ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-04-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವಾಜಿ ತಂದೆ ಸಹದೇವ ಬಾಮನೆ, ಸಾ|| ಬೆಳಗಾವಿ (ಹ್ಯುಂಡೈ ಕಾರ್ ನಂ: ಎಮ್.ಎಚ್-03/ಬಿ.ಇ-3860 ನೇದರ ಚಾಲಕ). ಈತನು ದಿನಾಂಕ: 03-04-2021 ರಂದು ಮಧ್ಯಾಹ್ನ 13-35 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಹೆಬ್ಬುಳ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ತನ್ನ ಹ್ಯುಂಡೈ ಕಾರ್ ನಂ: ಎಮ್.ಎಚ್-03/ಬಿ.ಇ-3860 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು ತನ್ನ ಮುಂದೆ ಹೋಗುತ್ತಿದ್ದ ಯಾವುದೋ ವಾಹನವನ್ನು ಓವರಟೇಕ್ ಮಾಡಲು ಹೋಗಿ ಕಾರನ್ನು ರಸ್ತೆಯ ಬಲಕ್ಕೆ ಚಲಾಯಿಸಿ, ಎದುರಿನಿಂದ ಅಂದರೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಹೋಗುತ್ತಿದ್ದ ಮಾರುತಿ ಆಲ್ಟೋ ಕಾರ್ ನಂ: ಎಮ್.ಎಚ್-09/ಬಿಬಿ-1883 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮಾರುತಿ ಆಲ್ಟೋ ಕಾರ್ ನಂ: ಎಮ್.ಎಚ್-09/ಬಿ.ಬಿ-1883 ನೇದರಲ್ಲಿದ್ದ ಚಾಲಕ 1). ಮಹಾದೇವ ಹೊಸಮನಿ, ಸಾ|| ಜಮಖಂಡಿ, ಬಾಗಲಕೋಟೆ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 2). ಪ್ರಮೋದ ಶಾಂತಪ್ಪ ಹೊಸಮನಿ, ಸಾ|| ಬೆಳಗಾವಿ, 3). ಮಹಾದೇವ ಸುರೇಶ ಕಾಂಬಳೆ, ಸಾ|| ಬೆಳಗಾವಿ, 4). ಬಸವರಾಜ ಶಿವಪುತ್ರ ಪಾಟೀಲ್, ಸಾ|| ಬೆಳಗಾವಿ, 5). ಚನ್ನಬಸವಸ್ವಾಮಿ ಅವರಯ್ಯಾ ಸ್ವಾಮಿ, ಸಾ|| ರಾಯಚೂರ ಇವರಿಗೆ ಸಾದಾ ಹಾಗೂ ಗಂಭೀರ ಸ್ವರೂಪದ ಗಾಯನೋವಾಗಿದ್ದು ಮತ್ತು ಹ್ಯುಂಡೈ ಕಾರ್ ನಂ: ಎಮ್.ಎಚ್-03/ಬಿ.ಇ-3860 ನೇದರಲ್ಲಿ ಪ್ರಯಾಣಿಸುತ್ತಿದ್ದ 1). ಸಂಜೀವಿನಿ ಬಾಮನೆ, ಸಾ|| ಬೆಳಗಾವಿ, 2). ಸಮೀರ ಕೌಟನಕರ, ಸಾ|| ಬೆಳಗಾವಿ, 3). ಸಮೀತಾ ಕೌಟನಕರ, ಸಾ|| ಬೆಳಗಾವಿ, ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದಲ್ಲದೇ, ಮಾರುತಿ ಆಲ್ಟೋ ಕಾರ್ ನಂ: ಎಮ್.ಎಚ್-09/ಬಿ.