ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 03-09-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 15/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಾವೀದ್ ತಂದೆ ಮೆಹಬೂಬ್ ಕಂಚಗಾರ, ಪ್ರಾಯ-21 ವರ್ಷ, ವೃತ್ತಿ-ಚಾಲಕ, ಸಾ|| ಲಕ್ಷರ್ ಬಜಾರ್, ತಾ: ಸವಣೂರು, ಜಿ: ಹಾವೇರಿ (ಬೊಲೆರೋ ಪಿಕ್‍ಅಪ್ ವಾಹನ ನಂ: ಕೆ.ಎ-27/ಸಿ-3205 ನೇದರ ಚಾಲಕ). ದಿನಾಂಕ: 03-09-2021 ರಂದು ಮಧ್ಯಾಹ್ನ 12-50 ಗಂಟೆಯಲ್ಲಿ ಪಿರ್ಯಾದಿಯ ಪರಿಚಯದವರಾದ ಸುರೇಶ ತಂದೆ ರಾಮಾ ಪೆಡ್ನೇಕರ, ಪ್ರಾಯ-65 ವರ್ಷ, ವೃತ್ತಿ-ನಿವೃತ್ತ ಬಿಲ್ಟ್ ನೌಕರ, ಸಾ|| ಚರ್ಚ್ ರೋಡ್, ಬಿಣಗಾ, ಕಾರವಾರ ಇವರು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-410 ನೇದರ ಮೇಲೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಬಿಣಗಾದಿಂದ ಕಾರವಾರಕ್ಕೆ ಬರುತ್ತಿರುವಾಗ ಕಾರವಾರದ ಬೈತಕೋಲಿನ ಬಂದರ್ ಹತ್ತಿರ ಕಾರವಾರದಿಂದ ಅಂಕೋಲಾ ಕಡೆಗೆ ಹೋಗುಗಿತ್ತಿದ್ದ ಬೊಲೆರೋ ಪಿಕ್‍ಅಫ್ ವಾಹನ ನಂ: ಕೆ.ಎ-27/ಸಿ-3205 ನೇದರ ಆರೋಪಿ ಚಾಲಕನು ತನ್ನ ಬೊಲೆರೋ ಪಿಕ್‍ಅಫ್ ವಾಹನವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ರಸ್ತೆಯ ತೀರಾ ಬಲಕ್ಕೆ ತನ್ನ ವಾಹನವನ್ನು ಚಲಾಯಿಸಿ ರಸ್ತೆಯ ಎಡಬದಿಯಿಂದ ಬರುತ್ತಿದ್ದ ಪಿರ್ಯಾದಿಯ ಪರಿಚಯದ ಸುರೇಶ ಪೆಡ್ನೇಕರ ಇವರ ಮೋಟಾರ್ ಸೈಕಲಿಗೆ ತನ್ನ ಬೊಲೆರೋ ಪಿಕ್‍ಅಫ್ ವಾಹನದ ಮುಂದಿನ ಬಲಬದಿಯ ಟೈಯರ್ ನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸುರೇಶ ಪಡ್ನೇಕರ ಇವರಿಗೆ ಬಲಗೈ ಮೊಣಕೈ ಹತ್ತಿರ ಮೂಳೆ ಮುರಿತವಾಗಿ ಭಾರೀ ಗಾಯ, ಬಲಗೈ ಮುಷ್ಠಿಯ ಹತ್ತಿರ ಗಾಯ, ಬಲಬದಿಯ ಪಕ್ಕಡೆಯ ಹತ್ತಿರ ಒಳನೋವು, ಮೂಗಿನ ಮೇಲೆ ಗಾಯ ಹಾಗೂ ಒಳನೋವು, ಬಲಬದಿಯ ಕಿವಿಯ ಹತ್ತಿರ ತೆರಚಿದ ಗಾಯ, ಬಲಗಾಲಿನ ಮಂಡಿಯ ಮೇಲೆ ತೆರಚಿದ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮನೋಜ ತಂದೆ ಪ್ರಕಾಶ ಜನ್ನು, ಪ್ರಾಯ-31 ವರ್ಷ, ವೃತ್ತಿ-ಇಂಜಿನಿಯರ್, ಸಾ|| ಸೋನಾರವಾಡ, ಕಾರವಾರ ರವರು ದಿನಾಂಕ: 03-09-2021 ರಂದು 16-28 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 156/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನಯ್ ಸಿಂಗ್ ತಂದೆ ಸಂತೋಷ ಸಿಂಗ್, ಪ್ರಾಯ-26 ವರ್ಷ, ವೃತ್ತಿ-ಚಾಲಕ. ಸಾ|| ಬಸರಿಕಪುರ, ಉತ್ತರ ಪ್ರದೇಶ (ಟಿಪ್ಪರ್ ವಾಹನ ನಂ: ಕೆ.ಎ-47/7973 ನೇದರ ಚಾಲಕ). ಈತನು ದಿನಾಂಕ: 02-09-2021 ರಂದು 20-30 ಗಂಟೆಯ ತನ್ನ ಟಿಪ್ಪರ್ ವಾಹನ ನಂ: ಕೆ.ಎ-47/7973 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲಾಗಿ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಖಂಡಗಾರ ಹತ್ತಿರ ಒಮ್ಮೇಲೆ ಬಲಕ್ಕೆ ಚಲಾಯಿಸಿ ತನ್ನ ಎದುರಿನಿಂದ ಅಂದರೆ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ್ ನಂ: ಕೆ.ಎ-30/ಎನ್-1347 ನೇದರ ಎಡಬದಿಯ ಹಿಂದಿನ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ನಾರಾಯಣ ನಾಯಕ, ಪ್ರಾಯ-64 ವರ್ಷ, ವೃತ್ತಿ-ನಿವೃತ್ತ ಶಿಕ್ಷಕ, ಸಾ|| ಬಳಲೆ, ಮಾದನಕೇರಿ, ತಾ: ಅಂಕೋಲಾ ರವರು ದಿನಾಂಕ: 03-09-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ದೇವೇಂದ್ರ ಸುತ್ರಾವಿ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಬರ್ಡೆ, ತಾ: ಜೋಯಿಡಾ. ಈತನು ದಿನಾಂಕ: 03-09-2021 ರಂದು 14-00 ಗಂಟೆಯ ಸುಮಾರಿಗೆ ತನ್ನ ಲಾಭಕ್ಕೋಸ್ಕರ ಜೋಯಿಡಾ ತಾಲೂಕಿನ ಅಂಬರ್ಡೆ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸಿಕೊಂಡು ಓ.ಸಿ ಚೀಟಿ ಬರೆಯುತ್ತಿದ್ದಾಗ ನಗದು ಹಣ 660/- ರೂಪಾಯಿ, ಬಾಲ್ ಪೆನ್-01 ಹಾಗೂ ಅಂಕೆ-ಸಂಖ್ಯೆ ಬರೆದ ಓ.ಸಿ ಚೀಟಿಗಳ-01 ಇವುಗಳ ಸಮೇತ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಂಜುಳಾ ಎಸ್. ರಾವೋಜಿ, ಪಿ.ಎಸ್.ಐ (ಕಾ&ಸು, ಸಂಚಾರ), ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 03-09-2021 ರಂದು 15-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಫೀಕ್ ತಂದೆ ಅಮೀರಸಾಬ್ ಕಚವಿ, ಪ್ರಾಯ-42 ವರ್ಷ, ವೃತ್ತಿ-ವೃತ್ತಿ-ಗೌಂಡಿ ಕೆಲಸ, ಸಾ|| ಸೊನಿಯಾ ಗಲ್ಲಿ, ಕಸ್ತೂರಬಾ ನಗರ, ತಾ: ಶಿರಸಿ. ಈತನು ದಿನಾಂಕ: 03-09-2021 ರಂದು 13-40 ಗಂಟೆಗೆ ಶಿರಸಿಯ ಅಶ್ವಿನಿ ಸರ್ಕಲ್ ಹತ್ತಿರ ಮಾತಾ ಪಾನಶಾಪ್ ಎದುರು ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,350/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, ಖಾಲಿ ಪೇಪರ್ ಚೀಟಿಗಳು-06, ಅ||ಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್. ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 03-09-2021 ರಂದು 16-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 112/2021, ಕಲಂ: 463, 465, 468, 417, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ತಿಪ್ಪಣ್ಣ ಗುದಗಿ, ಸಾ|| ಬಸವೇಶ್ವರ ನಗರ, ತಾ: ಬ್ಯಾಡಗಿ, ಜಿ: ಹಾವೇರಿ. ಈತನು ತಾನು ಬೆಂಗಳೂರಿನ ಕಮೀಷನರ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಮತ್ತು ನೌಕರಿ ಕೊಡಿಸುವದಾಗಿ ನಂಬಿಸಿ, ಪಿರ್ಯಾದಿಯ ಮೂಲಕ ಸುಮಾರು ಇಪತೈದು ಲಕ್ಷದ ಐವತ್ತು ಸಾವಿರ ರೂಪಾಯಿ ಹಣವನ್ನು ಬೇರೆ ಬೇರೆ ಜನರಿಂದ ತನ್ನ ಅಕೌಂಟಿಗೆ ಹಾಕಿಸಿಕೊಂಡು, ಬೇರೆ ಬೇರೆ ಜಿಲ್ಲೆಯ ಎಸ್.ಪಿ ಸಾಹೇಬರ ನಕಲು ಸಹಿ ಮಾಡಿದ ಖೊಟ್ಟಿ ನೇಮಕಾತಿ ದಾಖಲೆಗಳನ್ನು ಯಾವುದೋ ಗಣಕ ಯಂತ್ರದಲ್ಲಿ ಸೃಷ್ಠಿಸಿ, ಹಣವನ್ನು ಮರಳಿ ಕೊಡದೇ, ನಂಬಿಕೆ ದ್ರೋಹ ಹಾಗೂ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಗುರುರಾಯ ತಂದೆ ದತ್ತಾತ್ರಾಯ ರಾಯ್ಕರ್, ಪ್ರಾಯ-36 ವರ್ಷ, ವೃತ್ತಿ-ಜಿಯೋ ಸಿಮ್ ವಿತರಕ, ಸಾ|| ನಂದೇಶ್ವರ ನಗರ, ತಾ: ಮುಂಡಗೋಡ ರವರು ದಿನಾಂಕ: 03-09-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 