ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-08-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 122/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಿರಣ ತಂದೆ ವೆಂಕಟೇಶ ಅಜೋಡ್ಡಿ, ಪ್ರಾಯ-21 ವರ್ಷ, ವೃತ್ತಿ-ವಿ.ಆರ್ ಕಂಪನಿಯಲ್ಲಿ ಕೆಲಸ, ಸಾ|| ಬೈರಿದೇವರಿಕೊಪ್ಪ, ತಾ: ಹುಬ್ಬಳ್ಳಿ ಜಿ: ಧಾರವಾಡ (ಮೋಟಾರ್ ಸೈಕಲ್ ನಂ: ಕೆ.ಎ–25/ಎಚ್.ಬಿ-9191 ನೇದರ ಚಾಲಕ). ಈತನು ದಿನಾಂಕ: 03-08-2021 ರಂದು ಬೆಳಿಗ್ಗೆ ಸಮಯ ಸುಮಾರು 11-45 ಗಂಟೆಗೆ ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ–25/ಎಚ್.ಬಿ-9191 ನೇದನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗಳಾದ 1). ಶ್ರೀಮತಿ ಲಕ್ಷ್ಮೀ ಕೋಂ. ಕಾಡಪ್ಪ ಹರಿಜನ, ಸಾ|| ಹದ್ದಿನಸರ, ಪೋ: ಕಿರವತ್ತಿ, ತಾ: ಯಲ್ಲಾಪುರ, 2). ಶ್ರೀಮತಿ ಗೀತಾ ಕೋಂ. ದಶರಥ ಹರಿಜನ, ಸಾ|| ಹದ್ದಿನಸರ, ಪೋ: ಕಿರವತ್ತಿ, ತಾ: ಯಲ್ಲಾಪುರ ಇವರಿಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಪಕ್ಕದಲ್ಲಿ ಬಿದ್ದು, ಮೋಟಾರ್ ಸೈಕಲ್ ಹಿಂಬದಿಯ ಸೀಟಿನಲ್ಲಿ ಕುಳಿತ ಸಾಕ್ಷಿದಾರ ಶ್ರೀ ನಾಗರಾಜ ಅಲಿಯಾಸ್ ರಾಜು ತಂದೆ ಶೇಖಪ್ಪ ತಡಸ, ಸಾ|| ತಬಕದ, ಹೊನ್ನಾಳ್ಳಿ, ತಾ: ಕಲಘಟಗಿ, ಜಿ: ಧಾರವಾಡ ಇವರ ಮೈ ಕೈಗೆ ಗಾಯನೋವು ಪಡಿಸಿ, ಸಾಕ್ಷಿದಾರರಾದ ಶ್ರೀಮತಿ ಲಕ್ಷ್ಮೀ ಇವರ ಬಲಗಾಲಿನ ಮಂಡಿಯ ಕೆಳಗೆ, ಬೆನ್ನಿಗೆ, ಮೈ ಕೈಗೆ ಮತ್ತು ಶ್ರೀಮತಿ ಗೀತಾ ರವರಿಗೆ ಬಲಗಣ್ಣಿನ ಹತ್ತಿರ, ಮೈ ಕೈಗೆ ಗಾಯನೋವು ಪಡಿಸಿದ್ದಲ್ಲದೇ ಹಾಗೂ ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಮೈ ಕೈಗೆ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಮೀತ ತಂದೆ ಅಶೋಕ ಹರಿಜನ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಹದ್ದಿನಸರ, ಪೋ: ಕಿರವತ್ತಿ, ತಾ: ಯಲ್ಲಾಪುರ ರವರು ದಿನಾಂಕ: 03-08-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 406, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಈರಪ್ಪ ತಂದೆ ನಾಗರಾಜ ಬೋವಿವಡ್ಡರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಣೇಶಪುರ, ತಾ: ಮುಂಡಗೋಡ. ಈತನು ಪಿರ್ಯಾದಿಗೆ ಸರಕಾರದಿಂದ 22 ಲಕ್ಷ ರೂಪಾಯಿಯ ಮನೆಯನ್ನು ಕಟ್ಟಲು ಸಾಲ ಕೊಡಿಸುವುದಾಗಿ ಅದರಲ್ಲಿ 18 ಲಕ್ಷ ರೂಪಾಯಿ ಹಣ ಸಬ್ಸಿಡಿ ಮಾಡಿಸಿ ಕೊಡುವುದಾಗಿ ನಂಬಿಸಿ, ಪಿರ್ಯಾದಿಯಿಂದ ದಿನಾಂಕ: 10-04-2021 ರಂದು 10-00 ಗಂಟೆಯಿಂದ ದಿನಾಂಕ: 04-05-2021 ರಂದು 11-39 ಗಂಟೆಯ ಅವಧಿಯಲ್ಲಿ ಒಟ್ಟೂ 02 ಲಕ್ಷ ಹಣವನ್ನು ಪಡೆದು ಹಣವನ್ನು ಮರಳಿ ನೀಡದೇ ಮನೆಯನ್ನು ಕಟ್ಟಲು ಸಾಲವನ್ನು ಮಾಡಿಸಿ ಕೊಡದೇ ನಂಬಿಸಿ ಮೋಸ ಮಾಡಿದ್ದು, ಪಡೆದ ಹಣವನ್ನು ಆರೋಪಿತನು ಮರಳಿ ಕೊಡಬಹುದು ಅಂತಾ ಈವರೆಗೆ ಕಾಯ್ದು, ಈವರೆಗೂ ಹಣವನ್ನು ಮರಳಿ ನೀಡದೇ ಇರುವ ಬಗ್ಗೆ ಪಿರ್ಯಾದಿ ಶ್ರೀ ರಾಜು ತಂದೆ ರಾಮು ಲಮಾಣಿ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಗಡಿ, ತಾ: ಮುಂಡಗೋಡ ರವರು ದಿನಾಂಕ: 03-08-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 20(b)(ii)(A),8(C) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ 1]. ಗಂಗಪ್ಪ ತಂದೆ ಮಾಯಪ್ಪ ಪರಸಣ್ಣನವರ, ಪ್ರಾಯ-22 ವರ್ಷ, ಸಾ|| ಸಾಲಗಾಂವ, ತಾ: ಮುಂಡಗೋಡ, 2]. ಇಮ್ರಾನ್ ಅಹ್ಮದ್ ತಂದೆ ಮಕ್ಬುಲ್ ಅಹ್ಮದ್ ಬ್ಯಾಡಗಿ, ಪ್ರಾಯ-24 ವರ್ಷ, ಸಾ|| ನವನಗರ, ತಾ: ಹಾನಗಲ್, ಜಿ: ಹಾವೇರಿ, 3]. ಮಹಮದ್ ಇರ್ಪಾನ್ ತಂದೆ ಅಬ್ದುಲ್ ಖಾದರ್ ತಿಮ್ಮಾಪುರ, ಪ್ರಾಯ-24 ವರ್ಷ, ಸಾ|| ಮುಕ್ಯುಬುಲಿಯಾ ನಗರ, ಅಕ್ಕಿಆಲೂರು, ತಾ: ಹಾನಗಲ್, ಜಿ: ಹಾವೇರಿ, 4]. ಶೇಖ್ ಮಹ್ಮದ್ ಅಶ್ಫಾಕ್ ತಾಯಿ ಶಕೀಲಾ ಭಾನು, ಪ್ರಾಯ-38 ವರ್ಷ, ಸಾ|| ಕಾಸರಗೋಡ, ತಾ: ಹೊನ್ನಾವರ, ಹಾಲಿ ಸಾ|| ಅಕ್ಕಿಆಲೂರು, ತಾ: ಹಾನಗಲ್, ಜಿ: ಹಾವೇರಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 2, 3 ಹಾಗೂ 4 ನೇಯವರು ಅ||ಕಿ|| 20,000/- ರೂಪಾಯಿ ಬೆಲೆಬಾಳುವ ಸುಮಾರು 628 ಗ್ರಾಂ ಗಾಂಜಾ ಮಾದಕ ವಸ್ತುವನ್ನು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ, ಹಾನಗಲ್ ನಿಂದ ಸಾಗಾಟ ಮಾಡಿಕೊಂಡು ಬಂದು ಗಾಂಜಾವನ್ನು ಆರೋಪಿ 1 ನೇಯವನಿಗೆ ನೀಡುವ ಕಾಲಕ್ಕೆ ದಿನಾಂಕ: 03-08-2021 ರಂದು 18-15 ಗಂಟೆಗೆ ಪಿರ್ಯಾದಿಯವರು ತಮ್ಮ ಸಿಬ್ಬಂದಿ ಹಾಗೂ ಪತ್ರಾಂತಿಕ ಅಧಿಕಾರಿ ಮತ್ತು ಪಂಚರೊಂದಿಗೆ ಸೇರಿ ಸಾಲಗಾಂವ ಗ್ರಾಮದ ಬಸ್ ಸ್ಟಾಫ್ ಹತ್ತಿರ ಆರೋಪಿತರ ಮೇಲೆ ದಾಳಿ ಮಾಡಿದಾಗ ಆರೋಪಿ 1, 2, 3 ಮತ್ತು 4 ನೇಯವರು ದಸ್ತಗಿರಿಗೆ ಸಿಕ್ಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭುಗೌಡ ಡಿ. ಕೆ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 03-08-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-08-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 