ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-12-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 213/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 19-11-2021 ರಂದು 23-45 ಗಂಟೆಗೆ ಪಿರ್ಯಾದಿಯವರು ಫೋರಬಂದರ್-ಕೊಚುವೇಲಿ ಎಕ್ಸಪ್ರೆಸ್ ಟ್ರೇನ್ ನಂ: 20910 ನೇದರಲ್ಲಿ ಪ್ರಯಾಣಿಸುತ್ತಿದ್ದಾಗ ಕುಮಟಾ ರೈಲ್ವೇ ಸ್ಟೇಷನ್ ಬಳಿ ಆರೋಪಿತ ಕಳ್ಳರು ಪಿರ್ಯಾದಿಯ ಬಾಬ್ತು ನಗದು ಹಣ 16,000/- ರೂಪಾಯಿ ಹಾಗೂ 16,000/- ರೂಪಾಯಿ ಮೌಲ್ಯದ ಒಂದು ಮೊಬೈಲ್ ಫೋನ್ ಇರುವ ಬ್ಯಾಗ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಟಿ. ಆರ್ ಮನೋಜ್, ಪ್ರಾಯ-40 ವರ್ಷ, ಸಾ|| ಶ್ರೀಶಾಸ್ತಾ, ವೇದಿವಾಚಂಕೊನ್ಲೋ, ತ್ರಿವೇಂದ್ರಮ್, ಕೇರಳಾ ರವರು ರೈಲ್ವೇ ಪೊಲೀಸ್ ರಿಗೆ ನೀಡಿದ ದೂರನ್ನು ವ್ಯಾಪ್ತಿಯ ಆಧಾರದಲ್ಲಿ ದಿನಾಂಕ: 04-12-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ.  

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 214/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 12-11-2021 ರಂದು 01-20 ಗಂಟೆಗೆ ಪಿರ್ಯಾದಿಯವರು ಟ್ರೇನ್ ನಂ: 06345 ನೇದರಲ್ಲಿ ಪ್ರಯಾಣಿಸುತ್ತಿದ್ದಾಗ ಕುಮಟಾ ರೈಲ್ವೇ ಸ್ಟೇಷನ್ ದಾಟಿದ ನಂತರ ಆರೋಪಿತ ಕಳ್ಳರು ಪಿರ್ಯಾದಿಯ ಬಾಬ್ತು 1). ಮೊಬೈಲ್ ಫೋನ್-2, ಅ||ಕಿ|| 11,500/- ರೂಪಾಯಿ, 2). ಐಸಿಐಸಿಐ ಬ್ಯಾಂಕ್ ಎಟಿಎಮ್ ಕಾರ್ಡ್-1, 3). ಕೆನರಾ ಬ್ಯಾಂಕ್ ಎಟಿಎಮ್ ಕಾರ್ಡ್-1, 4). ನಗದು ಹಣ 3,500/- ರೂಪಾಯಿ ನೇದವುಗಳು ಇರುವ ಬ್ಯಾಗ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಅನಿತಾ ವಿ. ಕೆ, ಪ್ರಾಯ-40 ವರ್ಷ, ಸಾ|| ವರಂಬಸ್ಸೆರ್ರಿ, ಎದಗಾ ಗ್ರಾಮ, ಎಕ್ಯುಟ್ ಲೇನ್, ಕರಮೊಮ್, ತ್ರಿವೇಂದ್ರಮ್, ಕೇರಳಾ ರವರು ರೈಲ್ವೇ ಪೊಲೀಸ್ ರಿಗೆ ನೀಡಿದ ದೂರನ್ನು ವ್ಯಾಪ್ತಿಯ ಆಧಾರದಲ್ಲಿ ದಿನಾಂಕ: 04-12-2021 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 328/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಿಹಾನ್ ತಂದೆ ಮೊಹಮ್ಮದ್ ನಜೀರ್ ಸಾಬ್, ಪ್ರಾಯ-27 ವರ್ಷ, ವೃತ್ತಿ-ಆಟೋರಿಕ್ಷಾ ಚಾಲಕ, ಸಾ|| ಹಿಂಡಬೈಲ್, ಸಂತೆಗುಳಿ, ತಾ: ಕುಮಟಾ (ಆಟೋರಿಕ್ಷಾ ನಂ: ಕೆ.ಎ-47/ಎ-1753 ನೇದರ ಸವಾರ). ಈತನು ದಿನಾಂಕ: 03-12-2021 ರಂದು 19-00 ಗಂಟೆಯ ಸುಮಾರಿಗೆ ಹೊನ್ನಾವರ ತಾಲೂಕಿನ ಚಂದಾವರ-ಅರೇಅಂಗಡಿ ರಸ್ತೆಯ ಚಂದಾವರ ಚರ್ಚ್ ಕ್ರಾಸ್ ಹತ್ತಿರ ತನ್ನ ಬಾಬ್ತು ಆಟೋರಿಕ್ಷಾ ನಂ: ಕೆ.