನಾವರ, 6]. ಮಂಜುನಾಥ ತಂದೆ ತಿಪ್ಪಯ್ಯ ನಾಯ್ಕ, ಸಾ|| ನವಿಲಗೋಣ ತಾ: ಹೊನ್ನಾವರ, 7]. ಮಂಜುನಾಥ @ ಮೊಗಳ ಮಂಜು ತಂದೆ ಮಾಸ್ತಿ ಮುಕ್ರಿ, ಸಾ|| ಮೊಗಳಕೇರಿ, ಕಡತೋಕಾ, ತಾ: ಹೊನ್ನಾವರ, 8]. ರಕ್ಷಿತ್ ತಂದೆ ಸೋಮೇಶ್ವರ ನಾಯ್ಕ, ಸಾ|| ನವಿಲಗೋಣ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 02-09-2021 ರಂದು 19-15 ಗಂಟೆಗೆ ಹೊನ್ನಾವರ ತಾಲೂಕಿನ ನವಿಲಗೋಣ ಕಲ್ಲಟಕೇರಿ ಗುಡ್ಡದ ಮೇಲೆ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿಯ ವೇಳೆ 1). ಒಟ್ಟು ನಗದು ಹಣ 1,050/- ರೂಪಾಯಿ, 2). ಒಟ್ಟು ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, 3). ಅರ್ಧ ಉರಿದ ಮೇಣದ ಬತ್ತಿಯ ತುಂಡುಗಳು-04, ಅ||ಕಿ|| 00.00/- ರೂಪಾಯಿ, 4). ಪ್ಲಾಸ್ಟಿಕ್ ಚೀಲ-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಆರೋಪಿ 1 ನೇಯವನು ವಶಕ್ಕೆ ಸಿಕ್ಕು ಉಳಿದ ಆರೋಪಿತರಾದ ಆರೋಪಿ 2 ಎರಿಂದ 8 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 02-09-2021 ರಂದು 20-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 110/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಶ್ತಿಕಾರ್ ತಂದೆ ಮೊಹಮ್ಮದ್ ಸಾಬ್, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದಾಸಗೋಡ, ಸಂಶಿ, ತಾ: ಹೊನ್ನಾವರ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7365 ನೇದರ ಸವಾರ). ಈತನು ದಿನಾಂಕ: 31-08-2021 ರಂದು 20-30 ಗಂಟೆಯ ಸಮಯಕ್ಕೆ ತನ್ನ ಬಜಾಜ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7365 ನೇದರ ಹಿಂಬದಿ ಮೊಹಮ್ಮದ್ ಮೊಸೀಮ್ ತಂದೆ ಫಕ್ಕೀರಸಾಬ್, ಪ್ರಾಯ-35 ವರ್ಷ, ಸಾ|| ದಾಸಗೋಡ, ಸಂಶಿ, ತಾ: ಹೊನ್ನಾವರ ಇವರನ್ನು ಕೂಡ್ರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಮೇಲೆ ಶಿರೂರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಭಟ್ಕಳದ ಬೆಳ್ಕೆಯ ಮಯೂರ ಡಾಬಾ ಹತ್ತಿರ ತನ್ನ ಮೋಟಾರ್ ಸೈಕಲಿನ ವೇಗ ನಿಯಂತ್ರಿಸಲಾಗದೆ ಸ್ಕಿಡ್ ಆಗಿ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಅವನ ಬಲಗಾಲಿಗೆ ತೀವ್ರಗಾಯ ಪಡಿಸಿಕೊಂಡು ಹಾಗೂ ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮೊಹಮ್ಮದಸಾಬ್ ತಂದೆ ಫಕ್ಕೀರಸಾಬ್ ಶೇಖ್, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದಾಸಗೋಡ, ಸಂಶಿ, ತಾ: ಹೊನ್ನಾವರ ರವರು ದಿನಾಂಕ: 02-09-2021 ರಂದು 14-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವೀಂದ್ರ ತಂದೆ ಗುತ್ಯಾ ಚನ್ನಯ್ಯ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಕಾನಸೂರು, ತಾ: ಸಿದ್ದಾಪುರ (ಬೊಲೆರೋ ವಾಹನ ನಂ: ಕೆ.