ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-11-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 162/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವರಾಜ ತಂದೆ ಆನಂದು ನಾಯ್ಕ, ಪ್ರಾಯ-29 ವರ್ಷ, ಸಾ|| ಹೊನ್ನಳ್ಳಿ, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-3399 ನೇದರ ಚಾಲಕ). ಈತನು ದಿನಾಂಕ: 30-10-2021 ರಂದು 15-30 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-3399 ನೇದನ್ನು ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಮಾರುಗದ್ದೆಯಲ್ಲಿ ಹಾಯ್ದಿರುವ ಡಾಂಬರ್ ರಸ್ತೆಯ ಮೇಲೆ ಮಾರುಗದ್ದೆ ಕಡೆಯಿಂದ ಹೊನ್ನಳ್ಳಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಬಲಕ್ಕೆ ಬಂದವನು, ರಸ್ತೆಯ ತನ್ನ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಚಂದ್ರಬಾಗಿ ಗೋಪಾಲ ಹರಿಕಂತ್ರ, ಪ್ರಾಯ-53 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹೊನ್ನಳ್ಳಿ, ತಾ: ಅಂಕೋಲಾ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎಡಗೈಗೆ ಗಂಭೀರ ಸ್ವರೂಪದ ಹಾಗೂ ಹೊಟ್ಟೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಕೂಡಾ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಗಲಾ ಕುಮಾರ ಹರಿಕಂತ್ರ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕವಲಹಳ್ಳಿ, ಮಾಸ್ತಿಕಟ್ಟಾ, ತಾ: ಅಂಕೋಲಾ, ಹಾಲಿ ಸಾ|| ಹೊನ್ನಳ್ಳಿ, ತಾ: ಅಂಕೋಲಾ ರವರು ದಿನಾಂಕ: 03-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 187/2021, ಕಲಂ: 143, 147, 341 323, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ತಂದೆ ಶಂಕರ ಹರಿಕಂತ್ರ, 2]. ದುರ್ಗು ಗಣಪು ಹರಿಕಂತ್ರ, 3]. ದೇವಿದಾಸ ಶಿವು ಹರಿಕಂತ್ರ, 4]. ತುಳುಸಿದಾಸ ಘಟ್ಟಾ ಹರಿಕಂತ್ರ, 5]. ವಿಘ್ನೇಶ ಮಾದೇವ ಹರಿಕಂತ್ರ, 6]. ಶಂಕರ ಗಣಪು ಹರಿಕಂತ್ರ, ಸಾ|| (ಎಲ್ಲರೂ) ಬಿಳಿಹೊಯ್ಗೆ, ಅಘನಾಶಿನಿ, ತಾ: ಕುಮಟಾ. ದಿನಾಂಕ: 02-11-2021 ರಂದು 21-30 ಗಂಟೆಗೆ ಪಿರ್ಯಾದಿಯವರು ತನ್ನ ಬಾಬ್ತು ಕಾರಿನಲ್ಲಿ ಕಾಗಲ ಕಡೆಯಿಂದ ತಮ್ಮ ಮನೆಗೆ ಬರುತ್ತಿದ್ದಾಗ ಅಘನಾಶಿನಿ ಬಿಳಿಹೊಯ್ಗೆ ಊರಿನ ಆಂಜನೇಯ ದೇವಸ್ಥಾನ ಹತ್ತಿರ ರಸ್ತೆಯ ಮೇಲೆ ಆರೋಪಿ 1 ರಿಂದ 5 ನೇಯವರು ಸೇರಿ ರಸ್ತೆಗೆ ಅಡ್ಡವಾಗಿ ನಿಂತುಕೊಂಡಿದ್ದು, ಆಗ ಪಿರ್ಯಾದಿಯವರು ‘ತನಗೆ ಮನೆಗೆ ಹೋಗಲು ದಾರಿ ಬಿಡಿ’ ಅಂತಾ ಹೇಳಿದಾಗ ಆರೋಪಿ 1 ನೇಯವನು ಪಿರ್ಯಾದಿಯವರನ್ನು ಉದ್ದೇಶಿಸಿ ‘ಬೋಳಿ ಮಗನೇ, ಸೂಳಾ ಮಗನೇ, ನೀನು ಊರಿನಲ್ಲಿ ದೊಡ್ಡ ದಾದಾ ಇದ್ದಿಯಾ?’ ಅಂತಾ ಹೇಳಿದ್ದು, ಉಳಿದ ಆರೋಪಿತರು ಪಿರ್ಯಾದಿಯವರನ್ನು ಕಾರಿನಿಂದ ಹೊರಕ್ಕೆ ಎಳೆದು ಅಡ್ಡಗಟ್ಟಿ ತಡೆದು ಕೈಯಿಂದ ಮುಖಕ್ಕೆ, ಎದೆಗೆ, ಎಡ ಕಿವಿಯ ಮೇಲೆ ತಲೆಗೆ ಹೊಡೆದು ಗಾಯನೋವು ಪಡಿಸಿದ್ದು, ಗಲಾಟೆ ಕೇಳಿ ಆರೋಪಿ 6 ನೇಯವನು ಸಹ ಸ್ಥಳಕ್ಕೆ ಬಂದು ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು, ನಂತರ ಆರೋಪಿತರೆಲ್ಲಾ ಸೇರಿ ಪಿರ್ಯಾದಿಗೆ ‘ಇನ್ನೊಂದು ದಿನ ನಿನ್ನನ್ನು ಕಾರಿನ ಸಮೇತ ಸುಟ್ಟು ಹಾಕುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಸೋಮನಾಥ ತಂದೆ ಕೃಷ್ಣಾ ಲಕ್ಕುಮನೆ, ಪ್ರಾಯ-50 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿಳಿಹೊಯ್ಗೆ, ಅಘನಾಶಿನಿ, ತಾ: ಕುಮಟಾ ರವರು ದಿನಾಂಕ: 03-11-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 188/2021, ಕಲಂ: 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 03-11-2021 ರಂದು 01-00 ರಿಂದ ಬೆಳಿಗ್ಗೆ 05-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1525 ನೇದರಲ್ಲಿ ಶಿವಮೊಗ್ಗದಿಂದ ಕುಮಟಾಕ್ಕೆ ಪ್ರಯಾಣಿಸುತ್ತಿದ್ದಾಗ ಶಿವಮೊಗ್ಗ ಮತ್ತು ಕುಮಟಾ ಮಾರ್ಗದ ಮಧ್ಯದಲ್ಲಿ ಪಿರ್ಯಾದಿಯ ಕಾಲಿನ ಮೇಲೆ ಇದ್ದ 1). ನಗದು ಹಣ 90,000/- ರೂಪಾಯಿ, 2). Motrola G3 ಕಂಪನಿಯ ಮೊಬೈಲ್ ಪೋನ್-01, ಅ||ಕಿ|| 10,000/- ರೂಪಾಯಿ, 3). Poco X3 ಕಂಪನಿಯ ಮೊಬೈಲ್ ಫೋನ್-01, ಅ|| ಕಿ|| 10,000/- ರೂಪಾಯಿ ಹಾಗೂ BSNL-9481049312, AIRTEL-9538970569, JIO-7019042457 ಸಿಮ್ ಗಳು, 4). ಪಾನ್ ಕಾರ್ಡ್, ಆಧಾರ್ ಕಾರ್ಡ್, ವೋಟಿಂಗ್ ಕಾರ್ಡ್, ಮಗಳ ಜನನ ಪ್ರಮಾಣ ಪತ್ರ, ಮನೆ ಬಿಗದ ಕೀ, ATM ಕಾರ್ಡ್ ಗಳು-02. ಸದರಿ ಸ್ವತ್ತುಗಳಿದ್ದ ಕಪ್ಪು ಬಣ್ಣದ ಹ್ಯಾಂಡ್ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ವೇದಪ್ರಕಾಶ ತಂದೆ ನರಸಿಂಹ ಶಾಸ್ತ್ರಿ, ಪ್ರಾಯ-37 ವರ್ಷ, ವೃತ್ತಿ-ಬ್ಯಾಂಕ್ ನೌಕರ, ಸಾ|| ರಥ ಬೀದಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 03-11-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 189/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ ಗಣಪಯ್ಯ ಪಟಗಾರ, ಪ್ರಾಯ-40 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಗುಡೆಕೊಪ್ಪ, ಹೊಲನಗದ್ದೆ, ತಾ: ಕುಮಟಾ, 2]. ಈಶ್ವರ ಶಿವಪ್ಪ ಹರಿಕಂತ್ರ, ಪ್ರಾಯ-47 ವರ್ಷ, ವೃತ್ತಿ-ಬೋಟ್ ಕೆಲಸ, ಸಾ|| ಮಾದರಿ ರಸ್ತೆ, ಗುಡೇಅಂಗಡಿ, ತಾ: ಕುಮಟಾ, 3]. ರವಿ ತಿಪ್ಪಯ್ಯ ಪಟಗಾರ, ಪ್ರಾಯ-38 ವರ್ಷ, ಸಾ|| ಗುಡೆಕೊಪ್ಪ, ಹೊಲನಗದ್ದೆ, ತಾ: ಕುಮಟಾ, 4]. ಲಿಂಗಪ್ಪ ಮಾಸ್ತಿ ಪಟಗಾರ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಡೆಕೊಪ್ಪ, ಹೊಲನಗದ್ದೆ, ತಾ: ಕುಮಟಾ, 5]. ಈಶ್ವರ ಬೊಮ್ಮು ಪಟಗಾರ, ಪ್ರಾಯ-44 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಡೆಕೊಪ್ಪ, ಹೊಲನಗದ್ದೆ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 03-11-2021 ರಂದು 10-40 ಗಂಟೆಗೆ ಕುಮಟಾ ತಾಲೂಕಿನ ಗುಡೇಅಂಗಡಿ ಮಾದರಿ ರಸ್ತೆಯ ಸ್ಮಶಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ಕಾಲ ನಗದು ಹಣ 9,200/- ರೂಪಾಯಿ ಮತ್ತು ಆಟದ ಸಲಕರಣೆಗಳೊಂದಿಗೆ ಆರೋಪಿತರೆಲ್ಲರು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-2), ಕುಮಟಾ ಪೋಲಿಸ್ ಠಾಣೆ ರವರು ದಿನಾಂಕ: 03-11-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 190/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುಕ್ರು ನಾಗಪ್ಪಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪೋಸ್ಟ್ ಆಫೀಸ್ ಹಿಂಭಾಗ, ಬಗ್ಗೋಣ, ತಾ: ಕುಮಟಾ, 2]. ಉದಯ ತಂದೆ ಈಶ್ವರ ಗೌಡಾ, ಪ್ರಾಯ-31 ವರ್ಷ, ವೃತ್ತಿ-ಕೆ.