ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-10-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 171/2021, ಕಲಂ: 419, 420, 465, 468, 471 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಕೀಮ್, ಕಲ್ಕತ್ತಾ, ಸಾ|| ಪಶ್ಚಿಮ ಬಂಗಾಳ. ಪಿರ್ಯಾದಿಯವರು ಐಟಿಸಿ ಕಂಪನಿಯ ಡಿಸ್ಟ್ರಿಬ್ಯೂಶನ್ ಪಡೆದುಕೊಳ್ಳಲು ದಿನಾಂಕ: 29-05-2021 ರಂದು ಗೂಗಲ್ ನಲ್ಲಿ ಸರ್ಚ್ ಮಾಡಿ, ಗೂಗಲ್ ನಲ್ಲಿರುವ ಐಟಿಸಿ ಡಿಸ್ಟ್ರಿಬ್ಯೂಶನಶಿಪ್ ಕಾಂಟಾಕ್ಟ್ ‘9163060642 ನೇದಕ್ಕೆ ಕರೆ ಮಾಡಿದಾಗ ನಮೂದಿತ ಆರೋಪಿತನು ‘ತನ್ನ ಹೆಸರು ನಕೀಮ್ ಇದ್ದು, ತಾನು ಪಶ್ಚಿಮ ಬಂಗಾಳ ಕಲ್ಕತ್ತಾದಲ್ಲಿರುವ ಐಟಿಸಿ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುತ್ತೇನೆ’ ಅಂತಾ ಸುಳ್ಳು ಹೇಳಿ ನಂಬಿಸಿ, ಪಿರ್ಯಾದಿಯವರಿಂದ ರಜಿಸ್ಟ್ರೇಷನ್ ಫೀಸ್ ಅಂತಾ 49,800/- ರೂಪಾಯಿ, ಸೆಕ್ಯೂರಿಟಿ ಮನಿ ಅಂತಾ 2,25,000/- ರೂಪಾಯಿ, ಪ್ರೊಡಕ್ಟ್ ಕಳಿಸುವ ಕುರಿತಾಗಿ 2,50,000/- ಲಕ್ಷ ರೂಪಾಯಿ, ಜಿಎಸ್.ಟಿ ಕುರಿತಾಗಿ 90,000/- ರೂಪಾಯಿ ಹಾಗೂ ಕೋವಿಡ್ ಪಾಸ್, ಶಾಪ್ ಇನ್ಸೂರೆನ್ಸ್, ಗೂಗಲ್ ಮೇಂಟೇನನ್ಸ್ ಅಂತಾ 2,16,000/- ರೂಪಾಯಿ ಹಣವನ್ನು ಬೇರೆ ಬೇರೆ ಬ್ಯಾಂಕಿನಲ್ಲಿರುವ ‘ಐಟಿಸಿ ಲಿಮಿಟೆಡ್’ ಎಂಬ ಹೆಸರಿನ ಅಕೌಂಟ್ ಗಳಿಗೆ ಹಾಕಿಸಿಕೊಂಡು, ಆ ಬಗ್ಗೆ ಐಟಿಸಿ ಕಂಪನಿಯ ಲೋಗೋ ಇರುವ ನಕಲಿ ಕನ್ಫರ್ಮೇಶನ್ ಲೆಟರ್ ಹಾಗೂ ಐಟಿಸಿ ಕಂಪನಿಯ ಹೆಸರಿನಲ್ಲಿಯೇ ನಕಲಿ ಪೇಮೆಂಟ್ ರಿಸೀಪ್ಟ್ ಗಳನ್ನು ಕೂಡಾ ನೀಡಿದ್ದಲ್ಲದೇ, ಐಟಿಸಿ ಕಂಪನಿಯ ಡೀಲರಶಿಪ್ ಕೊಡಿಸದೇ ಮೋಸ ಮಾಡಿರುವ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಶ್ರೀನಿವಾಸ ಕಾಮತ್, ವರ್ಷ, 60 ವರ್ಷ, ವೃತ್ತಿ-ಬುಕ್ ಸ್ಟಾಲ್, ಸಾ|| ಅಪ್ಪೆ ಮಿಲ್ ಎದುರು, ಹಳೇ ಮೀನು ಮಾರುಕಟ್ಟೆ ರಸ್ತೆ, ತಾ: ಕುಮಟಾ ರವರು ದಿನಾಂಕ: 03-10-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 256/2021, ಕಲಂ: 323, 447, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಶಶಿಕಲಾ ಕೋಂ. ಚಂದ್ರಶೇಖರ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬೊಬ್ರುವಾಡಾ, ತಾ: ಅಂಕೋಲಾ. ಪಿರ್ಯಾದಿಯು ತನ್ನ ಮಗನಾದ ತಿಮ್ಮಪ್ಪ ತಂದೆ ಸತ್ಯನಾರಾಯಣ ನಾಯ್ಕ ಈತನಿಗೆ ರೂಪಾ ಇವಳೊಂದಿಗೆ ಮದುವೆ ಮಾಡಿಕೊಂಡಿದ್ದು, ಮದುವೆಯಾದ ನಂತರ ಪಿರ್ಯಾದಿಯ ಸೊಸೆಯಾದ ರೂಪಾ ಇವಳ ತಾಯಿಯಾದ ಆರೋಪಿತಳು ಪಿರ್ಯಾದಿಯೊಂದಿಗೆ ಪಿರ್ಯಾದಿಯು ಮನೆಗೆ ಬಂದಾಗಲೆಲ್ಲಾ ‘ನೀವು ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ’ ಅಂತಾ ಜಗಳ ಮಾಡುತ್ತಾ ದ್ವೇಷ ಸಾಧಿಸುತ್ತಾ ಬಂದವಳು, ದಿನಾಂಕ: 03-10-2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯು ಮನೆಯಲ್ಲಿದ್ದಾಗ ಆರೋಪಿತಳು ಪಿರ್ಯಾದಿಯ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ‘ಸೂಳೆ ರಂಡೆ, ಬೋಳಿ ರಂಡೆ, ನೀನು ನನ್ನ ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ, ಆಗ ಪಿರ್ಯಾದಿಯು ಆರೋಪಿತಳಿಗೆ ‘ಆ ರೀತಿ ಯಾಕೆ ಬೈಯುತ್ತಿದ್ದೀಯಾ?’ ಅಂತಾ ಕೇಳಿದ್ದಕ್ಕೆ ಆರೋಪಿತಳು ಪಿರ್ಯಾದಿಗೆ ಒಮ್ಮೇಲೆ ಕೈಯಿಂದ ಮುಖಕ್ಕೆ ಹೊಡೆದು, ಬೆನ್ನಿನ ಮೇಲೆ ಗುದ್ದಿದ್ದಲ್ಲದೇ ‘ಇನ್ನೊಮ್ಮೆ ಸಿಕ್ಕಾಗ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಪಾರ್ವತಿ ಕೋಂ. ಸತ್ಯನಾರಾಯಣ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹೊಸಾಕುಳಿ, ದೊಡ್ಡಹಿತ್ತಲು, ತಾ: ಹೊನ್ನಾವರ ರವರು ದಿನಾಂಕ: 03-10-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 341, 504 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಮೂನ್, ಪ್ರಾಯ-26 ವರ್ಷ, 2]. ರೆಹಮಾನ್, ಪ್ರಾಯ-31 ವರ್ಷ, ಸಾ|| (ಇಬ್ಬರೂ) ನ್ಯಾಷನಲ್ ಕಾಲೋನಿ, ಬಸ್ತಿಮಕ್ಕಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ. ಈ ನಮೂದಿತ ಆರೋಪಿತರು ಕಳೆದ 5 ವರ್ಷಗಳಿಂದ ಪಿರ್ಯಾದಿಯ ಕುಟುಂಬದವರಿಗೆ ತೊಂದರೆ ನೀಡುತ್ತಿದ್ದವರು, ದಿನಾಂಕ: 30-09-2021 ರಂದು 18-15 ಗಂಟೆಗೆ ಬಸ್ತಿಮಕ್ಕಿಯಲ್ಲಿ ಸುಧೀರ ಮನೆ ಮುರ್ಕಿ ಹತ್ತಿರ ಆರೋಪಿತರಿಬ್ಬರೂ ಮೋಟಾರ್ ಸೈಕಲ್ ಮೇಲೆ ಬಂದು ಪಿರ್ಯಾದಿಯನ್ನು ಅಡ್ಡ ಹಾಕಿ, ಗುರಾಯಿಸಿ, ಅವಾಚ್ಯ ಶಬ್ಧಗಳಿಂದ ಬೈಯ್ದ ಬಗ್ಗೆ ಪಿರ್ಯಾದಿ ಶ್ರೀಮತಿ ದುರ್ಗಮ್ಮ ಕೋಂ. ಮಾಸ್ತಿ ಮೊಗೇರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನ್ಯಾಷನಲ್ ಕಾಲೋನಿ, ಬಸ್ತಿಮಕ್ಕಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 03-10-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 162/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಫೀಕ್ ಅಬ್ದುಲಖಾದರ್ ತಂದೆ ಮಹಮ್ಮದ್ ಸಾಹೇಬ್, ಪ್ರಾಯ-53 ವರ್ಷ, ವೃತ್ತಿ-ಚಾಲಕ, ಸಾ|| ಕುಂದಾಪುರ, ಉಡುಪಿ (ಲಾರಿ ನಂ: ಕೆ.ಎ-20/ಎ.ಎ-2059 ನೇದರ ಚಾಲಕ). ಈತನು ದಿನಾಂಕ: 03-10-2021 ರಂದು 06-45 ಗಂಟೆಗೆ ಯಲ್ಲಾಪುರ ತಾಲೂಕಿನ ಕಂಚನಳ್ಳಿ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಮೀನು ಲೋಡ್ ಮಾಡಿದ ಲಾರಿ ನಂ: ಕೆ.ಎ-20/ಎ.ಎ-2059 ನೇದನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ಅಪಾಯಕಾರಿ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ತನ್ನ ಸೈಡ್ ಬಿಟ್ಟು ತೀರಾ ಬಲಕ್ಕೆ ಬಂದು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ವಿ.ಆರ್.ಎಲ್ ಟ್ರಾನ್ಸಪೋರ್ಟ್ ರವರಿಗೆ ಸೇರಿದ ಪಾರ್ಸೆಲ್ ಲೋಡ್ ಇದ್ದ ಲಾರಿ ನಂ: ಕೆ.ಎ-63/3052 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ಲಾರಿಗಳನ್ನು ಜಖಂಗೊಳಿಸಿ, ಪಿರ್ಯಾದಿ ಹಾಗೂ ಇನ್ನೊಬ್ಬ ಚಾಲಕ ಕೃಷ್ಣಾ ತಂದೆ ಹನುಮಂತಪ್ಪ ತಿರಕಣ್ಣನವರ, ಪ್ರಾಯ-35 ವರ್ಷ, ಸಾ|| ಗುಡ್ಡದ ಓಣಿ, ಹುಬ್ಬಳ್ಳಿ ಇವರಿಗೆ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪಾಂಡುರಂಗ ತಂದೆ ನಾರಾಯಣಪ್ಪ ಬೊಂಬಲೆ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ನಲವಡಿ, ತಾ: ನವಲಗುಂದ, ಜಿ: ಧಾರವಾಡ, ಹಾಲಿ ಸಾ|| ಅಮರಗೋಳ, ಹುಬ್ಬಳ್ಳಿ ರವರು ದಿನಾಂಕ: 03-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 163/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷಕುಮಾರ ಪಿ. ತಂದೆ ಪ್ರಕಾಶ ಎಸ್, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| 309, ಮಾದಾಕೋವಿಲ್ ಸ್ಟ್ರೀಟ್, ಸೆಮಿಯಮಂಗಳಂ, ತಾ: ಪೂಲೂರ, ಜಿ: ತಿರುವನ್ನಮಲೈ, ತಮಿಳುನಾಡು ರಾಜ್ಯ (ಲಾರಿ ನಂ: ಟಿ.ಎನ್-41/ಎ.ಎಲ್-6134 ನೇದರ ಚಾಲಕ). ಈತನು ದಿನಾಂಕ: 02-10-2021 ರಂದು ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಶಿರಲೆ ಫಾಲ್ಸ್ ಕ್ರಾಸ್ ಹತ್ತಿರ ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಲಾರಿ ನಂ: ಟಿ.ಎನ್-41/ಎ.ಎಲ್-6134 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ವಾಹನವನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ತನ್ನ ಮೈಕೈಗೆ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಲಾರಿಯನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿ. ಸುರೇಶ ತಂದೆ ವೀರಸ್ವಾಮಿ, ಪ್ರಾಯ-44 ವರ್ಷ, ವೃತ್ತಿ-ಲಾರಿ ಮೆಕ್ಯಾನಿಕ್ ಕೆಲಸ, ಸಾ|| ಮನೆ ನಂ: 42, ಸಲೋನ್ ಪೇಟೆ, ಲಕ್ಷ್ಮೀಪೋರಂ, ವೇಲೂರು, ತಮಿಳುನಾಡು ರಾಜ್ಯ ರವರು ದಿನಾಂಕ: 03-10-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 121/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 02-10-2021 ರಂದು ರಾತ್ರಿ 08-00 ಗಂಟೆಯಿಂದ ದಿನಾಂಕ: 03-10-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ-ಶಿರಸಿ ರಸ್ತೆಯಲ್ಲಿರುವ ಪಿರ್ಯಾದಿಯ ಕದಂಬ ಸ್ಟೀಲ್ಸ್ & ಹಾರ್ಡವೇರ್ ಶಾಪ್ ನ ಮುಂದಿನ ಶೆಟರ್ಸ್ ಅನ್ನು ಕಬ್ಬಿಣದ ಜಿ.