ಬಿ-1883 ನೇದರ ಚಾಲಕ ಮಹಾದೇವ ಹೊಸಮನಿ, ಸಾ|| ಜಮಖಂಡಿ, ಬಾಗಲಕೋಟೆ ಈತನಿಗೆ ಗಂಭೀರ ಸ್ವರೂಪದ ಗಾಯನೋವಿನಿಂದ ಮರಣವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಾಂತಾ ತಂದೆ ಪೆದ್ರು ಫರ್ನಾಂಡಿಸ್, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸುಂಕಸಾಳ, ಪೊಲೀಸ್ ಹೊರ ಠಾಣೆಯ ಹತ್ತಿರ, ತಾ: ಅಂಕೋಲಾ ರವರು ದಿನಾಂಕ: 03-04-2021 ರಂದು 13-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಾಂತಯ್ಯ ತಂದೆ ಕಲಮಯ್ಯ ಮಠ, ಸಾ|| ಶಿವಪುರ, ತಾ: ಅಫ್ಜಲಪುರ, ಜಿ: ಗುಲ್ಬರ್ಗಾ (ಹ್ಯುಂಡೈ ವೆರ್ನಾ ಕಾರ್ ನಂ: ಎಮ್.ಎಚ್-12/ಎಚ್.ವಿ-6691 ನೇದರ ಚಾಲಕ). ಈತನು ದಿನಾಂಕ: 03-04-2021 ರಂದು 18-10 ಗಂಟೆಗೆ ಅಂಕೋಲಾ ತಾಲೂಕಿನ ಮೂಲೆಮನೆಯಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಕಾರ್ ನಂ: ಎಮ್.ಎಚ್-12/ಎಚ್.ವಿ-6691 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಮುಂದಿನಿಂದ ಹೋಗುತ್ತಿದ್ದ ಟ್ಯಾಂಕರ್ ಲಾರಿಯನ್ನು ಓವರಟೇಕ್ ಮಾಡಿಕೊಂಡು ರಸ್ತೆಯ ಬಲಕ್ಕೆ ಬಂದವನು, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ರಸ್ತೆಯ ತನ್ನ ಬದಿಯಿಂದ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-63/ಎಚ್-2413 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರರಾದ ಸಂತೋಷ ಶಿವಪ್ಪ ಸುಂಕದ ಮತ್ತು ಅನ್ವರ್ ನೂರ್ ಅಹಮ್ಮದ್ ಮಿಶ್ರಿಕೋಟೆ, ಸಾ|| (ಇಬ್ಬರೂ) ನೇಕಾರ ನಗರ, ಹುಬ್ಬಳ್ಳಿ ಇವರ ಕೈ ಗೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಗನ ತಂದೆ ಜಯರಾಮ ನಾಯಕ, ಪ್ರಾಯ-21 ವರ್ಷ, ವೃತ್ತಿ-ವ್ಯವಹಾರ, ಸಾ|| ಮೂಲೆಮನೆ, ಸುಂಕಸಾಳ, ತಾ: ಅಂಕೋಲಾ ರವರು ದಿನಾಂಕ: 03-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 01-04-2021 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 03-04-2021 ರಂದು ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾ ತಾಲೂಕಿನ ಮಚಗೋಣದ 2 ನೇ ಕ್ರಾಸಿನಲ್ಲಿರುವ ಪಿರ್ಯಾದಿಯವರ ಮನೆಯ ಹಿಂಬಾಗಿಲು ಮುರಿದು ಒಳ ಹೊಕ್ಕಿ, ಬೆಡ್ ರೂಮಿನ ವಾರ್ಡರೋಬ್ ಡ್ರಾವರಿನಲ್ಲಿದ್ದ ನಗದು ಹಣ 6,000/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಶ್ರೀ ಸಂತೋಷ ತಂದೆ ನಾರಾಯಣ ಮಾವಿನಕಟ್ಟಾ, ಪ್ರಾಯ-48 ವರ್ಷ, ವೃತ್ತಿ-ಶಿಕ್ಷಕರು, ಸಾ|| ಮನೆ ನಂ: 1308, ಕಾರ್ತಿಕ ನಿಲಯ, ಮಚಗೋಣ, 2 ನೇ ಕ್ರಾಸ್, ಹೆಗಡೆ, ತಾ: ಕುಮಟಾ ರವರು ದಿನಾಂಕ: 03-04-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 419, 420 ಐಪಿಸಿ ಹಾಗೂ ಕಲಂ: 66(ಸಿ)&(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತನು ಯಾರೋ ಅಪರಿಚಿತ ಮೊಬೈಲ್ ನಂ: 9883589497 ನೇದರ ಬಳಕೆದಾರನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 02-04-2021 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಮೊಬೈಲ್ ನಂ: 9883589497 ನೇದರಿಂದ ಪಿರ್ಯಾದಿಯವರ ಮೊಬೈಲ್ ನಂ: 94488XXXXX ನೇದಕ್ಕೆ ಕರೆ ಮಾಡಿ, ‘ತಾನು ಬ್ಯಾಂಕ್ ಅಧಿಕಾರಿ’ ಅಂತಾ ಪರಿಚಯಿಸಿಕೊಂಡು, ‘ನಿಮ್ಮ ಬ್ಯಾಂಕ್ ಖಾತೆ ಮರ್ಜ್ ಆಗಿರುತ್ತದೆ. ನಿಮ್ಮ ಖಾತೆ ಸರಿಪಡಿಸಲು ನಿಮ್ಮ ಅಕೌಂಟ್ ನಂಬರ್ ಮತ್ತು ಎ.ಟಿ.ಎಮ್ ಕಾರ್ಡ್ ನಂಬರ್ ಕೊಡಿ’ ಎಂದು ಕೇಳಿ, ‘ಮಾಹಿತಿ ನೀಡದೇ ಇದ್ದರೆ ನಿಮ್ಮ ಅಕೌಂಟ್ ಬ್ಲಾಕ್ ಆಗುತ್ತದೆ’ ಅಂತಾ ಹೆದರಿಸಿದ್ದು, ಪಿರ್ಯಾದಿಯವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಅಕೌಂಟ್ ಹೊಂದಿದ್ದು, ಕಳೆದ 5-6 ತಿಂಗಳ ಹಿಂದೆ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕಿನೊಂದಿಗೆ ಮರ್ಜ್ ಆಗಿದ್ದರಿಂದ ಪಿರ್ಯಾದಿಯವರು ಅದನ್ನು ನಂಬಿ ಆರೋಪಿತನಿಗೆ ತಮ್ಮ ಅಕೌಂಟ್ ನಂಬರ್ ಮತ್ತು ಎ.ಟಿ.ಎಮ್ ಕಾರ್ಡ್ ನಂಬರ್ ನೀಡಿದ್ದು, ಆ ನಂತರ ಆರೋಪಿತನು ಪಿರ್ಯಾದಿಯ ನಂಬರಿಗೆ ಮೂರು ಬಾರಿ ಒ.ಟಿ.ಪಿ ಕಳಿಸಿ ಅದನ್ನು ಪಡೆದುಕೊಂಡು, ಪಿರ್ಯಾದಿಯವರ (ಸಿಂಡಿಕೇಟ್ ಬ್ಯಾಂಕ್) ಕೆನರಾ ಬ್ಯಾಂಕ್, ಸಾಗರ ಶಾಖೆ, ಎಸ್.ಬಿ ಖಾತೆ ನಂ: 190322000XXXXX ನೇದರಿಂದ ಒಟ್ಟೂ 49,785/- ರೂಪಾಯಿ ಹಣವನ್ನು ಕಡಿತಗೊಳಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಬೀರಪ್ಪ ತಂದೆ ಕೃಷ್ಣಪ್ಪ ನಾಯ್ಕ, ಪ್ರಾಯ-70 ವರ್ಷ, ವೃತ್ತಿ-ನಿವೃತ್ತ ಸರ್ಕಾರಿ ನೌಕರ, ಸಾ|| ಗುಡೇಂಗಡಿ, ತಾ: ಕುಮಟಾ ರವರು ದಿನಾಂಕ: 03-04-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ತುಳಸು ತಂದೆ ಮಾಸ್ತಿ ಮುಕ್ರಿ, ಪ್ರಾಯ-55 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಬಸ್ತಿಮಕ್ಕಿ, ಕೆಕ್ಕಾರ, ತಾ: ಹೊನ್ನಾವರ. ಈತನು ದಿನಾಂಕ: 03-04-2021 ರಂದು 18-00 ಕೆಕ್ಕಾರದ ಬಸ್ತಿಮಕ್ಕಿಯ ರಸ್ತೆಯ ಬದಿಯ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ HAYWARDS CHEERS WHISKY ಅಂತಾ ಬರೆದ 90 ML ಅಳತೆಯ ಟೆಟ್ರಾ ಪ್ಯಾಕೆಟ್ ಗಳು-10 ಮತ್ತು ಹರಿದ ಪ್ಯಾಕೆಟ್-01 ಹಾಗೂ ಪ್ಲಾಸ್ಟಿಕ ಗ್ಲಾಸ್-02 ನೇದವುಗಳನ್ನು ಬಳಸಿ ಸರಾಯಿಯನ್ನು ಕುಡಿದು ಅಪರಾಧ ಎಸಗಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 03-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಿಜಾಮ್ ಅಕ್ಬರಸಾಬ್ ಬಿಳಗಿ, 2]. ಮೊಸಿನ್ ಅಕ್ಬರಸಾಬ್ದ ಬಿಳಗಿ, 3]. ಸಲ್ಮಾನ್, ಸಾ|| (ಎಲ್ಲರೂ) ಮುಸ್ಲಿಂ ಗಲ್ಲಿ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 03-04-2021 ರಂದು 18-00 ಗಂಟೆಯ ಸುಮಾರಿಗೆ ಶಿರಸಿ ಶಹರದ ನಟರಾಜ ರಸ್ತೆಯ ನ್ಯೂ ಸೈಯದ್ ಸೈಕಲ್ ಸ್ಟೋರ್ ಎದುರಿಗೆ ಸಂಗನಮತ ಮಾಡಿಕೊಂಡು ಬಂದವರು, ಅವರಲ್ಲಿ ಆರೋಪಿ 1 ನೇಯವನು ಪಿರ್ಯಾದಿಗೆ ‘ಸೈಕಲ್ ರಿಪೇರಿ ಸರಿಯಾಗಿ ಮಾಡಲು ಬರುವುದಿಲ್ಲ’ ಅಂತಾ ಹೇಳಿದವನು, ಆರೋಪಿತರೆಲ್ಲರೂ ಪಿರ್ಯಾದಿಗೆ ‘ಬೋಳಿ ಮಗನೇ, ಸೂಳೆ ಮಗನೇ’ ಅಂತಾ ಅವಾಚ್ಯವಾಗಿ ಬೈದು ದೂಡಿ ಹಾಕಿ, ಕೈಯಿಂದ ಮೈಮೇಲೆ ಹೊಡೆಯುತ್ತಿರುವಾಗ ಬಿಡಿಸಲು ಬಂದ ಪಿರ್ಯಾದಿಯ ತಂದೆ ಮಹ್ಮದ್ ಸಯೀಬ್ ಸೈಯ್ಯದ್ ಇವರಿಗೂ ಸಹ ದೂಡಿ ಹಾಕಿದ್ದಲ್ಲದೇ, ಆರೋಪಿ 1 ನೇಯವನು ಪಿರ್ಯಾದಿಗೆ ಅಲ್ಲಿಯೇ ಇದ್ದ ಸೈಕಲ್ ಪಂಪ್ ನಿಂದ ಎಡಗೈ ಭುಜಕ್ಕೆ, ತಲೆಗೆ ಹಾಗೂ ಹೊಟ್ಟೆಯ ಮೇಲೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಅಷ್ಟರಲ್ಲಿ ಜನರು ಬರುವುದನ್ನು ನೋಡಿ ‘ಈ ದಿನ ಉಳಿದುಕೊಂಡಿದ್ದೀಯಾ. ಇನ್ನೊಂದು ದಿನ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಹ್ಮದ್ ಅಬ್ಜಲ್ ತಂದೆ ಮಹ್ಮದ್ ಸಯೀಬ್ ಸೈಯ್ಯದ್, ಪ್ರಾಯ-28 ವರ್ಷ, ವೃತ್ತಿ-ಸೈಕಲ್ ರಿಪೇರಿ, ಸಾ|| ಮುಸ್ಲಿಂ ಗಲ್ಲಿ, ತಾ: ಶಿರಸಿ ರವರು ದಿನಾಂಕ: 03-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸೀನಾ ತಂದೆ ಮಂಜು ಪೂಜಾರಿ, ಪ್ರಾಯ-46 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಎಕ್ಕಂಬಿ, ಪೋ: ಬಿಸ್ಲಕೊಪ್ಪ, ತಾ: ಶಿರಸಿ. ಈತನು ದಿನಾಂಕ: 03-04-2021 ರಂದು 11-45 ಗಂಟೆಯ ಸುಮಾರಿಗೆ ಶಿರಸಿ ತಾಲೂಕಿನ ಬಿಸ್ಲಕೊಪ್ಪ ಊರಿನ ಆರೋಪಿತನಿಗೆ ಸೇರಿದ ತನ್ನ ಮಾರುತಿ ಹೊಟೇಲ್ ಎದುರಿನಲ್ಲಿ ಮದ್ಯಪಾನ ಕುಡಿಯಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ ದಾಳಿ ಮಾಡಿ, ದಾಳಿಯ ಕಾಲಕ್ಕೆ 1). Haywards Cheers Whisky ಹೆಸರಿನ 90 ML ಅಳತೆಯ ಪ್ಯಾಕೆಟ್ ಗಳು-09, ತಲಾ ಒಂದಕ್ಕೆ 35.13/- ರೂಪಾಯಿಗಳಂತೆ ಒಟ್ಟೂ ಅ||ಕಿ|| 316.17/- ರೂಪಾಯಿ, 2). Haywards Cheers Whisky ಹೆಸರಿನ 90 ML ಅಳತೆಯ ಖಾಲಿ ಪ್ಯಾಕೆಟ್ ಗಳು-04, ಅ||ಕಿ|| 00.00/- ರೂಪಾಯಿ, 3) ಮದ್ಯಪಾನ ಕುಡಿಯಲು ಉಪಯೋಗಿಸಿದ Use & through Plastic Glass-04, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಂಜಾನಾಯ್ಕ್ ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 03-04-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿದ್ಯಾಪತಿ ತಂದೆ ಗಣಪತಸಾ ಹಬೀಬ, ಸಾ|| ಕಂಚಗಾರ ಗಲ್ಲಿ, ಶಂಕರ ಮಠದ ಹತ್ತಿರ, ಹುಬ್ಬಳ್ಳಿ (ಹುಂಡೈ ಐ-10 ಕಾರ್ ನಂ: ಕೆ.ಎ-63/ಎಮ್-2274 ನೇದರ ಚಾಲಕ). ಈತನು ದಿನಾಂಕ: 31-03-2021 ರಂದು ತನ್ನ ಹುಂಡೈ ಐ-10 ಕಾರ್ ನಂ: ಕೆ.ಎ-63/ಎಮ್-2274 ನೇದರಲ್ಲಿ ಹುಬ್ಬಳ್ಳಿಯ ತಮ್ಮ ಗೆಳೆಯರಾದ ದತ್ತುಸಾ ಶಾಲಗಾರ ಹಾಗೂ ಗಂಗಾಧರ ಉಮ್ಮಚಗಿ ರವರೊಂದಿಗೆ ಸೇರಿಕೊಂಡು ಗೋವಾ ಪ್ರವಾಸ ಮಾಡಿಕೊಂಡು ಬರಲು ಹೋಗಿ, ಪ್ರವಾಸ ಮಾಡಿಕೊಂಡು ದಿನಾಂಕ: 02-04-2021 ರಂದು ತಮ್ಮ ಕಾರನ್ನು ಚಲಾಯಿಸಿಕೊಂಡು ಗೋವಾದಿಂದ ಮರಳಿ ಬರುತ್ತಿರುವಾಗ ತಿರುವುಗಳಿಂದ ಕೂಡಿದ ಪಣಜಿ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-4(ಎ) ರಲ್ಲಿ ಬರುವ ಅನಮೋಡದ ಗೌಡಸಡಾ ಗ್ರಾಮದ ಹತ್ತಿರುವ ಇರುವ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸಾಯಂಕಾಲ 17-00 ಗಂಟೆಯ ಸುಮಾರಿಗೆ ತಮ್ಮ ಕಾರನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ತಮ್ಮ ಕಾರ್ ಮೇಲಿನ ನಿಯಂತ್ರಣ ಕಳೆದುಕೊಂಡು ಕಾರನ್ನು ಕಾಂಕ್ರೀಟ್ ರಸ್ತೆಯಿಂದ ಇಳಿಸಿ ಒಮ್ಮೇಲೆ ಬ್ರೇಕ್ ಹಾಕಿದ್ದು, ಕಾರಿನಲ್ಲಿದ್ದ ದತ್ತುಸಾ ಶಾಲಗಾರ ರವರ ಬಲಗಾಲಿಗೆ ಪೆಟ್ಟು ಹಾಗೂ ಗಂಗಾಧರ ಉಮ್ಮಚಗಿ ರವರಿಗೆ ಎದೆಯ ಭಾಗದಲ್ಲಿ ಒಳ ಪೆಟ್ಟಾಗಿದ್ದು, ಅಲ್ಲದೇ ಆರೋಪಿ ಚಾಲಕನು ತನಗೂ ಸಹ ತಲೆಗೆ, ಬಲಗೈ ಹಾಗೂ ಬಲಗಾಲಿಗೆ ತೀವೃ ಸ್ವರೂಪದ ದುಃಖಾಪತ್ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರತ್ನರಾಜ ತಂದೆ ಪರಶುರಾಮಸಾ ಹಬೀಬ, ಪ್ರಾಯ-36 ವರ್ಷ, ವೃತ್ತಿ-ವ್ಯವಹಾರ, ಸಾ|| ಶಬ್ರಿನಗರ, ಕನಕೂರ ಲೇಔಟ್, ಕೇಶವಾಪುರ, ತಾ: ಹುಬ್ಬಳ್ಳಿ, ಜಿ: ಧಾರವಾಡ ರವರು ದಿನಾಂಕ: 