ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-04-2022

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2022, ಕಲಂ: 87 ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಶೋಕ ತಂದೆ ರಾಮ ಪಟಗಾರ, ಪ್ರಾಯ-50 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ದುಗ್ಗುಕೇರಿ, ಬರ್ಗಿ, ತಾ: ಕುಮಟಾ, 2]. ರಾಮಚಂದ್ರ ತಂದೆ ಉತ್ತಮ ಗಾವಡಿ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಾಲಿಗದ್ದೆ, ಬರ್ಗಿ, ತಾ: ಕುಮಟಾ, 3]. ಮಹಾದೇವ ತಂದೆ ಸುಬ್ರಾಯ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಕುರಿಗದ್ದೆ, ಬರ್ಗಿ, ತಾ: ಕುಮಟಾ, 4]. ಗಣಪತಿ ತಂದೆ ಬಾಗಲು ಪಟಗಾರ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ರೈಲ್ವೇ ರೋಡ್ ಹತ್ತಿರ, ಬರ್ಗಿ, ತಾ: ಕುಮಟಾ, 5]. ರಾಜು ತಂದೆ ಬಂಗಾರಿ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಟೈಲ್ಸ್ ಕೆಲಸ, ಸಾ|| ಬರ್ಗಿ, ತಾ: ಕುಮಟಾ, 6]. ರಮೇಶ ತಂದೆ ಕೃಷ್ಣ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಗುತ್ತಿಗೆ ಕೆಲಸ, ಸಾ|| ಹೊಲಗೇರಿ, ಬರ್ಗಿ, ತಾ: ಕುಮಟಾ, 7]. ನಾರಾಯಣ ತಂದೆ ತಿಮ್ಮಾ ಪಟಗಾರ, ಪ್ರಾಯ-65 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೊಲಗೇರಿ, ಬರ್ಗಿ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 03-04-2022 ರಂದು 19-15 ಗಂಟೆಯ ಸುಮಾರಿಗೆ ಬರ್ಗಿ ಗ್ರಾಮದ ಹೊಸಗದ್ದೆಯ ಜಟಕೇಶ್ವರ ದೇವಸ್ತಾನದ ಹತ್ತಿರ ಗದ್ದೆ ಜಮೀನಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 1). ನಗದು ಹಣ 4,820/- ರೂಪಾಯಿ, 2). 52 ಇಸ್ಪೀಟ್ ಎಲೆ (ಅ||ಕಿ|| 00.00/- ರೂಪಾಯಿ), 3). ಮಂಡಕ್ಕೆ ಹಾಸಿದ ಬಿಳಿ ನಮೂನೆಯ ಪ್ಲಾಸ್ಟಿಕ್ ಚೀಲ-01, (ಅ||ಕಿ|| 00.00/- ರೂಪಾಯಿ), 4). ಮೇಣದ ಬತ್ತಿ-02 (ಅ||ಕಿ|| 00.00/- ರೂಪಾಯಿ) ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸುಧಾ ಟಿ. ಅಘನಾಶಿನಿ, ಡಬ್ಲ್ಯೂ.ಪಿ.ಎಸ್.ಐ (ತನಿಖೆ), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 03-04-2022 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2022, ಕಲಂ: 279, 338 ಐಪಿಸಿ ಹಾಗೂ 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಟಿ.ವಿ.