ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-08-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 139/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಧುಕರ ತಂದೆ ತಿಪ್ಪಾ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ವ್ಯಾಪಾರ, ಸಾ|| ಮೊಸಳೆಸಾಲ, ತಾ: ಕುಮಟಾ. ಈತನು ದಿನಾಂಕ: 04-08-2021 ರಂದು 15-15 ಗಂಟೆಗೆ ಕುಮಟಾ ತಾಲೂಕಿನ ಕಾಗಾಲ್ ಗ್ರಾಮದ ಮಸೀದಿ ಎದರು ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 760/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ನೇದವುಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 04-08-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 106/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಮುಜತಬಾ ತಂದೆ ಹಸನ್ ಕೊಚಪು, ಸಾ|| ಮಂಕಿ, ನವಾಯತಕೇರಿ, ತಾ: ಹೊನ್ನಾವರ (ಹ್ಯುಂಡೈ ಸ್ಯಾಂಟ್ರೋ ಕಾರ್ ನಂ: ಜಿ.ಎ-06/ಡಿ-4394 ನೇದರ ಚಾಲಕ). ಈತನು ದಿನಾಂಕ: 04-08-2021 ರಂದು 13-15 ಗಂಟೆಗೆ ಮಂಕಿಯ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ತಾನು ಚಲಾಯಿಸುತ್ತಿದ್ದ ಹ್ಯುಂಡೈ ಸ್ಯಾಂಟ್ರೋ ಕಾರ್ ನಂ: ಜಿ.ಎ-06/ಡಿ-4394 ನೇದನ್ನು ಮುರ್ಡೇಶ್ವರ ಕಡೆಯಿಂದ ಮಂಕಿ ಅರೆ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದವನು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಿಪಂಕುರ ಶಂಕರ ಇವನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವನ ತಲೆಗೆ ಹಾಗೂ ಬಲಗೈಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ದೇವಯ್ಯ ನಾಯ್ಕ ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಂಕಿ, ಬೊಳೆಬಸ್ತಿ, ತಾ: ಹೊನ್ನಾವರ ರವರು ದಿನಾಂಕ: 04-08-2021 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 123/2021, ಕಲಂ: 409, 418, 420, 465, 468, 471 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಘ್ವೇಶ ತಂದೆ ಮಾಬ್ಲು ಅಳಿಪ, ಪ್ರಾಯ-32 ವರ್ಷ, ವೃತ್ತಿ-ಗ್ರಾಮೀಣ ಅಂಚೆ ಸೇವಕ, ಸಾ|| ಕುಂಬಾರವಾಡ, ತಾ: ಜೋಯಿಡಾ. ಈತನು ದಿನಾಂಕ: 15-09-2008 ರಿಂದ ಶಿರಸಿಯ ಉತ್ತರ ಅಂಚೆ ಉಪ ವಿಭಾಗದ ಇಡಗುಂದಿ ಉಪ ಅಂಚೆ ಕಛೇರಿಯಲ್ಲಿ ಗ್ರಾಮೀಣ ಅಂಚೆ ಸೇವಕ ಮೇಲ್ ಡೆಲಿವರರ್ (GDS MD) ಆಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದವನು, ಉಪ ಖಜಾನೆ ಅಧಿಕಾರಿಗಳು, ಯಲ್ಲಾಪುರ ರವರು ಶ್ರೀ ಅಣ್ಯಯ್ಯ ತಂದೆ ಗಣಪತಿ ಭಟ್ಟ ಇವರಿಗೆ ಕಳುಹಿಸಿದ 500/- ರೂಪಾಯಿ ಹಣವನ್ನು ಹಾಗೂ ಶ್ರೀ ಮಂಜುನಾಥ ಎ. ಪಟಗಾರ ಇವರಿಗೆ ಕಳುಹಿಸಿದ 1,000/- ರೂಪಾಯಿ ಹಣವನ್ನು ಮತ್ತು ಶ್ರೀಮತಿ ಅನ್ನಪೂರ್ಣ ಕೃಷ್ಣ ಭಟ್ಟ ಇವರಿಗೆ ಕಳುಹಿಸಿದ 1,000/- ರೂಪಾಯಿ ಹಣವನ್ನು ಹೀಗೆ ಒಟ್ಟೂ 2,500/- ರೂಪಾಯಿ ಮನಿ ಆರ್ಡರ್ ಹಣವನ್ನು ದಿನಾಂಕ: 08-06-2015 ರಿಂದ 10-07-2015 ರ ನಡುವಿನ ಅವಧಿಯಲ್ಲಿ ಪಲಾನುಭವಿಗಳಿಗೆ ನೀಡದೆ ಮನಿ ಆರ್ಡರ್ ಫಾರ್ಮ್ ಮೇಲೆ ಪಲಾನುಭವಿಗಳ ಸಹಿಯನ್ನು ತಾನೇ ಮಾಡಿ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ಫಲಾನುಭವಿಗಳಿಗೆ ಮೋಸ ಮಾಡಿದ್ದಲ್ಲದೇ, ಅಂಚೆ ಇಲಾಖೆಗೆ ಹಾಗೂ ಸರ್ಕಾರಕ್ಕೆ ನಂಬಿಕೆ ಹಾಗೂ ವಿಶ್ವಾಸದ್ರೋಹ ಎಸಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ರಾಮಪ್ಪ ದೊಡ್ಮನಿ, ಪ್ರಾಯ-36 ವರ್ಷ, ವೃತ್ತಿ-ಅಂಚೆ ನಿರೀಕ್ಷಕರು, ಸಾ|| ಶಿರಸಿ ರವರು ದಿನಾಂಕ: 04-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಮೌನೇಶ ತಂದೆ ಅಶೋಕ ಕಮ್ಮಾರ, ಪ್ರಾಯ-30 ವರ್ಷ, ವೃತ್ತಿ-ಇಕ್ರಾ ಶಾಲೆಯಲ್ಲಿ ಟೆಂಪರರಿ ಉಪನ್ಯಾಸಕ, ಸಾ|| ಬೇಲೂರ, ತಾ: ರಾಣೆಬೆನ್ನೂರ, ಜಿ: ಹಾವೇರಿ, ಹಾಲಿ ಸಾ|| ಅಶೋಕನಗರ, ಟಿ.ಎಸ್.ಎಸ್ ರಸ್ತೆ, ತಾ: ಶಿರಸಿ. ಪಿರ್ಯಾದಿಯವರ ಗಂಡನಾದ ಈತನು ಶಿರಸಿಯ ಇಕ್ರಾ ಸ್ಕೂಲ್ ನಲ್ಲಿ ಟೆಂಪರರಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡು ಪಿರ್ಯಾದಿಯ ಜೊತೆಯಲ್ಲಿ ಸಂಸಾರ ನಡೆಸುತ್ತಿದ್ದವನು, ಮದುವೆಯಾದಾಗಿನಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿ ಮೊಬೈಲ್ ಪೋನಿನಲ್ಲಿ ಕಾಲ ಕಳೆಯುತ್ತಾ ಪಿರ್ಯಾದಿಯವರು ಏನಾದರೂ ಹೇಳಿದರೆ ಸ್ಪಂದಿಸದೇ ಇರುತ್ತಿದ್ದವನು, ದಿನಾಂಕ: 31-07-2021 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಪಿರ್ಯಾದಿಯು ಸ್ನಾನಕ್ಕೆ ಹೋದಾಗ ಪಿರ್ಯಾದಿಗೆ ಹೇಳದೇ ಕೇಳದೇ ಅವರು ವಾಸವಿದ್ದ ಶಿರಸಿಯ ಟಿ.ಎಸ್.