ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 03-02-2021
at 00:00 hrs to 24:00 hrs
ಮಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 02/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಜ್ಯೋತಿ ತಂದೆ ಜಗದೀಶ ನಾಯ್ಕ, ಪ್ರಾಯ-21 ವರ್ಷ, ಸಾ|| ಶಿರ್ವೆ, ದೇವಳಮಕ್ಕಿ, ಕಾರವಾರ. ಪಿರ್ಯಾದಿಯ ಮಗಳಾದ ಇವಳು ಈ ಹಿಂದಿನಿಂದ ಆಗಾಗ ಮನೆ ಬಿಟ್ಟು ಹೋಗಿ ಕೆಲವು ದಿವಸಗಳ ನಂತರ ಮರಳಿ ಮನೆಗೆ ಬರುತ್ತಿದ್ದಳು. ಇವಳು ಸುಮಾರು 06 ಬಾರಿ ಮನೆ ಬಿಟ್ಟು ಹೋಗಿದ್ದು, ಈ ಬಗ್ಗೆ ಎರಡು ಬಾರಿ ಪ್ರಕರಣ ದಾಖಲಿಸಿದ್ದು, ಅವಳನ್ನು ಪೊಲೀಸರು ಪತ್ತೆ ಮಾಡಿ ನನ್ನ ತಾಬಾಕ್ಕೆ ಕೊಟ್ಟಿದ್ದು ಇರುತ್ತದೆ, ಉಳಿದ ನಾಲ್ಕು ಬಾರಿ ಅವಳು 08-10 ದಿವಸಗಳ ನಂತರ ಅವಳಾಗಿಯೇ ಮನೆಗೆ ಬಂದಿದ್ದು ಇರುತ್ತದೆ, 2018 ನೇ ಸಾಲಿನಲ್ಲಿ ಮನೆ ಬಿಟ್ಟು ಹೋದವಳು ಕಾರವಾರದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರಿಗೆ ಸಿಕ್ಕಿದ್ದು, ಅವರು ಸ್ವೀಕಾರ ಕೇಂದ್ರ ಕಾರವಾರಕ್ಕೆ ಸೇರಿಸಿದ್ದು ಇರುತ್ತದೆ, ನಂತರ ನನಗೆ ವಿಷಯ ತಿಳಿದು ಅಲ್ಲಿಗೆ ಹೋಗಿ ಅವಳನ್ನು ನಾನು ಸ್ವೀಕಾರ ಕೇಂದ್ರ ಕಾರವಾರ ರವರ ಆದೇಶದಂತೆ ರಾಜ್ಯ ಮಹಿಳಾ ನಿಲಯ ಹುಬ್ಬಳ್ಳಿಗೆ ಸೇರಿಸಿದ್ದೆನು, ದಿನಾಂಕ: 20-01-2021 ರಂದು ರಾಜ್ಯ ಮಹಿಳಾ ನಿಲಯದವರು ಒಂದು ವಾರದ ಮಟ್ಟಿಗೆ ಮಗಳನ್ನು ರಜೆಯ ಮೇಲೆ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನಾನು ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದೆ. ಮನೆಯಲ್ಲಿದ್ದ ನನ್ನ ಮಗಳು ದಿನಾಂಕ: 31-01-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನು ಇಲ್ಲದ ವೇಳೆಯಲ್ಲಿ ತನ್ನ ಬಟ್ಟೆಗಳನ್ನು ತುಂಬಿಕೊಂಡು ಮನೆಯಿಂದ ಯಾರಿಗೂ ಹೇಳದೆ ಹೋದವಳು ಈವರೆಗೂ ಮನೆಗೆ ಬಂದಿರುವುದಿಲ್ಲ. ಈ ಹಿಂದೆ ಮನೆ ಬಿಟ್ಟು ಹೋದವಳು ಮರಳಿ ಬಂದಂತೆ ಈಗಲೂ ಸಹ ಮರಳಿ ಬರಬಹುದು ಎಂದು ಕಾದು ನೋಡಿದ್ದು, ಅವಳು ಮನೆಗೆ ಬಾರದೇ ಇರುವುದರಿಂದ ಅವಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಗದೀಶ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಅಯ್ಯಪ್ಪ ದೇವಸ್ಥಾನದ ಪೂಜಾರಿ, ಸಾ|| ಶಿರ್ವೆ, ದೇವಳಮಕ್ಕಿ, ಕಾರವಾರ ರವರು ದಿನಾಂಕ: 03-02-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 26/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಲಾರಿ ನಂ: ಜಿ.ಎ-05/ಟಿ-3000 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 02-02-2021 ರಂದು 22-00 ಗಂಟೆಗೆ ತನ್ನ ಲಾರಿ ನಂ: ಜಿ.ಎ-05/ಟಿ-3000 ನೇದನ್ನು ಅಂಕೋಲಾ ತಾಲೂಕಿನ ಹೆಬ್ಬುಳದಲ್ಲಿ ಹಾಯ್ದಿರುವ ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ತನ್ನ ಮುಂದಿನಿಂದ ಬರುತ್ತಿದ್ದ ವಾಹವನ್ನು ಓವರಟೇಕ್ ಮಾಡಲು ರಸ್ತೆಯ ಬಲಕ್ಕೆ ಬಂದವನು, ತನ್ನ ಲಾರಿಯ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ರಸ್ತೆಯ ತನ್ನ ಬದಿಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿಯವರ ಲಾರಿ ನಂ: ಕೆ.ಎ-53/ಡಿ-5715 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮೋಹನ ಎಸ್. ತಂದೆ ಷಣ್ಮುಗಮ್, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ತೊಳಲಿ ಗ್ರಾಮ, ತಾ: ನಾಗಮಂಗಲ, ಜಿ: ಮಂಡ್ಯ ರವರು ದಿನಾಂಕ: 03-02-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 29/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹೊನ್ನಯ್ಯ ತಂದೆ ನಾಗಪ್ಪ ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ಚಾಲಕ, ಸಾ|| ಗುಡಕಾಗಲ್, ತಾ: ಕುಮಟಾ (ಟಿಪ್ಪರ್ ಲಾರಿ ನಂ: ಕೆ.ಎ-24/4038 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 03-02-2021 ರಂದು 16-15 ಗಂಟೆಗೆ ತಾನು ಚಲಾಯಿಸುತ್ತಿದ್ದ ಟಿಪ್ಪರ್ ಲಾರಿ ನಂ: ಕೆ.ಎ-24/4038 ನೇದನ್ನು ಕಾಗಲ ಹುಬ್ಬಣಗೇರಿಯ ಸಿಮೆಂಟ್ ರಸ್ತೆಯ ಮೇಲೆ ಕಾಗಲ ಕಡೆಯಿಂದ ಹುಬ್ಬಣಗೇರಿ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಸದರಿ ರಸ್ತೆಯಲ್ಲಿ ಎದುರಿನಿಂದ ಅಂದರೆ ಹುಬ್ಬಣಗೇರಿ ಕಡೆಯಿಂದ ಕಾಗಲ ಕಡೆಗೆ ಸೈಕಲ್ ಸವಾರಿ ಮಾಡಿಕೊಂಡು ಬರುತ್ತಿದ್ದ ಪಿರ್ಯಾದಿಯ ಚಿಕ್ಕಪ್ಪನ ಮಗ ಮೂಸಾ ತಂದೆ ಮಹಮ್ಮದ್ ಶಫಿ ಡಾಂಗಿ, ಪ್ರಾಯ-9 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಫಾರೂಕಿ ಮೊಹಲ್ಲಾ, ಹುಬ್ಬಣಗೇರಿ, ತಾ: ಕುಮಟಾ ಈತನಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ಮೂಸಾ ಈತನ ಬಲಗೈ ಮೊಣಗಂಟಿನ ಮೂಳೆ ಮುರಿದು ಭಾರೀ ಗಾಯವಾಗಲು ಹಾಗೂ ತಲೆಯ ಹಿಂಬದಿಗೆ ಸಾದಾ ಗಾಯವಾಗಲು ಕಾರಣವಾಗಿದ್ದಲ್ಲದೇ, ಗಾಯಾಳು ಸವಾರಿ ಮಾಡುತ್ತಿದ್ದ ಸೈಕಲ್ ಸಹ ಜಖಂ ಆಗಲು ಆರೋಪಿ ಟಿಪ್ಪರ್ ಲಾರಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀಮತಿ ಬುಶಿರಾ ನೂರುದ್ದೀನ್ ಭಿಕ್ಬಾ, ಪ್ರಾಯ-36 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಫಾರೂಕಿ ಮೊಹಲ್ಲಾ, ಹುಬ್ಬಣಗೇರಿ, ತಾ: ಕುಮಟಾ ರವರು ದಿನಾಂಕ: 03-02-2021 ರಂದು 20-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 24/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜನಾರ್ಧನ ತಂದೆ ನಾರಾಯಣ ಮಡಿವಾಳ. ಪ್ರಾಯ-45 ವರ್ಷ, ಸಾ|| ನವೀಲಗೋಣ, ತಾ: ಹೊನ್ನಾವರ, ಹಾಳಿ ಸಾ|| ಕುಮಟಾ ಬಸ್ ಡಿಪೋ (ಬಸ್ ನಂ: ಕೆ.ಎ-31/ಎಫ್-1243 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 03-02-2021 ರಂದು 17-30 ಗಂಟೆಯ ಸುಮಾರಿಗೆ ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-206 ರಲ್ಲಿ ಹೊನ್ನಾವರ ತಾಲೂಕಿನ ಮಹಿಮೆ ಕ್ರಾಸ್ ಹತ್ತಿರ ತನ್ನ ಬಾಬ್ತು ಬಸ್ ನಂ: ಕೆ.ಎ-31/ಎಫ್-1243 ನೇದನ್ನು ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಗಾಯಾಳು ಆರೀಫ್ ತಂದೆ ಅಲಿಅಕ್ಬರ್ ಸಾಬ್ ಗುಂದಾರ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಹಿಮೆ, ತಾ: ಹೊನ್ನಾವರ, ಈತನು ತನ್ನ ಹೊಸ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ (ಚಾಸಿಸ್ ನಂ: MD2A92DX8LCH22040) ನೇದರ ಹಿಂಬದಿ ಗಾಯಾಳು ಸದ್ದಾಮ್ ಹುಸೇನ್ ತಂದೆ ಹಸೇನ್ ಸಾಬ್ ಗುಂದಾರ, ಪ್ರಾಯ-28 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮಹಿಮೆ. ತಾ: ಹೊನ್ನಾವರ, ಈತನಿಗೆ ಕೂಡ್ರಿಸಿಕೊಂಡು ಉಪ್ಪೋಣಿ ಕಡೆಯಿಂದ ಮಹಿಮೆ ಕಡೆಗೆ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆರೀಫ್ ತಂದೆ ಅಲಿಅಕ್ಬರ್ ಸಾಬ್ ಗುಂದಾರ ಈತನ ತಲೆಗೆ ಹಾಗೂ ಮೈಮೇಲೆ ಗಾಯ ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿ ಸವಾರ ಸದ್ದಾಮ್ ಹುಸೇನ್ ತಂದೆ ಹಸೇನ್ ಸಾಬ್ ಗುಂದಾರ ಈತನ ತಲೆಗೆ, ಬಲಕಿವಿಗೆ ಹಾಗೂ ಎರಡು ಕಾಲಿಗೆ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಾಫರ್ ಸಾದಿಕ್ ತಂದೆ ಮೈದಿನ್ ಸಾಬ್, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಹಿಮೆ, ಪೋ: ಉಪ್ಪೋಣಿ, ತಾ: ಹೊನ್ನಾವರ ರವರು ದಿನಾಂಕ: 03-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಜೊಯಿಡಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 07/2021, ಕಲಂ: 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಕ್ಷಯ ಲಕ್ಷ್ಮಣ ಹರಿಜನ, ಪ್ರಾಯ-21 ವರ್ಷ, 2]. ಶ್ರೀಮತಿ ಲಕ್ಷ್ಮಿ ಕೋಂ. ಲಕ್ಷ್ಮಣ ಹರಿಜನ, ಪ್ರಾಯ-45 ವರ್ಷ, ಸಾ|| (ಇಬ್ಬರು) ಬಾಪೇಲಿ ಕ್ರಾಸ್, ತಾ: ಜೊಯಿಡಾ. ಈ ನಮೂದಿತ ಆರೋಪಿತರು ದಿನಾಂಕ: 27-01-2021 ರಂದು 16-00 ಗಂಟೆಯ ಸುಮಾರಿಗೆ ಪಿರ್ಯಾದಿಯು ಬಾಪೇಲಿ ಕ್ರಾಸಿನಿಂದ ರಸ್ತೆಯ ಮೂಲಕ ತನ್ನ ಊರಾದ ಬಾಪೇಲಿ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಜೊಯಿಡಾ ತಾಲೂಕಿನ ಬಾಪೇಲಿ ಕ್ರಾಸಿನ ಬೆಳಗಾವಿ ರಸ್ತೆಯ ಕಡೆಗೆ ಇರುವ ಪಂಪ್ ಹೌಸ್ ಹತ್ತಿರ ರಸ್ತೆಯ ಮೇಲೆ ಪಿರ್ಯಾದಿಯು ತನ್ನ ಊರ ಕಡೆಗೆ ಹೋಗುತ್ತಿರುವುದನ್ನು ಅಡ್ಡಗಟ್ಟಿ ಪಿರ್ಯಾದಿಗೆ ಉದ್ದೇಶಿಸಿ ‘ನಿನ್ನ ಮಗಳು ನಾಪತ್ತೆಯಾದ ಬಗ್ಗೆ ಜೊಯಿಡಾ ಠಾಣೆಯಲ್ಲಿ ದೂರು ಕೊಟ್ಟಿರುವುದನ್ನು ವಾಪಸ್ ತೆಗೆದುಕೊ’ ಅಂತಾ ಹೇಳಿ ಅವಾಚ್ಯವಾಗಿ ಬೈಯ್ದು, ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಪ್ರತೀಕ್ಷಾ ಕೋಂ. ಪಾಂಡುರಂಗ ದೇಸಾಯಿ, ಪ್ರಾಯ-37 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಾಪೇಲಿ, ತಾ: ಜೊಯಿಡಾ ರವರು ದಿನಾಂಕ: 03-02-2021 ರಂದು 19-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 17/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪರಮೇಶ್ವರ ತಂದೆ ದಾಸಪ್ಪ, ಪ್ರಾಯ-38 ವರ್ಷ, ಸಾ|| ವಿವೇಕಾನಂದ ನಗರ, ತಾ: ಮುಂಡಗೋಡ (ಕಾರ್ ನಂ: ಕೆ.ಎ-06/ಪಿ-7385 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 03-02-2021 ರಂದು ಬೆಳಿಗ್ಗೆ 09-00 ಗಂಟೆಗೆ ತಾನುಚಾಲನೆ ಮಾಡಿಕೊಂಡು ಬಂದ ಕಾರ್ ನಂ: ಕೆ.ಎ-06/ಪಿ-7385 ನೇದನ್ನು ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಾಲನೆ ಮಾಡಿಕೊಂಡು ಬಂದು ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-5159 ನೇದರ ಸವಾರ ಬಸಪ್ಪ ತಂದೆ ಲಕ್ಷ್ಮಣ ಕುಲಿಗೋಡ, ಪ್ರಾಯ-54 ವರ್ಷ, ವೃತ್ತಿ-ನ್ಯಾಯಾಲಯದಲ್ಲಿ ಜವಾನ ಕೆಲಸ, ಸಾ|| ಹೊಸ ಓಣಿ, ತಾ: ಮುಂಡಗೋಡ ಇವರ ಮೋಟಾರ್ ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅಪಘಾತದಿಂದ ಮೋಟಾರ್ ಸೈಕಲ್ ಸವಾರನ ಬಲಗೈಗೆ ಬಾವು ಬಂದಿದ್ದು ಹಾಗೂ ಬಲಗಾಲಿಗೆ ಭಾರೀ ಗಾಯವಾಗಿ ರಕ್ತ ಬರುವಂತೆ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಜೇಂದ್ರ ತಂದೆ ಗಿರಿದಾಸ ಕರ್ಜಗಿ, ಪ್ರಾಯ-39 ವರ್ಷ, ವೃತ್ತಿ-ಪ್ಲಂಬಿಂಗ್ ಕೆಲಸ, ಸಾ|| ಕಂಬಾರಗಟ್ಟಿ ಪ್ಲಾಟ್, ತಾ: ಮುಂಡಗೋಡ ರವರು ದಿನಾಂಕ: 03-02-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 18/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಸಪ್ಪ @ ಬಸವರಾಜ, ಸಾ|| ಹೊಸ ಓಣಿ, ತಾ: ಮುಂಡಗೋಡ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-5159 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 03-02-2021 ರಂದು ಬೆಳಿಗ್ಗೆ 09-00 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-5159 ನೇದನ್ನು ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಾಲನೆ ಮಾಡಿಕೊಂಡು ಬಂದು ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಪಿರ್ಯಾದಿಯ ಮಾರುತಿ ಸುಜುಕಿ ಕಾರ್ ನಂ: ಕೆ.ಎ-06/ಪಿ-7385 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಲ್ಲದೇ, ಈ ಅಪಘಾತದಿಂದ ಆರೋಪಿ ಮೋಟಾರ್ ಸೈಕಲ್ ಸವಾರನ ಬಲಗಾಲಿಗೆ ತೀವೃತರವಾದ ಗಾಯನೋವು ಉಂಟಾಗಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪರಮೇಶ್ವರ ತಂದೆ ದಾಸಪ್ಪ ಟಿ, ಪ್ರಾಯ-38 ವರ್ಷ, ವೃತ್ತಿ-ವಲಯ ಅರಣ್ಯ ಅಧಿಕಾರಿ, ಸಾಮಾಜಿಕ ಅರಣ್ಯ ವಲಯ, ಮುಂಡಗೋಡ, ಸಾ|| ವಿವೇಕಾನಂದ ನಗರ, ತಾ: ಮುಂಡಗೋಡ ರವರು ದಿನಾಂಕ: 03-02-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 30/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ರಾಮಚಂದ್ರ ಬೋವಿ, ಪ್ರಾಯ-52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮಾಗವಾಡ ಗ್ರಾಮ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-24/ಯು-3522 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 02-02-2021 ರಂದು 21-15 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-24/ಯು-3522 ನೇದನ್ನು ಹಳಿಯಾಳದ ವನಶ್ರೀ ಸರ್ಕಲ್ ಬದಿಯಿಂದ ತೇರಗಾಂವ ಬದಿಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರ್ ಸೈಕಲನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ತನ್ನ ಮುಂದಿನಿಂದ ಹೋಗುತ್ತಿದ್ದ ಅಂದರೆ ಹಳಿಯಾಳ ಬದಿಯಿಂದ ತೇರಗಾಂವ ಬದಿಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-7176 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಚಾಲಕನಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿ, ವಾಹನಗಳನ್ನು ಜಖಂಗೊಳಿಸಿದ್ದಲ್ಲದೇ, ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಮಾದೇವ ಚವ್ಹಾಣ, ಪ್ರಾಯ-29 ವರ್ಷ, ವೃತ್ತಿ-ತಾಲೂಕಾ ಪಂಚಾಯತನಲ್ಲಿ ಕೆಲಸ, ಸಾ|| ಮುತ್ತಲಮುರಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 03-02-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 31/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ಗಂಗಪ್ಪ ವಡ್ಡರ, ಪ್ರಾಯ-75 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ, ಸಾ|| ಕರ್ಲಕಟ್ಟ ಗ್ರಾಮ, ತಾ: ಹಳಿಯಾಳ. ನಮೂದಿತ ಆರೋಪಿತನು ದಿನಾಂಕ: 03-02-2021 ರಂದು 16-20 ಗಂಟೆಗೆ ಹಳಿಯಾಳ ಶಹರದ ಪೋಸ್ಟ ಆಫೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಕರೆದು ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟದ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಆಸೆ ಆಮೀಷ ತೋರಿಸಿ ಕೂಗಿ ಕರೆದು, ಬಂದಂತಹ ಸಾರ್ವಜನಿಕರಿಂದ ಹಣ ಪಡೆದು ನಂಬರಗಳನ್ನು ಚೀಟಿಯಲ್ಲಿ ಬರೆದು ಕೊಡುತ್ತಾ, ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲಕ್ಕೆ ಓ.ಸಿ ಮಟಕಾ ಜೂಗಾರಾಟದ ನಗದು ಹಣ 980/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳಾದ 1). ಓ.ಸಿ ನಂಬರ್ ಬರೆದ ಚೀಟಿ-1, 2). ಬಾಲ್ ಪೆನ್-01, 3). ರಟ್ಟು-01 ಇವುಗಳೊಂದಿಗೆ ಆರೋಪಿತನು ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮೋತಿಲಾಲ್ ಪವಾರ್, ಪೊಲೀಸ್ ವೃತ್ತ ನಿರೀಕ್ಷಕರು, ಹಳಿಯಾಳ ವೃತ್ತ, ಹಳಿಯಾಳ ರವರು ದಿನಾಂಕ: 03-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 18/2021, ಕಲಂ: 326, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಕನ್ನಾ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಹಂಜಿಗೆ, ಮುಗದೂರು ಗ್ರಾಮ, ತಾ: ಸಿದ್ದಾಪುರ. ನಮೂದಿತ ಆರೋಪಿತನು ಪಿರ್ಯಾದಿಯ ಅಣ್ಣನಿದ್ದು, ಕಳೆದ ಕೆಲವು ದಿವಸಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದವನು. ದಿನಾಂಕ: 03-02-2021 ರಂದು ಸಂಜೆ 06-30 ಗಂಟೆಯ ಸುಮಾರಿಗೆ ಆರೋಪಿತನು ಮನೆಯಲ್ಲಿ ಮನೆ ಕೆಲಸ ಹಾಗೂ ಅಡುಗೆಯನ್ನು ಕೂಡ ಮಾಡದೆ ಮನೆಯಲ್ಲಿ ಖಾಲಿ ಕುಳಿತಿದ್ದುದ್ದಕ್ಕೆ ಕೇಳಲು ಹೋದ ಪಿರ್ಯಾದಿಗೆ ‘ಬೋಳಿ ಮಗನೇ ನೀನೇನು ಕೇಳುತ್ತೀ?’ ಅಂತಾ ಅವಾಚ್ಯವಾಗಿ ಬೈಯ್ದು, ಕತ್ತಿಯಿಂದ ಪಿರ್ಯಾದಿಯ ಎಡಗಣ್ಣಿನ ಹತ್ತಿರ ಬಲವಾಗಿ ಹೊಡೆದು ಭಾರೀ ಗಾಯನೋವು ಪಡಿಸಿದ್ದಲ್ಲದೇ, ‘ತನಗೆ ಕೆಲಸ ಹೇಳಿದರೆ ಕೊಲೆ ಮಾಡದೇ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಷಣ್ಮುಖ ತಂದೆ ಕನ್ನಾ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೃಷಿ/ಕೂಲಿ ಕೆಲಸ, ಸಾ|| ಮುಗದೂರು ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 03-02-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 12/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬೈಲಪ್ಪ ತಂದೆ ವೀರಭದ್ರಪ್ಪ ಕಟಗಿ, ಸಾ|| ಕಡಸಗಟ್ಟಿ, ತಾ: ಬೈಲಹೊಂಗಲ, ಜಿ: ಬೆಳಗಾವಿ (ಲಾರಿ ನಂ: ಕೆ.