ಎಸ್ ಎಕ್ಸೆಲ್ ಸ್ಕೂಟರ್ ನೇದರ ಸವಾರನಾಗಿದ್ದು, ಹೆಸರು ವಿಳಾಸ ಮತ್ತು ಸ್ಕೂಟರ್ ನಂಬರ ತಿಳಿದು ಬಂದಿರುವುದಿಲ್ಲ. ದಿನಾಂಕ: 02-04-2022 ರಂದು 12-40 ಗಂಟೆಯ ಸುಮಾರಿಗೆ ಮೂರ್ಕಟ್ಟಾ ಸತ್ಯನಾರಾಯಣ ಸ್ಟೋರ್ಸ್ ಎದುರಿಗೆ ಪಿರ್ಯಾದಿಯ ಅತ್ತಿಗೆ ಶ್ರೀಮತಿ ರುಕ್ಸಾನ್ ಕೋಂ. ಮಹಮ್ಮದ್ ರಫೀಕ್ ಸಾಬ್, ಪ್ರಾಯ-50 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಹಳಕಾರ, ಮದ್ಗುಣಿ, ತಾ: ಕುಮಟಾ ಇವರು ರಸ್ತೆ ದಾಟುತ್ತಿರುವಾಗ ನಮೂದಿತ ಆರೋಪಿತನು ತನ್ನ ಟಿ.ವಿ.ಎಸ್ ಎಕ್ಸೆಲ್ ಸ್ಕೂಟರನ್ನು ಮೂರ್ಕಟ್ಟಾ ಕಡೆಯಿಂದ ಪಂಡಿತ ಆಸ್ಪತ್ರೆ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಅತ್ತಿಗೆ ರಸ್ತೆ ದಾಟುತ್ತಿದ್ದುದನ್ನು ದೂರದಿಂದ ನೋಡಿಯೂ ಕೂಡ ತನ್ನ ಸ್ಕೂಟರಿನ ವೇಗವನ್ನು ಕಡಿಮೆ ಮಾಡದೇ ಅದೇ ವೇಗದಲ್ಲಿ ಚಲಾಯಿಸಿಕೊಂಡು ಬಂದು ಶ್ರೀಮತಿ ರುಕ್ಸಾನ್ ಇವಳಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ರಸ್ತೆಯ ಮೇಲೆ ಬೀಳುವಂತೆ ಮಾಡಿ ಅವಳ ಬಲಗಾಲಿನ ಪಾದಕ್ಕೆ ಗಾಯ ಪಡಿಸಿ, ಬಲಗಾಲಿನ ಮೊಣಗಂಟಿಗೆ ಒಳನೋವು ಪಡಿಸಿ, ಬಲಗೈ ಮೊಣಗಂಟಿನ ಕೆಳಗೆ ಮೂಳೆ ಮುರಿದು ಭಾರೀ ಗಾಯ ಪಡಿಸಿ, ಗಾಯಾಳುವಿಗೆ ಉಪಚರಿಸದೇ ಅಪಘಾತದ ಮಾಹಿತಿಯನ್ನು ಪೋಲಿಸರಿಗೆ ನೀಡದೇ, ತನ್ನ ಸ್ಕೂಟರನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ್ ಶಬ್ಬೀರ್ ತಂದೆ ಜಾಫರ್ ಸಾಬ್, ಪ್ರಾಯ-31 ವರ್ಷ, ವೃತ್ತಿ-ಪಂಕ್ಚರ್ ಅಂಗಡಿಯಲ್ಲಿ ಕೆಲಸ, ಸಾ|| ಹಳಕಾರ, ಮದ್ಗುಣಿ, ಮಸೀದಿ ಹತ್ತಿರ, ತಾ: ಕುಮಟಾ ರವರು ದಿನಾಂಕ: 03-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನೋದ ಸಿ. ತಂದೆ ಚಂದ್ರಶೇಖರ ಎಸ್. ಆರ್, ಸಾ|| ಬೆಂಗಳೂರು (ಕಾರ್ ನಂ: ಕೆ.ಎ-02/ಎಮ್.ಇ-2226 ನೇದರ ಚಾಲಕ). ದಿನಾಂಕ: 03-04-2022 ರಂದು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-8269 ನೇದರ ಸವಾರನಾದ ಶ್ರೀ ರಂಜೀತ ತಂದೆ ಪಾಂಡುರಂಗ ಅಂಬಿಗ, ಪ್ರಾಯ-27 ವರ್ಷ, ಸಾ|| ಕರ್ಕಿ, ತೊಪ್ಪಲಕೇರಿ, ತಾ: ಹೊನ್ನಾವರ ಈತನು ತನ್ನ ಮೋಟಾರ್ ಸೈಕಲನ್ನು ಹೊನ್ನಾವರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಕೆಳಗಿನೂರು ಚರ್ಚ್ ಎದುರಿಗೆ ಬಂದವನು, ರಸ್ತೆಯ ಮಧ್ಯದ ಡಿವೈಡರ್ ತುದಿಯ ಹತ್ತಿರ ಮೋಟಾರ್ ಸೈಕಲನ್ನು ತಿರುಗಿಸಿಕೊಂಡು ಪುನಃ ಹೊನ್ನಾವರ ಕಡೆಗೆ ಹೋಗಲು ಮೋಟಾರ್ ಸೈಕಲಿಗೆ ಇಂಡಿಕೇಟರ್ ಹಾಕಿ ತಿರುಗಿಸುತ್ತಿರುವಾಗ ನಮೂದಿತ ಆರೋಪಿತನು ಅದೇ ರಸ್ತೆಯಲ್ಲಿ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗಲು ತನ್ನ ಕಾರ್ ನಂ: ಕೆ.ಎ-02/ಎಮ್.