ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-05-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 136/2021, ಕಲಂ: 302, 354(ಎ) 354(ಡಿ), 504, 506, 509 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ಸಲೀನ್ ತಂದೆ ಅಬ್ದುಲ್ ಜಬ್ಬಾರ್ ಕೋಟೆಬಾಗಿಲ, ಪ್ರಾಯ-48 ವರ್ಷ, ಸಾ|| ಜನತಾ ಕಾಲೋನಿ, ಈದ್ಗಾ ಹತ್ತಿರ, ಚಂದಾವರ, ತಾ: ಹೊನ್ನಾವರ. ಈತನು ದಿನಾಂಕ: 03-5-2021 ರಂದು ಬೆಳಿಗ್ಗೆ 11-00 ಗಂಟೆಗೆ ಚಂದಾವರದ ಜನತಾ ಕಾಲೋನಿಯ ನಿವಾಸಿ ಅಜರುದ್ದೀನ್ ಅಲಿ ಸಾಬ್ ಶೇಖ್ ಇವರ ಹೆಂಡತಿಗೆ ಅಶ್ಲೀಲವಾಗಿ ಮಾತನಾಡಿ ಕೆಟ್ಟದಾಗಿ ವರ್ತಿಸಿದ ಬಗ್ಗೆ ಅಜರುದ್ದೀನ್ ರವರ ಮನೆಯವರು ಪಿರ್ಯಾದಿಯ ಗಂಡನಾದ ಅಬುತಾಲೀಬ್ ಇವರಿಗೆ ವಿಷಯ ತಿಳಿಸಿದ್ದು, ಪಿರ್ಯಾದಿಯ ಗಂಡನು ಪಿರ್ಯಾದಿಯೊಂದಿಗೆ ಆರೋಪಿತನನ್ನು ವಿಚಾರಿಸಲು ಆರೋಪಿತನ ಮನೆ ಇರುವ ಚಂದಾವರದ ಜನತಾ ಕಾಲೋನಿಯ ಮಸೀದಿಗೆ ಹೋಗುವ ರಸ್ತೆಯಲ್ಲಿ  ಹೋಗುತ್ತಿದ್ದಾಗ ಸಿಕ್ಕ ಆರೋಪಿತನಿಗೆ ‘ನೀನು ಹೆಂಗಸರಿಗೆ ಯಾಕೆ ತೊಂದರೆ ಕೊಡುತ್ತೀಯಾ?’ ಅಂತಾ ಕೇಳಿದ್ದಕ್ಕೆ  ಆರೋಪಿತನು ಪಿರ್ಯಾದಿಯ ಗಂಡ ಶ್ರೀ ಅಬುತಾಲೀಬ್ ಮಕ್ದೂಮ್ ಸಾಬ್ ಶೇಖ್, ಪ್ರಾಯ-48 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಜನತಾ ಕಾಲೋನಿ, ಚಂದಾವರ, ತಾ: ಹೊನ್ನಾವರ ಇವರನ್ನು ಉದ್ದೇಶಿಸಿ ‘ನನ್ನನ್ನು ಕೇಳಲಿಕ್ಕೆ ನೀನು ಯಾರು? ನಾನು ಏನು ಬೇಕಾದರೂ ಮಾಡುತ್ತೇನೆ, ರಾಂಡಕೆ ಬೇಟೆ’ ಅಂತ ಕೆಟ್ಟದಾಗಿ ಬೈಯ್ದಿದ್ದು ಪಿರ್ಯಾದಿಯ ಗಂಡ ಆರೋಪಿತನಿಗೆ ‘ಈ ರೀತಿ ಹೆಂಗಸರಿಗೆ ತೊಂದರೆ ನೀಡಿದರೆ ನಿನ್ನ ಮೇಲೆ ಪೋಲೀಸ್ ಠಾಣೆಯಲ್ಲಿ ದೂರು ನೀಡಬೇಕಾಗುತ್ತದೆ’ ಅಂತಾ ಹೇಳುತ್ತಿದ್ದಾಗ ಆರೋಪಿತನು ಪಿರ್ಯಾದಿಯ ಗಂಡನನ್ನು ಉದ್ದೇಶಿಸಿ ‘ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ’ ಅಂತ ಹೇಳಿ 13-00 ಗಂಟೆಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಸೊಂಟದಲ್ಲಿ ಇಟ್ಟುಕೊಂಡಿದ್ದ ಒಂದು ಚಾಕುವನ್ನು ತೆಗೆದು ಆ ಚಾಕುವಿನಿಂದ ಪಿರ್ಯಾದಿಯ ಗಂಡನ ಎದೆಗೆ ಚುಚ್ಚಿ ಮಾರಣಾಂತಿಕ ಸ್ವರೂಪದ ಗಾಯಗೊಳಿಸಿದವನಿಗೆ ಚಿಕಿತ್ಸೆಯ ಕುರಿತು ಪಿರ್ಯಾದಿಯು ರಿಕ್ಷಾದ ಮೇಲೆ ಕುಮಟಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು 13-50 ಗಂಟೆಗೆ ಮೃತಪಟ್ಟ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಜಬೀನಾ ಕೋಂ. ಅಬು ತಾಲೀಬ್ ಶೇಖ್, ಪ್ರಾಯ-34 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಜನತಾ ಕಾಲೋನಿ, ಚಂದಾವರ, ತಾ: ಹೊನ್ನಾವರ ರವರು ದಿನಾಂಕ: 03-05-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟೇಶ ತಂದೆ ಮಾಸ್ತಿ ದೇವಾಡಿಗ, ಪ್ರಾಯ-38 ವರ್ಷ, ಸಾ|| ಮದ್ದನಗೋಳಿ, ಹೆರಾಳಿ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-7620 ನೇದರ ಸವಾರ). ಈತನು ದಿನಾಂಕ: 02-05-2021 ರಂದು 13-00 ಗಂಟೆಗೆ ಮಹೇಶ ಪರಮೇಶ್ವರ ದೇವಾಡಿಗ ಈತನಿಗೆ ತನ್ನ ಮನೆಯಿಂದ ಬೈಲೂರಿಗೆ ಬಿಟ್ಟು ಬರಲು ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-7620 ನೇದರ ಹಿಂದಿನ ಸೀಟಿನಲ್ಲಿ ಕೂಡ್ರಿಸಿಕೊಂಡು ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೆರಾಳಿ ಗ್ರಾಮದಲ್ಲಿ ಸಾರ್ವಜನಿಕ ಗಣಪತಿ ಕೂಡ್ರಿಸುವ ಸ್ಥಳದಲ್ಲಿ ಕಚ್ಚಾ ರಸ್ತೆಯ ಮೇಲೆ ಹೋಗುತ್ತಿದ್ದಾಗ ಮೋಟಾರ್ ಸೈಕಲ್ ಸ್ಕಿಡ್ ಆಗಿ ಮೋಟಾರ್ ಸೈಕಲ್ ಸಮೇತ ಬಿದ್ದು, ಮಹೇಶನ ಬಲಗೈಗೆ ಒಳನೋವು ಹಾಗೂ ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ತಂದೆ ಮಾಸ್ತಿ ದೇವಾಡಿಗ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮದ್ದನಗೋಳಿ, ಹೆರಾಳಿ, ತಾ: ಹೊನ್ನಾವರ ರವರು ದಿನಾಂಕ: 03-05-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಮಣಿ ತಂದೆ ಧನುಷ್ ದಾರಿ, ಪ್ರಾಯ-40 ವರ್ಷ, ಸಾ|| ಬೈಸ್ಕಿದುಯಾ, ಪೋ: ಜಿವಾಣಿಯಾ, ತಾ: ಸುಕುಲ್ಪೂರ್, ಜಿ: ಅಲಹಾಬಾದ್, ಉತ್ತರ ಪ್ರದೇಶ (ಲಾರಿ ನಂ: ಎಮ್.ಎಚ್-46/ಎ.ಆರ್-1574 ನೇದರ ಚಾಲಕ). ಈತನು ತನ್ನ ಲಾರಿ ನಂ: ಎಮ್.ಎಚ್-46/ಎ.