ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-04-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 08/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಶಂಕರಪ್ಪ ಕಲಾಲ್, ಪ್ರಾಯ-44 ವರ್ಷ, ವೃತ್ತಿ-ಮಟನ್ ಅಂಗಡಿ ವ್ಯಾಪಾರ, ಸಾ|| ಸಾ|| ಚರ್ಚ್ ರಸ್ತೆ, ಬ್ರಾಹ್ಮಣವಾಡಾ, ಬಿಣಗಾ, ಕಾರವಾರ (ಮೋಟಾರ್ ಸ್ಕೂಟರ್ ನಂ: ಕೆ.ಎ-30/ಆರ್-5665 ನೇದರ ಸವಾರ). ದಿನಾಂಕ: 04-04-2021 ರಂದು ಮಧ್ಯಾಹ್ನ 15-10 ಗಂಟೆಗೆ ಪಿರ್ಯಾದಿಯು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-7674 ನೇದರ ಹಿಂದಿನ ಸೀಟಿನಲ್ಲಿ ತನ್ನ ತಂದೆಯವರಾದ ಪ್ರಕಾಶ ತಂದೆ ಕೋಮಾರ ನಾಯ್ಕ, ಇವರನ್ನು ಕೂರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಹೋಗುವ ಏಕಮುಖ ಸಂಚಾರ ರಸ್ತೆಯ ಮುಖಾಂತರ ಅರ್ಗಾ ಕಡೆಯಿಂದ ಕಾರವಾರ ಕಡೆಗೆ ಬರುತ್ತಿರುವಾಗ ಕಾರವಾರ ಬಿಣಗಾದ ಪೋಸ್ಟ್ ಆಫೀಸ್ ಎದುರುಗಡೆ ಕಾರವಾರ ಕಡೆಯಿಂದ ಬಂದ ಮೋಟಾರ್ ಸ್ಕೂಟರ್ ನಂ: ಕೆ.ಎ-30/ಆರ್-5665 ನೇದರ ಆರೋಪಿ ಸವಾರನು ತನ್ನ ಮೋಟಾರ್ ಸ್ಕೂಟರನ್ನು ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಹೋಗುವ ಏಕಮುಖ ಸಂಚಾರ ರಸ್ತೆಯ ವಿರುದ್ಧ ದಿಕ್ಕಿನಿಂದ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಮೋಟಾರ್ ಸ್ಕೂಟರ್ ಚಲಾಯಿಸಿಕೊಂಡು ಬಂದು ಕಾರವಾರ ಕಡೆಗೆ ತನ್ನ ಮಾರ್ಗದಲ್ಲಿ ಹೋಗುತ್ತಿದ್ದ ಪಿರ್ಯಾದಿಯ ಮೋಟಾರ್ ಸೈಕಲಿನ ಎದುರಿಗೆ ತನ್ನ ಮೋಟಾರ್ ಸ್ಕೂಟರಿನ ಮುಂದಿನ ಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಪಿರ್ಯಾದಿಯ ಎಡಗೈ ಹಾಗೂ ಬಲಗೈ ಬೆರಳುಗಳ ಹತ್ತಿರ ತೆರಚಿದ ಗಾಯ ಮತ್ತು ಸೊಂಟಕ್ಕೆ ಒಳನೋವು ಹಾಗೂ ಮೋಟಾರ್ ಸೈಕಲ್ ಹಿಂಬದಿ ಸವಾರರಾದ ಪಿರ್ಯಾದಿಯ ತಂದೆ ಪ್ರಕಾಶ ಇವರಿಗೆ ತಲೆಯ ಮೇಲೆ ಬಲಭಾಗದಲ್ಲಿ ಗಾಯ, ಬಲಗಾಲಿನ ಹಿಮ್ಮಡಿಗೆ ಗಾಯ ಮತ್ತು ಸೊಂಟದ ಭಾಗದಲ್ಲಿ ಒಳನೋವು ಪಡಿಸಿದ್ದಲ್ಲದೇ, ತನ್ನ ಮೋಟಾರ್ ಸ್ಕೂಟರ್ ಹಿಂಬದಿ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಕುಮಾರಿ: ಶ್ರೀಲಕ್ಷ್ಮೀ ಇವಳಿಗೆ ಎಡಗಾಲಿನ ಮೊಣಕಾಲಿನ ಹತ್ತಿರ ಒಳನೋವು ಪಡಿಸಿದ್ದಲ್ಲದೇ, ಆರೋಪಿತನು ತನಗೂ ಸಹ ಎಡದವಡೆಯ ಮೇಲೆ ಒಳನೋವು, ಎಡಗೈ ಮೊಣಕೈ ಕೆಳಗೆ ಮೂಳೆ ಮುರಿತವಾಗಿ ಭಾರೀ ಗಾಯ, ಎಡಗಾಲಿನ ಮೊಣಕಾಲಿನ ಕೆಳಗೆ ಒಳನೋವು ಹಾಗೂ ಕುತ್ತಿಗೆಯ ಹಿಂಭಾಗದಲ್ಲಿ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಕಿರಣ ತಂದೆ ಪ್ರಕಾಶ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ನೇವಿಯಲ್ಲಿ ದಿನಗೂಲಿ ನೌಕರ, ಸಾ|| ಶ್ರೀ ಮಹಾಲದೇವ ಶ್ರೀ ಮಹಾಸತಿ ದೇವಿ ದೇವಸ್ಥಾನ ಹತ್ತಿರ, ಅರ್ಗಾ, ಕಾರವಾರ ರವರು ದಿನಾಂಕ: 04-04-2021 ರಂದು 16-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 03-04-2021 ರಂದು ರಾತ್ರಿ ಸುಮಾರು 23-00 ಗಂಟೆಯಿಂದ ದಿನಾಂಕ: 04-04-2021 ರಂದು ಬೆಳಗಿನ ಜಾವ 07-00 ಗಂಟೆಯ ನಡುವಿನ ಅವಧಿಯಲ್ಲಿ ಕಾರವಾರ ಖುರ್ಸಾವಾಡಾದ ವಿಜಯನಗರದಲ್ಲಿ ಪಿರ್ಯಾದಿಯವರು ತಮ್ಮ ಮನೆಯ ಹೊರಗಡೆ ಅಂಗಳದಲ್ಲಿ ನಿಲ್ಲಿಸಿಟ್ಟಿದ್ದ ಹಸಿರು ಬಣ್ಣದ HERCULES ಕಂಪನಿಯ ಸೈಕಲ್ ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ತಂದೆ ನಾರಾಯಣ ಮರಾಠೆ, ಪ್ರಾಯ-51 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್, ಸಾ|| ಖುರ್ಸಾವಾಡಾ, ವಿಜಯನಗರ, ಕಾರವಾರ ರವರು ದಿನಾಂಕ: 04-04-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 32, 34, 38(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ಹಾಗೂ ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಕ್ಯಾಂಟರ್ ಲಾರಿ ನಂ: ಎಮ್.ಎಚ್-06/ಎ.ಕ್ಯೂ-2478 ನೇದರ ಮಾಲಕ ಮತ್ತು ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 04-04-2021 ರಂದು 11-45 ಗಂಟೆಗೆ ತನ್ನ ಕ್ಯಾಂಟರ್ ಲಾರಿ ನಂ: ಎಮ್.ಎಚ್-06/ಎ.ಕ್ಯೂ-2478 ನೇದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ 6,51,624/- ರೂಪಾಯಿ ಮೌಲ್ಯದ ಗೋವಾ ರಾಜ್ಯದ ಸರಾಯಿಯನ್ನು ಮಾರಾಟ ಮಾಡಲು ಕ್ಯಾಂಟರ್ ಲಾರಿ ನಂ: ಎಮ್.ಎಚ್-06/ಎ.ಕ್ಯೂ-2478 ನೇದರಲ್ಲಿ ಎಲ್ಲಿಂದಲೋ ತುಂಬಿಕೊಂಡು ಯಲ್ಲಾಪುರ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಆರೋಪಿ ಕ್ಯಾಂಟರ್ ಲಾರಿ ಚಾಲಕನು ಲಾರಿಯನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ಅಡ್ಲೂರು ಹತ್ತಿರ ಲಾರಿಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಲಾರಿಯನ್ನು ಪಲ್ಟಿ ಪಡಿಸಿ ಅಪಘಾತ ಪಡಿಸಿ, ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂಪತ್ ಇ. ಸಿ, ಪಿ.