ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂ:- 03-03-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಉಲ್ಲಾಸ ತಂದೆ ಲಕ್ಷ್ಮಣ ತಾರಿ, ಪ್ರಾಯ-51 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಪುಟ್ಟಿವಾಡ, ಸಣ್ಣ ಮಸೀದಿ ಹತ್ತಿರ, ನಂದನಗದ್ದಾ, ಬಾಡ, ಕಾರವಾರ, 2]. ದೀಪಕ ಆನಂದು ನಾಯ್ಕ, ಸಾ|| ಗಿಂಡಿವಾಡ, ಬಾಡ, ಕಾರವಾರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 02-03-2021 ರಂದು 19-15 ಗಂಟೆಗೆ ಕಾರವಾರದ ಸಣ್ಣ ಮಸೀದಿ ಹತ್ತಿರದ ಸಾರ್ವಜನಕ ಸ್ಥಳದಲ್ಲಿ ನಿಂತುಕೊಂಡು ಆರೋಪಿ 2 ನೇಯವನು ತಿಳಿಸಿದಂತೆ ತಮ್ಮ ಲಾಭದ ಸಲುವಾಗಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಅದೃಷ್ಠದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿ ಆರೋಪಿ 1 ನೇಯವನನ್ನು ಹಾಗೂ ಜೂಜಾಟಕ್ಕೆ ಬಳಸಿದ ಸ್ವತ್ತುಗಳನ್ನು ಹಾಗೂ ನಗದು ಹಣ 1,810/- ರೂಪಾಯಿಯನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 03-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ನಾಗರತ್ನಾ ತಂದೆ ಸುಬ್ರಾಯ ರಾಯ್ಕರ್, ಪ್ರಾಯ-47 ವರ್ಷ, ಸಾ|| ಅಡಿಗೋಣ, ತಾ: ಅಂಕೋಲಾ. ಇವಳು ಸುಮಾರು 20 ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳುತ್ತಿದ್ದವಳು, ಕಳೆದ ಒಂದು ತಿಂಗಳಿಂದ ಮನೆಯಲ್ಲಿ ತುಂಬಾ ಗಲಾಟೆ ಮತ್ತು ಜಗಳ ಮಾಡುತ್ತಾ, ತಂದೆ ತಾಯಿಯವರಿಗೆ ಶಾಪ ಹಾಕುತ್ತಾ ಇದ್ದವಳು, ದಿನಾಂಕ: 23-02-2021 ರಂದು ಸಾಯಂಕಾಲ ಸುಮಾರು 16-00 ಗಂಟೆಗೆ ಮನೆಯಿಂದ ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋದವಳು, ಇದುವರೆಗೂ ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತಾಳೆ. ಕಾಣೆಯಾದ ಸದ್ರಿಯವಳನ್ನು ಹುಡುಕಿ ಪತ್ತೆ ಮಾಡಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಸುಬ್ರಾಯ ರಾಯ್ಕರ್, ಪ್ರಾಯ-44 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಅಡಿಗೋಣ, ತಾ: ಅಂಕೋಲಾ ರವರು ದಿನಾಂಕ: 03-03-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಚಂದ್ರಕಾಂತ ಮೇಸ್ತ, ಪ್ರಾಯ-30 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಾಂದೇಹಳ್ಳ, ತಾ: ಹೊನ್ನಾವರ. ನಮೂದಿತ ಆರೋಪಿತನಿಗೆ ಪಿರ್ಯಾದಿಯವರ ಮಾಲೀಕತ್ವದ ತೇಲಂಗ್ ಕಾಂಪ್ಲೆಕ್ಸಿನ ಕೆಳ ಅಂತಸ್ತಿನಲ್ಲಿ ಒಂದು ಅಂಗಡಿಯನ್ನು ಬಾಡಿಗೆಗೆ ಕೊಟ್ಟಿದ್ದು, ಲೋಕ್ ಅದಾಲತ್‍ ನಲ್ಲಿ ಬಾಡಿಗೆ ಅವಧಿ ದಿನಾಂಕ: 01-03-2019 ರಿಂದ 01-03-2021 ವರೆಗೆ ಎರಡು ವರ್ಷಗಳ ಅವಧಿಗೆ ಮಾತ್ರ ಇದ್ದು, ಅವಧಿ ಮುಗಿದ ಕೂಡಲೇ ಆರೋಪಿತನಿಗೆ ಅಂಗಡಿಯನ್ನು ಖುಲ್ಲಾ ಪಡಿಸಿ, ದಿನಾಂಕ: 02-03-2021 ರಂದು ಅಂಗಡಿಯನ್ನು ಪಿರ್ಯಾದಿಯವರಿಗೆ ಬಿಟ್ಟು ಕೊಡತಕ್ಕದ್ದು, ಒಂದು ವೇಳೆ ಆರೋಪಿತನು ದಿನಾಂಕ: 02-03-2021 ರಂದು ಪಿರ್ಯಾದಿಯವರಿಗೆ ಬಿಟ್ಟು ಕೊಡದೇ ಇದ್ದಲ್ಲಿ, ಅದೇ ದಿನ ಪಿರ್ಯಾದಿಯವರು ಮಾನ್ಯ ನ್ಯಾಯಾಲಯದ ಮಧ್ಯಪ್ರವೇಶ ಇಲ್ಲದೆಯೇ ತಾನೇ ಸ್ವತಃ ಕಬ್ಜಾ ತೆಗೆದುಕೊಂಡು ಪ್ರತ್ಯೇಕ ಬೀಗ ಹಾಕಲು ಹಕ್ಕುದಾರನಾಗಿರುತ್ತಾನೆ. ಆರೋಪಿತನು ಸಾಮಾನು ಸರಂಜಾಮು ತೆಗೆಯದೇ ಸತಾಯಿಸಿದ್ದಲ್ಲಿ ಪಿರ್ಯಾದಿಯವರು ಆರೋಪಿತನ ಬಾಬ್ತು ವಸ್ತುಗಳ ಸಮೇತ ಸದರಿ ಅಂಗಡಿಯ ಕಬ್ಜಾವನ್ನು ತನ್ನ ಸುಪರ್ದಿಗೆ ಪಡೆಯಲು ಹಕ್ಕುದಾರನಿಗೆ, ಆರೋಪಿತನು ಯಾವುದೇ ತಕರಾರು ನಡೆಯತಕ್ಕದ್ದಲ್ಲ ಅಂತಾ ಮಾನ್ಯ ನ್ಯಾಯಾಲಯದ ಆದೇಶ ಇದ್ದಾಗಲೂ ಸಹ ಆರೋಪಿತನು ದಿನಾಂಕ: 02-03-2021 ರಂದು ಅಂಗಡಿ ಸಾಮಾನು ತೆಗೆಯದೇ ಖುಲ್ಲಾ ಪಡಿಸದೇ ಇದ್ದುದನ್ನು ಮನಗಂಡು, ಪಿರ್ಯಾದಿಯವರು ಸದರಿ ಅಂಗಡಿಗೆ ಎರಡು ಬೀಗ ಹಾಕಿ, ಗ್ಯಾಸ್ ವೆಲ್ಡಿಂಗ್ ಮಾಡಿ ಸೀಲ್ ಮಾಡಿದ್ದು ಇರುತ್ತದೆ. ದಿನಾಂಕ: 02-03-2021 ರಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ಆರೋಪಿತನು ಅಂಗಡಿಗೆ ಬಂದು ಬೈಯ್ಯುತ್ತಾ ಅಂಗಡಿಯ ಬೀಗ ಹಾಗೂ ವೆಲ್ಡಿಂಗ್ ಮಾಡಿದ ಐಟಮ್ ಗಳನ್ನು ಒಡೆದು ಹಾಕಿ, ಪಿರ್ಯಾದಿಯವರನ್ನು ಉದ್ದೇಶಿಸಿ ‘ಇನ್ನು ಮುಂದೆ ಮೊಬೈಲ್ ಅಂಗಡಿ ಎದುರು ಬಂದಲ್ಲಿ ಕೊಲೆ ಮಾಡುತ್ತೇನೆ’ ಅಂತಾ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲದಾಸ ತಂದೆ ದೇವಿದಾಸ ತೇಲಂಗ್, ಪ್ರಾಯ-64 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಜಾರ್ ರೋಡ್, ತಾ: ಹೊನ್ನಾವರ ರವರು ದಿನಾಂಕ: 03-03-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 448, 427, 504, 506 ಸಹಿತ 34 ಐಪಿಸಿ ಮತ್ತು ಕಲಂ: 2(J) THE PREVENTION OF DESTRUCTION AND LOSS OF PROPERTY ACT-1981 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹೇಶ ತಂದೆ ಚಂದ್ರಕಾಂತ ಮೇಸ್ತ, ಸಾ|| ಬಾಂದೇಹಳ್ಳ, ತಾ: ಹೊನ್ನಾವರ, 2]. ಸೂಫಿಯಾನ್, 3]. ರಾಜೇಶ, 4]. ಸುಧಾಕರ, ಸಾ|| (ಆರೋಪಿ 2 ರಿಂದ 3 ನೇಯವರು) ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನಿಗೆ ಪಿರ್ಯಾದಿಯ ಮಾಲೀಕತ್ವದ ಪಟ್ಟಣ ಪಂಚಾಯತ ಇಮಾರತಿ ನಂ: 691-ಎ4 ನೇ ತೇಲಂಗ್ ಕಾಂಪ್ಲೆಕ್ಸಿನ ಕೆಳ ಅಂತಸ್ತಿನಲ್ಲಿನ ಅಂಗಡಿ ನಂ: 4ಎ ನೇದನ್ನು ಬಾಡಿಗೆ ಕೊಟ್ಟಿದ್ದು, ಮಾನ್ಯ ಲೋಕ್ ಅದಾಲತ್ ನ್ಯಾಯಾಲಯದಲ್ಲಿ ಬಾಡಿಗೆ ಅವಧಿ ದಿನಾಂಕ: 01-03-2019 ರಿಂದ 01-03-2021 ವರೆಗೆ ಎರಡು ವರ್ಷಗಳ ಅವಧಿಗೆ ಮಾತ್ರ ಇದ್ದು, ಅವಧಿ ಮುಗಿದ ಕೂಡಲೇ ಆರೋಪಿತನು ಅಂಗಡಿಯನ್ನು ಖುಲ್ಲಾ ಪಡಿಸಿ, ದಿನಾಂಕ: 02-03-2021 ರಂದು ಅಂಗಡಿಯನ್ನು ಪಿರ್ಯಾದಿಗೆ ಬಿಟ್ಟು ಕೊಡತಕ್ಕದ್ದು, ಒಂದು ವೇಳೆ ಆರೋಪಿ 1 ನೇಯವನು ದಿನಾಂಕ: 02-03-2021 ರಂದು ಪಿರ್ಯಾದಿಗೆ ಬಿಟ್ಟುಕೊಡದೇ ಇದ್ದಲ್ಲಿ, ಅದೇ ದಿನ ಪಿರ್ಯಾದಿಯು ಮಾನ್ಯ ನ್ಯಾಯಾಲಯದ ಮಧ್ಯಪ್ರವೇಶ ಇಲ್ಲದೇಯೇ ತಾನೇ ಸ್ವತಃ ಕಬ್ಜಾ ತೆಗೆದುಕೊಂಡು ಪ್ರತ್ಯೇಕ ಬೀಗ ಹಾಕಲು ಹಕ್ಕುದಾರನಾಗಿರುತ್ತಾನೆ, ಆರೋಪಿತನು ಸಾಮಾನು ಸರಂಜಾಮು ತೆಗೆಯದೇ ಸತಾಯಿಸಿದ್ದಲ್ಲಿ ಪಿರ್ಯಾದಿಯು ಆರೋಪಿತನ ಬಾಬ್ತು ವಸ್ತುಗಳ ಸಮೇತ ಸದರಿ ಅಂಗಡಿಯ ಕಬ್ಜಾವನ್ನು ತನ್ನ ಸುಪರ್ದಿಗೆ ಪಡೆಯಲು ಹಕ್ಕುದಾರನಿಗೆ ಆರೋಪಿತನು ಯಾವುದೇ ತಕರಾರು ಮಾಡತಕ್ಕದ್ದಲ್ಲ ಅಂತಾ ಮಾನ್ಯ ನ್ಯಾಯಾಲಯದ ಆದೇಶ ಇದ್ದಾಗಲೂ ಸಹ ಆರೋಪಿ 1 ನೇಯವನು ದಿನಾಂಕ: 03-03-2021 ರಂದು ಅಂಗಡಿ ಸಾಮಾನು ತೆಗೆಯದೇ ಖುಲ್ಲಾ ಪಡಿಸದೇ ಇದ್ದುದನ್ನು ಪಿರ್ಯಾದಿ ಮನಗಂಡು, ಸದರಿ ಅಂಗಡಿ ಶೆಟರ್ಸಿಗೆ ರಿಬೆಟ್‍ ಗಳನ್ನು ಹೊಡೆದು ಅಂಗಡಿ ಸೀಲ್ ಮಾಡಿ, ಮಾನ್ಯ ನ್ಯಾಯಾಲಯದ ಆದೇಶದಂತೆ ಅಂಗಡಿಯಲ್ಲಿನ ಸಾಮಾನು ಸರಂಜಾಮು ಸಮೇತ ಪಿರ್ಯಾದಿಯು ತನ್ನ ಕಬ್ಜಾಕ್ಕೆ ಪಡೆದಿದ್ದು ಇರುತ್ತದೆ. ಆದರೂ ಸಹ ಆರೋಪಿ 1 ನೇಯವನು ದಿನಾಂಕ: 03-03-2021 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಅಂಗಡಿ ಹತ್ತಿರ ಬಂದು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಆತನ ಸಹಚರರಾದ ಆರೋಪಿ 2, 3 ಮತ್ತು 4 ನೇಯವರೊಂದಿಗೆ ಅಂಗಡಿ ಶೆಟರ್ ಅನ್ನು ರಿಬೆಟ್ ಸಮೇತವಾಗಿ ಕಿತ್ತು ಹಾಕಿ, ಶೆಟರ್ ಜಖಂ ಪಡಿಸಿ, ಪಿರ್ಯಾದಿಗೆ ಅಂದಾಜು 15,000/- ರೂಪಾಯಿ ಹಾನಿ ಪಡಿಸಿದ್ದಲ್ಲದೇ, ಮಾನ್ಯ ನ್ಯಾಯಾಲಯದ ಆದೇಶದಂತೆ ಪಿರ್ಯಾದಿಯ ಕಬ್ಜಾದಲ್ಲಿದ್ದ ಅಂಗಡಿಯ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿ, ಪಿರ್ಯಾದಿಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲದಾಸ ತಂದೆ ದೇವಿದಾಸ ತೇಲಂಗ್, ಪ್ರಾಯ-64 ವರ್ಷ, ವೃತ್ತಿ-ವ್ಯಾಪಾರ, ತೇಲಂಗ್ ಕಾಂಪ್ಲೆಕ್ಸ್ ಮಾಲೀಕರು, ಸಾ|| ಬಜಾರ್ ರೊಡ್, ತಾ: ಹೊನ್ನಾವರ ರವರು ದಿನಾಂಕ: 03-03-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುರ್ತುಜಾ ತಂದೆ ಇಬ್ರಾಹಿಂಸಾಬ್ ಪಟ್ಟೇವಾಲಾ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಕಕ್ಕೇರಾ, ತಾ: ಸುರಪುರ, ಜಿ: ಯಾದಗಿರಿ (ಲಾರಿ ನಂ: ಕೆ.ಎ-56/0718 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 03-03-2021 ರಂದು 17-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ಹೊನ್ನಾವರ ಗೇರುಸೊಪ್ಪದ ಸೂಳೆಮುರ್ಕಿ ಕ್ರಾಸ್ ಹತ್ತಿರ ತನ್ನ ಬಾಬ್ತು ಲಾರಿ ನಂ: ಕೆ.ಎ-56/0718 ನೇದರಲ್ಲಿ ಪಿರ್ಯಾದಿ ಹಾಗೂ ಲಾರಿ ಕ್ಲೀನರ್ ಆದ ಗಾಯಾಳು ದರೇಸಾಬ್ ತಂದೆ ಹುಸೇನಸಾಬ ಸರ್ಕಾವಸ್, ಪ್ರಾಯ-40 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| ಕಕ್ಕೇರಾ, ತಾ: ಸುರಪುರ, ಜಿ: ಯಾದಗಿರಿ ಇವರಿಗೆ ಕೂಡ್ರಿಸಿಕೊಂಡು ತನ್ನ ಲಾರಿಯನ್ನು ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಪಿರ್ಯಾದಿಗೆ ಸೊಂಟದ ಎಡಬದಿಗೆ ಪೆಟ್ಟನ್ನುಂಟು ಪಡಿಸಿದ್ದಲ್ಲದೇ, ಲಾರಿ ಕ್ಲೀನರ್ ಆದ ದರೇಸಾಬ ತಂದೆ ಹುಸೇನಸಾಬ ಸರ್ಕಾವಸ್, ಈತನಿಗೆ ಎಡಬದಿಯ ಗಲ್ಲಕ್ಕೆ, ಎಡಗೈಗೆ ಹಾಗೂ ಎರಡು ಕಾಲಿಗೆ ಗಾಯ ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತಾನೂ ಸಹ ತನ್ನ ಹಣೆಯ ಬಲಬದಿಗೆ, ಬಲಕಿವಿಗೆ, ಬಲಗೆನ್ನೆಗೆ, ಬಲಭುಜಕ್ಕೆ ಹಾಗೂ ಬಲಗೈ ಮೊಣಗಂಟಿಗೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶಫೀಕ್ ತಂದೆ ಇಬ್ರಾಹಿಂಸಾಬ್ ಪಟ್ಟೇವಾಲಾ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಕ್ಕೇರಾ, ತಾ: ಸುರಪುರ, ಜಿ: ಯಾದಗಿರಿ ರವರು ದಿನಾಂಕ: 03-03-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಲ್ಲಿಕಾರ್ಜುನ ತಂದೆ ಹನುಮಂತಪ್ಪ ಅರಿವಾಳ, ಸಾ|| ತಾರಿಹಾಳ, ಹುಬ್ಬಳ್ಳಿ (ಲಾರಿ ನಂ: ಕೆ.ಎ-25/ಡಿ-2665 ನೇದರ ಚಾಲಕ), 2]. ಮುಜಾಫರಖಾನ್ ತಂದೆ ರಹೀಮಖಾನ್ ಪಠಾಣ, ಸಾ|| ಅಂಕೋಲಾ (ಲಾರಿ ನಂ: ಕೆ.ಎ-30/ಎ-1699 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 03-03-2021 ರಂದು ಬೆಳ್ಳಗಿನ ಜಾವ 03-15 ಗಂಟೆಗೆ ಮಂಕಿಯ ಕೆರೆಮನೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ಕೊಕ್ ತುಂಬಿದ ಬಾಬ್ತು ತನ್ನ ಲಾರಿ ನಂ: ಕೆ.