ಆರ್-1574 ನೇದರಲ್ಲಿ ಮೆಡಿಸಿನ್ ತುಂಬಿಕೊಂಡು ದಿನಾಂಕ: 02-05-2021 ರಂದು ಸಾಯಂಕಾಲ 05-00 ಗಂಟೆಗೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಆರತಿಬೈಲ್ ಘಟ್ಟದಲ್ಲಿಯ ಸಣ್ಣ ತಿರುವಿನಲ್ಲಿ ಲಾರಿಯ ವೇಗವನ್ನು ನಿಯಂತ್ರಿಸದೇ ರಸ್ತೆಯ ಪಕ್ಕದ ತಗ್ಗಿನಲ್ಲಿ ಲಾರಿಯನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಲಾರಿ ಮತ್ತು ಲಾರಿಯಲ್ಲಿದ್ದ ಮೆಡಿಸಿನ್ ಅನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಗನಾಥ ತಂದೆ ಜ್ಞಾನೇಶ್ವರ ಕಾರಂಡೆ, ಪ್ರಾಯ-29 ವರ್ಷ, ವೃತ್ತಿ-ಮುಂಬೈ ಶಾಂತಿಚಂದ್ರ ಕೋಲ್ಡ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್, ಸಾ|| ವರಶಿ, ತಾ: ಜಾವ್ಲಿ, ಜಿ: ಸಾತಾರಾ, ಮಹಾರಾಷ್ಟ್ರ, ಹಾಲಿ ಸಾ|| ಕಾಮರಾಜ್ ನಗರ, ಗಾಟ್ಕೋಪರ್, ರೂಮ್-34, ಶಿವಶಕ್ತಿ ಚಾಳ, ಓಲ್ಡ್ ಮುಂಬೈ, ಮಹಾರಾಷ್ಟ್ರ ರವರು ದಿನಾಂಕ: 03-05-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 279  ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಮಲ್ಲೇಶಪ್ಪ ಮಾಟೇಕರ್, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ರಮೇಶ ಭವನ, ಹನುಮಂತ ದೇವಸ್ಥಾನದ ಹಿಂದೆ, ಕೇಶವಾಪುರ, ಹುಬ್ಬಳ್ಳಿ (ಕಾರ್ ನಂ: ಕೆ.ಎ-01/ಎ.ಜಿ-8999 ನೇದರ ಚಾಲಕ). ಈತನು ದಿನಾಂಕ: 03-05-2021 ರಂದು ಬೆಳಿಗ್ಗೆ 10-30 ಗಂಟೆಯ ತನ್ನ ಕಾರ್ ನಂ: ಕೆ.ಎ-01/ಎ.ಜಿ-8999 ನೇದನ್ನು ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಶಿರಸಿ-ಹುಬ್ಬಳ್ಳಿ ರಸ್ತೆಯ ಹುಲದೇವನಸರ ಹತ್ತಿರದ ತಿರುವಿನ ರಸ್ತೆಯಲ್ಲಿ ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ, ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಎದುದರುಗಡೆ ಶಿರಸಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಈಚರ್ ಕ್ಯಾಂಟರ್ ವಾಹನ ನಂ: ಕೆ.ಎ-14/ಬಿ-7400 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಯಲ್ಲಪ್ಪ ಮೇಟಿ, ಪ್ರಾಯ-26 ವರ್ಷ, ವೃತ್ತಿ-ಕ್ಲೀನರ್ ಕೆಲಸ, ಸಾ|| ಸಂಗೆದೇವರಕೊಪ್ಪ, ಪೋ: ದಾಸ್ತಿಕೊಪ್ಪ, ತಾ: ಕಲಘಟಗಿ, ಜಿ: ಧಾರವಾಡ ರವರು ದಿನಾಂಕ: 03-05-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 