ಎಸ್.ಐ-1, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 04-04-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅನಂದು ತಂದೆ ದಿಪ್ಪಾ ಹುಲಸ್ವಾರ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಅಂಬಾರಕೊಡ್ಲ, ತಾ: ಅಂಕೋಲಾ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-1226 ನೇದರ ಚಾಲಕ). ಈತನು ದಿನಾಂಕ: 02-04-2021 ರಂದು ಸಾಯಂಕಾಲ 08-05 ಗಂಟೆಯ ಸುಮಾರಿಗೆ ಬಾಬ್ತು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-1226 ನೇದನ್ನು ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು ತನ್ನ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಬಲಕ್ಕೆ ಬಂದವನು, ರಸ್ತೆಯ ತನ್ನ ಬದಿಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಗೋಪಾಲ ತಂದೆ ರಾಮಾ ಹುಲಸ್ವಾರ ಇವರಿಗೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತಲೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮಿತ್ರಾ ನಾಗೇಶ ಹುಲಸ್ವಾರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಳಕಾರ, ತಾ: ಕುಮಟಾ ರವರು ದಿನಾಂಕ: 04-04-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವರಾಜ ರಾಮಚಂದ್ರ ಪಟಗಾರ, ಪ್ರಾಯ-23 ವರ್ಷ, ವೃತ್ತಿ-ಗ್ರಾಫಿಕ್ಸ್ ಡಿಸೈನರ್, ಸಾ|| ಚಿತ್ರಿಗಿ, ಹಳ್ಕಾರ ಕ್ರಾಸ್, ತಾ: ಕುಮಟಾ, 2]. ನಾಗರಾಜ ಕೇಶವ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಆಟೋ ರಿಕ್ಷಾ ಚಾಲಕ, ಸಾ|| ಚಿತ್ರಿಗಿ, ರಾಮ ದೇವಸ್ಥಾನದ ಹತ್ತಿರ, ತಾ: ಕುಮಟಾ, 3]. ದತ್ತು ರಾಮಚಂದ್ರ ಪಟಗಾರ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿತ್ರಿಗಿ, ರಾಮ ದೇವಸ್ಥಾನ ಕ್ರಾಸ್ ಹತ್ತಿರ, ತಾ: ಕುಮಟಾ, 4]. ಕೇಶವ ಲಕ್ಷ್ಮಣ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿತ್ರಿಗಿ, ರಾಮ ದೇವಸ್ಥಾನದ ಹತ್ತಿರ, ತಾ: ಕುಮಟಾ, 5]. ಶ್ರೀಪಾದ ನಾರಾಯಣ ಪಟಗಾರ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಚಿತ್ರಿಗಿ, ರಾಮ ದೇವಸ್ಥಾನದ ಹತ್ತಿರ, ತಾ: ಕುಮಟಾ. ಈ ನಮೂದಿತ ಆರೋಪಿತರೆಲ್ಲರೂ ಸೇರಿ ದಿನಾಂಕ: 04-04-2021 ರಂದು 02-15 ಗಂಟೆಯವರೆಗೆ ಕುಮಟಾ ಚಿತ್ರಿಗಿಯ ಹಳ್ಕಾರ ಕ್ರಾಸಿನಲ್ಲಿರುವ ಮೈದಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದಾಗ 1). ನಗದು ಹಣ 27,340/- ರೂಪಾಯಿ, 2). ಇಸ್ಪೀಟ್ ಎಲೆಗಳು ಒಟ್ಟೂ-52, ಅ||ಕಿ|| 00.00/- ರೂಪಾಯಿ, 3). ಪಾಲಿಥಿನ್ ತಾಡಪಲ್-01, ಅ||ಕಿ|| 00.00/- ರೂಪಾಯಿ, 4). ಮೇಣದ ಬತ್ತಿ ತುಂಡುಗಳು-02, ಅ||ಕಿ|| 00.00/- ರೂಪಾಯಿ, 5). ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-2937, ಅ||ಕಿ|| 50,000/- ರೂಪಾಯಿ, 6). ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-9029, ಅ||ಕಿ|| 40,000/- ರೂಪಾಯಿ, 7). ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ಈ-6552, ಅ||ಕಿ|| 12,000/- ರೂಪಾಯಿ, 8). ಹೋಂಡಾ ಡ್ರೀಮ್ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-5522, ಅ||ಕಿ|| 22,000/- ರೂಪಾಯಿ. ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಚಂದ್ರಮತಿ ಪಟಗಾರ, ಡಬ್ಲ್ಯೂ.ಪಿ.ಎಸ್.ಐ-2 (ಕ್ರೈಂ), ಕುಮಟಾ ಪೋಲಿಸ್ ಠಾಣೆ ರವರು ದಿನಾಂಕ: 04-04-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 97/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಭವಾನಿ ತಂದೆ ಮರಿಯಾ ಗೌಡ, ಪ್ರಾಯ-30 ವರ್ಷ, ವೃತ್ತಿ-ಗೃಹಿಣಿ, ಸಾ|| ಕರ್ಕಿನಾಕಾ ಹತ್ತಿರ, ತಾ: ಹೊನ್ನಾವರ. ಪಿರ್ಯಾದಿಯ ಹೆಂಡತಿಯಾದ ಇವಳು ಮನೆಯಲ್ಲಿ ಎಲ್ಲರೊಂದಿಗೆ ಒಳ್ಳೆಯ ರೀತಿಯಿಂದ ಇದ್ದವಳು, ದಿನಾಂಕ: 03-04-2021 ರಂದು ರಾತ್ರಿ 22-30 ಗಂಟೆಯಿಂದ ದಿನಾಂಕ: 04-04-2021 ರಂದು ರಾತ್ರಿ 00-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಪಿರ್ಯಾದಿಯ ಅಜ್ಜಿಯೊಂದಿಗೆ ಮಲಗಿದ್ದವಳು, ಮನೆಯಿಂದ ಎಲ್ಲಿಯೋ ಹೋಗಿ, ಸಂಬಂಧಿಕರ ಮನೆಗೂ ಹೋಗದೇ, ಮನೆಗೂ ಮರಳಿ ಬಾರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿಕೊಡಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ನಾರಾಯಣ ಗೌಡ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕರ್ಕಿನಾಕಾ ಹತ್ತಿರ, ತಾ: ಹೊನ್ನಾವರ ರವರು ದಿನಾಂಕ: 04-04-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಹೊನ್ನಪ್ಪ ನಾಯ್ಕ, ಸಾ|| ಮಾಳ್ಕೋಡ, ತಾ: ಹೊನ್ನಾವರ. ದಿನಾಂಕ: 04-04-2021 ರಂದು 18-00 ಗಂಟೆಗೆ ಬಳ್ಕೂರಿನ ಕಟ್ಟಿನಹಿತ್ಲನಲ್ಲಿ ಗುಡ್ಡದಲ್ಲಿ ಬೆಳೆದಿರುವ ಗೇರು ಹಿತ್ತಲಿನಲ್ಲಿ ಪಿರ್ಯಾದಿಯು ಗೇರು ಹಣ್ಣನ್ನು ಕೊಕ್ಕೆಯಿಂದ ಬೀಳಿಸುತ್ತಾ ಇದ್ದವನಿಗೆ ನಮೂದಿತ ಆರೋಪಿತನು ಪಿರ್ಯಾದಿಗೆ ಉದ್ದೇಶಿಸಿ ‘ನೀನು ಇಲ್ಲಿರುವ ಮರದ ಗೇರು ಹಣ್ಣನ್ನು ಯಾಕೆ ಬೀಳಿಸುತ್ತಾ ಇದ್ದೆ? ಮರ ತಮಗೆ ಸಂಬಂಧಿಸಿದ್ದು’ ಅಂತಾ ಹೇಳಿದಾಗ ಪಿರ್ಯಾದಿಯು, ಆರೋಪಿತನಿಗೆ ‘ಈ ಹಿಂದಿನಿಂದಲೂ ಕುಟುಂಬದವರು ತೆಗೆಯುತ್ತಾ ಬಂದಿದ್ದು, ಯಾರಿಗೂ ಮರ ಹಂಚಲಿಲ್ಲ’ ಎಂದು ಹೇಳಿ ಮರದಲ್ಲಿದ್ದ ಗೇರು ಹಣ್ಣನ್ನು ಬೀಳಿಸುತ್ತಾ ಇರುವಾಗ ಪಿರ್ಯಾದಿಯು ನೆಲದಲ್ಲಿ ಇಟ್ಟಿರುವ ಕತ್ತಿಯನ್ನು ಆರೋಪಿತನು ತೆಗೆದುಕೊಂಡು ಪಿರ್ಯಾದಿಗೆ ಹಿಂದಿನಿಂದ ಬಲ ಕಿವಿ ಮತ್ತು ಎಡಗಣ್ಣಿನ ಹತ್ತಿರ ಹೊಡೆದು, ಮತ್ತೆ ಹೊಡೆಯಲು ಮುಂದಾದಾಗ, ಪಿರ್ಯಾದಿಯ ಹೆಂಡತಿ ಚೀರಾಡಿದನ್ನು ಕೇಳಿ, ಪಿರ್ಯಾದಿಗೆ ಉದ್ದೇಶಿಸಿ, ‘ಬೋಸಡಿ ಮಗನೆ, ನಿನ್ನ ಹೆಂಡತಿ ಬಂದಿದ್ದಕ್ಕೆ ಉಳಿದಿದ್ದಿ. ಇನ್ನೊಮ್ಮೆ ಇಲ್ಲಿ ಕಾಲು ಇಟ್ಟರೆ ಜೀವ ಸಹಿತ ಮುಗಿಸಿಯೇ ಬಿಡುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಸಣ್ಣಕೂಸ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಳ್ಕೂರ, ಕಟ್ಟಿನಹಿತ್ಲು, ತಾ: ಹೊನ್ನಾವರ ರವರು ದಿನಾಂಕ: 04-04-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರತೀಕ ತಂದೆ ಪರಮೇಶ್ವರ ದೇವಾಡಿಗ, ಸಾ|| ಬೆಳ್ಳುರಮನೆ, ಹೆಬ್ಳೆ, ತಾ: ಭಟ್ಕಳ (ಬುಲೆಟ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7765 ನೇದರ ಸವಾರ). ಈತನು ದಿನಾಂಕ: 04-04-2021 ರಂದು ತನ್ನ ಬುಲೆಟ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7765 ನೇದನ್ನು ಉಳ್ಮಣ್ಣ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಬೆಂಗ್ರೆ-1 