ಎ-03/ಡಿ-3976 ನೇದರ ಚಾಲಕ). ಈತನು ದಿನಾಂಕ: 02-09-2021 ರಂದು 19-45 ಗಂಟೆಯ ಸುಮಾರಿಗೆ ಶಿರಸಿ ಶಹರದ ವಿದ್ಯಾಧಿರಾಜ ಕಲಾ ಕ್ಷೇತ್ರದ ಎದುರಿಗೆ ಕುಮಟಾ ರಸ್ತೆಯ ಮೇಲೆ ತನ್ನ ಬಾಬ್ತು ಬೊಲೆರೋ ವಾಹನ ನಂ: ಕೆ.ಎ-03/ಡಿ-3976 ನೇದನ್ನು ಶಿರಸಿ ಶಹರದ ನೀಲೇಕಣಿ ಕಡೆಯಿಂದ ಐದು ರಸ್ತೆಯ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು ಯಾವುದೇ ಸಿಗ್ನಲ್ ಹಾಕದೇ ಒಮ್ಮೇಲೆ ವಾಹನವನ್ನು ನಿಲ್ಲಿಸಿ, ತನ್ನ ವಾಹನದ ಹಿಂದುಗಡೆಯಿಂದ ಬರುತ್ತಿದ್ದ ಒಮಿನಿ ವಾಹನ ನಂ: ಕೆ.ಎ-28/ಎಮ್-3711 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅದರ ಚಾಲಕ ಮರಳೀಧರ ನೀಲೇಕಣಿ ಈತನಿಗೆ ಹೊಟ್ಟೆಗೆ ತೀವ್ರ ಸ್ವರೂಪದ ನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಬೋಲಾನಾಥ ತಂದೆ ರಾಮಾ ನೀಲೇಕಣಿ, ಪ್ರಾಯ-49 ವರ್ಷ, ವೃತ್ತಿ-ನಗರಸಭೆ ನೌಕರ, ಸಾ|| ನೀಲೇಕಣಿ, ಕುಮಟಾ ರೋಡ್, ತಾ: ಶಿರಸಿ ರವರು ದಿನಾಂಕ: 02-09-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುಬ್ರಮಣ್ಯ ತಂದೆ ಷಣ್ಮುಖ ವೇಲು, ಪ್ರಾಯ-47 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಗಣೇಶನಗರ, ತಾ: ಶಿರಸಿ. ಈತನು ದಿನಾಂಕ: 02-09-2021 ರಂದು 16-45 ಗಂಟೆಗೆ ರಾಘವೇಂದ್ರ ಸರ್ಕಲ್ ಹತ್ತಿರ ರಾಘವೇಂದ್ರ ಮಠಕ್ಕೆ ಹೋಗುವ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,230/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, ಖಾಲಿ ಪೇಪರ್ ತುಂಡುಗಳು-04, ಅ||ಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 02-09-2021 ರಂದು 19-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 83/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ನಾರಾಯಣ ಶಿರೂರಕರ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದಾಸನಕೊಪ್ಪ, ಬದನಗೋಡ ಗ್ರಾಮ, ತಾ: ಶಿರಸಿ. ಈತನು ದಿನಾಂಕ: 02-09-2021 ರಂದು ಬೆಳಿಗ್ಗೆ 11-45 ಗಂಟೆಗೆ ತನ್ನ ಅಕ್ರಮ ಲಾಭಕೋಸ್ಕರ ದಾಸನಕೊಪ್ಪ-ಶಿರಸಿ ರಸ್ತೆಯಿಂದ ದಾಸನಕೊಪ್ಪದ ಸಂತೆ ಮಾರುಕಟ್ಟೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ದಾಳಿ ಮಾಡಿದಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಓ.ಸಿ ಚೀಟಿ-01, 2). ಬಾಲ್ ಪೆನ್-01, 3). ನಗದು ಹಣ 970/- ರೂಪಾಯಿಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 02-09-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 02-09-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 33/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಭೂಷಣ ತಂದೆ ಮೋಹನ ದೇಶಭಂಡಾರಿ, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹೆಬ್ಳೆಕೊಪ್ಪ, ಪೋ: ಕಡತೋಕಾ, ತಾ: ಹೊನ್ನಾವರ. ಪಿರ್ಯಾದುದಾರರ ಮಗನಾದ ಈತನು ದಿನಾಂಕ: 02-09-2021 ರಂದು ಸಂಜೆ 17-00 ಗಂಟೆಯಿಂದ 