ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 03-06-2021
at 00:00 hrs to 24:00 hrs
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 113/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪಾಂಡುರಂಗ ತಂದೆ ಗಣೇಶ ಮೇಸ್ತಾ, ಪ್ರಾಯ-41 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕನ್ನಡ ಶಾಲೆಯ ಹತ್ತಿರ, ಚಿತ್ರಗಿ, ತಾ: ಕುಮಟಾ. ಈತನು ದಿನಾಂಕ: 03-06-2021 ರಂದು 14-00 ಗಂಟೆಯ ಸುಮಾರಿಗೆ ಕುಮಟಾ ತಾಲೂಕಿನ ಚಿತ್ತರಂಜನ್ ಟಾಕೀಸ್ ಹತ್ತಿರ ಕುಡ್ತಗಿಬೈಲ್ ಮೀನು ಮಾರುಕಟ್ಟೆಗೆ ಹೋಗುವ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕಾಗಿ ಯಾವುದೇ ಪಾಸ್ ಯಾ ಪರ್ಮಿಟ್ ಹೊಂದದೇ ಎರಡು ಪಾಲಿಥಿನ್ ಚೀಲದಲ್ಲಿ 1). 180 ML ನ Bagpiper Deluxe Whisky-48 ಸ್ಯಾಚೆಟ್, ಅ||ಕಿ|| 5,280/- ರೂಪಾಯಿ, 2). 180 ML ನ Old Tavern Whisky-48 ಸ್ಯಾಚೆಟ್, ಅ||ಕಿ|| 4,320/- ರೂಪಾಯಿ, 3). 90 ML ನ Hayward Cheers Whisky-96 ಸ್ಯಾಚೆಟ್, ಅ||ಕಿ|| 3,456/- ರೂಪಾಯಿ, 4). 90 ML ನ Original Choice Whisky-96 ಸ್ಯಾಚೆಟ್, ಅ||ಕಿ|| 3,456/- ರೂಪಾಯಿ, 5). 650 ML ನ UB Export Strong Premier Beer-60 ಗಾಜಿನ ಬಾಟಲಿಗಳು, ಅ||ಕಿ|| 7,800/- ರೂಪಾಯಿ, ಹೀಗೆ ಒಟ್ಟೂ 24,312/- ರೂಪಾಯಿ ಬೆಲೆಯುಳ್ಳದ್ದನ್ನು ಮಾರಾಟ ಮಾಡುವ ಉದ್ದೇಶದಿಂದ, ಸಾಗಾಟ ಮಾಡುವ ತಯಾರಿಯಲ್ಲಿ ವಾಹನಕ್ಕಾಗಿ ಕಾಯುತ್ತಿರುವಾಗ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಪ್ರಕಾಶ ಆರ್. ನಾಯ್ಕ, ಪೋಲಿಸ್ ವೃತ್ತ ನೀರಿಕ್ಷಕರು, ಕುಮಟಾ ವೃತ್ತ, ಕುಮಟಾ ರವರು ದಿನಾಂಕ: 03-06-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 114/2021, ಕಲಂ: 269, 336 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಲಕ್ಷ್ಮಣ ತಂದೆ ದೇವು ಗೌಡ, ಪ್ರಾಯ-40 ವರ್ಷ, ವೃತ್ತಿ-ಪೆಟ್ಟಿಗೆ ಅಂಗಡಿ ವ್ಯಾಪಾರ, ಸಾ|| ವಾಲ್ಗಳ್ಳಿ, ತಾ: ಕುಮಟಾ. ಈತನು ಕೋವಿಡ್-19 ವೈರಸ್ ಪ್ರಸರಣವನ್ನು ತಡೆಟಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರವು ಮಾಡಿರುವ ಕೋವಿಡ್ ಕರ್ಫ್ಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಕೋವಿಡ್-19 ಕೊರೋನಾ ಸೋಂಕು ಸಾರ್ವಜನಿಕರಿಗೆ ಹರಡುವ ಬಗ್ಗೆ ತಿಳಿದಿದ್ದರೂ ಸಹ ಈ ಬಗ್ಗೆ ನಿರ್ಲಕ್ಷತೆ ವಹಿಸಿ, ಯಾವುದೇ ಪರವಾನಿಗೆ ಇಲ್ಲದೇ HAYWARDS CHEERS WHISKY ಅಂತಾ ಬರೆದ 90 ML ಅಳತೆಯ ಮದ್ಯ ತುಂಬಿದ ಸ್ಯಾಚೆಟ್ ಗಳು ಒಟ್ಟು-124. ಒಟ್ಟು ಮೌಲ್ಯ 4,340/- ರೂಪಾಯಿ ಬೆಲೆಬಾಳುವ ಸಾರಾಯಿಯನ್ನು ಜನರಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡುವ ವೇಳೆ ದಾಳಿಯ ಕಾಲ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-01), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 03-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 155/2021, ಕಲಂ: 463, 464, 467, 468, 474, 415, 416, 417, 418, 420, 427, 379 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಭಾಸ್ಕರ ತಂದೆ ತಿಮ್ಮ ಹಸ್ಲರ, ವೃತ್ತಿ-ವ್ಯಾಪಾರ, ಸಾ|| ಬಾಳೇಸರ, ತಾ: ಸಿದ್ದಾಪೂರ, 2]. ಲೀಲಾಧರ ಎಸ್. ನಾಯ್ಕ, ವೃತ್ತಿ-ವ್ಯಾಪಾರ, ಸಾ|| ಗಾಂಧಿನಗರ, ತಾ: ಶಿರಸಿ, 3]. ಗೋಪಾಲಕೃಷ್ಣ ಸೂರಪ್ಪ ಶೆಟ್ಟಿ, ವೃತ್ತಿ-ವ್ಯಾಪಾರ, ಸಾ|| ಮಾರಿಕಾಂಬಾ ಆಸ್ಪತ್ರೆ ಹತ್ತಿರ, ಸಾವರ್ಕರ ರಸ್ತೆ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು 2018 ನೇ ಸಾಲಿನಲ್ಲಿ ಪಿರ್ಯಾದಿಯವರ ಮನೆಗೆ ಬಂದು ‘ಸರ್ಕಾರದಿಂದ ಮೋದಿ ಸ್ಕೀಮ್ ಬಂದಿದ್ದು, ಅದರಿಂದ ಹಣವನ್ನು ತೆಗೆಸಿಕೊಡುತ್ತೇನೆ’ ಅಂತಾ ಪಿರ್ಯಾದಿಯನ್ನು ನಂಬಿಸಿ, ಪಿರ್ಯಾದಿಯ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಫೋಟೊ ಹಾಗೂ ಸಿಂಡಿಕೇಟ್ ಬ್ಯಾಂಕ್ ಗೇರುಸೊಪ್ಪಾ ಶಾಖೆಯ ಎರಡು ಖಾಲಿ ಸಹಿ ಮಾತ್ರ ಮಾಡಿದ ಚೆಕ್ ನಂ: 076067 ಹಾಗೂ ಚೆಕ್ ನಂ: 076068 ನೇದನ್ನು ತೆಗೆದುಕೊಂಡು ಹೋಗಿ ಆರೋಪಿ 3 ನೇಯವನಿಗೆ ಚೆಕ್ ನಂ: 076067 ನೇದನ್ನು ಹಾಗೂ ಆರೋಪಿ 2 ನೇಯವನಿಗೆ ಚೆಕ್ ನಂ: 076068 ನೇದನ್ನು ಕಾನೂನು ಬಾಹಿರವಾಗಿ ಪಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಅಕ್ರಮವಾಗಿ ವರ್ಗಾಯಿಸಿ, ಹೇಗಾದರೂ ಮಾಡಿ ಪಿರ್ಯಾದಿಯವರ ಕಡೆಯಿಂದ ಚೆಕ್ ಗಳ ಮೂಲಕ ಹಣ ಪಡೆಯುವ ದುರುದ್ದೇಶದಿಂದ ಅವರಿಗೆ ಕೊಟ್ಟು ಆರೋಪಿ 2 ಮತ್ತು 3 ನೇಯವರು ಬ್ಯಾಂಕಿಗೆ ವಟಾಯಿಸಿ, ಪ್ರತಿಯೊಂದು ಚೆಕ್ ನ ಮೇಲೆ 2,50,000/- ರೂಪಾಯಿಯಂತೆ ಪಿರ್ಯಾದಿಯು ಕೈಗಡ ಸಾಲ ಪಡೆದಿರುತ್ತಾನೆ ಅಂತಾ ಮೋಸದಿಂದ ಪಿರ್ಯಾದಿಯನ್ನು ವಂಚಿಸಿ, ಸುಳ್ಳು ಮಜಕೂರಿನ ನೋಟಿಸ್ ಗಳನ್ನು ಪಿರ್ಯಾದಿಗೆ ನೀಡಿ, ಚೆಕ್ ಗಳನ್ನು ಕದ್ದು ಅಪಹರಿಸಿ, ಆರೋಪಿತರು ಸಂಗನಮತ ಮಾಡಿಕೊಂಡು ಪಿರ್ಯಾದಿಯನ್ನು ಪುಸಲಾಯಿಸಿ ಮೋಸ, ವಂಚನೆ ಹಾಗೂ ಚೆಕ್ ಗಳ ಅಕ್ರಮ ವರ್ಗಾವಣೆ ಮಾಡಿ, ಲಾಭಕ್ಕಾಗಿ ಅಪ್ರಾಮಾಣಿಕವಾಗಿ ವರ್ತಿಸಿ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ಗಣಪಯ್ಯ ಗೌಡ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆಂಬಾಲ, ಉಪ್ಪೊಣಿ, ತಾ: ಹೊನ್ನಾವರ ರವರು ದಿನಾಂಕ: 03-06-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಜೋಯಿಡಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 28/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಶೈಲಾ ಕೋಂ. ಶ್ರೀಕಾಂತ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಚಿಕಲಂಬೆ, ಮೇಸ್ತ ಬಿರೋಡಾ, ತಾ: ಜೋಯಿಡಾ. ಇವಳು ಪಿರ್ಯಾದಿಯ ಹೆಂಡತಿಯಾಗಿದ್ದು, ದಿನಾಂಕ: 02-06-2021 ರಂದು ಬೆಳಿಗ್ಗೆ ನಾನು (ಪಿರ್ಯಾದಿ) ಕೆಲಸಕ್ಕೆ ಹೋಗಿದ್ದೆ. ಆಗ ಮನೆಯಲ್ಲಿ ನನ್ನ ನಾಲ್ಕು ಜನ ಮಕ್ಕಳು ಹಾಗೂ ನನ್ನ ಹೆಂಡತಿ ಶ್ರೀಮತಿ ಶೈಲಾ ಕೋಂ. ಶ್ರೀಕಾಂತ ನಾಯ್ಕ ಇವರು ಮನೆಯಲ್ಲಿಯೇ ಇದ್ದರು, ನಂತರ ನಾನು ಸಂಜೆ 04-00 ಗಂಟೆಗೆ ಕೆಲಸದಿಂದ ಮರಳಿ ಮನೆಗೆ ಬಂದಾಗ ಮನೆಯಲ್ಲಿ ನಾಲ್ಕು ಜನ ಮಕ್ಕಳು ಮಾತ್ರ ಇದ್ದು, ನನ್ನ ಹೆಂಡತಿ ಕಾಣಲಿಲ್ಲ. ಆಗ ನಾನು ನನ್ನ ಮಕ್ಕಳಿಗೆ ‘ಅಮ್ಮ ಎಲ್ಲಿ ಹೋಗಿದ್ದಾಳೆ?’ ಅಂತಾ ಕೇಳಿದಾಗ, ಅವರು ‘ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ಇಲ್ಲೇ ಹೊರಗೆ ಹೋಗಿದ್ದಾಳೆ’ ಅಂತಾ ತಿಳಿಸಿದರು, ಪ್ರತಿ ದಿವಸದಂತೆ ಅಕ್ಕ ಪಕ್ಕದ ಮನೆಯ ಹತ್ತಿರ ಹೋಗಿರಬಹುದು ಅಂತಾ ತಿಳಿದು ನಾನು ಮನೆಯಲ್ಲಿಯೇ ಇದ್ದೆನು. ರಾತ್ರಿ ಆದರೂ ಸಹ ನನ್ನ ಹೆಂಡತಿ ಮನೆಗೆ ಬರಲಿಲ್ಲ. ಆಗ ನಾವು ಗಾಬರಿಗೊಂಡು ನಮ್ಮ ಅಕ್ಕಪಕ್ಕದ ಮನೆಯವರಲ್ಲಿ ಮತ್ತು ನಮ್ಮ ಸಂಬಂಧಿಕರಲ್ಲಿ ವಿಚಾರಿಸಿದಾಗ ಅವರು ಯಾರೂ ಸಹ ನನ್ನ ಹೆಂಡತಿ ಶೈಲಾ ಇವಳಿಗೆ ಕಂಡಿಲ್ಲವಾಗಿ ತಿಳಿಸಿದರು. ನನ್ನ ಹೆಂಡತಿಗೆ ಎಲ್ಲಾ ಕಡೆ ಹುಡುಕಾಡಿದರು ಈವರೆಗೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಕಾರಣ ಕಾಣೆಯಾದ ನನ್ನ ಹೆಂಡತಿಯನ್ನು ಹುಡುಕಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶ್ರೀಕಾಂತ ತಂದೆ ಗೋವಿಂದ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಚಾಲಕ, ಸಾ|| ಚಿಕಲಂಬೆ, ಮೇಸ್ತ ಬಿರೋಡಾ, ತಾ: ಜೋಯಿಡಾ ರವರು ದಿನಾಂಕ: 03-06-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 37/2021, ಕಲಂ: 269, 270 ಸಹಿತ 34 ಐಪಿಸಿ ಹಾಗೂ ಕಲಂ: 51(ಬಿ) ವಿಪತ್ತು ನಿರ್ವಹಣಾ ಕಾಯ್ದೆ-2005 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜಪ್ಪ ಹೊನ್ನಪ್ಪ ಜಾಡರ್, ಪ್ರಾಯ-36 ವರ್ಷ, ವೃತ್ತಿ-ವ್ಯಾಪಾರ, 2]. ಮಾಲತೇಶ ಮಾರ್ತಾಂಡಪ್ಪ ಬಡಿಗೇರ್, ಪ್ರಾಯ-20 ವರ್ಷ, ವೃತ್ತಿ-ವ್ಯಾಪಾರ, ಸಾ|| (ಇಬ್ಬರೂ) ಸವಿಕೆರೆ, ತಾ: ಹಾನಗಲ್, ಜಿ: ಹಾವೇರಿ. ಮಾನ್ಯ ಕರ್ನಾಟಕ ಸರ್ಕಾರ, ಬೆಂಗಳೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಅಧೀಕೃತ ಆದೇಶ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೊರೋನಾ ಕರ್ಫ್ಯೂ (ಲಾಕಡೌನ್) ಜಾರಿ ಮಾಡಿದ್ದರೂ ಸಹ ನಮೂದಿತ ಆರೋಪಿತರು ದಿನಾಂಕ: 03-06-2021 ರಂದು 08-30 ಗಂಟೆಯ ಸುಮಾರಿಗೆ ಶಿರಸಿ ಶಹರದ ನಟರಾಜ ರಸ್ತೆಯ ಹರ್ಷಿತಾ ಫ್ಯಾನ್ಸಿ ಸ್ಟೋರ್ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ಮಾಡಿ, ಕೊರೋನಾ ಸಾಂಕ್ರಾಮಿಕ ರೋಗದ ಕರ್ಫ್ಯೂ ಜಾರಿಯ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ, ಕೋವಿಡ್-19 ವೈರಾಣು ಹರಡುವಿಕೆ ಉದ್ದೇಶದಿಂದ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 03-06-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 106/2021, ಕಲಂ: 269, 271 ಐಪಿಸಿ ಹಾಗೂ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಹಾದೇವ ತಂದೆ ಭೀಮಪ್ಪ ಸುಣಗಾರ, ಪ್ರಾಯ-63 ವರ್ಷ, ವೃತ್ತಿ-ವ್ಯಾಪಾರ, ಸಾ|| ತತ್ವಣಗಿ, ತಾ: ಹಳಿಯಾಳ. ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ರೋಗ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಸರ್ಕಾರವು ಹೊರಡಿಸಿದ ಲಾಕಡೌನ್ ನಿಯಮ ಜಾರಿಯಲ್ಲಿದ್ದರೂ ಸಹ ನಮೂದಿತ ಆರೋಪಿತನು ಸದರ ಲಾಕಡೌನ್ ನಿಯಮವನ್ನು ಉಲ್ಲಂಘಿಸಿ, ಕೋವಿಡ್-19 ರೋಗದ ಸೋಂಕು ಹರಡುವ ಸಂಭವವಿದ್ದರೂ ಸಹ ಆ ಬಗ್ಗೆ ನಿರ್ಲಕ್ಷ್ಯತನ ವಹಿಸಿ, ಹಳಿಯಾಳ ತಾಲೂಕಿನ ತತ್ವಣಗಿ ಗ್ರಾಮದ ಗ್ರಾಮ ಪಂಚಾಯತ್ ಹತ್ತಿರ ದಿನಾಂಕ: 03-06-2021 ರಂದು 13-00 ಗಂಟೆಗೆ ತನ್ನ ಅಕ್ರಮ ಲಾಭಕ್ಕಾಗಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸರಾಯಿಯನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತಿದ್ದಾಗ 1). 500 ML ನ KING FISHER STRONG PREMIUM BRAND ನ ಬಿಯರ್ ಟಿನ್ ಗಳು-04, ಅ||ಕಿ|| 480/- ರೂಪಾಯಿ, 2). 180 ML ನ ORIGINAL CHOICE DELUXE WHISKEY BRAND ನ ಟೆಟ್ರಾ ಪ್ಯಾಕೆಟ್ ಗಳು-45, ಅ||ಕಿ|| 3,150/- ರೂಪಾಯಿ, 3). 90 ML ನ ORIGINAL CHOICE DELUXE WHISKEY BRAND ನ ಟೆಟ್ರಾ ಪ್ಯಾಕೆಟ್ ಗಳು-90, ಅ||ಕಿ|| 3,150/- ರೂಪಾಯಿ, 4). ನಗದು ಹಣ 2,750/- ರೂಪಾಯಿ ಇವುಗಳೊಂದಿಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಕಾ&ಸು), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 03-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 68/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ನಾರಾಯಣ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾನಗೋಡ, ತಾ: ಸಿದ್ದಾಪುರ. ಈತನು ದಿನಾಂಕ: 03-06-2021 ರಂದು 11-30 ಗಂಟೆಗೆ ಸಿದ್ದಾಪುರ ತಾಲೂಕಿನ ಕಾನಗೋಡ ಊರಿನಲ್ಲಿರುವ ತನ್ನ ಮನೆಯ ಎದುರಿನ ಅಂಗಳದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಅನಧೀಕೃತವಾಗಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 6 ಟೆಟ್ರಾ ಪ್ಯಾಕೆಟ್ ಗಳು 2). 