ರ ಮಾವಿನತೋಳಾದಲ್ಲಿ ಯಕ್ಷಿಮನೆ ಕ್ರಾಸ್ ಕಡೆಯಿಂದ ಸಣ್ಣಬಾವಿ ರಸ್ತೆಯ ಮಾರ್ಗವಾಗಿ ಹೋಗುತ್ತಿರುವ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-5560 ನೇದಕ್ಕೆ ಮಧ್ಯಾಹ್ನ ಸುಮಾರು 03-40 ಗಂಟೆಗೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಿಂದ ನಾಗರಾಜ ತಂದೆ ಮಾದೇವ ದೇವಾಡಿಗ, ಪ್ರಾಯ-31 ವರ್ಷ, ವೃತ್ತಿ-ಮಿನುಗಾರಿಕೆ, ಸಾ|| ಮುಟ್ಟಳ್ಳಿ, ತಾ: ಭಟ್ಕಳ ಈತನಿಗೆ ಬಲಗಾಲ ಮೊಣಗಂಟಿನ ಕೆಳಗೆ ಭಾರೀ ಸ್ವರೂಪದ ರಕ್ತದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿತನು ತನಗೂ ಸಹ ಸಣ್ಣಪುಟ್ಟ ಗಾಯನೋವು ಪಡಿಸಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಮಾಸ್ತಿ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚನಕಿಮನೆ, ಮೂಡಭಟ್ಕಳ, ಪೋ: ಮುಟ್ಟಳ್ಳಿ, ತಾ: ಭಟ್ಕಳ ರವರು ದಿನಾಂಕ: 04-04-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಚಂದ್ರ ತಂದೆ ಸೋಮಯ್ಯ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಿಕ್ಲುಮನೆ, ಮೂಡ ಶಿರಾಲಿ, ತಾ: ಭಟ್ಕಳ. ಈತನು ಪಿರ್ಯಾದಿಯ ಚಿಕ್ಕಪ್ಪನಿದ್ದು, ಆರೋಪಿತನ ಮನೆಯ ಹತ್ತಿರ ಪಿರ್ಯಾದಿಯ ಕುಟುಂಬಕ್ಕೆ ಹಾಗೂ ಆರೋಪಿತನ ಕುಟುಂಬಕ್ಕೆ ಸಂಬಂಧಿಸಿದ ಬಾವಿ ಇದ್ದು, ಈ ಬಾವಿಯ ನೀರನ್ನು ಈ ಹಿಂದಿನಿಂದಲು ಎರಡೂ ಕುಟುಂಬದವರು ತಮ್ಮ ತಮ್ಮ ತೋಟಗಳಿಗೆ ಬಳಕೆ ಮಾಡುತ್ತಾ ಬಂದಿರುತ್ತಾರೆ. ಕಳೆದ ಒಂದು ತಿಂಗಳಿನಿಂದ ನಮೂದಿತ ಆರೋಪಿತನು ಸದರ ಬಾವಿಯ ನೀರನ್ನು ಹೆಚ್ಚಾಗಿ ಬಳಕೆ ಮಾಡುತ್ತಾ ‘ಈ ಬಾವಿ ನನ್ನ ಜಾಗದಲ್ಲಿದ್ದು, ನನಗೆ ಸಂಬಂಧಿಸಿದ್ದು’ ಅಂತಾ ಹೇಳಿ ಬಾವಿಯ ನೀರನ್ನು ಪಿರ್ಯಾದಿಯ ಕುಟುಂಬದವರಿಗೆ ಬಳಕೆ ಮಾಡಲು ತಕರಾರು ಮಾಡುತ್ತಿದ್ದವನು, ದಿನಾಂಕ: 04-04-2021 ರಂದು ಸಾಯಂಕಾಲ 07-15 ಗಂಟೆಗೆ ತಲಗೇರಿ ರಸ್ತೆಯ ಸಪ್ಲೇರ ಹಿತ್ತಲ ಸರಕಾರಿ ಶಾಲೆಯ ಹತ್ತಿರದ ವಾಸು ಬೆರ್ಮು ನಾಯ್ಕ ಇವರ ಮನೆಯ ಹತ್ತಿರವಿದ್ದ ಆರೋಪಿತನಿಗೆ ಪಿರ್ಯಾದಿಯು ‘ಪ್ರತಿ ದಿನ ಬಾವಿಯ ನೀರನ್ನು ನಿಮ್ಮ ತೋಟಕ್ಕೆ ನೀನೇ ಬಿಡುತ್ತಿದ್ದು, ನಮ್ಮ ತೋಟವು ನೀರಿಲ್ಲದೇ ಒಣಗಿ ಹೋಗುತ್ತಿದ್ದು, ನಾಳೆ ಬಾವಿಯ ನೀರನ್ನು ನಮ್ಮ ತೋಟಕ್ಕೆ ನಾನು ಬಿಡುತ್ತೇನೆ’ ಅಂತಾ ಹೇಳಿದ್ದಕ್ಕೆ, ಆರೋಪಿತನು