Feedback / Suggestions

Daily District Crime Report

Date:- 04-01-2022

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಸೂರ್ಯಪ್ರ್ರಕಾಶ ತಂದೆ ಪಿ. ಮುರುಗನ್, ಪ್ರಾಯ-29 ವರ್ಷ, ವೃತ್ತಿ-ಲೀಡಿಂಗ್ ಲಾಜಿಸ್ಟಿಕ್ಸ್ (ಸ್ಟೇವಾರ್ಡ್) ಐ.ಎನ್.ಎಸ್ ವಿಕ್ರಮಾದಿತ್ಯ (ಪಿ. ನಂ: 402368-ಜೆಡ್), ಸಾ|| 1/143 ಕುಲಕರೈ, ಎಸ್.ಟಿ ಪೋಸ್ಟ್, ಮನಲಪಾಡಿ, ತಾ: ಗಿಂಗಿ, ಜಿ: ವಿಲ್ಲುಪುರಂ, ತಮಿಳನಾಡು ರಾಜ್ಯ, ಹಾಲಿ ಸಾ|| ಐ.ಎನ್.ಎಸ್ ವಿಕ್ರಮಾದಿತ್ಯ, ನೇವಲ್ ಬೇಸ್, ಕಾರವಾರ. ಈತನು ಐ.ಎನ್.ಎಸ್ ವಿಕ್ರಮಾದಿತ್ಯದಲ್ಲಿ ಲೀಡಿಂಗ್ ಲಾಜಿಸ್ಟಿಕ್ಸ್ (ಸ್ಟೇವಾರ್ಡ್) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವನು, ಕಳೆದ ದಿನಾಂಕ: 24-09-2021 ರಂದು ಕಾರವಾರದ ಅರ್ಗಾ ನೇವಲ್ ಬೇಸ್ ಐ.ಎನ್.ಎಸ್ ವಿಕ್ರಮಾದಿತ್ಯದ ಹಡಗಿನ ಕರ್ತವ್ಯದಿಂದ ಓಡಿ ಹೋದವನು, ತನ್ನ ಸ್ವಂತ ಊರಾದ ತಮಿಳನಾಡು ವಿಲ್ಲುಪುರಂ ಜಿಲ್ಲೆಯ ಗಿಂಗಿ ತಾಲೂಕಿನ ಮನಲಪಾಡಿ, ಕುಲಕರೈ ನಲ್ಲಿರುವ ತನ್ನ ಮನೆಗೆ ಹೋಗದೇ ಹಾಗೂ ಕರ್ತವ್ಯಕ್ಕೆ ಮರಳಿ ಹಾಜರಾಗದೇ ಕಲಂ: 83 ನೇವಿ ಎಕ್ಟ್-1957 ನೇದರ ಪ್ರಕಾರ ಬಂಧನದ ವಾರೆಂಟ್ ಗೂ ಸಿಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಘನಶ್ಯಾಮ ತಂದೆ ಸಿ.ಎಮ್.ಜಾಟ್ ಧಾಯಲ್, ಪ್ರಾಯ-31 ವರ್ಷ, ಲೆಫ್ಟಿನೆಂಟ್ ಕಮಾಂಡರ್, ಅಸಿಸ್ಟೆಂಟ್ ಲಾಜಿಸ್ಟಿಕ್ಸ್ ಆಫೀಸರ್ ಫಾರ್ ಕಮಾಂಡಿಂಗ್ ಆಫೀಸರ್, ಐ.ಎನ್.ಎಸ್ ವಿಕ್ರಮಾದಿತ್ಯ, ನೇವಲ್ ಬೇಸ್, ಕಾರವಾರ ರವರು ದಿನಾಂಕ: 04-01-2022 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ಸುಚಿತ್ರಾ ತಂದೆ ಈರಪ್ಪ ನಾಯ್ಕ, ಪ್ರಾಯ-18 ವರ್ಷ, 7 ತಿಂಗಳು, ವೃತ್ತಿ-ವಿದ್ಯಾರ್ಥಿನಿ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 03-01-2022 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ‘ಹೊನ್ನಾವರಕ್ಕೆ ಕಾಲೇಜಿಗೆ ಹೋಗಿ ಬರುತ್ತೇನೆ’ ಅಂತಾ ಹೇಳಿ ಪಿಯಾದಿಯ ಮಗ ಮನೋಜ ಮತ್ತು ಹೆಂಡತಿ ವೀಣಾ ಇವರಿಗೆ ಹೇಳಿ ಹೋಗಿದ್ದಳು. ಸುಚಿತ್ರಾಳು ರಾತ್ರಿ ಆದರೂ ಕಾಲೇಜಿನಿಂದ ಮನೆಗೆ ಮರಳಿ ಬರಲಿಲ್ಲ. ಅವಳು ಮನೆಗೆ ಮರಳಿ ಬರದೇ ಇದ್ದುದರಿಂದ ಅವಳ ಮೊಬೈಲ್ ನಂಬರಿಗೆ ಕಾಲ್ ಮಾಡಿದರೂ ಸಹ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಾವು ಮನೆಯವರೆಲ್ಲರೂ ಗಾಬರಿಯಾಗಿ ಹೆದರಿಕೆಯಿಂದ ಮನೆಯವರೆಲ್ಲರೂ ಸೇರಿ ನನ್ನ ಮಗಳು ಸುಚಿತ್ರಾಳನ್ನು ಕೊಳಗದ್ದೆ, ಖರ್ವಾ ಸುತ್ತಮುತ್ತಲೂ ಮತ್ತು ಹೊನ್ನಾವರಕ್ಕೆ ಬಂದು ಹೊನ್ನಾವರದಲ್ಲಿಯೂ ಸಹ ಎಲ್ಲಾ ಕಡೆ ಹುಡುಕಾಡಿದರೂ ಅವಳು ಎಲ್ಲಿಯೂ ಸಿಗಲಿಲ್ಲ. ಸುಚಿತ್ರಾಳು ನಮ್ಮ ಸಂಬಂಧಿಕರ ಮನೆಗೆ ಎಲ್ಲಿಯಾದರೂ ಹೋಗಿದ್ದಾಳೋ ಏನೋ ಅಂತಾ ಸಂಬಂಧಿಕರ ಮನೆಗಳಲ್ಲಿಯೂ ಸಹ ಹುಡುಕಾಡಿದ್ದು, ಅವಳು ಪತ್ತೆ ಆಗಿರುವುದಿಲ್ಲ. ಅದೇ ರೀತಿ ಇಂದು ಬೆಳಿಗ್ಗೆವರೆಗೂ ನನ್ನ ಮಗಳು ಸುಚಿತ್ರಾಳಿಗಾಗಿ ಹುಡುಕಾಡಿದ್ದು ಅವಳು ಎಲ್ಲಿಯೂ ಪತ್ತೆ ಆಗಿರುವುದಿಲ್ಲ. ಸದ್ರಿ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿ ಹುಡುಕಿ ಕೊಡಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಈರಪ್ಪ ತಂದೆ ಮಾದೇವ ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ ರವರು ದಿನಾಂಕ: 04-01-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ದೀಪಕ ಮಾದೇವ ನಾಯ್ಕ, ಪ್ರಾಯ-36 ವರ್ಷ, ಸಾ|| ಕೆ.ಜಿ ಸ್ಕೂಲ್, ಮುರ್ಡೇಶ್ವರ, ತಾ: ಭಟ್ಕಳ, 2]. ಈಶ್ವರ ಮಾದೇವ ನಾಯ್ಕ, ಪ್ರಾಯ-38 ವರ್ಷ, ಸಾ|| ಮಾವಳ್ಳಿ, ಮುರ್ಡೇಶ್ವರ, ತಾ: ಭಟ್ಕಳ, 3]. ಸೋಮಯ್ಯ ಕುಪ್ಪ ನಾಯ್ಕ, ಪ್ರಾಯ-49 ವರ್ಷ, ಸಾ|| ಸೂಳೆಬೀಳು, ಮಂಕಿ, ತಾ: ಹೊನ್ನಾವರ, 4]. ಹರಿಶ ಮಾದೇವ ನಾಯ್ಕ, ಪ್ರಾಯ-34 ವರ್ಷ, ಸಾ|| ಮಾವಳ್ಳಿ, ಮುರ್ಡೇಶ್ವರ, ತಾ: ಭಟ್ಕಳ, 5]. ನಾಗರಾಜ ಮಾದೇವ ನಾಯ್ಕ, ಪ್ರಾಯ-39 ವರ್ಷ, ಸಾ|| ಅಣ್ಣೆಬೀಳು, ತಾ: ಹೊನ್ನಾವರ. ಈ ನಮೂದಿತ ಆರೋಪಿತರೆಲ್ಲರೂ ಸೇರಿಕೊಂಡು ದಿನಾಂಕ: 04-01-2022 ರಂದು 17-00 ಗಂಟೆಗೆ ತಮ್ಮ ತಮ್ಮ ಲಾಭಕ್ಕೋಸ್ಕರ ಮಂಕಿಯ ಅಣ್ಣೆಬೀಳುವಿನ ಗದ್ದೆ ಬಯಲಿನಲ್ಲಿ ಕೋಳಿ ಹುಂಜಗಳ ಮೇಲೆ ಹಣವನ್ನು ಪಂಥವಾಗಿಟ್ಟುಕೊಂಡು ಕೋಳಿ ಅಂಕ ಜೂಗಾರಾಟ ಆಡುತ್ತಿದ್ದಾಗ ಜೂಗಾರಾಟಕ್ಕೆ ಬಳಸಿದ 800/- ರೂಪಾಯಿ ಮೌಲ್ಯದ ನಾಲ್ಕು ಕೋಳಿ ಹುಂಜಗಳು ಹಾಗೂ ಜೂಗಾರಾಟಕ್ಕೆ ಬಳಸಿದ ಒಟ್ಟು ನಗದು ಹಣ 3,260/- ರೂಪಾಯಿಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಪ್ಪಾಜಿ ಬಿ. ಗೊಂದಳಿ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 04-01-2022 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 01/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಾಮೋದರ ತಂದೆ ಗಣಪತಿ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ಟಿ.ವಿ.ಎಸ್ ಶೋ ರೂಮ್ ನಲ್ಲಿ ಕೆಲಸ, ಸಾ|| ಚಿತ್ರಾಪುರ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಕ್ಸ್-2831 ನೇದರ ಸವಾರ). ಈತನು ದಿನಾಂಕ: 30-12-2021 ರಂದು 19-00 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಕ್ಸ್-2831 ನೇದನು ಶಿರಾಲಿ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ವೇಗ ನಿಯಂತ್ರಿಸಲಾಗದೇ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಡಾಂಬರ್ ರಸ್ತೆ ಶಿರಾಲಿ ಹಾದಿಮಾಸ್ತಿ ದೇವಸ್ಥಾನದ ಹತ್ತಿರ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಸಂತೋಷ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಂತೋಷ ಈತನಿಗೆ ತಲೆಗೆ ಹಾಗೂ ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಮುಖಕ್ಕೆ ಮತ್ತು ತಲೆಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ನಾರಾಯಣ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ವ್ಯಾಪಾರ, ಸಾ|| ಚಿತ್ರಾಪುರ, ಶಿರಾಲಿ, ಕೊಲಕಾರ ಮನೆ, ತಾ: ಭಟ್ಕಳ ರವರು ದಿನಾಂಕ: 04-01-2022 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 143, 147, 323, 427, 447, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ ರಾಮಚಂದ್ರ ನಾಯ್ಕ, 2]. ನಾರಾಯಣ ಸಣ್ಣಯ್ಯ ನಾಯ್ಕ, 3]. ಹನುಮಂತ ನಾರಾಯಣ ನಾಯ್ಕ, 4]. ಮಂಜುನಾಥ ನಾರಾಯಣ ನಾಯ್ಕ, 5]. ನಾಗಮ್ಮ ರಾಮಚಂದ್ರ ನಾಯ್ಕ, 6]. ಜಯಾ ಕೊರಗಾ ನಾಯ್ಕ, 7]. ದೇವಿ ಗಣಪತಿ ನಾತ್ಕ, ಸಾ|| (ಎಲ್ಲರೂ) ಯಲ್ವಡಿಕವೂರ, ತಾ: ಭಟ್ಕಳ. ಪಿರ್ಯಾದಿಗೆ ಸಂಬಂಧಿಸಿದ ಭಟ್ಕಳ ತಾಲೂಕಿನ ಯಲ್ವಡಿಕವೂರ ಗ್ರಾಮದ ಸರ್ವೇ ನಂ: 92 ಹಿಸ್ಸಾ 4 ಕ್ಷೇತ್ರ 01-23-00 ಜಮೀನು ನ್ಯಾಯಲಯದ ಆದೇಶದಂತೆ ಪಿರ್ಯಾದಿಯ ಮನೆಯ ಜನರಿಗೆ ಬಿಟ್ಟುಕೊಟಿದ್ದು, ಈ ವಿಚಾರವಾಗಿ ಪಿರ್ಯಾದಿಯ ಮನೆ ಜನರ ಹತ್ತಿರ ನಮೂದಿತ ಆರೋಪಿತರು ಮೊದಲಿನಿಂದಲೂ ತಂಟೆ ತಕರಾರು ಮಾಡುತ್ತ ಬಂದಿದ್ದು, ದಿನಾಂಕ: 03-01-2022 ರಂದು 16-30 ಗಂಟೆಗೆ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಪಿರ್ಯಾದಿಯ ಜಮೀನಿನಲ್ಲಿ ಅತಿಕ್ರಮಣ ಪ್ರವೇಶ ಮಾಡಿ, ಪಿರ್ಯಾದಿಯ ಗಂಡ ಜಟ್ಟಾ ಈತನ ಶರ್ಟಿನ ಕಾಲರನ್ನು ಆರೋಪಿ 1 ನೇಯವನು ಹಿಡಿದು ಪಿರ್ಯಾದಿ ಗಂಡನಿಗೆ ಆರೋಪಿತರು ಉದ್ದೇಶಿಸಿ ‘ನಮ್ಮ ತೋಟದಲ್ಲಿ ಯಾಕೆ ಕೆಲಸ ಮಾಡುತ್ತಿಯಾ?’ ಅಂತಾ ಕೇಳಿದಾಗ, ಅದಕ್ಕೆ ಪಿರ್ಯಾದಿಯ ಗಂಡ ‘ನ್ಯಾಯಲಯದಲ್ಲಿ ನನ್ನ ಜಾಗ ಅಂತಾ ಆಗಿದೆ’ ಅಂತಾ ಹೇಳಿದ್ದಕ್ಕೆ ಪಿರ್ಯಾದಿಯ ಗಂಡನಿಗೆ ‘ಬೋಳಿ ಮಗನೇ, ಸೂಳಾ ಮಗನೇ’ ಅಂತಾ ಅವಾಚ್ಯವಾಗಿ ಬೈಯ್ದು, ಆರೋಪಿತರು ಎಲ್ಲರೂ ಪಿರ್ಯಾದಿಯ ಜಮೀನಿನ ಬೇಲಿಗಳನ್ನು ಕಿತ್ತು ಬೆಂಕಿ ಹಾಕಿ, ಕಲ್ಲಿನ ಕಂಪೌಂಡ್ ಗೋಡೆ ದೂಡಿ ಹಾಕಿ, ಪಿರ್ಯಾದಿಯ ಮನೆಯ ಶೀಟ್ ಹಾಗೂ ನೀರಿನ ಪೈಪುಗಳ ಮೇಲೆ ಕಲ್ಲುಗಳನ್ನು ಎಸೆದು ಒಡೆದು ಹಾಕಿ ಲುಕ್ಸಾನ್ ಪಡಿಸಿದ್ದಲ್ಲದೇ, ಹೋಗುವಾಗ ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯ ಜನರಿಗೆ ‘ಕಡಿದು ಬಿಸಾಕುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಳ್ಳಿ ಕೋಂ. ಜಟ್ಟಾ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಯಲ್ವಡಿಕವೂರ, ಬಿಡಾರ ಮನೆ, ತಾ: ಭಟ್ಕಳ ರವರು ದಿನಾಂಕ: 04-01-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 143, 147, 148, 323, 324, 341, 427, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾಸ್ತಮ್ಮ ನಾರಾಯಣ ನಾಯ್ಕ, 2]. ಜಟ್ಟಾ ನಾರಾಯಣ ನಾಯ್ಕ, 3]. ಮಳ್ಳಿ ಜಟ್ಟಾ ನಾಯ್ಕ, 4]. ಚಿತ್ರಾ ವಿನಾಯಕ ನಾಯ್ಕ, 5]. ರಂಜಿತಾ ಜಟ್ಟಾ ನಾಯ್ಕ, 6]. ಮಾಲಿನಿ ನಾಗೇಶ ನಾಯ್ಕ, ಸಾ|| (ಎಲ್ಲರೂ) ಯಲ್ವಡಿಕವೂರ, ತಾ: ಭಟ್ಕಳ. ಪಿರ್ಯಾದಿಗೆ ಸಂಬಂಧಿಸಿದ ಭಟ್ಕಳ ತಾಲೂಕಿನ ಯಲ್ವಡಿಕವೂರ ಗ್ರಾಮದ ಸರ್ವೇ ನಂ: 92 ಹಿಸ್ಸಾ 4 ಕ್ಷೇತ್ರ 01.10.05 ಜಮೀನು ನ್ಯಾಯಲಯದ ಆದೇಶದಂತೆ ಪಿರ್ಯಾದಿಯವರು ಆರೋಪಿತರಿಗೆ ಕೆಲವು ಜಮೀನು ಬಿಟ್ಟುಕೊಟಿದ್ದು, ಈ ವಿಚಾರವಾಗಿ ಪಿರ್ಯಾದಿಯ ಮನೆ ಜನರ ಹತ್ತಿರ ನಮೂದಿತ ಆರೋಪಿತರು ಮೊದಲಿನಿಂದಲೂ ತಂಟೆ ತಕರಾರು ಮಾಡುತ್ತ ಬಂದಿದ್ದು, ದಿನಾಂಕ: 03-01-2022 ರಂದು 16-30 ಗಂಟೆಗೆ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಎಲ್ಲರೂ ಪಿರ್ಯಾದಿಯವರು ತಿರುಗಾಡುವ ದಾರಿಯ ಬೇಲಿಗೆ ಐ.ಬಿ.ಎಕ್ಸ್ ಬೇಲಿ ಮಾಡುತ್ತಿದ್ದು, ಅದನ್ನು ಪಿರ್ಯಾದಿಯು ನೋಡಿ ಪಿರ್ಯಾದಿ ಹಾಗೂ ನಾಗರಾಜ ರಾಮಚಂದ್ರ ನಾಯ್ಕ ಹೋಗಿ ಅವರಿಗೆ ‘ಈ ಜಮೀನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ನೀವು ಐ.ಬಿ.ಎಕ್ಸ್ ಬೇಲಿ ಹಾಕಬೇಡಿ’ ಅಂತಾ ಹೇಳಿದಾಗ ಆರೋಪಿ 2 ಹಾಗೂ 3 ನೇಯವರು ಪಿರ್ಯಾದಿಗೆ ಉದ್ದೇಶಿಸಿ ‘ನಮಗೆ ಬೇಲಿ ಮಾಡಬೇಡಿ ಅಂತಾ ಹೇಳಲು ನೀವು ಯಾರು? ಸೂಳಾ ಮಕ್ಕಳಾ, ಬೋಳಿ ಮಕ್ಕಳಾ’ ಅಂತಾ ಅವಾಚ್ಯವಾಗಿ ಬೈಯ್ದು, ಪಿರ್ಯಾದಿ ಹಾಗೂ ನಾಗರಾಜನಿಗೆ ಅಡ್ಡಗಟ್ಟಿ ತಡೆದು, ಆರೋಪಿ 1 ನೇಯವನು ಅಲ್ಲೇ ಇದ್ದ ತೆಂಗಿನ ಮರದ ಹೆಡೆಯಿಂದ ಪಿರ್ಯಾದಿಗೆ ಸೊಂಟದ ಮೇಲೆ ಹೊಡೆದಿದ್ದು, ಉಳಿದವರು ‘ಸೂಳಾ ಮಕ್ಕಳಾ, ಬೋಳಿ ಮಕ್ಕಳಾ’ ಅಂತಾ ಅವಾಚ್ಯವಾಗಿ ಬೈಯ್ದು ‘ನೀವು ಈ ಜಮೀನಿನ ಕಡೆ ಬಂದರೆ ನಿಮಗೆ ಕಡಿದು ಇದೇ ಜಮೀನಿನಲ್ಲಿ ಹೂತು ಹಾಕುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿ, ಪಿರ್ಯಾದಿಯ ಜಮೀನಿನಲ್ಲಿ ಇದ್ದ ಬಾವಿಗೆ ಹಾಕಿದ ಮಶೀನಿನ ಪೈಪುಗಳ ಮೇಲೆ ಕಲ್ಲು ಎಸೆದು ಒಡೆದು ಹಾಕಿ, ಲುಕ್ಸಾನ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ನಾರಾಯಣ ನಾಯ್ಕ ಪ್ರಾಯ-32 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಯಲ್ವಡಿಕವೂರು, ರಾಮಾಸರ ಮನೆ, ತಾ: ಭಟ್ಕಳ ರವರು ದಿನಾಂಕ: 04-01-2022 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 04/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವಣ್ಣಾ ತಂದೆ ಶ್ರೀನಿವಾಸ ಶೆಟ್ಟಿ ಸಾ|| ಮಲವಗೊಪ್ಪ, ಶಿವಮೊಗ್ಗ (ಟೊಯೋಟಾ ಇಟಿಯೋಸ್ ಕಾರ್ ನಂ: ಕೆ.