ಐ ಪೈಪಿನಿಂದ ಮೀಟಿ ತೆಗೆದು ಅಂಗಡಿಯ ಒಳಗೆ ಹೊಕ್ಕು ನಗದು ಹಣ 15,000/- ರೂಪಾಯಿ ಹಾಗೂ 6,000/- ರೂಪಾಯ ಬೆಲೆಯ ಡಿ.ವಿ.ಆರ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಶಿವರಾಜ ತಂದೆ ಈರಪ್ಪ ಜ್ಯೋತಿಬಾನವರ, ಪ್ರಾಯ-26 ವರ್ಷ, ವೃತ್ತಿ-ಹಾರ್ಡವೇರ್ ಶಾಪ್ ನಲ್ಲಿ ಕೆಲಸ, ಸಾ|| ಚಿಗಳ್ಳಿ, ತಾ: ಮುಂಡಗೋಡ ರವರು ದಿನಾಂಕ: 03-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 97/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಕೇಶ ತಂದೆ ಮಿಶ್ರಿಲಾಲ, ಸಾ|| ಬನವಾಸಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-04/ಜೆ.ಕ್ಯೂ-6600 ನೇದರ ಸವಾರ). ಈತನು ದಿನಾಂಕ: 01-10-2021 ರಂದು ಸಾಯಂಕಾಲ 07-00 ಗಂಟೆಯ ಸುಮಾರಿಗೆ ತನ್ನ ಮೋಟಾರ ಸೈಕಲ್ ನಂ: ಕೆಎ04/ಜೆಕ್ಯೂ 6600 ನೇದನ್ನು ಬನವಾಸಿ ಕಡೆಯಿಂದ ಕದಂಬ ಸರ್ಕಲ್ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಸಿಕೊಂಡು ಬಂದು ನ್ಯಾಮತಿ ಕಿರಾಣಿ ಸ್ಟೋರ್ ಹತ್ತಿರ ನಿಂತಿದ್ದ ಪಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ತಲೆಗೆ ರಕ್ತದ ಗಾಯ ಪಡಿಸಿದ್ದಲ್ಲದೇ, ಬೆನ್ನಿಗೆ, ಸೊಂಟಕ್ಕೆ ಹಾಗೂ ಎಡಗಾಲಿಗೆ ತೆರಚಿದ ಗಾಯವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಹೇಮಂತ ತಂದೆ ರಾಮಣ್ಣ ರೆಡ್ಡಿ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಸ್ ಸ್ಟ್ಯಾಂಡ್ ಹಿಂದುಗಡೆ, ಬನವಾಸಿ, ತಾ: ಶಿರಸಿ ರವರು ದಿನಾಂಕ: 03-10-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 15(), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ದಾಮೋದರ ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಜಗಲಬೇಟ, ತಾ: ಜೋಯಿಡಾ. ಈತನು ದಿನಾಂಕ: 03-10-2021 ರಂದು 13-15 ಗಂಟೆಗೆ ಜಗಲಬೇಟದಲ್ಲಿರುವ ತನ್ನ ಕಿರಾಣಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). 90 ML ನ Haywards Cheers Whisky ಅಂತಾ ಬರೆದ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್‍ ಗಳು-05, ಅ||ಕಿ|| 175.65/- ರೂಪಾಯಿ, 2). 180 ML ನ Old Tavern Whisky ಅಂತಾ ಬರೆದ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್‍ ಗಳು-02,  ಅ||ಕಿ|| 173.50/- ರೂಪಾಯಿ, 3). 04 ಪ್ಲಾಸ್ಟಿಕ್ ಗ್ಲಾಸುಗಳು, ಅ||ಕಿ|| ೦೦.೦೦/- ರೂಪಾಯಿ, 4). 