ಇ-2226 ನೇದನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ವಾಹನಗಳ ನಡುವೆ ಅಂತರವನ್ನು ಕಾಯ್ದುಕೊಳ್ಳದೇ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಂಜಿತನ ಬಲಗಾಲಿಗೆ ಭಾರೀ ಗಾಯನೋವು ಪಡಿಸಿದ್ದಲ್ಲದೇ, ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಹಾಗೆಯೇ ಮುಂದೆ ಚಲಾಯಿಸಿಕೊಂಡು ಹೋಗಿ ರಸ್ತೆಯ ಬದಿಯ ಗಟಾರದಲ್ಲಿ ಇಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಂದೇಶ ತಂದೆ ಸೀತಾರಾಮ ಅಂಬಿಗ, ಪ್ರಾಯ-27 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತನ್ಮಡ್ಗಿ, ಮುಗ್ವಾ, ಸುರಕಟ್ಟೆ, ತಾ: ಹೊನ್ನಾವರ ರವರು ದಿನಾಂಕ: 03-04-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವಪ್ಪ ತಂದೆ ಮಾರುತಿ ತೋಗರಿ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ಹೊಂಬಳ, ಪೋ: ಹೊಂಬಳ, ತಾ&ಜಿ: ಗದಗ (ವಿ.ಆರ್.ಎಲ್ ಕಂಪನಿಯ ಲಾರಿ ನಂ: ಕೆ.ಎ-25/ಎ.ಎ-1774 ನೇದರ ಚಾಲಕ). ಈತನು ದಿನಾಂಕ: 03-04-2022 ರಂದು ಬೆಳಗಿನ ಜಾವ 04-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ತಾಳಿಕುಂಬ್ರಿ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ವಿ.ಆರ್.ಎಲ್ ಕಂಪನಿಯ ಲಾರಿ ನಂ: ಕೆ.ಎ-25/ಎ.ಎ-1774 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನದ ನಿಯಂತ್ರಣ ಕಳೆದುಕೊಂಡು ಅದೇ ವೇಳೆಗೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತನ್ನ ಸೈಡಿನಲ್ಲಿ ನಿಧಾನವಾಗಿ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿ ನಂ: ಕೆ.ಎ-06/ಎ.ಎ-6263 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ಎಡಗೈಗೆ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹನುಮಂತ ತಂದೆ ಶಿವಪ್ಪ ರಘುನಾಥಹಳ್ಳಿ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಕಲಕಪ್ಪ, ಪೋ: ಪಾಳ, ತಾ: ಮುಂಡಗೋಡ ರವರು ದಿನಾಂಕ: 03-04-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿಲೇಶ್ ತಂದೆ ಸುರೇಶ ಶೆಟ್ಟಿ, ಪ್ರಾಯ-30, ವೃತ್ತಿ-ಇಂಜಿನಿಯರಿಂಗ್ ಕೆಲಸ, ಸಾ|| ಐನಾಪುರ, ಪೋ: ಐನಾಪುರ, ತಾ: ಅಥಣಿ, ಜಿ: ಬೆಳಗಾವಿ, ಹಾಲಿ ಸಾ|| ದಾಂಡೇಲಿ (ಕಾರ್ ನಂ: ಎಮ್.ಎಚ್-09/ಎಫ್.ಕ್ಯೂ-3788 ನೇದರ ಚಾಲಕ). ಈತನು ದಿನಾಂಕ: 03-04-2022 ರಂದು 16-45 ಗಂಟೆಗೆ ಕಾರ್ ನಂ: ಎಮ್.ಎಚ್-09/ಎಫ್.ಕ್ಯೂ-3788 ನೇದನ್ನು ಸಿದ್ದಾಪುರ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಕೋಣನಬಿಡ್ಕಿ ಕ್ರಾಸ್ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಹಿಂದಿಕ್ಕಿ ಓವರಟೇಕ್ ಮಾಡಿಕೊಂಡು ಬಂದವನು, ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಶಿರಸಿ ಕಡೆಯಿಂದ ಸಿದ್ದಾಪುರ ಕಡೆಗೆ ಹೊರಟಿದ್ದ ಟಿಪ್ಪರ್ ಲಾರಿ ನಂ: ಕೆ.ಎ-15/9528 ನೇದರ ಹಿಂಬದಿಯ ಬಲಬದಿ ಟಾಯರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನಗಳನ್ನು ಜಖಂಗೊಳಿಸಿ, ತಾನು ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಪಿರ್ಯಾದಿ ಹಾಗೂ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುರೇಶ ಶೆಟ್ಟಿ ಇವರಿಗೆ ಎಡಗೈಗೆ ಗಂಭೀರ ಸ್ವರೂಪದ ಹಾಗೂ ಶ್ರೀಮತಿ ವಂದನಾ ಶೆಟ್ಟಿ, ಶ್ರೀಮತಿ ಪೂರ್ವಾ ಶೆಟ್ಟಿ ಇವರಿಗೆ ಸಾದಾ ಸ್ವರೂಪ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದೀಪಕ ತಂದೆ ಶೇಖರ್ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| 16ನೇ ಮೈಲಗಲ್, ಪೋ: ಸಂಪಗೋಡ, ತಾ: ಸಿದ್ದಾಪುರ ರವರು ದಿನಾಂಕ: 03-04-2022 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಪ್ರಭಾಕರ ಪಾಲೇಕರ, ಸಾ|| ಶಿರಸಿ (ಕಾರ್ ನಂ: ಕೆ.ಎ-19/ಪಿ-5265 ನೇದರ ಚಾಲಕ). ಈತನು ದಿನಾಂಕ: 03-04-2022 ರಂದು 13-40 ಗಂಟೆಗೆ ತನ್ನ ಕಾರ್ ನಂ: ಕೆ.ಎ-19/ಪಿ-5265 ನೇದನ್ನು ಹೊಸಕೊಪ್ಪ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಅಚನಳ್ಳಿ ಕೆರೆ ಕ್ರಾಸ್ ತಿರುವಿನ ರಸ್ತೆಯಲ್ಲಿ ತನ್ನ ಕಾರಿನ ವೇಗದ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ, ಪಿರ್ಯಾದಿಯವರು ಶಿರಸಿ ಕಡೆಯಿಂದ ಹೊಸಕೊಪ್ಪ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1323 ನೇದಕ್ಕೆ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಶ್ರೀಮತಿ ಮುಕ್ತಾ ಕೋಂ. ಪ್ರಕಾಶ ಪಾಲೇಕರ, ಸಾ|| ಶಿರಸಿ ಇವರಿಗೆ ಬಲಗೈ, ಹಣೆಗೆ ಹಾಗೂ ಕೈಗಳಿಗೆ ಸಾದಾ ಸ್ವರೂಪದ ರಕ್ತದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಸಹ ಹಣೆಗೆ, ಬಲಗೈ, ಎಡಗೈ ಹಾಗೂ ಕಾಲುಗಳಿಗೆ ರಕ್ತದ ಗಾಯನೋವು ಪಡಿಸಿಕೊಂಡು, ಕಾರನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಸೋಮಲಿಂಗಪ್ಪ ತಂದೆ ಕರಬಸಪ್ಪ ವರದಾನಿ, ಪ್ರಾಯ-49 ವರ್ಷ, ವೃತ್ತಿ-ಚಾಲಕ ಕಂ ನಿರ್ವಾಹಕರು (ಬಿಲ್ಲೆ ಸಂಖ್ಯೆ: 544), ಸಾ|| ದಾಸ್ತಿಕೊಪ್ಪ, ತಾ: ಕಲಘಟಗಿ, ಜಿ: ಧಾರವಾಡ, ಹಾಲಿ ಸಾ|| ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಬಸ್ ಡಿಪೋ, ಶಿರಸಿ ಘಟಕ, ತಾ: ಶಿರಸಿ ರವರು ದಿನಾಂಕ: 03-04-2022 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-04-2022

at 00:00 hrs to 24:00 hrs