2 ಪ್ಲಾಸ್ಟಿಕ್ ಗ್ಲಾಸುಗಳು, 3). Original Choice Deluxe Whisky 90 ML ಅಂತಾ ಬರೆದ 2 ಮದ್ಯದ ಖಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ ಚಂದಾವರ, ಪಿ.ಎಸ್.ಐ (ಕ್ರೈಂ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 03-06-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 03-06-2021
at 00:00 hrs to 24:00 hrs
ಸಿದ್ದಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಜಯಲಕ್ಷ್ಮಿ ಕೋಂ. ಶುಭಮೂರ್ತಿ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಮಾವಿನಗದ್ದೆ, ಗ್ರಾ|| ಸೋವಿನಕೊಪ್ಪ. ತಾ: ಸಿದ್ದಾಪುರ. ಸುದ್ದಿದಾರರ ತಂಗಿಯಾದ ಇವಳು ತನ್ನ ಮನೆಯಲ್ಲಿ ತನ್ನ ಮಗ, ಗಂಡ ಹಾಗೂ ಮಾವನೊಂದಿಗೆ ವಾಸವಾಗಿದ್ದವಳು, ದಿನಾಂಕ: 02-06-2021 ರಂದು ಸಂಜೆ 06-00 ಗಂಟೆಗೆ ಸ್ನಾನಕ್ಕೆಂದು ಅವಳ ಮನೆಯ ಬಚ್ಚಲಿನ ಕೋಣೆಯಲ್ಲಿ ಒಲೆಗೆ ಸೀಮೆ ಎಣ್ಣೆ ಉಗ್ಗಿ ಬೆಂಕಿ ಕಡ್ಡಿ ಗೀರಿದಾಗ ಆಕಸ್ಮಿಕವಾಗಿ ಬೆಂಕಿ ಏಕಾಏಕಿ ಅವಳು ಉಟ್ಟುಕೊಂಡ ಬಟ್ಟೆಗೆ ತಾಗಿ ಮೈಮೇಲೆ ಬೆಂಕಿ ಹತ್ತಿಕೊಂಡು ಅವಳ ಮುಖಕ್ಕೆ, ಎದೆಗೆ, ಹೊಟ್ಟೆಗೆ, ಬೆನ್ನಿಗೆ ಹಾಗೂ ತೊಡೆಯ ಭಾಗಕ್ಕೆ ಮತ್ತು ಎರಡೂ ಕೈಗಳಿಗೆ ಸುಟ್ಟ ಗಾಯಗಳಾಗಿದ್ದು, ತದನಂತರ ಸುದ್ದಿ ತಿಳಿದು ಬಂದ ಅವಳ ಅಣ್ಣ ಹಾಗೂ ಅವಳ ಗಂಡ ಸೇರಿಕೊಂಡು ಅವಳನ್ನು ಸಿದ್ದಾಪುರದ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಂದು ದಾಖಲಿಸಲಾಗಿ, ಅವಳು ಉಪಚಾರದಲ್ಲಿರುತ್ತಾ ದಿನಾಂಕ: 03-06-2021 ರ ನಸುಕಿನ ಜಾವ 02-50 ಗಂಟೆಗೆ ಮೃತ ಪಟ್ಟಿದ್ದು, ತನ್ನ ತಂಗಿಯು ಸ್ನಾನಕ್ಕೆಂದು ಬಚ್ಚಲು ಮನೆಯ ಒಲೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚುತ್ತಿರುವಾಗ ಆಕಸ್ಮಿಕವಾಗಿ ಬೆಂಕಿಯು ಅವಳು ಉಟ್ಟುಕೊಂಡ ಬಟ್ಟೆಗೆ ತಾಗಿ ಮೈಮೇಲೆ ಸುಟ್ಟಗಾಯಗಳಾಗಿ ಅದರಿಂದಲೇ ಸಾವು ಸಂಭವಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಾಯ ತಂದೆ ಕನ್ನಾ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಾದ್ರಿಮನೆ, ತಾ: ಸಿದ್ದಾಪುರ ರವರು ದಿನಾಂಕ: 03-06-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======