180 ML ನ Old Tavern Whisky ಅಂತಾ ಬರೆದ ಖಾಲಿ ಟೆಟ್ರಾ ಪ್ಯಾಕೆಟ್‍ ಗಳು-೦2, ಅ||ಕಿ|| ೦೦.೦೦/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 03-10-2021 ರಂದು 15-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-10-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 30/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಹಜರತ್ ಸಾಬ್ @ ಜುಬೇರ್ ತಂದೆ ಮಹಮ್ಮದ್ ಆಜಂ ಮುಲ್ಲಾ, ಪ್ರಾಯ-23 ವರ್ಷ, ಸಾ|| ಹರಿದೇವನಗರ, ಹಬ್ಬುವಾಡಾ, ಕಾರವಾರ. ಪಿರ್ಯಾದಿಯ ಸಹೋದರನಾದ ಈತನು ಕಾರವಾರದಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದವನು, ವಿಪರೀತ ಸರಾಯಿ ಕುಡಿಯುವ ಚಟದವನಾಗಿದ್ದು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ದಿನಾಂಕ: 01-10-2021 ರಂದು ರಾತ್ರಿ 22-30 ಗಂಟೆಗೆ ಮನೆಯಿಂದ ಹೊರ ಹೋಗಿ ದಿನಾಂಕ: 03-10-2021 ರಂದು ಬೆಳಿಗ್ಗೆ 07-00 ಘಂಟೆಯ ನಡುವಿನ ಅವಧಿಯಲ್ಲಿ ಕಾಳಿ ಸೇತುವೆಯ ಮೇಲಿನಿಂದ ಕಾಳಿ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇದರ ಹೊರತು ತನ್ನ ತಮ್ಮನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಾಸೀಮ್ ತಂದೆ ಆಜಂ ಮುಲ್ಲಾ, ಪ್ರಾಯ-27 ವರ್ಷ, ವೃತ್ತಿ-ಟೈಲ್ಸ್ ಹಾಕುವ ಕೆಲಸ, ಸಾ|| ಹರಿದೇವ ನಗರ, ಹಬ್ಬುವಾಡಾ, ಕಾರವಾರ ರವರು ದಿನಾಂಕ: 03-10-2021 ರಂದು 08-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಐಶ್ವರ್ಯಾ ಪ್ರತಾಪ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಮನೆವಾರ್ತೆ, ಸಾ|| ದೇವರಗದ್ದೆ, ಮಂಕಿ, ತಾ: ಹೊನ್ನಾವರ. ಇವಳು ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 03-10-2021 ರಂದು ಬೆಳಿಗ್ಗೆ 09-00 ಗಂಟೆಯಿಂದ 10-30 ಗಂಟೆಯ ನಡುವಿನ ಅವಧಿಯಲ್ಲಿ ತಾನು ವಾಸವಿದ್ದ ಮಂಕಿಯ ದೇವರಗದ್ದೆಯಲ್ಲಿರುವ ಮನೆಯ ಒಳಗಡೆ ಅಟ್ಟದ ಜಂತಿಗೆ ಬಿಳಿ ಬಟ್ಟೆಯ ಒಂದು ತುದಿಯಿಂದ ಕಟ್ಟಿ ಇನ್ನೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಮೃತಳ ಮರಣದ ನಿಜವಾದ ಕಾರಣ ತಿಳಿದುಕೊಳ್ಳಲು ಸೂಕ್ತ ತನಿಖೆಯಾಗಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹನುಮಂತ ತಂದೆ ದೇವಪ್ಪ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ದೇವರಗದ್ದೆ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 03-10-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 04-10-2021 06:31 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080