141/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ ತಂದೆ ಕೃಷ್ಣಾ ಗಡಕರ, ಪ್ರಾಯ-35 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದುಸಗಿ, ತಾ: ಹಳಿಯಾಳ, 2]. ಸಂಜು ತಂದೆ ಸಹದೇವ ಸುರೋಜಿ, ಪ್ರಾಯ-25 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದುಸಗಿ, ತಾ: ಹಳಿಯಾಳ, 3]. ಸಂಜು ತಂದೆ ಮಹಾದೇವ ಗೌಡಪ್ಪನವರ, ಪ್ರಾಯ-28 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದುಸಗಿ, ತಾ: ಹಳಿಯಾಳ, 4]. ರಾಜು ತಂದೆ ಅಲೇಶ ನಜರತ್, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹುಣ್ಸವಾಡ, ತಾ: ಹಳಿಯಾಳ, 5]. ನಿತೇಶ ತಂದೆ ಏಕನಾಥ ಕೋಡಕಿ, ಪ್ರಾಯ-21 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದುಸಗಿ, ತಾ: ಹಳಿಯಾಳ, 6]. ಅಣ್ಣಪ್ಪ, ಸಾ|| ತೇರಗಾಂವ, ತಾ: ಹಳಿಯಾಳ, 7]. ಅಕ್ಬರ, ಸಾ|| ಮುತ್ತಮುರಿ, ತಾ: ಹಳಿಯಾಳ, 8]. ನಾಸೀರ, ಸಾ|| ಅಳ್ನಾವರ, ಧಾರವಾಡ, 9]. ಕಿರಣ, ಸಾ|| ಅಳ್ನಾವರ, ಧಾರವಾಡ. ಈ ನಮೂದಿತ ಆರೋಪಿತರುಗಳು ದಿನಾಂಕ: 03-09-2021 ರಂದು ಸಾರ್ವಜನಿಕ ಸ್ಥಳವಾದ ಹಳಿಯಾಳ ತಾಲೂಕಿನ ದುಸಗಿ ಗ್ರಾಮದ ಪ್ಲಾಟ್ ಹತ್ತಿರ ಡಾಂಬರ್ ರಸ್ತೆಯ ಪಕ್ಕದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಕುಳಿತುಕೊಂಡು ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣದ ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ, 17-50 ಗಂಟೆಗೆ ದಾಳಿಯ ಕಾಲಕ್ಕೆ ಆರೋಪಿ 1 ರಿಂದ 5 ನೇಯವರು ನಗದು ಹಣ 5,470/- ರೂಪಾಯಿ ಮತ್ತು ಜೂಗಾರಾಟದ ಸಲಕರಣೆಗಳ ಸಮೇತ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 6 ರಿಂದ 9 ನೇಯವವರು ದಸ್ತಗಿರಿಗೆ ಸಿಗದೇ ಸ್ಥಳದಿಂದ ಓಡಿ ಪರಾರಿಯಾಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಕಾ&ಸು), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 03-09-2021 ರಂದು 22-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 110/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು ಕಮಲಾಕರ ತಂದೆ ಗಣಪತಿ ಹೆಗಡೆ, ಪ್ರಾಯ-48 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಹೆಗ್ಗರಣೆ, ತಾ: ಸಿದ್ದಾಪುರ. ಈತನು ದಿನಾಂಕ: 02-08-2021 ರಂದು ಸಂಜೆ 19-00 ಗಂಟೆಗೆ ಸಿದ್ದಾಪುರ ತಾಲೂಕಿನ ಹೆಗ್ಗರಣೆಯ ಸರ್ಕಲ್ ಹತ್ತಿರ ಇರುವ ಹೊಟೇಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದು ಕೊಟ್ಟು ಓಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತನು ದಾಳಿಯ ಕಾಲಕ್ಕೆ ಓ.ಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 910/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 03-09-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 111/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು ಚಂದ್ರಶೇಖರ ತಂದೆ ನಾರಾಯಣ ಆಚಾರಿ, ಪ್ರಾಯ-70 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಿವೇಕಾನಂದ ನಗರ, ಕಾನಸೂರ, ತಾ: ಸಿದ್ದಾಪುರ. ಈತನು ದಿನಾಂಕ: 03-09-2021 ರಂದು 10-45 ಗಂಟೆಗೆ ಸಿದ್ದಾಪುರ ತಾಲೂಕಿನ ಕಾನಸೂರಿನ ವಿವೇಕಾನಂದ ನಗರದ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದು ಕೊಟ್ಟು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತನು ದಾಳಿಯ ಕಾಲಕ್ಕೆ ಓ.ಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 1,120/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 03-09-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 112/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಮಾ ತಂದೆ ಅಜ್ಜು ಗೌಡ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಲಗಾರ, ಹರಿಗಾರ, ಹೆಗ್ಗರಣೆ, ತಾ: ಸಿದ್ದಾಪುರ. ಈತನು ದಿನಾಂಕ: 03-09-2021 ರಂದು ಬೆಳಿಗ್ಗೆ 11-30 ಗಂಟೆಗೆ ಸಿದ್ದಾಪುರ ತಾಲೂಕಿನ ಹೆಗ್ಗರಣೆ ಹತ್ತಿರ ಇರುವ ತಲಗಾರ ಬಸ್ ಸ್ಟಾಪ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದು ಕೊಟ್ಟು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತನು ದಾಳಿಯ ಕಾಲಕ್ಕೆ ಓ.ಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 1,210/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಮಾರ ಕೆ, ಪೊಲೀಸ್ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 03-09-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 03-09-2021

at 00:00 hrs to 24:00 hrs

 

ಭಟ್ಕಳ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರತ್ನಾಕರ ತಂದೆ ಶೀನಾ ಖಾರ್ವಿ, ಪ್ರಾಯ-47 ವರ್ಷ, ಸಾ|| ಮಲ್ಯರ ಬೆಟ್ಟು, ಗಂಗೋಳ್ಳಿ, ತಾ: ಕುಂದಾಪುರ ಜಿ: ಉಡುಪಿ. ಇವರು ದಿನಾಂಕ: 02-09-2021 ತಂದು 16-45 ಗಂಟೆಯ ಸಮಯಕ್ಕೆ ಭಟ್ಕಳದ ರೈಲ್ವೇ ಸ್ಷೇಷನ್ ಹತ್ತಿರ ಮುಟ್ಟಳ್ಳಿಯಲ್ಲಿ ತಲೆ ಸುತ್ತು ಬಂದಿದ್ದು, ನಂತರ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರಿಗೆ ಆಟೋ ಮುಖಾಂತರ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ಮಾರ್ಗಮಧ್ಯದಲ್ಲಿ ಮೃತಪಟ್ಟ ಬಗ್ಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದು ಇರುತ್ತದೆ. ಇದರ ಹೊರತು ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಶೀನಾ ಖಾರ್ವಿ, ಪ್ರಾಯ-37 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಮಲ್ಯರ ಬೆಟ್ಟು, ಗಂಗೋಳ್ಳಿ, ತಾ: ಕುಂದಾಪುರ, ಜಿ: ಉಡುಪಿ ರವರು ದಿನಾಂಕ: 03-09-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 05-09-2021 01:06 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080