ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-07-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 392 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಕ್ರೀಮ್, ಹಳದಿ ಬಣ್ಣದ ಶರ್ಟ್ ಧರಿಸಿದ ಸುಮಾರು 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಲಿದು ಬಂದಿರುವುದಿಲ್ಲ. ಪಿರ್ಯಾದಿಯವರು ಮತ್ಸ್ಯಗಂಧಾ ಟ್ರೇನ್ ನಂ: 02619 ಸ್ಪೇಶಿಯಲ್ ಕೋಚ್ ನಂ: ಎಸ್-9 ನೇದರಲ್ಲಿ ಮುಂಬಯಿಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿರುವಾಗ ಕಾರವಾರದ ರೈಲ್ವೇ ಸ್ಟೇಶನದಿಂದ ಸುಮಾರು 1-2 ಕಿ.ಮೀ ದೂರದ ಅಂತರದಲ್ಲಿ ದಿನಾಂಕ: 03-07-2021 ರಂದು ಬೆಳಗಿನ ಜಾವ 04-00 ಗಂಟೆಯ ಸಮಯಕ್ಕೆ  ನಮೂದಿತ ಆರೋಪಿತನು ಸುಮಾರು 3 ಲಕ್ಷ ರೂಪಾಯಿ ಕಿಮ್ಮತ್ತಿನ ಬಂಗಾರದ ಒಡವೆಗಳು, ಮೊಬೈಲ್ ಪೋನ್ ಹಾಗೂ 5,000/- ರೂಪಾಯಿ ನಗದು ಹಣ ಇದ್ದ ಪಿರ್ಯಾದಿಯವರ ಕೆಂಪು ಬಣ್ಣದ ಹ್ಯಾಂಡ್ ಬ್ಯಾಗ್‍ ಅನ್ನು ಸುಲಿಗೆ ಮಾಡಿಕೊಂಡು ಒಯ್ದ ಬಗ್ಗೆ ಪಿರ್ಯಾದಿ ಶ್ರೀಮತಿ ಹರ್ಷಾ ಪೂಜಾರಿ, ಪ್ರಾಯ-26 ವರ್ಷ, ಸಾ|| ಮನೆ ನಂ: 203, ಸಾಗರ ಕೃಪಾ, ಗೌಂಡೇರಿ ಗುಪ್ತೆ ರೋಡ್, ದೊಂಬಿವೇಲಿ ವೆಸ್ಟ್, ಥಾಣೆ, ಮಹಾರಾಷ್ಟ್ರ (ಸದ್ರಿ ಪಿರ್ಯಾದಿಯವರು ಸದ್ರಿ ರೇಲ್ವೆಯ ಸಿನಿಯರ್ ಟಿ.ಟಿ.ಇ ರವರಿಗೆ ನಮೂನೆಯಲ್ಲಿ ನೀಡಿದ ದೂರನ್ನು, ಆರ್.ಪಿ.ಎಫ್ ಕಾರವಾರ) ರವರು ದಿನಾಂಕ: 03-07-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 128/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಂಭು ತಂದೆ ಮಂಜುನಾಥ ಮಡಿವಾಳ, ಪ್ರಾಯ-45 ವರ್ಷ, ಸಾ|| ಮೂರೂರು, ತಾ: ಕುಮಟಾ (ಟಿಪ್ಪರ್ ಲಾರಿ ನಂ: ಕೆ.ಎ-47/ಎ-1944 ನೇದರ ಚಾಲಕ). ಈತನು ದಿನಾಂಕ: 03-07-2021 ರಂದು 09-15 ಗಂಟೆಗೆ ತಾನು ಚಲಾಯಿಸುತ್ತಿದ್ದ ಟಿಪ್ಪರ್ ಲಾರಿ ನಂ: ಕೆ.ಎ-47/ಎ-1944 ನೇದನ್ನು ರಾಜ್ಯ ಹೆದ್ದಾರಿ ಸಂಖ್ಯೆ-48 ರಲ್ಲಿ ಕುಮಟಾ ಕಡೆಯಿಂದ ಚಂದಾವರ ಕಡೆಗೆ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು ಹೆರವಟ್ಟಾದ ಬೊಂಬೆನಾಥ ದೇವಸ್ಥಾನದ ಹತ್ತಿರ ತಾನು ಚಲಾಯಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಒಮ್ಮೇಲೆ ಬಲಕ್ಕೆ ಹಾಗೂ ಎಡಕ್ಕೆ ಚಲಾಯಿಸಿ, ಚಂದಾವರ ಕಡೆಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಪ್ಯಾಸೆಂಜರ್ ರಿಕ್ಷಾ ನಂ: ಕೆ.ಎ-47/8030 ನೇದಕ್ಕೆ ಟಿಪ್ಪರ್ ಲಾರಿಯ ಬಲಭಾಗದ ಹಿಂಬದಿಯ ಟೈಯರ್ ಅನ್ನು ತಾಗಿಸಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಸಂಜನಾ ಕೇಶವ ನಾಯ್ಕ, ಪ್ರಾಯ-37 ವರ್ಷ, ಸಾ|| ಉಸರಿ, ತಾ: ಶಿರಸಿ ಇವಳಿಗೆ ಬಲಗಣ್ಣಿನ ಹತ್ತಿರ ಹಾಗೂ ಬಲಗಾಲಿನ ಮೊಣಗಂಟಿಗೆ ಗಾಯನೋವಾಗಲು ಆರೋಪಿ ಟಿಪ್ಪರ್ ಲಾರಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಪ್ರಭಾಕರ ತಂದೆ ನಾಗೇಶ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್ ಕೆಲಸ, ಸಾ|| ಕೋನಳ್ಳಿ, ತಾ: ಕುಮಟಾ ರವರು ದಿನಾಂಕ: 03-07-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಯಂತ ತಂದೆ ನಾರಾಯಣ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೇಲಿನ ಇಡಗುಂಜಿ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-3860 ನೇದರ ಸವಾರ). ದಿನಾಂಕ: 01-07-2021 ರಂದು 18-15 ಗಂಟೆಗೆ ಪಿರ್ಯಾದಿ ಹಾಗೂ ಪಿರ್ಯಾದಿಯ ಸಂಬಂಧಿ ಶ್ರೀ ಶಿವಾನಂದ ತಂದೆ ನಾಗಪ್ಪ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗುಣವಂತೆ, ಮಂಕಿ, ತಾ: ಹೊನ್ನಾವರ ಇಬ್ಬರೂ ಸೇರಿ ಹೊನ್ನಾವರ ತಾಲೂಕಿನ ಕೊಂಡದಕುಳಿ ಕಡೆಯಿಂದ ಹಾರುಮುಲ್ಲೆ ಕಡೆಗೆ ರಸ್ತೆಯ ಮೇಲಾಗಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಅಂದರೆ ಇಡಗುಂಜಿ ಕಡೆಯಿಂದ ಮಾಗೋಡ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-3860 ನೇದರ ಸವಾರನಾದ ನಮೂದಿತ ಆರೋಪಿತನು ಹಾರುಮುಲ್ಲೆ ಕ್ರಾಸ್ ಹತ್ತಿರ ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹಿತ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ನಿಯಂತ್ರಿಸದೇ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ರಸ್ತೆಯ ಎಡಕ್ಕೆ ಚಲಾಯಿಸಿ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಾಯಾಳು ಶ್ರೀ ಶಿವಾನಂದ ತಂದೆ ನಾಗಪ್ಪ ನಾಯ್ಕ ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಶ್ರೀ ಶಿವಾನಂದ ನಾಯ್ಕ ಈತನ ಎಡಗೈಗೆ ರಕ್ತಗಾಯ ಪಡಿಸಿ, ತನ್ನ ಮೋಟಾರ್ ಸೈಕಲ್ ಜಖಂ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಬಾಬು ತಂದೆ ನಾರಾಯಣ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೇಲಿನ ಇಡಗುಂಜಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 03-07-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 177/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಭಾಗ್ಯಲಕ್ಷ್ಮಿ ತಂದೆ ಶಿವಾನಂದ ತಡಸದ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಇಂದೂರು, ತಾ: ಮುಂಡಗೋಡ. ಪಿರ್ಯಾದಿಯವರ ತಂಗಿಯಾದ ಇವಳು ದಿನಾಂಕ: 01-07-2021 ರಂದು ಬೆಳಗ್ಗೆ 08-30 ಗಂಟೆಗೆ ‘ಕಾಲೇಜಿಗೆ ಹೋಗಿ ವ್ಯಾಕ್ಸಿನ್ ರಿಪೋರ್ಟ್ ಕೊಟ್ಟು ಬರುತ್ತೇನೆ’ ಅಂತಾ ತನ್ನ ತಾಯಿಯ ಬಳಿ ಹೇಳಿ ಹೋದವಳು, ಪರತ್ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾದವಳಿಗೆ ಪಿರ್ಯಾದಿಯವರು ಮುಂಡಗೋಡದಲ್ಲಿ ಹಾಗೂ ಧಾರವಾಡ, ಶೇರೆವಾಡ ಹಾಗೂ ತಮ್ಮ ಸಂಬಂಧಿಕರಲ್ಲಿ ವಿಚಾರಿಸಿದರಲ್ಲಿ ಅವಳು ಪತ್ತೆಯಾಗಿರುವುದಿಲ್ಲ. ಕಾಣೆಯಾದ ತನ್ನ ತಂಗಿಯನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮೃತ್ಯುಂಜಯ ತಂದೆ ಶಿವಾನಂದ ತಡಸದ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ಇಂದೂರು, ತಾ: ಮುಂಡಗೋಡ ರವರು ದಿನಾಂಕ: 03-07-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-07-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಂಗಾರಾಮಸಿಂಗ್ ತಂದೆ ಶಂಕರಸಿಂಗ್ ರಜಪೂತ್, ಪ್ರಾಯ-55 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಸ್ಸಾಪುರ, ತಾ: ಮುಂಡಗೋಡ. ಪಿರ್ಯಾದಿಯ ತಂದೆಯಾದ ಇವರು ತಾವು ಬೆಳೆ ಬೆಳೆಯಲು ತಮ್ಮ ಹೆಸರಿನಲ್ಲಿ ಹಾಗೂ ಪಿರ್ಯಾದಿಯ ತಾಯಿಯವರ ಹೆಸರಿನಲ್ಲಿ ಬ್ಯಾಂಕ್, ಇತರೇ ಸಂಘ ಸಂಸ್ಥೆ ಹಾಗೂ ಸೊಸೈಟಿಗಳಿಂದ ಬೆಳೆ ಸಾಲವನ್ನು ಮಾಡಿದ್ದು, ಬೆಳೆದ ಬೆಳೆಯು ಸರಿಯಾಗಿ ಬೆಳೆಯದೇ ಇದ್ದುದರಿಂದ ಪುನಃ ಸಾಲ ಮಾಡಿದ ಹಣದಿಂದ ಬೆಳೆಯನ್ನು ಬೆಳೆದಿದ್ದು, ಸಾಲವು ಬಹಳವಾಗಿದ್ದರಿಂದ ಸಾಲವನ್ನು ತೀರಿಸಲು ಆಗುವುದಿಲ್ಲ ಅಂತಾ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 02-07-2021 ರಂದು ರಾತ್ರಿ 09-00 ಗಂಟೆಯಿಂದ 11-30 ಗಂಟೆಯ ನಡುವಿನ ಅವಧಿಯಲ್ಲಿ ನಮ್ಮ ಹೊಲದಲ್ಲಿ ಹೊಲಕ್ಕೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅವರ ಮೃತದೇಹವು ಹೊಲದಲ್ಲಿಯೇ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಧುಸಿಂಗ್ ತಂದೆ ಗಂಗಾರಾಮಸಿಂಗ್ ರಜಪೂತ, ಪ್ರಾಯ-26 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ||  ಬಸ್ಸಾಪುರ, ತಾ: ಮುಂಡಗೋಡ ರವರು ದಿನಾಂಕ: 03-07-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಪ್ರಿಯಾ ಕೋಂ. ಮಂಜುನಾಥ ಪಾರ್ಸೆರ್, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದಾಸನಕೊಪ್ಪ, ತಾ: ಶಿರಸಿ. ನಮೂದಿತ ಇವಳನ್ನು ಶಿರಸಿ ತಾಲೂಕಿನ ದಾಸನಕೊಪ್ಪದ ಶ್ರೀ ಮಂಜುನಾಥ ತಂದೆ ನಿಂಗಪ್ಪ ಪಾರ್ಸೆರ್ ಇವರೊಂದಿಗೆ ಅವಳ ಒಪ್ಪಿಗೆ ಪಡೆದುಕೊಂಡು, ಅವಳ ಮನೆಯವರು ದಿನಾಂಕ: 26-05-2021 ರಂದು ಮದುವೆ ಮಾಡಿಕೊಟ್ಟಿದ್ದು, ಮದುವೆಯ ಮೊದಲು ಬೇರೊಬ್ಬನನ್ನು ಪ್ರೀತಿಸುತ್ತಿದ್ದು, ಮದುವೆಯಾದ ನಂತರ ಪ್ರೀತಿಯ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ: 27-06-2021 ರಂದು ಬೆಳಿಗ್ಗೆ 08-00 ಗಂಟೆಗೆ ವಿಷ ಸೇವನೆ ಮಾಡಿದವಳಿಗೆ ಉಪಚಾರದ ಕುರಿತು ಶಿರಸಿಯ ಮಾರಿಕಾಂಬಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಅವಳನ್ನು ಹೆಚ್ಚಿನ ಉಪಚಾರಕ್ಕೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 02-07-2021 ರಂದು ಸಂಜೆ 04-00 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗುತ್ಯೆಪ್ಪ ತಂದೆ ಮಂಜಪ್ಪ ತಳವಾರ, ಪ್ರಾಯ-41 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೂಗುರ, ಅಗಸನಹಳ್ಳಿ, ತಾ: ಸೊರಬಾ, ಜಿ: ಶಿವಮೊಗ್ಗ ರವರು ದಿನಾಂಕ: 03-07-2021 ರಂದು 00-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 08-07-2021 10:14 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080