323, 353, 504, 506, 269, 270 ಸಹಿತ 34 ಐಪಿಸಿ ಹಾಗೂ ಕಲಂ: 4 KARNATAKA PROHIBITION OF VIOLENCE AGAINST MEDICARE SERVICE PERSONNEL AND DAMAGE TO PROPERTY IN MEDICARE SERVICE INSTITUTIONS ACT-2009 ನೇದ್ದರ ವಿವರ...... ನಮೂದಿತ ಆರೋಪಿತರು 1]. ದೇವಿದಾಸ ವೀರಪ್ಪ ಪಾಲೇಕರ, ಪ್ರಾಯ-61 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಬಸವೇಶ್ವರ ನಗರ, ಹುಬ್ಬಳ್ಳಿ ರಸ್ತೆ, ತಾ: ಶಿರಸಿ, 2]. ಇಮ್ರಾನ್ ಪಠಾಣ, ಸಾ|| ಇಂದಿರಾ ನಗರ, ತಾ: ಶಿರಸಿ, 3]. ಸಲ್ಮಾನ್ ತಹಸಿಲ್ದಾರ್, ಸಾ|| ನೆಹರೂ ನಗರ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 03-05-2021 ರಂದು 16-00 ಗಂಟೆಯ ಸುಮಾರಿಗೆ ಪಿರ್ಯಾದಿಯವರು ಕಳೆದ ನಾಲ್ಕು ವರ್ಷಗಳಿಂದ ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಗೆ ಬಂದವನು ಆಸ್ಪತ್ರೆಯ ಓ.ಪಿ.ಡಿ ಚೀಟಿ ಬರೆದು ಕೊಡುವ ವಿಷಯಕ್ಕೆ ಸಿಬ್ಬಂದಿಯವರಿಗೆ ಅವಾಚ್ಯವಾಗಿ ಬೈಯ್ಯುತ್ತಿದ್ದವನಿಗೆ ಪಿರ್ಯಾದಿಯವರು ತಾಳ್ಮೆಯಿಂದ ಇರುವಂತೆ ಹೇಳಿದಾಗ, ಆರೋಪಿತನು ‘ಅದನ್ನೆಲ್ಲಾ ಕೇಳಲು ನೀನು ಯಾರು?’ ಎಂದು ಕೇಳಿದಾಗ, ಪಿರ್ಯಾದಿಯವರು ಸದ್ರಿಯವನಿಗೆ ‘ತಾನು ಆಸ್ಪತ್ರೆಯ ಎಫ್.ಡಿ.ಸಿ ನೌಕರನಿರುತ್ತೇನೆ. ಕೊವೀಡ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಿ’ ಎಂದು ಹೇಳಿದಾಗ ಆರೋಪಿತನು ‘ನೀವೆಲ್ಲಾ ಏನು ಶ್ಯಾಂಟಾ ನೌಕರಿ ಮಾಡುತ್ತಿರಾ? ಸೂಳೆ ಮಕ್ಕಳಾ’ ಅಂತಾ ಅವಾಚ್ಯವಾಗಿ ಬೈದಿದ್ದು, ಈ ವಿಷಯವನ್ನು ಪಿರ್ಯಾದಿಯವರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಲ್ಲಿ ತಿಳಿಸಲು ಆಸ್ಪತ್ರೆಯ ಒಳಗಡೆ ಹೋಗಿ ವಿಷಯ ತಿಳಿಸಿ ಹೊರಗಡೆ ಬಂದಾಗ, ಸಮಯ 16-10 ಗಂಟೆಯ ಸುಮಾರಿಗೆ ಆರೋಪಿ 1 ನೇಯವನು ಆಸ್ಪತ್ರೆಯಲ್ಲಿದ್ದ ಆರೋಪಿ 2 ಮತ್ತು 3 ನೇಯವರಿಗೆ ಪಿರ್ಯಾದಿಯವರನ್ನು ತೋರಿಸಿ ‘ಈತನೇ ತನಗೆ ಬುದ್ಧಿವಾದ ಹೇಳಲು ಬಂದವನು’ ಅಂತಾ ತಿಳಿಸಿದಾಗ ಆರೋಪಿ 2 ನೇಯವರು ಪಿರ್ಯಾದಿಯವರ ಕುತ್ತಿಗೆ ಪಟ್ಟಿ ಹಿಡಿದು ‘ನೀನು ಯಾರು ಸೂಳೆ ಮಗನೆ?’ ಅಂತಾ ಅವಾಚ್ಯವಾಗಿ ಬೈಯ್ದು, ಪಿರ್ಯಾದಿಯವರ ಕೆನ್ನೆಗೆ ಕೈಯಿಂದ ಹೊಡೆದಿದ್ದು, ಆರೋಪಿ 3 ನೇಯವನು ಪಿರ್ಯಾದಿಯವರ ಕುತ್ತಿಗೆ ಅದುಮಿ ತಲೆಗೆ ಹಾಗೂ ಬೆನ್ನಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿ ‘ತಮ್ಮ ಜನರ ಸುದ್ದಿಗೆ ಬಂದರೆ ಹೀಗೆಯೇ ಮಾಡುವುದು’ ಅಂತಾ ಧಮಕಿ ಹಾಕಿದ್ದು, ಆಗ ಆಸ್ಪತ್ರೆಯ ಸಿಬ್ಬಂದಿಗಳು ಪಿರ್ಯಾದಿಯವರಿಗೆ ಆರೋಪಿತರು ಹೊಡೆಯುವುದನ್ನು ತಪ್ಪಿಸಿದ್ದು, ಆಗ ಆರೋಪಿತರು ಪಿರ್ಯಾದಿಯವರನ್ನು ಉದ್ದೇಶಿಸಿ ‘ಇನ್ನೊಮ್ಮೆ ಇಲ್ಲಿ ಕಾಣಿಸಿಕೊಂಡರೆ ಜೀವ ಸಹಿತ ಉಳಿಸುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿ ಪಿರ್ಯಾದಿಯವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರು ತಂದೆ ಮೋಟಾರ್ ಸೈಕಲಗಳಲ್ಲಿ ಹೋಗಿದ್ದು, ಕೊರೋನಾ ರೋಗದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮವಾದ ಮಾಸ್ಕ್ ಅನ್ನು ಧರಿಸದೇ ಆಸ್ಪತ್ರೆಗೆ ಬಂದು ಕೊರೋನಾ ರೋಗ ಹರಡುವುದನ್ನು ತಡೆಯಲು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯತೆ ತೋರಿಸಿದ್ದು, ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ವೀರಣ್ಣ ತಂದೆ ರಾಯಣ್ಣ ನಡುವಿನಮನಿ, ಪ್ರಾಯ-30 ವರ್ಷ, ವೃತ್ತಿ-ಪ್ರಥಮ ದರ್ಜೆ ಸಹಾಯಕ, ಸರಕಾರಿ ಆಯುರ್ವೇದ ಆಸ್ಪತ್ರೆ, ತಾ: ಶಿರಸಿ, ಸಾ|| ಮೆಳ್ಳಗಟ್ಟಿ ಪ್ಲಾಟ್, ಪೋ: ಕುಣಿಮೆಳ್ಳೆ ಹಳ್ಳಿ, ತಾ: ಸವಣೂರು, ಜಿ: ಹಾವೇರಿ, ಹಾಲಿ ಸಾ|| ಸುಭಾಷ ನಗರ, ಮರಾಠಿಕೊಪ್ಪ, ತಾ: ಶಿರಸಿ ರವರು ದಿನಾಂಕ: 03-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೇಶವ ತಂದೆ ಸುಬ್ರಾಯ ಅಂಬಿಗ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಗಂಗಾಮಾತಾ ಗಲ್ಲಿ, ಸಿದ್ದಾಪುರ ಶಹರ (ಟಿಪ್ಪರ್ ಲಾರಿ ನಂ: ಕೆ.ಎ-31/9850 ನೇದರ ಚಾಲಕ). ದಿನಾಂಕ: 03-05-2021 ರಂದು 15-30 ಗಂಟೆಗೆ ಪಿರ್ಯಾದಿಯು ತನ್ನ ಸ್ಕೂಟಿ ನಂ: ಕೆ.ಎ-31/ಇ.ಬಿ-5774 ನೇದರ ಮೇಲಾಗಿ ಮಾವಿನಗುಂಡಿ ಕಡೆಯಿಂದ ಸಿದ್ಧಾಪುರ ಕಡೆಗೆ ಬರುತ್ತಾ ಸಿದ್ದಾಪುರ ತಾಲೂಕಿನ ಪಡವನಬೈಲ್ ದಾಟಿ ಸಿದ್ದಾಪುರ ಕಡೆಗೆ ಸ್ವಲ್ಪ ಮುಂದೆ ಬಂದಾಗ ರಸ್ತೆಯ ತಿರುವಿನಲ್ಲಿ  ಎದುರಿನಿಂದ ಅಂದರೆ ಸಿದ್ಧಾಪುರ ಕಡೆಯಿಂದ ಮಾವಿನಗುಂಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ನಂ: ಕೆ.