17-30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಹೊನ್ನಾವರ ತಾಲೂಕಿನ ಕಡತೋಕಾ ಹೆಬ್ಳೆಕೊಪ್ಪದಲ್ಲಿರುವ ಮನೆಯ ಬೆಡ್ ರೂಮಿನಲ್ಲಿರುವ ಸೀಲಿಂಗ್ ಫ್ಯಾನಿಗೆ ನೈಲಾನ್ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ದಾದು ದೇಶಭಂಡಾರಿ, ಪ್ರಾಯ-56 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೆಬ್ಳೆಕೊಪ್ಪ, ಪೋ: ಕಡತೋಕಾ, ತಾ: ಹೊನ್ನಾವರ ರವರು ದಿನಾಂಕ: 02-09-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸಾಂತಾ ತಂದೆ ಕೋಸ್ತ ಟೇಲಿಸ್, ಪ್ರಾಯ-46 ವರ್ಷ, ವೃತ್ತಿ-ಮೇಸ್ತ್ರಿ ಕೆಲಸ, ಸಾ|| ಮಠದಹಿತ್ಲ, ಪೋ: ಕಾಯ್ಕಿಣಿ, ತಾ: ಭಟ್ಕಳ. ಈತನು ಪಿರ್ಯಾದಿಯ ಗಂಡನಿದ್ದು, ಪಿರ್ಯಾದಿಯ ಮನೆಯ ಸಮೀಪವಿದ್ದ ಹಳೆಯ ಬಾವಿಯ ನೀರನ್ನು ಪಿರ್ಯಾದಿಯ ಕುಟುಂಬದವರು ಬಳಕೆ ಮಾಡುತ್ತಾ ಬಂದಿದ್ದು, ದಿನಾಂಕ: 01-09-2021 ರಂದು ಮೃತನು ರಾತ್ರಿ 08-45 ಗಂಟೆಯ ಸುಮಾರಿಗೆ ಮನೆ ಬಳಕೆಗೆ ನೀರು ಬೇಕಾಗಿರುವುದರಿಂದ ನೀರು ತರಲು ಅಂತ ಮನೆಯ ಸಮೀಪವಿದ್ದ ಬಾವಿಗೆ ನೀರು ತರಲು ಹೋಗಿದ್ದಾಗ ಸುಮಾರು ರಾತ್ರಿ 09-00 ಗಂಟೆಗೆ ಆಕಸ್ಮಿಕವಾಗಿ ಆಯ ತಪ್ಪಿ ಬಾವಿಯ ನೀರಿನಲ್ಲಿ ಬಿದ್ದು ಮೃತಪಟ್ಟವನಿಗೆ ಅಕ್ಕಪಕ್ಕದವರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆ ಎತ್ತಿ, ಮೃತದೇಹವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮುರ್ಡೇಶ್ವರದಲ್ಲಿಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸೆಲಿನ್ ಕೋಂ ಸಾಂತಾ ಟೇಲಿಸ್, ಪ್ರಾಯ-44 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಠದಹಿತ್ಲ, ಪೋ: ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 02-09-2021 ರಂದು 07-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 70 ರಿಂದ 75 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಾಂಡೇಲಿಯಲ್ಲಿ ಯಾವಾಗಲೂ ಯಾರದಾದರೂ ಹತ್ತಿರ ಸ್ವಲ್ಪ ಹಣ ಬೇಡಿಕೊಂಡು ಸರಾಯಿ ಕುಡಿದುಕೊಂಡು ದಾಂಡೇಲಿಯ ಲಿಂಕ್ ರಸ್ತೆಯಲ್ಲಿರುವ ಸಂಡೇ ಮಾರ್ಕೆಟ್ ವಾಣಿಜ್ಯ ಕಟ್ಟಡದಲ್ಲಿರುವ ಪಿರ್ಯಾದುದಾರರ ಅಂಗಡಿಯ ಪಕ್ಕದಲ್ಲಿಯೇ ಮಲಗುತ್ತಿದ್ದವನು, ಸರಾಯಿ ಕುಡಿದು ಕುಡಿದು ಸರಿಯಾಗಿ ಊಟ ಮಾಡದೇ ದಿನಾಂಕ: 02-09-2021 ರಂದು 11-00 ಗಂಟೆಯಿಂದ 12-30 ಗಂಟೆಯ ನಡುವಿನ ಅವಧಿಯಲ್ಲಿ ಮಲಗಿದ್ದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇದರ ಹೊರತು ಮೃತನ ಸಾವಿನಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಹಮೀದ್ ತಂದೆ ಅಬ್ಬಾಸ್ ಅಲಿ ಕಲ್ಯಾಣಿ, ಪ್ರಾಯ-51 ವರ್ಷ, ವೃತ್ತಿ-ಇಲೆಕ್ಟ್ರಿಕಲ್ ಕೆಲಸ, ಸಾ|| ಸಾಯಿನಗರ, ದಾಂಡೇಲಿ ರವರು ದಿನಾಂಕ: 02-09-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 05-09-2021 01:04 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080