ಎ-25/ಡಿ-2665 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋದವನು, ರಸ್ತೆಯ ತಿರುವಿನಲ್ಲಿ ತನ್ನ ಲಾರಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದೆ ಡಿವೈಡರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಲಾರಿಯನ್ನು ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ವಾಹನ ಸಂಚರಿಸುವ ರಸ್ತೆಯ ಮೇಲೆ ಪಲ್ಟಿ ಪಡಿಸಿದ್ದಲ್ಲದೇ, ಲಾರಿ ನಂ: ಕೆ.ಎ-30/ಎ-1699 ನೇದರ ಚಾಲಕನಾದ ಆರೋಪಿ 2 ನೇಯವನು ತನ್ನ ಲಾರಿಯನ್ನು ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದವನು, ರಸ್ತೆಯಲ್ಲಿ ಬಿದ್ದ ಲಾರಿಯನ್ನು ಗಮನಿಸದೆ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಲಾರಿಯನ್ನು ಜಖಂಗೊಳಿಸಿದ್ದಲ್ಲದೇ, ತಾನು ಕೂಡ ಸಣ್ಣ ಪುಟ್ಟ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಕಾಶಿಂ ತಂದೆ ಮೆಹಬೂಬಸಾಬ್, ಪ್ರಾಯ-55 ವರ್ಷ, ವೃತ್ತಿ-ಚಾಲಕ, ಸಾ|| ಮನೆ ನಂ: 328, ದೇವರಗದ್ದೆ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 03-03-2021 ರಂದು 05-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 279, 337 ಐಪಿಸಿ ಮತ್ತು ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು 407 ಮಿನಿ ಲಾರಿ ನೇದರ ಚಾಲಕನಾಗಿದ್ದು, ಲಾರಿ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 03-03-2021 ರಂದು ಬೆಳಗಿನ ಜಾವ 03-20 ಗಂಟೆಗೆ ಮಂಕಿ ಅನಂತವಾಡಿಯ ಟವರ್ ಕಂಬದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ತನ್ನ 407 ಮಿನಿ ಲಾರಿಯನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಹಿಂದಿನ ಟಾಯರ್ ಪಂಚರ್ ಆದ ಲಾರಿ ನಂ ಕೆ.ಎ-63/4561 ನೇದನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ, ಲಾರಿಯ ಹಿಂಭಾಗದಲ್ಲಿ ನಿಂತು ನೋಡುತ್ತಿದ್ದ ಲಾರಿ ಚಾಲಕ ಮಂಜಪ್ಪ ಪೂಜಾರ ಈತನಿಗೆ ಡಿಕ್ಕಿ ಹೊಡೆದು ಬಲಗಾಲಿಗೆ ಒಳನೋವು ಹಾಗೂ ತಲೆಗೆ ರಕ್ತಗಾಯ ಪಡಿಸಿ, ಅಪಘಾತದ ನಂತರ ಆರೋಪಿ ಚಾಲಕನು ತನ್ನ 407 ಮಿನಿ ಲಾರಿಯನ್ನು ಅಪಘಾತದ ಸ್ಥಳದಲ್ಲಿ ನಿಲ್ಲಿಸದೆ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಕುಬೇರಯ್ಯಾ ತಂದೆ ವಿರೂಪಾಕ್ಷಯ್ಯ ಹಿರೇಮಠ, ಪ್ರಾಯ-41 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಚಿಕ್ಕಮ್ಮನಕಟ್ಟಿ, ತಾ: ಶಿಗ್ಗಾಂವ, ಜಿ: ಹಾವೇರಿ  ರವರು ದಿನಾಂಕ: 