ಎ-47/ಎ-1753 ನೇದನ್ನು ಚಂದಾವರ ನಾಕಾ ಕಡೆಯಿಂದ ಅರೇಅಂಗಡಿ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ತನ್ನ ಮುಂದಿನಿಂದ ಚಂದಾವರ ನಾಕಾ ಕಡೆಯಿಂದ ಚರ್ಚ್ ಕಡೆಗೆ ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಗಾಯಾಳು ಕು: ಮಧುರಾ ತಂದೆ ರಾಮಾ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಸೊಸೈಟಿಯಲ್ಲಿ ಕೆಲಸ, ಸಾ|| ಚಂದಾವರ ನಾಕಾ ಹತ್ತಿರ, ಚಂದಾವರ, ತಾ: ಹೊನ್ನಾವರ, ಇವಳಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎಡಗಾಲಿನ ಮೊಣಗಂಟಿನ ಹತ್ತಿರ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಆದರ್ಶ ತಂದೆ ಅನಂತ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹೆಗಡೆಹಿತ್ಲ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 04-12-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 329/2021, ಕಲಂ: 427, 447, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ದುರ್ಗಪ್ಪ ತಂದೆ ಹನುಮಂತ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಚಿಕ್ಕನಕೋಡ, ಗುಂಡಿಬೈಲ್, ತಾ: ಹೊನ್ನಾವರ, 2]. ದೇವರಾಯ ತಂದೆ ಹನುಮಂತ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಚಿಕ್ಕನಕೋಡ, ಗುಂಡಿಬೈಲ್, ತಾ: ಹೊನ್ನಾವರ, 3]. ನಿತ್ಯಾನಂದ ತಂದೆ ಹನುಮಂತ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಚಿಕ್ಕನಕೋಡ, ಗುಂಡಿಬೈಲ್, ತಾ: ಹೊನ್ನಾವರ, 4]. ಗಿರಿಧರ ತಂದೆ ಕೃಷ್ಣ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಚಿಕ್ಕನಕೋಡ, ಗುಂಡಿಬೈಲ್, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 27-11-2021 ರಂದು ಬೆಳಿಗ್ಗೆ 11-00 ಗಂಟೆಗೆ ಹಾಗೂ ಸಂಜೆ 17-30 ಗಂಟೆಗೆ ಚಿಕ್ಕನಕೋಡ ಗ್ರಾಮದ ಪಿರ್ಯಾದಿಯ ಬಾಬ್ತು ಸರ್ವೇ ನಂ: 251 ರ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ, ಕೈಯಲ್ಲಿ ಸೊಟ್ಟೆ ಹಾಗೂ ಕತ್ತಿ ಹಿಡಿದುಕೊಂಡು ಬಂದು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಜಾಗಕ್ಕೆ ಹಾಕಿದ ಬೇಲಿಯನ್ನು ಕಿತ್ತು ಗಿಡಗಳನ್ನು ಕಡಿದು, ‘ಕೋರ್ಟಿನಲ್ಲಿ ಗಡಿ ಮಾಡಿ ಕೊಟ್ಟಿದ್ದಾರೆ. ನಿನ್ನ ಸ್ಥಳವನ್ನು ನಾಶ ಮಾಡದೇ ಬಿಡುವುದಿಲ್ಲ. ನೀನು ಮುಂದೆ ಬಂದರೆ ನಿನ್ನನ್ನು ಕಡಿದು ಇದೇ ತೋಟದಲ್ಲಿ ಹೂತು ಹಾಕುತ್ತೇನೆ’ ಅಂತಾ ಉಗ್ರವಾಗಿ ಧಮಕಿ ಹಾಕಿ ಹೋಗಿದ್ದವರು, ಅದೇ ದಿವಸ ರಾತ್ರಿ 21-30 ಗಂಟೆಗೆ ‘ಬೋಳಿ ಮಗನೇ, ಹೇಗೆ ಇಲ್ಲಿ ಬದುಕುತ್ತಿಯಾ ನೋಡುತ್ತೇನೆ’ ಎಂದು ಬೈಯ್ಯುತ್ತಾ, ಪಿರ್ಯಾದಿಯ ವಾಸ್ತವ್ಯದ ಮನೆಗೆ ಕಲ್ಲು ಹೊಡೆದು, 8-10 ಹಂಚು ಒಡೆದು ನಷ್ಟ ಪಡಿಸಿದ್ದಲ್ಲದೇ, ಪಿರ್ಯಾದಿಗೆ ‘ನಿನ್ನ ಮನೆಗೆ ರಾತ್ರಿ ವೇಳೆ ಬೆಂಕಿ ಹಾಕಿ ನಿನ್ನ ಸಂಸಾರ ಸಮೇತ ಸುಟ್ಟು ಹಾಕುತ್ತೇವೆ. ಓಡಾಡುವಾಗ ಜೀವದ ಬಗ್ಗೆ ಜಾಗ್ರತೆ ಇರಲಿ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ರಾಜು ತಂದೆ ತಿಪ್ಪಯ್ಯ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಚಿಕ್ಕನಕೋಡ, ಕೆಂಚಗಾರ, ತಾ: ಹೊನ್ನಾವರ ರವರು ದಿನಾಂಕ: 04-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 148/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ನಾರಾಯಣ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಸವಯ್ಯನ ಮನೆ, ಕೋಟೆಬಾಗಿಲು, ಶಿರಾಲಿ, ತಾ: ಭಟ್ಕಳ. ಈತನು ದಿನಾಂಕ: 04-12-2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ಶಿರಾಲಿ ಕೋಟೆಬಾಗಿಲು ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 80/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ, ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ, ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ870/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಬಲೇಶ್ವರ ಎಸ್. ಎನ್, ಪೊಲೀಸ್ ವೃತ್ತ ನಿರೀಕ್ಷಕರು, ಭಟ್ಕಳ ಗ್ರಾಮೀಣ ವೃತ್ತ, ಭಟ್ಕಳ ರವರು ದಿನಾಂಕ: 04-12-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 149/2021, ಕಲಂ: 279, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಪಿಕ್‍ಅಪ್ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ: 03-12-2021 ರಂದು 13-00 ಗಂಟೆಗೆ ಸರಕಾರಿ ಕರ್ತವ್ಯಕ್ಕೆ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಭಟ್ಕಳದ ಸಮನ್ಸ್ ಜಾರಿಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಎಲ್-1590 ನೇದರಲ್ಲಿ ಹೊರಟು ಭಟ್ಕಳದ ಶಿರಾಲಿ ಕಡೆಗೆ ಹೋಗುವಾಗ ಜಾಗಟೆಬೈಲ್ ಪೆಟ್ರೋಲ್ ಬಂಕಿನ ಬಳಿ ಬಂದಾಗ ಪಿರ್ಯಾದಿಗೆ ಫೋನ್ ಕರೆ ಬಂದ ಕಾರಣ ತನ್ನ ಮೋಟಾರ್ ಸೈಕಲನ್ನು ರಸ್ತೆಯ ಎಡಬದಿಗೆ ನಿಲ್ಲಿಸಿ, ಮೋಟಾರ್ ಸೈಕಲಿನಿಂದ ಕೆಳಗೆ ಇಳಿದು ಎಡಬದಿಗೆ ನಿಂತು ಮಾತನಾಡುತ್ತಿರುವಾಗ ಇನ್ಸುಲೇಟರ್ ಬಾಕ್ಸ್ ಅನ್ನು