ಎ-31/9850 ನೇದರ ಆರೋಪಿ ಚಾಲಕನು ತನ್ನ ಟಿಪ್ಪರ್ ಲಾರಿಯನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯು ಚಲಾಯಿಸುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಬಲಗೈಗೆ ತೀವೃ ಸ್ವರೂಪದ ಹಾಗೂ ತಲೆಗೆ ಮತ್ತು ಕಾಲುಗಳಿಗೆ ಸಾದಾ ಸ್ವರೂಪದ ಗಾಯನೋವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ತಿಪ್ಪಯ್ಯಾ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಬಡಗಿ ಕೆಲಸ, ಸಾ|| ಅಂಬಾಗಿರಿ ದೇವಸ್ಥಾನದ ಹತ್ತಿರ, ತಾ: ಶಿರಸಿ, ಹಾಲಿ ಸಾ|| ಗೋಳಿಮಕ್ಕಿ, ತಾ: ಸಿದ್ದಾಪುರ ರವರು ದಿನಾಂಕ: 03-05-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-05-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರೋಶನ ತಂದೆ ನಂದಾ ಪಡವಳಕರ, ಪ್ರಾಯ-31 ವರ್ಷ, ವೃತ್ತಿ-ಖಾಸಗಿ ನೌಕರಿ, ಸಾ|| ವಾಜಂತ್ರಿವಾಡ, ನಂದನಗದ್ದಾ, ಬಾಡ, ಕಾರವಾರ. ಈತನು ಕಳೆದ 15 ದಿನಗಳ ಹಿಂದೆ ಪೂನಾದಿಂದ ಕಾರವಾರಕ್ಕೆ ಬಂದು ತನ್ನ ಮನೆಯಲ್ಲಿ ಉಳಿದುಕೊಂಡಿದ್ದವನು, ಕಳೆದ 10 ದಿನಗಳಿಂದ ಜ್ವರ ಹಾಗೂ ತಲೆನೋವಿನಿಂದ ಬಳಲುತ್ತಾ ಔಷಧೋಪಚಾರದಲ್ಲಿ ಇದ್ದವನು, ದಿನಾಂಕ: 03-05-2021 ರಂದು ಬೆಳಿಗ್ಗೆ 05-00 ಗಂಟೆಗೆ ಉಸಿರಾಟದ ಸಮಸ್ಯೆಯಿಂದಾಗಿ ನರಳುತ್ತಿದ್ದವನಿಗೆ ಮನೆಯ ಜನರು ಕೂಡಲೇ ಜಿಲ್ಲಾ ಸರಕಾರಿ ಆಸ್ಪತ್ರೆ, ಕಾರವಾರಕ್ಕೆ ತಂದು ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಸದರಿಯವನು ಚಿಕಿತ್ಸೆಗೆ ಬರುವ ಪೂರ್ವದಲ್ಲಿಯೇ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದು, ಸದರಿ ಮೃತನು ಅಸಜವಾಗಿ ಮೃತಪಟ್ಟಿದ್ದರಿಂದ ಮೃತನ ಅಕ್ಕ ಶವವನ್ನು ನೋಡಿ ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ಶೀತಲ ಕೋಂ. ಜೀವನ ಕಲ್ಗುಟಕರ, ಪ್ರಾಯ-33 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಪಂಚರೇಶಿವಾಡ, ಕೋಡಿಬಾಗ, ಕಾರವಾರ ರವರು ದಿನಾಂಕ: 03-05-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶಿವಬಸಪ್ಪ ತಂದೆ ಬಸವನಪ್ಪ ಬೊಮ್ಮನಳ್ಳಿ, ಪ್ರಾಯ-51 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಕಾಳಮ್ಮನಗರ, ಯಲ್ಲಾಪುರ. ಪಿರ್ಯಾದಿಯವರ ಗಂಡನಾದ ಇವರಿಗೆ ಕಳೆದ 2 ವರ್ಷದ ಹಿಂದೆ ವಾಹನ ಅಪಘಾತದಲ್ಲಿ ಒಂದು ಕಾಲು ಕಟ್ ಆಗಿದ್ದರಿಂದ ವಿಪರೀತ ಕಾಲು ನೋವಿನಿಂದ ಬಳಲುತ್ತಿದ್ದವರು, ಸರಾಯಿ ಕುಡಿಯುವ ಚಟ ಅಂಟಿಸಿಕೊಂಡಿದ್ದರು. ಸರಾಯಿ ಕುಡಿದ ನಿಶೆಯಲ್ಲಿ ಯಲ್ಲಾಪುರ ಪಟ್ಟಣ ದೇವಿ ಮೈದಾನದಲ್ಲಿ ದಿನಾಂಕ: 02-05-2021 ರಂದು ಮಲಗಿಕೊಂಡಿದ್ದವರು, ಸಂಜೆ 05-00 ಗಂಟೆಯ ಸುಮಾರಿಗೆ ಅಲ್ಲೇ ಮೃತಪಟ್ಟಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಕವಿತಾ ಕೋಂ. ಶಿವಬಸಪ್ಪ ಬೊಮ್ಮನಳ್ಳಿ, ಪ್ರಾಯ-42 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾಳಮ್ಮನಗರ, ಯಲ್ಲಾಪುರ, ಹಾಲಿ ಸಾ|| ತಾಲಿಗಾಂವ್, ಪಣಜಿ, ಗೋವಾ ರವರು ದಿನಾಂಕ: 03-05-2021 ರಂದು 06-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗೋಪಾಲ ತಂದೆ ಶಂಕರ ಸಿದ್ದಿ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಾಟೇಳ್ಳಿ, ತಾ: ಯಲ್ಲಾಪುರ. ಪಿರ್ಯಾದಿಯವರ ಮಗನಾದ ಈತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಕೊಂಡು ದಿನಾಂಕ: 30-04-2021 ರಂದು 12-00 ಗಂಟೆಯಿಂದ ದಿನಾಂಕ: 02-05-2021 ರಂದು 19-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಸಮಿಪ ಇರುವ ಹುಲಿಮನೆ ಹಳ್ಳದ ಪಕ್ಕದಲ್ಲಿರುವ ಕಾನಜಂಬೆ ಮರಕ್ಕೆ ನೈಲಾನ್ ಹಗ್ಗದಿಂದ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ಪೀಠಿ ಸಿದ್ದಿ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಾಟೇಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 03-05-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 05-05-2021 04:39 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080