ಎಸ್ ರಸ್ತೆಯಲ್ಲಿರುವ ಮನೆಯಿಂದ ಹೋಗಿದ್ದು, ಪಿರ್ಯಾದಿಯು ಸ್ನಾನ ಮುಗಿಸಿ ಬಂದು ತನ್ನ ಗಂಡ ಮನೆಯಲ್ಲಿ ಇಲ್ಲದೇ ಇರುವುದನ್ನು ನೋಡಿ ತನ್ನ ಮೊಬೈಲ್ ಪೋನಿನಿಂದ ತನ್ನ ಗಂಡನ ಮೊಬೈಲ್ ನಂ: 8867388281 ನೇದಕ್ಕೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿದ ಪಿರ್ಯಾದಿಯವರ ಗಂಡನು ತಾನು ಬೆಂಗಳೂರು ಕಡೆಗೆ ಹೋಗುತ್ತಿರುವುದಾಗಿ ಹೇಳಿ ಕರೆಯನ್ನು ಕಟ್ ಮಾಡಿದ್ದು, ಪುನಃ ಪಿರ್ಯಾದಿಯು ಆತನ ಮೊಬೈಲ್ ನಂಬರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ತನ್ನ ಗಂಡ ಬೆಂಗಳೂರಿಗೆ ಯಾವುದಾದರು ಕೆಲಸದ ಮೇಲೆ ಹೋಗಿರಬಹುದು ಎಂದು ತಿಳಿದ ಪಿರ್ಯಾದಿಯು ಒಂದು ದಿವಸ ಸುಮ್ಮನಿದ್ದು, ಪುನಃ ಆತನ ಮೊಬೈಲ್ ನಂಬರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಆಗ ಪಿರ್ಯಾದಿಯು ಈ ವಿಷಯವನ್ನು ತನ್ನ ತವರು ಮನೆಯವರಿಗೆ ಮತ್ತು ತನ್ನ ಗಂಡನಾದ ಮೌನೇಶನ ಮನೆಯವರಿಗೆ ತಿಳಿಸಿದ್ದು, ಅವರು ಸಹ ಒಂದೆರಡು ದಿನ ಬಿಟ್ಟು ಬರಬಹುದು ಎಂದು ಹೇಳಿದ್ದರಿಂದ ತನ್ನ ಗಂಡನ ಬರುವಿಕೆಗಾಗಿ ಕಾಯುತ್ತಿದ್ದ ತಾನು ನಾಲ್ಕು ದಿನವಾದರೂ ತನ್ನ ಗಂಡ ಮರಳಿ ಮನೆಗೆ ಬಾರದೇ ಇರುವುದರಿಂದ ಮತ್ತು ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಅವರು ಎಲ್ಲಿರುತ್ತಾರೆ ಎನ್ನುವ ಬಗ್ಗೆ ತಿಳಿಯದೇ ಅವರ ಸಂಬಂಧಿಕರು ಮತ್ತು ಪರಿಚಯದವರಲ್ಲಿ ವಿಚಾರಿಸಿದಾಗ ತನ್ನ ಗಂಡನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಮತ್ತು ಇದುವರೆಗೂ ಮರಳಿ ಮನೆಗೆ ಬಂದಿರುವುದಿಲ್ಲ. ಕಾರಣ ನನ್ನ ಗಂಡನವರು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಅನ್ನಪೂರ್ಣ ಕೋಂ. ಮೌನೇಶ ಕಮ್ಮಾರ, ಪ್ರಾಯ-23 ವರ್ಷ, ವೃತ್ತಿ-ಮನೆ ಗೆಲಸ, ಸಾ|| ಹಿರೇನಸಬಿ, ತಾ: ಬಾದಾಮಿ, ಜಿ: ಬಾಗಲಕೋಟ, ಹಾಲಿ ಸಾ|| ಅಶೋಕನಗರ, ಟಿ.ಎಸ್.ಎಸ್ ರಸ್ತೆ, ತಾ: ಶಿರಸಿ ರವರು ದಿನಾಂಕ: 04-08-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಗಿರೀಶ ತಂದೆ ಮಲ್ಲಿಕಾರ್ಜುನ ಬೂದನೂರ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಿದ್ಯಾನಗರ, 6 ನೇ ಕ್ರಾಸ್, ತಾ: ಶಿರಸಿ ಈತನು ದಿನಾಂಕ: 04-08-2020 ರಂದು 19-05 ಗಂಟೆಗೆ ಶಿರಸಿಯ ಮರಾಠಿಕೊಪ್ಪದ ರಾಜಧಾನಿ ಫೈನಾನ್ಸ್ ಎದುರು ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,240/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, ಖಾಲಿ ಪೇಪರ್ ತುಂಡುಗಳು-04, ಅ||ಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಎಸ್, ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 04-08-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 4, 5, 7, 12 The Karnataka Prevention of Slaughter