ತುಂಬಿಕೊಂಡು ಪಿಕ್‍ಅಪ್ ವಾಹನವನ್ನು ಚಲಾಯಿಸಿಕೊಂಡು ಬಂದ ನಮೂದಿತ ಆರೋಪಿತನು ಹಿಂಬದಿಯಿಂದ ರಸ್ತೆಯಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದವನು, ಪಿರ್ಯಾದಿಯವರ ಎಡಗಾಲಿನ ಮೇಲೆ ಪಿಕ್‍ಅಪ್ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದು, ಅಪಘಾತವಾಗಿದ್ದನ್ನು ನೋಡಿಯೂ ಸಹ ಆರೋಪಿ ಚಾಲಕನು ತನ್ನ ಪಿಕ್‍ಅಪ್ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಚಲಾಯಿಸಿಕೊಂಡು ಹೋಗಿದ್ದು, ಈ ಅಪಘಾತದಿಂದ ಪಿರ್ಯಾದಿಯವರ ಎಡಗಾಲಿನ ಪಾದದ ಬೆರಳು ತುಂಡಾಗಿ ಗಂಭೀರ ಗಾಯವಾದ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ದೇಮ ಗೌಡ, ಪ್ರಾಯ-40 ವರ್ಷ, ವೃತ್ತಿ-ಪೊಲೀಸ್ ಕಾನ್ಸಟೇಬಲ್ (ಸಿ.ಪಿ.ಸಿ-502), ಸಾ|| ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 04-12-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 159/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಹವ್ವಾ ನೂರುಲ್ ಅಮೀನ್ ದಾಮುದಾ ಕೋಂ. ನೂರುಲ್ ಅಮೀನ್, ಪ್ರಾಯ-39 ವರ್ಷ, ಸಾ|| ರೈಲ್ವೇ ಸ್ಟೇಷನ್ ರಸ್ತೆ, ಆಶ್ರಮ ಕಾಲೋನಿ, ಕಿದ್ವಾಯಿ ರಸ್ತೆ, ತಾ: ಭಟ್ಕಳ (ಸ್ಕೂಟಿ ನಂ: ಕೆ.ಎ-47/ಎಲ್-2659 ನೇದರ ಚಾಲಕಿ). ಇವಳು ದಿನಾಂಕ: 04-12-2021 ರಂದು ಬೆಳಿಗ್ಗೆ 10-45 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಗುಳ್ಮೆ ಕ್ರಾಸ್ ಹತ್ತಿರ ತನ್ನ ಸ್ಕೂಟಿ ನಂ: ಕೆ.ಎ-47/ಎಲ್-2659 ನೇದನ್ನು ಕಿದ್ವಾಯಿ ರಸ್ತೆಯಿಂದ ಗುಳ್ಮೆ ಕ್ರಾಸ್ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನ್ನು ಕ್ರಾಸ್ ಮಾಡಲು ಯಾವುದೇ ಸೂಚನೆ ನೀಡದೇ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯವರ ಮೋಟಾರ್ ಸೈಕಲ್ ನಂ: ಕೆ.ಎ47/ಡಬ್ಲ್ಯೂ-7687 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಬಲಗೈಗೆ, ಎಡಗೈಗೆ ಹಾಗೂ ಕಾಲುಗಳಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಸ್ಕೂಟಿ ಸವರಾಳು ತನಗೂ ಕೂಡಾ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಪ್ರಮೋದ ತಂದೆ ಪರಮೇಶ್ವರ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ಬ್ಯಾಂಕಿನಲ್ಲಿ ಕೆಲಸ, ಸಾ|| ಬೆಳಕೆ, ತಾ: ಭಟ್ಕಳ ರವರು ದಿನಾಂಕ: 04-12-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 160/2021, ಕಲಂ: 283, 279, 337 ಐಪಿಸಿ ಹಾಗೂ ಕಲಂ: 177 ಸಹಿತ 201 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಇಸ್ಮಾಯಿಲ್ ತಂದೆ ಮೊಹಮ್ಮದ್ ಅಕ್ಬರ್, ಸಾ|| ನಾಗೂರು, ನಾವುಂದಾ, ಉಡುಪಿ (ಖಾಸಗಿ ಬಸ್ ನಂ: ಕೆ.ಎ-20/ಎ.ಎ-2327 ನೇದರ ಚಾಲಕ), 2]. ಟಿಪ್ಪರ್ ಲಾರಿ ನಂ: ಕೆ.ಎಲ್-14/ಇ-3676 ನೇದರ ಮಾಲಿಕ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 04-12-2021 ರಂದು ಮಧ್ಯಾಹ್ನ 16-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಗುಳ್ಮೆ ಕ್ರಾಸ್ ಹತ್ತಿರ ತನ್ನ ಖಾಸಗಿ ಬಸ್ ನಂ: ಕೆ.ಎ-20/ಎ.ಎ-2327 ನೇದನ್ನು ಭಟ್ಕಳ ಶಹರದ ಕಡೆಯಿಂದ ಕುಂದಾಪುರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಕ್ಕೆ ಹೋಗಿ ಸಾರ್ವಜನಿಕ ವಾಹನಗಳ ಓಡಾಟಕ್ಕೆ ತೊಂದರೆ ಆಗುವಂತೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಆರೋಪಿ 2 ನೇಯವನ ಮಾಲೀಕತ್ವದ ಟಿಪ್ಪರ್ ಲಾರಿ ನಂ: ಕೆ.ಎಲ್-14/ಇ-3676 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಹಾಗೂ ಖಾಸಗಿ ಬಸ್ಸಿನಲ್ಲಿದ್ದ ಕ್ಲೀನರ್ ಮತ್ತು ಇತರೆ 4-5 ಜನ ಪ್ರಯಾಣಿಕರಿಗೆ ಸಾದಾ  ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ 1 ನೇಯವನು ತನಗೂ ಕೂಡಾ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಕುಮಾರಿ: ಅಕೀಪಾ ತಂದೆ ಮೊಹಮ್ಮದ್ ಖಾಜಾ, ಪ್ರಾಯ-22ವರ್ಷ, ವೃತ್ತಿ-ಮನೆ ಕೆಲಸ, ಸಾ|| ಶಿರೂರು ಮಾರುಕಟ್ಟೆ, ತಾ: ಬೈಂದೂರು, ಜಿ: ಉಡುಪಿ ರವರು ದಿನಾಂಕ: 04-12-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 97/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಕಪ್ಪು ಬಣ್ಣದ ನಜಾಜ್ ಪಲ್ಸರ್ ಮೋಟಾರ್ ಸೈಕಲ್ ಸವಾರನಾಗಿದ್ದು, ಮೋಟಾರ್ ಸೈಕಲ್ ನಂಬರ್ ಹಾಗೂ ಸವಾರನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 03-12-2021 ರಂದು ಬೆಳಿಗ್ಗೆ 10-10 ಗಂಟೆಗೆ ಪಿರ್ಯಾದಿಯವರು ಶಿರಸಿ ಶಹರದ ಎ.ಪಿ.ಎಮ್.ಸಿ ರಿಂಗ್ ರಸ್ತೆಯಲ್ಲಿ ಟಿ.ಎಸ್.ಎಸ್ ಕಟ್ಟಡ ಸಾಮಗ್ರಿ ಮಳಿಗೆಯ ಎದುರು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-5115 ನೇದನ್ನು ಚಲಾಯಿಸಿಕೊಂಡು ಶಿರಸಿ ನಗರ ಸಭೆಗೆ ಬರುತ್ತಿರುವಾಗ ಪಿರ್ಯಾದಿಯವರ ಎದುರುಗಡೆ ಮಹಾಸತಿ ಸರ್ಕಲ್ ಕಡೆಯಿಂದ ನಮೂದಿತ ಆರೋಪಿತನು ತನ್ನ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ತನ್ನ ಮೋಟಾರ್ ಸೈಕಲನ್ನು ನಿಯಂತ್ರಿಸಲಾಗದೇ ಪಿರ್ಯಾದಿಯವರ ಮೋಟಾರ್ ಸೈಕಲ್ ಮುಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಎಡಗಾಲಿನ ತೊಡೆಗೆ ಒಳನೋವನ್ನುಂಟು ಮಾಡಿ, ಅಪಘಾತದ ಸ್ಥಳದಲ್ಲಿ ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ಪರಶು ಚಂದಾವರ, ಪ್ರಾಯ-63 ವರ್ಷ, ವೃತ್ತಿ-ವ್ಯವಹಾರ, ಸಾ|| 3 ನೇ ಕ್ರಾಸ್, ಅಯ್ಯಪ್ಪ ನಗರ, ತಾ: ಶಿರಸಿ ರವರು ದಿನಾಂಕ: 04-12-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 279, 337, 323, 324, 504, 506 ಸಹಿತ 34 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ರೇಷ್ಮಾ ಬಾನು ಅನ್ವರಸಾಬ್ ನೀರಲಗಿ, ಸಾ|| ಸುಭಾಷ ನಗರ, ತಾ: ದಾಂಡೇಲಿ (ಸ್ಕೂಟಿ ನಂ: ಕೆ.ಎ-65/ಜೆ-4593 ನೇದರ ಚಾಲಕಿ), 2]. ಅನ್ವರಸಾಬ್ ತಂದೆ ಖಾಸಿಂ ಸಾಬ್ ನೀರಲಗಿ, ಸಾ|| ಸುಭಾಷ ನಗರ, ತಾ: ದಾಂಡೇಲಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವಳು ದಿನಾಂಕ: 03-12-2021 ರಂಧು ಮಧ್ಯಾಹ್ನ 03-00 ಗಂಟೆಗೆ ದಾಂಡೇಲಿಯ ಸುಭಾಷ ನಗರದ ಪಿರ್ಯಾದಿಯ ಮನೆಯ ಮುಂದಿನ ರಸ್ತೆಯ ಮೇಲೆ ತನ್ನ ಬಾಬ್ತು ಸ್ಕೂಟಿ ನಂ: ಕೆ.ಎ-65/ಜೆ-4593 ನೇದನ್ನು ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಚಿದ ಚಲಾಯಿಸಿ, ಪಿರ್ಯಾದಿಯ ಮೊಮ್ಮಗನಾದ ಸಲ್ಮಾನಖಾನ್ ತಂದೆ ಇಸ್ಮಾಯಿಲ್ ನೀರಲಗಿ, ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬೆನ್ನಿಗೆ ಮತ್ತು ಕೈಗೆ ಗಾಯನೋವು ಪಡಿಸಿ, ಸ್ಕೂಟಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದು, ಅದೇ ವಿಷಯಕ್ಕೆ ಪಿರ್ಯಾದಿಯು ಆರೋಪಿ 2 ನೇಯವನಿಗೆ ಅದೇ ದಿವಸ ಸಾಯಂಕಾಲ 06-00 ಗಂಟೆಗೆ ಕೇಳಲು ಹೋದಾಗ ಪಿರ್ಯಾದಿಯ ಮನೆಯ ಹತ್ತಿರ ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದು, ಕೈಯಿಂದ ಮತ್ತು ಕಟ್ಟಿಗೆಯಿಂದ ಪಿರ್ಯಾದಿಯ ಎಡಗೈಗೆ ಹ್ರೆಡೆದು, ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಫಾತಿಮಾ ಕೋಂ. ಖಾಸಿಂಸಾಬ್ ನೀರಲಗಿ, ಪ್ರಾಯ-53 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಯಲ್ಲಮ್ಮ ದೇವಸ್ಥಾನದ ಹಿಂದುಗಡೆ, ಸುಭಾಷ ನಗರ, ತಾ: ದಾಂಡೇಲಿ ರವರು ದಿನಾಂಕ: 04-12-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಬಿಳಿ ಬಣ್ಣದ ಓಮಿನಿ ಕಾರ್ ನಂ: ಕೆ.ಎ-02/ಎಮ್.ಎ-8535 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 03-12-2021 ರಂದು 20-30 ಗಂಟೆಗೆ ತನ್ನ ಬಿಳಿ ಬಣ್ಣದ ಓಮಿನಿ ಕಾರ್ ನಂ: ಕೆ.ಎ-02/ಎಮ್.