03-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆನಂದ ತಂದೆ ಕೃಷ್ಣಾ ನಾಯ್ಕ, ಪ್ರಾಯ-36 ವರ್ಷ, ಸಾ|| ಚಿತ್ರಾಪುರ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-2089 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 02-03-2021 ರಂದು ಸಾಯಂಕಾಲ 06-00 ಗಂಟೆಯ ಸುಮಾರಿಗೆ ತಮ್ಮ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-2089 ನೇದರ ಮೇಲೆ ಹಿಂಬದಿ ತನ್ನ ಭಾವ ನಾಗೇಶ ಕನ್ಯಾ ನಾಯ್ಕ, ಸಾ|| ಹೊನ್ನಾವರ ಇವರನ್ನು ಕೂಡ್ರಿಸಿಕೊಂಡು ಕಟಗಾರಕೊಪ್ಪದ ಕಡೆಯಿಂದ ಶಿರಾಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕೆಂಬ್ರೆ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಒಮ್ಮೆಲೆ ನಾಯಿ ಅಡ್ಡ ಬಂದಿದ್ದರಿಂದ ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ನಾಯಿಗೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ್ ಸೈಕಲ್ ಸಮೇತ ಇಬ್ಬರೂ ರಸ್ತೆಯ ಮೇಲೆ ಬಿದ್ದು, ಆರೋಪಿತನು ತನ್ನ ಎಡ ಮೊಣಕಾಲಿನ ಹತ್ತಿರ ಗಾಯ ಪಡಿಸಿಕೊಂಡಿದ್ದಲ್ಲದೇ, ಹಿಂಬದಿ ಸವಾರನಿಗೆ ಎಡಗಾಲಿನ ಪಾದದ ಮೇಲ್ಭಾಗ ಹಾಗೂ ಮೊಣಕಾಲಿನ ಹತ್ತಿರ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಭಾಕರ ತಂದೆ ರಾಮಾ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಸಿವಿಲ್ ಇಂಜಿನಿಯರ್, ಸಾ|| ಚಿತ್ರಾಪುರ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 03-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಲಕ್ಷ್ಮಣ ತಂದೆ ದಶರಥ ಪವಾರ್, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಂಡ್ಲಿಕೊಪ್ಪಾ, ತಾ: ಸಿದ್ದಾಪುರ, 2]. ಗಣೇಶ ತಂದೆ ರಾಮಚಂದ್ರ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಮಣಕುಣಿ, ನಿಡಗೋಡ ಗ್ರಾಮ, ತಾ: ಸಿದ್ದಾಪುರ, 3]. ಮಣಿಕಂಠ ತಂದೆ ವಾಸು ನಾಯರ್ @ ಆಚಾರ್ಯ, ಸಾ|| ಮಂಡ್ಲಿಕೊಪ್ಪ, ತಾ: ಸಿದ್ದಾಪುರ, 4]. ಮೋಹನ @ ಕುಯ್ಯಾ ತಂದೆ ರಾಮಾ ಬಡಗಿ, ಸಾ|| ಮಂಡ್ಲಿಕೊಪ್ಪ, ತಾ: ಸಿದ್ದಾಪುರ, 5]. ರಾಜು ತಂದೆ ಭೂತಾ ಗೊಂಡಾ, ಸಾ|| ಮಂಡ್ಲಿಕೊಪ್ಪ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 03-03-2021 ರಂದು ಸಾಯಂಕಾಲ ಸಿದ್ದಾಪುರ ತಾಲೂಕಿನ ಮಂಡ್ಲಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂದಿರುವ ಅಕೇಶಿಯಾ ಪ್ಲಾಂಟೇಶನ್ ದಲ್ಲಿ ಸೇರಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು 16-30 ಗಂಟೆಗೆ ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿ 1 ರಿಂದ 2 ನೇ ನೇಯವರು 1). ನಗದು ಹಣ 4,050/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲದೊಂದಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3 ರಿಂದ 5 ನೇಯವರು ದಾಳಿಯ ಕಾಲಕ್ಕೆ ಓಡಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಬಾರ್ಕಿ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 03-03-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಛಾಯಾ ತಂದೆ ಶಂಕರ ಮಾಳಸೇಕರ, ಪ್ರಾಯ-20 ವರ್ಷ, ಸಾ|| ಕೃಷ್ಣಾಗಲ್ಲಿ, ರಾಮನಗರ, ತಾ: ಜೊಯಿಡಾ. ಪಿರ್ಯಾದುದಾರರ ಮಗಳಾದ ಇವಳು ಪ್ರಥಮ ಪಿ.ಯು.ಸಿ ಯವರೆಗೆ ಓದಿದ ನಂತರ ಶಾಲೆ ಬಿಟ್ಟು ಮನೆಯಲ್ಲಿ ಉಳಿದುಕೊಂಡು ಕಳೆದ 2-3 ತಿಂಗಳಿಂದ ರಾಮನಗರದ ಮಾರ್ಕೆಟ್ ನಲ್ಲಿ ಕಂಪ್ಯೂಟರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಇದ್ದವಳು, ದಿನಾಂಕ: 25-02-2021 ರಂದು 14-30 ಗಂಟೆಗೆ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವಳು, ಮರಳಿ ಮನೆಗೆ ಬರದೇ ಕಾಣೆಯಾಗಿದ್ದು, ಕಾಣೆಯಾಗಿರುವ ತನ್ನ ಮಗಳನ್ನು ಹುಡುಕಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಆನಂದಿ ಕೋಂ. ಆನಂದ ಮಾಳಸೇಕರ, ಪ್ರಾಯ-43 ವರ್ಷ, ವೃತ್ತಿ-ಗೃಹಿಣಿ, ಸಾ|| ಕೃಷ್ಣಾಗಲ್ಲಿ, ರಾಮನಗರ, ತಾ: ಜೊಯಿಡಾ ರವರು ದಿನಾಂಕ: 03-03-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಹರುನ್ ತಂದೆ ಅಬ್ದುಲ್ ಮಜೀದ್ ನಾಯಿಕ್, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಗ್ರಾಮ ಕಾಲೋನಿ, ರಾಮನಗರ, ತಾ: ಜೊಯಿಡಾ. ನಮೂದಿತ ಆರೋಪಿತನು ರಾಮನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿರ್ಯಾದಿಯವರು ದಿನಾಂಕ: 03-03-2021 ರಂದು 14-55 ಗಂಟೆಗೆ ದಾಳಿ ಮಾಡಿದಾಗ, ಸದ್ರಿಯವನ ತಾಬಾದಲ್ಲಿ ನಗದು ಹಣ 1,750/- ರೂಪಾಯಿ ಮತ್ತು ಓ.ಸಿ ಮಟಕಾ ಚೀಟಿ-01 ಹಾಗೂ ಬಾಲ್ ಪೆನ್-01 ಸಿಕ್ಕಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಂಜುಳಾ ಎಸ್. ರಾವೋಜಿ, ಪಿ.ಎಸ್.