and  Preservation of Cattle Act-2020 ಹಾಗೂ ಕಲಂ: 192(a) Indian Motor Vehicle Act-1988 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾಲತೇಶ ಮಲ್ಲಪ್ಪ ಶಿರಕೊಳ, ಪ್ರಾಯ-32 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೊಪ್ಪರಸಿಕೊಪ್ಪ, ಪೋ: ಕೊಪ್ಪರಿಸಿಕೊಪ್ಪ, ತಾ: ಮುಂಡಗೋಡ, 2]. ಉಮೇಶ ಯಲ್ಲಪ್ಪ ಗೊಲ್ಲರ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಕೊಪ್ಪರಸಿಕೊಪ್ಪ, ಪೋ: ಕೊಪ್ಪರಿಸಿಕೊಪ್ಪ, ತಾ: ಮುಂಡಗೋಡ, 3]. ನಾರಾಯಣ ಪುಟ್ಟೇಗೌಡ, ಪ್ರಾಯ-32 ವರ್ಷ, ಸಾ|| ಹಾವಿನಗದ್ದೆ, ವಾನಳ್ಳಿ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರು ದಿನಾಂಕ: 04-08-2021 ರಂದು 06-45 ಗಂಟೆಯ ಸುಮಾರಿಗೆ 1). ಅಂದಾಜು 5 ವರ್ಷದ ಕಂದು ಬಣ್ಣದ ಹೋರಿ-1, ಅ||ಕಿ|| 4,000/- ರೂಪಾಯಿ, 2). ಅಂದಾಜು 5 ವರ್ಷದ ಕಂದು ಬಣ್ಣದ ಆಕಳು-1, ಅ||ಕಿ|| 3,000/- ರೂಪಾಯಿ, 3). ಅ 4 ವರ್ಷದ ಕಪ್ಪು ಬಣ್ಣದ ಆಕಳು-1, ಅ||ಕಿ|| 3,000/- ರೂಪಾಯಿ. ಇವುಗಳನ್ನು ಆರೋಪಿ 3 ನೇಯವರಿಂದ ಖರೀದಿಸಿಕೊಂಡು ವಾನಳ್ಳಿ ಗ್ರಾಮದ ಹಾವಿನಗದ್ದೆ ಎಂಬಲ್ಲಿಂದ ಟಾಟಾ ಕಂಪನಿಯ XENON YODHA ಎಂಬ ಗೂಡ್ಸ್ ವಾಹನ ನಂ: ಕೆ.ಎ-27/ಸಿ-0751 ನೇದರಲ್ಲಿ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಅಕ್ರಮವಾಗಿ ತುಂಬಿಕೊಂಡು ಅವುಗಳಿಗೆ ಮೇವು, ನೀರು ನೀಡದೇ, ಸರಿಯಾಗಿ ಮಲಗಿರಲು ವ್ಯವಸ್ಥೆ ಮಾಡದೇ, ಇಕ್ಕಟ್ಟಾಗಿ ಹಿಂಸಾತ್ಮಕ ರೀತಿಯಲ್ಲಿ ಒತ್ತೊತ್ತಾಗಿ ಹಗ್ಗದಿಂದ ಕಟ್ಟಿಕೊಂಡು ಯಲ್ಲಾಪುರ ಕಡೆಯಿಂದ ಶಿರಸಿ ಮಾರ್ಗವಾಗಿ ಹಾನಗಲ್ ಕಡೆಗೆ ಬಲಿ ಕೊಡುವ ಸಲುವಾಗಿ ಸಾಗಾಟ ಮಾಡಿಕೊಂಡು ಹೊರಟಿದ್ದಾಗ ತಾರಗೋಡ ಕ್ರಾಸ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಗಂಗೂಬಾಯಿ ಎಸ್. ಕೊರಚರ, ಡಬ್ಲ್ಯೂ.ಎ.ಎಸ್.ಐ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 04-08-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ  ಯಾರೋ ಕಳ್ಳರು ದಿನಾಂಕ: 03-08-2021 ರಂದು 18-30 ಗಂಟೆಯಿಂದ ದಿನಾಂಕ: 04-08-2021 ರಂದು ಮುಂಜಾನೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ತಾಲೂಕಿನ ಬಡಗಿ ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನದ ಪ್ರಧಾನ ಬಾಗಿಲಿನ ಲಾಲದಂಡೆಯ ಕೊಂಡಿ ಮುರಿದು ದೇವಸ್ಥಾನದ ಒಳಹೊಕ್ಕು ಇನ್ನುಳಿದ ಎರಡು ಕೋಣೆಯ ಹಾಗೂ ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿಯ ಬೀಗವನ್ನು ಮುರಿದು ಕಾಣಿಕೆ ಹುಂಡಿಯ ಇಂಟರಲಾಕ್ ಮುರಿಯುವ ಉದ್ದೇಶದಿಂದ ಕಾಣಿಕೆ ಹುಂಡಿಯನ್ನು ದೇವಸ್ಥಾನದಿಂದ ಹೊರಕ್ಕೆ ಹೊತ್ತೊಯ್ದು ಸ್ವಲ್ಪ ದೂರದಲ್ಲಿ ಕಾಣಿಕೆ ಹುಂಡಿಯನ್ನು ತೆರೆದು ಅದರಲ್ಲಿದ್ದ ಸುಮಾರು 2,000/- ರೂಪಾಯಿಯಿಂದ 2,500/- ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಸುಬ್ರಾಯ ಭಟ್, ಪ್ರಾಯ-56 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಣ್ಣಗದ್ದೆ, ಬಡಗಿ, ಪೋ: ಬಂಡಲ, ತಾ: ಶಿರಸಿ ರವರು ದಿನಾಂಕ: 04-08-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣೇಶ ಕೆ. ತಂದೆ ಕುಮಾರಸ್ವಾಮಿ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ಎಸ್.ಎಸ್ ಆಸ್ಪತ್ರೆ ರೋಡ್, ಭಾಗೀರತಿ ಸರ್ಕಲ್ ಹತ್ತಿರ, ಜಯನಗರ ಎ ಬ್ಲಾಕ್, ಹಿಟವಳ್ಳಿ, ದಾವಣಗೆರೆ (ಕಾರ್ ನಂ: ಕೆ.ಎ-17/ಡಿ-5500 ನೇದರ ಚಾಲಕ). ದಿನಾಂಕ: 04-08-2021 ರಂದು ಪಿರ್ಯಾದಿ ಹಾಗೂ ಪಿರ್ಯಾದಿಯ ಚಿಕ್ಕಪ್ಪ ಗಾಯಾಳು ಶ್ರೀ ಅಶೋಕ ತಂದೆ ಗಂಗಾರಾಮ ಮೋರೆ ಇಬ್ಬರು ಕೂಡಿಕೊಂಡು ಪಿರ್ಯಾದಿಯವರ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-65/ಇ-3455 ನೇದರ ಮೇಲಾಗಿ ಅವೇಡಾ ಬದಿಯಿಂದ ಗಣೇಶಗುಡಿ ಬದಿಗೆ ಹೋಗುತ್ತಿರುವಾಗ ಆರೋಪಿ ಕಾರ್ ಚಾಲಕನು ತನ್ನ ಬಾಬ್ತು ಕಾರ್ ನಂ: ಕೆ.ಎ-17/ಡಿ-5500 ನೇದನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯವರ ಮೋಟಾರ್ ಸೈಕಲ್ ನಂ: ಕೆ.ಎ-65/ಇ-3455 ನೇದಕ್ಕೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಹಿಂಭಾಗದಲ್ಲಿ ಕುಳಿತ ಪಿರ್ಯಾದಿಯವರ ಚಿಕ್ಕಪ್ಪ ಶ್ರೀ ಅಶೋಕ ತಂದೆ ಗಂಗಾರಾಮ ಮೋರೆ ಇವರ ಬಲಗಾಲಿನ ಮೊಣಕಾಲು ಮುರಿದು ರಕ್ತಗಾಯ ಪಡಿಸಿ ಹಾಗೂ ಪಿರ್ಯಾದಿಯವರ ಮುಖದಲ್ಲಿ ಸಣ್ಣ ತೆರಚಿದ ರೀತಿ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿನೋದ ತಂದೆ ಅರ್ಜುನ ಮೋರೆ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅವೇಡಾ, ಗಣೇಶಗುಡಿ, ತಾ: ಜೋಯಿಡಾ ರವರು ದಿನಾಂಕ: 04-08-2021 ರಂದು 19-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-08-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

ಇತ್ತೀಚಿನ ನವೀಕರಣ​ : 06-08-2021 04:13 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080