ಎ-8535 ನೇದನ್ನು ಬನವಾಸಿ ಕಡೆಯಿಂದ ದಾಸನಕೊಪ್ಪ ರಸ್ತೆಯ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಸಂಗೀತಾ ಡಾಬಾ ಬಳಿ ಚಂದನಸಿಂಗ್ ತಂದೆ ಜಬ್ಬಾರ ಸಿಂಗ್, ಪ್ರಾಯ-29 ವರ್ಷ, ವೃತ್ತಿ-ವ್ಯಾಪಾರ, ಸಾ|| ತೋಗರ್ಸಿ, ತಾ: ಸೊರಬಾ, ಜಿ: ಶಿವಮೊಗ್ಗ, ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬಲಗೈ ಮತ್ತು ಬಲಗಾಲಿಗೆ ರಕ್ತದ ಗಾಯನೋವು ಪಡಿಸಿದ್ದಲ್ಲದೇ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸದೇ, ಅಪಘಾತದ ಸುದ್ದಿ ಹತ್ತಿರದ ಪೊಲೀಸ್ ಠಾಣೆಗೂ ತಿಳಿಸದೇ ಸ್ಥಳದಿಂದ ತನ್ನ ಓಮಿನಿ ಕಾರ್ ಸಮೇತ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ಓಂ ಸಿಂಗ್ ತಂದೆ ಜಬ್ಬಾರ್ ಸಿಂಗ್, ಪ್ರಾಯ-39 ವರ್ಷ, ವೃತ್ತಿ-ವ್ಯಾಪಾರ, ಸಾ|| ಸೊರಬಾ ರಸ್ತೆ, ಬನವಾಸಿ, ತಾ: ಶಿರಸಿ ರವರು ದಿನಾಂಕ: 04-12-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-12-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 33/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸೈಯದ್ ಲಾಲ್ ತಂದೆ ಬಸೀರ್ ಸೈಯದ್, ಪ್ರಾಯ-50 ವರ್ಷ, ವೃತ್ತಿ-ಕಬ್ಬು ಕಡಿಯುವ ಕೆಲಸ, ಸಾ|| ಎಕಧಾರ ಗ್ರಾಮ, ತಾ: ಮಾಜಲಗಾಂವ್, ಜಿ: ಭೀಡ್, ಮಹಾರಾಷ್ಟ್ರ ರಾಜ್ಯ. ಈತನು ಮಹಾರಾಷ್ಟ್ರ ರಾಜ್ಯದಿಂದ ಕಬ್ಬಿನ ಕೆಲಸಕ್ಕೆ  ಕಳೆದ 2 ತಿಂಗಳ ಹಿಂದೆ ಬಂದವರು, ತಾವು ವಾಸವಿದ್ದ ಹಳಯಾಳ ತಾಲೂಕಿನ ಹುಲ್ಲಟ್ಟಿ ಗ್ರಾಮದ ಘೋರೆಖಾನ್ ಪೆಟ್ರೋಲ್ ಪಂಪ್ ಹತ್ತಿರ ದಿನಾಂಕ: 04-12-2021 ರಂದು ಬೆಳಿಗ್ಗೆ 07-15 ಗಂಟೆಯಿಂದ 07-45 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಟೆಂಟಿನ ಹತ್ತಿರ ಹಲ್ಲು ಉಜ್ಜುತ್ತಿರುವಾಗ ಒಮ್ಮೆಲೇ ನೆಲಕ್ಕೆ ಕುಸಿದು ಬಿದ್ದು, ಅಸ್ವಸ್ಥಗೊಂಡವರಿಗೆ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ, ಹಳಿಯಾಳಕ್ಕೆ ದಾಖಲಿಸಿದ್ದು, ಅವರಿಗೆ ಪರೀಕ್ಷಿಸಿದ ವೈದ್ಯರು ಮೃತನು ಆಸ್ಪತ್ರೆಗೆ ಬರುವ ಪೂರ್ವದಲ್ಲಿಯೇ ಮೃತಪಟ್ಟ ಬಗ್ಗೆ ತಿಳಿಸಿದ್ದು, ಮೃತನು ಹೃದಯಾಘಾತದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಮೃತಪಟ್ಟಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರಿಜ್ವಾನ್ ಕೋಂ. ಮುಬಾರಕ್ ಸೈಯದ್, ಪ್ರಾಯ-30 ವರ್ಷ, ವೃತ್ತಿ-ಕಬ್ಬು ಕಡಿಯುವ ಕೆಲಸ, ಸಾ|| ಎಕಧಾರ ಗ್ರಾಮ, ತಾ: ಮಾಜಲಗಾಂವ್, ಜಿ: ಭೀಡ್, ಮಹಾರಾಷ್ಟ್ರ ರಾಜ್ಯ ರವರು ದಿನಾಂಕ: 04-12-2021 ರಂದು 08-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 06-12-2021 11:49 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080