ಎ-14/ಬಿ-6615 ನೇದರ ಚಾಲಕ). ಈತನು ದಿನಾಂಕ: 01-04-2021 ರಂದು 14-45 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಟೊಯೋಟಾ ಇಟಿಯೋಸ್ ಕಾರ್ ನಂ: ಕೆ.ಎ-14/ಬಿ-6615 ನೇದನ್ನು ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಗೊರಟೆ ಕ್ರಾಸ್ ಹತ್ತಿರ ರಸ್ತೆ ದಾಟುತ್ತಿದ್ದ ಪಿರ್ಯಾದಿಯ ಗಂಡ ಶ್ರೀಧರ ತಂದೆ ಲಚ್ಮಯ್ಯಾ ಮೊಗೇರ, ಪ್ರಾಯ-50 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗೊರಟೆ, ಅಂಕೊಲಿ ಮನೆ, ತಾ: ಭಟ್ಕಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಈ ಅಪಘಾತದಲ್ಲಿ ಅವರಿಗೆ ತಲೆಗೆ, ಎಡಗೈಗೆ ಹಾಗೂ ಬಲಗಾಲ ಮೊಣಗಂಟಿನ ಹತ್ತಿರ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಭವಾನಿ ಶ್ರೀಧರ ಮೊಗೇರ, ಪ್ರಾಯ-42 ವರ್ಷ, ವೃತ್ತಿ-ಗೊರಟೆ ಅಂಗನವಾಡಿ ಶಾಲೆಯಲ್ಲಿ ಶಿಕ್ಷಕಿ, ಸಾ|| ಗೊರಟೆ, ಅಂಕೊಲಿ ಮನೆ, ತಾ: ಭಟ್ಕಳ ರವರು ದಿನಾಂಕ: 04-01-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 02/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನಾಯಕ ತಂದೆ ಅಂಕುಶ ಚೌಹಾಣ್, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಡೊಂಗರಗಾಂವ್, ಪೋ: ಸಾಕ್ರಾ, ತಾ: ಸತಾರ, ಜಿ: ಹಿಂಗೋಲಿ, ಮಹಾರಾಷ್ಟ್ರ ರಾಜ್ಯ (ಮೋಟಾರ್ ಸೈಕಲ್ ನಂ: ಎಮ್.ಎಚ್-28/ಬಿ.ಡಿ-1912) ನೇದರ ಚಾಲಕ). ಈತನು ದಿನಾಂಕ: 04-01-2022 ರಂದು 14-30 ಗಂಟೆಗೆ ಹಳಿಯಾಳ ತಾಲೂಕ ದುಸಗಿ ಗ್ರಾಮದ ಬ್ರಿಡ್ಜ್ ಹತ್ತಿರ ಹಳಯಾಳ-ಅಳ್ನಾವರ ಡಾಂಬರ್ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಎಮ್.ಎಚ್-28/ಬಿ.ಡಿ-1912 ನೇದರ ಮೇಲೆ ತನ್ನ ಹಿಂಬಂದಿಯಲ್ಲಿ ಗಾಯಾಳು ರವಿ ಚೌಹಾಣ್ ಇವನನ್ನು ಕೂರಿಸಿಕೊಂಡು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಮೋಟಾರ್ ಸೈಕಲ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಡಾಂಬರ್ ರಸ್ತೆಯ ತೀರಾ ಎಡಬದಿಗೆ ತೆಗೆದುಕೊಂಡು ರಸ್ತೆಯ ಪಕ್ಕದಲ್ಲಿದ್ದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಅಫಘಾತ ಪಡಿಸಿಕೊಂಡ ಪರಿಣಾಮ, ಹಿಂಬದಿ ಸವಾರನಾದ ಗಾಯಾಳುವಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಬಾಳು ತಂದೆ ಲವು ಚೌಹಾಣ್, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಾರ್ಡ್ ನಂ: 02, ಡೊಂಗರಗಾಂವ್ ಪೋಸ್ಟ್, ತಾ: ಸತಾರ, ಜಿ: ಹಿಂಗೋಲಿ, ಮಹಾರಾಷ್ಟ್ರ ರಾಜ್ಯ ರವರು ದಿನಾಂಕ: 04-01-2022 ರಂದು 19-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

Daily District U.D Report

Date:- 04-01-2022

at 00:00 hrs to 24:00 hrs

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತರಾದವರು 1]. ಕುಮಾರಿ: ಭಾಗ್ಯಶ್ರೀ ತಂದೆ ಸುಬ್ಬಯ್ಯ ನಾಯ್ಕ, ಪ್ರಾಯ-22 ವರ್ಷ, 2]. ಕುಮಾರಿ: ಮೇಘಶ್ರೀ ತಂದೆ ಸುಬ್ಬಯ್ಯ ನಾಯ್ಕ. ಪ್ರಾಯ-22 ವರ್ಷ, ಸಾ|| (ಇಬ್ಬರೂ) ಕುಳಿಮನೆ, ಮೇಲಿನ ಇಡಗುಂಜಿ, ತಾ: ಹೊನ್ನಾವರ. ಈ ನಮೂದಿತ ಮೃತರಿಬ್ಬರೂ ಅವಳಿ-ಜವಳಿ ಹೆಣ್ಣು ಮಕ್ಕಳಾಗಿದ್ದು, ಹುಟ್ಟಿನಿಂದಲೂ ಇಬ್ಬರಿಗೂ ಪಿಡ್ಸ್ ಖಾಯಿಲೆ ಇದ್ದು, ಸಣ್ಣ ಸಣ್ಣ ವಿಚಾರಗಳಿಗೆ ಸಿಟ್ಟು ಮಾಡಿಕೊಳ್ಳುವ ಸ್ವಭಾದವರಾಗಿದ್ದು, ತಮಗೆ ಪಿಡ್ಸ್ ಖಾಯಿಲೆ ಇದೆ ಅಂತಾ ಮಾನಸಿಕವಾಗಿ ನೊಂದುಕೊಳ್ಳುತ್ತ್ತಾ ಇದ್ದವರು, ಈ ಹಿಂದೆ ಎರಡು ಸಲ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಲ್ಲದೇ, ಇದೇ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 03-01-2022 ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಇಬ್ಬರೂ ಮನೆಯ ಹಿಂಭಾಗದಲ್ಲಿರುವ ಗೇರು ಪ್ಲಾಂಟೇಶನ್ ಗೆ ಹೋಗಿ ಇಬ್ಬರೂ ವಿಷ ಕುಡಿದು ಒದ್ದಾಡುತ್ತಿದ್ದವರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ ಹೆಚ್ಚಿನ ಚಿಕಿತ್ಸೆಯ ಕುರಿತು ಕಾರವಾರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದವರು ದಿನಾಂಕ: 04-01-2022 ರಂದು ಕು: ಭಾಗ್ಯಶ್ರೀ ಇವಳು ಮಧ್ಯಾಹ್ನ 12-10 ಗಂಟೆಗೆ, ಕು: ಮೇಘಶ್ರೀ ಇವಳು ಮಧ್ಯಾಹ್ನ 14-10 ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಬ್ಬಯ್ಯ ತಂದೆ ಹೊಸಬು ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುಳಿಮನೆ, ಮೇಲಿನ ಇಡಗುಂಜಿ, ತಾ: ಹೊನ್ನಾವರ ರವರು ದಿನಾಂಕ: 04-01-2022 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಲೋಕೇಶ ತಂದೆ ಭೂತಪ್ಪ ಒಕ್ಕಲಿಗ, ಪ್ರಾಯ-35 ವರ್ಷ, ವೃತ್ತಿ-ಕೃಷಿ/ಆಚಾರಿ ಕೆಲಸ, ಸಾ|| ಹಾರೆಕೊಪ್ಪ, ಪೋ: ನೆಜ್ಜೂರು, ತಾ: ಸಿದ್ದಾಪುರ. ಈತನು ಪಿರ್ಯಾದುದಾರರ ತಮ್ಮನಿದ್ದು, ಸ್ವಲ್ಪ ಮೂಡಿ ಸ್ವಭಾವದವನಾಗಿದ್ದು, ಯಾರೊಂದಿಗೂ ಸರಿಯಾಗಿ ಬ್ಭೆರೆಯದೇ, ಯಾರೊಂದಿಗೂ ತನ್ನ ಕಷ್ಟ-ಸುಖಗಳನ್ನು ಹಂಚಿಕೊಳ್ಳದೇ ಹೆಚ್ಚಾಗಿ ಏಕಾಂಗಿಯಾಗಿ ಇರುವ ಸ್ವಭಾವದವನಾಗಿದ್ದವನು, ಅಲ್ಲದೆ ಇತ್ತೀಚೆಗೆ ಸ್ವಲ್ಪ ಹಣಕಾಸಿನ ತೊಂದರೆ ಅನುಭವಿಸುತ್ತಿದ್ದವನು, ಕಳೆದ 15 ದಿವಸಗಳಿಂದ ಮಂಕಾಗಿ ಇದ್ದವನು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 29-12-2021 ರಂದು ಬೆಳಿಗ್ಗೆ 11-30 ಗಂಟೆಗೆ ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ತೀವೃವಾಗಿ ಅಸ್ವಸ್ಥನಾದವನಿಗೆ ಸಾಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಅದೇ ದಿವಸ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸಲಾಗಿ, ವೆನಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ದಿನಾಂಕ: 04-01-2022 ರಂದು ಸಂಜೆ 05-55 ಗಂಟೆಗೆ ಮೃತಪಟ್ಟಿದ್ದು, ಇದರ ಹ್ರೆರತು ಮೃತನ ಸಾವಿನಲ್ಲಿ ಬೇರೆ ಏನೂ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಷಣ್ಮುಖ ತಂದೆ ಭೂತಪ್ಪ ಒಕ್ಕಲಿಗ, ಪ್ರಾಯ-38 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಹಾರೆಕೊಪ್ಪ, ಪೋ: ನೆಜ್ಜೂರು, ತಾ: ಸಿದ್ದಾಪುರ, ಹಾಲಿ ಸಾ|| ಸಾಗರ, ಶಿವಮೊಗ್ಗ ರವರು ದಿನಾಂಕ: 04-01-2022 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

Last Updated: 06-01-2022 07:16 PM Updated By: SP KARWAR


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Uttara Kannada District Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080