ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-01-2022

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 307, 324, 341, 506, 427 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗೋಪಿಚಂದ ರತ್ನಾಕರ ಪಡುವಳುಕರ, ಸಾ|| ಭೀಮಕೋಲ ರಸ್ತೆ, ಹೋಟೆಗಾಳಿ, ಕಾರವಾರ, 2]. ಉಮೇಶ ತಂದೆ ಪಾಂಡುರಂಗ ಪೆಡ್ನೇಕರ್, ಸಾ|| ಶಿರವಾಡಾ, ಕಾರವಾರ ಹಾಗೂ ಇನ್ನಿಬ್ಬರೂ, ಹೆಸರು ವಿಳಾಸ ಬಂದಿರುವುದಿಲ್ಲ. ದಿನಾಂಕ: 03-01-2022 ರಂದು 14-30 ಗಂಟೆಗೆ ಪಿರ್ಯಾದುದಾರರು ತಮ್ಮ ರಿಕ್ಷಾ ನಂ: ಕೆ.ಎ-30/ಎ-3083 ನೇದರ ಮೇಲೆ ತಮ್ಮ ಹೆಂಡತಿ ಕರೀನಾ ರವರೊಂದಿಗೆ ಬಂದು ಅಸ್ನೋಟಿಯ ಫಾರೆಸ್ಟ್ ನಾಕಾದ ಹತ್ತಿರ ಕುಳಿತುಕೊಂಡಿರುವಾಗ ನಮೂದಿತ ಆರೋಪಿತರು ಸೇರಿಕೊಂಡು ತಮ್ಮ ಎಸ್ಟೀಮ್ ಕಾರಿನ ಮೇಲಾಗಿ ಪಿರ್ಯಾದುದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಅವರಿದ್ದಲ್ಲಿಗೇ ಬಂದು ಪಿರ್ಯಾದುದಾರರನ್ನು ಉದ್ದೇಶಿಸಿ ‘ನೀನು ರತನ ತಂದೆ ವಿಠ್ಠಲ ಪವಾರ ಇವರು ನನ್ನ ಮೇಲೆ ಕೇಸು ದಾಖಲಿಸುವ ವಿಷಯವಾಗಿ ಹೇಳಿ ನಾನು ನಿಮ್ಮ ಅಣ್ಣ ಉಮೇಶ ಮಹಾಬಲೇಶ್ವರ ಕಲ್ಗುಟ್ಕರನನ್ನು ಹೇಗೆ ಕೊಲೆ ಮಾಡಿದಿನೋ ಹಾಗೇ ನಿನ್ನನ್ನು ಕೊಲೆ ಮಾಡುತ್ತೇನೆ’ ಅಂತಾ ಹೇಳುತ್ತಾ, ನಮೂದಿತ ಆರೋಪಿತರು ಸೇರಿಕೊಂಡು ತಮ್ಮೊಂದಿಗೆ ತಂದಿದ್ದ ರಾಡಿನಿಂದ ನಿಲ್ಲಿಸಿಟ್ಟಿದ್ದ ರಿಕ್ಷಾದ ಗ್ಲಾಸಿನ ಮೇಲೆ ಹೊಡೆದು ಗ್ಲಾಸನ್ನು ಒಡೆದು ರಿಕ್ಷಾವನ್ನು ಪಲ್ಟಿ ಮಾಡಿ, ನಂತರ ಎಲ್ಲರೂ ಪಿರ್ಯಾದುದಾರರಿಗೆ ಸುತ್ತುವರೆದಾಗ ಅವರಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ, ಅವರನ್ನು ಬೆನ್ನಟ್ಟಿ ಹೊಡೆದಿದ್ದಲ್ಲದೇ, ಪಿರ್ಯಾದಿಯು ಅವರಿಂದ ಹೇಗೋ ತಪ್ಪಿಸಿಕೊಂಡು ಪರಾರಿಯಾಗಿದ್ದು, ಸದರಿಯವರಿಂದ ತಮಗೆ ಮತ್ತು ತಮ್ಮ ಕುಟುಂಬದವರಿಗೆ ಆರೋಪಿತರಿಂದ ಕೊಲೆ ಮಾಡುವ ಬೆದರಿಕೆ ಇದ್ದ ಬಗ್ಗೆ ಪಿರ್ಯಾದಿ ಶ್ರೀ ಕಿಶೋರ ತಂದೆ ಮಹಾಬಲೇಶ್ವರ ಕಲ್ಗುಟ್ಕರ, ಪ್ರಾಯ-37 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಹೋಟೆಗಾಳಿ, ಕಾರವಾರ ರವರು ದಿನಾಂಕ: 03-01-2022 