ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-12-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 28/2021, ಕಲಂ: 279, 338 ಐಪಿಸಿ ಹಾಗೂ ಕಲಂ: 134(ಎ&ಬಿ), 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 03-12-2021 ರಂದು ರಾತ್ರಿ 19-30 ಗಂಟೆಯಿಂದ 19-40 ಗಂಟೆಯ ಅವಧಿಯಲ್ಲಿ ಪಿರ್ಯಾದಿಯ ತಮ್ಮನಾದ ಶ್ರೀ ಸತೀಶ ತಂದೆ ದಾಕ್ಕು ಗೌಡ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಒಕ್ಕಲಕೇರಿ, ಬಿಣಗಾ, ಕಾರವಾರ ಈತನು ಒಕ್ಕಲಕೇರಿಯಲ್ಲಿರುವ ತನ್ನ ಮನೆಯಿಂದ ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಒಕ್ಕಲಕೇರಿಯಿಂದ ಬಿಣಗಾ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಬಿಣಗಾದ ಬಾಲ ಮಹಾಸತಿ ವರ್ಕ್‍ಶಾಪ್ ಎದುರುಗಡೆ ಪಿರ್ಯಾದಿಯ ತಮ್ಮನ ಹಿಂದಿನಿಂದ ಬಂದಂತಹ ಅಂದರೆ ಕಾರವಾರ ಕಡೆಯಿಂದ ಬಂದಂತ ಯಾವುದೋ ಅಪರಿಚಿತ ವಾಹನದ ಆರೋಪಿ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ತಮ್ಮನಾದ ಶ್ರೀ ಸತೀಶ ತಂದೆ ದಾಕ್ಕು ಗೌಡ ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ರಸ್ತೆಯ ಮೇಲೆ ಬೀಳುವಂತೆ ಮಾಡಿ, ಆತನ ತಲೆಯ ಹಿಂದೆ ಭಾರೀ ರಕ್ತಗಾಯ ಪಡಿಸಿ, ಆತನಿಗೆ ಉಪಚರಿಸದೇ ಆರೋಪಿ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ದಾಕ್ಕು ಗೌಡ, ಪ್ರಾಯ-41 ವರ್ಷ, ವೃತ್ತಿ-ಚಾಲಕ, ಸಾ|| ಒಕ್ಕಲಕೇರಿ, ಬಿಣಗಾ, ಕಾರವಾರ ರವರು ದಿನಾಂಕ: 03-12-2021 ರಂದು 19-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 32, 34, 38(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಿಜಾಮುದ್ದೀನ್ @ ಬಾಬಜಿ ತಂದೆ ಬಬ್ರುದ್ದೀನ್ ಖತೀಬಾ, ಪ್ರಾಯ-41 ವರ್ಷ, ಸಾ|| ಅಂಗಡಿ, ಮುಡಗೇರಿ, ಕಾರವಾರ, ಹಾಲಿ ಸಾ|| ಸುಂಕೇರಿ, ಕಾರವಾರ, 2]. ಗಜಾ ತಂದೆ ಗೋಪಿ ತದಡಿಕರ್, ಪ್ರಾಯ-35 ವರ್ಷ, ಸಾ|| ಹಿಪ್ಪಳಿ, ಮಾಜಾಳಿ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 03-12-2021 ರಂದು 11-50 ಗಂಟೆಗೆ ಕಾರವಾರ ತಾರಿವಾಡಾದ ಸಮುದ್ರದ ಧಕ್ಕೆಯ ಹತ್ತಿರ ತಮ್ಮ ತಾಬಾ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಗೋವಾ ರಾಜ್ಯ ತಯಾರಿಕೆಯ ವಿವಿಧ ಬಗೆಯ ಸಾರಾಯಿ ತುಂಬಿದ ಬಾಟಲಿಗಳುಳ್ಳ ಒಟ್ಟು 09 ಪಾಲಿಥಿನ್ ಚೀಲಗಳನ್ನು ಹಾಗೂ ಘಾಟು ವಾಸನೆ ಇರುವ ಸಾರಾಯಿ ಸುಮಾರು 35 ಲೀಟರ್ ಅಳತೆಯುಳ್ಳ 4 ಪ್ಲಾಸ್ಟಿಕ್ ಕ್ಯಾನ್ ಗಳನ್ನು ಹೀಗೆ ಒಟ್ಟೂ ಸುಮಾರು 83,200/- ರೂಪಾಯಿ ಬೆಲೆಬಾಳುವ ಸರಾಯಿಯನ್ನು ಸುಮಾರು 50,000/- ರೂಪಾಯಿ ಬೆಲೆಬಾಳುವ ಎಂಜಿನ್ ಅನ್ನು ಹೊಂದಿರುವ ದೋಣಿ/ಬೋಟಿನ ಮೇಲೆ ಹಾಕಿಕೊಂಡು ಸಾಗಾಟ ಮಾಡುತ್ತಿದ್ದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ನೀರಿಗೆ ಹಾರಿ ಇನ್ನೊಂದು ಬದಿಗೆ ಈಜಿಕೊಂಡು ಆರೋಪಿತರಿಬ್ಬರೂ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಗೋವಿಂದರಾಜ ಟಿ. ದಾಸರಿ, ಪೊಲೀಸ್ ವೃತ್ತ ನಿರೀಕ್ಷಕರು, ಕದ್ರಾ ವೃತ್ತ, ಕದ್ರಾ ರವರು ದಿನಾಂಕ: 03-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 179/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಗೀತಾ ಗಂಡ ಈಶ್ವರ ಗಾಯತ್ರಿ, ಪ್ರಾಯ-30 ವರ್ಷ, ವೃತಿ-ಮನೆ ಕೆಲಸ, ಸಾ|| ತಿಂಗಳಬೈಲ್, ಹಿಲ್ಲೂರ, ತಾ: ಅಂಕೋಲಾ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 