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಚಂದ್ರ ತಂದೆ ಸೋಮ ಪೂಜಾರಿ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾತ್ರಿಜಡ್ಡಿ ಮೊಗದ್ದೆ, ಜಂಬುತ, ಪೋ: ಸೋಂದಾ, ತಾ: ಶಿರಸಿ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 02-04-2022 ರಂದು ಬೆಳಿಗ್ಗೆ ಅಣ್ಣ ನಾರಾಯಣ, ತಮ್ಮನ ಮಕ್ಕಳಾದ ಲೋಹಿತ್, ಅಭಿಜೀತ್, ಅಕ್ಷಯ ಹಾಗೂ ಊರಿನವರಾದ ರಘು, ಗುರು, ವಿಜಯಕಾಂತ, ಮಾಬ್ಲೇಶ್ವರ, ವಿನಾಯಕ, ವಾಸು ರಾಮಚಂದ್ರ ಇವರೊಂದಿಗೆ ಸೇರಿಕೊಂಡು ಮೊಗದ್ದೆ ಸಮೀಪದ ಪಟ್ಟಣ ಹೊಳೆಯಲ್ಲಿ ಮೀನು ಹಿಡಿಯಲು ಹೋಗಿ ನೀರಿನಲ್ಲಿ ಅಡ್ಡವಾಗಿ ಒಂದು ಬದಿಯಿಂದ ಇನ್ನೊಂದು ಬದಿಗೆ ಕಟ್ಟಿದ ಬಲೆಯು ನೀರಿನಲ್ಲಿದ್ದ ಮರದ ಬಡ್ಡಿಗೆ ಸಿಲುಕಿಕೊಂಡಿದ್ದನ್ನು ತಪ್ಪಿಸಲು ಈಜಾಡಿಕೊಂಡು ಒಳಗೆ ಹೋದವನು, ಸಂಜೆ 04-30 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಆಳವಾದ ನೀರಿನಲ್ಲಿ ಮುಳಗಿದವನು, ಮೇಲೆ ಏಳಲಾಗದೇ ಮೃತಪಟ್ಟು, ದಿನಾಂಕ: 03-04-2022 ರಂದು ಬೆಳಿಗ್ಗೆ 09-00 ಗಂಟೆಗೆ ಹೊರಗೆ ಬಂದು ಶವವಾಗಿ ಸಿಕ್ಕಿದ್ದು ಇರುತ್ತದೆ. ಇದರ ಹೊರತು ತನ್ನ ತಮ್ಮನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಸೋಮ ಪೂಜಾರಿ, ಪ್ರಾಯ-54 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾತ್ರಿಜಡ್ಡಿ ಮೊಗದ್ದೆ, ಜಂಬುತ, ಪೋ: ಸೋಂದಾ, ತಾ: ಶಿರಸಿ ರವರು ದಿನಾಂಕ: 03-04-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾಗನಾಥ ತಂದೆ ಭೀಮರಾವ್ ಜಾಧವ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರೈಲ್ವೇ ಕಾಲೋನಿ, ಕ್ಯಾಸರಲಾಕ್, ತಾ: ಜೋಯಿಡಾ. ಈತನು ಕಳೆದ 2-3 ವರ್ಷಗಳಿಂದ ಹುಬ್ಬಳ್ಳಿಯ ಕೇಶ್ವಾಪುರದ ಕಿಂಗ್ಸಸ್ಕೀಡ್ ಪ್ರೀ ಸ್ಕೂಲಿನಲ್ಲಿ ವಾಚಮೆನ್ ಕೆಲಸ ಮಾಡಿಕೊಂಡು ಇದ್ದವನು, ದಿನಾಂಕ: 02-04-2022 ರಂದು ತನ್ನ ಸ್ನೇಹಿತರನ್ನು ಕರೆದುಕೊಂಡು ತನ್ನ ಸ್ವಂತ ಊರಾದ ಕ್ಯಾಸರಲಾಕಿಗೆ ಬಂದವನು, ದಿನಾಂಕ: 03-04-2022 ರಂದು ತನ್ನ ಸ್ನೇಹಿತರೊಂದಿಗೆ ತಮ್ಮ ಮೋಟಾರ್ ಸೈಕಲಗಳನ್ನು ವಾಶ್ ಮಾಡಿಕೊಂಡು ಹಾಗೂ ಸ್ನಾನ ಮಾಡಿಕೊಂಡು ಬರಲು ಕ್ಯಾಸರಲಾಕದ ಮಾತಾರವಾಡ ನದಿಯಲ್ಲಿ ಈಜಲು ಹೋದವನು, ಮಧ್ಯಾಹ್ನ 12-40 ಗಂಟೆಯಿಂದ 01-30 ಗಂಟೆಯ ನಡುವಿನ ಅವಧಿಯಲ್ಲಿ ತನಗೆ ಸುಸ್ತಾಗಿ ಈಜಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಹುಲ ತಂದೆ ದೊಂಡಿಬಾ ಜಾಧವ, ಪ್ರಾಯ-54 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರೈಲ್ವೇ ಕಾಲೋನಿ, ಕ್ಯಾಸರಲಾಕ್, ತಾ: ಜೋಯಿಡಾ ರವರು ದಿನಾಂಕ: 03-04-2022 ರಂದು 15-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 14-04-2022 07:50 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080