03-04-2021 ರಂದು 22-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-04-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸುಮತಿ ಗಂಡ ರತ್ನಾಕರ ನಾಯಕ್, ಪ್ರಾಯ-62 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕುಂಟಕಣಿ, ತಾ: ಅಂಕೋಲಾ. ನಮೂದಿತೆ ಮೃತಳು ಸುಮಾರು 20 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವಳು, ದಿನಾಂಕ: 03-04-2021 ರಂದು ಮಧ್ಯಾಹ್ನ 12-15 ಗಂಟೆಯಿಂದ 16-00 ಗಂಟೆಯ ನಡುವಿನ ಅವದಿಯಲ್ಲಿ ಅಂಕೋಲಾ ತಾಲೂಕಿನ ಕುಂಟಗಣಿ ಗ್ರಾಮದ ಶ್ರೀ ಶಂಕರ ಹೆಗಡೆಯವರ ತೋಟದಲ್ಲಿರುವ ಬಾವಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗುರು ತಂದೆ ರತ್ನಾಕರ ನಾಯಕ್, ಪ್ರಾಯ-33 ವರ್ಷ, ವೃತ್ತಿ-ಪೊಲೀಸ್ ಕಾನ್ಸಟೇಬಲ್, ಸಾ|| ಕುಂಟಕಣಿ, ತಾ: ಅಂಕೋಲಾ ರವರು ದಿನಾಂಕ: 03-04-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸತೀಶ ತಂದೆ ಶ್ರೀಧರ ನಾಯ್ಕ, ಪ್ರಾಯ-29 ವರ್ಷ, ಸಾ|| ಮಾಸ್ತಿ ನಗರ, ಮಂಕಿ, ತಾ: ಹೊನ್ನಾವರ. ನಮೂದಿತ ಮೃತನು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು, ಮಾನಸಿಕವಾಗಿಯೂ ಕೂಡ ಸದೃಢನಾಗಿರಲಿಲ್ಲ. ಸದ್ರಿಯವನಿಗೆ ಶಿವಮೊಗ್ಗದ ಶ್ರೀಧರ ನರ್ಸಿಂಗ್ ಹೋಮ್ ನಲ್ಲಿ ಕುಡಿತದ ಚಟ ಬಿಡಿಸಲು ಔಷಧೋಪಚಾರ ಮಾಡಿಸಿಕೊಂಡು ಬಂದಿದ್ದು, ಔಷಧ ತೆಗೆದುಕೊಳ್ಳುತ್ತಾ ಇದ್ದವನು, ದಿನಾಂಕ: 03-04-2021 ರಂದು ರಾತ್ರಿ 21-00 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ಮೇಲ್ಛಾವಣಿಗೆ ಹತ್ತಲು ಏಣಿಗೆ ಕಟ್ಟಿದ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದವನಿಗೆ, ಪಿರ್ಯಾದಿ ಮತ್ತು ಮೃತನ ತಂದೆ ಶ್ರೀಧರ ನಾಯ್ಕ ರವರು ಉಪಚರಿಸಿ, ಹೊನ್ನಾವರದ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ಉಪಚಾರಕ್ಕೆ ದಾಖಲಿಸಿದ್ದು, ಉಪಚಾರ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ಚಹಾ ಅಂಗಡಿ ವ್ಯಾಪಾರ, ಸಾ|| ಮಾಸ್ತಿನಗರ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 03-04-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 05-04-2021 05:51 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080