ರಂದು 20-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇನಾಮ್ ತಂದೆ ಜೈನುದ್ದೀನ್ ಘನಿ, ಪ್ರಾಯ-49 ವರ್ಷ, ಸಾ|| ಚಂದಾವರ, ತಾ: ಹೊನ್ನಾವರ. ದಿನಾಂಕ: 31-12-2021 ರಂದು 11-30 ಗಂಟೆಗೆ ಪಿರ್ಯಾದಿಯವರು ತಮ್ಮ ಮೂಲ ಮನೆಯಾದ ಚಂದಾವರದಿಂದ ಕುಮಟಾಕ್ಕೆ ತನ್ನ ಸ್ಕೂಟಿಯ ಮೇಲೆ ಬರುತ್ತಿದ್ದಾಗ, ನಮೂದಿತ ಆರೋಪಿತನು ತನ್ನ ಟೊಯೋಟಾ ಫಾರ್ಚುನರ್ ಕಾರ್ ನಂ: ಕೆ.ಎ-51/ಎಮ್.ಕೆ-1641 ನೇದರ ಮೇಲಾಗಿ ಪಿರ್ಯಾದಿಯವರಿಗೆ ಹಿಂಬಾಲಿಸಿಕೊಂಡು ಬಂದು, ವಾಲಗಳ್ಳಿ ಹತ್ತಿರ ಪಿರ್ಯಾದಿಯವರಿಗೆ ಕೊಲೆ ಮಾಡುವದಾಗಿ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಅನ್ಸಾರ್ ತಂದೆ ಇಜಾಕ್ ಶೇಖ್. ಪ್ರಾಯ-59 ವರ್ಷ, ವೃತ್ತಿ-ವಿಜಯ ಕರ್ನಾಟಕ ವರದಿಗಾರರು, ಸಾ|| ಚಂದಾವರ, ತಾ: ಹೊನ್ನಾವರ ರವರು ದಿನಾಂಕ: 03-01-2022 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಮೇಶ ತಂದೆ ಜಟ್ಟಿ ಗೌಡ, ಪ್ರಾಯ-33 ವರ್ಷ, ವೃತ್ತಿ-ಚಾಲಕ, ಸಾ|| ನೀಲಕೊಡ, ಬಂಗಾರಮಕ್ಕಿ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಇ-7299 ನೇದರ ಚಾಲಕ). ಈತನು ದಿನಾಂಕ: 03-01-2021 ರಂದು ಸಾಯಂಕಾಲ 07-15 ಗಂಟೆಗೆ ಮಾಲೆಕೊಡ್ಲುದಲ್ಲಿ ತನ್ನ ಮನೆ ಮಾಲೆಕೊಡ್ಲು ಕಡೆಯಿಂದ ಬೇಂಗ್ರೆ ಕಾಮತ್ ಕ್ಯಾಂಟೀನ್ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ತನ್ನ ಬದಿಯಿಂದ ಸೈಕಲ್ ಮೇಲೆ ಬರುತ್ತಿದ್ದಾಗ ಶಿರಾಲಿ ಕಡೆಯಿಂದ ಮುರ್ಡೇಶ್ವರ ಕಡೆಗೆ ಆರೋಪಿ ಮೋಟಾರ್ ಸೈಕಲ್ ಸವಾರನಾದ ನಮೂದಿತ ಆರೋಪಿತನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಇ-7299 ನೇದನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಸೈಕಲ್ ಮೇಲೆ ಹೋಗುತ್ತಿದ್ದ ಗೋಯ್ದ ತಂದೆ ಬಿಳಿಯಾ ಗೊಂಡ, ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತಲೆಗೆ ಮತ್ತು ಎಡಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಸಹ ತಲೆಗೆ ಮತ್ತು ಮುಖಕ್ಕೆ ತೆರಚಿದ ನಮೂನೆ ಗಾಯನೋವು ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಕೃಷ್ಣ ಗೊಂಡ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾಲೆಕೊಡ್ಲು, ಬೇಂಗ್ರೆ-1, ತಾ: ಭಟ್ಕಳ, ಹಾಲಿ ಸಾ|| ಹಡಾಳ, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 03-01-2022 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರು 1]. ಅಣ್ಣಪ್ಪ ತಂದೆ ತಿಮ್ಮಣ್ಣ ಕುರಿಯವರ, ಪ್ರಾಯ-26 ವರ್ಷ, ಸಾ|| ಹನುಮಾಪುರ, ತಾ: ಮುಂಡಗೋಡ (ಕೆಂಪು ಬಣ್ಣದ ಮಹೀಂದ್ರಾ ಕಂಪನಿಯ ಇಂಜಿನ್ ಹಾಗೂ ನೀಲಿ ಬಣ್ಣದ ಟ್ರೇಲರ್ ನೇದರ ಚಾಲಕ), 2]. ಲಕ್ಷ್ಮಣ ತಂದೆ ಹನುಮಣ್ಣ ಆಲೂರ, ಪ್ರಾಯ-27 ವರ್ಷ, ಸಾ|| ಹನುಮಾಪುರ, ತಾ: ಮುಂಡಗೋಡ (ಕೆಂಪು ಬಣ್ಣದ ಮಹೀಂದ್ರಾ ಕಂಪನಿಯ ಇಂಜಿನ್ ಹಾಗೂ ನೀಲಿ ಬಣ್ಣದ ಟ್ರೇಲರ್ ನೇದರ ಚಾಲಕ) (ಟ್ರ್ಯಾಕ್ಟರ್ ನಂಬರ್ ನಮೂದಿರುವುದಿಲ್ಲ). ಈ ನಮೂದಿತ ಆರೋಪಿತರು ಕೆಂಪು ಬಣ್ಣದ ಮಹೀಂದ್ರಾ ಕಂಪನಿಯ ಇಂಜಿನ್ ಹಾಗೂ ನೀಲಿ ಬಣ್ಣದ ಟ್ರೇಲರ್ ನೇದರ ಚಾಲಕರಾಗಿದ್ದು, ದಿನಾಂಕ: 02-01-2022 ರಾತ್ರಿ 09-30 ಗಂಟೆಯ ಸುಮಾರಿಗೆ ತಮ್ಮ ಟ್ರ್ಯಾಕ್ಟರನ್ನು ಬೆಳಕೊಪ್ಪ ಕ್ರಾಸ್ ಹತ್ತಿರ ಮುಂಡಗೋಡ-ಯಲ್ಲಾಪುರ ರಸ್ತೆಯ ಮೇಲೆ ಯಲ್ಲಾಪುರದ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರಿನ ಇಂಜಿನ್ ಮಡಗಾರ್ಡ್ ಮೇಲೆ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ಪಿರ್ಯಾದಿಯ ಅಣ್ಣ ನಾಗರಾಜ ತಂದೆ ಲೂವಿಸ್ ಸಿದ್ದಿ, ಪ್ರಾಯ-26 ವರ್ಷ, ಸಾ|| ತಾವರಕಟ್ಟಾ, ತಾ: ಯಲ್ಲಾಪುರ ಇವನು ಆಯ ತಪ್ಪಿ ಟ್ರ್ಯಾಕ್ಟರಿನ ಮಧ್ಯದ ಬಲ ಗಾಲಿಯಲ್ಲಿ ಸಿಲುಕಿಕೊಂಡು ಸೊಂಟಕ್ಕೆ ಮತ್ತು ಎರಡು ಕಾಲಿಗೆ ಮತ್ತು ಹೊಟ್ಟೆಗೆ ಭಾರೀ ಪೆಟ್ಟು ಬಿದ್ದು ಪ್ರಾಥಮಿಕ ಚಿಕಿತ್ಸೆಗೆ ಯಲ್ಲಾಪುರದ ಸಕಾರಿ ಆಸ್ಪತ್ರಗೆ ದಾಖಲಾಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾದವನು, ಹೆಚ್ಚಿನ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 03-01-2022 ರಂದು ಬೆಳಗಿನ ಜಾವ 12-43 ಗಂಟೆಗೆ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಲೂವಿಸ್ ಸಿದ್ದಿ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುಣಶೆಟ್ಟಿಕೊಪ್ಪ, ತಾವರಕಟ್ಟಾ, ತಾ: ಯಲ್ಲಾಪುರ ರವರು ದಿನಾಂಕ: 03-01-2022 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 420, 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 25-12-2021 ರಂದು ಸಾಯಂಕಾಲ 16-30 ಗಂಟೆಯ ಸುಮಾರಿಗೆ ಪಿರ್ಯಾದಿಯ ಬಾಬ್ತು ಕಣ್ಣಿಗೇರಿಯಲ್ಲಿರುವ ಚಿಕನ್ ಅಂಗಡಿಗೆ ಬಂದು ಚಿಕನ್ ಬೇಕು’ ಅಂತಾ ಸುಳ್ಳು ಹೇಳಿ ನಂಬಿಕೆ ಉಂಟು ಮಾಡಿ, ಪಿರ್ಯಾದಿಯ ಬಾಬ್ತು ಅ||ಕಿ|| 15,000/- ರೂಪಾಯಿ ಮೌಲ್ಯದ ಹೀರೋ ಕಂಪನಿಯ ಪ್ಯಾಷನ್ ಪ್ರೋ ಮೋಟಾರ ಸೈಕಲ್ ನಂ: ಕೆ.ಎ-31/ಯು-6616 ನೇದನ್ನು ತಾಟವಾಳಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ತೆಗೆದುಕೊಂಡು ಹೋಗಿ, ಪಿರ್ಯಾದಿಗೆ ನಂಬಿಸಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ವಾಸುದೇವ ಗೊಂದಳಿ, ಪ್ರಾಯ-36 ವರ್ಷ, ವೃತ್ತಿ-ಚಿಕನ್ ವ್ಯಾಪಾರ, ಸಾ|| ಡೋಮಗೇರಿ, ಹುಣಶೆಟ್ಟಿಕೊಪ್ಪ, ತಾ: ಯಲ್ಲಾಪುರ ರವರು ದಿನಾಂಕ: 03-01-2022 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು 407 ಲಾರಿ ನಂ: ಕೆ.ಎ-47/1192 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 31-12-2021 ರಂದು 15-20 ಗಂಟೆಗೆ ಬಾಬ್ತು ತನ್ನ 407 ಲಾರಿ ನಂ: ಕೆ.ಎ-47/1192 ನೇದನ್ನು ಹೊನ್ನಾವರ ಕಡೆಯಿಂದ ಸಾಗರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಸಾಗರ-ಹೊನ್ನಾವರ ರಸ್ತೆಯ ಮಾವಿನಗುಂಡಿ ಶಾಲೆಯ ಹತ್ತಿರ ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಹಾರೂನ್ ತಂದೆ ಬಸೀರ್ ಸಾಬ್, ಪ್ರಾಯ-24 ವರ್ಷ, ಸಾ|| ಗೇರುಸೊಪ್ಪ, ತಾ: ಹೊನ್ನಾವರ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ್ ನಂ: ಕೆ.