ಇ.ಬಿ ಯಲ್ಲಿ ಕೆಲಸ, ಸಾ|| ಅಂತ್ರವಳ್ಳಿ, ತಾ: ಕುಮಟಾ, 3]. ರಾಮಕೃಷ್ಣ ತಂದೆ ಚಂದ್ರಶೇಖರ ಹೆಗಡೆ, ಪ್ರಾಯ-33 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೂರೂರು, ತಾ: ಕುಮಟಾ, 4]. ವಿಷ್ಣು ಜಟ್ಟಿ ಮುಕ್ರಿ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪೋಸ್ಟ ಆಫೀಸ್ ಹಿಂಭಾಗ, ಬಗ್ಗೋಣ, ತಾ: ಕುಮಟಾ, 5]. ದಾಮೋದರ ಪರಮೇಶ್ವರ ಅಂಬಿಗ, ಪ್ರಾಯ-55 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ದಿವಗಿ, ತಾ: ಕುಮಟಾ, 6]. ಕೃಷ್ಣಾ ನಾರಾಯಣ ಪಟಗಾರ, ಪ್ರಾಯ-41 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬರ್ಗಿ, ತಾ: ಕುಮಟಾ, 7]. ಶ್ರೀಧರ ಮಹಾದೇವ ಗೌಡಾ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗಡೆ, ತಾ: ಕುಮಟಾ, 8]. ಪ್ರಕಾಶ ಗಣಪತಿ ಭಂಡಾರಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಣಕಿ, ತಾ: ಕುಮಟಾ, 9]. ಭಾಸ್ಕರ ನಾರಾಯಣ ಹಾದಿಮನೆ, ಪ್ರಾಯ-56 ವರ್ಷ, ವೃತ್ತಿ-ಚಾಲಕ, ಸಾ|| ಪೈರಗದ್ದೆ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 03-11-2021 ರಂದು 13-25 ಗಂಟೆಗೆ ಕುಮಟಾ ಪಟ್ಟಣದ ಮಣಕಿ ಸಾ-ಮಿಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ಕಾಲ ನಗದು ಹಣ 11,300/- ರೂಪಾಯಿ ಮತ್ತು ಜೂಗಾರಾಟದ ಸಲಕರಣೆಗಳೊಂದಿಗೆ ಆರೋಪಿತರೆಲ್ಲರು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ತನಿಖೆ-1), ಕುಮಟಾ ಪೋಲಿಸ್ ಠಾಣೆ ರವರು ದಿನಾಂಕ: 03-11-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 191/2021, ಕಲಂ: 341, 323, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೋಮನಾಥ ತಂದೆ ಕೃಷ್ಣಾ ಲಕ್ಕುಮನೆ, 2]. ಮಹೇಶ ತಂದೆ ದಾಮೋದರ ಲಕ್ಕುಮನೆ, 3]. ರಾಮನಾಥ ತಂದೆ ಮಂಜುನಾಥ ನಾಯ್ಕ, 4]. ಲಂಬೋದರ ತಂದೆ ಗಂಗಾಧರ ನಾಯ್ಕ, ಸಾ|| (ಎಲ್ಲರೂ) ಬಿಳಿಹೊಯ್ಗೆ, ಅಘನಾಶಿನಿ, ತಾ: ಕುಮಟಾ. ಈ ನಮೂದಿತ ಆರೋಪಿತರಿಗೆ ಹಾಗೂ ಪಿರ್ಯಾದಿಯವರಿಗೆ ಕುಮಟಾ ತಾಲೂಕಿನ ಅಘನಾಶಿನಿ ಬಿಳಿಹೊಯ್ಗೆ ಹತ್ತಿರ ಇರುವ ಪಿರ್ಯಾದಿಯ ಮನೆಯ ಎದುರಿಗೆ ಹರಿದಿರುವ ಅಘನಾಶಿನಿ ಹೊಳೆಯ ಚಿಪ್ಪಿ ತೆಗೆಯುವ ವಿಚಾರದಲ್ಲಿ ಮೊದಲಿನಿಂದಲೂ ತಂಟೆ ತಕರಾರು ನಡೆಯುತ್ತಿದ್ದು, ಈ ಬಗ್ಗೆ ಆರೋಪಿತರು ಪಿರ್ಯಾದಿಯ ಮೇಲೆ ದ್ವೇಷದಿಂದ ಇದ್ದವರು, ದಿನಾಂಕ: 02-11-2021 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಪಿರ್ಯಾದಿಯವರು ಅಘನಾಶಿನಿ ಬಿಳಿಹೊಯ್ಗೆ ನಾಮಧಾರಿ ಕರಿದೇವರ ಮನೆ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತರೆಲ್ಲಾ ಸೇರಿ ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಪಿರ್ಯಾದಿಗೆ ಎದೆಯ ಮೇಲೆ ಬೆನ್ನಿನ ಮೇಲೆ ಹೊಡೆದು ಹಲ್ಲೆ ಮಾಡಿ, ಶರ್ಟ್ ಅನ್ನು ಹಿಡಿದು ಎಳೆದು ಹರಿದು ಹಾಕಿ, ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ದೇವಿದಾಸ ತಂದೆ ಶಿವು ಹರಿಕಂತ್ರ, ಪ್ರಾಯ-41 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿಳಿಹೊಯ್ಗೆ, ಅಘನಾಶಿನಿ, ತಾ: ಕುಮಟಾ ರವರು ದಿನಾಂಕ: 03-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 290/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಧುಕರ ತಂದೆ ರಾಮದಾಸ ಹಳದೀಪುರ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜೋಗ್ನಿಕಟ್ಟೆ, ಹಳದೀಪುರ, ತಾ: ಹೊನ್ನಾವರ, 2]. ನಾರಾಯಣ ತಂದೆ ವಿಷ್ಣು ಗೌಡ, ಪ್ರಾಯ-38 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕರಿಮೂಲೆ, ಹಳದೀಪುರ, ತಾ: ಹೊನ್ನಾವರ, 3]. ನಾರಾಯಣ ತಂದೆ ಮಾದೇವ ಗೌಡ, ಸಾ|| ಬಗ್ರಾಣಿ, ಹಳದೀಪುರ, ತಾ: ಹೊನ್ನಾವರ, 4]. ನಾಗೇಶ ತಂದೆ ವೆಂಕಟೇಶ ನಾಯ್ಕ, ಸಾ|| ತಾರಿಬಾಗಿಲು, ಹಳದೀಪುರ, ತಾ: ಹೊನ್ನಾವರ, 5]. ರಮೇಶ ತಂದೆ ದಾಮು ನಾಯ್ಕ, ಸಾ|| ಕುದಬೈಲ, ಹಳದೀಪುರ, ತಾ: ಹೊನ್ನಾವರ, 6]. ತಿಮ್ಮಪ್ಪ ನಾರಾಯಣ ಗೌಡ, ಸಾ|| ಮಾದಿಕೊಟ್ಟಿಗೆ, ಹಳದೀಪುರ, ತಾ: ಹೊನ್ನಾವರ, 7]. ರಾಜು ತಂದೆ ನಾಗಪ್ಪ ಗೌಡ, ಸಾ|| ಬಗ್ರಾಣಿ, ಹಳದೀಪುರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 03-11-2021 ರಂದು 13-00 ಗಂಟೆಗೆ ಹೊನ್ನಾವರ ತಾಲೂಕ ಹಳದೀಪುರ ಕನ್ನಡ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ತಮ್ಮ-ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ಆರೋಪಿ 1 ಹಾಗೂ 2 ನೇಯವರು ನಗದು ಹಣ 3,860/- ರೂಪಾಯಿ, ಇಸ್ಪೀಟ್ ಎಲೆ-52, ಹಾಗೂ ಪ್ಲಾಸ್ಟಿಕ್ ಮಂಡ-01 ನೇದವುಗಳೊಂದಿಗೆ ದಾಳಿಯ ವೇಳೆ ಸಿಕ್ಕಿದ್ದು ಹಾಗೂ ಆರೋಪಿ 3 ರಿಂದ 7 ನೇಯವರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 03-11-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 291/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಗಣಪಯ್ಯ ಗೌಡ, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಲಸಿನಬೋಳ, ಬೈಲಗದ್ದೆ, ಮಹಿಮೆ, ತಾ: ಹೊನ್ನಾವರ, 2]. ಈಶ್ವರ ತಂದೆ ಪರಮೇಶ್ವರ ಅಂಬಿಗ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಬಿತಕೇರಿ, ಉಪ್ಪೋಣಿ, ತಾ: ಹೊನ್ನಾವರ, 3]. ಗಣಪತಿ ತಂದೆ ಹನಮಂತ ಗೌಡ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಬಿತಕೇರಿ, ಉಪ್ಪೋಣಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 03-11-2021 ರಂದು 15-50 ಗಂಟೆಗೆ ಹೊನ್ನಾವರದ ತಾಲೂಕಿನ ಮಹಿಮೆ ಹಲಸಿನಬೋಳ ಗ್ರಾಮದ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಕೋಳಿ ಹುಂಜಗಳನ್ನು ಎರಡು ಕಡೆಯಿಂದಲು ಕಾದಾಡಲು ಬಿಟ್ಟು ತಮ್ಮ ಲಾಭಕ್ಕೋಸ್ಕರ ಅವುಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಕೋಳಿ ಅಂಕ ಜೂಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ 1). ನಗದು ಹಣ ಒಟ್ಟು 3,650/- ರೂಪಾಯಿ, 2). ಕೋಳಿ ಹುಂಜಗಳು-01, ಅ||ಕಿ|| 300/- ರೂಪಾಯಿ ನೇದವುಗಳೊಂದಿಗೆ ಆರೋಪಿತರೆಲ್ಲರು ವಶಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ತನಿಖೆ-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 03-11-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 292/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ತಂದೆ ಗೋವಿಂದ ಪಟಗಾರ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಪ್ಪಿಹಕ್ಕಲ, ನವಿಲಗೋಣ, ತಾ: ಹೊನ್ನಾವರ, 2]. ಕಮಲಾಕರ ತಂದೆ ಶಂಕರ ಪಟಗಾರ, ಪ್ರಾಯ-32 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಚಿಪ್ಪಿಹಕ್ಕಲ, ನವಿಲಗೋಣ, ತಾ: ಹೊನ್ನಾವರ, 3]. ಅಭಿಷೇಕ ತಂದೆ ಮಂಜುನಾಥ ಪಟಗಾರ, ಪ್ರಾಯ-24 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಚಿಪ್ಪಿಹಕ್ಕಲ, ನವಿಲಗೋಣ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 03-11-2021 ರಂದು 18-00 ಗಂಟೆಗೆ ಹೊನ್ನಾವರ ತಾಲೂಕಿನ ಚಿಪ್ಪಿಹಕ್ಕಲ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ತಮ್ಮ-ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ಆರೋಪಿತರೆಲ್ಲರು ನಗದು ಹಣ 2,700/- ರೂಪಾಯಿ, ಇಸ್ಪೀಟ್ ಎಲೆಗಳು-52, ಪೇಪರ್ ಮಂಡ-01 ಹಾಗೂ ಮೇಣದ ಬತ್ತಿಯ ತುಂಡುಗಳು-2 ಇವುಗಳೊಂದಿಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 03-11-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 293/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಜೋಗಿ ಹರಿಕಂತ್ರ, ಪ್ರಾಯ-37 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗೌಡಕುಳಿ, ಹಳದಿಪುರ, ತಾ: ಹೊನ್ನಾವರ, 2]. ಸಂತೋಷ ತಂದೆ ಲಕ್ಷ್ಮಣ ಹರಿಕಂತ್ರ, ಪ್ರಾಯ-27 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಈರಪ್ಪನಹಿತ್ಲ, ಹಳದಿಪುರ, ತಾ: ಹೊನ್ನಾವರ, 3]. ಮಂಜುನಾಥ ತಂದೆ ಜಟ್ಟಿ ಹರಿಕಂತ್ರ. ಪ್ರಾಯ-52 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗೌಡಕುಳಿ, ಹಳದಿಪುರ, ತಾ: ಹೊನ್ನಾವರ, 4]. ಬಾಬು ತಂದೆ ರಾಮಾ ಹರಿಕಂತ್ರ, ಪ್ರಾಯ-37 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗೌಡಕುಳಿ, ಹಳದಿಪುರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 03-11-2021 ರಂದು 19-30 ಗಂಟೆಗೆ ಹೊನ್ನಾವರ ತಾಲೂಕಿನ ಹಳದಿಪುರ ಹೊರಭಾಗ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಚಿತ್ರಪಟದ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಕುಟುಕುಟಿ ಎಂಬ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿಯ ಕಾಲಕ್ಕೆ 1). ಒಟ್ಟು ನಗದು ಹಣ 3,250/- ರೂಪಾಯಿ, 2). ಅರ್ಧ ಉರಿದ ಮೇಣದ ಬತ್ತಿ ತುಂಡುಗಳು-04, ಅ||ಕಿ|| 00.00/- ರೂಪಾಯಿ, 3). ಪ್ಲಾಸ್ಟಿಕ ಬಕೆಟ-01, ಅ||ಕಿ|| 00.00/- ರೂಪಾಯಿ, 4). ಮರದ ಕುಟುಕುಟಿ ಗುಂಡುಗಳು-03, ಅ||ಕಿ|| 00.00/- ರೂಪಾಯಿ, 5). ಚಿತ್ರ ಇರುವ ರಗ್ಜಿನ್ ಮಂಡ-01, ಅ||ಕಿ| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ತನಿಖೆ-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 03-11-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

     

