ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 04-02-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಮೋಹನ ನಾಯ್ಕ, ಸಾ|| ಉಪ್ಪಿನಗೋಳಿ, ತಾ: ಹೊನ್ನಾವರ. ಪಿರ್ಯಾದುದಾರರು ದಿನಾಂಕ: 22-12-2020 ರಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ ಗ್ರಾಮ ಪಂಚಾಯತದಲ್ಲಿ ಆಯ್ಕೆಯಾಗಿದ್ದು, ಇದನ್ನು ಸಹಿಸದ ನಮೂದಿತ ಆರೋಪಿತನು ಪಿರ್ಯಾದಿಯವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಹಾಗೂ ಬೆದರಿಕೆಯನ್ನುಂಟು ಮಾಡುವ ಉದ್ದೇಶದಿಂದ ತನ್ನ ಮೊಬೈಲ್ ನಂ: 7899076096 ನೇದರಿಂದ ಪಿರ್ಯಾದಿಗೆ ಪರಿಚಯದವರಾದ ಗಣಪತಿ ನಾಯ್ಕ ಮೆಟ್ಟಿನಗದ್ದೆ ರವರ ಮೊಬೈಲ್ ನಂ: 9449776695 ಹಾಗೂ ಇತರರ ಮೊಬೈಲ್ ನಂಬರಗಳಿಗೆ ಸಾಮಾಜಿಕ ಜಾಲತಾಣದಲ್ಲಿ ದಿನಾಂಕ: 03-02-2021 ರಂದು 16-34 ಗಂಟೆಗೆ ಹೇಳಿಕೆಯ ಸಂದೇಶವನ್ನು ಹರಿಯಬಿಟ್ಟಿದ್ದು, ಈ ಬಗ್ಗೆ ಪಿರ್ಯಾದಿಯವರು ಎದುರುದಾರನಿಗೆ ಪೋನ್ ಕರೆ ಮಾಡಿ ವಿಚಾರಿಸಲಾಗಿ ಪಿರ್ಯಾದಿಯವರಿಗೆ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈಯ್ದು, ‘ಇನ್ನೂ ಹೆಚ್ಚಿಗೆ ಶೇರ್ ಮಾಡಿ ಮರ್ಯಾದೆ ತೆಗೆಯುತ್ತೇನೆ’ ಎಂದು ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಜಯಂತಿ ರಾಮಚಂದ್ರ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ವ್ಯಾಪಾರ, ಸಾ|| ನಗರಬಸ್ತಿಕೇರಿ, ತಾ: ಹೊನ್ನಾವರ ರವರು ದಿನಾಂಕ: 04-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 19/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಿಲ್ಟನ್ ತಂದೆ ಸಿಂಜಾವ್ ಡಿಸೋಜಾ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಮಾಳನಜಡ್ಡಿ, ಪೋ: ಹಾಸಣಗಿ, ತಾ: ಯಲ್ಲಾಪುರ (ಮಹೀಂದ್ರಾ ಜೀತೋ ವಾಹನ ನಂ: ಕೆ.ಎ-31/ಎ-2421 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 04-02-2021 ರಂದು 09-45 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಮಾಗೋಡ ಕ್ರಾಸ್ ಹತ್ತಿರ ಹೊರಾಳಗದ್ದೆ ಗ್ರಾಮದಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ ಸಂಖ್ಯೆ-93 ರಲ್ಲಿ ತನ್ನ ಮಹೀಂದ್ರಾ ಜೀತೋ ವಾಹನ ನಂ: ಕೆ.ಎ-31/ಎ-2421 ನೇದನ್ನು ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ಅದೇ ವೇಳೆ ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ನಿಧಾನವಾಗಿ ತನ್ನ ಸೈಡಿನಲ್ಲಿ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ ಎಸ್-9676 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಾಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಸಾಕ್ಷಿದಾರ ಮಹಮ್ಮದ್ ರಪೀಕ್ ತಂದೆ ಮೌಲಾಲಿ ಮುಲ್ಲಾ, ಸಾ|| ಕಿರುವತ್ತಿ, ತಾ: ಯಲ್ಲಾಪುರ ಇವರ ಬಲಗಾಲಿನ ಮಂಡಿಯ ಹತ್ತಿರ ಹಾಗೂ ಮೈಕೈಗೆ ಗಾಯನೋವು ಪಡಿಸಿ, ತನ್ನ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕೆರಲ್ ಕ್ರಿಸ್ತಿನಾ ತಂದೆ ಜೋಸೆಫ್ ರೋಡ್ರಿಗಿಸ್, ಸಾ|| ಕಂಪ್ಲಿ, ಮಂಚಿಕೇರಿ, ತಾ: ಯಲ್ಲಾಪುರ ಇವರಿಗೆ ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ತಲೆಗೆ ಮತ್ತು ಮೈಕೈಗೆ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಆಯಿಷಾ ಕೋಂ. ಮಹಮ್ಮದ್ ಹನೀಫ್ ಮುಲ್ಲಾ, ಪ್ರಾಯ-38 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಿರವತ್ತಿ, ತಾ: ಯಲ್ಲಾಪುರ ರವರು ದಿನಾಂಕ: 04-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 13/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರವಿ ತಂದೆ ಮಂಜು ಮೊಗೇರ, ಪ್ರಾಯ-33 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಹುತ್ಗಾರ, ತಾ: ಶಿರಸಿ. ನಮೂದಿತ ಆರೋಪಿತನು ದಿನಾಂಕ: 04-02-2021 ರಂದು 17-50 ಗಂಟೆಯ ಸಮಯಕ್ಕೆ ಶಿರಸಿಯ ಹೊಸ ಬಸ್ ನಿಲ್ದಾಣದ ಮುಂಭಾಗದ ಶಿರಸಿ-ಹುಲೇಕಲ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು, ಜನರಿಂದ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಅಕ್ರಮವಾಗಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,750/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 04-02-2021 ರಂದು 21-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಮೀರ್ ತಂದೆ ರುಸ್ತುಂಸಾಬ್ ತಾಶಿವಾಲೆ, ಪ್ರಾಯ-24 ವರ್ಷ, ಸಾ|| ಸುಭಾಸನಗರ, ದಾಂಡೇಲಿ (ಮೋಟಾರ್ ಸೈಕಲ್ ನಂ: ಕೆ.ಎ-31/ಕ್ಯೂ-9437 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 04-02-2021 ರಂದು 15-20 ಗಂಟೆಗೆ ಹರೆಗಾಳಿ ಕಡೆಯಿಂದ ಭರ್ಚಿಕಡೆಗೆ 1 ಕೀ.ಮೀ ಅಂತರದಲ್ಲಿ ರಾಜ್ಯ ಹೆದ್ದಾರಿಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಕ್ಯೂ-9437 ನೇದನ್ನು ಭರ್ಚಿ ಕಡೆಯಿಂದ ಗಣೇಶಗುಡಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ತನ್ನ ಮೋಟಾರ್ ಸೈಕಲನ್ನು ನಿಯಂತ್ರಿಸಲಾಗದೇ ರಾಜ್ಯ ಹೆದ್ದಾರಿಯ ಪಕ್ಕದ ಕಚ್ಚಾ ರಸ್ತೆಯ ಆಚೆಗಿನ ಅರಣ್ಯದಲ್ಲಿ ತನ್ನ ಮೋಟಾರ್ ಸೈಕಲ್ ಚಲಾಯಿಸಿ, ಅಲ್ಲಿದ್ದ ಒಂದು ಕಲ್ಲಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತವಾಗಿ ಬಿದ್ದು, ತನ್ನ ಹಣೆಯ ಎಡಬದಿಯ ಹುಬ್ಬಿನ ಹತ್ತಿರ ತೀವೃ ಸ್ವರೂಪದ ರಕ್ತದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಫಾರೂಕ್ ತಂದೆ ರಫೀಕ್ ಶೇಖ್, ಪ್ರಾಯ-20 ವರ್ಷ, ವೃತ್ತಿ-ರ್ಯಾಪ್ಟಿಂಗ್ ಕೆಲಸ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ ರವರು ದಿನಾಂಕ: 04-02-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಶ್ರೀಮತಿ ಆಫ್ರೀನ್ ಕೋಂ. ಮಹಬೂಬ ಅಲಿ ಮುಲ್ಲಾ, ಪ್ರಾಯ-23 ವರ್ಷ, ಮನೆ ಕೆಲಸ, ಸಾ|| ಸಮ್ಮಸಗಿ, ತಾ: ಹಾನಗಲ್, ಹಾಲಿ ಸಾ|| ಭದ್ರಾಪುರ, ನೂರುಕಲಕೊಪ್ಪ ಗ್ರಾಮ, ಪೋ: ಹುಸರಿ, ತಾ: ಶಿರಸಿ. ನಮೂದಿತ ಕಾಣೆಯಾದವಳನ್ನು ಮತ್ತು ಅವಳ ಮಗನನ್ನು ದಿನಾಂಕ: 02-02-2021 ರಂದು ಅವಳ ಗಂಡನ ಮನೆಯಾದ ಸಮ್ಮಸಗಿ, ತಾ: ಹಾನಗಲ್ ದಿಂದ ಪಿರ್ಯಾದಿಯವರು ತವರು ಮನೆಯಾದ ಭದ್ರಾಪುರಕ್ಕೆ ಕರೆದುಕೊಂಡು ಬಂದಿದ್ದು, ದಿನಾಂಕ: 03-02-2021 ರಂದು ಬೆಳಿಗ್ಗೆ ಅವಳು ತನಗೆ ಆರಾಮ ಇಲ್ಲಾ ಅಂತಾ ತನ್ನ ತವರು ಮನೆಯಲ್ಲಿ ಮಲಗಿದ್ದವಳು, ಬೆಳಿಗ್ಗೆ 10-30 ಗಂಟೆಗೆ ನೋಡಿದಾಗ ಮನೆಯಲ್ಲಿ ಇರಲಿಲ್ಲ. ಆಫ್ರೀನ್ ಇವಳು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾರಣ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಫೀರಖಾನ್ ತಂದೆ ಖಾದರ್ ಖಾನ್, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಭದ್ರಾಪುರ, ನೂರುಕಲಕೊಪ್ಪ ಗ್ರಾಮ, ಪೋ: ಹುಸರಿ, ತಾ: ಶಿರಸಿ ರವರು ದಿನಾಂಕ: 04-02-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 04-02-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ತಿಮ್ಮಕ್ಕಾ ಗಂಡ ರಾಕು ನಾಯಕ, ಪ್ರಾಯ-59 ವರ್ಷ, ವೃತ್ತಿ-ಮನೆ ಕೆಲಸ, ಸಾ|| ರಾಕೇಶ್ವರಗದ್ದೆ, ಅಡ್ಲೂರ, ತಾ: ಅಂಕೋಲಾ. ಇವಳು ಪಿರ್ಯಾದಿಯವರ ಗಂಡನ ತಾಯಿಯಾಗಿದ್ದು, ಇವರಿಗೆ ಸಾರಾಯಿ ಕುಡಿಯುವ ಚಟವಿದ್ದು, ಇವರು ಪಿರ್ಯಾದಿಯವರ ಮನೆಯ ಪಕ್ಕದ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಯಾವುದೋ ಕಾರಣಕ್ಕೆ ದಿನಾಂಕ: 04-02-2021 ರಂದು ಬೆಳಿಗ್ಗೆ ಸುಮಾರು 09-00 ಗಂಟೆಯಿಂದ ಮಧ್ಯಾಹ್ನ ಸುಮಾರು 12-45 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ದನದ ಕೊಟ್ಟಿಗೆ ಮನೆಯ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಚಂದ್ರಕಲಾ ಗಂಡ ದೇವರಾಯ ನಾಯಕ, ಪ್ರಾಯ-33 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ರಾಕೇಶ್ವರಗದ್ದೆ, ಅಡ್ಲೂರ, ತಾ: ಅಂಕೋಲಾ ರವರು ದಿನಾಂಕ: 04-02-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ವಸಂತ ತಂದೆ ನಾಗೇಶ ದೇಶಭಂಡಾರಿ, ಪ್ರಾಯ-69 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಧ್ಯಕೇರಿ, ಅಂತ್ರವಳ್ಳಿ, ತಾ: ಕುಮಟಾ. ಈತನು ತಮ್ಮ ತೋಟಗದ್ದೆಯ ಕೃಷಿ ಕೆಲಸವನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದವನಿದ್ದು, ದಿನಾಂಕ: 31-01-2021 ರಂದು 11-00 ಗಂಟೆಯ ಸುಮಾರಿಗೆ ತಮ್ಮ ಭಾಗಾಯತ ತೋಟದ ಸರ್ವೇ ನಂ: 89 ನೇದರಲ್ಲಿಯ ಅಡಿಕೆ ತೋಟದ ಅಡಿಕೆ ಮರವನ್ನೇರಿ ಅಡಿಕೆ ಕೊನೆಗಳನ್ನು ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಕೈ ಕಾಲು ಜಾರಿ ಅಡಿಕೆ ಮರದಿಂದ ಸುಮಾರು 15 ರಿಂದ 20 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು, ಆತನ ತಲೆಗೆ ಮತ್ತು ದೇಹದ ಇತರೆ ಭಾಗಗಳಿಗೆ ಗಾಯವಾಗಿ ವೈದ್ಯಕೀಯ ಚಿಕಿತ್ಸೆಯ ಕುರಿತು ಮಂಗಳೂರಿನ ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿದ್ದವನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 04-02-2021 ರಂದು 11-55 ಗಂಟೆಯಲ್ಲಿ ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿಯೇ ಮೃತನಾಗಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ  ನಾಗೇಶ ದೇಶಭಂಡಾರಿ, ಪ್ರಾಯ-53 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಧ್ಯಕೇರಿ, ಅಂತ್ರವಳ್ಳಿ, ತಾ: ಕುಮಟಾ ರವರು ದಿನಾಂಕ: 04-02-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ  ನೇದ್ದರ ವಿವರ...... ಮೃತನಾದ ಶ್ರೀ ಪ್ರಾನ್ಸಿಸ್ ತಂದೆ ಸಂತಾನ್ ಸಿದ್ದಿ ಪ್ರಾಯ-60 ವರ್ಷ, ವೃತ್ತಿ-ಅರಣ್ಯ ಇಲಾಖೆಯಲ್ಲಿ ಗುತ್ತಿಗೆಯ ಆಧಾರದಲ್ಲಿ ವಾಚಮೆನ್ ಕೆಲಸ ಸಾ|| ಮಿಂಗೆಲಪಾಳ್ಯ, ಕೊಡಸೆ, ತಾ: ಯಲ್ಲಾಪುರ. ಪಿರ್ಯಾದಿಯವರ ತಂದೆಯವರಾದ ಈತನು ಸರಾಯಿ ಕುಡಿಯುವ ಚಟದವನಿದ್ದು, ದಿನಾಲು ಸರಾಯಿ ಕುಡಿದು ಬರುತ್ತಿದ್ದವನು, ದಿನಾಂಕ: 03-02-2021 ರಂದು ರಾತ್ರಿ 08-30 ಗಂಟೆಯ ಸುಮಾರಿಗೆ ವಿಪರೀತ ಸರಾಯಿ ಕುಡಿದು ಬಂದು ತನ್ನ ಮನೆಯಲ್ಲಿ ಮಲಗಿಕೊಂಡವನು 09-00 ಗಂಟೆಯ ಸುಮಾರಿಗೆ ವಾಂತಿ ಮಾಡುತ್ತಿರುವುದನ್ನು ಕಂಡ ಪಿರ್ಯಾದಿಯವರು ಅಸ್ತವಸ್ತ್ಯ ಆದವನಿಗೆ ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದವನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 03-02-2021 ರಂದು ರಾತ್ರಿ 11-15 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಪ್ರಾನ್ಸಿಸ್ ಸಿದ್ದಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಿಂಗಲೆಪಾಳ್ಯ, ಕೊಡಸೆ ತಾ: ಯಲ್ಲಾಪುರ ರವರು ದಿನಾಂಕ: 04-02-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 05-02-2021 04:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080