ಎ-15/ಎನ್-6557 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರ್ ಚಲಾಯಿಸುತ್ತಿದ್ದ ಹಾರೂನ್ ಇವರ ಎದೆಗೆ, ಗದ್ದಕ್ಕೆ, ಎರಡೂ ಕೈಗಳಿಗೆ ಹಾಗೂ ಕಾರಿನಲ್ಲಿದ್ದ ಮುಬಾರಕ್ ತಂದೆ ಅಬ್ದುಲ್ ಸತ್ತಾರ್ ಸಾಬ್, ಪ್ರಾಯ-28 ವರ್ಷ, ಸಾ|| ಗೇರುಸೊಪ್ಪ, ತಾ: ಹೊನ್ನಾವರ ಇವರ ಬಲಗಾಲಿಗೆ, ಬಲಗೈಗೆ, ಮೂಗಿಗೆ ಹಾಗೂ ಗದ್ದಕ್ಕೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಬಸೀರ್ ತಂದೆ ಇಬ್ರಾಹೀಂ ಸಾಬ್, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೇರುಸೊಪ್ಪ, ತಾ: ಹೊನ್ನಾವರ ರವರು ದಿನಾಂಕ: 03-01-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-01-2022

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದೇವಿದಾಸ ತಂದೆ ಬಲೀಂದ್ರ ಗೌಡ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೂಲೆಗದ್ದೆ, ದುಂಡಕುಳಿ, ದಿವಗಿ, ತಾ: ಕುಮಟಾ. ಈತನು ಸರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡು ಬಂದವನಿದ್ದು, ಒಮ್ಮೊಮ್ಮೆ ಮನೆಗೆ ಲೆಟಾಗಿ ಬರುತ್ತಿದ್ದವನು, ದಿನಾಂಕ: 02-01-2022 ರಂದು ಮುಂಜಾನೆ 09-30 ಗಂಟೆಗೆ ಮನೆಯಿಂದ ಹೊರ ಹೋದವನು, ರಾತ್ರಿಯಾದರೂ ಸಹ ಮನೆಗೆ ಬರದಿದ್ದಾಗ ಪಿರ್ಯಾದಿಯವರು 21-30 ಗಂಟೆಗೆ ಫೋನ್ ಮಾಡಿದಾಗ ‘ತಾನು ಮನೆಗೆ ಲೇಟಾಗಿ ಬರುತ್ತೇನೆ’ ಎನ್ನುವುದಾಗಿ ತಿಳಿಸಿದ್ದು, ಮೃತ ದೇವಿದಾಸ ಈತನು ದಿನಾಂಕ: 02-01-2022 ರಂದು 21-30 ಗಂಟೆಯಿಂದ ದಿನಾಂಕ: 03-01-2022 ರಂದು ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಸರಾಯಿ ಕುಡಿದ ನಶೆಯಲ್ಲಿ ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಬೇಸತ್ತು, ತಮ್ಮ ಮನೆಯ ಕೊಟ್ಟಿಗೆಯ ಹತ್ತಿರ ಇರುವ ನುಗ್ಗೆ ಮರಕ್ಕೆ ನೈಲಾನ್ ಹಗ್ಗವನ್ನು ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಬಗ್ಗೆ ಪಿರ್ಯಾದಿ ಶ್ರೀ ಅನಂತ ತಂದೆ ಬಲೀಂದ್ರ ಗೌಡ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೂಲೆಗದ್ದೆ, ದುಂಡಕುಳಿ, ದಿವಗಿ, ತಾ: ಕುಮಟಾ ರವರು ದಿನಾಂಕ: 03-01-2022 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 04-01-2022 11:53 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080