ಐ(ಕ್ರೈಂ), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 03-03-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ನಿವೇದಿತಾ ತಂದೆ ಬೆಳ್ಳು ಗೌಡ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಹೆಗ್ರೆ, ಅಗ್ರಗೋಣ, ತಾ: ಅಂಕೋಲಾ. ಸುದ್ದಿದಾರರ ಮಗಳಾದ ಇವಳು ಬಿ.ಎ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದವಳು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 03-03-2021 ರಂದು ಬೆಳಿಗ್ಗೆ 08-30 ಗಂಟೆಗೆ ಅಂಕೋಲಾ ತಾಲೂಕಿನ ಅಗ್ರಗೋಣದ ಹೆಗ್ರೆಯಲ್ಲಿರುವ ತನ್ನ ಮನೆಯಲ್ಲಿದ್ದ ಶೇಂಗಾ ಬೆಳೆಗೆ ಉಪಯೋಗಿಸುವ ಕೀಟನಾಶಕ ಔಷಧಿಯನ್ನು ಕುಡಿದು ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದವಳಿಗೆ ಉಪಚಾರದ ಸಲುವಾಗಿ ಗೋಕರ್ಣಕ್ಕೆ ಕರೆದುಕೊಂಡು ಹೋಗಿ, ನಂತರ ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಕುಮಟಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅವಳನ್ನು ಪರೀಕ್ಷಿಸಿದ ವೈದ್ಯರು ಬೆಳಿಗ್ಗೆ 09-45 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬೆಳ್ಳು ತಂದೆ ನಾರಾಯಣ ಗೌಡ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗ್ರೆ, ಅಗ್ರಗೋಣ, ತಾ: ಅಂಕೋಲಾ ರವರು ದಿನಾಂಕ: 03-03-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ನಾಗರಾಜ ತಂದೆ ಹನುಮಂತಪ್ಪ ಬೋವಿವಡ್ಡರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬದನಗೋಡ, ತಾ: ಶಿರಸಿ. ಈತನು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಅದೇ ವಿಷಯದಿಂದ ಸರಾಯಿ ಕುಡಿಯುವ ಚಟ ಬೆಳೆಸಿಕೊಂಡಿದ್ದು, ದಿನಾಂಕ: 01-03-2021 ರಂದು ಮಧ್ಯಾಹ್ನ 01-00 ಗಂಟೆಯಿಂದ ದಿನಾಂಕ: 03-03-2021 ರಂದು ಮಧ್ಯಾಹ್ನ 12-00 ಗಂಟೆಯ ನಡುವಿನ ಅವಧಿಯಲ್ಲಿ ದಾಸನಕೊಪ್ಪದ ಮುತ್ತುರಾಯನ ಹೊಂಡದಲ್ಲಿ ನೀರು ಕುಡಿಯಲು ಹೋದವನು, ಆಕಸ್ಮಾತ್ ಆಗಿ ಕಾಲು ಜಾರಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದು, ಇದರ ಹೊರತು ಆತನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಕಸ್ತೂರಿ ಕೋಂ. ಉಡಚಪ್ಪ ಬೋವಿವಡ್ಡರ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬದನಗೋಡ, ತಾ: ಶಿರಸಿ ರವರು ದಿನಾಂಕ: 03-03-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 04-03-2021 01:44 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080