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 294/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF  CATTLE ORDINANCE-2020 ಮತ್ತು ಕಲಂ: 192(A) ಐ.ಎಮ್.ವಿ ಎಕ್ಟ್-1988 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ಖುರೇಷಿ ತಂದೆ ಅಹಮ್ಮದ್ ಸಾಬ್, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ದೊಡ್ಡಪಳ್ಳಿ ಹತ್ತಿರ, ಸಂಶಿ, ತಾ: ಹೊನ್ನಾವರ, 2]. ಸಚಿನ್ ತಂದೆ ಚಂದ್ರಕಾಂತ ನಾಯ್ಕ, ಪ್ರಾಯ-ಅಂದಾಜು 20 ವರ್ಷ, ವೃತ್ತಿ-ಚಾಲಕ, ಸಾ|| ನಗರೆ, ನಗರಬಸ್ತಿಕೇರಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಸೇರಿ ದಿನಾಂಕ: 03-11-2021 ರಂದು 20-45 ಗಂಟೆಗೆ ಬಿಳಿ ಬಣ್ಣದ ಮಹೀಂದ್ರಾ ಮ್ಯಾಕ್ಸಿ ಟ್ರಕ್ ಗೂಡ್ಸ್ ವಾಹನ ನಂ: ಕೆ.ಎ-19/ಡಿ-8832 ನೇದರಲ್ಲಿ ಸುಮಾರು 8,000/- ರೂಪಾಯಿ ಬೆಲೆಯ ಕಪ್ಪು ಬಿಳಿ ಬಣ್ಣದ ಎತ್ತಿನ ಕರು-01, ಕಂದು ಬಣ್ಣದ ಎತ್ತಿನ ಕರು-1. ಒಟ್ಟು 02 ಜಾನುವಾರ (ಎತ್ತು) ಗಳನ್ನು ತುಂಬಿಕೊಂಡು ವಧೆ ಮಾಡುವ ಉದ್ದೇಶದಿಂದ ಸರಕು ಸಾಗಣೆಯ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 03-11-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಲಚ್ಮಯ್ಯಾ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ವ್ಯಾಪಾರ, ಸಾ|| ಚೌಥಣಿ, ಮುಂಡಳ್ಳಿ, ತಾ: ಭಟ್ಕಳ. ಈತನು ದಿನಾಂಕ: 03-11-2021 ರಂದು ಮಧ್ಯಾಹ್ನ 13-00 ಗಂಟೆಯ ಸಮಯಕ್ಕೆ ಮಾವಿನಕುರ್ವಾ ಬಂದರ ಧಕ್ಕೆಯ ಹತ್ತಿರ ಕರಿಕಲ್ ಹೋಗುವ ರಸ್ತೆಯಲ್ಲಿ ತನ್ನ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ 1). IMPERIAL BLUE WHISKY, 180 ML ಬಾಟಲಿಗಳು–03, 2). BAGPIPER WHISKY, 180 ML ಪ್ಯಾಕೆಟ್ ಗಳು-05, 3). HAYWARDS WHISKY, 90 ML ಪ್ಯಾಕೆಟ್ ಗಳು-26, 4). MC’DOWELS WHISKY, 90 ML ಪ್ಯಾಕೆಟ್ ಗಳು-07, 5). ORIGINAL CHOICE WHISKY, 90 ML ಪ್ಯಾಕೆಟ್ ಗಳು-08, 6). OLD TAVERN WHISKY, 180 ML ಪ್ಯಾಕೆಟ್ ಗಳು-41. ಹೀಗೆ ಒಟ್ಟೂ 6,862/- ರೂಪಾಯಿ ಮೌಲ್ಯದ ಸರಾಯಿ ಪ್ಯಾಕೆಟ್ ಗಳನ್ನು ಎರಡು ಪ್ರತ್ಯೇಕ ರಟ್ಟಿನ ಬಾಕ್ಸಿನಲ್ಲಿರುವುದನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮಾರಾಟ ಮಾಡುತ್ತಿದ್ದಾಗ ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 03-11-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 131/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಕರಿಯಪ್ಪ ಗೊಂಡ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಿತ್ರೆ, ತಾ: ಭಟ್ಕಳ, 2]. ಪುಂಡಲಿಕ ತಂದೆ ಈರಪ್ಪ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಬ್ಬತ್ತಿ, ತಾ: ಭಟ್ಕಳ, 3]. ಮೋಹನ ಮಂಜು ಗೊಂಡ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋಣಾರ, ತಾ: ಭಟ್ಕಳ, 4]. ಮಂಜುನಾಥ ಕುಪ್ಪಾ ಮರಾಠೆ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅರುಕಿ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 03-11-2021 ರಂದು ಸಾಯಂಕಾಲ 17-30 ಗಂಟೆಗೆ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದ ಕುರಂದೂರು ರಬ್ಬರ್ ಪ್ಲಾಂಟೇಶನ್ ದಲ್ಲಿ ತಮ್ಮ ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿ ಹುಂಜಗಳ ಕಾಲುಗಳಿಗೆ ಕತ್ತಿ ಕಟ್ಟಿ ಕಾದಾಟಕ್ಕೆ ಬಿಟ್ಟು ಅದರ ಮೇಲೆ ಹಣವನ್ನು ಪಂಥ ಕಟ್ಟಿ ಜೂಗಾರಾಟ ಆಡುತ್ತಿದ್ದಾಗ ಒಟ್ಟು ನಗದು ಹಣ 2,650/- ರೂಪಾಯಿ, ಕೋಳಿ ಹುಂಜಗಳು-09 (ಅ||ಕಿ|| 400/- ರೂಪಾಯಿ), ಒಟ್ಟು 3,600/- ರೂಪಾಯಿ ಹಾಗೂ 2 ಕೋಳಿ ಕತ್ತಿಗಳು (ಅ||ಕಿ|| 20/- ರೂಪಾಯಿ), ಮತ್ತು 2 ದಾರ (ಅ||ಕಿ|| 00.00/- ರೂಪಾಯಿ) ಇವುಗಳೊಂದಿಗೆ ಆರೋಪಿತರೆಲ್ಲರು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ ಶ್ರೀ ಭರತಕುಮಾರ. ವಿ ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 03-11-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 392 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾವುದೋ ಬಿಳಿ ಬಣ್ಣದ ಕಾರ್ ಮೇಲೆ ಬಂದವರಾಗಿದ್ದು, ಆರೋಪಿತರ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ಸುಲಿಗೆ ಮಾಡುವ ಉದ್ದೇಶದಿಂದ ದಿನಾಂಕ: 03-11-2021 ರಂದು ಬೆಳಿಗ್ಗೆ 06-25 ಗಂಟೆಯ ಸುಮಾರಿಗೆ ಶಿರಸಿ ಶಹರದ ಬತ್ತದ ಓಣಿಯ ಮಾರ್ಗವಾಗಿ ಪಿರ್ಯಾದಿಯು ತನ್ನ ಅಕ್ಕನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿಯ ಹಿಂದಿನಿಂದ ಒಂದು ಬಿಳಿ ಬಣ್ಣದ ಕಾರಿನ ಮೇಲೆ ಬಂದವರು, ಪಿರ್ಯಾದಿಗೆ ಕಾರಿನ ಚಾಲಕನ ಪಕ್ಕದಲ್ಲಿ ಕುಳಿತ ಆರೋಪಿತ ವ್ಯಕ್ತಿಯು ಕುಮಟಾಕ್ಕೆ ಹೋಗುವ ಮಾರ್ಗವನ್ನು ಕೇಳಿ ಒಮ್ಮೇಲೆ ಪಿರ್ಯಾದಿಯ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿ ಇದ್ದ 1,10,000/- ಮೌಲ್ಯದ 25 ಗ್ರಾಂ ತೂಕದ ಬಂಗಾರದ ಎರಡು ಎಳೆಯ ಕಟಿಂಗ್ ಬಲ್ಪ್ ಚೈನ್ ಅನ್ನು ಬಲವಂತವಾಗಿ ಎಳೆದು ಕಿತ್ತುಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಉಷಾ ಕೋಂ. ದಾಮೋದರ ಪೈ, ಪ್ರಾಯ-72 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದೋಡ್ಲಿ ಬಾವಿ, ಶ್ರೀ ಮಾರಿಕಾಂಬಾ ದೇವಸ್ಥಾನದ ಹತ್ತಿರ, ತಾ: ಶಿರಸಿ ರವರು ದಿನಾಂಕ: 03-11-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-11-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 43/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗೋವಿಂದ ತಂದೆ ಗಣಪಯ್ಯ ನಾಯ್ಕ, ಪ್ರಾಯ-70 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಆನೆದಡೆ, ನಗರಬಸ್ತಿಕೇರಿ, ತಾ: ಹೊನ್ನಾವರ. ಪಿರ್ಯಾದುದಾರರ ತಂದೆಯಾದ ಈತನು ದಿನಾಂಕ: 03-11-2021 ರಂದು ಬೆಳಗ್ಗೆ 08-00 ಗಂಟೆಯಿಂದ 09-00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಹೊನ್ನಾವರ ತಾಲೂಕಿನ ಆನೆದಡೆ ನಗರಬಸ್ತಿಕೇರಿಯಲ್ಲಿರುವ ತನ್ನ ಅಡಿಕೆ ತೋಟಕ್ಕೆ ತಾಗಿರುವ ಅರಣ್ಯದಲ್ಲಿರುವ ಕಾಡುಕಂಚಿ ಜಾತಿಯ ಮರದ ಟೊಂಗೆಗೆ ನೈಲಾನ್ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸದಾನಂದ ತಂದೆ ಗೋವಿಂದ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಆನೆದಡೆ, ನಗರಬಸ್ತಿಕೇರಿ, ತಾ: ಹೊನ್ನಾವರ ರವರು ದಿನಾಂಕ: 03-11-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 44/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿನಾಯಕ ತಂದೆ ಸೂರ್ಯಕಾಂತ ಶೆಟ್ಟಿ, ಪ್ರಾಯ-40 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಖಾರ್ವಿಕೇರಿ, ಕಾಸರಕೋಡ, ತಾ: ಹೊನ್ನಾವರ. ಪಿರ್ಯಾದಿಯ ಅಣ್ಣನಾದ ಈತನು ಕಳೆದ ಆರು ತಿಂಗಳ ಹಿಂದೆ ತನ್ನ ಸಂಸಾರ ಜೀವನ ಸರಿ ಬರದೇ ಇದ್ದುದರಿಂದ ತನ್ನ ಹೆಂಡತಿ ಶ್ರೀಮತಿ ಸುರೇಖಾ ಇವರಿಗೆ ವಿಚ್ಛೇದನ ನೀಡಿದ ನಂತರ ವಿಪರೀತ ಕುಡಿತದ ಚಟ ಮಾಡಿಕೊಂಡು ಸದಾಕಾಲ ಸರಾಯಿ ಕುಡಿದು ಮನೆಯಲ್ಲಿ ಇರುತ್ತಿದ್ದವನು, ದಿನಾಂಕ: 02-11-2021 ರಂದು ಸಂಜೆ 20-00 ಗಂಟೆಯಿಂದ ದಿನಾಂಕ: 03-11-2021 ರಂದು 18-00 ಗಂಟೆ ನಡುವಿನ ಅವಧಿಯಲ್ಲಿ ಖಾರ್ವಿಕೇರಿ, ಕಾಸರಕೋಡ ಹೊನ್ನಾವರದಲ್ಲಿರುವ ತನ್ನ ಮನೆಯಲ್ಲಿ ಮನೆ ಬಾಗಿಲು ಹಾಕಿಕೊಂಡು ಮನೆಯ ಹಾಲ್ ನಲ್ಲಿ ಆರ್.ಸಿ.ಸಿ ಛಾವಣಿಗೆ ಅಳವಡಿಸಿದ ಹುಕ್ಕಿಗೆ ನೈಲಾನ್ ಬಳ್ಳಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ತನ್ನ ಅಣ್ಣನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಹ್ಮಣ್ಯ ತಂದೆ ಸೂರ್ಯಕಾಂತ ಶೆಟ್ಟಿ, ಪ್ರಾಯ-33 ವರ್ಷ, ವೃತ್ತಿ-ಖಾಸಗಿ ಕಂಪನಿ ಕೆಲಸ, ಸಾ|| ಖಾರ್ವಿಕೇರಿ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 03-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 03-11-2021 ರಂದು ಪಿರ್ಯಾದುದಾರರು ಮಠದಹಿತ್ಲು ಅರಬ್ಬಿ ಸಮುದ್ರದ ದಂಡೆಯಲ್ಲಿ ಅಪರಿಚಿತ ಗಂಡಸಿನ ಶವ ದೊರೆತ ಸುದ್ದಿ ತಿಳಿದು ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ನಮೂದಿತ ಮೃತನು ಸುಮಾರು 7-8 ದಿವಸದ ಹಿಂದೆ ಮೀನುಗಾರಿಕೆಗೆ ಹೋದ ಅವಧಿಯಲ್ಲಿ ಅರಬ್ಬಿ ಸಮುದ್ರದ ನೀರಿನಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟವನು, ನೀರಿನ ಅಲೆಗೆ ಸಿಲುಕಿ ಮಠದಹಿತ್ಲ ಸಮುದ್ರದ ದಂಡೆಯಲ್ಲಿ ಶವ ದೊರೆತಿದ್ದು, ಮೃತ ಅಪರಿಚಿತ ಗಂಡಸು ಕಪ್ಪು ಬಣ್ಣದ ಚಡ್ಡಿ, ನೀಲಿ ಕೆಂಪು ಗೆರೆಯುಳ್ಳ ಹಾಫ್ ತೋಳಿನ ಟೀ-ಶರ್ಟ್ ಧರಿಸಿದ್ದು, ಕುರುಚಲು ಕಪ್ಪು ಬಣ್ಣದ ದಾಡಿ ಬಿಟ್ಟಿದ್ದು, ಶವದ ಮುಖದ ಭಾಗ, ಎರಡು ಕೈ ಬೆರಳುಗಳು, ಕಾಲಿನ ಪಾದ ಕೊಳೆತು ಮಾಂಸ ತುಂಡಾಗಿ ಬಿದ್ದಿರುತ್ತದೆ. ತಲೆ ಕೂದಲು ಉದುರಿ ತಲೆ ಬುರಡೆ ಕಾಣುತ್ತದೆ. ಮುಖದ ಗುರುತು ಪರಿಚಯ ಸಿಗುವುದಿಲ್ಲ. ಬಲಗೈಗೆ ಬೆಳ್ಳಿ ನಮೂನೆಯ ಕೈ ಖಡಗ ಧರಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ತಂದೆ ವೆಂಕಟ್ರಮಣ ಮೊಗೇರ, ಪ್ರಾಯ-44 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಠದಹಿತ್ಲ, ಹೆರಾಡಿ ಕನ್ನಡ ಶಾಲೆಯ ಹತ್ತಿರ, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 03-11-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 04-11-2021 05:26 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080