ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-04-2022

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2022, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಣ್ಣಮತಿ ತಂದೆ ಬಸಪ್ಪ ಶಿವಣ್ಣವರ, ಸಾ|| ನವಲೂರ, ಧಾರವಾಡ (ಟ್ರಾಲಿ ಲಾರಿ ನಂ: ಕೆ.ಎ-25/ಸಿ-6351 ನೇದರ ಚಾಲಕ). ಈತನು ದಿನಾಂಕ: 04-04-2022 ರಂದು ಮಧ್ಯಾಹ್ನ 13-50 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಸರಳೇಬೈಲ್ ದಿಂದ ಹಾದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಸ್ತೆಯಲ್ಲಿ ಟ್ರಾಲಿ ಲಾರಿ ನಂ: ಕೆ.ಎ-25/ಸಿ-6351 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಲಾರಿಯ ಚಾಲನೆಯ ಮೇಲೆ ತನ್ನ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ರಸ್ತೆಯ ಎಡಬದಿಯ ಮಣ್ಣಿನ ರಸ್ತೆಯಲ್ಲಿ ಚಲಾಯಿಸಿ, ರಸ್ತೆ ಪಕ್ಕದ ಕೆ.ಇ.ಬಿ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ನಂತರ ರಸ್ತೆಯ ಪಕ್ಕದ ಕಚ್ಚಾ ರಸ್ತೆಯ ಮೇಲಿಂದ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಪಿರ್ಯಾದಿಯ ತಮ್ಮ ಶ್ರೀ ಸಣ್ಣತಮ್ಮ ತಂದೆ ಯಂಕು ಗೌಡ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸರಳೇಬೈಲ್, ತಾ: ಅಂಕೋಲಾ ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದಲ್ಲದೇ, ಅಪಘಾತದ ರಭಸಕ್ಕೆ ಲಾರಿಯ ಹಿಂಬದಿಯಲ್ಲಿ ತುಂಬಿದ್ದ ಕಾಂಕ್ರೀಟ್ ಪೈಪುಗಳು ಪಿರ್ಯಾದಿಯ ತಮ್ಮ ಸಣ್ಣತಮ್ಮ ಗೌಡ ಈತನ ಮೈಮೇಲೆ ಹರಿದು ಹೋಗಿ, ಪಿರ್ಯಾದಿಯ ತಮ್ಮ ಸಣ್ಣತಮ್ಮ ಗೌಡ ಈತನ ಎಡಗಾಲು ಕಟ್ ಆಗಿದ್ದಲ್ಲದೇ, ಎದೆಯ ಕೆಳಭಾಗ ಸಂಪೂರ್ಣ ತುಂಡಾಗಿ ರಕ್ತ ಹರಿದು ಮಾಂಸ ಖಂಡಗಳು ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ತಾಕು ತಂದೆ ಯಂಕು ಗೌಡ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸರಳೇಬೈಲ್, ತಾ: ಅಂಕೋಲಾ ರವರು ದಿನಾಂಕ: 04-04-2022 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 132/2022, ಕಲಂ: 279, 337 ಐಪಿಸಿ ಹಾಗೂ 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಕಾರ್ ನಂ: ಕೆ.ಎ-47/ಎಮ್-8354 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 04-04-2022 ರಂದು 11-30 ಗಂಟೆಯ ಸುಮಾರಿಗೆ ಹೊನ್ನಾವರ ತಾಲೂಕಿನ ಬೈಲಗದ್ದೆ ರಸ್ತೆಯಲ್ಲಿ ಶನೇಶ್ವರ ದೇವಸ್ಥಾನದ ಹತ್ತಿರ ತನ್ನ ಬಾಬ್ತು ಕಾರ್ ನಂ: ಕೆ.ಎ-47/ಎಮ್-8354 ನೇದನ್ನು ಬೈಲಗದ್ದೆ ಕಡೆಯಿಂದ ಬೈಲಗದ್ದೆ ಕ್ರಾಸ್ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ತನ್ನ ಮುಂದಿನಿಂದ ಬೈಲಗದ್ದೆ ಕಡೆಯಿಂದ ಬೈಲಗದ್ದೆ ಕ್ರಾಸ್ ಕಡೆಗೆ ರಸ್ತೆಯ ಬಲಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಗೆ ಹಾಗೂ ಅವರ ತಂಗಿ ಕುಮಾರಿ: ದಿವ್ಯಶ್ರೀ ತಂದೆ ನಾರಾಯಣ ನಾಯ್ಕ, ಪ್ರಾಯ-22 ವರ್ಷ ಇಬ್ಬರಿಗೂ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ತಲೆಗೆ ಹಾಗೂ ಮೈಮೇಲೆ ದುಃಖಾಪತ್ ಪಡಿಸಿದ್ದಲ್ಲದೇ, ದಿವ್ಯಶ್ರೀ ಇವಳಿಗೆ ಕೈ ಕಾಲುಗಳಿಗೆ ದುಃಖಾಪತ್ ಪಡಿಸಿದ್ದಲ್ಲದೇ, ಅಪಘಾತದ ನಂತರ ಕಾರನ್ನು ನಿಲ್ಲಿಸದೇ, ಕಾರನ್ನು ಚಲಾಯಿಸಿಕೊಂಡು ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಕುಮಾರಿ: ಭವ್ಯಶ್ರೀ ತಂದೆ ನಾರಾಯಣ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹೊಸ್ಕೇರಿಹೊಂಡ, ಉಪ್ಪೋಣಿ, ತಾ: ಹೊನ್ನಾವರ ರವರು ದಿನಾಂಕ: 04-04-2022 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ಜಟ್ಟಾ ನಾಯ್ಕ, ಸಾ|| ಚಿತ್ರಾಪುರ, ಶಿರಾಲಿ, ತಾ: ಭಟ್ಕಳ (ಅಶೋಕ ಲೈಲ್ಯಾಂಡ್ ಗೂಡ್ಸ್ ರಿಕ್ಸಾ ನಂ: ಕೆ.ಎ-47/ಎ-2845 ನೇದರ ಚಾಲಕ). ಈತನು ದಿನಾಂಕ: 27-04-2022 ರಂದು 16-30 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಅಶೋಕ ಲೈಲ್ಯಾಂಡ್ ಗೂಡ್ಸ್ ರಿಕ್ಸಾ ನಂ: ಕೆ.ಎ-47/ಎ-2845 ನೇದನ್ನು ಭಟ್ಕಳ ಕಡೆಯಿಂದ ಕುಂಟವಾಣಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಭಟ್ಕಳ-ಸಾಗರ ರಸ್ತೆಯ ಗುಳ್ಮೆ ಕ್ರಾಸ್ ಹತ್ತಿರ ಕುಂಟವಾಣಿ ಕಡೆಯಿಂದ ಭಟ್ಕಳ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-4129 ನೇದರ ಹಿಂಬದಿಯಲ್ಲಿ ಪಿರ್ಯಾದಿಯ ಹೆಂಡತಿ ಶ್ರೀಮತಿ ಶಶಿಕಲಾ ಕೋಂ. ಶಶಿರ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಮಲೆನಾಡ ಆಸ್ಪತ್ರೆಯಲ್ಲಿ ಕೆಲಸ, ಇವರನ್ನು ಕೂಡ್ರಿಸಿಕೊಂಡು ಬರುತ್ತಿರುವಾಗ ಭಟ್ಕಳ-ಸಾಗರ ರಸ್ತೆಯ ಗುಳ್ಮೆ ಕ್ರಾಸ್ ಹತ್ತಿರ ಪಿರ್ಯಾದಿಯ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿ ಮತ್ತು ಪಿರ್ಯಾದಿಯ ಹೆಂಡತಿ ವಾಹನದ ಸಮೇತ ರಸ್ತೆಯ ಮೇಲೆ ಬಿದ್ದಾಗ ಪಿರ್ಯಾದಿಯ ಹೆಂಡತಿಯ ಬಲಗೈ ಮೇಲೆ ಆರೋಪಿ ಗೂಡ್ಸ್ ವಾಹನದಲ್ಲಿದ್ದ ಕಬ್ಬಿಣ್ಣದ ಕಪಾಟು ಬಿದ್ದು ಪೆಟ್ಟಾಗಿದ್ದು, ಈ ಅಪಘಾತದಲ್ಲಿ ಪಿರ್ಯಾದಿಯ ಹೆಂಡತಿಯ ಬಲಗೈಗೆ, ಮುಖಕ್ಕೆ ಹಾಗೂ ತಲೆಗೆ ಪೆಟ್ಟಾಗಿದ್ದು, ಪಿರ್ಯಾದಿಯ ಬೆನ್ನಿನ ಭಾಗಕ್ಕೆ ಪೆಟ್ಟು ಪಡಿಸಿ, ವಾಹನ ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಶಿರ ತಂದೆ ರಾಮ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ವ್ಯಾಪಾರ, ಸಾ|| ಬೊಗಳೆ ಮನೆ, ಬಸ್ತಿ, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 04-04-2022 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಪತಿ ತಂದೆ ಯೆಂಕಾ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಹೆರೂರು, ತಾ: ಸಿದ್ದಾಪುರ. ಈತನು ದಿನಾಂಕ: 04-04-2022 ರಂದು 20-45 ಗಂಟೆಗೆ ಸಿದ್ದಾಪುರ ತಾಲೂಕಿನ ಹೆರೂರಿನಲ್ಲಿರುವ ತನ್ನ ತರಕಾರಿ ಅಂಗಡಿಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕರಿಗೆ ಅನಧೀಕೃತವಾಗಿ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). HAYWARDS CHEERS WHISKY, 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು, 2). HAYWARDS CHEERS WHISKY, 90 ML ಅಂತಾ ಬರೆದ 2 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳು, 3). 2 ಪ್ಲಾಸ್ಟಿಕ್ ಗ್ಲಾಸುಗಳು. ಇವುಗಳೊಂದಿಗೆ ಸಿಕ್ಕ ಬಗ್ಗೆ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 04-04-2022 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-04-2022

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 15-04-2022 06:59 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080