42/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿನಾಯಕ ತಂದೆ ಲಕ್ಷ್ಮಣ ಗೌಡ, ಪ್ರಾಯ-24 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಂತ್ರಿ, ತಾ: ಅಂಕೋಲಾ. ಈತನು ಪಿರ್ಯಾದಿಯ ಅಣ್ಣನಾಗಿದ್ದು, ದಿನಾಂಕ: 03-08-2021 ರಂದು 16-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬೊಗ್ರಿಬೈಲಿನಲ್ಲಿರುವ ತಮ್ಮ ಗದ್ದೆಯ ದನದ ಕೊಟ್ಟಿಗೆಯ ಅಟ್ಟದ ಮೇಲಿರುವ ಹುಲ್ಲನ್ನು ತೆಗೆಯುತ್ತಿರಬೇಕಾದರೆ ಯಾವುದೋ ವಿಷಜಂತು ಆತನ ಬಲಗೈ ಕಿರುಬೆರಳ ಹತ್ತಿರ ಕಚ್ಚಿದವನಿಗೆ ಉಪಚಾರದ ಕುರಿತು ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಾರವಾರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು 18-00 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ತನ್ನ ಅಣ್ಣನ ಸಾವಿನ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನವೀನ ತಂದೆ ಲಕ್ಷ್ಮಣ ಗೌಡ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಂತ್ರಿ, ತಾ: ಅಂಕೋಲಾ ರವರು ದಿನಾಂಕ: 03-08-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಅದ್ವಯ ತಂದೆ ದೀಪಕ ಜೈನ್, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| L-703, ಟಾವರ್ ನಂ: 06, Hibiscus Building, Adarsh Nagar, Palm Retreats, Bellandur, Bangalore. ಈತನು ದಿನಾಂಕ: 03-08-2021 ರಂದು ಮಧ್ಯಾಹ್ನ 15-15 ಗಂಟೆಯ ಸುಮಾರಿಗೆ ಗೋಕರ್ಣದ ಪ್ಯಾರಡೈಸ್ ಬೀಚ್ ಹತ್ತಿರ ತನ್ನ ಸ್ನೇಹಿತ ಸಿಮನ್ ಬಾಲ್ಡೆ ಹಾಗೂ ಇತರರೊಂದಿಗೆ ಸಮುದ್ರದಲ್ಲಿ ಈಜಾಡಲು ಹೋದವನು, ಈಜಾಡಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇನ್ನೊಬ್ಬ ಸಿಮನ್ ಬಾಲ್ಡೆ ಈತನು ಅಸ್ವಸ್ಥನಾಗಿ ಪ್ರಾಣಾಪಾಯದಿಂದ ಪಾರಾಗಿರುತ್ತಾನೆ. ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಕುಮಾರಿ: ಘಾನಿಯ ತಂದೆ ಅಫಿಜಲ್ ಸಿದ್ಧಿಕಿ, ಪ್ರಾಯ-26 ವರ್ಷ, ವೃತ್ತಿ-ಪರ್ತಕರ್ತೆ, ಸಾ|| ವಿಸ್ಸೆಂಟ್ ರೆಸಿಡೆನ್ಸಿ, ಪೂನಮ್ ನಗರ, ಆಂಧೇರಿ ಈಸ್ಟ್, ಮುಂಬಯಿ-400060 ರವರು ದಿನಾಂಕ: 03-08-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಘವೇಂದ್ರ ತಂದೆ ಜನಾರ್ಧನ ಶೇಟ್, ಪ್ರಾಯ-46 ವರ್ಷ, ವೃತ್ತಿ-ಬಾರ್ ನಲ್ಲಿ ಕೆಲಸ, ಸಾ|| ಕಾನಸೂರ, ತಾ: ಸಿದ್ದಾಪುರ. ಈತನು ಪಿರ್ಯಾದಿಯ ತಮ್ಮನಿದ್ದು, ಸದರಿಯವನು ಶಿರಸಿಯಲ್ಲಿ ಬಾರ್ ನಲ್ಲಿ ಕೆಲಸ ಮಾಡಿಕೊಂಡಿದ್ದವನು, ವಿಪರೀತ ಮದ್ಯವನ್ನು ಸೇವನೆ ಮಾಡುತ್ತಿದ್ದು, ಸರಿಯಾಗಿ ಮನೆಗೆ ಹೋಗದೇ, ಮದುವೆ ಸಹ ಆಗದೇ ಶಿರಸಿಯಲ್ಲಿಯೇ ಎಲ್ಲಾದರೂ ಉಳಿಯುತ್ತಿದವನು, ದಿನಾಂಕ: 02-08-2021 ರಂದು 12-00 ಗಂಟೆಗೆ ಶಿರಸಿ ನಗರದ ಹೊಸಪೇಟೆ ರಸ್ತೆಯಲ್ಲಿರುವ ಎಚ್.ಡಿ.ಎಫ್.ಸಿ ಬ್ಯಾಂಕ್ ಹತ್ತಿರ ತೀವೃ ಅಸ್ವಸ್ಥನಾಗಿ ಬಿದ್ದುಕೊಂಡಿದ್ದವನಿಗೆ ಸಾರಿಕಾ ಸಹಾಯ ಟ್ರಸ್ಟ್ ನ ಆಂಬ್ಯುಲೆನ್ಸ್ ದಲ್ಲಿ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವನು, ಚಿಕಿತ್ಸೆ ಫಲಿಸದೇ 17-15 ಗಂಟೆಗೆ ಮೃತಪಟ್ಟಿರುತ್ತಾನೆ. ಮೃತ ತನ್ನ ತಮ್ಮನ ಮರಣವು ವಿಪರೀತ ಮದ್ಯ ಸೇವನೆಯಿಂದ ಅಥವಾ ಆತನಿಗಿದ್ದ ಯಾವುದೋ ಖಾಯಿಲೆಯಿಂದ ಸಂಭವಿಸಿದ್ದು, ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರೂಪಾ ಕೋಂ. ಗೋಪಿನಾಥ ಕೊಲ್ವೇಕರ, ಪ್ರಾಯ-52 ವರ್ಷ, ವೃತ್ತಿ-ಗೃಹಿಣಿ, ಸಾ|| 3 ನೇ ಮುಖ್ಯ ರಸ್ತೆ, ವಿನೋಭಾನಗರ, ದಾವಣಗೆರೆ ರವರು ದಿನಾಂಕ: 03-08-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಅಬ್ದುಲ್ ತಂದೆ ಖಾಸೀಂಸಾಬ್ ಮುಲ್ಲಾ, ಪ್ರಾಯ-75 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿಜಾಪುರ, ಹಾಲಿ ಸಾ|| ಮದ್ನಳ್ಳಿ, ತಾ: ಹಳಿಯಾಳ. ಈತನು ಕಳೆದ 30 ವರ್ಷಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮಕ್ಕೆ ಬಂದು, ಪಿರ್ಯಾದಿಯವರ ಜಮೀನಿನ ಸರ್ವೇ ನಂ: 63/1 ನೇದರಲ್ಲಿ ಕೆಲಸ ಮಾಡಿಕೊಂಡು ಇದ್ದವನು, ದಿನಾಂಕ: 02-08-2021 ರಂದು ರಾತ್ರಿ-10-00 ಗಂಟೆಯಿಂದ ದಿನಾಂಕ: 03-08-2021 ರಂದು ಬೆಳಗಿನ 07-30 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮದ ಪಿರ್ಯಾದಿಯ ಜಮೀನಿನಲ್ಲಿನ ದನದ ಮನೆಯಲ್ಲಿ ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುತ್ತಾನೆ. ಇದರ ಹೊರತು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಖಾದರ್ ತಂದೆ ಬಾಬುಸಾಬ್ ಹಂದೂರ, ಪ್ರಾಯ-70 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಆಜಾದ್ ರೋಡ್, ತಾ: ಅಳ್ನಾವರ, ಜಿ: ಧಾರವಾಡ ರವರು ದಿನಾಂಕ: 03-08-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 05-08-2021 10:18 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080