03-12-2021 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಹಿಲ್ಲೂರ ಗ್ರಾಮದ ತಿಂಗಳಬೈಲ್ ನಲ್ಲಿರುವ ತನ್ನ ಮನೆಯಿಂದ ‘ತಾನು ತನ್ನ ಮಗಳಾದ ಸುವಿಧಾ (ಪ್ರಾಯ-3 ವರ್ಷ) ಇವಳನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಮನೆಯನ್ನು ಬಿಟ್ಟು ಹೋಗುತ್ತಿದ್ದೇನೆ. ತನ್ನನು ಹುಡುಕಬೇಡಿ’ ಎಂಬಿತ್ಯಾದಿಯಾಗಿ ಪತ್ರವನ್ನು ಬರೆದಿಟ್ಟು, ಇದುವರೆಗೂ ವಾಪಸ್ ಮನೆಗೂ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ತಂದೆ ಕೃಷ್ಣಾ ಗಾಯತ್ರಿ, ಪ್ರಾಯ-40 ವರ್ಷ, ವೃತ್ತಿ-ಪೌರೋಹಿತ್ಯ ಕೆಲಸ, ಸಾ|| ತಿಂಗಳಬೈಲ್, ಹಿಲ್ಲೂರ, ತಾ: ಅಂಕೋಲಾ ರವರು ದಿನಾಂಕ: 03-12-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 327/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಜ್ಯೋತಿ ಕೋಂ. ಸುಬ್ರಹ್ಮಣ್ಯ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಗೃಹಿಣಿ, ಸಾ|| ಆರೋಳ್ಳಿ, ಮುಗ್ವಾ, ತಾ: ಹೊನ್ನಾವರ. ಪಿರ್ಯಾದಿಯ ಹೆಂಡತಿಯವರಾದ ಇವಳು ದಿನಾಂಕ: 02-12-2021 ರಂದು ಸಂಜೆ 06-00 ಗಂಟೆಗೆ ತನ್ನ ಮನೆಯಾದ ಆರೋಳ್ಳಿಯಲ್ಲಿ ತನ್ನ ಮನೆಯಲ್ಲಿರುವ ಅತ್ತೆ ಮತ್ತು ಮಾವನವರಲ್ಲಿ ‘ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆ‘ ಎನ್ನುವುದಾಗಿ ಹೇಳಿ ಹೋದವಳು, ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡುವಂತೆ ವಿನಂತಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಹ್ಮಣ್ಯ ತಂದೆ ನಾಗಪ್ಪ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಆರೋಳ್ಳಿ, ಮುಗ್ವಾ, ತಾ: ಹೊನ್ನಾವರ ರವರು ದಿನಾಂಕ: 03-12-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-12-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 40/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಯಂಕಪ್ಪಾ ತಂದೆ ದೇವಾ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಬೆಬೇಣ, ಮಾಳಕೊಪ್ಪಾ ಗ್ರಾಮ, ಮಂಚಿಕೇರಿ, ತಾ: ಯಲ್ಲಾಪುರ. ಈತನು ಪಿರ್ಯಾದಿಯ ತಂದೆಯಾಗಿದ್ದು, ಕಳೆದ 10 ವರ್ಷಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ದಿನಾಲು ಸರಾಯಿ ಕುಡಿದು ಮನೆಗೆ ಬಂದು ವಿನಾಕಾರಣ ಕೂಗಾಡುತ್ತಾ ಹೆಂಡತಿ ಮಗನ ಮೇಲೆ ರೇಗಾಡುತ್ತಿದ್ದವನು, ದಿನಾಂಕ: 02-12-2021 ರಂದು ರಾತ್ರಿ 07-30 ಗಂಟೆಯಿಂದ 08-00 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ತಾಲೂಕಿನ ಅಂಬೆಬೇಣದ ಮಾಳಕೊಪ್ಪಾ ಗ್ರಾಮದಲ್ಲಿ ಇರುವ ತನ್ನ ಮನೆ ಸಮೀಪದ ತೋಟದಲ್ಲಿ ಯಾವುದೋ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವನನ್ನು ಪಿರ್ಯಾದಿ ಮತ್ತು ಅಕ್ಕಪಕ್ಕದ ಮನೆಯವರು ಕೂಡಿ ಖಾಸಗಿ ವಾಹನದಲ್ಲಿ ಚಿಕಿತ್ಸೆಯ ಕುರಿತು ಯಲ್ಲಾಪುರದ ತಾಲೂಕಾ ಸರಕಾರಿ ಆಸ್ಪತ್ರೆಗೆ ತಂದಾಗ ಚಿಕಿತ್ಸೆ ಮಾಡಿದ ವೈದ್ಯರು ರಾತ್ರಿ 10-30 ಗಂಟೆಗೆ ಮೃತಪಟ್ಟ ಬಗ್ಗೆ ತಿಳಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಧೀರ ತಂದೆ ಯಂಕಪ್ಪ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಬೆಬೇಣ, ಮಾಳಕೊಪ್ಪಾ ಗ್ರಾಮ, ಮಂಚಿಕೇರಿ, ತಾ: ಯಲ್ಲಾಪುರ ರವರು ದಿನಾಂಕ: 03-12-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 04-12-2021 04:12 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080