ಪಿರ್ಯಾದಿಯನ್ನು ಉದ್ದೇಶಿಸಿ ‘ಬಾವಿ ನನಗೆ ಸಂಬಂಧಿಸಿದ್ದು, ನೀರು ಬಿಡಲು ನಾನು ಬಿಡುವುದಿಲ್ಲ’ ಅಂತಾ ಹೇಳಿ, ಪಿರ್ಯಾದಿಯೊಂದಿಗೆ ಜಗಳ ತೆಗೆದು ‘ಬೋಳಿ ಮಗನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿಯ ತಲೆಯ ಎಡಬದಿಗೆ ಹೊಡೆದು ರಕ್ತದ ಗಾಯಗೊಳಿಸಿದಾಗ, ಪಿರ್ಯಾದಿಯು ಕೂಗಿಕೊಂಡಾಗ ಪಿರ್ಯಾದಿಯ ತಂದೆ ಮಾದೇವ ಸೋಮಯ್ಯ ನಾಯ್ಕ ಹಾಗೂ ವಾಸು ಬೆರ್ಮು ನಾಯ್ಕ ಇವರು ಬರುವುದನ್ನು ಕಂಡು ಆರೋಪಿತನು ಪಿರ್ಯಾದಿಗೆ ‘ಈ ದಿವಸ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ಮಾದೇವ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಮಿಕ್ಲುಮನೆ, ಮೂಡ ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 04-04-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: ಮಹಿಳೆ ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ದೀಪಾ ಕೋಂ. ನಾಗರಾಜ ಗೌಳಿ, ಪ್ರಾಯ-38 ವರ್ಷ, ವೃತ್ತಿ-ಮನೆವಾರ್ತೆ, ಸಾ|| 4 ನೇ ಕ್ರಾಸ್, ಲಯನ್ಸ್ ನಗರ, ತಾ: ಶಿರಸಿ, 2]. ಕುಮಾರ: ಸೋಹನ್ ತಂದೆ ನಾಗರಾಜ ಗೌಳಿ, ಪ್ರಾಯ-08 ವರ್ಷ, ಸಾ|| 4 ನೇ ಕ್ರಾಸ್, ಲಯನ್ಸ್ ನಗರ, ತಾ: ಶಿರಸಿ. ಈ ನಮೂದಿತರಲ್ಲಿ 1 ನೇಯವರು ಪಿರ್ಯಾದಿಯವರ ಹೆಂಡತಿಯಾಗಿದ್ದು, ಇವರು ಮನೆ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿಯವರು ಬಾಡಿಗೆ ವಾಹನ ಚಲಾಯಿಸಿಕೊಂಡಿರುತ್ತಾರೆ. ಪಿರ್ಯಾದಿಯವರು ಮಕ್ಕಳ ಶಾಲೆ ಮತ್ತು ಪಿ.ಜಿ ಖರ್ಚು ವೆಚ್ಚಕ್ಕಾಗಿ ಸಾಲ ಮಾಡಿಕೊಂಡಿದ್ದು, ಸಾಲದ ಬಗ್ಗೆ ಪಿರ್ಯಾದಿಯ ಹೆಂಡತಿಯು ತೀವೃವಾಗಿ ಮನಸ್ಸಿಗೆ ಹಚ್ಚಿಕೊಂಡವರಿಗೆ ಪಿರ್ಯಾದಿಯವರು ‘ದುಡಿಮೆಯಿಂದ ಸಾಲ ತೀರಿಸುವಾ. ಮಕ್ಕಳ ಭವಿಷ್ಯ ನೋಡುವಾ. ಮುಂದೆ ಸರಿ ಆಗುತ್ತದೆ’ ಅಂತಾ ಹೇಳುತ್ತಾ ಬಂದಿದ್ದರೂ ಸಹ ಅದನ್ನೇ ಮನಸ್ಸಿಗೆ ಹಚ್ಚಿಕೊಂಡವರಿದ್ದು, ದಿನಾಂಕ: 03-04-2021 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿಯವರು ಬಾಡಿಗೆ ನಿಮಿತ್ತವಾಗಿ ಯಾಣಕ್ಕೆ ಹೋದವರು ರಾತ್ರಿ 10-30 ಗಂಟೆಗೆ ಮರಳಿ ಮನೆಗೆ ಬಂದವರಿದ್ದು, ಈ ನಡುವಿನ ಅವಧಿಯಲ್ಲಿ ಮನೆಯಲ್ಲಿದ್ದ ಪಿರ್ಯಾದಿಯ ಹೆಂಡತಿ ಶ್ರೀಮತಿ ದೀಪಾ ಕೋಂ. ನಾಗರಾಜ ಗೌಳಿ ರವರು ತಮ್ಮ ಮಗನಾದ ಕುಮಾರ: ಸೋಹನ್ ತಂದೆ ನಾಗರಾಜ ಗೌಳಿ ಈತನಿಗೆ ಕರೆದುಕೊಂಡು ಮನೆಯಿಂದ ಎಲ್ಲಿಯೋ ಹೋದವರು, ಈವರೆಗೆ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿ ಮತ್ತು ಮಗನನ್ನು ಪತ್ತೆ ಮಾಡಿ ಕೊಡಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಯಲ್ಲಪ್ಪಾ ಗೌಳಿ, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| 4 ನೇ ಕ್ರಾಸ್, ಲಯನ್ಸ್ ನಗರ, ತಾ: ಶಿರಸಿ ರವರು ದಿನಾಂಕ: 04-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಭುದೇವ ತಂದೆ ಬಸವರಾಜ ಸಣ್ಣಲಿಂಗಣ್ಣನವರ, ಸಾ|| ಬನವಾಸಿ, ತಾ: ಶಿರಸಿ (ಕಾರ್ ನಂ: ಕೆ.ಎ-04/ಎಮ್.ಆರ್-9619 ನೇದರ ಚಾಲಕ). ಈತನು ದಿನಾಂಕ: 04-04-2021 ರಂದು ನಸುಕಿನ ಬೆಳಿಗ್ಗೆ 01-00 ಗಂಟೆಗೆ ತನ್ನ ಕಾರ್ ನಂ: ಕೆ.ಎ-04/ಎಮ್.ಆರ್-9619 ನೇದರಲ್ಲಿ 1). ಸಂಜಯ ಮಹಾಲಿಂಗ ಉಳ್ಳಾಗಡ್ಡಿ, 2). ಶಶಾಂಕ ಮಹಾಲಿಂಗ ಉಳ್ಳಾಗಡ್ಡಿ, 3). ವಿಕಾಸ ಅಶೋಕ ಈಳಿಗೇರ ಇವರಿಗೆ ಕೂಡ್ರಿಸಿಕೊಂಡು ಶಿರಸಿ ಕಡೆಯಿಂದ ಬನವಾಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಗಾವಿ ಕ್ರಾಸ್ ಹತ್ತಿರ ಕಾರ್ ಮೇಲಿನ ನಿಯಂತ್ರಣ ತಪ್ಪಿ ಕಾರನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ತಿರುಗಿಸಿ ಮಣ್ಣಿನ ದಿಬ್ಬಕ್ಕೆ ಮತ್ತು ಮರಗಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಂಜಯ ಈತನ ಕೈ, ಕಾಲು, ಹೊಟ್ಟೆ ಹಾಗೂ ಭುಜಕ್ಕೆ, ಶಶಾಂಕ ಈತನ ಕೈಗೆ ಹಾಗೂ ಕಿವಿಗೆ, ವಿಕಾಸ ಈತನ ತಲೆಗೆ, ಎರಡೂ ಭುಜಗಳಿಗೆ ಹಾಗೂ ಕಾಲುಗಳಿಗೆ ರಕ್ತಗಾಯ ಪಡಿಸಿದ್ದು ಹಾಗೂ ಆರೋಪಿ ಚಾಲಕನು ತನಗೂ ಸಹ ತಲೆಗೆ ಮತ್ತು ಕೈಗೆ ರಕ್ತಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಂಜಯ ತಂದೆ ಅಶೋಕ ಈಳಿಗೇರ, ಪ್ರಾಯ-25 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೆ.ಡಿ.ಸಿ.ಸಿ ಬ್ಯಾಂಕ್ ಎದುರಿಗೆ, ಬನವಾಸಿ, ತಾ: ಶಿರಸಿ ರವರು ದಿನಾಂಕ: 04-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-04-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

ಇತ್ತೀಚಿನ ನವೀಕರಣ​ : 05-04-2021 05:52 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080