ಎ-22/ ಡಿ-0501 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 01-02-2021 ರಂದು 18-00 ಗಂಟಗೆ ತಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ-22/ಡಿ-0501 ನೇದನ್ನು ಬೆಳಗಾವಿ-ಪಣಜಿ ರಾಷ್ಟ್ರಿಯ ಹೆದ್ದಾರಿ ಸಂಖ್ಯೆ-4(ಎ) ರ ರಸ್ತೆಯಲ್ಲಿ ಗೋವಾ ಬದಿಯಿಂದ ರಾಮನಗರ ಬದಿಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅನಮೋಡದ ಆರ್.ಟಿ.ಓ ಆಫೀಸ್ ಇನ್ನೂ 1 ಕಿ.ಮೀ ದೂರದ ಅಂತರದಲ್ಲಿರುವಾಗ ರಾಮನಗರ ಬದಿಯಿಂದ ಗೋವಾ ಬದಿಗೆ ಹೋಗುತ್ತಿದ್ದ ಪಿರ್ಯಾದಿಯ ಬೊಲೆರೋ ಮಾಕ್ಸಿ ಟ್ರಕ್ ವಾಹನ ನಂ: ಕೆ.ಎ-25/ಎ.ಎ-9334 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬೊಲೆರೋ ಮಾಕ್ಸಿ ಟ್ರಕ್ ವಾಹನವನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಮೀರ್ ಅಹ್ಮದ್ ತಂದೆ ಮುಸ್ತಾಕ್ ಅಹ್ಮದ್ ದೇವಗಿರಿ, ಪ್ರಾಯ-22 ವರ್ಷ, ವೃತ್ತಿ-ಚಾಲಕ, ಸಾ|| ಮೃತ್ಯುಂಜಯ ನಗರ, ತಾ: ರಾಣೆಬೆನ್ನೂರು, ಜಿ: ಹಾವೇರಿ ರವರು ದಿನಾಂಕ: 03-02-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 03-02-2021
at 00:00 hrs to 24:00 hrs
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ದೇವರಾಜ ತಂದೆ ಚಂದ್ರಶೇಖರ ಭಂಡಾರಿ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶೇಡಿಕೊಡ್ಲು, ಪೋ: ಬೊಮ್ಮನಳ್ಳಿ, ತಾ: ಶಿರಸಿ. ಪಿರ್ಯಾದಿಯವರ ತಮ್ಮನಾದ ಈತನು ದಿನಾಂಕ: 26-01-2021 ರ ರಾತ್ರಿ ತನ್ನ ಸ್ನೇಹಿತ ಧಾಮು ತಂದೆ ಕೃಷ್ಣ ಮರಾಠಿ, ಇವನೊಂದಿಗೆ ಕಣ ಹಬ್ಬದ ನಿಮಿತ್ಯ ಅವರ ಮನೆಗೆ ಊಟಕ್ಕೆ ಹೋದ ನಂತರದಿಂದ ಕಾಣೆಯಾಗಿದ್ದವನು, ದಿನಾಂಕ: 03-02-2021 ರಂದು 18-30 ಗಂಟೆಯ ಸುಮಾರಿಗೆ ಕಿಬ್ಬಳ್ಳಿಯ ಸೀತಾರಾಮ್ ಹೆಗಡೆ ಇವರ ತೋಟದ ಬದಿಯ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ನನ್ನ ತಮ್ಮ ಸರಾಯಿ ಕುಡಿಯುವ ಚಟ ಮಾಡುವುದು ನಿಜವಿರುತ್ತದೆಯಾದರೂ, ಏಕಾಏಕಿಯಾಗಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದರೆ ನಂಬಲಾಗುತ್ತಿಲ್ಲ ಹಾಗೂ ಅವನ ಸಾವಿನಲ್ಲಿ ನನಗೆ ಮೇಲ್ನೋಟಕ್ಕೆ ಸಂಶಯ ಕಂಡು ಬರುತ್ತದೆ. ಕಾರಣ ಈ ಕುರಿತು ಕೂಲಂಕುಷ ತನಿಖೆಯಿಂದ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದತ್ತಗುರು ತಂದೆ ಚಂದ್ರಶೇಖರ ಭಂಡಾರಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶೇಡಿಕೊಡ್ಲು, ಪೋ: ಬೊಮ್ಮನಳ್ಳಿ, ತಾ: ಶಿರಸಿ ರವರು ದಿನಾಂಕ: 03-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======